ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lmd ಪಾಠ 10
  • ಛಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಛಲ
  • ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೇಸು ಏನು ಮಾಡಿದನು?
  • ನಮಗೇನು ಪಾಠ?
  • ಯೇಸು ತರ ನೀವೂ ಮಾಡಿ
  • ನಿಕೊದೇಮನಿಂದ ಪಾಠವನ್ನು ಕಲಿಯಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ನಿರ್ಧಾರ ಮಾಡಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ನಿಕೊದೇಮನಿಗೆ ಕಲಿಸಿದ್ದು
    ಅತ್ಯಂತ ಮಹಾನ್‌ ಪುರುಷ
  • ಬೈಬಲ್‌ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡಿ—ಭಾಗ 1
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
ಇನ್ನಷ್ಟು
ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
lmd ಪಾಠ 10

ಶಿಷ್ಯರಾಗೋಕೆ ಕಲಿಸಿ

ಯೇಸು ಮತ್ತು ನಿಕೊದೇಮ ರಾತ್ರಿ ಹೊತ್ತಲ್ಲಿ ಅಂಗಳದಲ್ಲಿ ಮಾತಾಡ್ತಾ ಇದ್ದಾರೆ.

ಯೋಹಾನ 3:1, 2

ಪಾಠ 10

ಛಲ

ತತ್ವ: “ದೇವರ ಸಿಹಿಸುದ್ದಿಯನ್ನ ನಿಮಗೆ ಹೇಳೋಕೆ ಅಷ್ಟೇ ಅಲ್ಲ, ನಿಮಗಾಗಿ ಜೀವ ಕೊಡೋಕೂ ತಯಾರಾಗಿದ್ವಿ. ನಿಮ್ಮನ್ನ ನಾವು ಅಷ್ಟು ಪ್ರೀತಿಸಿದ್ವಿ.”—1 ಥೆಸ. 2:8.

ಯೇಸು ಏನು ಮಾಡಿದನು?

ಯೇಸು ಮತ್ತು ನಿಕೊದೇಮ ರಾತ್ರಿ ಹೊತ್ತಲ್ಲಿ ಅಂಗಳದಲ್ಲಿ ಮಾತಾಡ್ತಾ ಇದ್ದಾರೆ.

ವಿಡಿಯೋ: ಯೇಸು ನಿಕೊದೇಮನಿಗೆ ಕಲಿಸಿದನು

1. ವಿಡಿಯೋ ನೋಡಿ ಅಥವಾ ಯೋಹಾನ 3:1, 2 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1. ಎ. ನಿಕೊದೇಮ ಯೇಸು ಹತ್ರ ಯಾಕೆ ರಾತ್ರಿ ಹೊತ್ತಲ್ಲೇ ಬಂದಿರಬೇಕು?—ಯೋಹಾನ 12:42, 43 ನೋಡಿ.

  2. ಬಿ. ನಿಕೊದೇಮನಿಗೆ ಕಲಿಸಲೇಬೇಕು ಅನ್ನೋ ಛಲ ಯೇಸುಗಿತ್ತು ಅಂತ ಹೇಗೆ ಹೇಳಬಹುದು?

ನಮಗೇನು ಪಾಠ?

2. ಜನರಿಗೆ ಶಿಷ್ಯರಾಗೋಕೆ ಕಲಿಸಬೇಕು ಅನ್ನೋ ಛಲ ನಮ್ಮಲ್ಲಿದ್ರೆ ಅವರ ಮೇಲೆ ನಮ್ಗೆ ಪ್ರೀತಿ ಇದೆ ಅಂತ ತೋರಿಸ್ಕೊಡ್ತೀವಿ.

