ಆ ಸೂಚನೆ—ನೀವು ಗಮನ ಕೊಡುತ್ತಿದ್ದೀರೋ?
“ಪ್ರತಿಯೊಂದು ದೇಶದ ಜನರು ಸಮೃದ್ಧಿ, ಯೋಗಕ್ಷೇಮ ಮತ್ತು ಸಂತೋಷವನ್ನು ಅನುಭವಿಸಬೇಕೆಂದು ನಮ್ಮ ಅಪೇಕ್ಷೆ. ಇದಕ್ಕೆ ಮಾರ್ಗವು ನ್ಯೂಕ್ಲಿಯರ್ ಭಯವಿಲ್ಲದ ಅಹಿಂಸಾತ್ಮಕ ಲೋಕಕ್ಕೆ ಮುಂದುವರಿಯುವುದರಲ್ಲಿದೆ.” ಪೆರಸ್ಟ್ರಯ್ಕ- ಸೋವಿಯೆಟ್ ನಾಯಕ ಮಿಕಾಯೆಲ್ ಗಾರ್ಬಚಾವ್.
ನ್ಯಾಯಸಮ್ಮತವಾಗಿಯೇ ಅನೇಕರು, ಮಾನವನು ಇಂಥ ಲೋಕ ಪರಿಸ್ಥಿತಿಗಳನ್ನು ತರಶಕ್ತನೋ ಎಂಬ ವಿಷಯ ಸಂಶಯಿಸುತ್ತಾರೆ. ಇನ್ನೊಬ್ಬ ನಾಯಕನಾಗಿದ್ದ ಯೇಸು ಇದಕ್ಕಿಂತ ಎಷ್ಟೋ ಉತ್ತಮವಾದ ಒಂದು ಸಂಗತಿಯನ್ನು—ಮರಣದ ಕಾರ್ಯಗತಿಯು ಸಹ ಹಿಮ್ಮೊಗವಾಗುವ ಪ್ರಮೋದವನವಾದ ಭೂಮಿಯನ್ನು—ವಾಗ್ದಾನಿಸಿದನು. (ಮತ್ತಾಯ 5:5; ಲೂಕ 23:43; ಯೋಹಾನ 5:28,29) ಇದನ್ನು ಸಾಧಿಸುವ ಉಪಕರಣವು ದೈವಿಕ ಮಧ್ಯಬರುವಿಕೆಯೇ. ಇಂಥ ಅಡ್ಡಬರುವಿಕೆ “ಯಾವಾಗ” ಬರುವುದೆಂಬ ಪ್ರಶ್ನೆಗೆ ಉತ್ತರ ನೀಡುತ್ತಾ ಯೇಸು “ದೇವರ ರಾಜ್ಯವು ಆಕರ್ಷಕವಾದ ಗಮನಾರ್ಹತೆಯೊಂದಿಗೆ ಬರುವುದಿಲ್ಲ” ಎಂದು ಹೇಳಿದನು. ಪ್ರಥಮದಲ್ಲಿ, ಸಾಂಕೇತಿಕವಾದ ಹದ್ದಿನ ಕಣ್ಣಿರುವ ತೀಕ್ಷ್ಣವಾಗಿ ಲಕ್ಷ್ಯ ಕೊಡುವವರು ಮಾತ್ರ ಇದನ್ನು ಗ್ರಹಿಸುವರು. (ಲೂಕ 17:20,37) ಇದೇಕೆ?
ಆ ಸೂಚನೆ ನಮಗೆ ಅಗತ್ಯವಿರಲು ಕಾರಣ
ಸ್ವರ್ಗಾರೋಹಣವಾದಂದಿನಿಂದ ಯೇಸು “ಅಗಮ್ಯವಾದ ಬೆಳಕಿನಲ್ಲಿ ವಾಸ” ಮಾಡುತ್ತಾನೆ. “ಮನುಷ್ಯರಲ್ಲಿ ಯಾರೂ ಅದನ್ನು ಕಾಣಲಿಲ್ಲ. ಯಾರೂ ಕಾಣಲಾರರು.” (1ತಿಮೊಥಿ 6:16) ಹೀಗೆ, ಅಕ್ಷರಾರ್ಥವಾದ ಮಾನವ ನೇತ್ರಗಳು ಅವನನ್ನು ಇನ್ನು ಮುಂದೆ ನೋಡವು. ತನ್ನ ಭೂಜೀವನದ ಕೊನೆಯ ದಿನದಲ್ಲಿ ಯೇಸು ಹೇಳಿದಂತೆ, “ಇನ್ನು ಸ್ವಲ್ಪ ಕಾಲದ ಮೇಲೆ ಲೋಕವು ನನ್ನನ್ನು ನೋಡುವುದಿಲ್ಲ.” (ಯೋಹಾನ 14:19) ಹೀಗೆ ಅವನನ್ನು ಸಾಂಕೇತಿಕ ವಿಧದಲ್ಲಿ ಮಾತ್ರ ನೋಡಸಾಧ್ಯವಿದೆ.—ಎಫೆಸ 1:18; ಪ್ರಕಟನೆ 1:7.
