ಗೀತೆ 4
ಯೆಹೋವ ನನ್ನ ಕುರುಬ
1. ಯೆಹೋವ ನೀ ಕೊಂಡೊಯ್ಯುವೆ
ಭದ್ರವಾದ ತಾಣಕ್ಕೆ
ನಿನ್ನ ಹಿಂದೆ ಹೆಜ್ಜೆ ಹಾಕುವೆ
ಮಹಾ ಕುರುಬ ನೀನೇ
ಹುಲ್ಗಾವಲಲ್ಲಿ ವಿಶ್ರಾಂತಿ
ಇಲ್ಲ ನನ್ನಲ್ಲಿ ಭೀತಿ
ದಿನವೆಲ್ಲಾ ಕಣ್ಣಲ್ಲಿ ಕಣ್ಣಿಟ್ಟು
ನನ್ನ ಪ್ರಾಣ ಕಾಯುವಿ
ದಿನಾಲು ಕಣ್ಣಲ್ಲಿ ಕಣ್ಣಿಟ್ಟು
ನನ್ನ ಪ್ರಾಣ ಕಾಯುವಿ
2. ನನ್ನ ಧೈರ್ಯ ನಿನ್ನ ಕೋಲು
ಗಾಢ ಅಂಧಕಾರದಿ
ಕಂಗಾಲಲ್ಲಿ ನಿನ್ನ ನೋಡಲು
ಕೈಚಾಚಿ ಸಂತೈಸುವಿ
ಚೈತನ್ಯ ನನ್ನ ಬಾಳಲ್ಲಿ
ನಿರಾಳ ನಿನ್ ತೋಳಲ್ಲಿ
ಹೆಗಲಲ್ಲಿ ಎತ್ತಿಕೊಂಡು ನನ್ನ
ನೀ ತೋರುತ್ತೀ ಕಾಳಜಿ
ಅಪಾರ ಪ್ರೀತಿಯ ಕಾರಣ
ನೀ ತೋರುತ್ತೀ ಕಾಳಜಿ
3. ಬಲ್ಲೆ ನನ್ನಾಸೆ ಆಕಾಂಕ್ಷೆ
ಪೂರೈಸುವೆ ಎಲ್ಲವೂ
ನಿನ್ನ ನಿಷ್ಠಾವಂತ ಪ್ರೀತಿಗೆ
ಆಭಾರಿ ನಾ ಎಂದಿಗೂ
ನನ್ನ ವಿಶ್ವಾಸ ನಿನ್ನಲ್ಲೇ
ನೀನೇ ನನ್ನ ಆಸರೆ
ನಿನ್ನ ನಾಮಕ್ಕೆ ತಕ್ಕ ಹಾಗೆಯೇ
ನೀತಿ ದಾರಿ ತೋರುವಿ
ಆ ನಾಮಕ್ಕೆ ತಕ್ಕ ಹಾಗೆಯೇ
ನೀತಿ ದಾರಿ ತೋರುವಿ
(ಕೀರ್ತ. 28:9; 80:1 ಸಹ ನೋಡಿ)