ಗೀತೆ 2
ಯೆಹೋವ - ಏಕೈಕ ದೇವ
1. ಯೆಹೋವ ದೇವನೇ
ಸರ್ವಶಕ್ತನು ನೀನೇ
ಸೃಷ್ಟಿಯ ಕರ್ತ ನೀನೇ
ಸದಾ ಜೀವಂತನೇ
ಈ ಭೂಮಿಯೆಲ್ಲೆಡೆ
ನಿನ್ ನಾಮ ಕೊಂಡಾಡೋಕೆ
ಆ ಕೀರ್ತಿ ಹೆಚ್ಚಿಸೋಕೆ
ತಯಾರಿದೆ ಮನ
(ಪಲ್ಲವಿ)
ಯೆಹೋವ ಯೆಹೋವ!
ಯಾರಿಲ್ಲ ಸಾಟಿಯೂ
ನೀನೇ ಮೂಲ, ನೀನೇ ಎಲ್ಲಾ,
ಬೇಡ ಪುರಾವೆಯು
ನೀನೇ ಶ್ರೇಷ್ಠ, ನೀನೇ ಜ್ಯೇಷ್ಠ,
ನಿನ್ನಂತೆ ಯಾರಿಲ್ಲ
ಯೆಹೋವ ಯೆಹೋವ!
ಏಕೈಕ ದೇವರು ನೀನೇ.
2. ನಿನ್ನುದ್ದೇಶದಂತೆ,
ರೂಪಿಸೆಮ್ಮನ್ನು ತಂದೆ
ನಿನ್ನ ಬಯಕೆಯಂತೆ
ನೀ ಮಾರ್ಗದರ್ಶಿಸು.
ನಮ್ಮನ್ನು ಸೆಳೆದೆ
ನಿನ್ನ ಹೆಸರಿಗೆಂದೇ,
ನಿನ್ನಯ ಸಾಕ್ಷಿ ಎಂದೆ,
ಚಿರಋಣಿ ನಾವು.
(ಪಲ್ಲವಿ)
ಯೆಹೋವ ಯೆಹೋವ!
ಯಾರಿಲ್ಲ ಸಾಟಿಯೂ
ನೀನೇ ಮೂಲ, ನೀನೇ ಎಲ್ಲಾ,
ಬೇಡ ಪುರಾವೆಯು
ನೀನೇ ಶ್ರೇಷ್ಠ, ನೀನೇ ಜ್ಯೇಷ್ಠ,
ನಿನ್ನಂತೆ ಯಾರಿಲ್ಲ
ಯೆಹೋವ ಯೆಹೋವ!
ಏಕೈಕ ದೇವರು ನೀನೇ.
(2 ಪೂರ್ವ. 6:14; ಕೀರ್ತ. 72:19; ಯೆಶಾ. 42:8 ಸಹ ನೋಡಿ)