ಅವಿಶ್ವಾಸಿಗಳ ನೊಗದೊಳಗೆ ನಿಮ್ಮನ್ನು ತಂದುಕೂಳ್ಲಬೇಡಿರಿ
ಅವಿಶ್ವಾಸಿಗಳೊಂದಿಗೆ ಸಮತೆಯಿಲ್ಲದ ನೊಗದೊಳಗೆ ಬರಬೇಡಿರಿ. ಏಕೆಂದರೆ . . . ನಂಬಿಗಸ್ತ ವ್ಯಕ್ತಿಗೂ ಅವಿಶ್ವಾಸಿಗೂ ಪಾಲುಗಾರಿಕೆ ಏನು?”—2 ಕೊರಿಂಥ 6:14,15,
1. ಒಬ್ಬ ಸಹೋದರಿ ಅವಿಶ್ವಾಸಿಯನ್ನು ಮದುವೆಯಾದದ್ದು ಹೇಗೆ?
ಮಧ್ಯ ಪಶ್ಚಿಮ ಅಮೇರಿಕದ ಯೆಹೋವನ ಸಾಕ್ಷಿಗಳಲ್ಲೊಬ್ಬಾಕೆ ಕೆಲವು ವರ್ಷಗಳ ಹಿಂದೆ ಕಾರ್ ಅಪಘಾತದಲ್ಲಿ ತನ್ನ ಗಂಡನನ್ನು ಕಳಕೊಂಡಳು. ಅವಳು ನೆನಸಿಕೊಳ್ಳುವುದು: “ನಾನು ಮೊದಲಲ್ಲಿ ತುಂಬಾ ದು:ಖಿತಳಾಗಿದ್ದೆ. ಆದರೆ ಇದು ಯೆಹೋವನಿಗೆ ನಾನು ಮಾಡುವ ಸೇವೆಗೆ ಅಡಬ್ಡರದಂತೆ ನಾನು ಧೃಡಮನಸ್ಕಳಾಗಿದ್ದೆ. ಆದರೆ ಕೆಲವು ವರ್ಷಗಳಾದ ಮೇಲೆ ಸಭೆಯ ದಂಪತಿಗಳೆದುರಲ್ಲಿ ನಾನು ಅನಾವಶ್ಯಕ ಸಲಕರಣೆ ಎಂಬಂತೆ ನನಗನಿಸಿತು. ಕುಟುಂಬ ವಿನೋದ ವಿಹಾರಗಳಲ್ಲಿ ನನ್ನ ಮಗಳಿಗೂ ನನಗೂ ಯಾವಾಗಲೂ ಆಮಂತ್ರಣ ಸಿಗುತ್ತಿರಲ್ಲಿಲ್ಲ. ಕ್ರೈಸ್ತ ದಂಪತಿಗಳು ತಮ್ಮ ಮಧ್ಯೆ ಮಮತೆ ತೋರಿಸುತ್ತಿದ್ದಾಗ ನಾನು ಇನ್ನೂ ಹೆಚ್ಚಾಗಿ ತಿರಸ್ಕೃತಳಾದಂತೆ ಕಂಡಿತು. ನಾನು ಆತ್ಮಿಕವಾಗಿ ಬಲಹೀನಳಾಗುತ್ತಿದ್ದೇನೆಂದು ಯಾರೂ ಗಮನಿಸುವಂತೆ ಕಾಣಲಿಲ್ಲ. ಹೀಗಿರಲಾಗಿ, ಉದ್ಯೋಗ ಸ್ಥಳದ ಲೌಕಿಕ ಪರಿಚಯಸ್ಥನೊಬ್ಬನು ನನ್ನನ್ನು ಊಟಕ್ಕೆ ಆಮಂತ್ರಿಸಿದಾಗ ನಾನು ಹೋದೆ. ಇದನ್ನು ಗ್ರಹಿಸುವ ಮೊದಲೇ ನಾನು ಅವನನ್ನು ಪ್ರೇಮಿಸ ತೊಡಗಿದೆ. ಕೊನೆಗೆ ನಾನು ಒಂಟಿಗ ಭಾವದಿಂದ ಬಲಗುಂದಿದವಳಾಗಿ ಜಯಿಸಲ್ಪಟ್ಟಾಗ ಅವನನ್ನು ಮದುವೆಯಾಗಲು ಒಪ್ಪಿದೆ.”
2. ವಿವಾಹಾಪೇಕ್ಷೆ ಸ್ವಾಭಾವಿಕವೇಕೆ, ಮತ್ತು ವಿವಾಹವು ಯಾವುದನ್ನು ರೂಪಿಸಲಿಕ್ಕಾಗಿ ರಚಿಸಲ್ಪಟ್ಟಿತು?
2. ಹೌದು, ಒಬ್ಬ ಸಂಗಾತಿಯೊಂದಿಗೆ ಜೀವನದಲ್ಲಿ ಪಾಲಿಗರಾಗುವ ಅಪೇಕ್ಷೆ ಅತ್ಯಂತ ಬಲವಾಗಿರಬಲ್ಲದು, ಮತ್ತು ಇದು ಸ್ವಾಭಾವಿಕವೂ ಆಗಿದೆ. ಯೆಹೋವನು ತಾನೇ ಹೇಳಿದ್ದು: “ಮನುಷ್ಯನು ಒಂಟಿಗನಾಗಿರುವುದು ಒಳ್ಳೇಯದಲ್ಲ. ಅವನಿಗೆ ಸರಿಬೀಳುವ [“ಪಡಿರೂಪ”, ಅವನಿಗೆ ಒಪ್ಪುವಂತಹ] ಸಹಕಾರಿಯನ್ನು ಉಂಟುಮಾಡುವೆನು.” (ಆದಿಕಾಂಡ 2:18, NW ರೆಫರೆನ್ಸ್ ಬೈಬಲ್ ಪಾದಟಿಪ್ಪಣಿ) ಪುರುಷ ಮತ್ತು ಸ್ತ್ರೀಯ ಮಧ್ಯೆ ಒಂದು ನಿಕಟವಾದ ಖಾಯಂ ಬಂಧವಿರುವಂತೆ ವಿವಾಹವನ್ನು ರೂಪಿಸಲಾಯಿತು: “ಪುರುಷನು ತಂದೆ ತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು” ಎಂದು ಹೇಳಿದ್ದು ಆದಾಮನಲ್ಲ, ಯೆಹೋವ ದೇವರೇ. (ಆದಕಾಂಡ 2:22-24; ಮತ್ತಾಯ 19:4-6 ಹೋಲಿಸಿ.) ಇಂತಹ ಪಡಿರೂಪಕ್ಕಾಗಿ ಪ್ರಾಯಶ: ನಿಮ್ಮ ಹೃದಯ ಹಾತೊರೆಯುತ್ತದೆ.
