ಗೀತೆ 78
ಯೆಹೋವನ ಸಂದೇಶವ ಸಾರೋಣ!
1. ಯೆಹೋವನ ಸಂದೇಶವ,
ಎಲ್ಲೆಲ್ಲೂ ಸಾರೋಣ.
ದೇವಾಶೀರ್ವಾದ ಹೊಂದುತ್ತ,
ಎಂದೆಂದೂ ಸಾಗೋಣ.
ಕ್ರಿಸ್ತನಂತೆ ಜನರಿಗೆ,
ಪ್ರೀತಿಯ ತೋರೋಣ
ಯೆಹೋವನ ಸಮೀಪಿಸಲು
ಸಹಾಯ ಮಾಡೋಣ
2. ಯೆಹೋವನ ಮಾತೆಲ್ಲವ,
ಓಗೊಟ್ಟು ಕೇಳೋಣ,
ಅದನ್ನು ಯೋಚಿಸಿ ನಮ್ಮ
ತಪ್ಪನ್ನು ತಿದ್ದೋಣ.
ಹೊಸ ನಿಧಿ ರತ್ನವನ್ನು,
ಧ್ಯಾನಿಸಿ ನೋಡೋಣ,
ನಡೆ ನುಡಿಯಲ್ಲಿ ಅದನ್ನು
ದಿನಾಲು ತೋರೋಣ.
3. ಯೆಹೋವನ ಬಗ್ಗೆ ನಾವು,
ಹೆಚ್ಚು ಕಲಿಯೋಣ,
ಅದಕ್ಕೆ ನಾವು ಆತನ
ಸಹಾಯ ಬೇಡೋಣ
ನಾವು ಓದಿ ಕಲಿತಂತ,
ಸುದ್ದಿಯ ಹಂಚೋಣ,
ಆ ಮಾತು ಕೇಳಿ ಬಂದ
ಮಂದೆಯ ನೋಡಿ ಹಿಗ್ಗೋಣ.
(ಕೀರ್ತ. 119:97; 2 ತಿಮೊ. 4:2; ತೀತ 2:7; 1 ಯೋಹಾ. 5:14 ಸಹ ನೋಡಿ)