ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 51 ಪು. 124-ಪು. 125 ಪ್ಯಾ. 2
  • ಒಬ್ಬ ಯುದ್ಧವೀರ ಮತ್ತು ಪುಟ್ಟ ಹುಡುಗಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಬ್ಬ ಯುದ್ಧವೀರ ಮತ್ತು ಪುಟ್ಟ ಹುಡುಗಿ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಅವಳು ಸಹಾಯಮಾಡಿದಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಒಬ್ಬ ಹಠಮಾರಿ ಕೊನೆಗೂ ಹೇಳಿದ ಮಾತನ್ನು ಕೇಳಿದ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಪರಾಕ್ರಮಶಾಲಿಗೆ ಚಿಕ್ಕ ಹುಡುಗಿ ಸಹಾಯಮಾಡುತ್ತಾಳೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಧೈರ್ಯದಿಂದ ಮಾತಾಡಿದ ಒಬ್ಬ ಚಿಕ್ಕ ಹುಡುಗಿ
    ಕಾವಲಿನಬುರುಜು—1996
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 51 ಪು. 124-ಪು. 125 ಪ್ಯಾ. 2
ನಾಮಾನ ತನ್ನ ಕಾಯಿಲೆ ವಾಸಿಮಾಡಿಕೊಳ್ಳಲು ಎಲೀಷನ ಬಳಿ ಹೋಗುತ್ತಾನೆ

ಪಾಠ 51

ಒಬ್ಬ ಯುದ್ಧವೀರ ಮತ್ತು ಪುಟ್ಟ ಹುಡುಗಿ

ಅಪ್ಪ-ಅಮ್ಮನಿಂದ ದೂರವಾದ ಇಸ್ರಾಯೇಲಿನ ಒಬ್ಬ ಪುಟ್ಟ ಹುಡುಗಿ ಸಿರಿಯ ದೇಶದಲ್ಲಿ ಇದ್ದಳು. ಸಿರಿಯದ ಸೈನ್ಯದವರು ಅವಳನ್ನು ಹಿಡಿದುಕೊಂಡು ಬಂದಿದ್ದರು. ಅಲ್ಲಿ ಅವಳು ನಾಮಾನನೆಂಬ ಸೇನಾಪತಿಯ ಹೆಂಡತಿಗೆ ಸೇವಕಿಯಾದಳು. ತನ್ನ ಸುತ್ತಮುತ್ತ ಇದ್ದವರು ಯೆಹೋವನನ್ನು ಆರಾಧಿಸದೇ ಇದ್ದರೂ ಆ ಪುಟ್ಟ ಹುಡುಗಿ ಯೆಹೋವನನ್ನೇ ಆರಾಧಿಸುತ್ತಿದ್ದಳು.

ನಾಮಾನನಿಗೆ ಭಯಂಕರವಾದ ಚರ್ಮದ ಕಾಯಿಲೆ ಇತ್ತು. ಅದರಿಂದ ಅವನಿಗೆ ತುಂಬ ನೋವಾಗುತ್ತಿತ್ತು. ಆ ಪುಟ್ಟ ಹುಡುಗಿಗೆ ಅವನಿಗೆ ಸಹಾಯ ಮಾಡಬೇಕು ಅಂತ ಅನಿಸಿತು. ಅವಳು ನಾಮಾನನ ಹೆಂಡತಿಗೆ ‘ನಮ್ಮ ಒಡೆಯನ ಕಾಯಿಲೆಯನ್ನು ವಾಸಿ ಮಾಡುವ ಒಬ್ಬ ವ್ಯಕ್ತಿ ನನಗೆ ಗೊತ್ತು. ಅವನು ಇಸ್ರಾಯೇಲಿನಲ್ಲಿರುವ ಯೆಹೋವನ ಪ್ರವಾದಿ ಎಲೀಷ. ಅವನು ಒಡೆಯನನ್ನ ವಾಸಿಮಾಡುವನು’ ಅಂದಳು.

ಆ ಪುಟ್ಟ ಹುಡುಗಿ ಹೇಳಿದ್ದನ್ನು ನಾಮಾನನ ಹೆಂಡತಿ ಅವನಿಗೆ ಹೇಳಿದಳು. ತನ್ನ ಕಾಯಿಲೆ ವಾಸಿಯಾಗೋದಕ್ಕೆ ಅವನು ಏನು ಮಾಡೋದಕ್ಕೂ ಸಿದ್ಧನಿದ್ದ. ಹಾಗಾಗಿ ಅವನು ಇಸ್ರಾಯೇಲ್‌ನಲ್ಲಿದ್ದ ಎಲೀಷನ ಮನೆಗೆ ಹೋದ. ತಾನೊಬ್ಬ ದೊಡ್ಡ ವ್ಯಕ್ತಿ ಆಗಿರೋದರಿಂದ ಎಲೀಷ ತನ್ನನ್ನು ಗೌರವದಿಂದ ಬರಮಾಡಿಕೊಳ್ಳುತ್ತಾನೆ ಎಂದು ನಾಮಾನ ನೆನೆಸಿದ್ದ. ಆದರೆ ಎಲೀಷ ನಾಮಾನನನ್ನು ಭೇಟಿಯಾಗಲು ತನ್ನ ಸೇವಕನನ್ನು ಕಳುಹಿಸಿ ‘ಹೋಗಿ ಯೋರ್ದನ್‌ ನದಿಯಲ್ಲಿ ಏಳು ಸಾರಿ ಸ್ನಾನ ಮಾಡು. ಆಗ ನಿನ್ನ ಕಾಯಿಲೆ ವಾಸಿಯಾಗುವುದು ಎಂದು ಹೇಳು’ ಅಂದನು.

