ವಾಗ್ದಾನ ದೇಶದ ದೃಶ್ಯಗಳು
ಸಮಾರ್ಯ—ಉತ್ತರದ ಮುಖ್ಯ ಪಟ್ಟಣಗಳಲ್ಲಿ ಮುಖ್ಯ ಪಟ್ಟಣ
ಬಾಬೆಲ್, ನಿನವೆ ಮತ್ತು ರೋಮ್. ಇವು ಬೈಬಲಿನ ಕಾಲದಲ್ಲಿನ ಮುಖ್ಯಪಟ್ಟಣಗಳು. ಆದರೂ ಬೈಬಲ್ ಭಾಷೆಯಲ್ಲಿ ಹೇಳುವದಾದರೆ, ಯೆರೂಸಲೇಮನ್ನು ಬಿಟ್ಟು ಅತ್ಯಂತ ಗಮನಾರ್ಹ ಮುಖ್ಯ ಪಟ್ಟಣವು ಅವು ಒಂದೂ ಅಲ್ಲ, ಸಮಾರ್ಯವೇ ಮುಖ್ಯ. ಸುಮಾರು 200 ವರ್ಷಗಳ ತನಕ ಅದು ಇಸ್ರಾಯೇಲ್ಯರ ಹತ್ತು-ಕುಲಗಳ ರಾಜ್ಯದ ರಾಜಧಾನಿಯಾಗಿತ್ತು, ಮತ್ತು ಅನೇಕ ಪ್ರವಾದನಾ ಸಂದೇಶಗಳು ಸಮಾರ್ಯದ ಮೇಲೆ ಕೇಂದ್ರಿತವಾಗಿದ್ದವು. ಆದರೆ ನಿಮಗೆ ಸಮಾರ್ಯದ ಕುರಿತೆಷ್ಟು ಗೊತ್ತಿದೆ? ಮತ್ತು ಅದು ಉತ್ತರದ ಮುಖ್ಯಪಟ್ಟಣಗಳಲ್ಲಿ ಮುಖ್ಯ ಪಟ್ಟಣವಾಗಿತ್ತು ಏಕೆ?
ಇಸ್ರಾಯೇಲ್ಯರ ಹತ್ತು ಕುಲಗಳು ಯೆರೂಸಲೇಮಿನಲ್ಲಿ ಯೆಹೋವನ ರಾಜ್ಯ ಮತ್ತು ಆಲಯದಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡ ನಂತರದ ಸ್ವಲ್ಪ ಇತಿಹಾಸವನ್ನು ನೆನಪಿಗೆ ತರುತ್ತಾ, ನಕ್ಷೆಯಲ್ಲಿ ನೋಡಿರಿ. ಉತ್ತರದ ರಾಜ್ಯವನ್ನು ರಚಿಸುವುದರಲ್ಲಿ ನಾಯಕನಾದ ಯಾರೊಬ್ಬಾಮನು ಉತ್ತರದ ಬೆಟ್ಟ ಮಾರ್ಗದಲ್ಲಿದ್ದ ಶೆಕೆಮ್ನಲ್ಲಿ ಕೊಂಚ ಕಾಲ ಆಳಿದ್ದನು. ಅನಂತರ ಯಾರೊಬ್ಬಾಮನು ತನ್ನ ರಾಜಧಾನಿಯನ್ನು ಮಾಡಿ ಫೇರದ ಮುಖದಲ್ಲಿದ್ದ ತಿರ್ಚಕ್ಕೆ ಸ್ಥಳಾಂತರಿಸಿದನು. ಯೊರ್ದನ್ ತಗ್ಗಿನಿಂದ ಒಂದು ದಾರಿಯು ತಿರ್ಚವನ್ನು ಹಾದುಹೋಗಿ ಬೆಟ್ಟದ ದಾರಿಯನ್ನು ಕೂಡುತ್ತಿತ್ತು. ತಿರ್ಚವು ನಾದಾಬ, ಬಾಷ, ಏಲ, ಜಿಮ್ರಿ, ಮತ್ತು ಒಮ್ರಿಯ ಆಳಿಕೆಯಲ್ಲೂ, ಹತ್ತು-ಕುಲಗಳ ರಾಜಧಾನಿಯಾಗಿತ್ತೆಂದು ನಿಮಗೆ ಗೊತ್ತೋ?—ಆದಿಕಾಂಡ 12:5-9; 33:17, 18; 1 ಅರಸು 12:20, 25, 27; 14:17; 16:6, 15, 22.
