ಸುಳ್ಳು ಧರ್ಮದಿಂದ ಪ್ರತ್ಯೇಕಿಸಿಕೊಳ್ಳುವುದು
“‘ಅವರೊಳಗಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ’ ಎಂದು ಯೆಹೋವನು ಹೇಳುತ್ತಾನೆ. . . . ‘ನಾನು ನಿಮ್ಮನ್ನು ಸೇರಿಸಿಕೊಳ್ಳುವೆನು.’”—2 ಕೊರಿಂಥ 6:17,
1. ಯೇಸುವಿನೊಂದಿಗೆ ಸೈತಾನನು ಯಾವ ವಿನಿಮಯವನ್ನು ಮಾಡಲು ಪ್ರಯತ್ನಿಸಿದನು, ಮತ್ತು ಅವನು ಈ ನೀಡಿಕೆಯನ್ನು ಮಾಡಿದ್ದು ನಮಗೆ ಯಾವ ಎರಡು ವಿಷಯಗಳನ್ನು ಕಲಿಸುತ್ತದೆ?
“ನೀನು ನನಗೆ ಸಾಷ್ಟಾಂಗ ನಮಸ್ಕಾರ ಮಾಡಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು.” ಈ ನೀಡಿಕೆಯು ಸುಳ್ಳು ಧರ್ಮದ ಪ್ರಾರಂಭದ ತರುವಾಯ ಸಾವಿರಾರು ವರ್ಷಗಳ ನಂತರ ಮಾಡಲ್ಪಟ್ಟಾಗ್ಯೂ, ಸುಳ್ಳು ಆರಾಧನೆಯ ಹಿಂದೆ ಯಾರಿದ್ದಾರೆ ಮತ್ತು ಅದರ ಉದ್ದೇಶವೇನು ಎಂಬ ತಿಳುವಳಿಕೆಗೆ ಕೀಲಿಕೈಯನ್ನು ಅದು ಒದಗಿಸುತ್ತದೆ. ಸಾ. ಶ. 29ರ ಕೊನೆಯ ಭಾಗದಲ್ಲಿ, ಪಿಶಾಚನು ಯೇಸುವಿಗೆ ಲೋಕದ ಎಲ್ಲಾ ರಾಜ್ಯಗಳನ್ನು ಒಂದು ಭಕ್ತಿಯ ಕ್ರಿಯೆಗಾಗಿ ವಿನಿಮಯ ಮಾಡಲು ನಿವೇದಿಸಿದನು. ಈ ಘಟನಾವಳಿಯು ನಮಗೆ ಎರಡು ವಿಷಯಗಳನ್ನು ತಿಳಿಸುತ್ತದೆ: ಈ ಲೋಕದ ರಾಜ್ಯಗಳು ಸೈತಾನದ್ದಾಗಿದದ್ದರಿಂದಲೇ ಅವನದನ್ನು ಕೊಡುತ್ತಾನೆ ಮತ್ತು ಸುಳ್ಳು ಧರ್ಮದ ಕೊನೆಯ ಹೇತು ಪಿಶಾಚನ ಭಕ್ತಿಯೇ.—ಮತ್ತಾಯ 4:8, 9.
2. ಮತ್ತಾಯ 4:10ರ ಯೇಸುವಿನ ಮಾತುಗಳಿಂದ ನಾವೇನನ್ನು ಕಲಿಯುತ್ತೇವೆ?
2 ಯೇಸು ತನ್ನ ಪ್ರತ್ಯುತ್ತರದ ಮೂಲಕ ಸುಳ್ಳು ಧರ್ಮವನ್ನು ತಿರಸ್ಕರಿಸಿದನು ಮಾತ್ರವಲ್ಲ, ಸತ್ಯ ಧರ್ಮದಲ್ಲಿ ಏನೆಲ್ಲಾ ಒಳಗೂಡಿದೆ ಎಂದೂ ತೋರಿಸಿಕೊಟ್ಟನು. ಅವನು ಘೋಷಿಸಿದ್ದು: “ಸೈತಾನನೇ! ನೀನು ತೊಲಗಿ ಹೋಗು. ‘ನಿನ್ನ ದೇವರಾಗಿರುವ ಯೆಹೋವನಿಗೆ ಅಡಬ್ಡಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ.” (ಮತ್ತಾಯ 4:10) ಹೀಗೆ, ಸತ್ಯ ಧರ್ಮದ ಉದ್ದೇಶವು, ಒಬ್ಬನೇ ಸತ್ಯ ದೇವರಾದ ಯೆಹೋವನ ಆರಾಧನೆಯೇ. ಅದರಲ್ಲಿ ನಂಬಿಕೆ ಮತ್ತು ವಿಧೇಯತೆಯು, ಯೆಹೋವನ ಚಿತ್ತವನ್ನು ಮಾಡುವಿಕೆಯು ಒಳಗೂಡಿದೆ.
