ದೇವರ ಭಯದಿಂದ ಪವಿತ್ರತವ್ವನ್ನು ಸಿದ್ಧಿಗೆ ತರುವುದು
“ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತವ್ವನ್ನು ಸಿದ್ಧಿಗೆ ತರೋಣ.”—2 ಕೊರಿಂಥದವರಿಗೆ 7:1.
1. ಉನ್ನತ ಪದವಿಯ ದೇವದೂತರುಗಳು ಯೆಹೋವನ ಪವಿತ್ರತ್ವವನ್ನು ಅಂಗೀಕರಿಸುತ್ತಾರೆಂದು ನಮಗೆ ತಿಳಿಯುವುದು ಹೇಗೆ?
ಯೆಹೋವನು ಪವಿತ್ರ ದೇವರಾಗಿದ್ದಾನೆ. ಪರಲೋಕದ ಅವನ ಉನ್ನತ-ಪದವಿಯ ದೇವದೂತರುಗಳು ಅನಿಶ್ಚಯತೆಯು ಇರದ ಶರ್ತಗಳಿಂದ ಅವನ ಪವಿತ್ರತ್ವವನ್ನು ಘೋಷಿಸುತ್ತಿದ್ದಾರೆ. “ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ.” ಸಾ.ಶ.ಪೂ. ಎಂಟನೆಯ ಶತಮಾನದಲ್ಲಿದ್ದ ಪ್ರವಾದಿ ಯೆಶಾಯನಿಗೆ ಕಂಡು ಬಂದ ದರ್ಶನವೊಂದರಲ್ಲಿ ಸೆರಾಫಿಯರು ಕೊಟ್ಟಂತಹ ಪ್ರಚೋದಕ ಒಂದು ಕರೆಯಾಗಿತ್ತು. ಸಾ.ಶ.ಮೊದಲನೆಯ ಶತಕದ ಅಂತ್ಯದಲ್ಲಿ, ನಾವಿಂದು ಇರುವಂತಹ “ಕರ್ತನ ದಿನದಲ್ಲಿ” ಸಂಭವಿಸಲಿಕ್ಕಿರುವ ದರ್ಶನಗಳನ್ನು ಅಪೊಸ್ತಲ ಯೋಹಾನನು ಕಂಡನು. ಯೆಹೋವನ ಸಿಂಹಾಸನದ ಸುತ್ತಲೂ ನಾಲ್ಕು ಜೀವಿಗಳು ಇರುವುದನ್ನೂ, ಮತ್ತು ಇವುಗಳು ಎಡೆಬಿಡದೆ ಘೋಷಿಸುತ್ತಿದ್ದವು: “ದೇವರಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಆತನು ಸರ್ವಶಕ್ತನೂ, ವರ್ತಮಾನ ಭೂತ ಭವಿಷತ್ಕಾಲಗಳಲ್ಲಿರುವವಂಥವನು.” ಯೆಹೋವನ ಸ್ವರ್ಗೀಯ ಆತ್ಮ ಜೀವಿಗಳ ಮೂರು ಬಾರಿ ಘೋಷಣೆಗಳು ನಿರ್ಮಾಣಿಕನ ಅತ್ಯುತ್ಕೃಷ್ಟ ಪವಿತ್ರತವ್ವನ್ನು ಒತ್ತಿ ಹೇಳುತ್ತವೆ.—ಯೆಶಾಯ 6:2, 3; ಪ್ರಕಟನೆ 1:10; 4:6-8.
ಪವಿತ್ರತ್ವ ಮತ್ತು ಪ್ರತ್ಯೇಕತೆ
2. (ಎ) ಪವಿತ್ರತ್ವದ ಎರಡು ರೂಪಗಳು ಯಾವುವು ಮತ್ತು ಎರಡರಲ್ಲಿಯೂ ಯೆಹೋವನು ಪವಿತ್ರನಾಗಿರುವುದು ಹೇಗೆ? (ಬಿ) ಯೆಹೋವನ ಪವಿತ್ರತ್ವವನ್ನು ಮೋಶೆಯು ಹೇಗೆ ಒತ್ತಿ ಹೇಳಿದ್ದಾನೆ?
2 ಪವಿತ್ರತ್ವ ಅಂದರೆ ಧಾರ್ಮಿಕ ಶುದ್ಧತೆ ಮತ್ತು ನಿಷ್ಕಳಂಕತೆ ಮಾತ್ರವಲ್ಲ, ಬದಲು ಪ್ರತ್ಯೇಕತೆ, ಇಲ್ಲವೇ ಪವಿತ್ರೀಕರಿಸುವುದು ಎಂಬರ್ಥವೂ ಇದೆ. ಯೆಹೋವನು ಶ್ರೇಷ್ಠತಮವಾಗಿ ಶುದ್ಧನೂ, ಯಾ ನಿಷ್ಕಳಂಕನೂ ಆಗಿದ್ದಾನೆ; ಜನಾಂಗಗಳ ಎಲ್ಲಾ ಅಶುದ್ಧ ದೇವರುಗಳಿಂದ ಅವನು ಸಂಪೂರ್ಣವಾಗಿ ಪ್ರತ್ಯೇಕನಾಗಿದ್ದಾನೆ. ಅವನ ಪವಿತ್ರತೆಯ, ಇಲ್ಲವೆ. ಪವಿತ್ರೀಕರಣದ ಈ ರೂಪವು ಮೋಶೆಯು ಹಾಡಿದಾಗ ಒತ್ತಿಹೇಳಲ್ಪಟ್ಟಿತು: “ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನನು ಯಾವನು? ಪರಿಶುದ್ಧತ್ವದಿಂದ ಸರ್ವೋತ್ತಮನೂ . . . ಆಗಿರುವ ನಿನಗೆ ಸಮಾನನು ಎಲ್ಲಿ?”—ವಿಮೋಚನಕಾಂಡ 15:11.
3. ಎಲ್ಲಾ ಇಸ್ರಾಯೇಲ್ಯರು ಯಾವುದರೆಲ್ಲೆಲ್ಲಾ ಪವಿತ್ರರಾಗಿರಬೇಕಿತ್ತು, ಮತ್ತು ಈ ವಿಷಯದಲ್ಲಿ ಯೆಹೋವನು ಅವರಿಗೆ ಸಹಾಯ ಮಾಡಿದ್ದು ಹೇಗೆ?
