ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 68 ಪು. 162-ಪು. 163 ಪ್ಯಾ. 1
  • ಎಲಿಸಬೆತಳಿಗೆ ಮಗುವಾಯಿತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಲಿಸಬೆತಳಿಗೆ ಮಗುವಾಯಿತು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ನಿರ್ದೋಷಿಗಳಾಗಿ ನಡೆದುದಕ್ಕಾಗಿ ಅವರು ಬಹುಮಾನಿಸಲ್ಪಟ್ಟರು
    ಕಾವಲಿನಬುರುಜು—1994
  • ಹಾದಿಯನ್ನು ಸಿದ್ಧಪಡಿಸುವವನು ಹುಟ್ಟುತ್ತಾನೆ
    ಅತ್ಯಂತ ಮಹಾನ್‌ ಪುರುಷ
  • ಪರಲೋಕದಿಂದ ಸಂದೇಶಗಳು
    ಅತ್ಯಂತ ಮಹಾನ್‌ ಪುರುಷ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1992
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 68 ಪು. 162-ಪು. 163 ಪ್ಯಾ. 1
ತನ್ನ ಮಗುವಿಗೆ ಯೋಹಾನ ಎಂದು ಹೆಸರಿಡಬೇಕು ಎಂದು ಜಕರೀಯ ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಿಳಿಸುತ್ತಿದ್ದಾನೆ

ಪಾಠ 68

ಎಲಿಸಬೆತಳಿಗೆ ಮಗುವಾಯಿತು

ಯೆರೂಸಲೇಮಿನ ಗೋಡೆಗಳು ಪುನಃ ಕಟ್ಟಿ ಸುಮಾರು 400 ವರ್ಷಗಳಾದವು. ಈ ಪಟ್ಟಣದ ಬಳಿ ಜಕರೀಯನೆಂಬ ಪುರೋಹಿತ ಮತ್ತು ಅವನ ಹೆಂಡತಿ ಎಲಿಸಬೆತ್‌ ವಾಸಿಸುತ್ತಿದ್ದರು. ಮದುವೆಯಾಗಿ ಅನೇಕ ವರ್ಷಗಳಾಗಿದ್ದರೂ ಅವರಿಗೆ ಮಕ್ಕಳಾಗಿರಲಿಲ್ಲ. ಒಂದಿನ ಜಕರೀಯನು ದೇವಾಲಯದ ಪವಿತ್ರ ಸ್ಥಳದಲ್ಲಿ ಧೂಪ ಹಾಕುತ್ತಿದ್ದಾಗ ಗಬ್ರಿಯೇಲ ದೇವದೂತನು ಕಾಣಿಸಿಕೊಂಡನು. ಆಗ ಜಕರೀಯನಿಗೆ ಭಯವಾಯಿತು. ಅದಕ್ಕೆ ಗಬ್ರಿಯೇಲನು ‘ಭಯಪಡಬೇಡ, ನಾನು ಯೆಹೋವನಿಂದ ನಿನಗೊಂದು ಒಳ್ಳೇ ಸುದ್ದಿ ತಂದಿದ್ದೇನೆ. ನಿನ್ನ ಹೆಂಡತಿ ಎಲಿಸಬೆತ್‌ಗೆ ಗಂಡುಮಗು ಹುಟ್ಟುತ್ತೆ. ಅವನಿಗೆ ಯೋಹಾನ ಎಂದು ಹೆಸರಿಡಬೇಕು. ಯೆಹೋವನು ಅವನನ್ನು ಒಂದು ವಿಶೇಷ ಕೆಲಸಕ್ಕಾಗಿ ಆರಿಸಿಕೊಂಡಿದ್ದಾನೆ’ ಅಂದನು. ಅದಕ್ಕೆ ಜಕರೀಯನು ‘ನನಗೆ ಮತ್ತು ನನ್ನ ಹೆಂಡತಿಗೆ ತುಂಬ ವಯಸ್ಸಾಗಿದೆ. ಇದನ್ನು ನಾನು ಹೇಗೆ ನಂಬಲಿ?’ ಎಂದು ಕೇಳಿದನು. ಆಗ ಗಬ್ರಿಯೇಲನು ‘ಈ ಸುದ್ದಿಯನ್ನು ತಿಳಿಸಲು ದೇವರು ನನ್ನನ್ನ ಕಳುಹಿಸಿದ್ದಾನೆ. ಆದರೆ ನೀನು ಈ ಮಾತನ್ನು ನಂಬದಿದ್ದ ಕಾರಣ ಮಗು ಹುಟ್ಟುವ ತನಕ ನೀನು ಮೂಕನಾಗಿರುವೆ’ ಅಂದನು.

