ಹಿತಕರವಾದ ಪ್ರಮೋದವನದಲ್ಲಿ ಮಹಾ ಮಾನವ ಪ್ರತೀಕ್ಷೆಗಳು
“ದೇವರು ಅವರನ್ನು ಆಶೀರ್ವದಿಸಿ—ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ. ಭೂಮಿಯನ್ನು ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ ಅಂದನು.”—ಆದಿಕಾಂಡ 1:28.
1, 2. ಮಾನವರ ಸಂಬಂಧದಲ್ಲಿ ಯಾವ ಅಂತ್ಯಫಲಕ್ಕಾಗಿ ಯೆಹೋವನು ಪ್ರೀತಿಯಿಂದ ಕಾರ್ಯನಡಿಸುತ್ತಿದ್ದನು ಮತ್ತು ಆದಾಮನಿಗೆ ಯಾವ ಕೆಲಸದ ನೇಮಕವನ್ನು ಆತನು ಕೊಟ್ಟನು?
“ದೇವರು ಪ್ರೀತಿಸ್ವರೂಪಿ” ಎಂದು ಪವಿತ್ರ ಬೈಬಲು ನಮಗನ್ನುತ್ತದೆ. ಅವನು ಪ್ರೀತಿಯಿಂದ ಮತ್ತು ನಿಸ್ವಾರ್ಥದಿಂದ ಮಾನವ ಕುಲದಲ್ಲಿ ಆಸಕ್ತನು ಮತ್ತು ಭೂಪ್ರಮೋದವನದಲ್ಲಿ ಅವರು ಸದಾ ಆರೋಗ್ಯವುಳ್ಳ ಶಾಂತಿಯ ಜೀವನವನ್ನು ಅನುಭವಿಸುವಂತೆ ಆತನು ಅವಿಶ್ರಾಂತ ಕಾರ್ಯ ನಡಿಸುತ್ತಿದ್ದಾನೆ. (1 ಯೋಹಾನ 4:16; ಕೀರ್ತನೆ 16:11 ಹೋಲಿಸಿ.) ಈ ಮೊದಲ ಮನುಷ್ಯನಾದ ಪರಿಪೂರ್ಣ ಆದಾಮನಿಗೆ ಶಾಂತಿಯ ಜೀವಿತವಿತ್ತು ಮತ್ತು ಆಸಕ್ತಿಯುಳ್ಳ, ಆನಂದಕರ ಕೆಲ್ಸವಿತ್ತು. ಸುಂದರವಾದ ಏದೆನ್ ತೋಟವನ್ನು ವ್ಯವಸಾಯ ಮಾಡಲು ಮನುಷ್ಯನ ನಿರ್ಮಾಣಿಕನು ಅವನನ್ನು ನೇಮಿಸಿದ್ದನು. ಮನುಷ್ಯನ ನಿರ್ಮಾಣಿಕನು ಅವನಿಗೀಗ ಇನ್ನೊಂದು ಕೆಲಸವನ್ನು, ಒಂದು ವಿಶೇಷ ಪಂಥಾಹ್ವಾನದ ನೇಮಕವನ್ನು ಕೊಟ್ಟನೆಂದು ಕೆಳಗಿನ ದಾಖಲೆಯು ನಡೆದ ಸಂಗತಿಯನ್ನು ತಿಳಿಸುತ್ತಾ ಅನ್ನುವದು:
2 “ಆಗ ಯೆಹೋವನು ಎಲ್ಲಾ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ ಮಣ್ಣಿನಿಂದ ನಿರ್ಮಿಸಿ ಇವುಗಳಿಗೆ ಆ ಮನುಷ್ಯನು ಎನು ಹೆಸರಿಡುವನೋ ನೋಡೋಣ ಎಂದು ಅವನ ಬಳಿಗೆ ಬರಮಾಡಿದನು. ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಹೆಸರಾಯಿತು. ಹೀಗೆ ಆ ಮನುಷ್ಯನು ಎಲ್ಲಾ ಪಶುಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಹೆಸರಿಟ್ಟನು.”—ಆದಿಕಾಂಡ2:19, 20.
3. ಆದಾಮನ ಮತ್ತು ಪ್ರಾಣಿಜೀವಿಗಳ ನಡುವೆ ಯಾವ ಭಯವೂ ಇರಲಿಲ್ಲವೇಕೆ?
3 ಆ ಮನುಷ್ಯನು ಕುದುರೆಯನ್ನು ಸುಸ್, ಹೋರಿಯನ್ನು ಶೋರ್, ಕುರಿಯನ್ನು ಸೆಹ್, ಆಡನ್ನು ಎಸ್ಜ್. ಪಕ್ಷಿಯನ್ನು ಒಫ್, ಪಾರಿವಾಳವನ್ನು ಯೋಹ್ನಾ, ಬಾತುಕೋಳಿಯನ್ನು ಟುಕ್ಕೀ, ಸಿಂಹವನ್ನು ಆರ್ಯೆ ಅಥವಾ ಅರೀ, ಕರಡಿಯನ್ನು ಡಾವ್, ಕಪಿಯನ್ನು ಕಾಫ್ವ್, ನಾಯಿಯನ್ನು ಕೇಲೆವ್, ಸರ್ಪವನ್ನು ನಾಕಾಶ್, ಮುಂತಾದ ಹೆಸರುಗಳಿಂದ ಮನುಷ್ಯನು ಕರೆದನು.a ತೋಟದೊಳಗಿಂದ ಹರಿಯುತ್ತಿದ್ದ ನದಿಯ ಬಳಿಗೆ ಹೋದಾಗ ಅವನು ಮೀನನ್ನು ಕಂಡನು. ಮೀನಿಗೆ ಅವನು ಡಗಾ ಎಂಬ ಹೆಸರನ್ನು ಕೊಟ್ಟನು. ಆ ಶಸ್ತ್ರಹೀನ ಮನುಷ್ಯನಿಗೆ ಈ ಸಾಕು ಮತ್ತು ಕಾಡು ಪ್ರಾಣಿಗಳ, ಅಥವಾ ಪಕ್ಷಿಗಳ ಯಾವ ಭಯವೂ ಆಗಲಿಲ್ಲ ಮತ್ತು ಅವುಗಳಿಗೆ ಅವನ ಭಯವಿರಲಿಲ್ಲ. ಅವನು ತಮಗಿಂತ ಶ್ರೇಷ್ಟನು, ಜೀವಜಾತಿಯಲ್ಲಿ ಮೇಲ್ಮಟ್ಟದವನೆಂದು ಅವು ಹುಟ್ಟರಿವಿದಿಂದಲೇ ತಿಳಿದವು. ಅವು ದೇವರ ಸೃಷ್ಟಿಜೀವಿಗಳು, ಆತನಿಂದ ಜೀವವನ್ನು ದಾನವಾಗಿ ಹೊಂದಿದವುಗಳು. ಮತ್ತು ಅವುಗಳಿಗೆ ಯಾವ ಕೇಡನ್ನು ಮಾಡಲು ಯಾ ಅವುಗಳ ಜೀವವನ್ನು ತೆಗೆಯಲು ಯಾವ ಅಪೇಕ್ಷೆಯಾಗಲಿ ಮನಸ್ಸಾಗಲಿ ಮನುಷ್ಯನಿಗಿರಲಿಲ್ಲ.