3, 4. (ಎ)ಅವಿಶ್ವಾಸಿಗಳ ಸಂಗಡ ಆಪ್ತ ಸಂಬಂಧವನ್ನು ಬೆಳೆಸುವ ವಿರುದ್ಧ ಬೈಬಲ್ ಹೇಗೆ ಎಚ್ಚರಿಕೆ ನೀಡುತ್ತದೆ? (ಬಿ) ಸಮತೆಯಿಲ್ಲದ ನೊಗದ ಕುರಿತು ಪೌಲನ ಬುದ್ಧಿವಾದ ವಿವಾಹಕ್ಕೆ ಹೇಗೆ ಅನ್ವಯಿಸಬಹುದು? (ಸಿ) “ಅವಿಶ್ವಾಸಿ” ಎಂಬ ಪದವನ್ನು ಕೊರಿಂಥದ ಕ್ರೈಸ್ತರು ಹೇಗೆ ಅರ್ಥೈಸಿಕೊಂಡಿರಬಹುದು? (ಪಾದಟಿಪ್ಪಣಿ ನೋಡಿ)
3. ಬೈಬಲಾದರೋ ನಾವು ಅವಿಶ್ವಾಸಿಗಳೊಂದಿಗೆ ಸೇರಿಕೆ ಮಾಡುವುದರ ಕುರಿತು ಎಚ್ಚರಿಸುತ್ತದೆ. ಅಪೋಸ್ತಲ ಪೌಲನು ಹೇಳಿದ್ದು: “ಅವಿಶ್ವಾಸಿಗಳೊಂದಿಗೆ ಸಮತೆಯಿಲ್ಲದ ನೊಗ [“ಸಮತೆಯಿಲ್ಲದ ಜೊತೆಯೊಂದಿಗೆ ಸಜ್ಜುಹಾಕಿ ಕೊಳ್ಳಬೇಡಿರಿ” ದ ಜೆರೂಸಲೇಮ್ ಬೈಬಲ್] ದೊಳಗೆ ಬರಬೇಡಿರಿ.a ಏಕೆಂದರೆ ನಂಬಿಗಸ್ತ ವ್ಯಕ್ತಿಗೂ ಅವಿಶ್ವಾಸಿಗೂ ಪಾಲುಗಾರಿಕೆ ಏನು?b (2 ಕೊರಿಂಥ 6:14, 15) ಮೋಶೆಯ ಧರ್ಮಶಾಸ್ತ್ರದಲ್ಲಿ ಉಳುವ ಸಮಯದಲ್ಲಿ ಹೋರಿ ಮತ್ತು ಕತ್ತೆಯನ್ನು ಕಟ್ಟಿ ಉಳುವದರ ಮೇಲಿದ್ದ ನಿಶೇಧ ಪೌಲನ ಮನಸ್ಸಲ್ಲಿ ಇದ್ದಿರಬಹುದು. (ಧರ್ಮೋಪದೇಶಕಾಂಡ 22:10) ಕತ್ತೆಯ ಗಾತ್ರ ಚಿಕ್ಕದು ಮತ್ತು ಅದರ ಶಕ್ತಿ ಹೋರಿಯ ಶಕಿಗ್ತಿಂತ ಕಡಿಮೆ ಯಾಗಿರುವುದರಿಂದ ಹೀಗೆ ಸಮತೆಯಿಲ್ಲದ ನೊಗದಿಂದಾಗಿ ಅದು ಬಾಧೆಪಡುವುದು. ವಿವಾಹವು ಗಂಡ ಹೆಂಡತಿಯನ್ನು ಜೋಡಿಸುವ ನೊಗಕ್ಕೆ ಹೋಲಿಕೆಯಾಗಿರುವುದರಿಂದ ಕ್ರೈಸ್ತನೊಬ್ಬನು ಅವಿಶ್ವಾಸಿಯನ್ನು ವಿವಾಹವಾಗುವುದು ಸಮತೆಯಿಲ್ಲದ ನೊಗವಾಗಿ ಪರಿಣಮಿಸುವುದು. (ಮತ್ತಾಯ 19:6) ಇಂತಹ ನೊಗ ಅನೇಕವೇಳೆ ವಿವಾಹದ ಮೇಲೆ ಇನ್ನೂ ಹೆಚ್ಚಿನ ಒತ್ತಡ ಮತ್ತು ಶ್ರಮೆಯನ್ನು ತರುತ್ತದೆ.—1 ಕೊರಿಂಥ 7:28 ಹೋಲಿಸಿ.
4. ಆದರೂ, ಆರಂಭದ ಅನುಭವ ಚಿತ್ರಿಸುವಂತೆ, ಹಲವು ಕ್ರೈಸ್ತರು ಅವಿಶ್ವಾಸಿಗಳನ್ನು ಮದುವೆಯಾಗಲು ಆಯ್ದುಕೊಂಡಿದ್ದಾರೆ. “ಕರ್ತನಲ್ಲಿ ಮಾತ್ರ” ಮದುವೆಯಾಗಲು ಕೆಲವರಿಗೆ ಕಷ್ಟವಾಗುವುದೇಕೆ?—1 ಕೊರಿಂಥ 7:39, NW
ಕೆಲವರು ಬೇರೆಡೆಗಳಿಗೆ ನೋಡುವುದಕ್ಕೆ ಕಾರಣ
5. ಕೆಲವರು ಅವಿಶ್ವಾಸಿಯೊಂದಿಗೆ ಪ್ರಣಯಾತ್ಮಕವಾಗಿ ಹೇಗೆ ಸಿಕ್ಕಿಕೊಳ್ಳುತ್ತಾರೆಂದು ಚಿತ್ರಿಸಿರಿ.
5. ಅವರು ಬೇಕೆಂದು ದೇವರ ಸಲಹೆಯನ್ನು ಅಸಡ್ಡೆ ಮಾಡುತ್ತಾರೆಂದು ಇದರ ಅರ್ಥವಲ್ಲ. ಮದುವೆಯಾಗಲಿಚ್ಚಿಸುವ ಕ್ರೈಸ್ತ ಸಹೋದರಿಯ ದೃಷ್ಟಾಂತ ತಕ್ಕೊಳ್ಳಿರಿ: ಕ್ರೈಸ್ತ ಪತಿಗಾಗಿ ಆಕೆ ಹಾತೊರೆಯಬಹುದು. ಆದರೆ ಆಕೆಯ ವಿಶ್ವಾಸಿ ಮಿತ್ರರ ಮಧ್ಯೆ ಹೆಚ್ಚುಮಂದಿ ಯೋಗ್ಯ ಸಹೋದರರು ಆಕೆಗೆ ಕಂಡುಬರುವುದಿಲ್ಲ. ತನ್ನ ವಯಸ್ಸಿನ ಪ್ರಜ್ನೆ ಆಕೆಗಿದೆ. ತನಗೆ ಒಂದು ಕುಟುಂಬ ಬೇಕೆಂದೂ ಅವಳು ಅಪೇಕ್ಷಿಸಬಹುದು. ವಯಸ್ಸಾಗಿ ಒಂಟಿಗಳಾಗಿಯೇ ಇರುವ ಭಯ ಮತ್ತು ತಾನು ಪ್ರೀತಿಸಲ್ಪಡಬೇಕೆಂಬ ಬಯಕೆ ಅವಳನ್ನು ಸುಲಭಭೇದ್ಯಳನ್ನಾಗಿ ಮಾಡಬಹುದು. ಈ ಸಮಯ ಲೌಕಿಕನೊಬ್ಬನು ಅವಳಲ್ಲಿ ಆಸಕ್ತಿ ತೋರಿಸುವಲ್ಲಿ ಅದನ್ನು ತಡೆಯುವುದು ಕಷ್ಟವಾಗಬಹುದು. ಅವನು ದಯೆ ಮತ್ತು ಮೃದು ಸ್ವಭಾವದವನಾಗಿ ಕಂಡುಬರಬಹುದು. ಅವನಿಗೆ ಸೇದುವ ಅಭ್ಯಾಸ, ದುರ್ಭಾಷೆಯ ಚಟವಿರಲಿಕ್ಕಿಲ್ಲ. ಈಗ ಸಯುಕಿಕ್ತ ವಾದಗಳು ಬರುತ್ತವೆ: ‘ನನಗೆ ಗೊತ್ತಿರುವ ಅನೇಕ ಸಹೋದರರಿಗಿಂತ ಅವನೆಷ್ಟೋ ಉತ್ತಮ.!’ ‘ಅವನಿಗೆ ಅಧ್ಯಯನದಲ್ಲಿ ಇಷ್ಟವಿದೆ.’ ‘ಸಹೋದರಿಯೊಬ್ಬಳು ಅವಿಶ್ವಾಸಿಯನ್ನು ಮದುವೆಯಾಗಿ ಅವನು ಕ್ರಮೇಣ ಜೊತೆವಿಶ್ವಾಸಿಯಾದ ಸಂಭವಗಳು ನನಗೆ ಗೊತ್ತಿವೆ.’ ‘ಹಲವು ಕ್ರೈಸ್ತ ವಿವಾಹಗಳು ಸಹ ಯಶಸ್ವಿಯಾಗುವುದಿಲ್ಲ!’—ಯೆರೆಮೀಯ 17:9 ನೋಡಿ.
6, 7. (ಎ)ಒಬ್ಬ ಅವಿವಾಹಿತ ಸಹೋದರಿ ಆಕೆಯ ಹತಾಶೆಯನ್ನು ಹೇಗೆ ವರ್ಣಿಸಿದಳು? (ಬಿ) ಯಾವ ಪ್ರಶ್ನೆ ನಮ್ಮ ಪರಿಗಣನೆಗೆ ಅರ್ಹವಾಗಿದೆ?
