ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lmd ಪಾಠ 11
  • ಸರಳತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸರಳತೆ
  • ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೇಸು ಏನು ಮಾಡಿದನು?
  • ನಮಗೇನು ಪಾಠ?
  • ಯೇಸು ತರ ನೀವೂ ಮಾಡಿ
  • ದೀಕ್ಷಾಸ್ನಾನ ತಗೊಳ್ಳೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಖುಷಿಯಾಗಿ ಬಾಳೋಣ ಪುಸ್ತಕ ಬಳಸಿ ಹೇಗೆ ಸ್ಟಡಿ ಮಾಡ್ಲಿ?
    ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ನಿಮ್ಮ ‘ಬೋಧನಾ ಕಲೆಗೆ’ ಗಮನ ಕೊಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ನಿಮ್ಮ ಬೈಬಲ್‌ ವಿದ್ಯಾರ್ಥಿಯ ಹೃದಯವನ್ನು ತಲಪಿರಿ
    1993 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
lmd ಪಾಠ 11

ಶಿಷ್ಯರಾಗೋಕೆ ಕಲಿಸಿ

ಯೇಸು ನೀರಿನ ಹತ್ರ ಜನರ ಗುಂಪಿಗೆ ಕಲಿಸ್ತಾ ಇದ್ದಾನೆ. ಆಕಾಶದಲ್ಲಿ ಪಕ್ಷಿಗಳು ಹಾರಾಡ್ತಿವೆ ಮತ್ತು ನೆಲದಲ್ಲಿ ಲಿಲಿ ಹೂಗಳು ಬೆಳೆದಿವೆ.

ಮತ್ತಾಯ 6:25-27

ಪಾಠ 11

ಸರಳತೆ

ತತ್ವ: ‘ಸುಲಭವಾಗಿ ಅರ್ಥ ಆಗೋ ತರ ಮಾತಾಡಿ.’—1 ಕೊರಿಂ. 14:9.

ಯೇಸು ಏನು ಮಾಡಿದನು?

ಯೇಸು ನೀರಿನ ಹತ್ರ ಜನರ ಗುಂಪಿಗೆ ಕಲಿಸ್ತಾ ಇದ್ದಾನೆ. ಆಕಾಶದಲ್ಲಿ ಪಕ್ಷಿಗಳು ಹಾರಾಡ್ತಿವೆ ಮತ್ತು ನೆಲದಲ್ಲಿ ಲಿಲಿ ಹೂಗಳು ಬೆಳೆದಿವೆ.

ವಿಡಿಯೋ: ಯೇಸು ಸರಳ ಉದಾಹರಣೆಗಳನ್ನ ಬಳಸಿದನು

1. ವಿಡಿಯೋ ನೋಡಿ ಅಥವಾ ಮತ್ತಾಯ 6:25-27 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1. ಎ. ಯೆಹೋವ ದೇವರ ಕಾಳಜಿ ಬಗ್ಗೆ ವಿವರಿಸೋಕೆ ಯೇಸು ಯಾವ ಉದಾಹರಣೆ ಬಳಸಿದನು?

  2. ಬಿ. ಯೇಸುಗೆ ಪಕ್ಷಿಗಳ ಬಗ್ಗೆ ತುಂಬಾ ಗೊತ್ತಿದ್ರೂ ಯಾವ ಸರಳವಾದ ವಿಷ್ಯನಾ ಹೇಳಿದನು? ಈ ತರ ಕಲಿಸೋದು ಯಾಕೆ ಒಳ್ಳೇದು?

ನಮಗೇನು ಪಾಠ?

2. ಸರಳವಾಗಿ ಕಲಿಸಿದ್ರೆ ಜನರ ಮನಸ್ಸನ್ನ ಮುಟ್ಟೋಕೆ ಆಗುತ್ತೆ, ಕಲ್ತಿದ್ದನ್ನ ಅವರು ಯಾವತ್ತೂ ಮರಿಯಲ್ಲ, ನೆನಪಲ್ಲಿ ಇಟ್ಕೊಳ್ತಾರೆ.

