ಬೆಳಕಿನಲ್ಲಿ ಮತ್ತು ಪ್ರೀತಿಯಲ್ಲಿ ನಡೆಯುತ್ತಾ ಇರ್ರಿ
ಯೋಹಾನನ ಮೊದಲನೆಯ ಪತ್ರದ ಮುಖ್ಯಾಂಶಗಳು
ಯೆಹೋವನು ಬೆಳಕು ಮತ್ತು ಪ್ರೀತಿಯ ಉಗಮವಾಗಿದ್ದಾನೆ. ಆತ್ಮಿಕ ಬೆಳಕಿಗಾಗಿ ನಾವು ದೇವರ ಕಡೆಗೆ ನೋಡಬೇಕು. (ಕೀರ್ತನೆ 43:3) ಮತ್ತು ಪ್ರೀತಿಯು ಆತನ ಪವಿತ್ರಾತ್ಮದ ಫಲಗಳಲ್ಲಿ ಒಂದು.—ಗಲಾತ್ಯ 5:22, 23.
ಅಪೊಸ್ತಲ ಯೋಹಾನನ ಮೊದಲನೆಯ ಪ್ರೇರಿತ ಪತ್ರಿಕೆಯಲ್ಲಿ ಚರ್ಚಿಸಲಾದ ಬೆಳಕು, ಪ್ರೀತಿ ಮತ್ತು ಇತರ ವಿಷಯಗಳು, ಎಫೆಸದಲ್ಲಿ ಅಥವಾ ಅದರ ಸಮೀಪ ಸುಮಾರು ಸಾ.ಶ. 98ರಲ್ಲಿ ಬರೆಯಲ್ಪಟ್ಟಿದಿರ್ದಬೇಕು. ಅದನ್ನು ಬರೆದ ಒಂದು ಮುಖ್ಯ ಕಾರಣ ಕ್ರೈಸ್ತರನ್ನು ಧರ್ಮಭ್ರಷ್ಟತೆಯಿಂದ ಕಾಪಾಡಲು ಮತ್ತು ಬೆಳಕಿನಲ್ಲಿ ನಡಿಯುತ್ತಾ ಮುಂದರಿಯುವಂತೆ ಸಹಾಯ ಮಾಡಲಿಕ್ಕಾಗಿರುತ್ತದೆ. ನಮ್ಮ ಪ್ರೀತಿ, ನಂಬಿಕೆ ಮತ್ತು ಸತ್ಯದೆಡೆಗಿನ ಸಮಗ್ರತೆಯ ಪಂಥಾಹ್ವಾನವನ್ನು ನಾವು ಎದುರಿಸುತ್ತಿರಲಾಗಿ, ಈ ಪತ್ರಿಕೆಯ ಚರ್ಚೆಯು ನಿಶ್ಚಯವಾಗಿಯೂ ನಮಗೆ ಪ್ರಯೋಜನ ತರುವುದು.
‘ಬೆಳಕಿನಲ್ಲಿ ನಡೆಯಿರಿ’
ನಂಬಿಗಸ್ತ ಕ್ರೈಸ್ತರು ಆತ್ಮಿಕ ಬೆಳಕಿನಲ್ಲಿ ನಡೆಯಲೇ ಬೇಕೆಂಬದನ್ನು ಯೋಹಾನನು ಸ್ಪಷ್ಟಗೊಳಿಸಿದನು. (1 ಯೋಹಾನ 1:1–2:29) ಅವನಂದದ್ದು: “ದೇವರು ಬೆಳಕಾಗಿದ್ದಾನೆ; ಮತ್ತು ಆತನಲ್ಲಿ ಎಷ್ಟು ಮಾತ್ರವೂ ಕತ್ತಲೆ [ಕೆಡುಕು, ಅನೈತಿಕತೆ, ಅಸತ್ಯ ಅಥವಾ ಅಶುದ್ಧತೆ] ಇಲ್ಲ.” ಆತ್ಮಭಿಷಿಕ್ತ ಕ್ರೈಸ್ತರು ‘ಬೆಳಕಿನಲ್ಲಿ ನಡಿಯು’ತ್ತಾರಾದ್ದರಿಂದ ಅವರು ದೇವರೊಂದಿಗೆ, ಕ್ರಿಸ್ತನೊಂದಿಗೆ ಮತ್ತು ಒಬ್ಬರೊಬ್ಬರೊಂದಿಗೆ “ಅನ್ಯೋನ್ಯತೆಯಲ್ಲಿ” ಇದ್ದಾರೆ. ಅವರು ಯೇಸುವಿನ ರಕ್ತದ ಮೂಲಕ ಪಾಪದಿಂದ ಶುದ್ಧರಾಗಿದ್ದಾರೆ.
