ಗೀತೆ 93
ಹೂದೋಟ ಈ ಕೂಟ
1. ಓ ಯೆಹೋವ ನಾವು ಎಂದೂ
ಆಭಾರಿ ಈ ಕೂಟಕ್ಕೆ
ಕೂಡಿದ್ದೇವೆ ಈಗ ನಾವು
ಬೇಡುತ್ತಾ ನಿನ್ನ ಕೃಪೆ
2. ನಿನ್ನ ಇಷ್ಟ ಮಾಡೋ ಆಸೆ
ವಾಕ್ಯದಿ ಪ್ರೋತ್ಸಾಹಿಸು
ಧೈರ್ಯದಿ ನಾವು ಸಾರೋಕೆ
ಸಾಮರ್ಥ್ಯ ನೀಡು ತಂದೆ
3. ಹೂದೋಟ ನಮ್ಮ ಈ ಕೂಟ
ಮಾಲೀಕ ನೀನೇ ತಾನೆ
ನಿನ್ನ ಶಕ್ತಿ, ನೀಡು ಪ್ರೀತಿ
ಐಕ್ಯದಿಂದ ಬಾಳೋಕೆ
(ಕೀರ್ತ. 22:22; 34:3; ಯೆಶಾ. 50:4 ಸಹ ನೋಡಿ)