ಆದರೂ, ದೇವರ ರಾಜ್ಯವು ಆಳತೊಡಗುವಾಗ ತನ್ನ ಶಿಷ್ಯರಿಗೆ ಅದನ್ನು ಗ್ರಹಿಸಸಾಧ್ಯವಿದೆ ಎಂದು ಯೇಸು ನುಡಿದನು. ಹೇಗೆ? ಒಂದು ಸೂಚನೆಯ ಮೂಲಕವೇ, “ನಿನ್ನ ಸಾನ್ನಿಧ್ಯಕ್ಕೂ. . . . ಸೂಚನೆಯೇನು? ಎಂಬ ಪ್ರಶ್ನೆಗೆ ಯೇಸು ತನ್ನ ಭಾವೀ ಅದೃಶ್ಯ ಆಳಿಕೆಗೆ ದೃಶ್ಯ ರುಜುವಾತುಗಳನ್ನು ಕೊಟ್ಟನು.—ಮತ್ತಾಯ 24:3.
ಈ ಸೂಚನೆಯಲ್ಲಿ, ಯಾವ ರೀತಿಯ ಜನರು ಇದರಿಂದ ಪ್ರಯೋಜನ ಪಡೆಯುವದೆಂಬುದನ್ನು ತೋರಿಸುವ ದೃಷ್ಟಾಂತವೊಂದು ಸೇರಿತ್ತು: “ಹೆಣ ಬಿದ್ದಲ್ಲಿ ಹದ್ದುಗಳು ಕೂಡುವವು” ಎಂದನು ಯೇಸು. (ಮತ್ತಾಯ 24:28) ಈಗಿನ ವ್ಯವಸ್ಥೆಯನ್ನು ಪಾರಾಗಿ ದೇವರ ನೂತನ ಲೋಕದೊಳಗೆ ಸೇರಲು ಅಪೇಕ್ಷೆಯಿರುವವರೆಲ್ಲರೂ ಈಗ ‘ಕೂಡಿಬಂದು’ ಕ್ರಿಸ್ತನ ಹದ್ದು ಸಮಾನರಾದ “ಆದುಕೊಂಡ” ಜನರೊಂದಿಗೆ ಆತ್ಮಿಕ ಆಹಾರದಲ್ಲಿ ಸಂತೋಷಿಸಬೇಕು.—ಮತ್ತಾಯ 24:32, 45-47.
ಅಸಹನೆಯ ವಿರುದ್ಧ ಎಚ್ಚರದಿಂದಿರುವುದು.
ಈಗಿನ ದುಷ್ಟ ವ್ಯವಸ್ಥೆಯ ಅಂತ್ಯಕ್ಕೆ ತಾರೀಕನ್ನು ಯಾವ ಮಾನವನು ಕಂಡುಹಿಡಿಯಲಾರನು. ಯೇಸು ಹೇಳಿದ್ದು: “ಆ ದಿನದ ವಿಷಯವಾಗಲಿ ಆ ಗಳಿಗೆಯ ವಿಷಯವಾಗಲಿ ನನ್ನ ತಂದೆಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.”—ಮಾರ್ಕ 13:32,33.