ನಾವು ಸ್ವರ್ಗೀಯ ನಿರೀಕ್ಷೆಯುಳ್ಳ ಅಭಿಷಿಕ್ತ ಕ್ರೈಸ್ತರಾಗಿರಲಿ ಅಥವಾ ಭೂಮಿಯ ಮೇಲೆ ನಿತ್ಯಜೀವದ ಕಡೆಗೆ ಮುನ್ನೋಡುವವರಾಗಿರಲಿ, ಲೋಕವನ್ನಲ್ಲ, ಬದಲು ನಮ್ಮ ಸಹೋದರರನ್ನು ಪ್ರೀತಿಸಿದರೆ ಮಾತ್ರವೇ, ಯೇಸುವಿನ ಯಜ್ಞದಿಂದ ಪ್ರಯೋಜನ ಹೊಂದುತ್ತಾ ಮುಂದರಿಯುವೆವು. ತಂದೆಯನ್ನೂ ಮಗನನ್ನೂ ಅಲ್ಲಗಳೆಯುವ “ಕ್ರಿಸ್ತ ವಿರೋಧಿ”ಗಳಂಥ ಧರ್ಮಭ್ರಷ್ಟರಿಂದಲೂ ಪ್ರಭಾವಿಸಲ್ಪಡದಂತೆ ನಾವು ದೂರವಿರಬೇಕು. ಮತ್ತು ಸತ್ಯಕ್ಕೆ ಅಂಟಿಕೊಳ್ಳುವವರು ಮತ್ತು ನೀತಿಯನ್ನು ಅಭ್ಯಸಿಸುವವರು ಮಾತ್ರವೇ ನಿತ್ಯಜೀವವನ್ನು ಆನಂದಿಸುವರೆಂಬದನ್ನು ನಾವೆಂದೂ ಮರೆಯದಿರೋಣ.
ದೇವರ ಮಕ್ಕಳು ಪ್ರೀತಿಯನ್ನು ಪ್ರದರ್ಶಿಸುತ್ತಾರೆ
ಯೋಹಾನನು ಅನಂತರ ದೇವರ ಮಕ್ಕಳ ಪರಿಚಯವನ್ನು ಮಾಡಿಸಿದ್ದಾನೆ. (3:1–4:21) ಮೊದಲನೆಯದಾಗಿ ಅವರು, ಯಾವುದು ನೀತಿಯೋ ಅದನ್ನು ಆಚರಿಸುತ್ತಾರೆ. ‘ಆತನ ಮಗನಾದ ಯೇಸು ಕ್ರಿಸ್ತನ ಹೆಸರನ್ನು ನಂಬಿ, ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ’ ಯೆಹೋವ ದೇವರ ಆಜೆಗ್ಞೂ ಅವರು ವಿಧೇಯರಾಗುತ್ತಾರೆ.