6. ಹೌದು, ವಿವಾಹವಾಗಲಿಚ್ಚಿಸುವ ಕ್ರೈಸ್ತನು ತುಂಬಾ ಹತಾಶನಾಗ ಸಾಧ್ಯವದೆ. ಹಲವರಂತೂ ಯಾವುದಕ್ಕೂ ಹೇಸದ ವ್ಯಕ್ತಿಗಳಾಗುತ್ತಾರೆ. ಒಬ್ಬ ಅವಿವಾಹಿತ ಸಹೋದರಿ ತನ್ನ ಪ್ರದೇಶದ ಪರಿಸ್ಥಿತಿಯನ್ನು ವಿವರಿಸುತ್ತಾ ಅಂದದ್ದು: “ಅರ್ಹರಾಗಿರುವ ಸಹೋದರರ ಸಂಖ್ಯೆ ತೀರಾ ಚಿಕ್ಕದು. ಆದರೆ ಅವಿವಾಹಿತ ಸಹೋದರಿಯರ ಸಂಖ್ಯೆಯೋ ತೀರಾ ದೊಡ್ಡದು. ತನ್ನ ತಾರುಣ್ಯ ದಾಟುತ್ತಾ ಹೋಗುವುದನ್ನು ನೋಡುವ ಸಹೋದರಿಗೆ ಎರಡೇ ಆಯ್ಕೆಗಳಿರುತ್ತವೆ. ಒಂದೇ ಮದುವೆಯಾಗದೆ ಇರುವುದು, ಇಲ್ಲವೇ ಸಿಗುವ ಪ್ರಥಮ ಸಂಧಿಯಲ್ಲೀ ಮದುವೆಯಾಗುವುದು.”
7. ಆದರೂ ಬೈಬಲಿನ ಸಲಹೆ ಸ್ಪಷ್ಟ: ‘ಅವಿಶ್ವಾಸಿಗಳೊಂದಿಗೆ ಸಮತೆಯಿಲ್ಲದ ನೊಗದೊಳಗೆ ಬರಬೇಡಿರಿ.’ (2 ಕೊರಿಂಥ 6:14) ಈ ದೈವಿಕ ಎಚ್ಚರಿಕೆ ಕಟುವಾಗಿದೆಯೇ, ನ್ಯಾಯಸಮ್ಮತವಲ್ಲದೋ?
ದೇವರ ಪ್ರೀತಿಯ ಪರಾಮರಿಕೆಯ ಭಾವಸೂಚಿ
8. ನಮ್ಮ ಪರಮ ಹಿತವೇ ದೇವರ ಹೃದಯದಲ್ಲಿದೆಂದು ಯೆಹೋವನು ಹೇಗೆ ಪ್ರದರ್ಶಿಸಿದ್ದಾನೆ?
8. ನಮ್ಮ ನಿತ್ಯ ಹಿತದ ಕುರಿತು ಯೆಹೋವನು ತೀರಾ ಚಿಂತಿತನು. ಆತನು ತನಗೆ ಮಹಾ ನಷ್ಟ ಮಾಡಿಕೊಂಡು “ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ” ತನ್ನ ಪುತ್ರನನ್ನು ಕೊಡಲಿಲ್ಲವೇ? (ಮತ್ತಾಯ 20:28) ಆತನು ‘ನಾವು ಪ್ರಯೋಜನ ಪಡೆಯುವಂತೆ ನಮಗೆ ಬೋಧಿಸುವಾತನಲ್ಲವೇ?’ (ಯೆಶಾಯ 48:17) ‘ನಾವು ತಾಳಸಾಧ್ಯವಿರುವುದನ್ನು ಮೀರಿ ಪರೀಕ್ಷಿಸಲ್ಪಡುವಂತೆ ಅನುಮತಿಸೆನು’ ಎಂದು ಆತನು ವಚನ ಕೊಡುವುದಿಲ್ಲವೇ? (1 ಕೊರಿಂಥ 10:13) ಹೀಗಿರುವುದರಿಂದ, ಅವಿಶ್ವಾಸಿಗಳೊಂದಿಗೆ ಜೊತೆಯಾಗಬೇಡಿರಿ ಎಂದು ಆತನನ್ನುವಾಗ ನ್ಯಾಯವಾಗಿಯೇ ನಮ್ಮ ಪರಮಹಿತವು ಆತನ ಹೃದಯದಲ್ಲಿದೆ ಎಂಬದು ನಿಶ್ಚಯ! ಈ ಎಚ್ಚರಿಕೆ ನಮ್ಮ ಕಡೆಗೆ ಆತನ ಪ್ರೀತಿಯ ಪರಾಮರಿಕೆಯ ಭಾವಸೂಚನೆ ಹೇಗೆಂಬದನ್ನು ಯೋಚಿಸಿರಿ.
9. (ಎ)ಕ್ರೈಸ್ತನು ಅವಿಶ್ವಾಸಿಯೊಂದಿಗೆ ಆಪ್ತ ಸಂಬಂಧವನ್ನಿಟ್ಟುಕೊಳ್ಳುವ ವಿರುದ್ಧ ಪೌಲನು ಯಾವ ಎಚ್ಚರಿಕೆ ನೀಡುತ್ತಾನೆ? (ಬಿ) “ಒಡನಾಟ” ಎಂಬ ಗ್ರೀಕ್ ಪದದ ಅರ್ಥವೇನು, ಮತ್ತು ಕ್ರೈಸ್ತನು ಅವಿಶ್ವಾಸಿಯ ನೊಗದೊಳಗೆ ಹೋಗುವಾಗ ಬರುವ ಕಷ್ಟವನ್ನು ಇದು ಹೇಗೆ ಚಿತ್ರಿಸುತ್ತದೆ?
9. ವಿವಾಹದ ವಿಷಯದಲ್ಲಿ ಸೃಷ್ಟಿಕರ್ತನ ಉದ್ದೇಶ, ಗಂಡ ಹೆಂಡತಿ “ಒಂದೇ ಶರೀರ” ವಾಗಿರುತ್ತಾ ಮಾನವರ ಮಧ್ಯೆ ಅತ್ಯಂತ ನಿಕಟ ಸಂಬಂಧವನ್ನು ಅದು ಉಂಟುಮಾಡಬೇಕು ಎಂದಾಗಿತ್ತು. (ಆದಿಕಾಂಡ 2:24) ಇಂತಹ ಆಪ್ತ ಬಂಧವನ್ನು ಕ್ರೈಸ್ತನು ಅವಿಶ್ವಾಸಿಯೊಂದಿಗೆ ಮಾಡುವುದು ವಿವೇಕವೋ? ಪೌಲನು ಇದಕ್ಕೆ ಉತ್ತರ ಕೊಡುತ್ತಾ ನಕಾರಾತ್ಮಕ ಉತ್ತರವನ್ನು ಮುಂದಾಗಿಯೇ ಬಯಸುವ ನಾಟುವ ಪ್ರಶ್ನೆಗಳ ಪಂಕ್ತಿಯನ್ನೇ ಕೇಳುತ್ತಾನೆ: “ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನನಿಗೂ ಒಡನಾಟ [ಗ್ರೀಕ್, ಸಿಂಫೊನೀಸಿಸ್] ಏನು? ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆ ಏನು?” (2 ಕೊರಿಂಥ 6:14, 15) ಸಿಂಫೊನೀಸಿಸ್ ಎಂಬ ಗ್ರೀಕ್ ಪದದ ಅಕ್ಷರಾರ್ಥವು “ಕೂಡಿ ದ್ವನಿಗೈಯವುದು” (ಸಿನ್ ಅಂದರೆ “ಕೂಡ” ಮತ್ತು ಫೋನಿ ಅಂದರೆ “ಒಂದು ದ್ವನಿ”) ಎಂದಾಗಿದೆ. ಸಂಗೀತ ಸಲಕರಣೆಗಳ ಹೊಂದಿಕೆಯಾದ ಒಂದು ದ್ವನಿಯನ್ನು ಇದು ಸೂಚಿಸುತ್ತದೆ. ಕ್ರಿಸ್ತ ಮತ್ತು ಸೈತಾನ ಇವರ ಮಧ್ಯೆ ಹೊಂದಿಕೆಯಿಲ್ಲವೆಂಬದು ನಿಶ್ಚಯ. ತದ್ರೀತಿ, ಸಮತೆಯಿಲ್ಲದ ನೊಗದಲ್ಲಿ ‘ಸಮರಸ ಮೇಳವನ್ನು ಬಾರಿಸುವುದು’ ಗಂಡ ಹೆಂಡತಿಗೆ ಅತಿಕಷ್ಟ. ಅವರು ಪರಸ್ಪರ ಸಾಮರಸ್ಯವಿಲ್ಲದ ಎರಡು ಸಂಗೀತ ಸಲಕರಣೆಗಳಂತೆ ಸಂಗೀತದ ಬದಲು ಅಪಸರ್ವವನ್ನು ಉತ್ಪಾದಿಸುತ್ತಾರೆ.