3 ಭೂಮಿಯ ಮೇಲಿರುವ ಅವನ ಜನರಾದ ಪುರಾತನ ಇಸ್ರಾಯೇಲ್ಯರು ಕೂಡಾ ತದ್ರೀತಿಯಲ್ಲಿ ಪವಿತ್ರರಾಗಿರಬೇಕೆಂದು ಪವಿತ್ರ ದೇವರಾದ ಯೆಹೋವನು ಅಪೇಕ್ಷಿಸಿದನು. ಕೇವಲ ಯಾಜಕರುಗಳಿಂದ ಮತ್ತು ಲೇವ್ಯರಿಂದ ಮಾತ್ರವಲ್ಲ, ಬದಲು ಇಡೀ ಜನಾಂಗದಿಂದ ಇದು ಅಪೇಕ್ಷಿಸಲ್ಪಟ್ಟಿತ್ತು. ಯೆಹೋವನು ಮೋಶೆಗೆ ಅಂದದ್ದು: “ನೀನು ಇಸ್ರಾಯೇಲ್ಯರ ಸಮೂಹದವರಿಗೆ ಹೀಗೆ ಆಜ್ಞಾಪಿಸಬೇಕು—ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು.” (ಯಾಜಕಕಾಂಡ 19:2) ಇದನ್ನು ಮನಸ್ಸಿನಲ್ಲಿಟ್ಟು ಕೊಂಡು ಅವರು ಆತ್ಮೀಕವಾಗಿ, ನೈತಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಮತ್ತು ಕರ್ಮಾನುಸರಣೆಯಲ್ಲಿಯೂ ಶುದ್ಧರಾಗಿ ಉಳಿಯಲು ಸಹಾಯವಾಗುವಂತೆ ಯೆಹೋವನು ಅವರಿಗೆ ನಿಯಮಗಳನ್ನು ಕೊಟ್ಟನು. ಕೊನೆಯದ್ದು ದೇವದರ್ಶನದ ಗುಡಾರದಲ್ಲಿ, ತದನಂತರ ದೇವಾಲಯದಲ್ಲಿ ಶುದ್ಧರಾಗಿರುವುದಕ್ಕೆ ಸಂಬಂಧಿಸಿದ್ದು.
ಪ್ರತ್ಯೇಕಿಸಲ್ಪಟ್ಟ ಒಂದು ಜನಾಂಗ
4, 5. (ಎ) ಮಾಂಸಿಕ ಇಸ್ರಾಯೇಲ್ಯರು ಯಾವ ರೀತಿಯಲ್ಲಿ ಪವಿತ್ರೀಕರಿಸಲ್ಪಟ್ಟ ಒಂದು ಜನಾಂಗವಾಗಿತ್ತು? (ಬಿ) ಆತ್ಮೀಕ ಇಸ್ರಾಯೇಲ್ಯರಿಂದ ಏನನ್ನು ಅಪೇಕ್ಷಿಸಲಾಗಿದೆ, ಮತ್ತು ಅಪೊಸ್ತಲ ಪೇತ್ರನು ಇದನ್ನು ಹೇಗೆ ದೃಢೀಕರಿಸಿದ್ದಾನೆ?
4 ದೇವರ ನಿಯಮಗಳನ್ನು ಇಸ್ರಾಯೇಲ್ಯರು ಎಷ್ಟರ ಮಟ್ಟಿಗೆ ಪರಿಪಾಲಿಸಿದರೋ ಅಷ್ಟರ ಮಟ್ಟಿಗೆ, ಅಧೋಮಟ್ಟಕ್ಕೆ ಇಳಿದ ಅವರ ಸುತ್ತಲಿರುವ ಜನಾಂಗಗಳಿಂದ ಅವರು ಪ್ರತ್ಯೇಕರಾಗಿ ಎದ್ದು ಕಾಣುತ್ತಿದ್ದರು. ಪರಿಶುದ್ಧ ದೇವರಾದ ಯೆಹೋವನ ಸೇವೆಗಾಗಿ ಪವಿತ್ರೀಕರಿಸಲ್ಪಟ್ಟ, ಯಾ ಪ್ರತ್ಯೇಕಿಸಲ್ಪಟ್ಟ ಜನರೋಪಾದಿ ಅವರು ವಿಶಿಷ್ಟವಾಗಿ ಕಾಣುತ್ತಿದ್ದರು. ಮೋಶೆಯು ಅಂದದ್ದು: “ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಜನರಾಗಿದ್ದೀರಲ್ಲವೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸಕ್ವೀಯ ಜನರಾಗುವುದಕ್ಕೆ ಆದುಕೊಂಡನು.”—ಧರ್ಮೋದೇಶಕಾಂಡ 7:6.
5 ಅಂತಹ ಪರಿಶುದ್ಧತೆ ಮತ್ತು ಪ್ರತ್ಯೇಕತೆಯು ಆತ್ಮೀಕ ಇಸ್ರಾಯೇಲ್ಯರಿಂದಲೂ ಅಪೇಕ್ಷಿಸಲಾಗಿದೆ. ಆತ್ಮೀಕ ಇಸ್ರಾಯೇಲ್ಯರಾಗುವುದಕ್ಕಾಗಿ ಆರಿಸಲ್ಪಟ್ಟವರಿಗೆ ಅಪೊಸ್ತಲ ಪೇತ್ರನು ಬರೆದದ್ದು: “ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆಯುವವರಾಗಿರದೆ ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಿಗೆ ತಕ್ಕಂತೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ. ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು ಎಂದು ಬರೆದದೆಯಲ್ಲಾ.”—1 ಪೇತ್ರನು 1:1, 14-16.
6, 7. (ಎ) ಪ್ರಕಟನೆ 7 ನೆಯ ಅಧ್ಯಾಯದಲ್ಲಿ “ಮಹಾ ಸಮೂಹದ” ಸದಸ್ಯರನ್ನು ಹೇಗೆ ವರ್ಣಿಸಲಾಗಿದೆ, ಮತ್ತು ಅವರಿಂದ ಸಮಂಜಸವಾಗಿ ಯಾವುದನ್ನು ಅಪೇಕ್ಷಿಸಲಾಗಿದೆ? (ಬಿ) ಮುಂದಿನ ಪಾರಾಗಳಲ್ಲಿ ಯಾವುದನ್ನು ಪರಿಗಣಿಸಲಾಗಿದೆ?
6 ಪ್ರಕಟನೆ 7 ನೆಯ ಅಧ್ಯಾಯದಲ್ಲಿ “ಮಹಾ ಸಮೂಹ” ದ ಸದಸ್ಯರು “[ಯೆಹೋವನ] ಸಿಂಹಾಸನದ ಮುಂದೆಯೂ, ಯಜ್ಞದ ಕುರಿಯಾದಾತನ ಮುಂದೆಯೂ ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ನಿಂತಿರುವುದನ್ನೂ” ಮತ್ತು ಅವರು “ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಯಾದಾತನ ರಕ್ತದಲ್ಲಿ ತೊಳೆದು ಶುಭ್ರಮಾಡಿಕೊಂಡಿರುವುದನ್ನೂ” ವಿವರಿಸಲಾಗಿದೆ. (ಪ್ರಕಟನೆ 7:9, 14) ಅವರ ಬಿಳೀ ನಿಲುವಂಗಿಗಳು ಯೆಹೋವನ ಮುಂದೆ ಅವರಿಗಿರುವ ಶುದ್ಧ ಮತ್ತು ನೀತಿಯ ನಿಲುವನ್ನು ಸೂಚಿಸುತ್ತವೆ ಮತ್ತು ಕ್ರಿಸ್ತನ ವಿಮೋಚನ ರಕ್ತದ ಮೇಲೆ ಅವರಿಗಿರುವ ವಿಶ್ವಾಸದ ಕಾರಣ ದೇವರು ಇದನ್ನು ಅವರಿಗೆ ನೀಡುತ್ತಾನೆ. ಸ್ಪಷ್ಟವಾಗಿಯೇ, ಕೇವಲ ಅಭಿಷಿಕ್ತ ಕ್ರೈಸ್ತರು ಮಾತ್ರವಲ್ಲ, “ಬೇರೆ ಕುರಿಗಳು” ಕೂಡಾ ಯೆಹೋವನನ್ನು ಸ್ವೀಕಾರ್ಹವಾದ ರೀತಿಯಲ್ಲಿ ಆರಾಧಿಸಲು ತಮ್ಮನ್ನು ಆತ್ಮೀಕವಾಗಿ ಮತ್ತು ನೈತಿಕವಾಗಿ ಶುದ್ಧರಾಗಿಟ್ಟುಕೊಳ್ಳತಕ್ಕದ್ದು.—ಯೋಹಾನ 10:16.