4. ಎಲ್ಲಾ ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಆದಾಮನು ಹೆಸರಿಟ್ಟ ವಿಷಯದಲ್ಲಿ ನಾವೇನನ್ನು ಊಹಿಸಬಹುದು ಮತ್ತು ಅದೆಂತಹ ಅನುಭವವು ಆಗಿರಬೇಕು?
4 ಎಷ್ಟು ಸಮಯದ ತನಕ ಮನುಷ್ಯನಿಗೆ ಸಾಕು ಮತ್ತು ಕಾಡು ಪ್ರಾಣಿಗಳನ್ನು ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನು ತೋರಿಸಲಾಯಿತೆಂದು ದಾಖಲೆಯು ನಮಗೆ ಹೇಳುವದಿಲ್ಲ. ಅವೆಲ್ಲವೂ ದೈವಿಕ ಮಾರ್ಗದರ್ಶನೆ ಮತ್ತು ಎರ್ಪಾಡಿನ ಕೆಳಗೆ ನಡೆದವು. ಪ್ರತಿಯೊಂದು ವಿವಿಧ ಪ್ರಾಣಿಯನ್ನು ಅಧ್ಯಯಿನಿಸಲು, ಅವುಗಳ ವಿಶಿಷ್ಟ ರಚನೆ ಮತ್ತು ಹವ್ಯಾಸಗಳನ್ನು ವೀಕ್ಷಿಸಲು ಆದಾಮನು ಸಮಯವನ್ನು ಕೊಟ್ಟಿರಬೇಕು. ಆ ಮೇಲೆಯೇ ಅವುಗಳಿಗೆ ಅತ್ಯಂತ ಒಪ್ಪುವ ಹೆಸರನ್ನು ಆರಿಸಿರಬೇಕು. ಇದನ್ನು ಮಾಡಲು ಬಹಳಷ್ಟು ಸಮಯವು ತಾಗಿರಬಹುದು. ಈ ಅನೇಕ ಜಾತಿಯ ಭೂಜೀವಿಗಳೊಂದಿಗೆ ಪರಿಚಯವು ಆದಾಮನಿಗೆ ಅತ್ಯಂತ ಆಸಕ್ತಿಕರವಿತ್ತು ಮತ್ತು ಒಪ್ಪುವ ಹೆಸರುಗಳಿಂದ ಈ ಪ್ರತಿಯೊಂದು ಜೀವಿಗಳನ್ನು ಪ್ರತ್ಯೇಕಿಸಲು ಮಹಾ ಮಾನಸಿಕ ಶಕ್ತಿ ಮತ್ತು ವಾಕ್-ಚಾತುರ್ಯದ ಅಗತ್ಯವಿತ್ತು.
5-7. (ಎ) ಯಾವ ಪ್ರಶ್ನೆಗಳು ಎದ್ದಿರುವ ಸಂಭಾವ್ಯತೆ ಅದೆ? (ಬಿ) ಆದಿಕಾಂಡ 1:1-25 ರ ಸೃಷ್ಟಿ ದಾಖಲೆಯಲ್ಲಿ ಯಾವ ರೀತಿಯ ಉತ್ತರಗಳು ಕೊಡಲ್ಪಟ್ಟಿವೆ?
5 ಆದರೆ ಈ ಎಲ್ಲಾ ಜೀವಜಂತುಗಳ ಸೃಷ್ಟಿಕ್ರಮವು ಹೇಗಾಗಿತ್ತು? ನೆಲ ಪ್ರಾಣಿಗಳು ಪಕ್ಷಿಗಳಿಗಿಂತ ಮೊದಲು ಮಾಡಲ್ಪಟ್ಟವೋ ಇಲ್ಲವೂ ಮತ್ತು ಈ ಎಲ್ಲಾ ಕನಿಷ್ಟ ಜೀವಿಗಳ ಸಂಬಂಧದಲ್ಲಿ ಮನುಷ್ಯನಾದರೋ ಯಾವ ಕ್ರಮದಲ್ಲಿ ಮತ್ತು ಸಮಯದಲ್ಲಿ ಮಾಡಲ್ಪಟ್ಟನು? ಅಷ್ಟು ವಿಸ್ತಾರ್ಯ ವಿವಿಧತೆಯ ಜೀವಜಂತುಗಳಿಗಾಗಿ ದೇವರು ಭೂಮಿಯನ್ನು ತಯಾರಿಸಿದ್ದೂ, ಎತ್ತರದಲ್ಲಿ ಹಾರಾಡುವ ಪಕ್ಷಿಗಳಿಗಾಗಿ ಗಾಳಿಯನ್ನು ಒದಗಿಸಿದ್ದೂ, ಕುಡಿಯಲು ನೀರನ್ನೂ ಆಹಾರಕ್ಕಾಗಿ ಪಲ್ಯಗಳನ್ನೂ ಕೊಟ್ಟದ್ದೂ, ಮನುಷ್ಯನು ನೋಡಲು ಶಕ್ತನಾಗುವಂತೆ ದಿನದ ಬೆಳಕಿಗಾಗಿ ಮಹಾ ಜ್ಯೋತಿಯನ್ನೂ ಕತ್ತಲನ್ನು ಅಂದಗೊಳಿಸಲಿಕ್ಕಾಗಿ ಚಿಕ್ಕ ಜ್ಯೋತಿಯನ್ನೂ ಮಾಡಿದ್ದೂ ಹೇಗೆ? ಮನುಷ್ಯನು ಬಟ್ಟಬಯಲಲ್ಲಿ ಮತ್ತು ನಗ್ನನಾಗಿ ನಡೆದಾಡಲು ಮತ್ತು ಕೆಲಸಮಾಡಲು ಶಕ್ತನಾಗುವಂತೆ ಹವಾಮಾನವು ಅಷ್ಟು ಮಂದವೂ ಬೆಚ್ಚಗೂ ಆಗಿದ್ದದ್ದೇಕೆ?
6 ಉತ್ತರಗಳನ್ನು ಕಲ್ಪಿಸಿಕೊಳ್ಳುವಂತೆ ಮನುಷ್ಯನು ಬಿಡಲ್ಪಡಲಿಲ್ಲ. ಸ್ಪಷ್ಟವಾಗಿ ತಿಳಿದಿರುವ ಅಧಿಕೃತ ಮೂಲದಿಂದ ಅವನ ವಿಚಾರ ಪ್ರೇರಕ ಮನುಸ್ಸು ಉತ್ತರಗಳಿಗೆ ಅರ್ಹವಾಗಿತ್ತು. ಅಜ್ಞಾನಿ ದೇವಕುಮಾರನೋ ಎಂಬಂತೆ ಅವನು ತ್ಯಜಿಸಲ್ಪಡಲಿಲ್ಲ ಬದಲಾಗಿ ಆದಿಕಾಂಡ 1:25 ರಲ್ಲಿ ಕೊಡಲ್ಪಟ್ಟ ವಿಸ್ಮಯಕರ ಇತಿಹಾಸದಿಂದಾಗಿ ಅವನ ಉನ್ನತ ಮಟ್ಟದ ಬುದ್ಧಿಯು ಇನ್ನಷ್ಟು ಪ್ರಭಾವಿತವಾಗಿರಬೇಕು.