10. ಸಂತೋಷದ ವಿವಾಹದಲ್ಲಿ ಅಗತ್ಯ ವಿಷಯಗಳಾವುವು, ಮತ್ತು ಸಮತೆಯ ನೊಗವಿರುವಲ್ಲಿ ಯಾವ ಪ್ರಯೋಜನವಿರುತ್ತವೆ?
10. ಹಾಗಾದರೆ ಆತ್ಮಿಕ ವ್ಯಕ್ತಿ ಭೌತಿಕ ವ್ಯಕ್ತಿಯ ಸಂಗಡ ಪೂರ್ತಿ ಐಕ್ಯವನ್ನು ಹೇಗೆ ಅನುಭವಿಸಬಲ್ಲನು? (1 ಕೊರಿಂಥ 2:14) ಒಂದು ಸಂತೋಷದ ವಿವಾಹದಲ್ಲಿ ಉಭಯ ಸಾಮಾನ್ಯ ನಂಬಿಕೆ, ಸೂತ್ರಗಳು ಮತ್ತು ಗುರಿಗಳು ಅಗತ್ಯ ವಿಷಯಗಳು. ಒಂದು ಮದುವೆಗೆ ಸೃಷ್ಟಿಕರ್ತನಿಗೆ ಕೂಡಿ ತೋರಿಸುವ ಭಕ್ತಿಗಿಂತ ಹೆಚ್ಚು ಇನ್ನಾವುದೂ ಶಕ್ತಿಯನ್ನು ಕೊಡದು. ಹೀಗೆ ಸಮತೆಯ ನೊಗವಿರುವಲ್ಲಿ ಗಂಡ ಹೆಂಡತಿ ಒಬ್ಬರನ್ನೊಬ್ಬರು ಆರಾಧನೆಯಲ್ಲಿ ಪ್ರೋತ್ಸಾಹಿಸುವಂತೆ ಸಾಧ್ಯವಾಗುತ್ತದೆ. ತಮ್ಮ ವ್ಯತ್ಯಾಸಗಳನ್ನುತೀರ್ಮಾನಿಸಲು ಇಬ್ಬರೂ ಶಾಸ್ತ್ರ ವಚನವನ್ನು ನೋಡಬಹುದು. ವಿವಾಹಜೊತೆಯೊಂದಿಗೆ ನಾವು ಅತ್ಯಂತ ಸಮೀಪ ಬಂಧವನ್ನು ಅನುಭವಿಸುವುದು ಯೆಹೋವನ ಇಚ್ಚೆಯಾಗಿರುವುದರಿಂದಲೇ ನಾವು ಅವಿಶ್ವಾಸಿಗಳೊಂದಿಗೆ ಜೋಡಿಯಾಗ ಬಾರದೆಂದು ಆತನು ಹೇಳುತ್ತಾನೆಂದು ಇದರಿಂದ ವ್ಯಕ್ತವಾಗದೇ?
11. ಆರಾಧಕರಲ್ಲದವರ ಸಂಗಡ ವಿವಾಹ ಸಂಬಂಧವು ಇಸ್ರಾಯೇಲ್ಯರಲ್ಲಿ ಏಕೆ ಸಿಶಿದ್ಧವಾಗಿತ್ತು, ಮತ್ತು ಯೋಚನೆಯನ್ನೆಬ್ಬಿಸುವ ಯಾವ ಪ್ರಶ್ನೆಯು ಏಳುತ್ತದೆ?
11. ಬೈಬಲಿನ ಎಚ್ಚರಿಕೆಗೆ ಕಿವಿಗೊಡುವುದು, ಕ್ರೈಸ್ತನು ಅವಿಶ್ವಾಸಿಯ ಜೋಡಿಯಾಗುವುದರಿಂದ ಅನೇಕಸಲ ಬರುವ ವೇದನೆಯ ಪರಿಣಾಮಗಳಿಂದಲೂ ನಮ್ಮನ್ನು ರಕ್ಷಿಸುತ್ತದೆ. ಉದಾಹರಣೆಗೆ, ಅವಿಶ್ವಾಸಿ ತನ್ನ ಕ್ರೈಸ್ತ ಜೊತೆಯನ್ನು ಯೆಹೋವನನ್ನು ಸೇವಿಸುವುದರಿಂದ ತಿರುಗಿಸುವ ಸಾಧ್ಯತೆ ಇದೆ. ಯೆಹೋವನ ಪುರಾತನ ಕಾಲದ ಇಸ್ರಾಯೇಲ್ಯರಿಗೆ ಕೊಟ್ಟ ಎಚ್ಚರಿಕೆಯ ಕುರಿತು ಯೋಚಿಸಿರಿ. ಆಗ ಇಸ್ರಾಯೇಲ್ಯೇತರ ಆರಾಧಕರೊಂದಿಗೆ ವಿವಾಹವಾಗುವುದಕ್ಕೆ ನಿಷೇಧವಿತ್ತು. ಏಕೆ? ಯೆಹೋವನು ಎಚ್ಚರಿಸಿದ್ದು: “ಹಾಗೆ ಮಾಡಿದರೆ ಅವರು ನಿಮ್ಮ ಮಕ್ಕಳನ್ನು ಯೆಹೋವನ ಸೇವೆಯಿಂದ ತಪ್ಪಿಸಿ ಇತರ ದೇವರುಗಳನ್ನು ಪೂಜಿಸುವುದಕ್ಕೆ ತಿರುಗಿಸಾರು.” (ಧರ್ಮೋಪದೇಶಕಾಂಡ 7:3, 4) ಅವಿಶ್ವಾಸಿ ಜೊತೆಯ ವಿರೋಧದ ಎದುರಲ್ಲಿ ತೀರ ಕಡಿಮೆ ಕಷ್ಟದ ಮಾರ್ಗವನ್ನು ಅನುಸರಿಸುವ ಪ್ರವೃತ್ತಿ ಬರಬಹುದು. ‘ಹಾಗೆ ನನಗೆ ಸಂಭವಿಸದು!’ ಎಂದು ಯೋಚಿಸುವುದು ಸುಲಭ. ಆದರೆ ಸೊಲೊಮೋನನಂತಹ ಜ್ಞಾನಿಗೂ ಅದು ಸಂಭವಿಸಿತು. ಹೀಗಿರುವಾಗ, ಹಾಗೆ ನಿಮಗೂ ಸಂಭವಿಸುವ ಸಾಧ್ಯತೆ ಇಲ್ಲವೇ?—1ಅರಸು 11:1-6; ಇದಕ್ಕೆ 1 ಅರಸು 4:29, 30 ಹೋಲಿಸಿ.
12. ವಿಧರ್ಮಿಗಳೊಂದಿಗೆ ವಿವಾಹ ನಿಶೇಧದ ಕುರಿತಾದ ದೇವರಾಜ್ನೆ ಇಸ್ರಾಯೇಲ್ಯರಿಗೆ ಹೇಗೆ ಸಂರಕ್ಷಣೆಯಾಗಿ ಪರಿಣಮಿಸಿತು? ಇದನ್ನು ಚಿತ್ರಿಸಿರಿ.