7 ಗತಕಾಲದಲ್ಲಿ ಯೆಹೋವನ ಜನರು ಸ್ವತಹ ತಾವಾಗಿಯೇ ಶುದ್ಧರೂ, ಪವಿತ್ರರೂ ಎಂದು ರುಜುಪಡಿಸಿಕೊಳ್ಳುವ ವಿಧ ಹೇಗೆ ಮತ್ತು ಅದೇ ಸೂತ್ರಗಳು ದೇವ ಜನರಿಗೆ ಇಂದೂ ಯಾಕೆ ಅನ್ವಯಿಸುತ್ತವೆ ಎಂದು ನಾವೀಗ ಪರಿಗಣಿಸೋಣ.
ಆತ್ಮೀಕ ಶುದ್ಧತೆ
8. ಕಾನಾನಿನ ಧರ್ಮಗಳಿಂದ ಇಸ್ರಾಯೇಲ್ಯರು ಯಾವ ಕಾರಣಗಳಿಗಾಗಿ ತಮ್ಮನ್ನು ಸ್ವತಃ ಪ್ರತ್ಯೇಕಿಸಿಕೊಳ್ಳಬೇಕಿತ್ತು?
8 ಇತರ ಜನಾಂಗಗಳ ಅಶುದ್ಧ ಧಾರ್ಮಿಕ ಆಚಾರಗಳಿಂದ ಕಟ್ಟು ನಿಟ್ಟಾಗಿ ಮಾಂಸಿಕ ಇಸ್ರಾಯೇಲ್ಯರು ಸ್ವತಹ ತಾವಾಗಿಯೇ ಪ್ರತ್ಯೇಕರಾಗಿ ಇಟ್ಟುಕೊಳ್ಳಬೇಕಿತ್ತು. ಮೋಶೆಯ ಮೂಲಕ ಯೆಹೋವನು ಇಸ್ರಾಯೇಲ್ಯರಿಗೆ ಅಂದದ್ದು: “ನೀವು ಸೇರುವ ದೇಶದ ನಿವಾಸಿಗಳ ಸಂಗಡ ಯಾವ ಒಡಂಬಡಿಕೆಯನ್ನೂ ಮಾಡಿಕೊಳ್ಳಬಾರದು, ನೋಡಿ ಕೊಳ್ಳಿರಿ; ಮಾಡಿಕೊಂಡರೆ, ಅದು ನಿಮ್ಮ ಮಧ್ಯದಲ್ಲಿ ಉರುಳಿನಂತಿರುವದು. (ಆದುದರಿಂದ) ನೀವು ಅವರ ಬಲಿಪೀಠಗಳನ್ನು ಕೆಡವಿ ಅವರ ಕಲ್ಲು ಕಂಭಗಳನ್ನು (ಅಸಹ್ಯಕರ ಲೈಂಗಿಕ ಆರಾಧನೆಯ ಸಂಬಂಧದಲ್ಲಿ ಉಪಯೋಗಿಸಲ್ಪಡುತ್ತಿದ್ದವು) ಒಡೆದು, ಅವರು ಪವಿತ್ರಸ್ತಂಭಗಳನ್ನು (ಆಶೇರವೆಂಬ ವಿಗ್ರಹಸ್ತಂಭಗಳನ್ನು) ಕಡಿದು ಬಿಡಬೇಕು. ಸ್ವ-ಗೌರವವನ್ನು ಕಾಪಾಡಿಕೊಳ್ಳುವವನು ಎಂಬ ಹೆಸರುಳ್ಳ (ಇಲ್ಲವೇ, “ಸಂಪೂರ್ಣ ಭಕ್ತಿಯನ್ನು ಕೇಳುವ ದೇವರು” ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲ್, ಪಾದಟಿಪ್ಪಣಿ) ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದರ್ದಿಂದ ನೀವು ಬೇರೆ ಯಾವ ದೇವರ ಮುಂದೆಯೂ ಅಡ್ಡಬೀಳಬಾರದು. ನೀವು ಆ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಿಕೊಳ್ಳದಂತೆ ಜಾಗರೂಕರಾಗಿರಿ, ಮಾಡಿಕೊಂಡರೆ ಅವರು ತಮ್ಮ ದೇವತೆಗಳನ್ನು ಪೂಜಿಸಿ ಯಜ್ಞಭೋಜನಗಳನ್ನು ಮಾಡಿ ಅವರ ದೇವರುಗಳೊಂದಿಗೆ ಅನೈತಿಕ ಸಂಭೋಗ ನಡಿಸುವಾಗ, ಅವರಲ್ಲಿ ಒಬ್ಬನು ಯಜ್ಞಭೋಜನಕ್ಕೆ ನಿಮ್ಮನ್ನು ಕರೆದಾನು, ನೀವು ಹೋಗಿ ಭೋಜನ ಮಾಡೀರಿ.”—ವಿಮೋಚನಕಾಂಡ 34:12-15, NW.
9. ಸಾ.ಶ.ಪೂ.537 ರಲ್ಲಿ ಬೆಬಿಲೋನನ್ನು ಬಿಟ್ಟು ಬಂದ ನಂಬಿಗಸ್ತ ಉಳಿಕೆಯವರಿಗೆ ಯಾವ ನಿರ್ದಿಷ್ಟವಾದ ಅಪ್ಪಣೆಗಳನ್ನು ಕೊಡಲಾಯಿತು?
9 ಶತಮಾನಗಳ ನಂತರ, ಬೆಬಿಲೋನಿನಿಂದ ಯೂದಾಯಕ್ಕೆ ಹಿಂತೆರಳುವ ನಂಬಿಗಸ್ತ ಉಳಿಕೆಯವರಿಗೆ ಈ ಕೆಳಗಿನ ಪ್ರವಾದನಾ ನುಡಿಗಳನ್ನು ಸಂಬೋಧಿಸಲು ಯೆಹೋವನು ಯೆಶಾಯ ಪ್ರವಾದಿಗೆ ಪ್ರೇರೇಪಿಸಿದನು: “ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವದನ್ನೂ ಮುಟ್ಟದಿರಿ, ಅದರ ಮಧ್ಯದೊಳಗಿಂದ ತೆರಳಿರಿ, ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ! (ಯೆರೂಸಲೇಮಿನಲ್ಲಿರುವ ದೇವಾಲಯದಲ್ಲಿ ಶುದ್ಧ ಆರಾಧನೆಯನ್ನು ಪುನಃ ಸ್ಥಾಪಿಸಲ್ಪಡುವಾಗ ಬಳಸಲ್ಪಡಲಿದ್ದವು.)—ಯೆಶಾಯ 52:11.
