ಕೋಡೆಕ್ಷ್ ಬೆಝಾಯೀ ಒಂದು ಅಸದೃಶ ಹಸ್ತ ಪ್ರತಿ
ಥಿಯೊಡರ್ ಡಿ ಬೆಝ್, ಕ್ರೈಸ್ತ ಗ್ರೀಕ್ ಶಾಸ್ತ್ರ ಗ್ರಂಥಗಳ ಪ್ರಖ್ಯಾತ ಫ್ರೆಂಚ್ ವಿದ್ವಾಂಸನು ಪ್ರೊಟೆಸ್ಟಾಂಟ್ ಮತ ಸುಧಾರಕನಾದ ಜೋನ್ ಕಾಲ್ವಿನ್ನ ನಿಕಟ ಸಹವಾಸಿಯೂ, ಅವನ ಉತ್ತರಾಧಿಕಾರಿಯೂ ಆಗಿದ್ದನು. 1562 ನೆಯ ವರ್ಷದಲ್ಲಿ ಬೆಝಾ,—ಅವನು ಸಾಮಾನ್ಯವಾಗಿ ಪರಿಚಿತನಾಗಿರುವ ಹೆಸರು,—ನು ಒಂದು ಅಸಾಮಾನ್ಯವಾದ ಪುರಾತನ ಹಸ್ತ ಪ್ರತಿಯನ್ನು ಬೆಳಕಿಗೆ ತಂದನು. ಹ್ಯೂಗುನೊಟ್ಸ್ನಿಂದ ಫ್ರಾನ್ಸಿನ ಲಯೊನ್ಸ್ ನಗರವು ಸೂರೆಯಾದ ನಂತರ, “ಸಂತ” ಐರೆನಿಯಸ್ನ ಮಠದಿಂದ ಇದನ್ನು ತಾನು ಪಡೆದೆನು ಎಂದವನು ಹೇಳುತ್ತಾನೆ. ಅದರ ಮೂಲಸ್ಥಳವು ಅಸ್ಪಷ್ಟ , ಆದರೆ ಉತ್ತರ ಆಫ್ರಿಕಾ ಇಲ್ಲವೇ ಐಗುಪ್ತವು ಹೆಚ್ಚಿನಾಂಶ ಅದರ ಮೂಲ ಸ್ಥಳವಾಗಿದ್ದಿರಬಹುದು.
ಕೋಡೆಕ್ಷ್ ಹತ್ತು ಇಂಚು ಉದ್ದ ಮತ್ತು ಎಂಟು ಇಂಚು ಅಗಲ ಅಳತೆಯದ್ದಾಗಿರುತ್ತದೆ. ಇದರ ಸಮಯ ಹೆಚ್ಚು ಕಡಿಮೆ ಸಾ.ಶ. ಐದನೆಯ ಶತಮಾನದ್ದಾಗಿದೆ ಎಂದು ಸಾಮಾನ್ಯವಾಗಿ ಅಂಗೀಕೃತವಾಗಿದೆ ಅಂದರೆ ಸಿನೈಟಿಕ್, ವ್ಯಾಟಿಕನ್ ಮತ್ತು ಅಲೆಕ್ಷಾಂಡ್ರಿನ್ ಹಸ್ತ ಪ್ರತಿಗಳಿಗಿಂತ ಸ್ವಲ್ಪಸಮಯದ ನಂತರದ್ದಾಗಿದೆ. ಇದರಲ್ಲಿ 406 ಹಾಳೆಗಳಿವೆ ಮತ್ತು ಕೇವಲ ನಾಲ್ಕು ಸುವಾರ್ತೆಯ ಪುಸ್ತಕಗಳು ಮತ್ತು ಅಪೊಸ್ತಲರ ಕೃತ್ಯಗಳು ಇದ್ದು, ಮಧ್ಯದಲ್ಲಿ ಗ್ರಂಥಪಾತ (ಅಂತರ) ಗಳು ಇಲ್ಲ. ಆದರೆ ಮೂಲ ಕೋಡೆಕ್ಷ್ ಬೆಝಾಯೀನಲ್ಲಿ ಬೇರೆ ಪತ್ರಗಳು ಇದ್ದಿರಬಹುದು ಯಾಕಂದರೆ ಯೋಹಾನನ ಮೂರನೆಯ ಪತ್ರದ ಅವಶೇಷವೊಂದು ಇದೆ. ಮತ್ತಾಯ ಮತ್ತು ಯೋಹಾನನ ಸುವಾರ್ತೆಗಳು ಲೂಕ ಮತ್ತು ಮಾರ್ಕರ ಸುವಾರ್ತೆಗಳಿಗಿಂತ ಮೊದಲು ಇದೆ.