“ದೇವರ ಜ್ಞಾನವನ್ನು” ಪಡೆದವನಾದ ವ್ಯಕ್ತಿಯು, ದೇವರ ಉದ್ದೇಶವನ್ನು ಮತ್ತು ಆತನ ಪ್ರೀತಿಯು ವ್ಯಕ್ತ ಪಡಿಸಲ್ಪಟ್ಟ ರೀತಿಯನ್ನು ಬಲ್ಲವನಾಗಿದ್ದಾನೆ. ಪ್ರೀತಿಯನ್ನು ಪ್ರದರ್ಶಿಸುವಂತೆ ಇದು ಒಬ್ಬನಿಗೆ ಸಹಾಯ ಮಾಡಬೇಕು. ಕಾರ್ಯತಃ, “ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು.” ದೇವರು, “ನಮ್ಮ ಪಾಪ ನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿ ಕೊಟ್ಟದ್ದರಲ್ಲಿ” ತನ್ನ ದಿವ್ಯ ಪ್ರೀತಿಯನ್ನು ತೋರಿಸಿದ್ದಾನೆ. ಯೆಹೋವನು ನಮ್ಮನ್ನು ಅಷ್ಟರ ಮಟ್ಟಿಗೆ ಪ್ರೀತಿಸಿದನಾದರೆ, ನಾವೂ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ. ಹೌದು, ದೇವರನ್ನು ಪ್ರೀತಿಸುತ್ತೇನೆಂದು ಹೇಳುವ ಯಾವನಾದರೂ ತನ್ನ ಆತ್ಮಿಕ ಸಹೋದರನನ್ನೂ ಪ್ರೀತಿಸುವವನಾಗಿರಬೇಕು.
ನಂಬಿಕೆಯು ‘ಲೋಕವನ್ನು ಜಯಿಸುತ್ತದೆ’
ಪ್ರೀತಿಯು ಆತನ ಆಜ್ಞೆಗಳನ್ನು ಪಾಲಿಸುವಂತೆ ದೇವರ ಮಕ್ಕಳನ್ನು ಪ್ರೇರೇಪಿಸುತ್ತದೆ, ಆದರೆ ಅವರು ‘ಲೋಕವನ್ನು ಜಯಿಸುವುದು’ ನಂಬಿಕೆಯ ಮೂಲಕವೇ. (5:1-21) ದೇವರಲ್ಲಿ, ಆತನ ವಾಕ್ಯದಲ್ಲಿ, ಮತ್ತು ಆತನ ಪುತ್ರನಲ್ಲಿ ನಮ್ಮ ನಂಬಿಕೆಯು, ಲೋಕದ ಕೆಟ್ಟ ವಿಚಾರ ಮತ್ತು ಮಾರ್ಗಗಳನ್ನು ತಿರಸ್ಕರಿಸುವ ಮೂಲಕ ಮತ್ತು ಯೆಹೋವನ ಆಜ್ಞೆಗಳನ್ನು ಪಾಲಿಸುವ ಮೂಲಕ ‘ಲೋಕವನ್ನು ಜಯಿಸುವಂತೆ’ ಶಕ್ತರನ್ನಾಗಿ ಮಾಡುತ್ತದೆ. ‘ಲೋಕವನ್ನು ಜಯಿಸುವವರಿಗಾಗಿ’ ದೇವರು ನಿತ್ಯಜೀವವನ್ನು ಕೊಟ್ಟಿದ್ದಾನೆ ಮತ್ತು ಆತನ ಚಿತ್ತಕ್ಕೆ ಹೊಂದಿಕೆಯಲ್ಲಿರುವ ಅವರ ಪ್ರಾರ್ಥನೆಗಳನ್ನು ಆತನು ಆಲಿಸುತ್ತಾನೆ. ಯಾಕಂದರೆ ‘ದೇವರಿಂದ ಹುಟ್ಟಿರುವವನು’ ಪಾಪದ ಅಭ್ಯಾಸ ಮಾಡುವವನಲ್ಲ, ಅಂಥವನ ಮೇಲೆ ಸೈತಾನನ ಹಿಡಿತವು ಬಿಗಿಯಲ್ಪಡಲಾರದು. ಆದರೆ, ‘ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದದ್ದೆ’ ಎಂಬದನ್ನು ಅಭಿಷಿಕ್ತರೂ ಮತ್ತು ಭೂನಿರೀಕ್ಷೆಯುಳ್ಳ ಯೆಹೋವನ ಸೇವಕರೂ ನೆನಪಿನಲ್ಲಿಡುವ ಅಗತ್ಯವಿದೆ. (w91 4/15)