10, 11. (ಎ) ಸಾ.ಶ. ಮೊದಲನೆಯ ಶತಕದ ಆತ್ಮೀಕ ಇಸ್ರಾಯೇಲ್ಯರಿಗೆ ತದ್ರೀತಿಯ ಯಾವ ಅಪ್ಪಣೆಗಳನ್ನು ಕೊಡಲಾಯಿತು? (ಬಿ) ವಿಶೇಷವಾಗಿ 1919 ರಿಂದ ಮತ್ತು 1935 ರಿಂದ ಈ ಅಪ್ಪಣೆಗಳನ್ನು ಹೇಗೆ ಪರಿಪಾಲಿಸಲಾಯಿತು, ಮತ್ತು ಬೇರೆ ಯಾವ ವಿಧದಲ್ಲಿ ಅಭಿಷಿಕ್ತರೂ, ಅವರ ಸಂಗಾತಿಗಳೂ ಆತ್ಮೀಕವಾಗಿ ಶುದ್ಧವಾಗಿ ಇಟ್ಟು ಕೊಳ್ಳುತ್ತಾರೆ?
10 ತದ್ರೀತಿಯಲ್ಲಿ, ಆತ್ಮೀಕ ಇಸ್ರಾಯೇಲ್ಯರು ಮತ್ತು ಅವರ ಸಂಗಾತಿಗಳು, ಈ ಲೋಕದ ವಿಗ್ರಹಾರಾಧಕ ಧರ್ಮಗಳಿಂದ ತಮ್ಮನ್ನು ಸ್ವತಹ ಮಲಿನ ಮಾಡಿಕೊಳ್ಳದಂತೆ ಇಟ್ಟುಕೊಳ್ಳಬೇಕು. ಕೊರಿಂಥದ ಸಭೆಯ ಅಭಿಷಿಕ್ತ ಕ್ರೈಸ್ತರಿಗೆ ಬರೆಯುತ್ತಾ, ಅಪೊಸ್ತಲ ಪೌಲನು ಬರೆದದ್ದು: “ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು? ನಾವು ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವೆಲ್ಲಾ. ಇದರ ಸಂಬಂಧವಾಗಿ ದೇವರು—ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಗಳಾಗಿರುವರು ಎಂದು ಹೇಳಿದ್ದಾನೆ. ಆದುದರಿಂದ ಅನ್ಯ ಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವುದನ್ನೂ ಮುಟ್ಟದಿರಿ; ಆಗ ನಾನು ನಿಮ್ಮನ್ನು ಸೇರಿಸಿಕೊಳ್ಳುವೆನು, ಎಂದು ಯೆಹೋವನು ಹೇಳುತ್ತಾನೆ.”—2 ಕೊರಿಂಥದವರಿಗೆ 6:16, 17.
11 1919 ರಿಂದ ಅಭಿಷಿಕ್ತ ಉಳಿಕೆಯವರ ಶುದ್ಧೀಕರಿಸಲ್ಪಟ್ಟ ಹಾಗೂ ಪರಿಶೋಧಿತರಾದ ಸದಸ್ಯರು ಮಹಾ ಬಾಬೇಲಿನ ಅಶುದ್ಧ, ವಿಗ್ರಹಾರಾಧಕ ಧರ್ಮಗಳಿಂದ ಸ್ವತಂತ್ರಗೊಳಿಸಲ್ಪಟ್ಟಿದ್ದಾರೆ. (ಮಲಾಕಿಯ 3:1-3) ಅವರು ಪರಲೋಕದ ಕರೆಯನ್ನು ಆಲಿಸಿದ್ದಾರೆ: “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟು ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು.” (ಪ್ರಕಟನೆ 18:4) 1935 ರಿಂದ “ಬೇರೆ ಕುರಿಗಳ” ವೃದ್ಧಿಯಾಗುತ್ತಿರುವ ಮಹಾ ಸಮೂಹದವರು ಅದೇ ರೀತಿಯಲ್ಲಿ ಈ ಕರೆಗೆ ಓಗೊಟ್ಟಿರುತ್ತಾರೆ ಮತ್ತು ಅಶುದ್ಧ ಬಾಬೇಲಿನ ಧರ್ಮವನ್ನು ತೊರೆದು ಬಂದಿರುತ್ತಾರೆ. ಅಭಿಷಿಕ್ತರೂ, ಅವರ ಸಂಗಾತಿಗಳೂ ಧರ್ಮಭೃಷ್ಟರ ಕೇಡುಂಟುಮಾಡುವ ಕಲ್ಪನೆಗಳಿಂದ ಪೂರ್ಣವಾಗಿ ಎಲ್ಲಾ ಸಂಪರ್ಕವನ್ನು ಹೋಗಲಾಡಿಸುವುದರ ಮೂಲಕವೂ ತಮ್ಮನ್ನು ಆತ್ಮೀಕವಾಗಿ ಶುದ್ಧವಾಗಿಟ್ಟು ಕೊಂಡಿರುತ್ತಾರೆ.—ಯೋಹಾನ 10:16; 2 ಯೋಹಾನ 9-11.
ನೈತಿಕ ಶುದ್ಧತೆ
12. (ಎ) ಸುತ್ತಲಿನ ಜನಾಂಗಗಳಿಗಿಂತಲೂ ಇಸ್ರಾಯೇಲ್ಯರ ನೈತಿಕ ಮಟ್ಟದ ಅಂತಸ್ತನ್ನು ಯೆಹೋವನು ಯಾವ ನಿಯಮಗಳ ಮೂಲಕ ಮೇಲಕ್ಕೇರಿಸಿದನು? (ಬಿ) ಯಾಜಕತ್ವದ ಸಂಬಂಧದಲ್ಲಿ ಯಾವ ನಿಯಮಗಳು ಕಟ್ಟು ನಿಟ್ಟಾಗಿದ್ದವು?
12 ನಿಯಮದೊಡಂಬಡಿಕೆಯ ಮೂಲಕ, ಯೆಹೋವನು ಅಧೋಗತಿಯ ಸ್ಥಿತಿಗೆ ಇಳಿದ ಸುತ್ತಲಿರುವ ಜನಾಂಗಗಳಿಗಿಂತ ಇಸ್ರಾಯೇಲ್ಯರ ನೈತಿಕ ಮಟ್ಟವನ್ನು ಎತ್ತರಕ್ಕೇರಿಸಿದನು. ಇಸ್ರಾಯೇಲಿನಲ್ಲಿ ವಿವಾಹ ಮತ್ತು ಕೌಟುಂಬಿಕ ಜೀವನವು ಸಂರಕ್ಷಿಸಲ್ಪಟ್ಟ ಒಂದು ಸಂಘಟನೆಗಳಾಗಿದ್ದವು. ದಶಾಜ್ಞೆಗಳಲ್ಲಿ ಏಳನೆಯದು ವ್ಯಭಿಚಾರವನ್ನು ನಿಷೇಧಿಸಲಾಗಿತ್ತು. ವ್ಯಭಿಚಾರ ಮತ್ತು ಹಾದರ ಎರಡನ್ನೂ ಕಠಿಣವಾಗಿ ಶಿಕ್ಷಿಸಲಾಗುತ್ತಿತ್ತು. (ಧರ್ಮೋಪದೇಶಕಾಂಡ 22:22-24) ಅವಿವಾಹಿತ ಕನ್ಯೆಯರನ್ನು ಸಂರಕ್ಷಿಸಲಾಗುತ್ತಿತ್ತು. (ಧರ್ಮೋಪದೇಶಕಾಂಡ 22:28, 29) ಯಾಜಕತ್ವಕ್ಕೆ ಸಂಬಂಧಿಸಿದ ವಿವಾಹದ ನಿಯಮಗಳು ವಿಶೇಷವಾಗಿ ಕಠಿಣವಾಗಿದ್ದವು. ಮಹಾ ಯಾಜಕನ ಕುರಿತಾದರೋ, ತನ್ನ ಹೆಂಡತಿಯಾಗಿ ಅವನು ಒಬ್ಬ ಶುದ್ಧಕನ್ಯೆಯನ್ನು ಆರಿಸಬೇಕಿತ್ತು.— ಯಾಜಕಕಾಂಡ 21:6, 7, 10, 13.