ಈ ಹಸ್ತ ಪ್ರತಿಯು ಎರಡು ಭಾಷೆಗಳ ಬರವಣಿಗೆಗಳಲ್ಲಿ ಮೊದಲ ಉದಾಹರಣೆಯಾಗಿದ್ದು, ಎಡ ಪುಟದಲ್ಲಿ ಗ್ರೀಕ್ ಮತ್ತು ಬಲ ಪುಟದಲ್ಲಿ ಲ್ಯಾಟಿನ್ ಇದೆ. ಇದು ಪ್ರಾಯಶಃ ಆರಂಭದ ಒಂದು ಪ್ಯಾಪಿರಸ್ ಹಸ್ತ ಪ್ರತಿಯ ಮರುಪ್ರತಿಯಾಗಿದ್ದಿರಬಹುದು, ಮೂರನೆಯ ಮತ್ತು ನಾಲ್ಕನೆಯ ಶತಮಾನದ, ಮತ್ತು ಗಳೆಂದು ಪರಿಚಿತವಾಗಿರುವ ಬೇರೆ ಕೆಲವು ಜಂಬುಕಾಗದದ ಪ್ರತಿಗಳಿಗೆ ಸಮಾನವಾಗಿದೆ.
ದಪ್ಪವಾದ, ಶ್ರೇಷ್ಠತಮ ದೊಡ್ಡಕ್ಷರಗಳಲ್ಲಿ ಬರೆಯಲ್ಪಟ್ಟಿದ್ದು, ಕೋಡೆಕ್ಷ್ ಬೆಝಾಯೀಯು ಪುಟಗಳಲ್ಲಿ ಅವಿಚ್ಛಿನ್ನವಾಗಿರುವುದಿಲ್ಲ. ಅಸರಿಸಮಾನವಾದ ಉದ್ದದ ಸಾಲುಗಳಲ್ಲಿ ಅದು ಇದ್ದು, ಪ್ರತಿಯೊಂದು ಸಾಲಿನ ಕೊನೆಯು ಓದುವಿಕೆಯನ್ನು ನಿಲ್ಲಿಸುವುದನ್ನು ಪ್ರತಿನಿಧಿಸುತ್ತದೆ. ಆಸಕ್ತಿಯದ್ದಾಗಿ, ಲ್ಯಾಟಿನ್ನನ್ನು ಗ್ರೀಕ್ ಅಕ್ಷರ ಶೈಲಿಯಲ್ಲಿ ಬರೆಯಲಾಗಿದೆ ಮತ್ತು ಅನೇಕ ಕಡೆಗಳಲ್ಲಿ ಗ್ರೀಕ್ ವಾಚನಕ್ಕನುಸಾರ ಪಾಠವನ್ನು ಅಳವಡಿಸಲಾಗಿದೆ. ಇನ್ನೊಂದು ಪಕ್ಕದಲ್ಲಿ, ಗ್ರೀಕ್ ಮೂಲಪಾಠವು ಬಹಳವಾಗಿ ವಿಶಿಷ್ಟವಾಗಿರುತ್ತದೆ ಮತ್ತು ಹಲವಾರು ಕೈಗಳಿಂದ ಅದನ್ನು ತಿದ್ದಲಾಗಿದೆ, ಕೆಲವೊಮ್ಮೆ ಮೂಲ ಶಾಸ್ತ್ರಿಯು (ಬರಹಗಾರನು) ಕೂಡಾ.
