ಕ್ರಿಸ್ತನ ಮೂಲಕ ಐಕ್ಯತೆ ನಿಶ್ಚಯ
ಎಫೆಸದವರಿಗೆ ಪತ್ರದಿಂದ ಅತ್ಯುಜಲ್ವ ಭಾಗಗಳು
ಅಪೊಸ್ತಲ ಪೌಲನು ಎಫೆಸದಲ್ಲಿ ಸಾರಿದ್ದು ಸಾ. ಶ. 52 ರ ಆರಂಭದಲ್ಲಿ. ಏಷ್ಯಾ ಮೈನರಿನ ಈ ಧನಿಕ ವ್ಯಾಪಾರಿ ಪಟ್ಟಣವು ಸುಳ್ಳು ಧರ್ಮದ ಕೇಂದ್ರವೂ ಆಗಿತ್ತು. ಆದರೆ ಕ್ರೈಸ್ತತ್ವವು ಅಲ್ಲಿ ಹಬ್ಬಿದ್ದು ಪೌಲನು ಎಫೆಸಕ್ಕೆ ಹಿಂದಿರುಗಿದ ನಂತರ ಪ್ರಾಯಶಃ, ಸಾ. ಶ. 52⁄53 ರ ಚಳಿಗಾಲದೊಳಗೆ. ಅವನು ಅಲ್ಲಿ ಸುಮಾರು ಮೂರು ವರ್ಷಗಳ ತನಕ ದಿನಾಲೂ ಶಾಲಾ ಸಭಾಂಗಣದಲ್ಲಿ ಭಾಷಣವಿತ್ತನು ಮತ್ತು ಮನೆ ಮನೆಯಲ್ಲಿ ಸಾಕ್ಷಿಕೊಟ್ಟನು.—ಅ.ಕೃತ್ಯಗಳು 19:8-10; 20:20, 21, 31.
ರೋಮಿನಲ್ಲಿ ಸಾ. ಶ. 60-61 ರ ಸುಮಾರಿಗೆ ಸೆರೆಯಲ್ಲಿದ್ದಾಗ ಪೌಲನು ಎಫೆಸದ ಕ್ರೈಸ್ತರಿಗೆ ಈ ಪತ್ರ ಬರೆದನು. ಐಕ್ಯತೆ ಮತ್ತು ಅದೂ ಕ್ರಿಸ್ತನ ಮೂಲಕ ಎಂಬದೇ ಅವನ ಪತ್ರದ ಮುಖ್ಯ ವಿಷಯವಾಗಿತ್ತು. ವಾಸ್ತವದಲ್ಲಿ “ಕ್ರಿಸ್ತನೊಂದಿಗೆ ಐಕ್ಯತೆ” ಎಂಬ 13 ನಿರ್ದೇಶನೆಗಳು ಇದರಲ್ಲಿ ಅಡಕವಾಗಿವೆ, ಇದು ಪೌಲನು ಬರೆದ ಬೇರೆ ಯಾವುದೇ ಪತ್ರದಲ್ಲಿರುವದಕ್ಕಿಂತ ಹೆಚ್ಚು. ಎಫೆಸದವರಂತೆ ನಾವು ಸಹಾ, ಕ್ರಿಸ್ತನ ಪಾತ್ರದ ಕುರಿತು, ಅನೈತಿಕತೆಯನ್ನು ವಿಸರ್ಜಿಸುವ ಕುರಿತು ಮತ್ತು ದುರಾತ್ಮ ಸೇನೆಯನ್ನು ಎದುರಿಸುವ ಕುರಿತು ಪೌಲನು ಇದರಲ್ಲಿ ಬರೆದ ಮಾತುಗಳಿಂದ ಪ್ರಯೋಜನ ಹೊಂದಬಲ್ಲೆವು.