13. ಕ್ರಿಸ್ತನ “ಮದಲಗಿತ್ತಿಯ” ಸದಸ್ಯರನ್ನು ಯಾರಿಗೆ ಹೋಲಿಸಲಾಗಿದೆ, ಮತ್ತು ಯಾಕೆ?
13 ತದ್ರೀತಿಯಲ್ಲಿ ಶ್ರೇಷ್ಠ ಮಹಾ ಯಾಜಕನಾದ ಯೇಸು ಕ್ರಿಸ್ತನಿಗೆ 1,44,000 ಅಭಿಷಿಕ್ತ ಕ್ರೈಸ್ತರಿಂದೊಡಗೂಡಿದ ಒಬ್ಬಳು ಮದಲಗಿತ್ತಿಯಿದ್ದಾಳೆ, ಅವರನ್ನು “ಕನ್ಯೆಯರಿಗೆ” ಸರಿದೂಗಿಸಲಾಗಿದೆ. (ಪ್ರಕಟನೆ 14:1-5; 21:9) ಅವರು ತಮ್ಮನ್ನು ಸೈತಾನನ ಪ್ರಪಂಚದಿಂದ ತಮ್ಮನ್ನು ಮಲಿನಗೊಳ್ಳಲ್ಪಡದಂತೆ ದೂರವಿಟ್ಟು ಕೊಳ್ಳುತ್ತಾರೆ ಮತ್ತು ಬೋಧನೆಗಳಲ್ಲಿಯೂ, ನೈತಿಕವಾಗಿಯೂ ಪರಿಶುದ್ಧರಾಗಿಟ್ಟು ಕೊಳ್ಳುತ್ತಾರೆ. ಅಪೊಸ್ತಲ ಪೌಲನು ಕೊರಿಂಥದಲ್ಲಿರುವ ಅಭಿಷಿಕ್ತ ಕ್ರೈಸ್ತರಿಗೆ ಬರೆದದ್ದು: “ಯಾಕಂದರೆ ದೇವರಲ್ಲಿರುವಂಥ ಚಿಂತೆಯಿಂದಲೇ ನಾನು ನಿಮ್ಮ ವಿಷಯದಲ್ಲಿ ಚಿಂತಿಸುತ್ತೇನೆ. ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ಧ ಕನ್ಯೆಯಂತೆ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯಾಮಾಡಿದ್ದೇನಲ್ಲಾ.” (2 ಕೊರಿಂಥದವರಿಗೆ 11:2) ಪೌಲನು ಕೂಡಾ ಬರೆದದ್ದು: “ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ್ದ ಪ್ರಕಾರವೇ, ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆ ಪಡಿಸುವದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು. ಅದನ್ನು ಕಳಂಕ, ಸುಕ್ಕು ಮುಂತಾದ್ದೊಂದೂ ಇಲ್ಲದ ಕನ್ನಿಕೆಯೋ ಎಂಬಂತೆ ಪರಿಶುದ್ಧವೂ ನಿರ್ದೋಷವೂ ಮಹಿಮೆಯುಳ್ಳದ್ದೂ ಆಗಿರುವ ಸಭೆಯನ್ನಾಗಿ ತನ್ನೆದುರಿನಲ್ಲಿ ನಿಲ್ಲಿಸಿ ಕೊಳ್ಳಬೇಕೆಂದು ವಾಕ್ಯೋಪದೇಶ ಸಹಿತವಾದ ಜಲಸ್ನಾನವನ್ನು ಮಾಡಿಸಿ ಶುದ್ಧಮಾಡಿದನು.”—ಎಫೆಸದವರಿಗೆ 5:25-27.
14, 15. (ಎ) ಮದಲಗಿತ್ತಿ ವರ್ಗದವರ ಆತ್ಮೀಕ ಶುದ್ಧತೆಯೊಂದಿಗೆ ಯಾವುದು ಜತೆಗೂಡಿರಲೇ ಬೇಕು, ಮತ್ತು ಯಾವ ವಚನ ಇದನ್ನು ತೋರಿಸುತ್ತದೆ? (ಬಿ) ಬೇರೆ ಕುರಿಗಳಿಗೂ ತದ್ರೀತಿಯ ನೈತಿಕ ಶುದ್ಧತೆಯ ಆವಶ್ಯಕತೆಗಳು ಅನ್ವಯಿಸುತ್ತವೆ ಎಂದು ಯಾಕೆ ವಿದಿತವಾಗುತ್ತದೆ?
14 ಕ್ರಿಸ್ತನ ಮದಲಗಿತ್ತಿಯ ಈ ಆತ್ಮೀಕ ಶುದ್ಧತೆಯು ಅದರ ಸದಸ್ಯರ ವತಿಯಿಂದ ನೈತಿಕ ಶುದ್ಧತೆಯಿಂದೊಳಗೂಡಿರುತ್ತದೆ. ಅಪೊಸ್ತಲ ಪೌಲನು ಹೇಳಿದ್ದು: “ಮೋಸಹೋಗಬೇಡಿರಿ. ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು . . . ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. ನಿಮ್ಮಲ್ಲಿ ಕೆಲವರು ಅಂಥವರಾಗಿದ್ದೀರಿ; ಆದರೂ ನೀವು ತೊಳೆದುಕೊಂಡಿರಿ, ನಿಮ್ಮನ್ನು ಪವಿತ್ರೀಕರಿಸಿಕೊಂಡಿರಿ.”—1 ಕೊರಿಂಥದವರಿಗೆ 6:9-11.
15 ಯೆಹೋವನು ವಾಗ್ದಾನಿಸಿದ ತನ್ನ ನೂತನಾಕಾಶಮಂಡಲ ಮತ್ತು ನೂತನ ಭೂಮಂಡಲದಿಂದ ಯಾರನ್ನು ಹೊರಗೆ ಇಡುತ್ತಾನೆ ಎಂಬದನ್ನು ನಾವು ಗಮನಿಸುವಾಗ, ಅಂತಹ ನೈತಿಕ ಶುದ್ಧತೆಯ ಆವಶ್ಯಕತೆಗಳು ಬೇರೆ ಕುರಿಗಳಿಗೂ ಅನ್ವಯಿಸಲ್ಪಡುತ್ತವೆ ಎಂದು ವಿದಿತವಾಗುತ್ತದೆ. ನಾವು ಓದುವುದು: “ಆದರೆ ಅಸಹ್ಯವಾದದ್ದರಲ್ಲಿ ಸೇರಿದವರು, ಕೊಲೆಗಾರರು ಮತ್ತು ಜಾರರು . . . ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳುರಿಯುವ ಕೆರೆಯೇ; ಅದು ಎರಡನೆಯ ಮರಣವು.”—ಪ್ರಕಟನೆ 21:1, 8.
