ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 76 ಪು. 180-ಪು. 181 ಪ್ಯಾ. 2
  • ಯೇಸು ದೇವಾಲಯವನ್ನು ಶುದ್ಧ ಮಾಡುತ್ತಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ದೇವಾಲಯವನ್ನು ಶುದ್ಧ ಮಾಡುತ್ತಾನೆ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಯೇಸು ದೇವಾಲಯವನ್ನು ಶುದ್ಧಮಾಡುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯೆಹೋವನ ಆರಾಧನೆಗಾಗಿ ಅಭಿಮಾನ
    ಅತ್ಯಂತ ಮಹಾನ್‌ ಪುರುಷ
  • ‘ಆ ಸಮಯ ಬಂದಿದೆ!’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ನಿಮಗೆ ತಿಳಿದಿತ್ತೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 76 ಪು. 180-ಪು. 181 ಪ್ಯಾ. 2
ಯೇಸು ಚಾಟಿ ಹಿಡಿದುಕೊಂಡು ಪ್ರಾಣಿಗಳನ್ನು ದೇವಾಲಯದಿಂದ ಹೊರಗೆ ಓಡಿಸುತ್ತಿದ್ದಾನೆ ಮತ್ತು ಹಣ ಬದಲಾಯಿಸ್ತಿದ್ದವ್ರ ಮೇಜುಗಳನ್ನು ಬೀಳಿಸುತ್ತಿದ್ದಾನೆ

ಪಾಠ 76

ಯೇಸು ದೇವಾಲಯವನ್ನು ಶುದ್ಧ ಮಾಡುತ್ತಾನೆ

ಕ್ರಿ.ಶ. 30ರ ಏಪ್ರಿಲ್‌ ತಿಂಗಳಿನಲ್ಲಿ ಯೇಸು ಯೆರೂಸಲೇಮಿಗೆ ಹೋದನು. ಪಸ್ಕಹಬ್ಬವನ್ನು ಆಚರಿಸಲಿಕ್ಕಾಗಿ ಅಲ್ಲಿ ತುಂಬ ಜನ ಬಂದಿದ್ದರು. ಈ ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಜನರು ದೇವಾಲಯದಲ್ಲಿ ಪ್ರಾಣಿಗಳನ್ನು ಬಲಿಯಾಗಿ ಅರ್ಪಿಸುತ್ತಿದ್ದರು. ಇದಕ್ಕಾಗಿ ಕೆಲವರು ಪ್ರಾಣಿಗಳನ್ನು ತಮ್ಮ ಜೊತೆ ತರುತ್ತಿದ್ದರು. ಇನ್ನು ಕೆಲವರು ಯೆರೂಸಲೇಮಿಗೆ ಬಂದು ದುಡ್ಡು ಕೊಟ್ಟು ಕೊಂಡುಕೊಳ್ಳುತ್ತಿದ್ದರು.

ಯೇಸು ದೇವಾಲಯಕ್ಕೆ ಹೋದಾಗ ಜನರು ಅಲ್ಲಿ ಪ್ರಾಣಿಗಳನ್ನು ಮಾರುತ್ತಿರುವುದನ್ನು ನೋಡಿದನು. ಅವರು ತಮ್ಮ ಲಾಭಕ್ಕಾಗಿ ವ್ಯಾಪಾರ ಮಾಡುತ್ತಿದ್ದರು, ಅದೂ ಯೆಹೋವನನ್ನು ಆರಾಧಿಸುವ ಸ್ಥಳದಲ್ಲಿ! ಇದನ್ನು ನೋಡಿದ ಯೇಸು ಏನು ಮಾಡಿದ ಗೊತ್ತಾ? ಅವನು ಹಗ್ಗದಿಂದ ಚಾಟಿ ಮಾಡಿ ಪಶು, ಕುರಿ, ಪಾರಿವಾಳಗಳನ್ನ ದೇವಾಲಯದಿಂದ ಹೊರಗೆ ಓಡಿಸಿದನು. ಹಣ ಬದಲಾಯಿಸ್ತಿದ್ದವ್ರ ಮೇಜುಗಳನ್ನು ಬೀಳಿಸಿ ಅವರ ನಾಣ್ಯಗಳನ್ನು ಚೆಲ್ಲಿಬಿಟ್ಟನು. ಯೇಸು ಪಾರಿವಾಳ ಮಾರುವವರಿಗೆ, ‘ಇದನ್ನೆಲ್ಲ ಇಲ್ಲಿಂದ ತಗೊಂಡು ಹೋಗಿ. ನನ್ನ ತಂದೆಯ ಆಲಯವನ್ನ ವ್ಯಾಪಾರದ ಸ್ಥಳವಾಗಿ ಮಾಡಬೇಡಿ’ ಅಂದನು.

ಇದನ್ನು ನೋಡಿದ ಜನರು ಆಶ್ಚರ್ಯಪಟ್ಟರು. ಅವನ ಶಿಷ್ಯರಿಗೆ ‘ಯೆಹೋವನ ಆಲಯದ ಕಡೆಗೆ ನನಗೆ ತುಂಬ ಹುರುಪು ಇರುತ್ತೆ’ ಎಂದು ಮೆಸ್ಸೀಯನ ಬಗ್ಗೆ ಬರೆಯಲಾದ ಭವಿಷ್ಯವಾಣಿ ನೆನಪಾಯಿತು.

ಸಮಯಾನಂತರ ಕ್ರಿ.ಶ. 33ರಲ್ಲಿ ಯೇಸು ಎರಡನೇ ಸಲ ದೇವಾಲಯವನ್ನು ಶುದ್ಧ ಮಾಡಿದನು. ತನ್ನ ತಂದೆಯ ಮನೆಗೆ ಅಗೌರವ ತೋರಿಸುವುದನ್ನು ಯೇಸು ಸಹಿಸುತ್ತಿರಲಿಲ್ಲ.

“ನೀವು . . . ದೇವರಿಗೂ ದುಡ್ಡಿಗೂ ದಾಸರಾಗಿ ಇರೋಕಾಗಲ್ಲ”—ಲೂಕ 16:13

ಪ್ರಶ್ನೆಗಳು: ಜನರು ದೇವಾಲಯದಲ್ಲಿ ಪ್ರಾಣಿಗಳನ್ನು ಮಾರುವುದನ್ನು ನೋಡಿದಾಗ ಯೇಸು ಏನು ಮಾಡಿದನು? ಯೇಸು ಏಕೆ ಹಾಗೆ ಮಾಡಿದನು?

ಮತ್ತಾಯ 21:12, 13; ಮಾರ್ಕ 11:15-17; ಲೂಕ 19:45, 46; ಯೋಹಾನ 2:13-17; ಕೀರ್ತನೆ 69:9

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