ಆ ಸೂಚನೆ—ಕೇವಲ ಗತ ಇತಿಹಾಸವಲ್ಲ
ಮಧ್ಯಪೂರ್ವದ ಯೆರೂಸಲೇಮಿನಲ್ಲಿ ಯೋಚನಾಶಕ್ತಿಯುಳ್ಳ ಜನರ ಗಮನವನ್ನು ಇಂದು ಕೇಳಿಕೊಳ್ಳುವ ಒಂದು ಆಕರ್ಷಕವಾದ ಐತಿಹಾಸಿಕ ನಿವೇಶನವಿದೆ. ಒಂದನೆಯ ಶತಮಾನದ ರೋಮನ್ ಐತಿಹಾಸಗಾರ ಟ್ಯಾಸಿಟಸ್ ಎಂಬವನ ಮಾತುಗಳಿಗನುಸಾರ “ಮಹತ್ತಾದ ಐಶ್ವರ್ಯದ ದೇವಾಲಯ”ವಿದ್ದ ಎತ್ತರದ ಸ್ಥಳ ಇದಾಗಿದೆ. ದೇವಾಲಯದ ಕಟ್ಟಡಗಳ ಸುಳಿವೂ ಅಲ್ಲಿಲ್ಲದಿದ್ದರೆ ಒಂದು ದಿಬ್ಬ ಅಲ್ಲಿದೆ. ಇದು ನಿಮ್ಮ ಮೇಲೆ ಪರಿಣಾಮ ಹಾಕುವ ಪ್ರವಾದನಾ ಸೂಚನೆಯು ಸತ್ಯತೆಗೆ ಸಾಕ್ಷಿ ನೀಡುತ್ತದೆ.
ಈ ದೇವಾಲಯದ ದಿಬ್ಬಣಕ್ಕೆ ಭೂಸಂಶೋಧಕರು ಅನೇಕ ವಿಷಯಗಳನ್ನು ಕಂಡು ಹಿಡಿಯುತ್ತಾರೆ. ದ ಬೈಬಲ್ ಎಂಡ್ ಆರ್ಕಿಯಾಲಜಿ ಎಂಬ ಪುಸ್ತಕದಲ್ಲಿ ಜೆ.ವಿ. ಥಾಮ್ಸನ್ ಹೇಳುವದು: “ಅತ್ಯಂತ ರಸಕರವಾದ ಒಂದು ಕಂಡು ಹಿಡಿತವು ಹೆರೋದನ ಕಾಲದ ಅನೇಕ ದೊಡ್ಡ ಕಲ್ಲುಗಳೇ. ಇದು ಸಾ.ಶ.70ರಲ್ಲಿ ಯೆರೂಸಲೇಮ್ ನಾಶವಾಗುವಾಗ ದೇವಾಲಯದ ಗೋಡೆಯ ಮೇಲಿನಿಂದ ಎಸೆದ ಕಲ್ಲುಗಳಾಗಿರಬೇಕು”.
ಯೆರೂಸಲೇಮ್ ಮತ್ತದರ ದೇವಾಲಯದ ನಾಶವನ್ನು ಅದು ಸಂಭವಿಸುವದಕ್ಕೆ 37 ವರ್ಷಗಳಿಗೆ ಮೊದಲಾಗಿ ಮುಂತಿಸಲಾಗಿತ್ತು. ಯೇಸು ಕ್ರಿಸ್ತನು ಹೇಳಿದ “ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದೆ ಎಲ್ಲಾ ಕೆಡಲ್ಪಡುವ ದಿವಸಗಳು ಬರುವವು” ಎಂಬ ಮಾತುಗಳನ್ನು ಕಡಿಮೆಯಲ್ಲ, ಮೂವರು ಐತಿಹಾಸಕಾರರು ದಾಖಲೆ ಮಾಡಿದ್ದಾರೆ. (ಲೂಕ 21:16; ಮತ್ತಾಯ 24:1, 2; ಮಾರ್ಕ 13:1, 2) ಇದನ್ನನುಸರಿಸಿ ನಡೆದ ಸಂಭಾಷಣೆಯು ನಿಮ್ಮ ಸಹಿತ, ಇಂದಿನ ಎಲ್ಲರನ್ನೂ ತಟ್ಟುತ್ತದೆ.
ಶಿಷ್ಯರು ಅವನನ್ನು “ಬೋಧಕನೇ, . . . ಅದು ಸಂಭವಿಸುವದಕ್ಕಿರುವಾಗ ಯಾವ ಸೂಚನೆ ತೋರುವದು?” ಎಂದು ಕೇಳಿದರು. ಯೇಸುವಿನ ಉತ್ತರಕ್ಕನುಸಾರ ದೇವಾಲಯದ ನಾಶನಕ್ಕೆ ನಡಿಸುವ ಸಮಯವು ಯುದ್ಧ, ಭೂಕಂಪ, ಕ್ಷಾಮ ಮತ್ತು ಅಂಟುರೋಗಗಳಿಂದ ಗುರುತಿಸಲ್ಪಡುವದು. ಇದಲ್ಲದೆ “ಎಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವದೇ ಇಲ್ಲ” ಎಂದು ಅವನು ಹೇಳಿದನು.— ಲೂಕ 21:7, 10, 11, 32.
