ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lmd ಪಾಠ 1
  • ಆಸಕ್ತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಸಕ್ತಿ
  • ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೇಸು ಏನು ಮಾಡಿದನು?
  • ನಮಗೇನು ಪಾಠ?
  • ಯೇಸು ತರ ನೀವೂ ಮಾಡಿ
  • ಸ್ವಾಭಾವಿಕತೆ
    ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಾಕ್ಷಿಕೊಡಲು ಸಹಾಯಮಾಡುವ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಸಂಭಾಷಣಾ ಕೌಶಲಗಳನ್ನು ಉತ್ತಮಗೊಳಿಸುವ ವಿಧ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅನೌಪಚಾರಿಕವಾಗಿ ಸಾಕ್ಷಿ ನೀಡಲು ಮೊದಲ ಹೆಜ್ಜೆ ತೆಗೆದುಕೊಳ್ಳಿ
    2014 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
lmd ಪಾಠ 1

ಸಂಭಾಷಣೆ ಶುರುಮಾಡಿ

ಯೇಸು ಬಾವಿ ಹತ್ರ ಒಬ್ಬ ಸ್ತ್ರೀ ಜೊತೆ ಮಾತಾಡ್ತಾ ಇದ್ದಾನೆ.

ಯೋಹಾನ 4:6-9

ಪಾಠ 1

ಆಸಕ್ತಿ

ತತ್ವ: “ಪ್ರೀತಿ ಇರುವವನು . . . ಸ್ವಾರ್ಥಿಯಾಗಿರಲ್ಲ.”—1 ಕೊರಿಂ. 13:4, 5.

ಯೇಸು ಏನು ಮಾಡಿದನು?

ಯೇಸು ಬಾವಿ ಹತ್ರ ಒಬ್ಬ ಸ್ತ್ರೀ ಜೊತೆ ಮಾತಾಡ್ತಾ ಇದ್ದಾನೆ.

ವಿಡಿಯೋ: ಯೇಸು ಮತ್ತು ಸಮಾರ್ಯದ ಸ್ತ್ರೀ

1. ವಿಡಿಯೋ ನೋಡಿ ಅಥವಾ ಯೋಹಾನ 4:6-9 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1. ಎ. ಯೇಸು ಆ ಸ್ತ್ರೀ ಹತ್ರ ಮಾತಾಡೋ ಮುಂಚೆ ಏನನ್ನ ಗಮನಿಸಿದನು?

  2. ಬಿ. ಯೇಸು ಅವಳ ಹತ್ರ, “ಕುಡಿಯೋಕೆ ಸ್ವಲ್ಪ ನೀರು ಕೊಡು” ಅಂತ ಕೇಳಿದನು. ಸಂಭಾಷಣೆ ಶುರುಮಾಡೋಕೆ ಇದೊಂದು ಒಳ್ಳೇ ವಿಧಾನ ಅಂತ ಹೇಗೆ ಹೇಳಬಹುದು?

ನಮಗೇನು ಪಾಠ?

2. ಜನ್ರಿಗೆ ಆಸಕ್ತಿ ಇರೋ ವಿಷ್ಯಗಳ ಬಗ್ಗೆನೇ ಮಾತಾಡ್ತಾ ಸಂಭಾಷಣೆ ಶುರುಮಾಡಿದ್ರೆ ಜನರೂ ಚೆನ್ನಾಗಿ ಮಾತಾಡ್ತಾರೆ.

ಯೇಸು ತರ ನೀವೂ ಮಾಡಿ

3. ಹೊಂದಿಸ್ಕೊಳ್ಳಿ. ನಿಮ್ಮ ಮನಸ್ಸಲ್ಲಿ ಯಾವ ವಿಷ್ಯ ಇದ್ಯೋ ಅದರ ಬಗ್ಗೆ ಅಲ್ಲ, ಜನರ ಮನಸ್ಸಲ್ಲಿ ಯಾವ ವಿಷ್ಯ ಇದ್ಯೋ ಅದರ ಬಗ್ಗೆ ಮಾತಾಡಿ. ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ:

  1. ಎ. ‘ಇವತ್ತಿನ ಬ್ರೇಕಿಂಗ್‌ ನ್ಯೂಸ್‌ ಏನು?’

  2. ಬಿ. ‘ನಮ್ಮ ಅಕ್ಕಪಕ್ಕದ ಮನೆಯವರು, ಕ್ಲಾಸ್‌ಮೇಟ್ಸು ಯಾವ ವಿಷ್ಯದ ಬಗ್ಗೆ ಮಾತಾಡ್ತಾ ಇದ್ದಾರೆ?’

4. ಗಮನಿಸಿ. ನೀವು ಯಾರ ಹತ್ರ ಮಾತಾಡಬೇಕು ಅಂತಿದ್ದಿರೋ ಆ ವ್ಯಕ್ತಿ ಬಗ್ಗೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ:

  1. ಎ. ‘ಇವರು ಏನ್‌ ಮಾಡ್ತಿದ್ದಾರೆ? ಏನ್‌ ಯೋಚ್ನೆ ಮಾಡ್ತಿರಬಹುದು?’

  2. ಬಿ. ‘ಇವರ ಬಟ್ಟೆಬರೆ ಅಥವಾ ಮನೆ ನೋಡುವಾಗ ಅವರ ಆಚಾರ-ವಿಚಾರ, ಸಂಸ್ಕೃತಿ ಬಗ್ಗೆ ಏನ್‌ ಗೊತ್ತಾಗುತ್ತೆ?’

  3. ಸಿ. ‘ಇವರ ಹತ್ರ ಮಾತಾಡೋದಕ್ಕೆ ಇದು ಸರಿಯಾದ ಸಮಯನಾ?’

5. ಚೆನ್ನಾಗಿ ಕೇಳಿಸ್ಕೊಳ್ಳಿ.

  1. ಎ. ಜಾಸ್ತಿ ಮಾತಾಡಬೇಡಿ.

  2. ಬಿ. ಅವರು ಮನಸ್ಸುಬಿಚ್ಚಿ ಮಾತಾಡೋಕೆ ಅವಕಾಶ ಮಾಡ್ಕೊಡಿ. ಪರಿಸ್ಥಿತಿ ನೋಡ್ಕೊಂಡು ಪ್ರಶ್ನೆ ಕೇಳಿ.

ಇದನ್ನೂ ನೋಡಿ

ಮತ್ತಾ. 7:12; 1 ಕೊರಿಂ. 9:20-23; ಫಿಲಿ. 2:4; ಯಾಕೋ. 1:19

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