ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm24 ಪು. 7-8
  • ನಿಮ್ಮ ಮಾಹಿತಿಗಾಗಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಮಾಹಿತಿಗಾಗಿ
  • 2024 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ನಿಮ್ಮ ಮಾಹಿತಿಗಾಗಿ
    2023 ಅಧಿವೇಶನ ಕಾರ್ಯಕ್ರಮ
  • ನಿಮ್ಮ ಮಾಹಿತಿಗಾಗಿ
    2020 ಅಧಿವೇಶನ ಕಾರ್ಯಕ್ರಮ
  • ನಿಮ್ಮ ಮಾಹಿತಿಗಾಗಿ
    2025 ಅಧಿವೇಶನ ಕಾರ್ಯಕ್ರಮ
  • ನಿಮ್ಮ ಮಾಹಿತಿಗಾಗಿ
    2019 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2024 ಅಧಿವೇಶನ ಕಾರ್ಯಕ್ರಮ
CO-pgm24 ಪು. 7-8

ನಿಮ್ಮ ಮಾಹಿತಿಗಾಗಿ

ಸಹಾಯಕರು ನಿಮಗೆ ಸಹಾಯ ಮಾಡೋಕಾಗಿ ಸಹಾಯಕರನ್ನ ನೇಮಿಸಲಾಗಿದೆ. ಪಾರ್ಕಿಂಗ್‌ ಮಾಡುವಾಗ, ಸೀಟು ಹಿಡಿಯುವಾಗ, ಸಭಾಂಗಣದ ಒಳಗೆ ಹೋಗುವಾಗ, ಬರುವಾಗ ಮತ್ತು ತುರ್ತು ಪರಿಸ್ಥಿತಿ ಬಂದಾಗ ಅಥವಾ ಇನ್ನು ಬೇರೆ ವಿಷ್ಯಗಳಿಗೆ ಸಂಬಂಧಿಸಿದ ನಿರ್ದೇಶನಗಳನ್ನ ಸಹಾಯಕರು ಕೊಡುವಾಗ ದಯವಿಟ್ಟು ಪಾಲಿಸಿ.

ದೀಕ್ಷಾಸ್ನಾನ ದೀಕ್ಷಾಸ್ನಾನದ ಅಭ್ಯರ್ಥಿಗಳಿಗಾಗಿ ಸಭಾಂಗಣದ ವೇದಿಕೆಯ ಮುಂದುಗಡೆಯಲ್ಲಿ ಸೀಟುಗಳನ್ನ ಹಾಕಿರುತ್ತಾರೆ. ಇದ್ರಲ್ಲಿ ಬದಲಾವಣೆಗಳು ಏನಾದ್ರೂ ಇದ್ರೆ ತಿಳಿಸಲಾಗುತ್ತೆ. ದೀಕ್ಷಾಸ್ನಾನದ ಅಭ್ಯರ್ಥಿಗಳು ಶನಿವಾರ ಬೆಳಗ್ಗೆ ದೀಕ್ಷಾಸ್ನಾನದ ಭಾಷಣ ಶುರು ಆಗೋಕೆ ಮುಂಚೆ ಆ ಸೀಟುಗಳಲ್ಲಿ ಕೂತಿರಬೇಕು. ದೀಕ್ಷಾಸ್ನಾನ ತಗೊಳ್ಳೋ ಸಮಯದಲ್ಲಿ, ಹಾಕೋಕೆ ಸಭ್ಯ ಬಟ್ಟೆ ಮತ್ತು ಒಂದು ಟವಲನ್ನ ಅಭ್ಯರ್ಥಿಗಳು ತರಬೇಕು.