ಆದರೆ ಆರು ವರ್ಷಗಳ ನಂತರ ಓಮ್ರಿಯು ಒಂದು ಹೊಸ ರಾಜಧಾನಿಯನ್ನು ನಿರ್ಮಿಸಿದನು. ಎಲ್ಲಿ? ಎಡದಲ್ಲಿ ನೀವು ಕಾಣುವ ಒಂದು ಗುಡ್ಡವನ್ನು ಅವನು ಕೊಂಡುಕೊಂಡನು, ಅದೇ ಸಮಾರ್ಯವು. (1 ಅರಸು 16:23-28) ಅದರಲ್ಲೀಗ ವ್ಯವಸಾಯಕ್ಕಾಗಿ ಹೇರಳವಾದ ಮೆಟ್ಟಲುದಿಬ್ಬಗಳಿದ್ದರೂ ಒಮ್ರಿಯು ಅದನ್ನು ಆರಿಸಿದ್ದು, ಬಯಲು ಪ್ರದೇಶದಿಂದ ಮೇಲೆದ್ದು ನಿಂತ ಚಪ್ಪಟೆ ಶಿಖರದ ಆ ಗುಡ್ಡವನ್ನು ಸುಲಭವಾಗಿ ಕಾಯಬಹುದಾಗಿದ್ದ ಕಾರಣದಿಂದಲೇ ಇದ್ದಿರಬಹುದು. ಅವನ ಪುತ್ರ ಆಹಾಬನು ಸಮಾರ್ಯ ಪಟ್ಟಣವನ್ನು ಕಟ್ಟುತ್ತಾ ಅಗಲವಾದ ಕೋಟೆ ಗೋಡೆಗಳಿಂದ ಅದನ್ನು ಭದ್ರಪಡಿಸಿದನು. ಅವನು ಬಾಳನಿಗೋಸ್ಕರವೂ ಒಂದು ದೇವಸ್ಥಾನವನ್ನು, ಮತ್ತು ತನಗಾಗಿ ಮತ್ತು ತನ್ನ ಚಿದೋನ್ಯ ಹೆಂಡತಿ ಈಜಬೇಲಳಿಗಾಗಿ ಒಂದು ಅರಮನೆಯನ್ನು ಕಟ್ಟಿಸಿದನು. ಅಗೆತಶಾಸ್ತ್ರವು ಪ್ರಕಟಿಸಿರುವ ಆಹಾಬನ ಅರಮನೆಯ ಅವಶೇಷಗಳನ್ನು ಮುಂದಿನ ಪುಟದಲ್ಲಿ ಕಾಣಬಹುದು. ಆ ಅರಮನೆಯು ಅತಿಭೋಗಕ್ಕೆ ಮತ್ತು ಅತಿರೇಕ ಕೆಟ್ಟತನಕ್ಕೆ ಪ್ರಖ್ಯಾತವಾಗಿತ್ತು. (1 ಅರಸು 16:29-33) ಆಹಾಬನ ಬಾಳ-ಕೇಂದ್ರಿತ ಕೆಟ್ಟತನವನ್ನು ಖಂಡನೆ ಮಾಡಲು ಅಲ್ಲಿಗೆ ಹೋದ ಪ್ರವಾದಿ ಎಲೀಯನು, ಈ ಶಹರವನ್ನು ಹತ್ತಿದ್ದನ್ನು ಮತ್ತು ಹೆದ್ದಾರಿಯಲ್ಲಿ ನಡೆದು ಅರಮನೆಗೆ ಹೋದದ್ದನ್ನು ಚಿತ್ರಿಸಿಕೊಳ್ಳಿರಿ.—1 ಅರಸು 17:1.