ಐಕ್ಯತೆಯೇ ದೇವರ ಉದ್ದೇಶ
ಕ್ರಿಸ್ತನ ಮೂಲಕವಾಗಿ ಐಕ್ಯತೆಯನ್ನು ತರುವ ವಿಧಾನವನ್ನು ಮೊದಲಾಗಿ ಪೌಲನು ವಿವರಿಸುತ್ತಾನೆ. (1:1-23) ಯೆಹೋವನು ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಒಂದಾಗಿ ಕೂಡಿಸಲು ಒಂದು “ಸಂಕಲ್ಪ”ವನ್ನು (ಕಾರ್ಯಭಾರ ನಿರ್ವಹಿಸುವ ದಾರಿಯನ್ನು) ಮಾಡಿದ್ದಾನೆ. ಕ್ರಿಸ್ತನ ಮೂಲಕವಾಗಿ ದೇವರು, ಸ್ವರ್ಗೀಯ ಜೀವಿತಕ್ಕೆ ಆರಿಸಲ್ಪಟ್ಟವರನ್ನು ಮತ್ತು ಭೂಮಿಯ ಮೇಲೆ ಜೀವಿಸುವ ಇತರರನ್ನು ತನ್ನೊಂದಿಗೆ ಒಂದುಗೂಡಿಸುವನು. ಇಂದು ದೇವರು ಅಭಿಷಿಕ್ತರನ್ನು ಮತ್ತು “ಮಹಾ ಸಮೂಹ”ದವರನ್ನು ಒಂದುಗೂಡಿಸಿದ್ದಾನೆ ಮತ್ತು ‘ಭೂಲೋಕದಲ್ಲಿರುವ ಸಮಸ್ತದ ಒಂದುಗೂಡಿಸುವಿಕೆಯು,’ ಜ್ಞಾಪಕ ಸಮಾಧಿಯಲ್ಲಿರುವವರು ಯೇಸುವಿನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ತನಕ ಮುಂದುವರಿಯುವದು. (ಪ್ರಕಟನೆ 7:9; ಯೋಹಾನ 5:28, 29) ನಾವು ಇದಕ್ಕಾಗಿ ಕೃತಜ್ಞರಾಗಿ ಇರಬೇಕು, ಎಫೆಸದವರಿಗೆ ದೇವರು ಕೊಟ್ಟ ಒದಗಿಸುವಿಕೆಗಾಗಿ ಅವರು ಗಣ್ಯತೆ ತೋರಿಸುವಂತೆ ಪೌಲನು ಪ್ರಾರ್ಥಿಸಿದ ರೀತಿಯಲ್ಲಿಯೇ.
ಪಾಪದಲ್ಲಿ ಒಮ್ಮೆ ಸತ್ತವರಾಗಿದ್ದ ಅನ್ಯಜನರ ಕಡೆಗೆ ಗಮನವನ್ನು, ಅನಂತರ ಕೊಡಲಾಯಿತು. (2:1–3:21) ಕ್ರಿಸ್ತನ ಮೂಲಕವಾಗಿ ನಿಯಮ ಶಾಸ್ತ್ರವು ರದ್ದುಗೊಳಿಸಲ್ಪಟ್ಟಿತು ಮತ್ತು ಯೆಹೂದ್ಯರನ್ನು ಮತ್ತು ಅನ್ಯರನ್ನು ಒಂದುಮಾಡುವ ಬುನಾದಿಯು ಹಾಕಲ್ಪಟ್ಟಿತು ಮತ್ತು ದೇವರು ತನ್ನ ಆತ್ಮದಲ್ಲಿ ನಿವಾಸಿಸುವ ಮಂದಿರದೋಪಾದಿ ಅವರು ಕಟ್ಟಲ್ಪಟ್ಟರು. ಯಾರ ಮೂಲಕವಾಗಿ ದೇವರ ಸಾನಿಧ್ಯವನ್ನು ವಾಕ್ ಸ್ವಾತಂತ್ರ್ಯದಿಂದ ಗೋಚರಿಸಬಲ್ಲರೋ ಆ ಕ್ರಿಸ್ತನಲ್ಲಿ ಅನ್ಯರು ಒಂದಾಗಬಹುದೆಂಬ ಈ ಮರೆಯಾಗಿದ್ದ ಮರ್ಮವನ್ನು ಪ್ರಕಟ ಪಡಿಸುವ ಪಾರುಪತ್ಯವು ಪೌಲನದ್ದಾಗಿತ್ತು. ಪೌಲನು ಪುನಃ ಎಫೆಸದವರಿಗಾಗಿ ಪ್ರಾರ್ಥಿಸಿದನು, ಅವರು ನಂಬಿಕೆ ಮತ್ತು ಪ್ರೀತಿಯಿಂದ ದೃಢವಾಗಿ ನೆಲೆಗೊಳ್ಳುವಂತೆ ಈ ಸಲ ಯೆಹೋವನನ್ನು ಬೇಡಿ ಕೊಂಡನು.