12. ಒಂದುವೇಳೆ ಒಬ್ಬ ವಿಶ್ವಾಸಿ ಸತ್ಯಾರಾಧನೆಯಿಂದ ಬಿದ್ದು ಹೋಗದಿದ್ದರೂ ಒಂದು ಧಾರ್ಮಿಕವಾಗಿ ಒಡೆದ ಮನೆಯಲ್ಲಿ ಅನೇಕವೇಳೆ ಬರುವ ಸಮಸ್ಯೆ, ಒತ್ತಡಗಳಿರುತ್ತವೆ. ದೇವರು ಇಸ್ರಾಯೇಲ್ಯರಿಗೆ ಕೊಟ್ಟ ನಿಯಮವನ್ನು ಪುನ: ತಕ್ಕೊಳ್ಳಿರಿ. ಒಬ್ಬ ಇಸ್ರಾಯೇಲ್ಯ ಹುಡುಗಿ ಕಾನಾನ್ಯನನ್ನು ಮದುವೆಯಾಗಲು ಸಮ್ಮತಿಸುತ್ತಾಳೆಂದು ನೆನಸಿರಿ. ಕಾನಾನ್ ದೇಶದಲ್ಲಿ ಆಗ ಬಳಕೆಯಲ್ಲಿದ್ದ ಲೈಂಗಿಕ ಪದ್ಧತಿಯ ಎದುರಿನಲ್ಲಿ, ಅವನಿಗೆ ಆಕೆಯ ದೇವರ ನೇಮದ ಬಗ್ಗೆ ಎಷ್ಟು ಗೌರವವಿದ್ದೀತು? ಉದಾಹರಣೆಗೆ, ಅವಳ ಋತುಸ್ರಾವದ ಸಮಯ ಮೋಶೆಯ ನಿಯಮದಂತೆ ಅವನು ಇಚ್ಛಾಪೂರ್ವಕವಾಗಿ ಸಂಭೋಗವನ್ನು ನಿಲ್ಲಸ್ಯಾನೇ?c (ಯಾಜಕಕಾಂಡ 18:19; 20:18; ಇದಕ್ಕೆ ಯಾಜಕಕಾಂಡ 18:27 ಹೋಲಿಸಿ.) ಕಾನಾನ್ಯ ಹುಡುಗಿಯನ್ನು ಮದುವೆಯಾದ ಇಸ್ರಾಯೇಲ್ಯ ಪುರುಷನ ಉದಾಹರಣೆಯಲ್ಲಿ ಪ್ರತಿ ವರ್ಷ ಕಾಲಿಕ ಹಬ್ಬಗಳಲ್ಲಿ ಹಾಜರಿರಲು ಮೂರು ಸಲ ಅವಳು ಯೆರೂಸಲೇಮಿಗೆ ಹೋದಾಳೇ? (ಧರ್ಮೋಪದೇಶಕಾಂಡ 16:16) ಹೀಗೆ ಇಂತಹ ವಿವಾಹಗಳ ಮೇಲಿದ್ದ ನಿಶೇಧ ಇಸ್ರಾಯೇಲ್ಯರಿಗೆ ಸಂರಕ್ಷಣೆಯಾಗಿ ಪರಿಣಮಿಸಿತ್ತೆಂಬದು ವ್ಯಕ್ತ.
13. (ಎ)ಲೌಕಿಕ ವ್ಯಕ್ತಿಗೆ ಬೈಬಲ್ ಶಿಕ್ಷಿತ ಕ್ರೈಸ್ತ ಮನಸ್ಸಾಕ್ಷಿ ಇಲ್ಲವೇಕೆ? (ಬಿ) ಧಾರ್ಮಿಕ ವಿಭಾಗಿತ ಮನೆಗಳಲ್ಲಿ ಯಾವ ಒತ್ತಡ ಮತ್ತು ಸಮಸ್ಯೆಗಳು ಕೆಲವರ ಎದುರಿಗೆ ಬರುತ್ತವೆ?
13. ಇಂದಿನ ಕುರಿತೇನು? ಲೌಕಿಕ ಜನರ ನೈತಿಕ ಮಟ್ಟ ಬೈಬಲಿನದಕ್ಕಿಂತ ತೀರಾ ಭಿನ್ನವಾಗಿದೆ. ಕೆಲವು ಲೌಕಿಕ ಜನರು ಎಷ್ಟು ಸ್ವಚ್ಛವಾಗಿ ಕಂಡು ಬಂದರೂ ಅವರಲ್ಲಿ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯಿಲ್ಲ. ಅವರು ಅನೇಕ ವರ್ಷಗಳಲ್ಲಿ ಬೈಬಲನ್ನು ಅಭ್ಯಾಸಿಸುತ್ತಾ ‘ಮನ ಪರಿವರ್ತನೆ’ ಮಾಡಿದ್ದಾಗಲಿ ‘ಹಳೇ ವ್ಯಕ್ತಿತ್ವವನ್ನು ಕಳಚಿ’ ದ್ದಾಗಲಿ ಇಲ್ಲ. (ರೋಮಾಪುರ 12:2; ಕೊಲೊಸ್ಸೆ 3:9) ಹೀಗೆ ಅವಿಶ್ವಾಸಿಯ ನೊಗದೊಳಗೆ ಸೇರಿಕೊಳ್ಳುವ ಕ್ರೈಸ್ತನು ಅನೇಕವೇಳೆ ಹೆಚ್ಚು ಹೃದೇದ್ವನೆ ಮತ್ತು ದು:ಖಕ್ಕೆ ತನ್ನನ್ನು ಈಡು ಮಾಡಿಕೊಳ್ಳುತ್ತಾನೆ. ಕೆಲವರು ಅನೈತಿಕ ಸಂಭೋಗಗಳಲ್ಲಿ ಭಾಗವಹಿಸುವರೇ ಅಥವಾ ಲೌಕಿಕ ಹಬ್ಬದ ರಜಾದಿನಗಳನ್ನು ಆಚರಿಸುವರೇ ಪದೇ ಪದೇ ಒತ್ತಡಗೊಳಗಾಗುತ್ತಾರೆ. ಕೆಲವರು ತಾವು ಒಂಟಿಗರಾಗಿದ್ದೇವೆಂದೂ ಗೊಣಗುತ್ತಾರೆ. ಒಬ್ಬ ಸಹೋದರಿ ಬರೆದದ್ದು: “ಯೆಹೋವನನ್ನು ಪ್ರೀತಿಸದವನನ್ನು ವಿವಾಹವಾದಾಗ ಬರುವ ಒಂಟಿಗ ಭಾವ ಭಾವಿಸಲಾಗದಷ್ಟು ಕೆಟ್ಟ ಏಕಾಂತತೆ. ನಿಮ್ಮ ಜೀವನದಲ್ಲಿ ಯಾವುದು ಅತ್ಯಂತ ಪ್ರಾಮುಖ್ಯವೋ ಆ ಸತ್ಯದಲ್ಲಿ ಪಾಲಿಗರಾಗಲು ನಿಮಗೆ ಯಾವನೂ ಇಲ್ಲ.”
14. (ಎ) ವಿಭಾಗಿತ ಮನೆಯಲ್ಲಿ “ಯೆಹೋವನಿಗೆ ಮೆಚ್ಚಿಗೆಯಾದ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ” ನೀಡಿ ಮಕ್ಕಳನ್ನು ಬೆಳೆಸುವುದು ಏಕೆ ಕಷ್ಟ? (ಬಿ) ಒಂದು ವಿಭಜಿತ ಮನೆಯಲ್ಲಿ ಮಕ್ಕಳ ಮೇಲೆ ಯಾವ ಪರಿಣಾಮವಾಗಬಹುದು?
