ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 87 ಪು. 204-ಪು. 205 ಪ್ಯಾ. 3
  • ಯೇಸು ಆಚರಿಸಿದ ಕೊನೆಯ ಪಸ್ಕ ಹಬ್ಬ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ಆಚರಿಸಿದ ಕೊನೆಯ ಪಸ್ಕ ಹಬ್ಬ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಯೇಸುವಿನ ಬೀಳ್ಕೊಡುವ ಮಾತುಗಳಿಗೆ ಲಕ್ಷ್ಯಕೊಡುವುದು
    ಕಾವಲಿನಬುರುಜು—1996
  • ಮಾಳಿಗೆಯ ಒಂದು ಕೋಣೆಯಲ್ಲಿ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ‘ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡಿರಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ನಿಮ್ಮ ಮೇಲೆ ಪರಿಣಾಮ ಬೀರುವ ಒಂದು ಆಚರಣೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 87 ಪು. 204-ಪು. 205 ಪ್ಯಾ. 3
ಒಡೆಯನ ರಾತ್ರಿ ಊಟವನ್ನು ಯೇಸು ತನ್ನ ಹನ್ನೊಂದು ಮಂದಿ ನಂಬಿಗಸ್ತ ಅಪೊಸ್ತರೊಂದಿಗೆ ಆರಂಭಿಸಿದನು

ಪಾಠ 87

ಯೇಸು ಆಚರಿಸಿದ ಕೊನೆಯ ಪಸ್ಕ ಹಬ್ಬ

ಯೆಹೂದ್ಯರು ಪ್ರತಿ ವರ್ಷ ನೈಸಾನ್‌ ತಿಂಗಳ 14ನೇ ದಿನದಂದು ಪಸ್ಕ ಹಬ್ಬವನ್ನು ಆಚರಿಸುತ್ತಿದ್ದರು. ಯೆಹೋವನು ತಮ್ಮನ್ನು ಈಜಿಪ್ಟಿನ ದಾಸತ್ವದಿಂದ ಬಿಡುಗಡೆ ಮಾಡಿದ್ದನ್ನು, ಮಾತುಕೊಟ್ಟ ದೇಶಕ್ಕೆ ಕರೆದುಕೊಂಡು ಬಂದದ್ದನ್ನು ನೆನಪು ಮಾಡಿಕೊಳ್ಳಲು ಈ ಹಬ್ಬವನ್ನು ಆಚರಿಸುತ್ತಿದ್ದರು. ಕ್ರಿ.ಶ. 33ರಲ್ಲಿ ಯೇಸು ಮತ್ತು ಅವನ ಅಪೊಸ್ತಲರು ಪಸ್ಕ ಹಬ್ಬವನ್ನು ಆಚರಿಸಲು ಯೆರೂಸಲೇಮಿನ ಮೇಲಂತಸ್ತಿನ ಒಂದು ಕೋಣೆಯಲ್ಲಿ ಸೇರಿ ಬಂದಿದ್ದರು. ಊಟದ ಕೊನೆಯಲ್ಲಿ ಯೇಸು ಅಪೊಸ್ತಲರಿಗೆ, “ನಿಮ್ಮಲ್ಲಿ ಒಬ್ಬ ನನಗೆ ನಂಬಿಕೆ ದ್ರೋಹ ಮಾಡ್ತಾನೆ” ಎಂದು ಹೇಳಿದನು. ಆಗ ಅಪೊಸ್ತಲರಿಗೆ ಆಶ್ಚರ್ಯವಾಯಿತು, “ಸ್ವಾಮಿ, ಅದು ನಾನಲ್ಲ ತಾನೇ?”ಎಂದು ಕೇಳಿದರು. ಅದಕ್ಕೆ ಯೇಸು “ನಾನು ಈ ರೊಟ್ಟಿ ತುಂಡನ್ನ ಅದ್ದಿ ಯಾರಿಗೆ ಕೊಡ್ತಿನೋ ಅವನೇ” ಅಂದನು. ಆಮೇಲೆ ರೊಟ್ಟಿಯನ್ನು ಇಸ್ಕರಿಯೂತ ಯೂದನಿಗೆ ಕೊಟ್ಟನು. ತಕ್ಷಣ, ಯೂದ ಎದ್ದು ಅಲ್ಲಿಂದ ಹೊರಟು ಹೋದನು.

