ನಿಮಗೆ ನೆನಪಿದೆಯೋ?
ಇತ್ತೀಚೆಗೆ ಕಾವಲಿನಬುರುಜು ಸಂಚಿಕೆಗಳು ವ್ಯಾವಹಾರಿಕ ಮೌಲ್ಯತೆಯುಳ್ಳವುಗಳೆಂದು ನೀವು ಕಂಡುಕೊಂಡಿರೋ? ಹಾಗಾದರೆ, ಕೆಳಗಿನವುಗಳೊಂದಿಗೆ ನಿಮ್ಮ ಜ್ಞಾಪಕ ಶಕ್ತಿಯನ್ನೇಕೆ ಪರೀಕ್ಷಿಸಬಾರದು?
◻ ಸೈತಾನನ ಕುತಂತ್ರದ ಹಾಗೂ ಕುಟಿಲೋಪಾಯಗಳನ್ನು ನಾವು ಎದುರಿಸಬಹುದಾದ ಒಂದು ಮಾರ್ಗವು ಯಾವುದು?
ಸೈತಾನನನ್ನು ಎದುರಿಸಲು ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಬೇಕು. ಸೈತಾನನು ದುರುಪಯೋಗಿಸುವ ಅಥವಾ ಈಗಲೇ ದುರುಪಯೋಗ ಮಾಡುತ್ತಿರುವ ಯಾವುದೋ ಒಂದು ಬಲಹೀನತೆ ನಮ್ಮಲ್ಲಿದೆಯೇ? ಉದಾಹರಣೆಗೆ: ನಮ್ಮಲ್ಲಿ ನಾವೇ ಮಿಗಿಲೆಂಬ ಭಾವನೆ ಇದೆಯೇ? ಯಾವಾಗಲು ನಾವೇ ಮೊದಲಾಗಬೇಕೋ? ನಾವು ನಮ್ಮನ್ನು ತಿಳಿದಿದ್ದರೆ, ಅಂತ ಸಮಸ್ಯೆಗಳನ್ನು ನಾವು ಸರಿಪಡಿಸಬಲ್ಲೆವು. ಆದರೆ ನಮ್ರತೆ ನಮ್ಮಲ್ಲಿರಬೇಕು. ಈ ರೀತಿಯಲ್ಲಿ ಸೈತಾನನಿಗೆ ನಾವು ನಮ್ಮನ್ನು ತೆರೆದಿಡಲಾರೆವು. 12⁄1, ಪುಟ 10, 11.
◻ ನಾವು “ಒಬ್ಬರನ್ನೊಬ್ಬರು ಹೃದಯಪೂರ್ವಕ ಗಾಢವಾಗಿ ಪ್ರೀತಿಸಬೇಕೆಂದು” ಅಪೋಸ್ತಲ ಪೇತ್ರನು ಹೇಳಿದ್ದರ ಅರ್ಥವೇನು? (1 ಪೇತ್ರ 1:22)
“ಗಾಢವಾಗಿ” ಇದರ ಅಕ್ಷರಶ: ಅರ್ಥ “ಪೂರ್ತಿ ಚಾಚಿಕೊಂಡು” ಎಂದಾಗಿದೆ. ಅಂತಹ ಪ್ರೀತಿಯನ್ನು ಕ್ರೈಸ್ತರು ವ್ಯಕ್ತಪಡಿಸಬೇಕಾದರೆ ಪ್ರಯತ್ನದ ಅಗತ್ಯವಿದೆ ಮತ್ತು ನಮಗೆ ಸಹಜವಾಗಿ ಆಕರ್ಶಕರಲ್ಲದ ವ್ಯಕ್ತಿಗಳನ್ನು ಒಳಸೇರಿಸಲು ಸಾಧ್ಯವಾಗುವಂತೆ ನಮ್ಮ ಹೃದಯಗಳನ್ನು ವಿಶಾಲಮಾಡಿಕೊಳ್ಳಬೇಕಾಗಿದೆ.—12⁄1, ಪುಟ 16.
◻ ನಮ್ಮೆಲ್ಲರನ್ನು ನಿತ್ಯ ಆಶೀರ್ವಾದಗಳಿಗೆ ನಡಿಸುವ ಏಳು ಪ್ರಗತಿಪರ ದೈವಿಕ ಒಡಂಬಡಿಕೆಗಳು ಏನಾಗಿವೆ?