ಸುಳ್ಳು ಧರ್ಮದ ಮೂಲ
3. (ಎ) ಸುಳ್ಳು ಧರ್ಮವು ಭೂಮಿಯಲ್ಲಿ ಪ್ರಾರಂಭವಾದದ್ದು ಎಲ್ಲಿ ಮತ್ತು ಹೇಗೆ? (ಬಿ) ಧರ್ಮ ಅಸಹಿಷ್ಣುತೆಯ ಮೊದಲನೆ ನಮೂದಿತ ಕ್ರಿಯೆಯು ಯಾವುದು, ಮತ್ತು ಅಂದಿನಿಂದ ಧಾರ್ಮಿಕ ಹಿಂಸೆಯು ಹೇಗೆ ಮುಂದರಿಯುತ್ತಾ ಇದೆ?
3 ಪ್ರಥಮ ಮಾನವರು ದೇವರಿಗೆ ಅವಿಧೇಯರಾಗಿ, “ಒಳ್ಳೇದನ್ನು ಮತ್ತು ಕೆಟ್ಟದ್ದನ್ನು” ತಮಗಾಗಿ ತಾವೇ ನಿರ್ಣಯಿಸುವ ಸೈತಾನನ ಪ್ರಸ್ತಾಪವನ್ನು ಸ್ವೀಕರಿಸಿದಾಗ ಸುಳ್ಳು ಧರ್ಮವು ಭೂಮಿಯಲ್ಲಿ ಪ್ರಾರಂಭಗೊಂಡಿತು. (ಆದಿಕಾಂಡ 3:5) ಹಾಗೆ ಮಾಡಿದ್ದರಲ್ಲಿ, ಅವರು ಯೆಹೋವನ ನೀತಿಯುಳ್ಳ ಪರಮಾಧಿಕಾರವನ್ನು ತಿರಸ್ಕರಿಸಿದರು ಮತ್ತು ಯೋಗ್ಯ ಆರಾಧನೆಯಾದ ಸತ್ಯಧರ್ಮವನ್ನು ತೊರೆದುಬಿಟ್ಟರು. “ಸತ್ಯ ದೇವರನ್ನು ಬಿಟ್ಟು ಅಸತ್ಯವಾದದ್ದನ್ನು ಹಿಡಿದುಕೊಂಡು ಸೃಷ್ಟಿಕರ್ತನನ್ನು ಪೂಜಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ” ದವರಲ್ಲಿ ಅವರು ಮೊದಲಿಗರಾದರು. (ರೋಮಾಪುರ 1:25) ಅವರು ಆರಾಧನೆಗಾಗಿ ತಿಳಿಯದೆ ಆರಿಸಿಕೊಂಡ ಆ ಜೀವಿಯು ಬೇರೆ ಯಾರೂ ಅಲ್ಲ, ಬದಲು “ಪುರಾತನ ಸರ್ಪ”ವಾದ ಪಿಶಾಚ ಸೈತಾನನಾಗಿದ್ದನು. (ಪ್ರಕಟನೆ 12:9) ಅವರ ಹಿರಿಯ ಮಗನಾದ ಕಾಯಿನನು, ಯೆಹೋವನ ದಯಾಪರ ಸಲಹೆಯನ್ನು ಪಾಲಿಸಲು ನಿರಾಕರಿಸಿ ಹೀಗೆ ಆತನ ಪರಮಾಧಿಕಾರದ ವಿರುದ್ಧವಾಗಿ ದಂಗೆಯೆದ್ದನು. ಕಾಯಿನನು ತಿಳಿದೊ, ತಿಳಿಯದೆಯೊ, ಸೈತಾನನ ಅಂದರೆ “ಕೆಡುಕನ ಮಗನಾಗಿ” ಪರಿಣಮಿಸಿದನು ಮತ್ತು ಪಿಶಾಚನ ಆರಾಧನೆಯನ್ನು ನಡಿಸುವವನಾದನು. ಸತ್ಯಾರಾಧನೆಯನ್ನು, ಸತ್ಯ ಧರ್ಮವನ್ನು ಆಚರಿಸುತ್ತಿದ್ದ ಅವನ ತಮ್ಮನಾದ ಹೇಬೆಲನನ್ನು ಅವನು ಕೊಂದನು. (1 ಯೋಹಾನ 3:12, ರಿವೈಸ್ಡ್ ಇಂಗ್ಲಿಷ್ ಬೈಬಲ್; ಆದಿಕಾಂಡ 4:3-8; ಇಬ್ರಿಯ 11:4) ಧಾರ್ಮಿಕ ಅಸಹಿಷ್ಣುತೆಗಾಗಿ ನಡಿಸಲ್ಪಟ್ಟ ಮೊದಲನೆ ರಕ್ತಪಾತ ಹೇಬೆಲನ ರಕ್ತವೇ. ವಿಷಾಧಕರವಾಗಿ, ಇಂದಿನ ತನಕವೂ ಸುಳ್ಳು ಧರ್ಮವು ನಿರಪರಾಧಿಗಳ ರಕ್ತವನ್ನು ಸುರಿಸುತ್ತಾ ಇದೆ.—ಮತ್ತಾಯ 23:29-35; 24:3, 9.
4. ನೋಹನ ಸಂಬಂಧದಲ್ಲಿ, ಯಾವ ಶಾಸ್ತ್ರವಚನಗಳು ಸತ್ಯಧರ್ಮದ ಲಕ್ಷಣವನ್ನು ಚಿತ್ರಿಸುತ್ತವೆ?
4 ಜಲಪ್ರಲಯಕ್ಕೆ ಮುಂಚೆ, ಸೈತಾನನು ಮಾನವ ಕುಲದ ಅಧಿಕಾಂಶವನ್ನು ಸತ್ಯ ಧರ್ಮದಿಂದ ದೂರ ತೊಲಗಿಸುವುದರಲ್ಲಿ ಸಾಫಲ್ಯಗೊಂಡನು. ಆದರೂ, “ನೋಹನಿಗೆ ಯೆಹೋವನ ದಯ ದೊರಕಿತು.” ಯಾಕೆ? ಯಾಕೆಂದರೆ ಅವನು “ಸತ್ಯ ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.” ಬೇರೊಂದು ಮಾತಿನಲ್ಲಿ ಹೇಳುವುದಾದರೆ, ಅವನು ಸತ್ಯಾರಾಧನೆಯನ್ನು ಆಚರಿಸಿದನು. ಸತ್ಯಾರಾಧನೆಯು ಒಂದು ಸಂಸ್ಕಾರ ಯಾ ವಿಧಿಯಲ್ಲ ಬದಲಾಗಿ ಒಂದು ಜೀವನ ರೀತಿಯಾಗಿದೆ. ಯೆಹೋವನಲ್ಲಿ ನಂಬಿಕೆ ಮತ್ತು ಆತನಿಗೆ ವಿಧೇಯರಾಗಿ ಸೇವೆ ಮಾಡುವಿಕೆ, ‘ಅನ್ಯೋನ್ಯವಾಗಿ ನಡೆಯುವಿಕೆ’ ಅದರಲ್ಲಿ ಒಳಗೂಡಿದೆ. ನೋಹನು ಅದನ್ನೇ ಮಾಡಿದ್ದನು.—ಆದಿಕಾಂಡ 6:8, 9, 22; ಇಬ್ರಿಯ 11:6, 7.
5. (ಎ) ಜಲಪ್ರಲಯದ ಅನಂತರ ಪಿಶಾಚನು ಏನನ್ನು ಸ್ಥಾಪಿಸಲು ಪ್ರಯತ್ನಿಸಿದನು ಮತ್ತು ಹೇಗೆ? (ಬಿ) ಯೆಹೋವನು ಪಿಶಾಚನ ಹಂಚಿಕೆಯನ್ನು ಹೇಗೆ ನಿಷ್ಫಲಗೊಳಿಸಿದನು, ಫಲಿತಾಂಶವೇನಾಯಿತು?