ಕಾಣಿಕೆಗಳು ಅಧಿವೇಶನ ಕಾರ್ಯಕ್ರಮಗಳು ಯೆಹೋವನ ಸ್ನೇಹಿತರಾಗೋಕೆ ನಮಗೆ ಸಹಾಯ ಮಾಡುತ್ತೆ. ಇದನ್ನ ಎಲ್ರೂ ಆನಂದಿಸೋಕೆ ತುಂಬಾ ವ್ಯವಸ್ಥೆಗಳನ್ನ ಮಾಡಿರುತ್ತಾರೆ. ಇದ್ರಲ್ಲಿ ಸೀಟಿನ ವ್ಯವಸ್ಥೆ, ಧ್ವನಿವರ್ಧಕ ಮತ್ತು ಇತರ ಸೌಲಭ್ಯಗಳು ಇದೆ. ಇದಕ್ಕೆ ಆಗೋ ಖರ್ಚನ್ನ ನೋಡ್ಕೊಳ್ಳೋಕೆ ಮತ್ತು ಲೋಕವ್ಯಾಪಕವಾಗಿ ನಡೆಯೋ ಕೆಲಸಕ್ಕೆ ನೀವು ಮನಸಾರೆ ಕೊಡೋ ಕಾಣಿಕೆಗಳು ತುಂಬ ಸಹಾಯ ಮಾಡುತ್ತೆ. ನಿಮ್ಮ ಅನುಕೂಲಕ್ಕಾಗಿ ಅಲ್ಲಲ್ಲಿ ಕಾಣಿಕೆ ಪೆಟ್ಟಿಗೆಗಳನ್ನ ಇಡಲಾಗಿದೆ. ನೀವು ಆನ್‌ಲೈನಲ್ಲಿ ಕಾಣಿಕೆ ಕೊಡೋಕೆ ಬಯಸಿದ್ರೆ, donate.jw.org ಮೂಲಕ ಕೊಡಬಹುದು. ನೀವು ಕೊಡೋ ಕಾಣಿಕೆಯನ್ನ ನಾವು ತುಂಬ ಮೆಚ್ಚಿಕೊಳ್ತೀವಿ. ದೇವರ ಕೆಲಸಕ್ಕಾಗಿ ಉದಾರವಾಗಿ ಕಾಣಿಕೆ ಕೊಡ್ತಿರೋ ನಿಮ್ಮನ್ನ ಆಡಳಿತ ಮಂಡಲಿಯವರು ತುಂಬ ಮೆಚ್ಚಿಕೊಳ್ತಿದ್ದಾರೆ ಮತ್ತು ನಿಮಗೆ ಧನ್ಯವಾದ ಹೇಳ್ತಿದ್ದಾರೆ.

ಪ್ರಥಮ ಚಿಕಿತ್ಸೆ ಇದು ತುರ್ತು ಪರಿಸ್ಥಿತಿಗಳಿಗಾಗಿ ಮಾತ್ರ ಇದೆ ಅನ್ನೋದನ್ನ ದಯವಿಟ್ಟು ನೆನಪಿಡಿ.

ಲಾಸ್ಟ್‌ ಆ್ಯಂಡ್‌ ಫೌಂಡ್‌ ಬೇರೆಯವ್ರ ವಸ್ತು ಸಿಕ್ಕಿದ್ರೆ ಲಾಸ್ಟ್‌ ಆ್ಯಂಡ್‌ ಫೌಂಡ್‌ ಡಿಪಾರ್ಟ್‌ಮೆಂಟ್‌ಗೆ ಕೊಡಿ. ನಿಮ್ಮ ವಸ್ತು ಏನಾದ್ರೂ ಕಳೆದು ಹೋದ್ರೆ ಅಲ್ಲಿ ಹೋಗಿ ಕೇಳಿ. ಹೆತ್ತವರಿಂದ ಕೈತಪ್ಪಿ ಹೋದ ಮಕ್ಕಳು ಸಿಕ್ಕಿದ್ರೆ ಈ ಡಿಪಾರ್ಟ್‌ಮೆಂಟಿಗೆ ಒಪ್ಪಿಸಿ. ಆದ್ರೆ ಇಂಥ ಪರಿಸ್ಥಿತಿ ಬರದೇ ಇರೋಕೆ ಹೆತ್ತವ್ರು ಮಕ್ಕಳನ್ನ ಹುಷಾರಾಗಿ ನೋಡ್ಕೊಬೇಕು.