14. ಒಂದು ವಿಭಾಗಿತ ಮನೆಯಲ್ಲಿ “ಯೆಹೋವನಿಗೆ ಮೆಚ್ಚಿಗೆಯಾದ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ” ನೀಡಿ ಮಕ್ಕಳನ್ನು ಬೆಳೆಸುವುದು ಅತಿಕಷ್ಟ. (ಎಫೆಸ 6:4) ದೃಷ್ಟಾಂತಕ್ಕೆ, ಮಕ್ಕಳು ಕೂಟಗಳಿಗೆ ಹಾಜರಾಗಲು ಅಥವಾ ಕ್ಷೇತ್ರಸೇವೆಯಲ್ಲಿ ಭಾಗವಹಿಸುವಂತೆ ಅವಿಶ್ವಾಸಿ ಬಿಟ್ಟಾನೇ? ಅನೇಕವೇಳೆ ಮಕ್ಕಳು ತಮ್ಮ ಮಮತೆಯಲ್ಲಿ ಚಿದ್ರಿತರಾಗುತ್ತಾರೆ. ಅವರು ತಮ್ಮ ಇಬ್ಬರು ಹೆತ್ತವರನ್ನೂ ಪ್ರೀತಿಸುತ್ತಾರೆ. ಆದರೆ ಹೆತ್ತವರಲ್ಲಿ ಒಬ್ಬನು ಮಾತ್ರ ಯೆಹೋವನನ್ನು ಪ್ರೀತಿಸುತ್ತಾನೆ. ಅವಿಶ್ವಾಸಿಯನ್ನು ಮದುವೆಯಾದ ಒಬ್ಬ ಸಹೋದರಿ ಹೇಳಿದ್ದು: “ನನ್ನ 20 ವರ್ಷಗಳ ವಿವಾಹವನ್ನು ನಾನು ಅಪಾರ ಹೃದ್ವೇದನೆಯಿಂದ ಕಳೆದೆ. ನನ್ನ ಹುಡುಗರು ತುಂಬಾ ಕ್ಷೋಭೆ ಮತ್ತು ಮನೋವಿಕಾರಗಳಿಂದ ಬೆಳೆದು ಈಗ ಲೋಕದ ಭಾಗವಾಗಿದ್ದಾರೆ. ತಂದೆಗಿರುವ ಭೇಟಿಯ ಹಕ್ಕಿನ ಕಾರಣ ನನ್ನ ಮಗಳು ನನ್ನಿಂದ ಎಷ್ಟೋ ಕಾಲ ದೂರವಾಗಿರಬೇಕಾದರ್ದಿಂದ ಅನೇಕಸಲ ಉದ್ರೇಕಿತಳಾಗುತ್ತಾಳೆ. ಈ ಸಮಸ್ಯೆಗಳೆಲ್ಲಾ ಬರಲು ಕಾರಣ ನಾನು 18 ವಯಸ್ಸಿನವಳಾಗಿರುವಾಗ ಯೆಹೋವನ ಸೂತ್ರಗಳಲ್ಲಿ ಒಂದನ್ನು ಉಲ್ಲಂಘನೆ ಮಾಡಿದ್ದೇ.” ಯಾವ ಸೂತ್ರವದು? ನಿಮ್ಮನ್ನು ಅವಿಶ್ವಾಸಿಗಳ ನೊಗದಡಿಯಲ್ಲಿ ಜೋಡಿಸಿಕೊಳ್ಳಬೇಡಿರಿ!
15. ನಾವು ಅವಿಶ್ವಾಸಿಗಳ ನೊಗದೊಳಗೆ ಬರಬಾರದೆಂದು ಯೆಹೋವನು ನಮಗೆ ಬುದ್ಧಿವಾದ ಕೊಡುವುದೇಕೆ?
15. ನಾವು ಜೀವನದಿಂದ ಅತ್ಯಂತ ಸುಖ:ವನ್ನು ಪಡೆಯಬೇಕೆಂದೇ ಯೆಹೋವನ ಅಪೇಕ್ಷೆಯೆಂಬದು ವ್ಯಕ್ತ. ಆತನು ನಮ್ಮಿಂದ ಕೇಳಿಕೊಳ್ಳುವ ವಿಷಯಗಳು, ಅವಿಶ್ವಾಸಿಗಳೊಂದಿಗೆ ವಿವಾಹ ನೊಗದೊಳಗೆ ಬರಬಾರದೆಂಬ ವಿಷಯ ಸಮೇತ, ನಮ್ಮ ಹಿತಕ್ಕಾಗಿವೆ. (ಧರ್ಮೋಪದೇಶಕಾಂಡ 10:12, 13) ಅವಿಶ್ವಾಸಿಯನ್ನು ವಿವಾಹವಾಗುವುದೆಂದರೆ ಶಾಸ್ತ್ರಕ್ಕನುಸಾರದ ಬುದ್ಧಿವಾದವನ್ನು, ಪ್ರಾಯೋಗಿಕ ವಿವೇಕವನ್ನು ಮತ್ತು ಅನೇಕಸಲ ಇತರರಿಗೆ ಇದರಿಂದಾಗುವ ಬೇನೆಯ ಅನುಭವಗಳನ್ನು ಅಸಡ್ಡೆ ಮಾಡುವದೆಂದರ್ಥ.
ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳು
16, 17. (ಎ) ನಾವು ಜಾಗರೂಕರಿರದಿದ್ದಲ್ಲಿ ಭಾವಾವೇಶ ಸ್ವಸ್ಥಬುದ್ಧಿಯ ಮೇಲೆ ಹೇಗೆ ಪರಿಣಾಮ ಬೀರಬಹುದು? (ಬಿ) ಅವಿಶ್ವಾಸಿಯನ್ನು ಕ್ರೈಸ್ತನು ವಿವಾಹವಾದ ಮೇಲೆ ಈಗ ಅವರಿಬ್ಬರೂ ಯೆಹೋವನನ್ನು ಆರಾಧಿಸುತ್ತಾರೆಂಬ ಅಪವಾದಾತ್ಮಕ ಸನ್ನಿವೇಶದ ಕಾರಣದಿಂದ ದೇವರಾಜ್ನೆಯನ್ನು ಅಲಕ್ಷಮಾಡಬೇಕೋ? ವಿವರಿಸಿರಿ.
16. ಆದರೂ, ನಾವು ಜಾಗೃತರಾಗಿರದಿರುವಲ್ಲಿ ನಮ್ಮ ಭಾವಾವೇಶ ಸ್ವಸ್ಥ ಯೋಚನೆಗೆ ಅಡ್ಡ ಬರಬಹುದು. ನಮ್ಮ ವಿಷಯದಲ್ಲಿ ವಿನಾಯಿತಿ ಇರಸಾಧ್ಯವೆಂದು ನಮಗನಿಸಬಹುದು. ಆ ಕುರಿತು ಹೆಚ್ಚು ಸಾಮಾನ್ಯವಾಗಿ ಕೇಳಲ್ಪಡುವ ಕೆಲವು ಪ್ರಶ್ನೆಗಳನ್ನು ಪರಿಗಣಿಸಿರಿ.
17. ಒಬ್ಬ ಸಹೋದರ ಅಥವಾ ಸಹೋದರಿ ಅವಿಶ್ವಾಸಿಯನ್ನು ವಿವಾಹವಾದರೂ ಈಗ ಇಬ್ಬರೂ ಯೆಹೋವನನ್ನು ಸೇವಿಸುತ್ತಾ ಇದ್ದಾರೆ ಎಂಬ ಅನುಭವಗಳ ಕುರಿತೇನು.? ಹೀಗಿದ್ದರೂ, ಯೆಹೋವನ ಸೂತ್ರಗಳ ಉಲ್ಲಂಘನೆ ನಡೆದದೆ. ಸಲಹೆಯನ್ನು ಅಸಡ್ಡೆ ಮಾಡುವವರ ಕುರಿತು ದೇವರ ವೀಕ್ಷಣವೇನೆಂಬದನ್ನು ಬಬಿಲೋನ್ಯ ದಾಸತ್ವದಿಂದ ಹಿಂದಿರುಗಿ ಬಂದ ಯೆಹೂದ್ಯರ ಅನುಭವ ಚಿತ್ರಿಸುತ್ತದೆ. ಆಗ ಕೆಲವರು ವಿಧರ್ಮಿ ಪತ್ನಿಯರನ್ನು ವಿವಾಹವಾದಾಗ ಬೈಬಲ್ ಲೇಖಕರಾದ ಎಜ್ರ ಮತ್ತು ನೆಹೆಮೀಯರು ಅವರ ಕೃತ್ಯವನ್ನು ಮುಚ್ಚು ಮರೆಯಿಲ್ಲದೆ ಖಂಡಿಸಿದರು. ಯೆಹೂದ್ಯರು ದೇವರಿಗೆ “ದ್ರೋಹಿ“ ಗಳಾಗಿ “ಘೋರವಾದ ದುಷ್ಟತ್ವ” ನಡಿಸಿದರೆಂದೂ “ಅಪರಾಧಿ” ಗಳೆಂದೂ ತಿಳಿಸಿದರು. (ಎಜ್ರ 10:10-14; ನೆಹೆಮೀಯ 13:27) ಇನ್ನೊಂದು ವಿಷಯ: ನಾವು ದೇವರ ಸಲಹೆಯನ್ನು ಅಲಕ್ಷಿಸುವಾಗ ನಮಗೆ ನಾವೇ ಆತ್ಮಿಕ ಗಾಯಗಳನ್ನು ಮಾಡಿಕೊಂಡು ನಮ್ಮ ಮನಸ್ಸಾಕ್ಷಿಯನ್ನು ಕಳಂಕಿಸಬಹುದು. ಯಾರ ಅವಿಶ್ವಾಸಿ ಗಂಡನು ಕ್ರಮೇಣ ವಿಶ್ವಾಸಿಯಾದನೋ ಅಂಥ ಒಬ್ಬ ಸಹೋದರಿ ಹೇಳುವುದು: “ನನ್ನ ಭಾವಾವೇಶದ ಕಲೆಯೊಂದಿಗೆ ನಾನಿನ್ನೂ ವ್ಯವಹರಿಸುತ್ತೇನೆ. ಇತರರು ನಮ್ಮನ್ನು ತೋರಿಸಿ “ಇವರು ಅದರಲ್ಲಿ ಸಾಫಲ್ಯ ಹೊಂದಿದರು” ಹೇಳುವಾಗ ನನಗಾಗುವ ಭಯಂಕರ ಅನಿಸಿಕೆ ಎಷ್ಟೆಂದು ವಿವರಿಸ ಸಾಧ್ಯವಿಲ್ಲ.”