ಐಕ್ಯತೆಯನ್ನು ಪ್ರವರ್ಧಿಸುವ ಸಂಗತಿಗಳು
ದೇವರು ಐಕ್ಯತೆಯ ಸಾಧನಗಳನ್ನು ಒದಗಿಸಿರುತ್ತಾನೆಂದು ಪೌಲನು ತೋರಿಸಿದ್ದಾನೆ. (4:1-16) ಒಂದೇ ಆತ್ಮಿಕ ದೇಹದಂತಿರುವ ಸಭೆಯು ಅವುಗಳಲ್ಲಿ ಒಂದು. ಈ ದೇಹವು ಕ್ರಿಸ್ತನ ಶಿರಸ್ಸಿನ ಕೆಳಗೆ ಐಕ್ಯತೆಯಿಂದ ಕಾರ್ಯನಡಿಸುತ್ತದೆ. ನಂಬಿಕೆಯಲ್ಲಿ ಎಲ್ಲರೂ ಐಕ್ಯವನ್ನು ಹೊಂದುವಂತೆ ಅವನು ಮನುಷ್ಯರಿಗೆ ದಾನಗಳನ್ನು ಮಾಡಿದನು.
ಐಕ್ಯತೆಯನ್ನು ಪ್ರವರ್ಧಿಸುವ ಕ್ರಿಸ್ತೀಯ ಗುಣಗಳನ್ನು ಪ್ರದರ್ಶಿಸಲು ಶಕ್ಯವಾಗುವಂತೆಯೂ ಯೆಹೋವನು ಮಾಡುತ್ತಾನೆ. (4:17–6:9) ಕ್ರೈಸ್ತರು “ಹೊಸ ವ್ಯಕ್ತಿತ್ವವನ್ನು ಧರಿಸಿದವರಾಗಿ,” ಅನೈತಿಕ ಮಾತುಗಳೇ ಮುಂತಾದ ಭಕ್ತಿಹೀನತೆಯನ್ನು ವಿಸರ್ಜಿಸ ಬೇಕು. ಅವರು ವಿವೇಕವುಳ್ಳವರಾಗಿ ನಡೆದು, ಕ್ರಿಸ್ತನಿಗೆ ಗೌರವ ತೋರಿಸುವವರಾಗಿದ್ದು ತಕ್ಕದ್ದಾದ ಅಧೀನತೆಯನ್ನು ಪ್ರದರ್ಶಿಸಬೇಕು.
ಅದಲ್ಲದೆ, ನಮ್ಮ ಐಕ್ಯತೆಯನ್ನು ಕೆಡಿಸುವ ದುರಾತ್ಮ ಸೇನೆಗಳನ್ನು ಎದುರಿಸುವಂತೆ ದೇವರು ಕ್ರೈಸ್ತರನ್ನು ಶಕ್ತರನ್ನಾಗಿ ಮಾಡುತ್ತಾನೆ. (6:10-24) ದೇವರಿಂದ ಬರುವ ಆತ್ಮಿಕ ಆಯುಧಗಳು ಅಂಥ ರಕ್ಷಣೆಯನ್ನು ಒದಗಿಸುತ್ತವೆ. ನಾವದನ್ನು ಉಪಯೋಗಿಸೋಣ ಮತ್ತು ಎಡೆಬಿಡದೆ ಪ್ರಾರ್ಥಿಸೋಣ, ನಮ್ಮ ವಿಜ್ಞಾಪನೆಗಳಲ್ಲಿ ನಮ್ಮ ಜತೆ ವಿಶ್ವಾಸಿಗಳನ್ನೂ ಸೇರಿಸೋಣ.