1910 ರಲ್ಲಿ ಭೂಗರ್ಭ ಶಾಸ್ತ್ರಿಗಳು ಬರಹಗಳಿದ್ದ ಮಡಕೆ ಚೂರುಗಳನ್ನು ಅಲ್ಲಿ ಕಂಡುಕೊಂಡರು, ಆ ಬರಹಗಳು ದ್ರಾಕ್ಷಾರಸ ಮತ್ತು ಆಲಿವ್ ಎಣ್ಣೆಯ ಹಡಗು ಸರಕುಗಳ ಯಾ ಕಂದಾಯ ಸಲ್ಲಿಸಿದ ದಾಖಲೆಗಳಾಗಿದ್ದವು. ಆದರೆ ಅವುಗಳ ಮೇಲೆ ಬರೆದಿದ್ದ ಅನೇಕ ವೈಯಕ್ತಿಕ ಹೆಸರುಗಳಲ್ಲಿ ಬಾಳ್ ಉಪಾಂಗವು ಸೇರಿತ್ತು. ಇಲ್ಲಿ ತೋರಿಸಲ್ಪಟ್ಟ ಪ್ರಕಾರ, ಅಗೆತ ಶಾಸ್ತ್ರಿಗಳು ಕಂಡು ಹಿಡಿದ ದಂತ ಖಚಿತ ಅಥವಾ ಫಲಕಗಳುಳ್ಳ ಅವಶೇಷಗಳೂ ನಿಮಗೆ ಆಸಕ್ತಿಯನ್ನು ಹುಟ್ಟಿಸಬಹುದು. 1 ಅರಸು 22:39 ರಲ್ಲಿ, ಆಹಾಬನು ಒಂದು “ದಂತ ಮಂದಿರ”ವನ್ನು ಕಟ್ಟಿದ್ದನೆಂದು ಬಹಳ ಪೂರ್ವದಲ್ಲೇ ತಿಳಿಸಲಾಗಿದೆ. ಪ್ರಾಯಶಃ ಕೊರೆದ ದಂತದ ಫಲಕಗಳುಳ್ಳ ಪೀಠೋಪಕರಣಗಳು, ಶತಮಾನದ ನಂತರ ಪ್ರವಾದಿ ಆಮೋಸನು ನಿರ್ದೇಶಿಸಿದಂಥ “ದಂತದ ಮಂಚ” ಮುಂತಾದವುಗಳು ಅದರಲ್ಲಿ ಸೇರಿರ ಬಹುದು. (ಆಮೋಸ 3:12, 15; 6:1, 4) ಅವುಗಳ ಮೇಲೆ ಕೊರೆದಿದ್ದ ಕಲಾಕೃತಿಗಳಲ್ಲಿ ಇಜಿಪ್ಟಿನ ಪುರಾಣದ ರೆಕ್ಕೆಗಳುಳ್ಳ ಸಿಂಹಿಣಿಗಳು ಮತ್ತು ಇತರ ಕುರುಹುಗಳು ಕೂಡಿದ್ದವು.
ಆಹಾಬ ಮತ್ತು ಈಜಬೇಲಳ ಹೆಸರುಗಳು ತಾವೇ, ಅವರು ಸತ್ತ ವಿಧಾನವನ್ನು ನಿಮ್ಮ ಮನಸ್ಸಿಗೆ ತರಬಹುದು. ಸಿರಿಯಾದೊಂದಿಗೆ ನಡಿಸಿದ ಒಂದು ಬುದ್ಧಿಹೀನ ಯುದ್ಧದಲ್ಲಿ ಆಹಾಬನು ಮಡಿದನು. ಅವನ ರಥವನ್ನು “ಸಮಾರ್ಯದ ಕೆರೆಯಲ್ಲಿ ತೊಳೆಯುತ್ತಿದ್ದಾಗ . . . ನಾಯಿಗಳು ಬಂದು ಅದರ ರಕ್ತವನ್ನು ನೆಕ್ಕಿದವು.” ಎಲೀಯನು ಹೇಳಿದ ಮಾತುಗಳು ಸತ್ಯವಾದವು. (1 ಅರಸು 21:19; 22:34-38) ರಾಣಿ ಈಜಬೇಲಳು ಅರಮನೆಯ ಕಿಟಿಕಿಯೊಳಗಿಂದ ಎಸೆಯಲ್ಪಟ್ಟು ಸತ್ತಳು. ಆಕೆ ಎಸೆಯಲ್ಪಟ್ಟದ್ದು ಈ ಸಮಾರ್ಯದಲ್ಲಿನ ಅರಮನೆಯಿಂದಲೋ? ಅಲ್ಲ. ಉತ್ತರದ ಇಜ್ರೇಲ್ ತಗ್ಗಿನಲ್ಲೂ ಆಹಾಬನಿಗೆ ಒಂದು ಅರಮನೆ ಇತ್ತು. ಸಮೀಪದಲ್ಲಿದ್ದ ನಾಬೋತನ ದ್ರಾಕ್ಷೇತೋಟವನ್ನು ಅವನು ಆಶಿಸಿದ್ದನು. ಆ ಅರಮನೆಯ ಶಿಖರದಿಂದ ಕಾವಲುಗಾರರು ಪೂರ್ವಾಭಿಮುಖವಾಗಿ ನೋಡಿದಾಗ, ಯೇಹುವು ತಗ್ಗಿನಿಂದ ರಭಸದಿಂದ ರಥ ಓಡಿಸುತ್ತಾ ಬರುವುದನ್ನು ಕಂಡರು. ಮತ್ತು ಅಲ್ಲಿಯೇ ಸಮಾರ್ಯದ ಮಾಜೀ ರಾಣಿಯು ತನ್ನ ಭೀಕರವಾದ, ಆದರೆ ನ್ಯಾಯಸಮ್ಮತ ಅಂತ್ಯಕ್ಕೆ ದೊಬ್ಬಲ್ಪಟ್ಟಳು.—1 ಅರಸು 21:1-16; 2 ಅರಸು 9:14-37.
