ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • th ಅಧ್ಯಯನ 19 ಪು. 22
  • ಹೃದಯ ಮುಟ್ಟಲು ಪ್ರಯತ್ನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೃದಯ ಮುಟ್ಟಲು ಪ್ರಯತ್ನ
  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಅನುರೂಪ ಮಾಹಿತಿ
  • ಉತ್ಸಾಹ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಹೃದಯವನ್ನು ತಲಪಲು ಪ್ರಯತ್ನಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸ್ಪಷ್ಟವಾದ ವೈಯಕ್ತಿಕ ಅನ್ವಯ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಭರವಸೆ ಮತ್ತು ಪ್ರೋತ್ಸಾಹ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
ಇನ್ನಷ್ಟು
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
th ಅಧ್ಯಯನ 19 ಪು. 22

ಪಾಠ 19

ಹೃದಯ ಮುಟ್ಟಲು ಪ್ರಯತ್ನ

ಸಂಬಂಧಪಟ್ಟ ವಚನ

ಜ್ಞಾನೋಕ್ತಿ 3:1

ಏನು ಮಾಡಬೇಕು: ಕೇಳುಗರು ಕಲಿತ ವಿಷಯಗಳನ್ನು ಅರ್ಥಮಾಡಿಕೊಂಡು ಅನ್ವಯಿಸಿಕೊಳ್ಳಲು ಸಹಾಯ ಮಾಡಿ.

ಹೇಗೆ ಮಾಡಬೇಕು:

  • ಸ್ವಪರೀಕ್ಷೆ ಮಾಡಿಕೊಳ್ಳಲು ಸಹಾಯ ಮಾಡಿ. ಜನರು ತಮ್ಮ ಹೃದಯದಲ್ಲಿ ಏನಿದೆ ಎಂದು ಪರೀಕ್ಷಿಸಿಕೊಳ್ಳಲು ಸಹಾಯ ಮಾಡುವಂಥ ಪ್ರಶ್ನೆಗಳನ್ನು ಕೇಳಿ.

  • ಒಳ್ಳೇತನವನ್ನು ಬಡಿದೆಬ್ಬಿಸಿ. ಕೇಳುಗರು ಒಳ್ಳೇ ವಿಷಯಗಳನ್ನು ಯಾಕೆ ಮಾಡುತ್ತಾರೆ ಎಂದು ಯೋಚಿಸುವಂತೆ ಮಾಡಿ. ಒಳ್ಳೇ ಗುರಿಗಳನ್ನು ಇಟ್ಟುಕೊಳ್ಳಲು ಸಹಾಯ ಮಾಡಿ. ಅಂದರೆ ಯೆಹೋವನ ಮೇಲೆ, ಜನರ ಮೇಲೆ ಮತ್ತು ಬೈಬಲ್‌ ಬೋಧನೆಗಳ ಮೇಲೆ ಪ್ರೀತಿ ಬೆಳೆಸಿಕೊಳ್ಳಲು ಸಹಾಯ ಮಾಡಿ. ಭಾಷಣ ಬಿಗಿಯಲು ಹೋಗಬೇಡಿ, ತರ್ಕಬದ್ಧವಾಗಿ ಮಾತಾಡಲು ಪ್ರಯತ್ನಿಸಿ. ಮುಜುಗರ ಅಥವಾ ದೋಷಿಭಾವನೆ ಹುಟ್ಟಿಸಬೇಡಿ. ನಿಮ್ಮ ಭಾಷಣದಿಂದ ಅವರಿಗೆ ಪ್ರೋತ್ಸಾಹ ಸಿಕ್ಕಿದಂತೆ ಆಗಬೇಕು.

  • ಯೆಹೋವನ ಕಡೆ ಗಮನ ಹೋಗುವಂತೆ ಮಾಡಿ. ಬೈಬಲಿನ ಬೋಧನೆಗಳು, ತತ್ವಗಳು ಮತ್ತು ಆಜ್ಞೆಗಳು ದೇವರ ಗುಣಗಳನ್ನು ಮತ್ತು ಆತನಿಗೆ ನಮ್ಮ ಮೇಲಿರುವ ಪ್ರೀತಿಯನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂದು ತೋರಿಸಿ. ಯೆಹೋವನ ಭಾವನೆಗಳಿಗೆ ಬೆಲೆ ಕೊಡುವಂತೆ ಮತ್ತು ಆತನನ್ನು ಮೆಚ್ಚಿಸಲು ಪ್ರಯತ್ನಿಸುವಂತೆ ಕೇಳುಗರಿಗೆ ಪ್ರೋತ್ಸಾಹಿಸಿ.

    ಸಹಾಯಕರ ಸಲಹೆ

    ಜನರನ್ನು ಯೆಹೋವನು ಸೆಳೆಯುತ್ತಾನೆ ಅನ್ನುವುದನ್ನು ಮನಸ್ಸಲ್ಲಿಡಿ. ಕೇಳುಗರ ಭಾವನೆಗಳನ್ನು ಬಡಿದೆಬ್ಬಿಸಲು ಆತನ ವಾಕ್ಯವನ್ನು ಉಪಯೋಗಿಸಿ.

ಸೇವೆಯಲ್ಲಿ

ಸಾಧ್ಯವಾದಾಗ, ಜನರು ನಿಜವಾಗಿಯೂ ಏನು ನಂಬುತ್ತಾರೆ ಎಂದು ತಿಳಿಯಲು ಪ್ರಶ್ನೆಗಳನ್ನು ಕೇಳಿ. ಅವರ ಮನಸ್ಸಲ್ಲಿರುವುದನ್ನು ಅರ್ಥಮಾಡಿಕೊಳ್ಳಲು ಅವರ ಮುಖಭಾವ ಮತ್ತು ಸ್ವರಕ್ಕೆ ಗಮನ ಕೊಡಿ. ತಾಳ್ಮೆ ತೋರಿಸುವುದು ಮುಖ್ಯ. ಜನರಿಗೆ ನಿಮ್ಮ ಮೇಲೆ ನಂಬಿಕೆ ಬಂದರೆ ಮನದಾಳದಲ್ಲಿರುವ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