ಆದರೆ ಈ ಸೂಚನೆ ಅನೇಕ ಮಾನವ ಸಂತತಿಗಳನ್ನು ವ್ಯಾಪಿಸುತ್ತಾ ನೆರವೇರಿತೋ? ಇಲ್ಲ. ಈ ಸೂಚನೆಯು ಒಂದು ನಿರ್ದಿಷ್ಟ ಸಂತತಿಯ ಸಮಯದಲ್ಲಿ ನೆರವೇರಬೇಕು. ಯಾವ ಸಂತತಿ ಈ ಸೂಚನೆಯ ಆರಂಭವನ್ನು ನೋಡುತ್ತದೋ ಅದೇ ಸಂತತಿಯು ಯಾವ “ಸಂಕಟವು ದೇವರು ಮಾಡಿದ ಸೃಷ್ಟಿ ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ”ವೂ ಅಂಥ ಸಂಕಟದಲ್ಲಿ ಅದರ ಪರಮಾವಧಿಯನ್ನು ನೋಡುವುದು. ಇದರ ಕುರಿತು ಯೇಸುವಿನ ಆಶ್ವಾಸನೆಯನ್ನು ಮತ್ತಾಯ, ಮಾರ್ಕ ಮತ್ತು ಲೂಕ ಎಂಬ ಮೂವರು ಇತಿಹಾಸಗಾರರು ದಾಖಲೆ ಮಾಡಿದರು.—ಮಾರ್ಕ 13:19,30; ಮತ್ತಾಯ 24:13,21,22,34; ಲೂಕ 21:28,32.
ಆದರೂ ನಾವು ಅಸಹನೆ ತೋರಿಸಬಹುದಾದ ಅಪಾಯವಿದೆ. 1914ರಲ್ಲಿ 1ನೇ ಲೋಕಯುದ್ಧ ಪ್ರಾರಂಭವಾಗಿ ಸುಮಾರು 75 ವರ್ಷಗಳು ಕಳೆದಿವೆ. ಮಾನವ ದೃಷ್ಟಿಕೋನದಲ್ಲಿ ಇದು ಅತಿ ದೀರ್ಘಕಾಲವೆಂದು ಕಾಣಬಹುದು. ಆದರೆ 1ನೇ ಲೋಕಯುದ್ಧವನ್ನು ನೋಡಿರುವ ಹದ್ದು ಕಣ್ಣಿನ ಕ್ರೈಸ್ತರು ಇನ್ನೂ ಜೀವಿಸುತ್ತಿದ್ದಾರೆ. ಅವರ ಸಂತತಿ ಅಳಿದು ಹೋಗಿಲ್ಲ.
ಆ ಸೂಚನೆಯನ್ನು ಕೊಟ್ಟಾಗ, ಅಸಹನೆ ತೋರಿಸುವ ಅಪಾಯದ ಕುರಿತು ಯೇಸು ಎಚ್ಚರಿಸಿದನು. “ನನ್ನ ಯಜಮಾನನು ತಡಮಾಡುತ್ತಾನೆ” ಎಂದು ಹೃದಯದಲ್ಲಿ ಹೇಳಿಕೊಳ್ಳುವ ವ್ಯಕ್ತಿಗಳ ಕುರಿತು ಅವನು ಮಾತಾಡಿದನು. ಇಂಥ ಅನಿಸಿಕೆಗಳನ್ನು ನಿಯಂತ್ರಿಸಿಕೊಳ್ಳುವಲ್ಲಿ ಅದು ಮೂರ್ಖ ವರ್ತನೆಗೆ ನಡೆಸಬಲ್ಲದೆಂದು ಯೇಸು ತೋರಿಸಿದನು. (ಮತ್ತಾಯ 24:48-51) ಇದರ ಕುರಿತು ಇನ್ನೂ ಹೆಚ್ಚಿಗೆ ಹೇಳಲು ಕ್ರಿಸ್ತನ ಅಪೊಸ್ತಲರಿಗಿತ್ತು.