7 ಸೃಷ್ಟಿಕ್ರಿಯೆಯ ಆ ರೋಮಾಂಚಕ ವೃತ್ತಾಂತಕ್ಕಾಗಿ ಆದಾಮನು ಅತ್ಯಂತ ಅಭಾರಿಯಾಗಿರಬೇಕು. ಅದು ಅನೇಕ ವಿಷಯಗಳನ್ನು ವಿವರಿಸಿತ್ತು. ಅದರ ಶಬ್ದ ರಚನೆಯ ರೀತಿಯಿಂದ ಅವನು ತಿಳುಕೊಂಡದ್ದೇನಂದರೆ ದೇವರ ಕಾಲಗಣನೆಗೆ ಅನುಸಾರವಾಗಿ, ನಾಲ್ಕನೇ ಸೃಷ್ಟಿ ಅವಧಿಗೆ ಮುಂಚೆ ಯಾವದನ್ನು ದೇವರು ದಿನಗಳು ಎಂದು ಕರೆದನೋ ಅಂತಹ ಮೂರು ದೀರ್ಘ ಕಾಲಾವಧಿಗಳಿದ್ದವು ಎಂಬದಾಗಿ. ಆ ನಾಲ್ಕನೇ ಸೃಷ್ಟಿ ಅವಧಿಯಲ್ಲಿ ಮನುಷ್ಯನ ಎಷ್ಟೋ ಚಿಕ್ಕದಾದ ಇಪ್ಪತ್ತನಾಲ್ಕು ತಾಸುಗಳ ದಿನವನ್ನು ಗುರುತಿಸುವ ಎರಡು ಮಹಾ ಜ್ಯೋತಿಗಳನ್ನು ದೇವರು ಮಾಡಿದನು. ಭೂಮಿಯಲ್ಲಿ ಮನುಷ್ಯನ ಈ ಚಿಕ್ಕ ದಿನವು ಆ ಮಹಾ ಜ್ಯೋತಿಯು ಅಸ್ತಮಿಸಿ ಪುನ: ಅಸ್ತಮಿಸುವ ಅವಧಿಯ ತನಕವಿತ್ತು. ತನಗಾಗಿ ವರ್ಷಕಾಲವೂಇರುವದನ್ನೂ ಆದಾಮನು ಅರಿತುಕೊಂಡನು ಮತ್ತು ಕೂಡಲೇ ತನ್ನ ಜೀವಿತ ವರ್ಷಗಳನ್ನು ಲೆಕ್ಕಿಸ ತೊಡಗಿರಬೇಕು. ಆಕಾಶದಲ್ಲಿದ್ದ ಆ ಮಹಾ ಜ್ಯೋತಿಯು ಅದನ್ನು ಮಾಡಲು ಅವನನ್ನು ಶಕ್ತಗೊಳಿಸಿತು. ಆದರೆ ದೇವರ ದೀರ್ಘಕಾಲದ ಸೃಷ್ಟಿಯ ದಿನಗಳ ವಿಷಯದಲ್ಲಾದರೋ ತಾನಾಗ ದೇವರ ಭೂಸೃಷ್ಟಿ ಕಾರ್ಯದ ಆರನೇ ದಿನದಲ್ಲಿದ್ದೇನೆಂದು ಆ ಮೊದಲ ಮನುಷ್ಯನು ಮನಗಂಡನು. ಆ ಎಲ್ಲಾ ನೆಲ ಪ್ರಾಣಿಗಳನ್ನು ಮತ್ತು ಅನಂತರ ಮನುಷ್ಯನನ್ನು ಪ್ರತ್ಯೇಕವಾಗಿ ನಿರ್ಮಿಸಲಿಕ್ಕಾಗಿದ್ದ ಆ ಆರನೇ ದಿನದಂತ್ಯವನ್ನು ಅವನಿಗಿನ್ನೂ ಹೇಳಿರಲಿಲ್ಲ. ಆತನೀಗ ಸಸ್ಯಜೀವ, ಜಲಜೀವಿಗಳು, ಪಕ್ಷಿಜೀವಿಗಳು, ಮತ್ತು ನೆಲಜೀವಿಗಳು ನಿರ್ಮಿಸಲ್ಪಟ್ಟ ಕ್ರಮವನ್ನು ತಿಳಿಯುವನು. ಆದರೆ ಏದೆನ್ ತೋಟದಲ್ಲಿ ಆದಾಮನು ಒಂಟಿಯಾಗಿರುವದು ಭೂಪ್ರಮೋದವನದಲ್ಲಿ ಮನುಷ್ಯನಿಗಾಗಿ ದೇವರು ಮಾಡಿದ ಪ್ರೀತಿಯುಕ್ತ ಉದ್ದೇಶದ ಪರಿಪೂರ್ಣ ವ್ಯಕ್ತಪಡಿಸುವಿಕೆಯಾಗಿರಲಿಲ್ಲ.
Sub-heading is missing in printed.
8, 9. (ಎ) ಪ್ರಾಣಿ ಸೃಷ್ಟಿಯ ಸಂಬಂಧದಲ್ಲಿ ಆ ಪರಿಪೂರ್ಣ ಮನುಷ್ಯನು ಏನನ್ನು ವೀಕ್ಷಿಸಿದನು, ಆದರೆ ತನ್ನ ವಿಷಯವಾಗಿ ಎನು ತೀರ್ಮಾನಿಸಿಕೊಂಡನು? (ಬಿ) ಆ ಪರಿಪೂರ್ಣ ಮನುಷ್ಯನು ತನಗೊಂದು ಜೊತೆಯನ್ನು ಕೊಡುವಂತೆ ದೇವರನ್ನು ಕೇಳದಿದ್ದದ್ದು ಯುಕ್ತವಾಗಿತ್ತೇಕೆ? (ಸಿ) ಮೊದಲ ಮಾನವ ಪತ್ನಿಯ ನಿರ್ಮಾಣವನ್ನು ಬೈಬಲ್ ವೃತ್ತಾಂತ ಹೇಗೆ ವರ್ಣಿಸುತ್ತದೆ?