ಯೇಸು ತರ ನೀವೂ ಮಾಡಿ

3. ವಿದ್ಯಾರ್ಥಿ ಇಷ್ಟಪಡೋ ಸಮಯ ಮತ್ತು ಸ್ಥಳದಲ್ಲಿ ಸ್ಟಡಿ ಮಾಡಿ. ಯಾವತ್ತು, ಎಷ್ಟು ಗಂಟೆಗೆ, ಎಲ್ಲಿ ಸ್ಟಡಿ ಮಾಡಬೇಕು ಅಂತ ವಿದ್ಯಾರ್ಥಿಯನ್ನ ಕೇಳಿ. ಅವರು ಮನೆಯಲ್ಲಿ, ಕೆಲ್ಸದ ಸ್ಥಳದಲ್ಲಿ ಅಥವಾ ಬೇರೆ ಎಲ್ಲಾದ್ರೂ ಸ್ಟಡಿ ಮಾಡೋಕೆ ಇಷ್ಟಪಡಬಹುದು. ಅದಕ್ಕೆ ತಕ್ಕ ಹಾಗೆ ನಿಮ್ಮ ಸಮಯನ ಹೊಂದಿಸ್ಕೊಳ್ಳೋಕೆ ಆದಷ್ಟು ಪ್ರಯತ್ನ ಮಾಡಿ.

4. ಪ್ರತಿವಾರ ತಪ್ಪದೇ ಸ್ಟಡಿ ಮಾಡಿ. ಯಾವುದಾದ್ರೂ ಒಂದು ವಾರ ನಿಮಗೆ ಸ್ಟಡಿಗೆ ಹೋಗೋಕೆ ಆಗ್ತಿಲ್ಲ ಅಂದ್ರೆ ಅದನ್ನ ತಪ್ಪಿಸೋ ಬದಲು ಹೀಗೆ ಮಾಡಬಹುದಾ ನೋಡಿ:

  1. ಎ. ಅದೇ ವಾರದಲ್ಲಿ ಬೇರೆ ಯಾವುದಾದ್ರೂ ದಿನ ಸ್ಟಡಿ ಮಾಡಕ್ಕಾಗುತ್ತಾ?

  2. ಬಿ. ಫೋನಲ್ಲಿ ಅಥವಾ ವಿಡಿಯೋ ಕಾಲ್‌ನಲ್ಲಿ ಸ್ಟಡಿ ಮಾಡಕ್ಕಾಗುತ್ತಾ?

  3. ಸಿ. ಬೇರೆ ಬ್ರದರ್‌ ಅಥವಾ ಸಿಸ್ಟರ್‌ಗೆ ‘ನನ್ನ ಸ್ಟಡಿಗೆ ಹೋಗ್ತೀರಾ’ ಅಂತ ಕೇಳಿ ನೋಡ್ಲಾ?

5. ಸರಿಯಾಗಿ ಯೋಚ್ನೆ ಮಾಡೋಕೆ ಪ್ರಾರ್ಥನೆ ಮಾಡಿ. ಒಂದುವೇಳೆ ನಿಮ್ಮ ವಿದ್ಯಾರ್ಥಿ ಸ್ಟಡಿನಾ ತಪ್ಪಿಸ್ತಿದ್ರೆ, ಕಲ್ತಿರೋದನ್ನ ಪಾಲಿಸೋಕೆ ಕಷ್ಟಪಡ್ತಿದ್ರೆ ಅವ್ರಿಗೆ ಸಹಾಯ ಮಾಡಲೇಬೇಕು ಅನ್ನೋ ಛಲನಾ ಬಿಟ್ಕೊಡಬೇಡಿ. (ಫಿಲಿ. 2:13) ಯೆಹೋವ ದೇವರ ಹತ್ರ ಸಹಾಯಕ್ಕಾಗಿ ಬೇಡ್ಕೊಳ್ಳಿ. ನಿಮ್ಮ ವಿದ್ಯಾರ್ಥಿಯಲ್ಲೂ ಒಳ್ಳೇ ಗುಣಗಳು ಇರುತ್ತೆ, ‘ಅದಕ್ಕೆ ಗಮನ ಕೊಡೋಕೆ ಸಹಾಯ ಮಾಡಪ್ಪಾ’ ಅಂತ ಕೇಳ್ಕೊಳ್ಳಿ.

ಇದನ್ನೂ ನೋಡಿ

ಜ್ಞಾನೋ. 3:27; ಅ. ಕಾ. 20:35; 2 ಕೊರಿಂ. 12:15

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