ಆಗ ನಾಮಾನನಿಗೆ ತುಂಬಾ ನಿರಾಶೆಯಾಯಿತು. ಅವನು ‘ಈ ಪ್ರವಾದಿ ತನ್ನ ದೇವರ ಹೆಸರನ್ನು ಹೇಳಿ ನನ್ನ ಮೇಲೆ ಕೈ ಆಡಿಸಿ ವಾಸಿ ಮಾಡ್ತಾನೆ ಅಂದ್ಕೊಂಡಿದ್ದೆ. ಆದರೆ ಇವನು ಇಸ್ರಾಯೇಲಿನಲ್ಲಿರುವ ನದಿಗೆ ಹೋಗು ಎಂದು ಹೇಳುತ್ತಿದ್ದಾನೆ. ಸಿರಿಯದಲ್ಲಿ ಇದಕ್ಕಿಂತ ಉತ್ತಮ ನದಿಗಳಿವೆ. ನಾನು ಅಲ್ಲಿಗೇ ಹೋಗಬಹುದಿತ್ತಲ್ಲಾ?’ ಅಂದನು. ಕೋಪಗೊಂಡ ನಾಮಾನ ಎಲೀಷನ ಮನೆಯಿಂದ ಹೊರಟು ಹೋದನು.

ನಾಮಾನ ಯೋರ್ದನ್‌ ನದಿಯಲ್ಲಿ ಮುಳುಗಿದಾಗ ಅವನ ಕಾಯಿಲೆ ವಾಸಿಯಾಯಿತು.

ನಾಮಾನನ ಸೇವಕರು ಸರಿಯಾಗಿ ಯೋಚಿಸಲು ಅವನಿಗೆ ಸಹಾಯ ಮಾಡಿದರು. ‘ಒಡೆಯನೇ, ಪ್ರವಾದಿ ನಿನಗೆ ಯಾವುದಾದ್ರೂ ಕಷ್ಟದ ಕೆಲಸ ಹೇಳಿದ್ದರೆ ಮಾಡ್ತಿರಲಿಲ್ವಾ? ಹಾಗಿರುವಾಗ ಈ ಚಿಕ್ಕ ಕೆಲಸ ಯಾಕೆ ಮಾಡಬಾರದು?’ ಅಂದರು. ನಾಮಾನ ಅವರ ಮಾತನ್ನು ಕೇಳಿದನು. ಯೋರ್ದನ್‌ ನದಿಗೆ ಹೋಗಿ ಏಳು ಸಾರಿ ಮುಳುಗಿ ಎದ್ದನು. ಏಳನೇ ಸಾರಿ ನೀರಿನಿಂದ ಮೇಲೆ ಬಂದಾಗ ಅವನ ಕಾಯಿಲೆ ಸಂಪೂರ್ಣವಾಗಿ ವಾಸಿಯಾಗಿತ್ತು. ಅವನಿಗೆ ತುಂಬಾ ಸಂತೋಷವಾಯಿತು. ಎಲೀಷನ ಹತ್ತಿರ ಹೋಗಿ ‘ಯೆಹೋವನೇ ಸತ್ಯ ದೇವರು ಎಂದು ಈಗ ನನಗೆ ಗೊತ್ತಾಯಿತು’ ಅಂದನು. ಒಡೆಯನ ಕಾಯಿಲೆ ವಾಸಿ ಆಗಿರೋದನ್ನು ನೋಡಿದಾಗ ಆ ಪುಟ್ಟ ಇಸ್ರಾಯೇಲ್ಯ ಹುಡುಗಿಗೆ ಎಷ್ಟು ಖುಷಿ ಆಗಿರಬೇಕಲ್ವಾ?

“ಚಿಕ್ಕಮಕ್ಕಳು ಪುಟಾಣಿಗಳು ನಿನ್ನನ್ನ ಹೊಗಳೋ ಹಾಗೆ ಮಾಡಿದ್ದೀಯ.”—ಮತ್ತಾಯ 21:16

ಪ್ರಶ್ನೆಗಳು: ಇಸ್ರಾಯೇಲ್ಯ ಪುಟ್ಟ ಹುಡುಗಿಗೆ ನಾಮಾನನ ಹೆಂಡತಿಯ ಹತ್ತಿರ ಮಾತಾಡುವುದು ಸುಲಭವಾಗಿತ್ತಾ? ಧೈರ್ಯದಿಂದ ಮಾತಾಡಲು ಅವಳಿಗೆ ಯಾವುದು ಸಹಾಯ ಮಾಡಿತು?

2 ಅರಸು 5:1-19; ಲೂಕ 4:27

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