8 ಆ ಮೊದಲನೇ ಮನುಷ್ಯನು ತನ್ನ ಪರಿಪೂರ್ಣ ಮನಸ್ಸು ಮತ್ತು ವೀಕ್ಷಣಾ ಶಕ್ತಿಯಿಂದ ಪಕ್ಷಿ ಮತ್ತು ಪ್ರಾಣಿರಂಗದಲ್ಲಿ ಗಂಡುಹೆಣ್ಣು ಜಾತಿಯನ್ನೂ ಮತ್ತು ಅವು ತಮ್ಮ ಜಾತಿಯನ್ನು ಹುಟ್ಟಿಸುವದನ್ನೂ ಕಂಡನು. ಆದರೆ ಮನುಷ್ಯನ ವಿಷಯದಲ್ಲಾದರೋ ಅದು ಆಗ ಹಾಗಿರಲಿಲ್ಲ. ಈ ವೀಕ್ಷಣೆಯು ಅವನ ಮನಸ್ಸಲ್ಲಿ ಒಂದು ಸಂಗಾತಿಯನ್ನು ಆನಂದಿಸುವ ಯೋಚನೆಯನ್ನು ಹಾಕಿದ್ದರೆ ಯಾವುದೇ ಪ್ರಾಣಿರಂಗದಲ್ಲಿ, ಕಪಿಗಳಲ್ಲಿ ಸಹಾ, ಒಪ್ಪುವ ಜೊತೆಯನ್ನು ಅವನು ಕಾಣಲಿಲ್ಲ. ತನಗೆ ಯಾವ ಜೊತೆಯೂ ಇಲ್ಲವೆಂದು ಆದಾಮನು ತೀರ್ಮಾನಿಸಿರಬೇಕು ಯಾಕೆಂದರೆ ಅಂತಹದಿದ್ದರೆ ದೇವರು ಆ ಜೊತೆಯನ್ನು ತನ್ನ ಬಳಿಗೆ ತರಲಾರನೇ? ಆ ಎಲ್ಲಾ ಪ್ರಾಣಿಜಾತಿಗಳಿಗಿಂತ ಮನುಷ್ಯನು ಬೇರೆಯಾಗಿ ಮಾಡಲ್ಪಟ್ಟಿದ್ದಾನೆ ಮತ್ತು ಅವನು ಬೇರೆಯಾಗಿಯೇ ಇರುವನು! ಅವನು ವಿಷಯಗಳನ್ನು ತಾನಾಗಿ ನಿರ್ಣಯಿಸುವ ಮನಸ್ಸು ಮಾಡಲಿಲ್ಲ ಮತ್ತು ತನಗೊಂದು ಜೊತೆಯನ್ನು ಕೊಡುವಂತೆ ತನ್ನ ನಿರ್ಮಾಣಿಕ ದೇವರನ್ನು ಕೇಳುವ ಮೂಲಕ ದುರಭಿಮಾನ ತೋರಿಸಲಿಲ್ಲ. ಇಡೀ ವಿಷಯವನ್ನು ದೇವರಿಗೇ ಬಿಟ್ಟುಕೊಟ್ಟದ್ದು ಆ ಪರಿಪೂರ್ಣ ಮನುಷ್ಯನಿಗೆ ಯುಕ್ತವಾಗಿತ್ತು ಯಾಕೆಂದರೆ ದೇವರು ಆ ಸನ್ನಿವೇಶದ ಕುರಿತು ತನ್ನ ಸ್ವಂತ ನಿರ್ಣಯಗಳನ್ನು ಮಾಡಿದ್ದು ಅವನಿಗೆ ಅನಂತರ ಬೇಗನೇ ತಿಳಿಯಿತು. ಇದರ ಕುರಿತು ಮತ್ತು ಆಗ ಮತ್ತೇನು ನಡಿಯಿತು ಎಂಬದರ ಕುರಿತು ದಾಖಲೆಯು ನಮಗನ್ನುವದು:
9 “ಆದರೆ ಆ ಮನುಷ್ಯನಿಗೆ ಸರಿಬೀಳುವ ಸಹಕಾರಿ ಕಾಣಿಸಲಿಲ್ಲ. ಹೀಗಿರಲು ಯೆಹೋವ ದೇವರು ಆ ಮನುಷ್ಯನಿಗೆ ಗಾಢ ನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ದಳವನ್ನು ಮಾಂಸದಿಂದ ಮುಚ್ಚಿ ತಾನು ಮನುಷ್ಯನಿಂದ ತೆಗೆದಿದ್ದ ಎಲುಬನ್ನು ಸ್ತ್ರೀಯಾಗಿ ಮಾಡಿ ಆಕೆಯನ್ನು ಅವನ ಬಳಿಗೆ ತಂದನು. ಅವನು ಆಕೆಯನ್ನು ನೋಡಿ—ಈಗ ಸರಿ; ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ. ಈಕೆ ನರನಿಂದ ಉತ್ಪತ್ತಿಯಾದ್ದರಿಂದ ನಾರೀ ಎನ್ನಿಸಿಕೊಳ್ಳುವಳು ಅಂದನು. ಈ ಕಾರಣದಿಂದ ಪುರುಷನು ತಂದೆ ತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗುವರು. ಆ ಸ್ತ್ರೀ ಪುರುಷರಿಬ್ಬರೂ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.”—ಆದಿಕಾಂಡ 2:20—25.
10. ತನಗೆ ಪರಿಪೂರ್ಣ ಸ್ತ್ರೀಯು ನೀಡಲ್ಪಟ್ಟಾಗ ಆ ಪರಿಪೂರ್ಣ ಮನುಷ್ಯನು ಹೇಗೆ ಪ್ರತಿಕ್ರಿಯೆ ತೋರಿಸಿದನು ಮತ್ತು ಅವನ ಮಾತುಗಳು ಏನನ್ನು ಸೂಚಿಸಿದವು?
10 ಆ ಪರಿಪೂರ್ಣ ಸ್ತ್ರೀಯು ಒಬ್ಬ ಸಹಕಾರಿಣಿಯಾಗಿ ಮತ್ತು ಸಹಾಯಕಳಾಗಿ ನೀಡಲ್ಪಟ್ಟಾಗ ಅವನಂದ ಮಾತುಗಳಲ್ಲಿ ಸಂಪೂರ್ಣ ತೃಪ್ತಿಯು ತೋರಿಬಂತು: “ಈಗ ಸರಿ. ಈಕೆ ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ.” ಹೊಸತಾಗಿ ನಿರ್ಮಿಸಿದ ತನ್ನ ಪತ್ನಿಯನ್ನು ಅವನು ಕಟ್ಟಕಡೆಗೆ ಕಂಡಾಗ ನುಡಿದ ಮಾತುಗಳ ನೋಟದಲ್ಲಿ, ಆ ಸುಂದರವಾದ ಮಾನವ ಜತೆಯನ್ನು ಪಡೆಯುವರೇ ಅವನು ಸ್ವಲ್ಪಕಾಲ ಕಾದಿದ್ದಿರಬೇಕೆಂದು ವ್ಯಕ್ತ. ತನ್ನ ಸಹಕಾರಿಣಿಯನ್ನು ವಿವರಿಸುತ್ತಾ ಆದಾಮನು ತನ್ನ ಪತ್ನಿಯನ್ನು “ನಾರೀ” (ಇಶ್ಯಾ ಅಥವಾ ಅಕ್ಷರಾರ್ಥವಾಗಿ “ಹೆಣ್ಣು ಮನುಷ್ಯ”) ಎಂದು ಕರೆದನು ಯಾಕೆಂದರೆ ಆಕೆ “ನರನಿಂದ ಉತ್ಪತ್ತಿಯಾದಳು.” (ಆದಿಕಾಂಡ 2:23, ನ್ಯೂ ವಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲ್, ಪಾದಟಿಪ್ಪಣಿ) ಅವನು ಹೆಸರಿಡುವಂತೆ ಅವನ ಗಮನಕ್ಕೆ ಹಿಂದೆ ದೇವರು ಬರಮಾಡಿದ ಯಾವ ಪಕ್ಷಿಗಳಲ್ಲಿ ಯಾ ನೆಲ ಪಶುಗಳಲ್ಲಿ ಆದಾಮನಿಗೆ ಯಾವ ಮಾಂಸಿಕ ಸಂಬಂಧವೂ ಇರಲಿಲ್ಲ. ಅವನ ಮಾಂಸವು ಅವುಗಳಿಗಿಂತ ಬೇರೆಯಾಗಿತ್ತು. ಆದರೆ ಈ ಸ್ತ್ರೀಯಾದರೋ ನಿಜವಾಗಿಯೂ ಅವನ ಮಾಂಸಿಕ ಜಾತಿಯವಳು. ಅವನ ಪಕ್ಕೆಯಿಂದ ತೆಗೆದ ಪಕ್ಕೆಲುಬು ಅವನ ಸ್ವಂತ ದೇಹದಲ್ಲಿದ್ದಂತಹ ರಕ್ತವನ್ನೇ ಉತ್ಪಾದಿಸಿತ್ತು. (ಮತ್ತಾಯ 19:4-6 ನೋಡಿ.) ಈಗ ತನ್ನನ್ನು ಅವಳಿಗೆ ದೇವರ ಪ್ರವಾದಿಯಾಗಿ ಅವನು ಮಾಡಿಕೊಳ್ಳ ಸಾಧ್ಯವಿತ್ತು ಮತ್ತು ಸೃಷ್ಟಿಯ ವಿಸ್ಮಯಕರ ವೃತ್ತಾಂತವನ್ನು ಅವಳೊಂದಿಗೆ ಭಾಗಿಯಾಗಲು ಶಕ್ಯವಿತ್ತು.