ನಂತರ ಯೇಸು, ಪ್ರಾರ್ಥನೆ ಮಾಡಿ ರೊಟ್ಟಿಯನ್ನು ಮುರಿದು ಉಳಿದ ಅಪೊಸ್ತಲರಿಗೆ ಕೊಟ್ಟು, “ತಗೊಳಿ, ತಿನ್ನಿ. ಇದು ನಾನು ನಿಮಗೋಸ್ಕರ ಅರ್ಪಿಸೋ ನನ್ನ ದೇಹವನ್ನ ಸೂಚಿಸುತ್ತೆ.” ಎಂದನು. ಆಮೇಲೆ ದ್ರಾಕ್ಷಾಮದ್ಯ ತಗೊಂಡು ಪ್ರಾರ್ಥಿಸಿ, ‘ತಗೊಳಿ, ಇದನ್ನ ಕುಡಿದು ಇನ್ನೊಬ್ರಿಗೆ ದಾಟಿಸಿ. ಇದು ನನ್ನ ರಕ್ತವನ್ನ ಸೂಚಿಸುತ್ತೆ. ಇದರಿಂದ ನಿಮ್ಮ ಪಾಪಗಳಿಗೆ ಕ್ಷಮೆ ಸಿಗುತ್ತೆ. ನೀವು ನನ್ನೊಂದಿಗೆ ಸ್ವರ್ಗದಲ್ಲಿ ರಾಜರಾಗಿರುವಿರಿ ಎಂದು ನಾನು ನಿಮಗೆ ಮಾತು ಕೊಡುತ್ತೇನೆ. ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಪ್ರತಿ ವರ್ಷ ಮಾಡ್ತಾ ಇರಿ’ ಎಂದನು. ಆದ್ದರಿಂದ ಇವತ್ತಿಗೂ ಯೇಸುವಿನ ಹಿಂಬಾಲಕರು ಪ್ರತಿ ವರ್ಷದ ಆ ದಿನ ಯೇಸುವನ್ನು ನೆನಪಿಸಿಕೊಳ್ಳಲು ಕೂಡಿಬರುತ್ತಾರೆ. ಇದನ್ನು ಒಡೆಯನ ರಾತ್ರಿ ಊಟ ಎಂದು ಕರೆಯಲಾಗುತ್ತದೆ.

ಆ ಊಟದ ನಂತರ, ಅಪೊಸ್ತಲರು ತಮ್ಮಲ್ಲಿ ಯಾರು ದೊಡ್ಡವರು ಎಂದು ದೊಡ್ಡ ಜಗಳ ಮಾಡಿದರು. ಅದಕ್ಕೆ ಯೇಸು, ‘ನಿಮ್ಮಲ್ಲಿ ದೊಡ್ಡವರು ಎಲ್ರಿಗಿಂತ ಚಿಕ್ಕವರಾಗಿ ಇರಬೇಕು.’ ಎಂದು ಹೇಳಿದನು.

‘ನಿಮ್ಮನ್ನ ಸ್ನೇಹಿತರಂತ ಕರಿದಿದ್ದೀನಿ. ಯಾಕಂದ್ರೆ ಅಪ್ಪನ ಹತ್ರ ನಾನು ಕೇಳಿಸ್ಕೊಂಡ ಎಲ್ಲ ವಿಷ್ಯ ನಿಮಗೆ ಹೇಳಿದ್ದೀನಿ. ನಾನು ಬೇಗ ನನ್ನ ತಂದೆಯ ಬಳಿ ಸ್ವರ್ಗಕ್ಕೆ ಹೋಗುತ್ತೇನೆ. ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು ಆಗ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ. ನಾನು ನಿಮ್ಮನ್ನ ಪ್ರೀತಿಸಿದ ತರಾನೇ ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು’ ಎಂದು ಯೇಸು ಹೇಳಿದನು.

ಕೊನೆಗೆ ಯೇಸು, ತನ್ನ ಶಿಷ್ಯರನ್ನು ಕಾಪಾಡಬೇಕೆಂದು, ಎಲ್ಲರೂ ಶಾಂತಿಯಿಂದ ಸೇವೆ ಮಾಡಲು ಸಹಾಯ ಮಾಡಬೇಕೆಂದು ಯೆಹೋವನನ್ನು ಬೇಡಿಕೊಂಡನು. ಅಷ್ಟೆ ಅಲ್ಲದೇ, ಯೆಹೋವನ ಹೆಸರು ಪವಿತ್ರವಾಗಲಿ ಎಂದು ಪ್ರಾರ್ಥಿಸಿದನು. ನಂತರ, ಯೇಸು ಮತ್ತವನ ಅಪೊಸ್ತಲರು ಯೆಹೋವನಿಗೆ ಸ್ತುತಿ ಗೀತೆಗಳನ್ನು ಹಾಡಿ ಅಲ್ಲಿಂದ ಹೊರಟರು. ಯೇಸುವನ್ನು ಬಂಧಿಸುವ ಸಮಯ ಈಗ ತುಂಬಾ ಹತ್ತಿರ ಇತ್ತು.

“ಚಿಕ್ಕ ಹಿಂಡೇ, ಭಯಪಡಬೇಡ, ನಿಮ್ಮನ್ನ ರಾಜರಾಗಿ ಮಾಡೋದಂದ್ರೆ ನಿಮ್ಮ ತಂದೆಗೆ ತುಂಬ ಇಷ್ಟ.”—ಲೂಕ 12:32

ಪ್ರಶ್ನೆಗಳು: ಅಪೊಸ್ತಲರಿಗೆ ಯೇಸು ಏನೆಂದು ಮಾತು ಕೊಟ್ಟನು? ಯೇಸು ಅಪೊಸ್ತಲರೊಂದಿಗೆ ಮಾಡಿದ ಕೊನೆಯ ಪಸ್ಕ ಹಬ್ಬದಲ್ಲಿ ಅವರಿಗೆ ಯಾವ ಮುಖ್ಯ ಪಾಠಗಳನ್ನು ಕಲಿಸಿದನು?

ಮತ್ತಾಯ 26:20-30; ಲೂಕ 22:14-26; ಯೋಹಾನ 13:1, 2, 26, 30, 34, 35; 15:12-19; 17:3-26

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