ನೀವು ಅಮೂಲ್ಯ ನಿಕ್ಷೇಪಗಳನ್ನು ಕಂಡುಕೊಳ್ಳಬಲ್ಲಿರಿ!
“ನಿನಗೇನಾದರೂ ಕಾಣುತ್ತದೋ” ಎಂದು ಕೇಳಿದನು ಧನಿಕ ಆಂಗ್ಲವ್ಯಕ್ತಿ. “ಹೌದು, ಅಚ್ಚರಿಯ ವಿಷಯಗಳು” ಎಂದು ಉತ್ತರಿಸಿದನು ಈಜಿಪ್ಟಿನ ಪುರಾತನ ವಸ್ತು ಪಂಡಿತ. ಅದು 1922 ರ ವರ್ಷವಾಗಿತ್ತು ಮತ್ತು ಈಜಿಪ್ನ್ಟ ಅರಸರ ಕಂದರದಲ್ಲಿ ಫರೋಹ ಟುಟನ್ಕಮೆನ್ನ ಸಮಾಧಿಯನ್ನು ಹಾವರ್ಡ್ ಕಾರ್ಟರ್ ಆವಾಗಲೇ ಇಣಿಕಿ ನೋಡುತ್ತಿದ್ದರು. ಕಾರ್ಟರರ ಮಾತುಗಳಲ್ಲಿ ಅತ್ಯುದ್ರೇಕವು ಹರಡಿತ್ತು:
“ನನ್ನ ಕಣ್ಣುಗಳು ಆ ಮಬ್ಬಾದ ಬೆಳಕಿಗೆ ಒಗ್ಗಿದಾಗ, ಕೊಟಡಿಯೊಳಗಿನ ವಿಚಿತ್ರ ಪ್ರಾಣಿಗಳು, ಮೂರ್ತಿಗಳು, ಮತ್ತು ಬಂಗಾರ— ಎಲ್ಲೆಲ್ಲಿಯೂ ಬಂಗಾರದ ಹೊಳಪೇ ಹೊಳಪು, ಮೆಲ್ಲನೆ ನಯನ ಗೋಚರವಾದವು. ನಾನೊಂದು ಕ್ಷಣ ಅಚ್ಚರಿಯಿಂದ ಧಕ್ಕೆತಾಗಿ ಸ್ತಬ್ದನಾಗಿ ನಿಂತಾಗ, ಹತ್ತಿರ ನಿಂತವರಿಗೆ ಅದೊಂದು ನಿರಂತರಕಾಲವಾಗಿ ಕಂಡಿರಬೇಕು. . . .ಇಂತಹದನ್ನು ನಾವು ಕನಸಿನಲ್ಲೂ ನೆನಸಿರಲಿಲ್ಲ, ಕೊಟಡಿ ತುಂಬಾ—ಪ್ರದರ್ಶನಾಲಯವೋ ಎಂಬಂತೆ ವಸ್ತುಗಳೇ ವಸ್ತುಗಳು. ಕಾರ್ಟರ್ರು “ನಿಕ್ಷೇಪ ಅನ್ವೇಷಕನ . . .ಅಪೇಕ್ಷಣೀಯ ಪ್ರಯಾಸವನ್ನು” ಅನುಭವಿಸಿದರೆಂದು ಒಪ್ಪಿದರು.
ಆ ಸಂಶೋಧನೆಯು 3000 ವರ್ಪಗಳ ಪೂರ್ವದಲ್ಲಿ ಬಚ್ಚಿಟ್ಟ ಪುರಾಣಪ್ರಸಿದ್ಧವಾದ ನಿಕ್ಷೇಪಗಳನ್ನು ಬೆಳಕಿಗೆ ತಂದಿತು. ಆದರೆ ಇದಕ್ಕಿಂತಲೂ ಮಹತ್ತಾದ ಒಂದು ನಿಕ್ಷೇಪಕ್ಕಾಗಿ ನಾವು ಹುಡುಕುವಂತೆ ದೇವರು ಬಯಸುತ್ತಾನೆ. ಅದು ಚಿನ್ನ, ಬೆಳ್ಳಿ, ರತ್ನಗಳಿಗಾಗಿ ಯಾವುದೇ ಹುಡುಕುವಿಕೆಗಿಂತ ಎಷ್ಟೋ ಹೆಚ್ಚು ಪ್ರತಿಫಲದಾಯಕ ಅನ್ವೇಷಣೆಯಾಗಿರುವುದು. ಇದು ದಿವ್ಯ ಜ್ಞಾನಕ್ಕಾಗಿ ಹುಡುಕುವಿಕೆಯಾಗಿದೆ, ಮತ್ತು ಅದರಲ್ಲಿರುವ ಅತ್ಯಂತ ಅಮೂಲ್ಯ ನಿಕ್ಷೇಪಗಳಲ್ಲಿ ಒಂದು ಅನಂತಕಾಲದ ಜೀವನವಾಗಿರುವುದು.—ಯೋಹಾನ 17:3.