11-13. (ಎ) ಆದಾಮನು ಪತ್ನಿಯನ್ನು ಪಡೆದದ್ದರೊಂದಿಗೆ ಯಾವ ಪ್ರಶ್ನೆಗಳು ಎದ್ದಿರಬಹುದು? (ಬಿ) ಮೊದಲ ಮಾನವ ದಂಪತಿಗಳಿಗಾಗಿ ದೇವರ ಉದ್ದೇಶವು ಏನಾಗಿತ್ತು? (ಸಿ) ಆ ಪರಿಪೂರ್ಣ ಮಾನವ ದಂಪತಿಗಳಿಗೆ ಯಾವುದು ಆಹಾರವಾಗಲಿಕ್ಕಿತ್ತು?
11 ಅವನಿಗೊಬ್ಬ ಪತ್ನಿಯನ್ನು ಕೊಟ್ಟದ್ದರಲ್ಲಿ ಮಾನವ ನಿರ್ಮಾಣಿಕನ ಉದ್ದಿಶ್ಯವಾದರೂ ಎನು? ಕೇವಲ ಒಬ್ಬ ಸಹಕಾರಿಣಿಯನ್ನು, ಸಹಾಯಕಳನ್ನು ಒದಗಿಸಲಿಕ್ಕೋ ಅಥವಾ ಅವನಲ್ಲಿ ಒಂಟಿಗತನವು ಉಂಟಾಗದಂತೆ ತಡೆಯಲು ಅವನದೇ ಜಾತಿಯ ಜೊತೆಗಾರ್ತಿಯನ್ನು ನೀಡಲಿಕ್ಕೋ? ಅವರ ಮದುವೆಯ ಮೇಲೆ ನೀಡಲ್ಪಟ್ಟ ದೇವರ ಆಶೀರ್ವಾದವನ್ನು ವಿವರಿಸುವಾಗ ದೇವರ ಉದ್ದಿಶ್ಯವೇನೆಂದು ದಾಖಲೆಯು ತಿಳಿಸುತ್ತದೆ:
12 “ಆ ಮೇಲೆ ದೇವರು—ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯನನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯ ಎಲ್ಲಾ ಭೂಮಿಯ ಮೇಲೆಯೂ ದೊರೆತನ ಮಾಡಲಿ ಅಂದನು. ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು. ಅವರನ್ನು ಗಂಡು ಹೆಣ್ಣಾಗಿ ನಿರ್ಮಿಸಿದನು. ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ—ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯನ್ನು ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ ಅಂದನು.”
13 ಮತ್ತು ದೇವರು—ಇಗೋ, ಸಮಸ್ತ ಭೂಮಿಯಲ್ಲಿ ಬೀಜವುಳ್ಳ ಎಲ್ಲಾ ಪೈರುಗಳನ್ನೂ ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ ನಿಮಗೆ ಆಹಾರಕ್ಕಾಗಿ ಕೊಟ್ಟಿದ್ದೇನೆ. ಇದಲ್ಲದೆ ಭೂಮಿಯ ಮೇಲೆ ತಿರುಗಾಡುವ ಮೃಗಗಳು, ಆಕಾಶದಲ್ಲಿ ಹಾರಾಡುವ ಪಕ್ಷಿಗಳು ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳು ಎಂಬ ಜೀವಿಗಳಿಗೆ ಎಲ್ಲಾ ಹುಲ್ಲು ಸೊಪ್ಪುಗಳನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಎಂದು ಹೇಳಿದನು. ಅದು ಹಾಗೆಯೇ ಆಯಿತು.”—ಆದಿಕಾಂಡ 1:26-30.
ಮೊದಲ ಮಾನವ ಜತೆಯ ಮುಂದಿದ್ದ ಪ್ರತೀಕ್ಷೆಗಳು
14. ದೇವರ ಆಶೀರ್ವಾದದೊಂದಿಗೆ ಆ ಪರಿಪೂರ್ಣ ಪುರುಷ ಮತ್ತು ಸ್ತ್ರೀಯ ಮುಂದೆ ಯಾವ ಭವಿಷ್ಯವು ಕಾದಿತ್ತು ಮತ್ತು ಅವರೇನನ್ನು ಯೋಗ್ಯವಾಗಿ ಮುನ್ನೋಡ ಸಾಧ್ಯವಿತ್ತು?