“ಕುಚೋದ್ಯಗಾರರು”
ಬೈಬಲ್ ಲೇಖಕ ಯೂದನಿಗನುಸಾರವಾಗಿ ಅಪೊಸ್ತಲರು ಈ ಕೆಳಗಿನ ಎಚ್ಚರಿಕೆ ಕೊಟ್ಟರು: “ಭಕ್ತಿಗೆ ವಿರುದ್ಧವಾದ ತಮ್ಮ ಆಶೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಇರುವರು.” (ಯೂದ 17,18)
ಶುದ್ಧವಾದ ಒಂದು ಹೊಸಲೋಕದಲ್ಲಿ ವಾಸಿಸುವ ಅಪೇಕ್ಷೆಯ ಸ್ಥಳದಲ್ಲಿ “ಭಕ್ತಿಗೆ ವಿರುದ್ಧವಾದ. . . . ಆಶೆಗಳು” ಬಂದು ಭರ್ತಿಯಾಗಬಲ್ಲವು. ಮತ್ತು ಲೋಕದ ಅಭಿವ್ಯಕ್ತಿ ಮತ್ತು ಸಂಪರ್ಕ ವಿಧಾನಗಳ ಕಾರಣ ಇಂದು ಇದು ವಿಶೇಷವಾಗಿ ಅಪಾಯಕಾಗಿಯಾಗಿದೆ: ಲೋಕದ ಇತಿಹಾಸದಲ್ಲಿ ಹಿಂದೆಂದೂ ಇಷ್ಟು ವಿಸ್ತಾರವಾಗಿ ಹಿಂಸಾ ಕೃತ್ಯ, ಪ್ರೇತ ವ್ಯವಹಾರ ಮತ್ತು ಲೈಂಗಿಕ ದುರಾಚಾರಗಳನ್ನು ಪ್ರದರ್ಶಿಸಿರುವುದಿಲ್ಲ. ರೇಡಿಯೋ ಮತ್ತು ಸಂಗೀತಗಳಲ್ಲಿ ಅನೇಕ ಸಲ ಇದನ್ನೇ ಮುಖ್ಯ ವಿಷಯವಾಗಿ ಇಡಲಾಗುತ್ತದೆ ಮತ್ತು ಅಸಂಖ್ಯಾತ ಟೀವೀ ಕಾರ್ಯಕ್ರಮ, ವಿಡಿಯೋ, ಜಾಹಿರಾತು, ಪುಸ್ತಕ ಮತ್ತು ಪತ್ರಿಕೆಗಳಲ್ಲಿ ಇದನ್ನು ನೋಡಲಾಗುತ್ತದೆ.
ಇಂಥ ಭಕ್ತಿರಾಹಿತ್ಯದ ಅಂತ್ಯವನ್ನು ಈ ಸೂಚನೆ ತೋರಿಸುತ್ತದೆ ಮತ್ತು ಈ ದೇವಭಕ್ತರಹಿತ ವಿಷಯಗಳನ್ನು ಆಶಿಸುವವರು ಈ ಸೂಚನೆಯ ಕುರಿತು ಕುಚೋದ್ಯ ಮಾಡುವುದು ಸ್ವಾಭಾವಿಕ. ಮತ್ತು ಮುಂತಿಳಿಸಲ್ಪಟ್ಟಿರುವಂತೆ. “ಸಮಸ್ತ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ” ಎಂದು ಅವರು ವಾದಿಸುತ್ತಾರೆ.—2ಪೇತ್ರ 3:3,4.
‘ಪ್ರೀತಿ ತಣ್ಣಗಾಗುತ್ತದೆ’
ಇತ್ತೀಚೆಗೆ ಪೌಲ್ ಬೌಲ್ಸ್ ಎಂಬ 75 ವಯಸ್ಸಿನ ಅಮೇರಿಕನ್ ಲೇಖಕನನ್ನು ನ್ಯೂಸ್ ವೀಕ್ ಪತ್ರಿಕೆ ಪತ್ರಿಕಾ ಭೇಟಿ ಮಾಡಿತು. “ನಿಮ್ಮ ಲೋಕ ವೀಕ್ಷಣವೇನು?” ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾ ಬೌಲ್ಸ್ ಹೇಳಿದ್ದು: “ನೈತಿಕ ಅರ್ಥದಲ್ಲಿ ಲೋಕ ಚೂರು ಚೂರಾಗಿದೆ. 60 ವರ್ಷಗಳ ಹಿಂದಿನಂತೆ ಈಗ ಯಾರೂ ಪ್ರಾಮಾಣಿಕತೆ ತೋರಿಸುವುದಿಲ್ಲ. ಆಗ ಸಂಭಾವಿತ ಭಾವನೆಯಿತ್ತು. ಇದು ಪಾಶ್ಚಿಮಾತ್ಯ ಸಂಸ್ಕೃತಿಯ ಬೆಲೆಬಾಳುವ ಲಕ್ಷಣವಾಗಿತ್ತು. ಈಗ ಯಾರೂ ಲಕ್ಷಿಸುವುದಿಲ್ಲ, ಮತ್ತು ಈಗ ಹಣಕ್ಕೆ ದೊಡ್ಡ ಪ್ರಾಧಾನ್ಯತೆ ಇದೆ.”
