ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 62 ಪು. 148-ಪು. 149 ಪ್ಯಾ. 1
  • ದೊಡ್ಡ ಮರದಂತಿರುವ ಸಾಮ್ರಾಜ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೊಡ್ಡ ಮರದಂತಿರುವ ಸಾಮ್ರಾಜ್ಯ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಮಹಾ ವೃಕ್ಷವೊಂದರ ಗೂಢಾರ್ಥವನ್ನು ಬಿಡಿಸಿಹೇಳುವುದು
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ಸದಾಕಾಲ ಇರುವ ಸರಕಾರ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಒಂದು ಭಾರೀ ಪ್ರತಿಮೆಯ ಏಳುಬೀಳುಗಳು
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ದಾನಿಯೇಲ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 62 ಪು. 148-ಪು. 149 ಪ್ಯಾ. 1
ರಾಜ ನೆಬೂಕದ್ನೆಚ್ಚರನ ಕನಸಿನಲ್ಲಿ ಕಂಡ ಮರವು ಕಡಿಯಲ್ಪಡುತ್ತಿದೆ

ಪಾಠ 62

ದೊಡ್ಡ ಮರದಂತಿರುವ ಸಾಮ್ರಾಜ್ಯ

ಒಂದು ರಾತ್ರಿ ನೆಬೂಕದ್ನೆಚ್ಚರನಿಗೆ ಒಂದು ಭಯಾನಕ ಕನಸು ಬಿತ್ತು. ಅವನು ವಿವೇಕಿಗಳನ್ನು ಕರೆದು ಆ ಕನಸಿನ ಅರ್ಥವೇನೆಂದು ಕೇಳಿದನು. ಆದರೆ ಅವರಲ್ಲಿ ಯಾರಿಗೂ ಆ ಕನಸಿನ ಅರ್ಥ ಗೊತ್ತಾಗಲಿಲ್ಲ. ಕೊನೆಗೆ ರಾಜನು ದಾನಿಯೇಲನನ್ನು ಕರೆದನು.

ನೆಬೂಕದ್ನೆಚ್ಚರನು ದಾನಿಯೇಲನಿಗೆ, ‘ನಾನು ನನ್ನ ಕನಸಿನಲ್ಲಿ ಒಂದು ದೊಡ್ಡ ಮರವನ್ನು ನೋಡ್ದೆ. ಅದು ಆಕಾಶ ಮುಟ್ಟುವಷ್ಟು ಎತ್ತರಕ್ಕೆ ಬೆಳೆಯಿತು. ಭೂಮಿಯ ಯಾವ ಮೂಲೆಯಿಂದ ನೋಡಿದ್ರೂ ಅದು ಕಾಣಿಸ್ತಿತ್ತು. ಅದರಲ್ಲಿ ಹಚ್ಚಹಸಿರಿನ ಎಲೆ ಮತ್ತು ಹಣ್ಣುಗಳು ತುಂಬಿದ್ದವು. ಪ್ರಾಣಿಗಳು ಆ ಮರದ ನೆರಳಿನಲ್ಲಿ ಆಶ್ರಯ ಪಡ್ಕೊಂಡಿದ್ವು. ಪಕ್ಷಿಗಳು ಆ ಮರದ ಕೊಂಬೆಗಳಲ್ಲಿ ಗೂಡುಗಳನ್ನು ಕಟ್ಟಿಕೊಂಡು ವಾಸ ಮಾಡಿಕೊಂಡಿದ್ದವು. ಆಗ ಸ್ವರ್ಗದಿಂದ ಒಬ್ಬ ದೇವದೂತ ಬಂದು, “ಆ ಮರವನ್ನ ಕಡಿದು ಹಾಕಿ, ಅದ್ರ ರೆಂಬೆಕೊಂಬೆಗಳನ್ನ ಕತ್ತರಿಸಿ, ಆದ್ರೆ ಅದ್ರ ಬುಡವನ್ನ ಬೇರು ಸಮೇತ ಹಾಗೇ ಬಿಡಿ. ಆ ಬುಡಕ್ಕೆ ಕಬ್ಬಿಣ ಮತ್ತು ತಾಮ್ರದ ಪಟ್ಟಿ ಜಡಿಯಿರಿ. ಮನುಷ್ಯನ ಹೃದಯ ಹೋಗಿ ಅದಕ್ಕೆ ಪ್ರಾಣಿ ಹೃದಯ ಬರುತ್ತೆ. ಹೀಗೇ ಏಳು ಕಾಲಗಳು ಕಳೆಯುತ್ತೆ. ದೇವರು ಅಧಿಕಾರಿ ಆಗಿದ್ದಾನೆ ಮತ್ತು ಆತನು ಸಾಮ್ರಾಜ್ಯವನ್ನು ತನಗೆ ಇಷ್ಟ ಬಂದವ್ರಿಗೆ ಕೊಡ್ತಾನೆ ಎಂದು ಎಲ್ಲರಿಗೂ ಗೊತ್ತಾಗುವುದು” ಎಂದು ಹೇಳಿದನು. ಇದೇ ನನಗೆ ಬಿದ್ದ ಕನಸು’ ಎಂದನು.