14 ಆ ಪರಿಪೂರ್ಣ ಮನುಷ್ಯನಿಗೆ ಮತ್ತು ಅವನ ಪೂರ್ಣ ಪತ್ನಿಗೆ ದೇವರು ಮಾತಾಡಿದ ದ್ವನಿಯು ಕೇಳಿಸಿದಾಗ ಮತ್ತು ಅವರನ್ನು ಆಶೀರ್ವದಿಸಿದಾಗ ಅದೆಷ್ಟು ಪುಳಕಿತ ಅನುಭವವು ಆಗಿರಬೇಕು! ದೇವರ ಆಶೀರ್ವಾದದೊಂದಿಗಿನ ಜೀವನವು ವ್ಯರ್ಥವಾಗಿರದು, ತಮಗೆ ಮಾಡಲು ಹೇಳಿದ ಕೆಲಸವನ್ನು ನಡಿಸಲು ಅವರು ಶಕ್ತರಾಗುವರು. ಅವರ ಮುಂದೆ ಎಂತಹ ಭವಿಷ್ಯವು ಕಾದಿದೆ! ಆ ಸಂತಸದ ವಿವಾಹ ಜೊತೆಯು ತಮ್ಮ ಮನೆಯಾದ ಎದೆನ್ ತೋಟದಲ್ಲಿ ನಿಂತಾಗ, ತಮಗಾಗಿ ದೇವರ ಚಿತ್ತವನ್ನು ಅವರು ನಿರ್ವಹಿಸಿದಾದ್ದರೆ ಏನೆಲ್ಲಾ ಅಗಬಹುದೆಂಬ ಕುರಿತಾಗಿ ಮನನ ಮಾಡಿರಬಹುದು. ತಮ್ಮ ಮನೋ ನೇತ್ರಗಳಿಂದ ದೂರದ ಭವಿಷ್ಯವನ್ನು ಅವರು ಮುನ್ನೋಡಿದಾಗ ಕೇವಲ “ಮೂಡಣ ದಿಕ್ಕಿನ ಏದೆನ್ ತೋಟ” ವನ್ನಲ್ಲ ಇಡೀ ಭೂಮಿಯನ್ನೇ ಉಜ್ವಲ ಮುಖದ ಸ್ತ್ರೀಪುರುಷರು ತುಂಬುವದನ್ನು ಕಂಡರು. (ಆದಿಕಾಂಡ 2:8) ಅವರೆಲ್ಲರೂ ತಮ್ಮ ಮಕ್ಕಳಾಗಿರುವರು, ತಮ್ಮ ಸಂತತಿಯವರಾಗುವರೆಂದು ನೆನಸುವಾಗ ಆ ಸ್ತ್ರೀ ಪುರುಷರ ಹೃದಯವು ನಲಿದಿರಬೇಕು. ಎಲ್ಲರೂ ಪರಿಪೂರ್ಣರು, ದೈಹಿಕ ರೂಪ ಮತ್ತು ರಚನೆಯಲ್ಲಿ ಕುಂದಿಲ್ಲದವರು, ಒಳ್ಳೇ ಆರೋಗ್ಯ ಮತ್ತು ಜೀವಿಸುವ ಸಂತಸದಿಂದ ತುಂಬಿದ ಶಾಶ್ವತ ತಾರುಣ್ಯ, ಎಲ್ಲರೂ ಒಬ್ಬರಿಗೊಬ್ಬರು ಪೂರ್ಣಪ್ರೀತಿಯನ್ನು ತೋರಿಸುವವರು, ತಮ್ಮ ಮಹಾ ನಿರ್ಮಾಣಿಕನ ಆರಾಧನೆಯಲ್ಲಿ ಐಕ್ಯತೆ ತೋರಿಸುವವರು, ಅವರು ಇದನ್ನೆಲ್ಲಾ ಮಾಡುವದು ತಮ್ಮ ಮೊದಲನೇ ಮಾತಾಪಿತರೊಂದಿಗೆ. ಅಂತಹ ಒಂದು ಕುಟುಂಬವನ್ನು ಹೊಂದುವ ವಿಚಾರವು ತಾನೇ ಆ ಮೊದಲ ಮನುಷ್ಯ ಮತ್ತು ಸ್ತ್ರೀಯ ಹೃದಯವೆಷ್ಟು ತುಂಬಿ ಬಂದಿರಬೇಕು!
15, 16. (ಎ) ಮಾನವಕುಲಕ್ಕಾಗಿ ಅಲ್ಲಿ ಹೇರಳವಾದ ಆಹಾರವಿರುತ್ತಿತ್ತೇಕೆ? (ಬಿ) ಸಂತಸದ ಕುಟುಂಬವು ಸಂಖ್ಯೆಯಲ್ಲಿ ಹೆಚ್ಚಿದಷ್ಟಕ್ಕೆ ಏದೆನ್ ತೋಟದ ಹೊರಗೆ ಅವರಿಗೆ ಯಾವ ಕೆಲಸ ಮಾಡಲಿಕ್ಕಿತು?
15 ಇಡೀ ಭೂಮಿಯನ್ನು ತುಂಬುವ ಮಾನವ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗಾಗಿ ಹೇರಳವಾದ ಆಹಾರವು ಅಲ್ಲಿರುವದು. ಅಲ್ಲಿ ಏದೆನ್ ತೋಟದಲ್ಲೇ ಆಹಾರವು ಸಮೃದ್ದಿಯಾಗಿತ್ತು. ಆರೋಗ್ಯಕರವೂ ಜೀವದಾಯಕವೂ ಆದ ಆಹಾರಕ್ಕಾಗಿ ದೇವರು ಅವರಿಗೆ ಬೀಜವುಳ್ಳ ಎಲ್ಲಾ ಸಸ್ಯಗಳನ್ನೂ ಅದರೊಂದಿಗೆ ಎಲ್ಲಾ ಹಣ್ಣಿನ ಮರಗಳನ್ನೂ ಒದಗಿಸಿಕೊಟ್ಟನು.—ಕೀರ್ತನೆ 104:24 ಹೋಲಿಸಿ.
16 ಅವರ ಸಂತಸದ ಕುಟುಂಬವು ಸಂಖ್ಯೆಯಲ್ಲಿ ಬೆಳೆದಷ್ಟಕ್ಕೆ ಅವರು ಉದ್ಯಾನವನ್ನು ಏದೆನಿನ ಗಡಿಯಿಂದಾಚೆಗೆ ಹಬ್ಬಿಸಲಿಕ್ಕಿದ್ದರು, ಯಾಕೆಂದರೆ ಏದೆನ್ ತೋಟದ ಹೊರಗಿನ ಭೂಮಿಯು ತಯಾರಾಗಿರಲಿಲ್ಲವೆಂದು ದೇವರ ಮಾತುಗಳಿಂದ ಸೂಚಿತವಾಗುತ್ತದೆ. ಕಡಿಮೆಪಕ್ಷ ಅದರ ಪರಾಮರಿಕೆಯಾಗಿರಲಿಲ್ಲ ಮತ್ತು ಏದೆನ್ ತೋಟದಲ್ಲಿದ್ದಷ್ಟು ಉತ್ತಮ ಮಟ್ಟದ ಸಾಗುವಳಿಗೆ ಅದು ತರಲ್ಪಟ್ಟಿರಲಿಲ್ಲ. ಆದ್ದರಿಂದಲೇ ಅವರು ಭೂಮಿಯನ್ನು ತುಂಬುವಾಗ ಅದನ್ನು “ವಶಮಾಡಿಕೊಳ್ಳು” ವಂತೆಯೂ ಅವರ ನಿರ್ಮಾಣಿಕನು ಹೇಳಿದ್ದನು.—ಆದಿಕಾಂಡ 1:28.
17. ಬೆಳೆಯುವ ಜನಸಂಖ್ಯೆಗೆ ಬೇಕಾದಷ್ಟು ಆಹಾರವು ಅಲ್ಲಿರುತಿತ್ತೇಕೆ ಮತ್ತು ಎದೆನ್ ತೋಟವು ಹಬ್ಬಿದಷ್ಟಕ್ಕೆ ಅಲ್ಲೇನು ನೆಲೆಸಲಿಕ್ಕಿತ್ತು?
17 ಹೀಗೆ ತೋಟವು ಪರಿಪೂರ್ಣ ವ್ಯವಸಾಯಗಾರರಿಂದ ಮತ್ತು ಆರೈಕೆಗಾರರಿಂದ ವಿಸ್ತಾರಗೊಂಡು ದೊಡ್ಡದಾದಾಗ ಬರೀದಾಗಿದ್ದ ಆ ಭೂಮಿಯು ಬೆಳೆಯುವ ಜನ ಸಂಖ್ಯೆಗಾಗಿ ಹೇರಳವಾಗಿ ಫಲಕೊಡುವದು. ಕೊನೆಗೆ ಏಕಪ್ರಕಾರವಾಗಿ ಬೆಳೆಯುತ್ತಾ ತೋಟವು ಭೂಮಿಯನ್ನೆಲ್ಲಾ ತುಂಬುವದು ಮತ್ತು ಭೂವ್ಯಾಪ್ತ ಪ್ರಮೋದವನವು ಮಾನವನ ನಿತ್ಯ ಮನೆಯಾಗಿ ಕಂಗೊಳಿಸುತ್ತಾ ಬಾಳುವದು. ಪರಲೋಕದ ವೀಕ್ಷಣೆಗೆ ಅದು ಸುಂದರವಾದ ನೋಟವೆನಿಸುವದು ಮತ್ತು ದೇವರು ಅದನ್ನು ಅತಿ ಉತ್ತಮವೆಂದು ಹೇಳುವನು.—ಯೋಬ 38:7 ನ್ನು ಹೋಲಿಸಿ.