18. ಇನ್ನೂ ದೀಕ್ಷಾಸ್ನಾನವಾಗದ ಒಬ್ಬನಿಗೆ ನೀವು ಆಕರ್ಶಿತರಾಗುವಲ್ಲಿ ವಿವೇಕದ ಮಾರ್ಗ ಯಾವುದು, ಮತ್ತು ಹಾಗೆ ಮಾಡುವಲ್ಲಿ ನೀವೇನನ್ನು ಪ್ರದರ್ಶಿಸುವಿರಿ?
18. ಬೈಬಲನ್ನು ಅಭ್ಯಸಿಸುತ್ತಾ ಕೂಟಗಳಿಗೆ ಹಾಜರಾಗುತ್ತಿದ್ದರೂ ಇನ್ನೂ ದೀಕ್ಷಾಸ್ನಾನ ಪಡೆಯದ ಒಬ್ಬನ ಅಥವಾ ಒಬ್ಬಳ ಕಡೆಗೆ ನೀವು ಆಕರ್ಶಿತರಾದರೆ ಏನು? ಒಬ್ಬನು ಬೈಬಲಿನ ಸತ್ಯದಲ್ಲಿ ಆಸಕ್ತಿ ತೋರಿಸುವುದು ನಮಗೆ ಆನಂದದ ವಿಷಯ. ಆದರೆ ಪ್ರಶ್ನೆ ಇದು: ನಿಮ್ಮ ಪ್ರವೃತ್ತಿಯನ್ನು ನೀವು ಅನುಸರಿಸಿ ಹೋಗಬೇಕೇ? ಯಥಾರ್ಥವಾಗಿ ಹೇಳುವುದಾದರೆ, ನಿಮ್ಮ ಮಿತ್ರನು ದೀಕ್ಷಾಸ್ನಾನ ಹೊಂದಿದ ಬಳಿಕ ಮತ್ತು ದೇವರಾತ್ಮದ ಫಲಗಳನ್ನು ಪ್ರದರ್ಶಿಸುವುದರಲ್ಲಿ ಪ್ರಗತಿಮಾಡುತ್ತಾನೆಂದು ತೋರಿಬರುವ ತನಕ ಅವನಲ್ಲಿ ಪ್ರಣಯಾಸಕ್ತಿ ತೋರಿಸದಿರುವುದು ವಿವೇಕದ ಮಾರ್ಗ. (ಗಲಾತ್ಯ 5:22, 23) ಇಂತಹ ಬುದ್ಧಿವಾದವನ್ನು ಅನ್ವಯಿಸಿಕೊಳ್ಳುವುದು ಸುಲಭವಾಗಿರಲಿಕ್ಕಿಲ್ಲ. ಆದರೆ ಹಾಗೆ ಮಾಡುವುದರಿಂದ ಬೈಬಲ್ ಸೂತ್ರಗಳಿಗೆ ಭಕ್ತಿಯನ್ನು ನೀವು ತೋರಿಸುವಿರಿ. ಮತ್ತು ಇದು, ಮದುವೆಯಲ್ಲಿ ನಿಜ ಸಂತೋಷಕ್ಕೆ ಉತ್ತಮ ಅಸ್ತಿವಾರವನ್ನು ಹಾಕುವದು. ನಿಮ್ಮ ಮಿತ್ರನು ನಿಮ್ಮ ವಿಷಯ ನಿಜವಾಗಿ ಚಿಂತಿಸುವವನಾಗಿದ್ದು ಯೆಹೋವನನ್ನು ನಿಜವಾಗಿ ಪ್ರೀತಿಸುವವನಾಗುವಲ್ಲಿ, ಅವನು (ಅಥವಾ, ಅವಳು) ನೀವಿಬ್ಬರೂ, ಪ್ರಣಯಾಚರಣೆಗೆ ಮೊದಲು ಸಮರ್ಪಿತರೂ ದೀಕ್ಷಾಸ್ನಾನ ಪಡೆದವರೂ ಆಗಿ ಹೀಗೆ “ಕರ್ತನಲ್ಲಿ” ಇರುವಂತೆ ಬಿಡುವನು. ಸಮಯ ದಾಟುವಿಕೆಯಿಂದಾಗಿ ನಿಜ ಪ್ರೀತಿಗೆ ನೋವಾಗುವದಿಲ್ಲವೆಂಬದು ನೆನಪಿರಲಿ.—1 ಕೊರಿಂಥ 7:39; ಆದಿಕಾಂಡ 29:20.
19. ಜೊತೆ ವಿಶ್ವಾಸಿಗಳ ಮಧ್ಯೆ ವಿವಾಹ ಜೊತೆಯನ್ನು ಹುಡುಕುವುದು ಕಷ್ಟವಾಗುವಲ್ಲಿ ನೀವೇನನ್ನು ನೆನಪಿನಲ್ಲಿಟ್ಟುಕೊಳ್ಳಬೇಕು?
19. ಜೊತೆ ವಿಶ್ವಾಸಿಗಳಲ್ಲಿ ನಿಮಗೆ ಯೋಗ್ಯ ವಿವಾಹಜೊತೆ ದೊರಕುವುದು ಕಷ್ಟವಾಗುವಲ್ಲಿ ಆಗೇನು? ಒಬ್ಬ ಸಹೋದರಿ ಹೇಳಿದ್ದು: “ನನಗೆ 26 ವಯಸ್ಸು. ನಾನು ಅವಿವಾಹಿತೆ ಮತ್ತು ನಿಜವಾಗಿ ಒಂಟಿಗಭಾವದವಳು.” ಹೌದು, ಅವಿವಾಹಿತರಾಗಿರುವುದು ನಿಮಗೆ ಕಷ್ಟಕರವಾಗ ಸಾಧ್ಯವಿದೆ. ಆದರೆ ಸಮತೆಯಿಲ್ಲದ ನೊಗದ ವಿವಾಹದಿಂದಾಗಿ ಬರುವ ಸಮಸ್ಯೆಗಳು ಅದಕ್ಕಿಂತಲೂ ಹೆಚ್ಚು ಕಷ್ಟಕರವಾಗಬಲ್ಲವು! ದೇವರ ಸಲಹೆಗೆ ವಿಧೇಯರಾಗುವಾಗ ನಮಗೆ ನಂಬಿಕೆ, ಆತ್ಮನಿಯಂತ್ರಣ ಮತ್ತು ತಾಳ್ಮೆ ಬೇಕಾಗಬಹುದು. ಆದರೆ ನಮಗೆ ಯಾವುದು ಪರಮಹಿತವೋ ಅದು ಯೆಹೋವನಿಗೆ ತಿಳಿದಿದೆ ಮತ್ತು ಅದನ್ನೇ ಆತನು ಬಯಸುತ್ತಾನೆ ಎಂಬ ಆಶ್ವಾಸನೆ ನಿಮ್ಮಲ್ಲಿರಲಿ. (1 ಪೇತ್ರ 5:6, 7) ಇದಕ್ಕಾಗಿ ಪ್ರಾರ್ಥಿಸಿದ ಬಳಿಕ ಯೆಹೋವನಿಗಾಗಿ ಕಾಯಿರಿ. (ಕೀರ್ತನೆ 55:22) ಈ ಪ್ರಪಂಚ ವ್ಯವಸ್ಥೆಯ ಕೆಳಗೆ ಪೂರ್ಣ ತೃಪ್ತಿಕರವಾದ ಜೀವನ ಯಾರಿಗೂ ದೊರೆಯುವುದಿಲ್ಲ. ನಿಮ್ಮ ಹೃದಯ ಒಬ್ಬ ಸಂಗಾತಿಗಾಗಿ ಹಾತೊರೆಯಬಹುದು. ಇತರರಿಗೂ ಅವರದ್ದೇ ಆದ ಸಮಸ್ಯೆಗಳಿವೆ. ಇವುಗಳಲ್ಲಿ ಕೆಲವು ಈ ವ್ಯವಸ್ಥೆಯಲ್ಲಿ ವಾಸಿಯಾಗದಿರುವ ಸಮಸ್ಯೆಗಳು. ಮುಂದೆ ಬರಲಿರುವ ನೂತನ ಲೋಕದಲ್ಲಿ ಮಾತ್ರ “ಎಲ್ಲಾ ಜೀವಿಗಳ ಇಷ್ಟ” ಪೂರ್ತಿಯಾಗಿ ತೃಪ್ತಿಗೊಳ್ಳುವುದು.—ಕೀರ್ತನೆ 145:16.