ಈ ಕನಸಿನ ಅರ್ಥ ಏನೆಂದು ಯೆಹೋವ ದೇವರು ದಾನಿಯೇಲನಿಗೆ ತಿಳಿಸಿದನು. ಇದನ್ನು ಅರ್ಥಮಾಡಿಕೊಂಡಾಗ ದಾನಿಯೇಲನಿಗೆ ತುಂಬಾ ಭಯವಾಯಿತು. ಅವನು ರಾಜನಿಗೆ, ‘ನನ್ನ ಒಡೆಯ, ಈ ಕನಸು ನಿನ್ನ ಶತ್ರುಗಳ ಬಗ್ಗೆ ಆಗಿದ್ದರೆ ಒಳ್ಳೇದಿತ್ತು. ಆದರೆ ಇದು ನಿನ್ನ ಬಗ್ಗೆ. ನಿನ್ನ ಕನಸಿನಲ್ಲಿ ಕಡಿದುಹಾಕಲ್ಪಟ್ಟ ಆ ದೊಡ್ಡ ಮರ ನೀನೇ. ನೀನು ನಿನ್ನ ಸಾಮ್ರಾಜ್ಯವನ್ನು ಕಳೆದುಕೊಳ್ಳುವೆ ಮತ್ತು ಕಾಡು ಪ್ರಾಣಿಯಂತೆ ಹುಲ್ಲನ್ನು ತಿನ್ನುವೆ. ಆದರೆ ದೇವದೂತನು ಮರದ ಬುಡವನ್ನು ಹಾಗೇ ಬಿಡುವಂತೆ ಹೇಳಿದ್ದರಿಂದ ಸ್ವಲ್ಪ ಸಮಯದ ನಂತರ ನೀನು ಮತ್ತೆ ರಾಜನಾಗುವೆ’ ಎಂದು ಹೇಳಿದನು.

ಇದಾಗಿ ಒಂದು ವರ್ಷದ ನಂತರ ನೆಬೂಕದ್ನೆಚ್ಚರನು ತನ್ನ ಅರಮನೆಯ ಮಹಡಿಯ ಮೇಲೆ ನಡೆದಾಡ್ತಾ ತನ್ನ ರಾಜ್ಯವಾದ ಬಾಬೆಲನ್ನು ನೋಡಿ ಜಂಬದಿಂದ ‘ನೋಡಿ, ನಾನು ಕಟ್ಟಿದ ಈ ಮಹಾ ಸಾಮ್ರಾಜ್ಯ. ನನ್ನಂಥ ರಾಜ ಬೇರೆ ಯಾರೂ ಇಲ್ಲ’ ಎಂದು ಕೊಚ್ಚಿಕೊಂಡನು. ಅವನು ಹೀಗೆ ಹೇಳುತ್ತಿರುವಾಗಲೇ ಸ್ವರ್ಗದಿಂದ, ‘ನೆಬೂಕದ್ನೆಚ್ಚರನೇ, ನೀನು ನಿನ್ನ ಸಾಮ್ರಾಜ್ಯವನ್ನು ಕಳೆದುಕೊಂಡಿರುವೆ’ ಎಂಬ ಮಾತು ಕೇಳಿಸಿತು.

ಆ ಕ್ಷಣವೇ ನೆಬೂಕದ್ನೆಚ್ಚರನು ಹುಚ್ಚನಾಗಿ ಕಾಡು ಪ್ರಾಣಿಯಂತೆ ವರ್ತಿಸಲು ಆರಂಭಿಸಿದನು. ಆಮೇಲೆ ಅವನು ತನ್ನ ಅರಮನೆ ಬಿಟ್ಟು ಕಾಡುಪ್ರಾಣಿಗಳೊಟ್ಟಿಗೆ ಜೀವಿಸಬೇಕಾಯಿತು. ಅವನ ಕೂದಲು ಹದ್ದಿನ ರೆಕ್ಕೆಗಳಂತೆ, ಅವನ ಉಗುರುಗಳು ಪಕ್ಷಿಯ ಉಗುರುಗಳಂತೆ ಆಯಿತು.

ಹೀಗೆ ಏಳು ವರ್ಷಗಳು ಕಳೆದ ಮೇಲೆ ನೆಬೂಕದ್ನೆಚ್ಚರನು ಮೊದಲಿನಂತಾದನು. ಯೆಹೋವನು ಅವನನ್ನು ಮತ್ತೆ ಬಾಬೆಲಿನ ರಾಜನಾಗಿ ಮಾಡಿದನು. ಆಗ ನೆಬೂಕದ್ನೆಚ್ಚರನು, ‘ಸ್ವರ್ಗದ ರಾಜನಾದ ಯೆಹೋವನಿಗೆ ಸ್ತೋತ್ರ. ಯೆಹೋವನೊಬ್ಬನೇ ರಾಜನು ಎಂದು ನನಗೀಗ ಗೊತ್ತಾಯಿತು. ಆತನು ಅಹಂಕಾರಿಗಳನ್ನು ತಗ್ಗಿಸುತ್ತಾನೆ. ಸಾಮ್ರಾಜ್ಯವನ್ನು ತನಗೆ ಬೇಕಾದವರಿಗೆ ಕೊಡುತ್ತಾನೆ’ ಅಂದನು.

“ಸೊಕ್ಕಿಂದ ಸರ್ವನಾಶ, ದರ್ಪದಿಂದ ದುರ್ಗತಿ.”—ಜ್ಞಾನೋಕ್ತಿ 16:18

ಪ್ರಶ್ನೆಗಳು: ನೆಬೂಕದ್ನೆಚ್ಚರನ ಕನಸಿನ ಅರ್ಥವೇನು? ತಾನು ಯಾವ ಪಾಠಗಳನ್ನು ಕಲಿತೆ ಎಂದು ನೆಬೂಕದ್ನೆಚ್ಚರನು ಹೇಳಿದನು?

ದಾನಿಯೇಲ 4:1-37

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