ಈ ಪರಿಸ್ಥಿತಿ ಬೈಬಲು ಮುಂತಿಳಿಸಿದಂತೆಯೇ ಇದೆ. ಯೇಸು ಮುಂತಿಳಿಸಿದ್ದು: “ನಿಯಮರಾಹಿತ್ಯದ ವರ್ಧನದ ಕಾರಣ ಅಧಿಕಾಂಶ ಜನರ ಪ್ರೀತಿಯು ತಣ್ಣಗಾಗುವುದು.” (ಮತ್ತಾಯ 24:12; 2ತಿಮೊಥಿ 3:1-5) ಸ್ವಾರ್ಥ ಮತ್ತು ಲೋಭ ಹೆಚ್ಚಾಗುವಷ್ಟಕ್ಕೆ ದೇವರಿಗೆ ತೋರಿಸಬೇಕಾದ ಪ್ರೀತಿ ಕಡಿಮೆಯಾಗುತ್ತದೆ. ಹೆಚ್ಚೆಚ್ಚು ಜನರು, ಪಾತಕ, ಭಯವಾದ, ಅಪ್ರಮಾಣಿಕ ರೀತಿಯ ವ್ಯಾಪಾರ, ಲೈಂಗಿಕ ದುರಾಚಾರ ಮತ್ತು ಅಮಲೌಷಧದ ದುರುಪಯೋಗಗಳನ್ನು ಮಾಡಿ ತಮ್ಮ ಸ್ವಂತ ಬಯಕೆಗಳನ್ನು ದೇವರ ನಿಯಮಗಳಿಗಿಂತ ಮುಂದಿಡುತ್ತಾರೆಂದು ತೋರಿಸುತ್ತಾರೆ.
ಇನ್ನು ಕೆಲವರು ಸೂಚನೆಯ ನೆರವೇರಿಕೆಯನ್ನು ಗುರುತಿಸಿದರೂ ತಮ್ಮನ್ನೇ ಮೆಚ್ಚಿಸಿಕೊಳ್ಳುವುದರಲ್ಲಿ ಮುಳುಗಿರುವುದರಿಂದ ಈ ವಿಷಯದಲ್ಲಿ ಕ್ರಮ ಕೈಕೊಳ್ಳಲು ತಪ್ಪುತ್ತಾರೆ. ಆದರೆ ಈ ಸೂಚನೆಗೆ ಗಮನ ಕೊಡುವವನು ದೇವರಿಗೆ ಮತ್ತು ನೆರೆಯವನಿಗೆ ನಿಸ್ವಾರ್ಥ ಪ್ರೇಮ ತೋರಿಸುವುದರಲ್ಲಿ ತಾಳ್ಮೆಯಿಂದಿರುವುದು ಅಗತ್ಯ.—ಮತ್ತಾಯ 24:13,14.
“ಪ್ರಪಂಚದ ಚಿಂತೆಗಳು”
ಸ್ವಾರ್ಥ ಭೋಗಗಳು ಮಾತ್ರವಲ್ಲ ನ್ಯಾಯಾವಾದ ಶಾರೀರಿಕ ಅವಶ್ಯಕತೆಗಳಲ್ಲಿ ಕೆಲವರು ಮುಳುಗಿ ಈ ಸೂಚನೆಯನ್ನು ಅಸಡ್ಡೆ ಮಾಡುವರೆಂದು ಯೇಸು ಕ್ರಿಸ್ತನು ಎಚ್ಚರಿಸಿದನು. ಅವನು ಪ್ರೋತ್ಸಾಹಿಸಿದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲು ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವುದು.”—ಲೂಕ 21:34,35.