ಮಾನ್ಯತೆಯ ವಿವಾಹ
16, 17. (ಎ) ಅವಿವಾಹಿತತನವು ನೈತಿಕ ಶುದ್ಧತೆಯ ಆವಶ್ಯಕತೆಯಲ್ಲ ಎಂದು ಯಾವ ವಚನಗಳು ತೋರಿಸುತ್ತವೆ? (ಬಿ) ವಿವಾಹ ಸಂಗಾತಿಯ ಆರಿಸುವಿಕೆಯ ಸಂಬಂಧದಲ್ಲಿ ಯೋಗ್ಯ ದೇವ ಭಯವನ್ನು ಕ್ರೈಸ್ತನೊಬ್ಬನು ಹೇಗೆ ತೋರಿಸ ಬಹುದು, ಮತ್ತು ಅಪೊಸ್ತಲೀಕ ನಿರ್ಬಂಧವನ್ನು ಕಡೆಗಣಿಸುವುದು ಯಾಕೆ ಅವಿವೇಕತನದ್ದಾಗಿರುತ್ತದೆ?
16 ನೈತಿಕವಾಗಿ ಶುದ್ಧರಾಗಿ ಉಳಿದು ಕೊಳ್ಳಲು, ಮದಲಗಿತ್ತಿಯ ವರ್ಗದವರ ಅಭಿಷಿಕ್ತ ಸದಸ್ಯರು ಮತ್ತು ಬೇರೆ ಕುರಿಯವರು ಅವಿವಾಹಿತರಾಗಿ ಇರಬೇಕೆಂದಿಲ್ಲ. ಕಡ್ಡಾಯ ಬ್ರಹ್ಮಚರ್ಯವು ಅಶಾಸ್ತ್ರೀಯವಾಗಿರುತ್ತದೆ. (1 ತಿಮೊಥಿ 4:1-3) ವಿವಾಹಬಂಧನದೊಳಗಣ ಲೈಂಗಿಕ ಸಂಬಂಧಗಳು ಅಶುದ್ಧವಲ್ಲ. ದೇವರ ವಾಕ್ಯವು ಅನ್ನುವುದು: “ದಾಂಪತ್ಯವು ಮಾನ್ಯವಾದದ್ದೆಂದು ಎಲ್ಲರೂ ಎಣಿಸಬೇಕು; ಗಂಡಹೆಂಡತಿಯರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ, ವ್ಯಭಿಚಾರಿಗಳಿಗೂ ದೇವರು ನ್ಯಾಯ ತೀರಿಸುವನೆಂದು ತಿಳುಕೊಳ್ಳಿರಿ.”—ಇಬ್ರಿಯರಿಗೆ 13:4.
17 ಆದಾಗ್ಯೂ, ‘ದೇವರ ಭಯದಿಂದ ಪವಿತ್ರತ್ವವನ್ನು ಸಿದ್ಧಿಗೆ ತರಲು’ ಬಯಸುವ ಕ್ರೈಸ್ತನೊಬ್ಬನು ಅವನು ಇಲ್ಲವೇ ಅವಳು ಮೆಚ್ಚುವ ಯಾರನ್ನೇ ಮದುವೆಯಾಗಲು ಸ್ವಚ್ಛಂದನಾಗಿದ್ದೇನೆ/ಳಾಗಿದ್ದೇನೆ ಎಂದು ಭಾವಿಸಕೂಡದು. ‘ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರೋಣ’ ಎಂದು ತನ್ನ ಜತೆ ಕ್ರೈಸ್ತರಿಗೆ ಬುದ್ಧಿವಾದವನ್ನೀಯುವ ಸ್ವಲ್ಪ ಮೊದಲು ಅಪೊಸ್ತಲ ಪೌಲನು ಬರೆದದ್ದು: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? . . . ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆ ಏನು?” (2 ಕೊರಿಂಥದವರಿಗೆ 6:14, 15; 7:1) ಯೆಹೋವನ ಪ್ರತ್ಯೇಕಿಸಲ್ಪಟ್ಟ ಮತ್ತು ಶುದ್ಧ ಜನರ ಒಬ್ಬ ಸದಸ್ಯನೋಪಾದಿ, ವಿವಾಹವಾಗಲು ಇಚ್ಛಿಸುವ ಕ್ರೈಸ್ತ ಪುರುಷನು ಇಲ್ಲವೇ ಸ್ತ್ರೀಯು “ಕರ್ತನಲ್ಲಿ ಮಾತ್ರ ಮದುವೆಯಾಗಿರಿ” ಅಂದರೆ ಸಮರ್ಪಿತ, ಸ್ನಾನಿತ ಮತ್ತು ಯೆಹೋವನ ಒಬ್ಬ ನಂಬಿಗಸ್ತ ಸೇವಕರಲ್ಲೊಬ್ಬನನ್ನು/ಳನ್ನು ಆರಿಸುವುದರ ಮೂಲಕ ಈ ಅಪೊಸ್ತಲೀಕ ನಿರ್ಬಂಧವನ್ನು ಸ್ವೀಕರಿಸುತ್ತಾನೆ/ತ್ತಾಳೆ. (1 ಕೊರಿಂಥದವರಿಗೆ 7:39) ಗತಕಾಲಗಳಂತೆ, ಇಂದೂ ಕೂಡಾ, ಈ ಶಾಸ್ತ್ರೀಯ ಬುದ್ಧಿವಾದವನ್ನು ದೇವರ ಜನರಲ್ಲಿರುವ ಸಮರ್ಪಿತರು ಕಡೆಗಣಿಸುವುದು ಖಂಡಿತವಾಗಿಯೂ ಅವಿವೇಕತನದ್ದಾಗಿರುತ್ತದೆ. (ಹೋಲಿಸಿರಿ ಧರ್ಮೋಪದೇಶಕಾಂಡ 7:3, 4; ನೆಹೆಮೀಯ 13:23-27.) ನಮ್ಮ ಮಹಾ ದಣಿಯಾದ ಯೆಹೋವ ದೇವರಿಗೆ ಸಮಗ್ರವಾದ ಭಯ ತೋರಿಸುವ ಕ್ರಮ ಇದಲ್ಲ.—ಮಲಾಕಿಯ 1:6.
18. ತಮ್ಮ ಮದುವೆಯನ್ನು ಮಾನ್ಯತೆಯದ್ದಾಗಿ ಕ್ರೈಸ್ತರು ಬೇರೆ ಯಾವ ರೀತಿಯಲ್ಲಿ ಇಟ್ಟುಕೊಳ್ಳಬಹುದು?