5 ಜಲಪ್ರಲಯದ ಅನಂತರ ಸ್ವಲ್ಪ ಸಮಯದಲ್ಲೇ, “ಯೆಹೋವನಿಗೆ ವಿರೋಧದಲ್ಲಿ” ಕುಪ್ರಸಿದ್ಧನೆನಿಸಿದ ನಿಮ್ರೋದನೆಂಬ ಮನುಷ್ಯನನ್ನು, ಪುನಃ ಯೆಹೋವನ ವಿರುದ್ಧವಾದ ಒಂದು ಭಕ್ತಿಯಲ್ಲಿ ಮಾನವರೆಲ್ಲರನ್ನು ಒಂದುಗೂಡಿಸುವ ಪ್ರಯತ್ನಕ್ಕಾಗಿ ಪಿಶಾಚನು ಉಪಯೋಗಿಸಿದನೆಂಬದು ವ್ಯಕ್ತ. (ಆದಿಕಾಂಡ 10:8, 9; 11:2-4) ಅದು ಅವನ ಆರಾಧಕರು ಕಟ್ಟಿದ ಪಟ್ಟಣ ಮತ್ತು ಬುರುಜಲ್ಲಿ ಕೇಂದ್ರಿತವಾದ ಒಂದು ಸುಳ್ಳು ಧರ್ಮದ ಏಕೀಕರಣ, ಪೈಶಾಚಿಕ ಭಕ್ತಿಯ ಐಕ್ಯಮತ್ಯವಾಗಿತ್ತು. ಮಾನವ ಕುಲದವರೆಲ್ಲರಿಂದ ಆಗ ಆಡಲ್ಪಡುತಿದ್ದ “ಒಂದೇ ಭಾಷೆಯನ್ನು” ಗಲಿಬಿಲಿ ಮಾಡಿದ ಮೂಲಕ, ಯೆಹೋವನು ಈ ಹಂಚಿಕೆಯನ್ನು ನಿಷ್ಫಲಗೊಳಿಸಿದನು. (ಆದಿಕಾಂಡ 11:5-9) ಆದುದರಿಂದ, ಆ ಪಟ್ಟಣಕ್ಕೆ ಬಾಬೆಲ್, ಅನಂತರ ಬಬಿಲೋನ್ ಎಂಬ ಹೆಸರು ಬಂತು, ಈ ಎರಡೂ ಹೆಸರುಗಳ ಅರ್ಥ “ಗಲಿಬಿಲಿ.” ಈ ಭಾಷಾ ಗಲಿಬಿಲಿಯು ಮಾನವಕುಲವನ್ನು ಭೂಲೋಕದಲ್ಲೆಲ್ಲೂ ಚದರಿ ಹೋಗುವಂತೆ ಮಾಡಿತು.
6. (ಎ) ಬಾಬೆಲಿನ ಸೈತಾನನ ಆರಾಧಕರು ಚದರಿಹೋಗುವ ಮುಂಚಿತವಾಗಿ ಯಾವ ಧಾರ್ಮಿಕ ಕಲ್ಪನೆಗಳು ಬೇರೂರಿಸಲ್ಪಟ್ಟಿದ್ದವು? (ಬಿ) ಭೂಸುತ್ತಲೂ ಇರುವ ಧರ್ಮಗಳಲ್ಲಿ ತದ್ರೀತಿಯ ನಂಬಿಕೆಗಳು ಇರುವುದೇಕೆ? (ಸಿ) ಬಾಬೆಲು ಯಾವ ಪೈಶಾಚಿಕ ಉದ್ದೇಶವನ್ನು ಪೂರೈಸಿತು, ಮತ್ತು ಆ ಪುರಾತನ ಪಟ್ಟಣವು ಯಾವದರ ಸಂಕೇತವಾಗಿ ಪರಿಣಮಿಸಿತು?