ಬೈಬಲು ಸಂತೋಷದ ಕುಟುಂಬ ಜೀವಿತವನ್ನು ಪ್ರೋತ್ಸಾಹಿಸುತ್ತದೆ. (ಎಫೆಸ್ಯ 5:24-6:4) ಕುಟುಂಬದ ಶಿರಸ್ಸಾದವನು ತನ್ನ ಹೆಂಡತಿ, ಮಕ್ಕಳಿಗೆ ಒದಗಿಸುವಿಕೆಯನ್ನು ನೀಡಲು ಅನೇಕ ಸಲ ಯಾವುದಾದರೂ ಕೆಲಸ ಅಥವಾ ವ್ಯಾಪಾರವನ್ನು ಮಾಡಬೇಕಾಗುತ್ತದೆ. (1ತಿಮೊಥಿ 5:8)ಆದರೂ, ಕುಟುಂಬ, ವ್ಯಾಪಾರ ಮತ್ತು ಲೌಕಿಕ ವಿಷಯಗಳ ಸುತ್ತಲು ಮಾತ್ರ ನಿಮ್ಮ ಜೀವನವು ತಿರುಗುವಂತೆ ಬಿಡುವುದು ಸಮೀಪದೃಷ್ಟಿದೋಷವೇ ಸರಿ. ಈ ಅಪಾಯದ ಕುರಿತು ಯೇಸು ಎಚ್ಚರಿಸಿದ್ದು: “ನೋಹನ ದಿವಸಗಳಲ್ಲಿ ನಡೆದ ಹಾಗೆಯೇ ಮನುಷ್ಯಕುಮಾರನ ದಿವಸಗಳಲ್ಲಿಯೂ ನಡೆಯುವದು. ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಮದುವೆಮಾಡಿಕೊಳ್ಳುತ್ತಿದ್ದರು, ಮದುವೆಮಾಡಿಕೊಡುತ್ತಿದ್ದರು. ಆಗ ಜಲಪ್ರಲಯವು ಬಂದು ಎಲ್ಲರನ್ನು ನಾಶಮಾಡಿತು. . . ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿವಸದಲ್ಲಿ ಅದೇ ರೀತಿಯಾಗಿ ಇರುವದು.”—ಲೂಕ 17:26-30; ಮತ್ತಾಯ 24:36-39.
“ತೆಗೆದುಕೊಳ್ಳಲ್ಪಡುವನೋ?” “ಬಿಡಲ್ಪಡುವನೋ?”
ಸಮಯ ಕಳೆದು ಹೋಗುತ್ತಿದೆ. ಬೇಗನೆ ದೇವರ ರಾಜ್ಯ ಕೈಹಾಕಿ ವಿಷಯಗಳನ್ನು ಸರಿಪಡಿಸುವುದು. ಆಗ ಪ್ರತಿಯೊಬ್ಬ ಮಾನವನು ಎರಡರಲ್ಲಿ ಒಂದಲ್ಲ ಒಂದು ವಿಧದಲ್ಲಿ ಪ್ರಭಾವಿತನಾಗುವನು. ಯೇಸು ವಿವರಿಸಿದ್ದು: “ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿವಸದಲ್ಲಿ ಅದೇ ರೀತಿಯಾಗಿ ಇರುವದು.” (ಲೂಕ 17:30)“ಆವಾಗ ಇಬ್ಬರು ಹೊಲದಲ್ಲಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಒಬ್ಬನು ಬಿಡಲ್ಪಡುವನು. ಇಬ್ಬರು ಹೆಂಗಸರು ಬೀಸುವ ಕಲ್ಲಿನ ಮುಂದೆ ಕೂತು ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಒಬ್ಬಳು ಬಿಡಲ್ಪಡುವಳು.” —ಮತ್ತಾಯ 24:40,41.
ಆ ನಿರ್ಧಾರಕ ಸಮಯ ಬರುವಾಗ ನಿಮ್ಮ ಸ್ಥಾನ ಯಾವುದಾಗಿದ್ದೀತು? ನಿಮ್ಮನ್ನು ನಾಶನಕ್ಕಾಗಿ ಬಿಡಲಾದೀತೋ ಪಾರಾಗಲಿಕ್ಕಾಗಿ ತೆಗೆದುಕೊಳ್ಳಲಾದೀತೋ? ಯೋಗ್ಯ ದಿಕ್ಕಿಗೆ ನಡಿಸಲ್ಪಡಲಿಕ್ಕಾಗಿ ಯೇಸು ಕೊಟ್ಟ ದೃಷ್ಟಾಂತವನ್ನು ಪುನಃ ಪರ್ಯಾಲೋಚಿಸಿ :ಹೆಣ ಬಿದ್ದಲ್ಲಿ ಹದ್ದುಗಳು ಕೂಡುವವು.”—ಲೂಕ 17:34-37; ಮತ್ತಾಯ 24:28.