18 ಇನ್ನು ಹೆಚ್ಚಾಗಿ, ಇಸ್ರಾಯೇಲಿನಲ್ಲಿ ವಿವಾಹ ಬಂಧನದೊಳಗಣ ಲೈಂಗಿಕ ಚಟುವಟಿಕೆಗಳ ಮೇಲೂ ನಿಯಮಗಳ ಮೂಲಕ ಸೀಮಿತವನ್ನು ಹಾಕಲಾಗಿತ್ತು. ಅವಳ ಮಾಸಿಕ ಸ್ರಾವದ ಸಮಯದಲ್ಲಿ ಗಂಡನೊಬ್ಬನು ತನ್ನ ಹೆಂಡತಿಯೊಂದಿಗೆ ಸಂಗಮಿಸುವುದರಿಂದ ದೂರವಿರಬೇಕಿತ್ತು. (ಯಾಜಕಕಾಂಡ 15:24; 18:19; 20:18) ಇದು ಇಸ್ರಾಯೇಲ್ಯರಲ್ಲಿದ್ದ ಪುರುಷರಿಂದ ಪ್ರೀತಿಯ ಪರಿಗಣನೆ ಮತ್ತು ಸ್ವ-ನಿಯಂತ್ರಣವನ್ನು ಅಪೇಕ್ಷಿಸಲಾಗಿತ್ತು. ಕ್ರೈಸ್ತರು ತಮ್ಮ ಹೆಂಡತಿಯರೆಡೆಗೆ ಏನಾದರೂ ಕಡಿಮೆ ಪರಿಗಣನೆ ಉಳ್ಳವರಾಗಬೇಕೋ? ತಮ್ಮ ಹೆಂಡತಿಯರೆಡೆಗೆ ಕ್ರೈಸ್ತ ಗಂಡಂದಿರು “ವಿವೇಕತನದಿಂದ” ನಡೆದು ಕೊಳ್ಳಬೇಕೆಂದು “ಅಂದರೆ ಬಲಹೀನ ಪಾತ್ರೆಯೆಂದು” ತಿಳಿದು, ಅವಳ ದೇಹ ಪ್ರಕೃತಿಯ ಜ್ಞಾನವಿದ್ದವರಾಗಿ ಒಗತನ ಮಾಡಬೇಕೆಂದು ಅಪೊಸ್ತಲ ಪೇತ್ರನು ಹೇಳಿದ್ದಾನೆ.—1 ಪೇತ್ರನು 3:7.
“ಪರಿಶುದ್ಧ ಮಾರ್ಗದಲ್ಲಿ” ನಡೆಯುವುದು
19, 20. (ಎ) ಮಾನವ ಕುಲದ ಅಧಿಕಾಂಶ ಜನರು ಹಿಂಬಾಲಿಸುವ ಅಗಲವಾದ ಮಾರ್ಗದ ಕುರಿತು ವಿವರಿಸಿರಿ. (ಬಿ) ಸೈತಾನನ ಲೋಕದಿಂದ ಯೆಹೋವನ ಜನರು ಹೇಗೆ ಪ್ರತ್ಯೇಕರಾಗಿರ ಬೇಕು? (ಸಿ) ದೇವಜನರು ಯಾವ ರಾಜಮಾರ್ಗವನ್ನು ಹಿಂಬಾಲಿಸುತ್ತಿದ್ದಾರೆ, ಯಾವಾಗ ಅದು ತೆರೆಯಲ್ಪಟ್ಟಿತು, ಮತ್ತು ಅದರಲ್ಲಿ ಹೋಗಲು ಯಾರಿಗೆ ಮಾತ್ರ ಅನುಮತಿಸಲಾಗಿದೆ?
19 ಸೈತಾನನ ಪ್ರಪಂಚದಿಂದ ಯೆಹೋವನ ಜನರನ್ನು ಪ್ರತ್ಯೇಕಿಸುವ ವೃದ್ಧಿಯಾಗುವ ಅಂತರವನ್ನು ಮೇಲಿನ ಸಂಗತಿಗಳು ಒತ್ತಿಹೇಳುತ್ತವೆ. ಇಂದಿನ ವಿಷಯಗಳ ಲೌಕಿಕ ವ್ಯವಸ್ಥೆಯ ಹೆಚ್ಚೆಚ್ಚು ಸ್ವೇಚ್ಛಾಚಾರದ್ದೂ, ಭೋಗಾಸಕ್ತವೂ ಆಗಿರುತ್ತದೆ. ಯೇಸು ಅಂದದ್ದು: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ.” (ಮತ್ತಾಯ 7:13) ಈ ಅಗಲವಾದ ಮಾರ್ಗವನ್ನು ಮಾನವಕುಲದ ಅಧಿಕಾಂಶ ಜನರು ಹಿಂಬಾಲಿಸುತ್ತಾ ಇದ್ದಾರೆ. ಅಪೊಸ್ತಲ ಪೇತ್ರನನ್ನು ಉಲ್ಲೇಖಿಸುವುದಾದರೆ, ಅದು “ಬಂಡುತನ, ದುರಾಶೆ, ಕುಡಿಕತನ, ದುಂದೌತಣ, ಮದ್ಯಪಾನಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ,” ಯ ಮಾರ್ಗವಾಗಿರುತ್ತದೆ, ಯಾ “ಅಪರಿಮಿತವಾದ ಪಟಿಂಗತನ” ಕ್ಕೆ ನಡಿಸುವ ಮಾರ್ಗವದಾಗಿರುತ್ತದೆ. (1 ಪೇತ್ರನು 4:3, 4) ಅದರ ಅಂತ್ಯವು ನಾಶವೇ.