18. ವ್ಯಾಪಕ ಏದೆನ್ ತೋಟವು ಗಲಭೆ ವಿಮುಕ್ತವಾಗಿರುವದೇಕೆ ಮತ್ತು ಯಾವ ಶಾಂತತೆಯು ಅಲ್ಲಿ ನೆಲೆಸಿರುವದು?
18 ಅವೆಲ್ಲವೂ ಆ ನವದಂಪತಿಗಳು ಏದೆನ್ ತೋಟದಲ್ಲಿ ತಮ್ಮನ್ನು ಕಂಡುಕೊಂಡಾಗ ಇದ್ದಂತೆ ಶಾಂತವೂ ಗಲಭೆಯಂದ ಮುಕ್ತವೂ ಆಗಿರುವದು. ಆ ಮೊದಲ ಮನುಷ್ಯ ಆದಾಮನು ಪರೀಕ್ಷಿಸಿದ್ದ ಮತ್ತು ಹೆಸರಿಸಿದ್ದ ಆ ಎಲ್ಲಾ ಪ್ರಾಣಿಗಳಿಂದ ಮತ್ತು ಹಾರಾಡುವ ಪಕ್ಷಿಗಳಿಂದ ಯಾವ ಅಪಾಯ ಯಾ ಹಾನಿಯಾಗುವ ಭಯವಿರಲಿಲ್ಲ. ತಮ್ಮ ಮೊದಲ ಮಾತಾಪಿತರಂತೆ ಜಗವ್ಯಾಪ್ತ ಪ್ರಮೋದವನದ ಆ ನಿವಾಸಿಗಳಿಗೆ ಸಮುದ್ರದ ಮೀನುಗಳು, ಆಕಾಶದ ಪಕ್ಷಿಗಳು, ನೆಲದ ಮೇಲೆ ಹರಿದಾಡುವ ಪ್ರತಿಯೊಂದು ಜೀವಜಂತುಗಳು, ಕಾಡುಮೃಗಗಳು ಸಹಾ, ಅಧೀನತೆಯಲ್ಲಿರುತ್ತಿದ್ದವು. “ದೇವರ ಸ್ವರೂಪ” ದಲ್ಲಿ ನಿರ್ಮಿಸಲ್ಪಟ್ಟವನಾದ ಮನುಷ್ಯನಿಗೆ ಅಧೀನತೆ ತೋರಿಸುವ ಹುಟ್ಟರಿವಿನೊಂದಿಗೆ, ಆ ಕೆಳದರ್ಜೆಯ ಜೀವಿಗಳು ಅವನೊಂದಿಗೆ ಶಾಂತಿಯಲ್ಲಿರುತ್ತಿದ್ದವು. ಕೆಳದರ್ಜೆಯ ಪ್ರಾಣಿಗಳ ಮೇಲೆ ದೊರೆತನವನ್ನು ಮಾಡುವದರಲ್ಲಿ ಆ ಸೌಮ್ಯ, ಪರಿಪೂರ್ಣ ಮಾನವ ಯಜಮಾನರು ಪಶುಗಳ ನಡುವೆ ಒಂದು ಶಾಂತಿಯ ವಾತಾವರಣವನ್ನು ಪ್ರೇರಿಸುವರು. ದೇವರಂತಹ ಮಾನವ ಯಜಮಾನರ ಶಾಂತಿಭರಿತ ಪ್ರಭಾವವು ಆ ಸಂತೃಪ್ತ ಕೆಳದರ್ಜೆಯ ಜೀವಿಗಳ ಮೇಲೆಲ್ಲಾ ಸುರಕ್ಷೆಯಾಗಿ ವ್ಯಾಪಿಸುವದು. ಎಲ್ಲಾದ್ದಕ್ಕಿಂತ ಮಿಗಿಲಾಗಿ, ಪರಿಪೂರ್ಣ ಮಾನವರು ದೇವರೊಂದಿಗೆ ಶಾಂತಿಯಲ್ಲಿರುವರು. ಆತನ ಆಶೀರ್ವಾದವು ಅವರಿಂದ ಎಂದೂ ತೆಗೆಯಲ್ಪಡದು.
ದೇವರು ತನ್ನ ಸೃಷ್ಟಿಕಾರ್ಯದಿಂದ ವಿಶ್ರಮಿಸುತ್ತಾನೆ
19. (ಎ) ದೇವರ ಉದ್ದೇಶದ ಸಂಬಂಧದಲ್ಲಿ ಮೊದಲ ಮನುಷ್ಯ ಮತ್ತು ಸ್ತ್ರೀ ಎನನ್ನು ಮನಗಂಡಿರಬೇಕು? (ಬಿ) ಸಮಯದ ಸಂಬಂಧದಲ್ಲಿ ದೇವರೇನನ್ನು ಸೂಚಿಸಿದ್ದನು?
19 ದೇವರ ಉದ್ದೇಶಕ್ಕನುಸಾರ ಭೂದೃಶ್ಯವು ಪೂರ್ಣಗೊಳ್ಳುವದನ್ನು ಆ ಪರಿಪೂರ್ಣ ಮಾನವ ಜೀವಿಗಳು ಆಲೋಚಿಸುವಾಗ, ಅವರು ಎನನ್ನೋ ಮನಗಾಣುವರು. ಆಶ್ಚರ್ಯಕರವಾದ ದೇವರಾಜ್ನೆಯನ್ನು ಪೂರ್ಣಗೊಳ್ಲಿಸುವದಕ್ಕೆ ಅವರಿಗೆ ಸಮಯ ಬೇಕಿತ್ತು. ಆದರೆ ಎಷ್ಟು ಸಮಯ? ನಿರ್ಮಾಣಿಕನಾದ ಅವರ ಸ್ವರ್ಗೀಯ ತಂದೆಗೆ ಅದು ತಿಳಿದಿತ್ತು. ಸೃಷ್ಟಿದಿನಗಳು ಆ ಮಹಾಶ್ರೇಣಿಯ ಇನ್ನೊಂದು ಮುಕ್ತಾಯವನ್ನು ಮುಟ್ಟುವದೆಂದು ಆತನು ಅವರಿಗೆ ಸೂಚಿಸಿದನು ಮತ್ತು ಅವರು “ಸಾಯಂಕಾಲ”ದಲ್ಲಿ, ಸೃಷ್ಟಿದಿನಗಳ ದೇವರ ಸ್ವಂತ ಗುರುತಿಸುವಿಕೆಗೆ ಅನುಸಾರವಾಗಿ ಒಂದು ಹೊಸ ದಿನದ ಆರಂಭದ ಬಿಂದುವಲ್ಲಿ ನಿಂತಿದ್ದರು. ಅದೊಂದು ಆಶೀರ್ವದಿತ ದಿನವಾಗಲಿತ್ತು ಮತ್ತು ದೇವರ ಶುದ್ಧವೂ ನೀತಿಯೂ ಆದ ಸ್ವಂತ ಉದ್ದೇಶಕ್ಕಾಗಿ ಪವಿತ್ರೀಕರಿಸಲ್ಪಡಲ್ಲಿತ್ತು. ಆ ಪೂರ್ಣ ಮನುಷ್ಯನು, ದೇವರ ಪ್ರವಾದಿಯು, ಇದನ್ನು ಮನಗಂಡನು. ಪ್ರೇರಿತ ದಾಖಲೆಯು ನಮಗನ್ನುವದು:
20. “ಏಳನೆಯ ದಿನ” ದ ಸಂಬಂಧದಲ್ಲಿ ಬೈಬಲ್ ದಾಖಲೆ ಎನನ್ನುತ್ತದೆ?