ಯೇಸು ಹೀಗೆ ದೂರದೃಷ್ಟಿಯಿಂದ ಐಕ್ಯ ಕ್ರಮಕೊಳ್ಳುವುದನ್ನು ಒತ್ತಿ ಹೇಳಿದನು. ಪಾರಾಗಲಿಕ್ಕಾಗಿ ತೆಗೆದುಕೊಳ್ಳಲ್ಪಡುವವರು ಕ್ರಮವಾಗಿ ಕೂಡಿಬಂದು ದೇವರು ಒದಗಿಸುವ ಆತ್ಮಿಕ ಪೋಷಣೆಯ ಪ್ರಯೋಜನ ಪಡೆಯುವವರೇ. ಇಂಥ ಆತ್ಮಿಕ ಪೋಷಣೆಯು ಯೆಹೋವನ ಸಾಕ್ಷಿಗಳ 57,000ಕ್ಕಿಂತಲೂ ಹೆಚ್ಚು ಸಭೆಗಳೊಂದಿಗೆ ಆಪ್ತ ಸಹವಾಸವನ್ನು ಮಾಡುವುದರ ಮೂಲಕ ಮತ್ತು ನೀವೀಗ ಓದುತ್ತಿರುವ ನಮೂನೆಯ ಬೈಬಲ್ ಆಧರಿತ ಸಾಹಿತ್ಯಗಳನ್ನು ಅಧ್ಯಯನ ಮಾಡುವುದರ ಮೂಲಕ ಬರುತ್ತದೆಂಬುದನ್ನು ಲಕ್ಷಾಂತರ ಜನರು ಅನುಭವಿಸಿದ್ದಾರೆ.
ಆ ಸೂಚನೆಯಲ್ಲಿ ತಮಗೆ ನಂಬಿಕೆ ಇದೆಯೆಂಬುದನ್ನು 30 ಲಕ್ಷಗಳಿಗೂ ಹೆಚ್ಚು ಯೆಹೋವನ ಸಾಕ್ಷಿಗಳು “ರಾಜ್ಯದ ಸುವಾರ್ತೆ”ಯಲ್ಲಿ ತಮ್ಮ ನೆರೆಯವರೊಂದಿಗೆ ಪಾಲಿಗರಾಗಿ ತೋರಿಸುತ್ತಾರೆ. (ಮತ್ತಾಯ 24:14) ಈ ಸುವಾರ್ತೆಗೆ ನೀವು ಸಕಾರಾತ್ಮಕ ಪ್ರತಿವರ್ತನೆ ತೋರಿಸುತ್ತಿದ್ದೀರೋ? ಹಾಗಿರುವಲ್ಲಿ ಭೂಪ್ರಮೋದವನಕ್ಕೆ ಪಾರಾಗುವ ವಾಗ್ದಾನವನ್ನು ನೀವು ಮನಸ್ಸಿಗೆ ಹಚ್ಚಿಕೊಳ್ಳಬಲ್ಲಿರಿ.
[ಪುಟ 5 ರಲ್ಲಿರುವ ಚಿತ್ರ]
ಸುಖ ಲೋಲುಪತೆಯಲ್ಲಿ ಅವರು ಎಷ್ಟೊಂದು ಮಗ್ನರಾಗಿರುತ್ತಾರೆಂದರೆ, ಸೂಚನೆಯನ್ನು ಅವರು ಅಲಕ್ಷ್ಯಿಸುತ್ತಾರೆ.
[ಪುಟ 6 ರಲ್ಲಿರುವ ಚಿತ್ರ]
ಸೂಚನೆಗೆ ಕಿವಿಗೊಡುವದೆಂದರೆ ದೇವರ ವಾಕ್ಯದಿಂದ ಉಣಿಸಲ್ಪಡಲು ಒಟ್ಟಾಗಿ ಸೇರಿಬರುವದು ಒಳಗೊಂಡಿದೆ.