20 ಇನ್ನೊಂದು ಪಕ್ಕದಲ್ಲಿ ದೇವರ ಜನರು ಭಿನ್ನವಾದ ಮಾರ್ಗದಲ್ಲಿ, ಶುದ್ಧ ಜನರಿಂದ ಹಿಂಬಾಲಿಸಲ್ಪಡುವ ಶುದ್ಧಮಾರ್ಗವೊಂದರಲ್ಲಿನಡೆಯುತ್ತಿದ್ದಾರೆ. ಈ ಅಂತ್ಯದ ಸಮಯದಲ್ಲಿ ಈ ಮಾರ್ಗವು ತೆರೆಯಲ್ಪಡುವುದರ ಕುರಿತು ಪ್ರವಾದಿ ಯೆಶಾಯನು ಮುನ್ನುಡಿದಿದ್ದನು: “ಅಲ್ಲಿ ರಾಜಮಾರ್ಗವಿರುವುದು. ಹೌದು (ಹೋಗಿ ಬರುವ) ದಾರಿ; ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವುದು; ಯಾವ ಅಶುದ್ಧನೂ ಅಲ್ಲಿ ನಡೆಯನು.” (ಯೆಶಾಯ 35:8) ಈ ಪ್ರವಾದನೆಯ ಕುರಿತು ಮಾತಾಡುತ್ತಾ, ವರ್ಲ್ಡ್ವೈಡ್ ಸೆಕ್ಯುರಿಟಿ ಅಂಡರ್ ದ “ಪ್ರಿನ್ಸ್ ಆಫ್ ಪೀಸ್“ ಎಂಬ ಪುಸ್ತಕದಲ್ಲಿ ಹೇಳುವುದು: “ದೇವರ ಸಂತೋಷಭರಿತ ಸೇವಕರಿಗೆ 1919 ರಲ್ಲಿ ಒಂದು ಸಾಂಕೇತಿಕ ರಾಜಮಾರ್ಗವು ತೆರೆಯಲ್ಪಟ್ಟಿತು. ಯೆಹೋವನ ನೋಟದಲ್ಲಿ ಪವಿತ್ರರಾಗಿರಲು ಬಯಸುವವರು, ‘ಈ ರಾಜಮಾರ್ಗ’ ‘ಪರಿಶುದ್ಧ ಮಾರ್ಗ’ ದಲ್ಲಿ ನಡೆಯುವವರಾಗಿದ್ದಾರೆ. . . . ಇಂದು, ‘ವಿಷಯಗಳ ವ್ಯವಸ್ಥೆಯ ಅಂತ್ಯದ’ ಕೊನೆಯಲ್ಲಿ ದೈವಿಕವಾಗಿ ಒದಗಿಸಿದ ‘ರಾಜಮಾರ್ಗವು’ ಇನ್ನೂ ತೆರೆದಿರುವುದು. ಗಣ್ಯತೆಯ ಜನರ ಸಮೂಹಗಳು . . . ‘ಪರಿಶುದ್ಧ ಮಾರ್ಗ’ ದಲ್ಲಿ, ಆತ್ಮೀಕ ಪರದೈಸದ ಪಥದಲ್ಲಿ ಪ್ರವೇಶಿಸುತ್ತಾರೆ.”a
21. ಪಿಶಾಚನ ಗುಂಪಿನಿಂದ ಯೆಹೋವನ ಸೇವಕರು ಹೇಗೆ ಮತ್ತು ಯಾಕೆ ತಮ್ಮನ್ನು ಸ್ವತಃ ಪ್ರತ್ಯೇಕಿಸಿ ಕೊಳ್ಳುತ್ತಾರೆ, ಮತ್ತು ಮುಂದಿನ ಸಂಚಿಕೆಯ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?
21 ಹೌದು, ಆತ್ಮೀಕ ಇಸ್ರಾಯೇಲ್ಯರ ಅಭಿಷಿಕ್ತ ಉಳಿಕೆಯವರು ಮತ್ತು ಅವರ ಸಂಗಾತಿಗಳಾದ ಬೇರೆ ಕುರಿಗಳು ಇಂದು ಸೈತಾನನ ಲೋಕದಿಂದ ಒಂದು ಜನಾಂಗದೋಪಾದಿ ಪ್ರತ್ಯೇಕಿಸಲ್ಪಟ್ಟವರಾಗಿದ್ದು, ತಮ್ಮನ್ನು ವಿಶಿಷ್ಟವಾಗಿ ಇಟ್ಟುಕೊಂಡಿರುತ್ತಾರೆ. ಪಿಶಾಚನ ಗುಂಪು ನಡೆಯುತ್ತಿರುವ “ನಾಶಕ್ಕೆ ಹೋಗುವ . . . ದೊಡ್ಡದೂ, ಅಗಲವೂ” ಆಗಿರುವ ಮಾರ್ಗದಲ್ಲಿ ಪವಿತ್ರವಾದದ್ದು ಯಾವುದೂ ಅಲ್ಲಿರುವುದಿಲ್ಲ. ಆತ್ಮೀಕವಾಗಿ ಮತ್ತು ನೈತಿಕವಾಗಿ ಅಶುದ್ಧರಾಗಿರುವವರು ಮಾತ್ರ ಅದರಲ್ಲಿ ಹೋಗುವುದಲ್ಲ, ಅಧಿಕಾಂಶ ಸಂಗತಿಗಳಲ್ಲಿ ಅವರು ಶಾರೀರಿಕವಾಗಿಯೂ ಅಶುದ್ಧರೂ ಆಗಿ ಇರುತ್ತಾರೆ ಮತ್ತು ಸ್ವಲ್ಪವೇ ಹೇಳುವುದಾದರೆ, ಅವರ ತೋರಿಸುವಿಕೆಯು ಸಹಿತ ಕೊಳಕಿನದ್ದೂ ಆಗಿರುತ್ತದೆ. ಆದರೂ, ಅಪೊಸ್ತಲ ಪೌಲನು ಹೇಳುವುದು: “ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿ ಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರೋಣ.” (2 ಕೊರಿಂಥದವರಿಗೆ 7:1) ಯಾವ ವಿಧಗಳಲ್ಲಿ ಮನಸ್ಸು ಮತ್ತು ಶರೀರದಲ್ಲಿ ದೇವ ಜನರು ಶುದ್ಧರಾಗಿರಲು ಜಾಗರೂಕರಾಗಿರಬೇಕು ಎಂಬದನ್ನು ಮುಂದಿನ ಕಾವಲಿನಬುರುಜು ಸಂಚಿಕೆಯ ಲೇಖನದಲ್ಲಿ ಗಮನಿಸಲಾಗುವುದು. (w89 6/1)
[ಅಧ್ಯಯನ ಪ್ರಶ್ನೆಗಳು]
a ಅಧ್ಯಾಯ 16, ಪುಟಗಳು 134-5.
ಪರಾಮರ್ಶೆಗೆ ವಿಷಯಗಳು
□ ಪವಿತ್ರತ್ವದ ಎರಡು ರೂಪಗಳು ಯಾವವು, ಮತ್ತು ಯೆಹೋವನು ಅತ್ಯುತ್ಕೃಷ್ಟ ಪವಿತ್ರತೆಯವನು ಎಂದು ಹೇಳಸಾಧ್ಯವಿದೆ, ಯಾಕೆ?
□ ಇಸ್ರಾಯೇಲ್ಯರು ಯಾವ ಎರಡು ವಿಧಗಳಲ್ಲಿ ಸ್ವತಃ ಒಂದು ಪವಿತ್ರ ಜನಾಂಗವೆಂದು ಹೇಗೆ ರುಜುಪಡಿಸಿ ತೋರಿಸಬೇಕಿತ್ತು?
□ ಆತ್ಮೀಕ ಇಸ್ರಾಯೇಲ್ಯರಿಂದ ಮತ್ತು ಅವರು ಸಂಗಾತಿಗಳಾದ ಬೇರೆ ಕುರಿಗಳಿಂದ ಯಾವುದನ್ನು ಅಪೇಕ್ಷಿಸಲಾಗಿದೆ?
□ ವಿವಾಹದ ಸಂಗಾತಿಯ ಆರಿಸುವಿಕೆಯಲ್ಲಿ ನಮ್ಮ ದೇವಭಯವು ಹೇಗೆ ಪ್ರಭಾವ ಬೀರಬೇಕು?
□ ಯಾವ ಎರಡು ಮಾರ್ಗಗಳನ್ನು ಹಿಂಬಾಲಿಸಸಾಧ್ಯವಿದೆ, ಮತ್ತು ಒಂದು ಸ್ಪಷ್ಟ ಆರಿಸುವಿಕೆ ಯಾಕೆ ಮಾಡತಕ್ಕದ್ದು?
[ಪುಟ 24 ರಲ್ಲಿರುವ ಚಿತ್ರ]
ದೇವರ ವಾಕ್ಯವು ಹೇಳುವುದು: “ವಿವಾಹವು ಮಾನ್ಯತೆಯದ್ದಾಗಿರಲಿ”