ಆ ದಿನ ಜಕರೀಯನು ಪವಿತ್ರ ಸ್ಥಳದಲ್ಲಿ ಎಂದಿಗಿಂತಲೂ ಹೆಚ್ಚು ಸಮಯ ಇದ್ದನು. ಆದ್ದರಿಂದ ಅವನು ಹೊರಗೆ ಬಂದಾಗ, ಅಲ್ಲಿ ಕಾಯುತ್ತಿದ್ದ ಜನರು ಜಕರೀಯನಿಗೆ ಏನಾಯಿತೆಂದು ಕೇಳಿದರು. ಜಕರೀಯನಿಗೆ ಮಾತಾಡಲು ಆಗಲಿಲ್ಲ. ಅವನು ತನ್ನ ಕೈಗಳ ಮೂಲಕ ಸನ್ನೆ ಮಾಡುತ್ತಿದ್ದನು. ಜಕರೀಯನಿಗೆ ದೇವರಿಂದ ಸಂದೇಶ ಸಿಕ್ಕಿರಬಹುದೆಂದು ಜನರು ಅಂದುಕೊಂಡರು.

ಸ್ವಲ್ಪ ಸಮಯದ ನಂತರ ದೇವದೂತ ಹೇಳಿದಂತೆ ಎಲಿಸಬೆತಳು ಗರ್ಭಿಣಿಯಾಗಿ ಒಂದು ಗಂಡು ಮಗುವನ್ನು ಹೆತ್ತಳು. ಅವಳ ಸ್ನೇಹಿತರು ಮತ್ತು ಸಂಬಂಧಿಕರು ಮಗುವನ್ನು ನೋಡಲು ಬಂದರು. ಅವಳಿಗೆ ಮಗು ಹುಟ್ಟಿದ್ದಕ್ಕಾಗಿ ಅವರು ತುಂಬ ಸಂತೋಷಪಟ್ಟರು. ಆಗ ಎಲಿಸಬೆತಳು ‘ಈ ಮಗುವಿಗೆ ಯೋಹಾನ ಎಂದು ಹೆಸರಿಡಬೇಕು’ ಅಂದಳು. ಅದಕ್ಕೆ ಅವರು ‘ನಿಮ್ಮ ಸಂಬಂಧಿಕರಲ್ಲಿ ಈ ಹೆಸರಿನವರು ಯಾರೂ ಇಲ್ಲ. ಈ ಮಗುವಿಗೆ ಜಕರೀಯ ಎಂದು ಅಪ್ಪನ ಹೆಸರಿಡಿ’ ಅಂದರು. ಆದರೆ ಜಕರೀಯನು ಹಲಗೆಯ ಮೇಲೆ ‘ಅವನ ಹೆಸ್ರು ಯೋಹಾನ’ ಎಂದು ಬರೆದನು. ಆ ಕ್ಷಣವೇ ಅವನಿಗೆ ಮಾತು ಬಂತು! ಈ ಮಗುವಿನ ಸುದ್ದಿ ಯೂದಾಯದೆಲ್ಲೆಡೆ ಹರಡಿತು. ಜನರೆಲ್ಲರೂ ‘ಇವನು ದೊಡ್ಡವನಾದ ಮೇಲೆ ಎಂಥ ವ್ಯಕ್ತಿಯಾಗಬಹುದು’ ಎಂದು ಕುತೂಹಲಪಟ್ಟರು.

ನಂತರ ಜಕರೀಯ ಪವಿತ್ರಶಕ್ತಿಯ ಸಹಾಯದಿಂದ, ‘ಯೆಹೋವನಿಗೆ ಸ್ತುತಿ. ಆತನು ಅಬ್ರಹಾಮನಿಗೆ ನಮ್ಮನ್ನು ರಕ್ಷಿಸಲು ಮೆಸ್ಸೀಯನನ್ನು ಕಳುಹಿಸುವೆನು ಎಂದು ಮಾತುಕೊಟ್ಟಿದ್ದನು. ಯೋಹಾನನು ಪ್ರವಾದಿಯಾಗುವನು ಮತ್ತು ಮೆಸ್ಸೀಯನಿಗೆ ದಾರಿ ಸಿದ್ಧಮಾಡುವನು’ ಎಂದು ಹೇಳಿದನು.

ಇದೇ ಸಂದರ್ಭದಲ್ಲಿ ಎಲಿಸಬೆತಳ ಸಂಬಂಧಿಕಳಾದ ಮರಿಯಳ ಜೀವನದಲ್ಲೂ ಒಂದು ವಿಶೇಷವಾದ ಸಂಗತಿ ನಡೆಯಿತು. ಅದು ಏನು ಅಂತ ಮುಂದಿನ ಅಧ್ಯಾಯದಲ್ಲಿ ನೋಡೋಣ.

“ಮನುಷ್ಯರಿಂದ ಇದು ಅಸಾಧ್ಯ. ಆದ್ರೆ ದೇವರಿಗೆ ಎಲ್ಲಾ ಸಾಧ್ಯ.”—ಮತ್ತಾಯ 19:26

ಪ್ರಶ್ನೆಗಳು: ಗಬ್ರಿಯೇಲನು ಜಕರೀಯನಿಗೆ ಏನು ಹೇಳಿದನು? ಯಾವ ವಿಶೇಷ ಕೆಲಸವನ್ನು ಯೋಹಾನ ಮಾಡಲಿದ್ದನು?

ಮತ್ತಾಯ 11:7-14; ಲೂಕ 1:5-25, 57-79; ಯೆಶಾಯ 40:3; ಮಲಾಕಿ 3:1

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