ಪ್ರಯತ್ನ ಅತ್ಯಾವಶ್ಯಕ
ಭೂಗರ್ಭದಿಂದ ಪುರಾತನ ವಸ್ತು ಸಂಶೋಧನೆಗಾಗಿ ಮಹಾ ಪ್ರಯತ್ನಗಳ ಆವಶ್ಯಕತೆ ಇದೆ. ಆಳವಾದ ನಿಬಿಡ ಕಂದರಗಳಿಗೆ ಅಥವಾ ಅಪಾಯಕಾರಿ ನೀರಿನಾಳಕ್ಕೆ ಇಳಿದು ಅಡಗಿಸಿಟ್ಟ, ಬಚ್ಚಿಟ್ಟ ಅಥವಾ ಮುಳುಗಿದ ನಿಕ್ಷೇಪಗಳಿಗಾಗಿ ಹುಡುಕುವುದು ಅಷ್ಟೇನೂ ಸುಲಭವಿಲ್ಲ. ಆದರೆ ಪ್ರಾಮಾಣಿಕ ನಿಕ್ಷೇಪ ಶೋಧಕರು ಸಂತೋಷದಿಂದ ಅಂತಹ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವು ಸಾರಿ ತೀವ್ರ ಕಷ್ಟಾಪತ್ತುಗಳನ್ನು ಸಹಿಸಿಕೊಂಡು, ಅಸಾಧ್ಯವೆಂದು ಕಾಣುವ ಅಡಿತ್ಡಡೆಗಳನ್ನೂ ನಿಭಾಯಿಸಿಕೊಳ್ಳುತ್ತಾರೆ. ಒಳ್ಳೆದು, ದೈವಿಕ ಜ್ಞಾನದ ಅನ್ವೇಷಣೆಗಾಗಿ ಇದಕ್ಕಿಂತಲೂ ಹೆಚ್ಚಿನ ಪ್ರಯತ್ನವು ಅರ್ಹವಾಗಿರದೇ?
ಬೈಬಲನ್ನು ಅಭ್ಯಸಿಸಲು ನಾವು ಬೇಕಾದ ಪ್ರಯತ್ನಗಳನ್ನು ಮಾಡುವುದಾದರೆ ಮತ್ತು ಅದರಲ್ಲಿರುವ ಮುತ್ತು ರತ್ನಗಳನ್ನು ಶೋಧಿಸಲು ರಚಿತವಾದ ಕ್ರೈಸ್ತ ಸಾಹಿತ್ಯಗಳನ್ನು ನಾವು ಅಧ್ಯಯನ ಮಾಡಿದರೆ ಅಮೂಲ್ಯವಾದ ನಿಕ್ಷೇಪಗಳನ್ನು ಕಂಡುಕೊಳ್ಳಬಲ್ಲೆವು. ಎಡೆಬಿಡದ ಪ್ರಯತ್ನವು ಅತ್ಯಾವಶ್ಯಕ. ಐಹಿಕ ಸಂಪತ್ತಿಗಾಗಿ ಹುಡುಕುವಾಗ ನಾವು ಮೇಲಿಂದ ಮೇಲೆ ಮಾತ್ರವೇ ಅಗೆದು ಅನಂತರ ಬಿಟ್ಟುಬಿಟ್ಟರೆ ಐಶ್ವರ್ಯವಂತರಾಗಲಾರೆವು. ಆತ್ಮಿಕ ನಿಕ್ಷೇಪಗಳಿಗಾಗಿ ಹುಡುಕುವ ವಿಷಯದಲ್ಲಿಯೂ ಹೀಗೆಯೇ. ಮುಂದರಿಯಲು ತೀರಾ ಪ್ರಯಾಸಕರವೆಂದು ನೆನಸುವ ಕಾರಣ ಅಗೆತದ ಆರಂಭದಲ್ಲೀ ನಾವದನ್ನು ಬಿಟ್ಟುಬಿಟ್ಟಲ್ಲಿ ಅದನ್ನು ಗಳಿಸಲಾರೆವು. “ಮೇಲಣಿಂದ ಬರುವ ಜ್ಞಾನವು” ಅದನ್ನು ಗಳಿಸಲು ಯಾರು ಪ್ರಯಾಸ ಪಡುವರೋ ಅವರಿಗಾಗಿ ಇದೆ. (ಯಾಕೋಬ 3:17) ಆದ್ದರಿಂದ, ದೈವಿಕ ಜ್ಞಾನವೆಂಬ ಅಮೂಲ್ಯವಾದ ನಿಕ್ಷೇಪಗಳನ್ನು ಕಂಡುಕೊಳ್ಳಲು ಬೇಕಾದ ಪ್ರಯತ್ನಗಳನ್ನು ನಾವು ಮಾಡಬಾರದೋ? (w89 3/15)
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover and page 3 photo: K. Scholz/H. Armstrong Roberts