20. ಒಬ್ಬ ಅವಿವಾಹಿತೆ ಸಹೋದರಿ ತನ್ನ ಧೃಡತೆಯನ್ನು ಹೇಗೆ ವ್ಯಕ್ತಪಡಿಸಿದಳು, ಮತ್ತು ಹಾಗೆ ಧೃಡನಿಶ್ಚಯವಿರುವಲ್ಲಿ ನಿಮಗೆ ಯಾವ ಸಂತೃಪ್ತಿ ಇರಬಲ್ಲದು?
20. ಈ ಮಧ್ಯೆ, ಅವಿಶ್ವಾಸಿಯ ನೊಗದೊಳಗೆ ಹೋಗದಂತೆ ದೃಢಮನಸ್ಸು ಮಾಡಿರಿ. 36 ವಯಸ್ಸಿನ ಒಬ್ಬ ಅವಿವಾಹಿತೆ ಸಹೋದರಿ ತನ್ನ ದೃಢತೆಯನ್ನು ಹೀಗೆ ವ್ಯಕ್ತಪಡಿಸಿದಳು: “ ನಾನು ಪ್ರತಿದಿನ ವಿವಾಹ ಜೊತೆಗಾಗಿ ಯೆಹೋವನನ್ನು ಪ್ರಾರ್ಥಿಸುತ್ತೇನೆ. ಯೆಹೋವನ ಸಂಸ್ಥೆಯ ಹೊರಗೆ ಇದಕ್ಕಾಗಿ ನೋಡಲು ನನಗೆ ಮನಸ್ಸಿಲ್ಲ. ಆದರೆ ಶೋಧನೆಗಳು ಇನ್ನೂ ಇವೆ. ಈ ಮಧ್ಯೆ ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುವ ಗುಣಗಳನ್ನು ಸುಧಾರಿಸಲು ನಾನು ಪ್ರಯತ್ನಿಸುತ್ತೇನೆ. ಹೀಗೆ ಒಬ್ಬ ಆತ್ಮಿಕ ಪುರುಷನು ಹುಡುಕುವ ಆತ್ಮಿಕ ಸ್ತ್ರೀಯಾಗಿ ನಾನಿರುವೆನು.” ನೀವೂ ಈ ರೀತಿಯಾಗಿ ಧೃಡತೆಯಿಂದಿದ್ದೀರೋ? ಹಾಗಿರುವಲ್ಲಿ, ದೈವಿಕ ನ್ಯಾಯದ ದೇವರಿಗೆ ಕರ್ತವ್ಯನಿಷ್ಟೆ ತೋರಿಸುವುದರಿಂದ ಬರುವ ಸಂತೃಪ್ತಿ ನಿಮಗೂ ಇರುವುದು.—ಕೀರ್ತನೆ 37:27, 28. (w89 11/1)
[ಅಧ್ಯಯನ ಪ್ರಶ್ನೆಗಳು]
a 1 ಕೊರಿಂಥ 14:22 ರಲ್ಲಿ ಪೌಲನು “ನಂಬದವರು” (ಅವಿಶ್ವಾಸಿಗಳು, NW) ಮತ್ತು “ನಂಬುವವರು” ಅಥವಾ ದೀಕ್ಷಾಸ್ನಾನ ಹೊಂದಿದ ವ್ಯಕ್ತಿಗಳ ಮಧ್ಯೆ ವ್ಯತ್ಯಾಸ ತೋರಿಸುತ್ತಾನೆ. ಹೀಗೆ ಕೊರಿಂಥದವರು “ಅವಿಶ್ವಾಸಿಗಳನ್ನು” ದೀಕ್ಷಾಸ್ನಾನ ಹೊಂದದವರು ಎಂದು ಅರ್ಥೈಸಿಕೊಳ್ಳುವರು.—ಅಪೋಸ್ತಲರ ಕೃತ್ಯ 8:13; 16:31-34; 18:8 ನೋಡಿ.
b “ಇದನ್ನು ವಿಸ್ತರಿಸುವಲ್ಲಿ ಈ ಸೂತ್ರವನ್ನು ಹೀಗೆ ವ್ಯಕ್ತಪಡಿಸಬಹುದು: ‘ಕ್ರೈಸ್ತ ಮಟ್ಟಗಳೊಂದಿಗೆ ಒಪ್ಪಂದ ಮಾಡುವಂತೆ ನಡಿಸುವ ಅಥವಾ ಕ್ರೈಸ್ತ ಸಾಕ್ಷಿಯ ಸ್ಥಾಯಿತ್ವವನ್ನು ಅಪಾಯಕ್ಕೊಳಪಡಿಸುವ ಯಾವ ರೀತಿಯ ತಾತ್ಕಾಲಿಕ ಅಥವಾ ಖಾಯಂ ಸಂಬಂಧವನ್ನೂ ಅವಿಶ್ವಾಸಿಗಳೊಂದಿಗೆ ಬೆಳೆಸಬೇಡಿರಿ. ಮತ್ತು ಇಂಥ ಪ್ರತ್ಯೇಕತೆ ಏಕೆ? ಏಕೆಂದರೆ ಅವಿಶ್ವಾಸಿಯು ಕ್ರೈಸ್ತ ಮಟ್ಟ, ಅನುವೇದನೆ ಮತ್ತು ಗುರಿಗಳಲ್ಲಿ ಪಾಲುಗಾರನಾಗುವದಿಲ್ಲ.’”—ದಿ ಎಕ್ಸ್ಪೊಸಿಟರ್ಸ್ ಬೈಬಲ್ ಕಾಮೆಂಟ್ರಿ, 10ನೇ ಸಂಪುಟ, ಪುಟ 359.
c ದಿ ವಾಚ್ಟವರ್ ಸಪ್ಟಂಬರ 15, 1972 ಪುಟ 575-6 ನೋಡಿ.
ವಿವರಿಸಬಲ್ಲಿರೋ?
◻ ಅವಿಶ್ವಾಸಿಗಳೊಂದಿಗೆ ಆಪ್ತ ಸಂಬಂಧವನ್ನಿಡುವುದರ ವಿರುದ್ಧ ಬೈಬಲ್ ಹೇಗೆ ಎಚ್ಚರಿಸುತ್ತದೆ?
◻ ಕೆಲವು ಸಮರ್ಪಿತ ಕ್ರೈಸ್ತರು ವಿವಾಹ ಜೊತೆಗಾಗಿ ಸಭೆಯ ಹೊರಗೆ ನೋಡುವದೇಕೆ?
◻ ಸಮತೆಯಿಲ್ಲದ ನೊಗದ ವಿರುದ್ಧ ಯೆಹೋವನ ಎಚ್ಚರಿಕೆ ನಮ್ಮ ಕಡೆಗೆ ಆತನ ಪ್ರೀತಿಯ ಪರಾಮರಿಕೆಯ ಭಾವರೂಪವಾಗಿದೆ ಹೇಗೆ?
◻ ಜೊತೆಯನ್ನು ಕಂಡುಹಿಡಿಯುವ ಕುರಿತು ಕೇಳಲ್ಪಡುವ ಸಾಮಾನ್ಯ ಪ್ರಶ್ನೆಗಳು ಯಾವುವು, ಮತ್ತು ಅವುಗಳಿಗೆ ನೀವು ಹೇಗೆ ಉತ್ತರ ಕೊಡುವಿರಿ?