ಕೋಡೆಕ್ಷ್ ಬೆಝಾಯೀಯನ್ನು ಅಧಿಕೃತವಾಗಿ “D” ಎಂದು ಹೆಸರಿಸಲಾಗಿದೆ. ಇದು ಬಹಳಷ್ಟು ಭಿನ್ನವಾಗಿದೆ ಮತ್ತು ಬೇರೆಲ್ಲಾ ಪ್ರಮುಖ ಹಸ್ತ ಪ್ರತಿಗಳಿಗಿಂತ ಸ್ವತಂತ್ರವಾಗಿದೆ. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ನ ಪಾದಟಿಪ್ಪಣಿಯಲ್ಲಿ ಸೂಚಿಸಿದ ಪ್ರಕಾರ, ಕೋಡೆಕ್ಷ್ ಸಿನೈಟಿಕ್ (א), ವ್ಯಾಟಿಕನ್ (B) ಮತ್ತು ಅಲೆಕ್ಷಾಂಡ್ರಿನ್ (A) ಹಸ್ತಾಕ್ಷರ ಗ್ರಂಥಗಳೊಂದಿಗೆ ಕೆಲವೊಮ್ಮೆ ಸಹಮತಿಸುತ್ತದೆ, ಕೆಲವು ಕಡೆ ಸಹಮತಿಸುವುದಿಲ್ಲ. ಈ ಕೋಡೆಕ್ನ್ಷ ಮಹಾ ಮೌಲ್ಯತೆಯು ಅದರ ಒಪ್ಪುತಪ್ಪುಗಳ ಮತ್ತು ಕೂಡಿಸುವಿಕೆಗಳ ವೈಶಿಷ್ಟತೆಯಲ್ಲಿ ಅಲ್ಲ, ಬದಲು ಇತರ ಪ್ರಮುಖ ಹಸ್ತಾಕ್ಷರ ಪ್ರತಿಗಳೊಂದಿಗೆ ಅದು ಸ್ಥಿರೀಕರಿಸುವುದರಲ್ಲಿ ಅಡಕವಾಗಿರುತ್ತದೆ.—ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದಿ ಹೋಲಿ ಸ್ಕ್ರಿಪ್ಚರ್ಸ್—ವಿದ್ ರೆಫರೆನ್ಸ್ ನಲ್ಲಿ ಮತ್ತಾಯ 23:14; 24:36; 27:49; ಮಾರ್ಕ 7:16; 9:44, 46; 11:26; ಲೂಕ 15:21; ಯೋಹಾನ 5:4 ರ ಪಾದಟಿಪ್ಪಣಿಯನ್ನು ನೋಡಿರಿ.
ಕೆಲವು ಅಸಾಮಾನ್ಯ ಓದುವಿಕೆಗಳ ಮತ್ತು ಪಾಠಾಂತರಗಳ ಹೊರತಾಗಿಯೂ, ಕೋಡೆಕ್ಷ್ ಬೆಝಾಯೀಯು, ನಮ್ಮ ದಿನಗಳ ತನಕ ಬೈಬಲು ಸುರಕ್ಷಿತವಾಗಿ ಉಳಿದಿರುವುದರ ಇನ್ನೊಂದು ಉತ್ತಮ ಸಾಕ್ಷ್ಯವಾಗಿರುತ್ತದೆ. (w90 2/15)
[ಪುಟ 10 ರಲ್ಲಿರುವ ಚಿತ್ರ ಕೃಪೆ]
Above: By permission of the Syndics of Cambridge University Library
Left: Courtesy of the Trustees of the British Museum