[ಪುಟ 30 ರಲ್ಲಿರುವ ಚೌಕ/ಚಿತ್ರಗಳು]
ಪ್ರಾಯಶ್ಚಿತ್ತ ಯಜ್ಞ: ಯೇಸುವು ನಮ್ಮ [ಆತನ ಅಭಿಷಿಕ್ತ ಹಿಂಬಾಲಕರ] ಪಾಪಗಳ ಪ್ರಾಯಶ್ಚಿತ್ತ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ ಸಮಸ್ತ ಲೋಕದ [ಉಳಿದ ಮಾನವರ] ಪಾಪಗಳನ್ನು ಸಹಾ ನಿವಾರಣ ಮಾಡುತ್ತಾನೆ.” (1 ಯೋಹಾನ 2:2, NW) ಆತನ ಮರಣವು ಒಂದು “ಪ್ರಾಯಶ್ಚಿತ್ತ” (ಗ್ರೀಕ್, ಹಿ-ಲಾ-ಸ್ಮೊಸ್, “ನಿವಾರಕ ಸಾಧನ”, “ಪಾಪ ನಿವೃತ್ತಿ”ಯನ್ನು ಸೂಚಿಸುವ) ವಾಗಿದ್ದದ್ದು, ದೇವರಿಗಾದ ಮನೋವೇದನೆಯನ್ನು ಶಮನಗೊಳಿಸುವ ಅರ್ಥದಲ್ಲಲ್ಲ. ಯೇಸುವಿನ ಯಜ್ಞವು ಪರಿಪೂರ್ಣ ದೈವಿಕ ನ್ಯಾಯದ ಕೇಳಿಕೆಗಳನ್ನು ಶಮನ ಮಾಡಿತು ಅಥವಾ ತೃಪ್ತಿಗೊಳಿಸಿತು. ಹೇಗೆ? ಹೇಗಂದರೆ ಪಾಪಕ್ಷಮೆಗಾಗಿ ನೀತಿ ಮತ್ತು ನ್ಯಾಯಸಮ್ಮತವಾದ ಆಧಾರವನ್ನು ಕೊಡುವ ಮೂಲಕವೇ. ಹೀಗೆ ದೇವರು, “ತಾನು ನೀತಿಸ್ವರೂಪನಾಗಿಯೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು [ಸಹಜವಾದ ಪಾಪಿಗಳನ್ನು] ನೀತಿವಂತರೆಂದು ನಿರ್ಣಯಿಸುವವನಾಗಿಯೂ ಕಾಣಿಸಿಕೊಂಡಿದ್ದಾನೆ.” (ರೋಮಾಪುರ 3:23-26; 5:12) ಮನುಷ್ಯನ ಪಾಪಕ್ಕಾಗಿ ಸಂಪೂರ್ಣ ಶಮನವನ್ನು ಒದಗಿಸಿದ ಮೂಲಕ ಯೇಸುವಿನ ಯಜ್ಞವು ಪಾಪಕ್ಕಾಗಿ ಪ್ರಾಯಶ್ಚಿತ್ತ ಅಥವಾ ನಿವಾರಣೆಯಾಗಿ ಪರಿಣಮಿಸಿ, ಮನುಷ್ಯನು ಯೆಹೋವನೊಂದಿಗೆ ಯೋಗ್ಯ ಸಂಬಂಧವನ್ನು ಹುಡುಕುವಂತೆ ಮತ್ತು ಪುನಃ ಪಡೆಯುವಂತೆ ಸಾಧ್ಯಮಾಡಿತು. (ಎಫೆಸ 1:7; ಇಬ್ರಿಯ 2:17) ಇದಕ್ಕಾಗಿ ನಾವೆಲ್ಲರೂ ಎಷ್ಟು ಕೃತಜ್ಞರಾಗಿರತಕ್ಕದ್ದು!