ಎಫೆಸದವರಿಗೆ ಪೌಲನು ಎಂಥ ಉತ್ತಮ ಸೂಚನೆಯನ್ನು ಕೊಟ್ಟನು ! ಅನೈತಿಕತೆಯನ್ನು ವಿಸರ್ಜಿಸುವ ಮೂಲಕ ಮತ್ತು ದುರಾತ್ಮ ಸೇನೆಯನ್ನು ಎದುರಿಸುವ ಮೂಲಕ ನಾವೂ ಅದನ್ನು ಪಾಲಿಸುವಂತಾಗಲಿ. ಮತ್ತು ಯೇಸು ಕ್ರಿಸ್ತನ ಮೂಲಕವಾಗಿ ನಾವು ಆನಂದಿಸುವ ಐಕ್ಯತೆಯನ್ನು ನಾವು ಆಳವಾಗಿ ಗಣ್ಯಮಾಡುವಂತಾಗಲಿ. (w90 11/15)
[ಪುಟ 31 ರಲ್ಲಿರುವ ಚೌಕ/ಚಿತ್ರಗಳು]
ಅಗ್ನಿ ಬಾಣಗಳು: ಆತ್ಮಿಕ ಆಯುಧಗಳಲ್ಲಿ ಸೈತಾನನ “ಅಗ್ನಿ ಬಾಣಗಳನ್ನು” ಆರಿಸುವ ಅಥವಾ ನಿರಪಾಯಕರವಾಗಿ ಮಾಡುವ “ನಂಬಿಕೆಯೆಂಬ ದೊಡ್ಡ ಗುರಾಣಿ” ಸೇರಿರುತ್ತದೆ. (ಎಫೆಸದವರಿಗೆ 6:16) ರೋಮನರಿಂದ ಪ್ರಯೋಗಿಸಲ್ಪಟ್ಟ ಕೆಲವು ಬಾಣಗಳು ಟೊಳ್ಳಾದ ಅಂಬುಗಳಾಗಿದ್ದು ಅವುಗಳ ತುದಿಯ ಸಂಪುಟದಲ್ಲಿ ಉರಿಯುವ ಕಲ್ಲೆಣ್ಣೆ ಕೂಡಿತ್ತು. ಬೆಂಕಿ ನಂದಿಸುವದನ್ನು ತಪ್ಪಿಸಲು ಅವನ್ನು ಸಡಿಲವಾದ ಬಿಲ್ಲುಗಳಿಂದ ಹೂಡಲಾಗುತಿತ್ತು, ಮತ್ತು ಅವುಗಳ ಮೇಲೆ ನೀರೆರೆಚಿದಲ್ಲಿ ಜ್ವಾಲೆಯು ಇನ್ನೂ ಹೆಚ್ಚಾಗುತ್ತಿತ್ತು. ಆದರೆ ದೊಡ್ಡ ಗುರಾಣಿಗಳು ಅಂಥ ಬಾಣಗಳಿಂದ ಸೈನಿಕರನ್ನು ರಕ್ಷಿಸುತ್ತಿದ್ದವು; ಯೆಹೋವನಲ್ಲಿ ನಂಬಿಕೆಯು ಅವನ ಸೇವಕರನ್ನು “ಕೆಡುಕನ ಅಗ್ನಿ ಬಾಣಗಳನ್ನು ಆರಿಸುವದಕ್ಕೆ ಶಕ್ತರಾಗಿ” ಮಾಡುವಂತೆಯೇ. ಹೌದು, ದುರಾತ್ಮಗಳ ಆಕ್ರಮಣವನ್ನು, ಕೆಟ್ಟದ್ದನ್ನು ಮಾಡುವ ಶೋಧನೆಗಳನ್ನು, ಪ್ರಾಪಂಚಿಕ ಜೀವನಕ್ರಮವನ್ನು ಬೆನ್ನಟ್ಟುವದನ್ನು ಮತ್ತು ಭಯ ಹಾಗೂ ಸಂಶಯಕ್ಕೆ ಒಳಬೀಳದಂತೆ ಎದುರಿಸಲು ನಂಬಿಕೆಯು ನಮಗೆ ಸಹಾಯ ಮಾಡುವುದು.