ಸೀಟಿನ ವ್ಯವಸ್ಥೆ ದಯವಿಟ್ಟು ಬೇರೆಯವ್ರ ಬಗ್ಗೆನೂ ಯೋಚಿಸಿ. ನಿಮ್ಮ ಮನೆಯವ್ರಿಗಾಗಿ, ನಿಮ್ಮ ಮನೆಯಲ್ಲಿ ಉಳ್ಕೊಂಡಿರೋವ್ರಿಗಾಗಿ, ನಿಮ್ಮ ಕಾರಲ್ಲಿ ಪ್ರಯಾಣಿಸ್ತಿರೋವ್ರಿಗಾಗಿ ಮತ್ತು ನಿಮ್ಮ ಬೈಬಲ್‌ ವಿದ್ಯಾರ್ಥಿಗಳಿಗಾಗಿ ಮಾತ್ರ ಸೀಟುಗಳನ್ನ ಹಿಡಿಬಹುದು. ಅನಾವಶ್ಯಕವಾಗಿ ಸೀಟುಗಳನ್ನ ಹಿಡಿಬೇಡಿ.

ಸ್ವಯಂಸೇವೆ ಅಧಿವೇಶನದಲ್ಲಿ ಏನಾದ್ರೂ ಕೆಲಸ ಮಾಡೋಕೆ ನೀವು ಇಷ್ಟಪಡೋದಾದ್ರೆ, ಮಾಹಿತಿ ಮತ್ತು ಸ್ವಯಂಸೇವೆಯ ಡಿಪಾರ್ಟ್‌ಮೆಂಟನ್ನ ಸಂಪರ್ಕಿಸಿ.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಮಾಡಿರೋ ಏರ್ಪಾಡು

© 2024 Watch Tower Bible and Tract Society of Pennsylvania

ವಿಶೇಷ ಕೂಟ

ರಾಜ್ಯ ಪ್ರಚಾರಕರ ಶಾಲೆ

ಲೈಬ್ರರಿಯಲ್ಲಿ ರಾಜ್ಯ ಪ್ರಚಾರಕರ ಶಾಲೆಗೆ ಅಧ್ಯಯನ ಮಾಡುವಾಗ ಆಧ್ಯಾತ್ಮಿಕ ವಿಷಯವನ್ನ ಚರ್ಚಿಸೋಕೆ ಒಬ್ಬ ಶಿಕ್ಷಕ ಮತ್ತು ದಂಪತಿ ಎಲೆಕ್ಟ್ರಾನಿಕ್‌ ಸಾಧನವನ್ನ ಬಳಸ್ತಿದ್ದಾರೆ. ಬೇರೆ ವಿದ್ಯಾರ್ಥಿಗಳು ಅಲ್ಲಿ ಅಧ್ಯಯನ ಮಾಡ್ತಿದ್ದಾರೆ.

ಯೆಹೋವನ ಸೇವೆ ಹೆಚ್ಚು ಮಾಡೋಕೆ ಆಸೆಪಡುವವ್ರು ರಾಜ್ಯ ಪ್ರಚಾರಕರ ಶಾಲೆಗೆ ಅರ್ಜಿಹಾಕಬಹುದು. ಈ ಶಾಲೆಗೆ ಹೋಗೋಕೆ ಇಷ್ಟಪಡುವವ್ರಿಗಾಗಿ ಭಾನುವಾರ ಮಧ್ಯಾಹ್ನ ಒಂದು ವಿಶೇಷ ಕೂಟ ನಡೆಸಲಾಗುತ್ತೆ, ಅದಕ್ಕೆ ನೀವು ಹಾಜರಾಗಬಹುದು. ಈ ಕೂಟ ನಡೆಯೋ ಸ್ಥಳ ಮತ್ತು ಸಮಯ ತಿಳಿಸಲಾಗುತ್ತೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