ಸಮಾರ್ಯವು ಮುಖ್ಯ ಪಟ್ಟಣವಾಗಿ ಮುಂದರಿದರೂ ಅದಕ್ಕೆ ದೇವರ ಅನುಗ್ರಹವಾಗಲಿ, ಆಶೀರ್ವಾದವಾಗಲಿ ಇರಲಿಲ್ಲ. ಬದಲಿಗೆ ಅದು, ಉತ್ತರದ ಆತನ ಮುಖ್ಯಪಟ್ಟಣವಾದ ಯೆರೂಸಲೇಮಿನೆಡೆ ಮೇಲಾಟವನ್ನೂ, ದ್ವೇಷವನ್ನೂ ತೋರಿಸಿತ್ತು. ಸಮಾರ್ಯದ ಅಧಿಪತಿಗಳಿಗೆ ಮತ್ತು ನಿವಾಸಿಗಳಿಗೆ ಅವರ ವಿಗ್ರಹಾರಾಧನೆ, ಅನೈತಿಕತೆ, ನಿಯಮಭಂಜನೆಯ ಕುರಿತು ಎಚ್ಚರಿಸಲು ಯೆಹೋವನು ಅನೇಕ ಪ್ರವಾದಿಗಳನ್ನು ಕಳುಹಿಸಿದರೂ ಪ್ರಯೋಜನವಾಗಲಿಲ್ಲ. (ಯೆಶಾಯ 9:9; 10:11; ಯೆಹೆಜ್ಕೇಲ 23:4-10; ಹೋಶೇಯ 7:1; 10:5; ಆಮೋಸ 3:9; 8:14; ಮೀಕ 1:1, 6) ಹೀಗೆ, ಸಾ. ಶ. ಪೂ. 740 ರಲ್ಲಿ ಸಮಾರ್ಯಕ್ಕೆ ತನ್ನ ಲೆಕ್ಕ ತೀರಿಸಬೇಕಾಯಿತು. ಅಶ್ಯೂರ್ಯರು ಬಂದು ಅದನ್ನು ಧ್ವಂಸ ಮಾಡಿ ಬಿಟ್ಟರು. ಅದರ ಅನೇಕ ನಿವಾಸಿಗಳು ಕೈದಿಗಳಾಗಿ ಒಯ್ಯಲ್ಪಟ್ಟರು, ಅವರ ಸ್ಥಳದಲ್ಲಿ ಪರದೇಶಸ್ಥರು ಇಡಲ್ಪಟ್ಟರು.—2 ಅರಸು 17:1-6, 22-24.
ಸಮಯಾನಂತರ, ವಿಶೇಷವಾಗಿ ಮಹಾ ಹೆರೋದನ ಕಾಲದಲ್ಲಿ, ಗ್ರೀಕರು ಮತ್ತು ರೋಮೀಯರು ಸಮಾರ್ಯವನ್ನು ಸ್ವಲ್ಪ ಪ್ರಖ್ಯಾತಿಗೆ ತಂದರು. ಹೀಗೆ, ಉತ್ತರದ ಮುಖ್ಯ ಪಟ್ಟಣಗಳಲ್ಲಿ ಮುಖ್ಯಪಟ್ಟಣವಾದ ಇದರ ಪರಿಚಯವು ಯೇಸು ಮತ್ತು ಆತನ ಅಪೊಸ್ತಲರಿಗೂ ಆಗಿತ್ತು.—ಲೂಕ 17:11; ಯೋಹಾನ 4:4. (w90 11/1)
[ಪುಟ 10ರಲ್ಲಿರುವಚಿತ್ರ]
(For fully formatted text, see publication)
ಇಜ್ರೇಲ್
ತಿರ್ಚ
ಸಮಾರ್ಯ
ಶೆಕೆಮ್
ಯೆರೂಸಲೇಮ್
ಯೊರ್ದನ್ ಹೊಳೆ
[ಕೃಪೆ]
Based on a map copyrighted by Pictorial Archive (Near Eastern History) Est. and Survey of Israel.
[ಪುಟ 10 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 11 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
Garo Nalbandian
Inset: Israel Department of Antiquities and Museums; photograph from Israel Museum, Jerusalem