ಹಾಗಾದರೆ ಆ ಸಂತತಿಯು ಆ “ಸೂಚನೆ”ಯ ನೆರವೇರಿಕೆಯನ್ನು ಅನುಭವಿಸಿತೋ? ಹೌದು, ಬೈಬಲ್ ಒಂದು “ದೊಡ್ಡ ಕ್ಷಾಮ”ವನ್ನು ಮೂರು ಭೂಕಂಪಗಳಲ್ಲಿ ಎರಡು “ಮಹಾ ಭೂಕಂಪ”ಗಳನ್ನೂ ಸೂಚಿಸಿ ಮಾತಾಡುತ್ತದೆ. (ಅಪೊಸ್ತಲರ ಕೃತ್ಯ 11:28; 16:26; ಮತ್ತಾಯ 27:51; 28:1, 2) ಐಹಿಕ ಇತಿಹಾಸಕ್ಕನುಸಾರವಾಗಿ, ಇತರ ಭೂಕಂಪಗಳೂ, ಕ್ಷಾಮಗಳೂ ಆ ಸಮಯದಲ್ಲಿ ಸಂಭವಿಸಿದವು. ಅದು ಯುದ್ಧಗಳ ಸಮಯವೂ ಆಗಿತ್ತು. ಇವುಗಳಲ್ಲಿ ಎರಡನ್ನೂ ರೋಮನ್ ಸೈನ್ಯಗಳು ಯೆರೂಸಲೇಮಿನ ನಿವಾಸಿಗಳ ವಿರುದ್ಧ ಹೋರಾಡಿದವು. ಯೆರೂಸಲೇಮಿನ ಎರಡನೆಯ ಮುತ್ತಿಗೆಯ ಪರಿಣಾಮವಾಗಿ ಭಯಂಕರ ಬರಗಾಲ ಮತ್ತು ಅಂಟುರೋಗಗಳೆದ್ದು, ಇವು ಸಾ.ಶ. 70ನೇ ವರ್ಷದಲ್ಲಿ ನಗರದ ಮತ್ತು ದೇವಾಲಯದ ನಾಶನಕ್ಕೆ ನಡೆಸಿದವು. ದೇವಾಲಯವು ನಿಂತಿದ್ದ ಆ ನಿವೇಶನವು ಈಗ ಯೆರೂಸಲೇಮಿನಲ್ಲಿ ಆ ಒಂದನೆಯ ಶತಮಾನದ ಭಯಂಕರ ಘಟನೆಗಳಿಗೆ ಮೌನಸಾಕ್ಷಿಯಾಗಿ ನಿಂತಿದೆ.
‘ವಿಷಯವೇನೋ ಆಸಕ್ತಿಯದ್ದು, ಆದರೆ ಅದು ನನಗೆ ತಟ್ಟುವದು ಹೇಗೆ?’ ಎಂದು ಕೆಲವರು ಕೇಳಬಹುದು. ಆ ಸೂಚನೆ ಕೇವಲ ಗತ ಇತಿಹಾಸವಾಗಿಲ್ಲದೆ ಇರುವುದರಿಂದಲೇ ಅದು ಒಂದನೆಯ ಶತಮಾನದಲ್ಲಿ ಅಂಶಿಕವಾಗಿ ಮಾತ್ರ ನೆರವೇರಿತು. ದೃಷ್ಟಾಂತಕ್ಕೆ, “ಸೂರ್ಯಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು” ಮತ್ತು “ಸಮುದ್ರದ ಮತ್ತು ತೆರೆಗಳ ಘೋಷದ ನಿಮಿತ್ತ” ಮಾನವಕುಲವು ಮಹಾಭಯದಿಂದಿರುವ ಸಮಯವನ್ನು ಯೇಸು ಮುಂತಿಳಿಸಿದನು. ಸೂಚನೆಯ ಈ ಭಾಗವು “ದೇವರ ರಾಜ್ಯ”ದ ಲೋಕಸಂಕಟಗಳಿಂದ ಶಾಶ್ವತ ಬಿಡುಗಡೆಯನ್ನು ತರುವ ಸರಕಾರದ ಸಾಮಿಪ್ಯವನ್ನು ಗುರುತಿಸುವದು.—ಲೂಕ 21:25-31
ಇಂಥ ಸಂಗತಿಗಳು ಒಂದನೆಯ ಶತಮಾನದಲ್ಲಿ ನಡೆಯಲಿಲ್ಲ. ಇಂದು, 1900 ವರ್ಷಗಳ ಬಳಿಕ ಮಾನವ ಸಂತತಿಯು ಇನ್ನೂ ಯುದ್ಧ, ಭೂಕಂಪ, ಕ್ಷಾಮ, ಮತ್ತು ಅಂಟುರೋಗಗಳಿಂದ ವಿಮೋಚನೆಗಾಗಿ ಕಾಯುತ್ತಿದೆ. ಆದುದರಿಂದ ಈ ಸೂಚನೆಗೆ ಎರಡನೆಯ ಸಂಪೂರ್ಣ ನೆರವೇರಿಕೆ ಇರಲೇಬೇಕು. ಇದನ್ನು ಸಮರ್ಥಿಸುತ್ತಾ ಪ್ರಕಟನೆ ಪುಸ್ತಕದಲ್ಲಿ ಈ ಸೂಚನೆಗೆ ಅನುರೂಪವಾದ ಪ್ರವಾದನಾ ಚಿತ್ರಗಳನ್ನು ಕೊಡಲಾಗಿದೆ. ಆದರೂ ಯೆರೂಸಲೇಮಿನ ನಾಶನದ ಬಳಿಕ ಇದು ಬರೆಯಲ್ಪಟ್ಟಿತು. (ಪ್ರಕಟನೆ 6:1-8) ಹೀಗೆ ಪ್ರಾಮುಖ್ಯವಾದ ಪ್ರಶ್ನೆಯೊಂದು ಏಳುತ್ತದೆ: ಈ ಸೂಚನೆಯನ್ನು ನಮ್ಮ ದಿನಗಳಲ್ಲಿ ನೋಡಲಾಗಿದೆಯೋ?