ಭಾಗ 6—ಪರಿಚಯ
ಕೊನೆಗೆ ಇಸ್ರಾಯೇಲ್ಯರು ದೇವರು ಮಾತು ಕೊಟ್ಟ ದೇಶಕ್ಕೆ ಬಂದಾಗ ಪವಿತ್ರ ಡೇರೆ ಸತ್ಯಾರಾಧನೆಯ ಕೇಂದ್ರವಾಗಿತ್ತು. ಪುರೋಹಿತರು ನಿಯಮ ಪುಸ್ತಕವನ್ನು ಬೋಧಿಸಿದರು, ನ್ಯಾಯಾಧೀಶರು ಇಸ್ರಾಯೇಲ್ ಜನಾಂಗವನ್ನು ಮಾರ್ಗದರ್ಶಿಸಿದರು. ಒಬ್ಬ ವ್ಯಕ್ತಿ ಮಾಡಿದ ನಿರ್ಣಯಗಳು ಮತ್ತು ಕ್ರಿಯೆಗಳು ಇತರರ ಮೇಲೆ ಎಂಥ ಪ್ರಭಾವ ಬೀರುತ್ತದೆಂದು ಈ ಭಾಗದಲ್ಲಿ ತಿಳಿಯಬಹುದು. ಪ್ರತಿಯೊಬ್ಬ ಇಸ್ರಾಯೇಲ್ಯನು ಯೆಹೋವನಿಗೆ, ಜೊತೆ ಮಾನವರಿಗೆ ನಿಷ್ಠೆ ತೋರಿಸಬೇಕಿತ್ತು. ದೆಬೋರ, ನೊವೊಮಿ, ಯೆಹೋಶುವ, ಹನ್ನ, ಯೆಫ್ತಾಹನ ಮಗಳು ಮತ್ತು ಸಮುವೇಲ ಇವರು ತಮ್ಮ ಜನರ ಮೇಲೆ ಯಾವ ಪ್ರಭಾವ ಬೀರಿದರೆಂದು ಒತ್ತಿ ಹೇಳಿ. ಅಲ್ಲದೇ, ಇಸ್ರಾಯೇಲ್ಯರಲ್ಲದ ರಾಹಾಬ, ರೂತ್, ಯಾಯೇಲ ಮತ್ತು ಗಿಬ್ಯೋನ್ಯರು ಇಸ್ರಾಯೇಲ್ಯರ ಪಕ್ಷವನ್ನು ಸೇರಿದ್ದರ ಬಗ್ಗೆನೂ ತಿಳಿಸಿ.