ಗೀತೆ 60
ಜೀವದ ಹೊಣೆ
1. ಹತ್ತಿರ ಇದೆ
ದೇವರ ತೀರ್ಪಿನ ದಿನ
ಎಚ್ಚರ ನೀಡಲು
ಸಾರಬೇಕಿದೆ ದಿನ
(ಪಲ್ಲವಿ)
ಜನರನ್ನು ರಕ್ಷಿಸುವ
ಹೊಣೆ ಈಗ ನಮ್ಮದೇ
ಕಾಪಾಡುವ ದೀನರನ್ನು
ಸಾರುತ್ತಾ ಬೇಗ
ಎಲ್ಲೆಡೆ, ಎಲ್ಲೆಡೆ
2. ದೇವರ ಪ್ರೀತಿಯ
ಮಡಿಲಲ್ಲಿ ಸೇರಲು
ಒಳ್ಳೆಯ ಜನರ
ಹುಡುಕೋಣ ಎಲ್ಲೆಲ್ಲೂ
(ಪಲ್ಲವಿ)
ಜನರನ್ನು ರಕ್ಷಿಸುವ
ಹೊಣೆ ಈಗ ನಮ್ಮದೇ
ಕಾಪಾಡುವ ದೀನರನ್ನು
ಸಾರುತ್ತಾ ಬೇಗ
ಎಲ್ಲೆಡೆ, ಎಲ್ಲೆಡೆ
(ಅನುಪಲ್ಲವಿ)
ಸಾರೋಣ, ಕಲಿಸೋಣ
ಜೀವ ಅಪಾಯದಲ್ಲಿದೆ
ತುರ್ತಾದ ಈ ಸಂದೇಶ
ಕೂಡಲೇ ಹೇಳಬೇಕಿದೆ
(ಪಲ್ಲವಿ)
ಜನರನ್ನು ರಕ್ಷಿಸುವ
ಹೊಣೆ ಈಗ ನಮ್ಮದೇ
ಕಾಪಾಡುವ ದೀನರನ್ನು
ಸಾರುತ್ತಾ ಬೇಗ
ಎಲ್ಲೆಡೆ, ಎಲ್ಲೆಡೆ
(2 ಪೂರ್ವ. 36:15; ಯೆಶಾ. 61:2; ಯೆಹೆ. 33:6; 2 ಥೆಸ. 1:8 ಸಹ ನೋಡಿ)