ಗೀತೆ 131
ದೇವರು ಜೊತೆಗೂಡಿಸಿದನು
1. ಜೇನಂತ ಈ ಬಂಧ
ಆರಂಭ ಇಲ್ಲಿಂದ.
ಮುದ್ದಾದ ಜೋಡಿ ಸೇರಿ
ನೀಡೋ ಮಾತು ಇದು:
(ಪಲ್ಲವಿ 1)
”ನಾವು ಒಂದೇ ಶರೀರ
ನಮ್ಮ ಪ್ರೀತಿ ಚಿರ.”
ದೇವ ಒಂದಾಗಿ ತಂದ
ಈ ಬಂಧ ಶಾಶ್ವತ!
2. ಮೂರು ಬಳ್ಳಿ ಸೇರಿ
ಒಂದಾದ ಈ ಜೋಡಿ,
ಯೆಹೋವ ಮುಂದೆ ಈಗ
ಒಂದಾಗಿ ಬಾಳಲಿ;
(ಪಲ್ಲವಿ 2)
ಬೇರೆ ಮಾಡೋದು ಬೇಡ
ಎಂದೂ ಈ ಜೋಡಿಯ
ದೇವ ಒಂದಾಗಿ ತಂದ
ಈ ಬಂಧ ಶಾಶ್ವತ!
(ಆದಿ. 2:24; ಪ್ರಸಂ. 4:12; ಎಫೆ. 5:22-33 ಸಹ ನೋಡಿ)