ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 107
  • ಯೆಹೋವನ ಅಪ್ಪಟ ಪ್ರೀತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಅಪ್ಪಟ ಪ್ರೀತಿ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • “ಪ್ರೀತಿಯಲ್ಲಿ ನಡೆದುಕೊಳ್ಳಿರಿ”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಪ್ರೀತಿ ಅಮೂಲ್ಯವಾದ ಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ನಿಮ್ಮನ್ನು ಪ್ರೀತಿಸುವ ದೇವರನ್ನು ಪ್ರೀತಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • “ಇವುಗಳಲ್ಲಿ ಮಹತ್ತಮವಾದುದು ಪ್ರೀತಿಯೆ”
    ಕಾವಲಿನಬುರುಜು—1991
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 107

ಗೀತೆ 107

ಯೆಹೋವನ ಅಪ್ಪಟ ಪ್ರೀತಿ

(1 ಯೋಹಾನ 4:19)

  1. 1. ನಮ್ಮ ಬಾಳಿಗೆ ಯೆಹೋವನ ಪ್ರೀತಿ

    ದಾರಿಯ ತೋರುತೆ;

    ಪ್ರೀತಿ ನಮ್ಮನ್ನು ಕಾಪಾಡುತ್ತೆ ಎಂದೂ

    ಬೀಳದಂತೆ ಸೋಲದಂತೆ.

    ತಾಯಿ ಪ್ರೀತಿಗೂ ಮೀರಿದಂಥ ಪ್ರೀತಿ.

    ನಮ್ಮ ಪಾಪಕ್ಕೆ ಪುತ್ರನನ್ನೇ ನೀಡಿ,

    ಶಾಶ್ವತ ಪ್ರೀತಿ ತೋರಿಸಿದ ನೋಡಿ.

    ದೇವ ಪ್ರೀತಿ, ನಿಸ್ವಾರ್ಥ ಪ್ರೀತಿ!

  2. 2. ದೇವ ಪ್ರೀತಿಯೇ ನಮ್ಮೆಲ್ಲರ ಸ್ಫೂರ್ತಿ

    ಪ್ರೀತಿಯ ತೋರಲು;

    ದೇವರ ಹಾಗೆ ತೋರಿಸೋಣ ಪ್ರೀತಿ

    ಮಾತಿನಲ್ಲೂ ಕಾರ್ಯದಲ್ಲೂ.

    ಕೋಪ ತಾಪವ ಸೋಲಿಸೋಣ ನಾವು,

    ಏನೇ ಆದರೂ ಮನ್ನಿಸೋಣ ಎಂದೂ.

    ಪ್ರೀತಿ ವಾತ್ಸಲ್ಯ ತೋರೋಣ ಎಂದೆಂದೂ

    ತುಂಬ ಚೆಂದ ಈ ಸ್ನೇಹ ಬಂಧ!

  3. 3. ಕಾರಂಜಿಯಂತೆ ನಮ್ಮ ಮಧ್ಯೆ ಎಂದೂ

    ಪ್ರೀತಿಯ ಹೂಮಳೆ;

    ನೆಮ್ಮದಿ ನೀಡೋ ಇಂಥ ಪ್ರೀತಿ ಬೇಕು

    ನೋವಿನಲ್ಲೂ ಮೌನದಲ್ಲೂ;

    ಸೋದರ ಪ್ರೀತಿ ಎಂದಿಗೂ ಸೋಲಲ್ಲ

    ಇಂಥ ಪ್ರೀತಿಯೇ ಆನಂದದ ಮೂಲ

    ನಮ್ಮ ಐಕ್ಯತೆ ಈ ಸ್ನೇಹಕ್ಕೆ ಸಾಕ್ಷಿ

    ಕ್ರೈಸ್ತ ಪ್ರೀತಿ, ನಿಸ್ವಾರ್ಥ ಪ್ರೀತಿ!

(ರೋಮ. 12:10; ಎಫೆ. 4:3; 2 ಪೇತ್ರ 1:7. ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