20 “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು. ಸಾಯಂಕಾಲವೂ ಪ್ರಾತ:ಕಾಲವೂ ಆಗಿ ಆರನೆಯ ದಿನವಾಯಿತು. ಹೀಗೆ ಭೂಮ್ಯಾಕಾಶಗಳೂ ಅದರಲ್ಲಿರುವ ಸಮಸ್ತವೂ ನಿರ್ಮಿತವಾದವು. ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಎಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು, ದೇವರು ತನ್ನ ಸೃಪ್ಟಿಕಾರ್ಯವನ್ನು ಮುಗಿಸಿ ಆ ಎಳನೆಯ ದಿನದಲ್ಲಿ ವಿಶ್ರಮಿಸಿಕೊಂಡದ್ದರಿಂದ ಆ ದಿನವನ್ನು ಪರಿಶುದ್ದ ದಿನವಾಗಿರಲಿ ಎಂದು ಆಶೀರ್ವದಿಸಿದನು. ಇದೇ ಭೂಮ್ಯಾಕಾಶಗಳ ನಿರ್ಮಾಣ ಚರಿತ್ರೆ.”—ಆದಿಕಾಂಡ 1:31–2:4.
21. (ಎ) ದೇವರು ತನ್ನ ವಿಶ್ರಾಂತಿಯ ದಿನವನ್ನು ಮುಗಿಸಿದನೆಂದಾಗಲಿ ಮತ್ತು ಅದು ಬಹು ಒಳ್ಳೇದಿತ್ತೆಂದಾಗಲಿ ಬೈಬಲ್ ಹೇಳುತ್ತದೋ? ವಿವರಿಸಿರಿ. (ಬಿ) ಯಾವ ಪ್ರಶ್ನೆಗಳೇಳುತ್ತವೆ?
21 ದೇವರು ತನ್ನ ವಿಶ್ರಾಂತಿ ದಿನವನ್ನು ಅಂತ್ಯಗೊಳಿಸಿದನೆಂದಾಗಲಿ, ಅದು ಒಳ್ಳೇದಾಗಿತ್ತೆಂದು ನೋಡಿದನೆಂದಾಗಲಿ, ಸಾಯಂಕಾಲವೂ ಪ್ರಾತ:ಕಾಲವೂ ಆಗಿ ಎಳನೆಯ ದಿನವಾಯಿತೆಂದಾಗಲಿ ದಾಖಲೆಯು ಹೇಳುವದಿಲ್ಲ, ಹಿಂದಣ ಆರು ದಿನಗಳೊಂದಿಗೆ ಅನುರೂಪವಾಗಿರಲು, ಎಳನೆಯ ದಿನವಿನ್ನೂ ಬಹು ಒಳ್ಳೆಯದೆಂದು ವಿಧಿಸಲ್ಪಡಬೇಕು. ಆದರೆ ಅದಿನ್ನೂ ಅಂತ್ಯವಾಗಿರುವದಿಲ್ಲ. ಆ ದಿನವನ್ನು ಬಹು ಒಳ್ಳೆಯದೆಂದು ದೇವರು ಈ ತನಕ ಹೇಳಿದ್ದಾನೋ? ಈ ತನಕ ಅದು ಅವನಿಗೆ ಒಂದು ಶಾಂತಿಯ ವಿಶ್ರಾಂತಿ ದಿನವಾಗಿದೆಯೋ? ಪ್ರಮೋದವನದಲ್ಲಿ ತಮ್ಮ ವಿವಾಹ ದಿನದಂದು ಆ ಮೊದಲ ಪುರುಷ ಮತ್ತು ಸ್ತ್ರೀಯು ತಮಗಾಗಿ ಮುನ್ನೋಡಿದ್ದ ಆ ಹೃದಯಾನಂದದ ಪ್ರತೀಕ್ಷೆಗಳ ಕುರಿತೇನು? ಮುಂದಿನ ಲೇಖನದಲ್ಲಿ ದೃಶ್ಯವು ತೆರೆಯುವಾಗ ನಾವದನ್ನು ಗಮನಿಸೋಣ. (w89 8/1)
[ಅಧ್ಯಯನ ಪ್ರಶ್ನೆಗಳು]
a ಈ ಹೆಸರುಗಳು ಆದಿಕಾಂಡದ ಹಿಬ್ರೂ ವಚನದಲ್ಲಿ ಮತ್ತು ಹಿಬ್ರೂ ಶಾಸ್ತ್ರದ ಇತರ ಪ್ರೇರಿತ ಪುಸ್ತಕಗಳಲ್ಲಿ ಕಂಡು ಬರುತ್ತವೆ.
ನಿಮ್ಮ ಪ್ರತಿಕ್ರಿಯೆ ಏನು?
◻ ಎದೇನ್ ತೋಟವನ್ನು ನೋಡಿಕೊಳ್ಳುವದಲ್ಲದೆ ಬೇರೆ ಯಾವ ಕೆಲಸವನ್ನು ದೇವರು ಆದಾಮನಿಗೆ ಕೊಟ್ಟನು ಮತ್ತು ಇದಕ್ಕೆ ಏನೆಲ್ಲಾ ಬೇಕಿತ್ತು?
◻ ಆದಿಕಾಂಡ 1:25 ರಲ್ಲಿ ಸೃಷ್ಟಿ ದಾಖಲೆಯು ಎನನ್ನು ಪ್ರಕಟಪಡಿಸುತ್ತದೆ?
◻ ಮೊದಲ ಮಾನವ ಪತ್ನಿಯು ನಿರ್ಮಿಸಲ್ಪಟ್ಟದ್ದು ಹೇಗೆ, ಮತ್ತು ತಮ್ಮ ಮದುವೆಯ ದಿನದಲ್ಲಿ ಆದಾಮನು ಹೇಗೆ ಪ್ರತಿಕ್ರಿಯಿಸಿದನು?
◻ ಮೊದಲ ಮಾನವ ದಂತತಿಗಳ ಮುಂದೆ ಯಾವ ಪ್ರತೀಕ್ಷೆಗಳು ಕಾದಿದ್ದವು?
◻ ಸೃಷ್ಟಿದಿನಗಳ ಮಹಾಶ್ರೇಣಿಯು ಇನ್ನೊಂದು ಸಮಾಪ್ತಿಯನ್ನು ಮುಟ್ಟಿತೆಂದು ದೇವರು ಸೂಚಿಸಿದ್ದು ಹೇಗೆ?