ಏದೇನಿನ ಒಡಂಬಡಿಕೆ, ಅಬ್ರಹಾಮನೊಂದಿಗಿನ ಒಡಂಬಡಿಕೆ, ನಿಯಮದೊಡಂಬಡಿಕೆ, ಮೆಲ್ಕೆಚೆದೇಕನ ತರಹದ ಯಾಜಕನಿಗಾಗಿ ಒಡಂಬಡಿಕೆ, ದಾವೀದನ ರಾಜ್ಯದೊಡಂಬಡಿಕೆ, ಹೊಸ ಒಡಂಬಡಿಕೆ ಮತ್ತು ರಾಜ್ಯದೊಡಂಬಡಿಕೆ.—2⁄1, ಪುಟ 19.
◻ ಅಬ್ರಹಾಮನ ಒಡಂಬಡಿಕೆಗೆ ತಾತ್ಕಾಲಿಕವಾಗಿ ದೇವರು ನಿಯಮದೊಡಂಬಡಿಕೆಯನ್ನು ಕೂಡಿಸಿದ್ದು ಯಾಕೆ?
ನಿಯಮದೊಡಂಬಡಿಕೆಯು ಇಸ್ರಾಯೇಲ್ಯರನ್ನು ಶಾಶ್ವತ ಯಾಜಕನ ಮತ್ತು ಒಂದು ಪರಿಪೂರ್ಣ ಯಜ್ನದ ಅವಶ್ಯಕತೆಯಿರುವ ಪಾಪಿಗಳೆಂದು ರುಜುಪಡಿಸಿತು. ಅದು ಸಂತಾನವಾದಾತನ ಸಾಲನ್ನು ಸಂರಕ್ಷಿಸಿತು ಮತ್ತು ಸಂತಾನ ಯಾರೆಂದು ಗುರುತಿಸಲು ನೆರವಾಯಿತು. ಒಂದಾನೊಂದು ದಿನ ರಾಜ—ಯಾಜಕನ ಜನಾಂಗವವೂಂದು ದೇವರಿಗಿರುವದೆಂದು ಸಹಾ ಅದು ತೋರಿಸಿತು.—2⁄1, ಪುಟ 16.
◻ ಒಂದು ಯಶ್ವಸೀ ವಿವಾಹಕ್ಕೆ ಮೂಲಾಧಾರ ಯಾವುದು?
ವಿವಾಹಜತೆಯು ಪರಸ್ಪರ ಪ್ರೀತಿ, ಗೌರವ ಮತ್ತು ನಿಷ್ಟೆಯನ್ನು ತೋರಿಸಬೇಕು. ಅವರು ಒಬ್ಬರು ಇನ್ನೊಬ್ಬರ ಸದ್ಗುಣಗಳನ್ನು ಗಣ್ಯಮಾಡುವವರೂ ಪರಸ್ಪರ ಬಲಹೀನತೆಗಳನ್ನು ಲಕ್ಷಿಸದೇ ಒಬ್ಬರನ್ನೊಬ್ಬರು ಮನ್ನಿಸಲು ಕಲಿಯಬೇಕು.—4⁄1, ಪುಟ 21.
◻ ಕೊಡೆಕ್ಸ್ ಸೈನೈಟಿಕಸ್ ಎಂದರೇನು, ಮತ್ತು ಅವು ಅಷ್ಟೊಂದು ಪ್ರಾಮುಖ್ಯವೇಕೆ?
ಕೊಡೆಕ್ಸ್ ಸೈನೈಟಿಕಸ್ ನಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರದ ಪೂರಾ ಭಾಗ ಮತ್ತು ಹಿಬ್ರೂ ಶಾಸ್ತ್ರದ ಅಂಶಿಕ ಗ್ರೀಕ್ ತರ್ಜುಮೆಯು ಅಡಕವಾಗಿದೆ. ಇದು ಕಡಿಮೆಪಕ್ಷ 1600 ವರ್ಷ ಪುರಾತನದ್ದು, ಮತ್ತು ನಮ್ಮ ಬೈಬಲ್ ಹಸ್ತಪ್ರತಿಗಳ ಪುಸ್ತಕಪಟ್ಟಿ (ಕ್ಯಾಟ್‌ಲಾಗ್) ಯಲ್ಲಿ ಒಂದು ಪ್ರಮುಖ ಕೊಂಡಿಯೂ ಆಗಿರುತ್ತದೆ.—4⁄1, ಪುಟ 30, 31.