ಯೇಸು ತರ ನೀವೂ ಮಾಡಿ

3. ನೀವೇ ತುಂಬಾ ಮಾತಾಡಬೇಡಿ. ಒಂದು ವಿಷ್ಯದ ಬಗ್ಗೆ ನಿಮಗೆ ಗೊತ್ತಿರೋದನ್ನೆಲ್ಲಾ ಹೇಳೋಕೆ ಹೋಗಬೇಡಿ. ಸ್ಟಡಿ ಮಾಡ್ತಿರೋ ಪ್ರಕಾಶನದಲ್ಲಿರೋ ವಿಷ್ಯವನ್ನ ಚರ್ಚೆ ಮಾಡಿ. ಪ್ರಶ್ನೆ ಕೇಳಿದ ಮೇಲೆ ವಿದ್ಯಾರ್ಥಿ ಉತ್ರ ಕೊಡೋ ತನಕ ತಾಳ್ಮೆಯಿಂದ ಕಾಯಿರಿ. ಉತ್ರ ಗೊತ್ತಿಲ್ಲ ಅಂದ್ರೆ ಅಥವಾ ಅವರು ಹೇಳಿದ ಉತ್ರ ಬೈಬಲ್‌ಗೆ ವಿರುದ್ಧವಾಗಿದ್ರೆ ಚಿಕ್ಕಚಿಕ್ಕ ಪ್ರಶ್ನೆಗಳನ್ನ ಕೇಳಿ ಅವ್ರಿಗೆ ಅರ್ಥ ಮಾಡಿಸಿ. ನಿಮ್ಮ ವಿದ್ಯಾರ್ಥಿಗೆ ಮುಖ್ಯ ವಿಷ್ಯ ಅರ್ಥ ಆಗಿದ ತಕ್ಷಣ ಮುಂದೆ ಹೋಗಿ.

4. ವಿದ್ಯಾರ್ಥಿಗೆ ಈಗಾಗಲೇ ಏನು ಗೊತ್ತಿದೆ ಅಂತ ತಿಳ್ಕೊಳ್ಳಿ. ಈ ರೀತಿ ಮಾಡೋದು ನಿಮಗೆ ಹೊಸ ವಿಷ್ಯ ಕಲಿಸೋಕೆ ಸಹಾಯ ಮಾಡುತ್ತೆ. ಉದಾಹರಣೆಗೆ, ತೀರಿ ಹೋದವರು ಮತ್ತೆ ಎದ್ದು ಬರ್ತಾರೆ ಅನ್ನೋ ಪಾಠನಾ ನೀವು ಚರ್ಚೆ ಮಾಡಬೇಕು ಅಂತ ಇದ್ದೀರ. ಅದಕ್ಕೂ ಮುಂಚೆ, ಸತ್ತವರಿಗೆ ಏನಾಗುತ್ತೆ ಅಂತ ಈಗಾಗಲೇ ಸ್ಟಡಿಯಲ್ಲಿ ಅವರು ಏನು ಕಲ್ತಿದ್ದಾರೆ ಅಂತ ಕೇಳಿ.

5. ಚೆನ್ನಾಗಿ ಯೋಚ್ನೆ ಮಾಡಿ ಉದಾಹರಣೆಗಳನ್ನ ಬಳಸಿ. ಉದಾಹರಣೆ ಬಳಸೋದಕ್ಕಿಂತ ಮುಂಚೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ:

  1. ಎ. ‘ಈ ಉದಾಹರಣೆ ಸರಳವಾಗಿದ್ಯಾ?’

  2. ಬಿ. ‘ಇದು ನನ್ನ ವಿದ್ಯಾರ್ಥಿಗೆ ಸುಲಭವಾಗಿ ಅರ್ಥ ಆಗುತ್ತಾ?’

  3. ಸಿ. ‘ನಾನು ಈ ಉದಾಹರಣೆ ಬಳಸಿದ್ರೆ ಅವರು ಇದನ್ನ ಮಾತ್ರ ನೆನಪಲ್ಲಿ ಇಟ್ಕೊಳ್ತಾರಾ ಅಥವಾ ಮುಖ್ಯ ವಿಷ್ಯನೂ ನೆನಪಲ್ಲಿ ಇಟ್ಕೊಳ್ತಾರಾ?’

ಇದನ್ನೂ ನೋಡಿ

ಮತ್ತಾ. 11:25; ಯೋಹಾ. 16:12; 1 ಕೊರಿಂ. 2:1

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