6 ಆದರೂ, ಯೆಹೋವನು ಈ ರೀತಿ ಮಾನವ ಕುಲವನ್ನು ಚದರಿಸುವ ಮೊದಲೇ, ಸೈತಾನನು ತನ್ನ ಆರಾಧಕರ ಮನಸ್ಸಿನಲ್ಲಿ ಸುಳ್ಳು ಧರ್ಮದ ನಿರ್ದಿಷ್ಟ ಮೂಲತತ್ವಗಳನ್ನು ಬೇರೂರಿಸಿದ್ದನೆಂಬದು ಪೌರಾಣಿಕ ಇತಿಹಾಸ ಮತ್ತು ಧರ್ಮದ ಆಧಾರದಿಂದ ತೋರಿಬರುತ್ತದೆ. ಅವುಗಳಲ್ಲಿ ಮರಣಾನಂತರ ಆತ್ಮ ಪಾರಾಗಿ ಬದುಕುವದು, ಸತ್ತವರ ಭಯ, ಪೈಶಾಚಿಕ ಪಾತಾಳದ ಅಸ್ತಿತ್ವ, ಕೆಲವು ತ್ರಯೈಕ್ಯ ಗುಂಪುಗಳೂ ಸೇರಿರುವ ಅಸಂಖ್ಯಾತ ದೇವ-ದೇವತೆಗಳ ಭಕ್ತಿ ಮುಂತಾದ ಧಾರ್ಮಿಕ ಕಲ್ಪನೆಗಳು ಸೇರಿದ್ದವು. ಅಂಥ ನಂಬಿಕೆಗಳು ಬೇರೆ ಬೇರೆ ಭಾಷಾ ಗುಂಪುಗಳಿಂದ ಭೂಲೋಕದ ಕಟ್ಟಕಡೆಗೆ ಒಯ್ಯಲ್ಪಟ್ಟವು. ಸಮಯವು ದಾಟಿದಷ್ಟಕ್ಕೆ, ಈ ಮೂಲಭೂತ ಕಲ್ಪನೆಗಳು ವಿವಿಧ ಬದಲಾವಣೆಗಳಿಗೆ ಗುರಿಯಾದವು. ಆದರೆ ಒಟ್ಟು ನೋಟದಲ್ಲಿ, ಅವು ಭೂಲೋಕದ ಎಲ್ಲಾ ಭಾಗಗಳ ಸುಳ್ಳು ಧರ್ಮದ ಚೌಕಟ್ಟನ್ನು ರೂಪಿಸಿವೆ. ಬಬಿಲೋನನ್ನು ಜಾಗತಿಕ ಮುಖ್ಯಪಟ್ಟಣವಾಗಿ ಮಾಡಿ ಸುಳ್ಳುಧರ್ಮದ ಒಂದುಗೂಡುವಿಕೆಯನ್ನು ನಿರ್ಮಿಸುವ ತನ್ನ ಪ್ರಯತ್ನದಲ್ಲಿ ವಿಫಲಗೊಂಡಾಗ್ಯೂ, ಬಬಿಲೋನ್ಯ ಪ್ರೇರೇಪಣೆಗಳಿಂದ ಬಂದ ಹಾಗೂ ಯೆಹೋವನನ್ನು ಬಿಟ್ಟು ತನ್ನ ಕಡೆಗೆ ಸೆಳೆಯಲು ರಚಿಸಲ್ಪಟ್ಟ ಮಿಥ್ಯಾರಾಧನೆಯ ವಿವಿಧ ಪದ್ಧತಿಗಳನ್ನು ನೆಲೆಗೊಳಿಸಲು ಸೈತಾನನು ನಿರ್ಧರಿಸಿದನು. ಶತಮಾನಗಳ ತನಕ ಬಬಿಲೋನು—ಸುಳ್ಳು ಧರ್ಮದ ಎಲ್ಲಾ ಆವಶ್ಯಕ ಉಪಾಂಗಗಳಾದ—ವಿಗ್ರಹಾರಾಧನೆ, ಮಂತ್ರವಿದ್ಯೆ, ಮಾಟ ಮತ್ತು ಜೋತಿಷ್ಯಶಾಸ್ತ್ರಗಳ ಪ್ರಬಲವಾದ ಕೇಂದ್ರವಾಗಿ ಮುಂದೆ ಸಾಗಿತ್ತು. ಹೀಗಿರಲಾಗಿ, ಪ್ರಕಟನೆ ಪುಸ್ತಕವು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವನ್ನು ಸಾಂಕೇತಿಕವಾಗಿ ಮಹಾ ಬಾಬೆಲ್ ಎಂಬ ಅಸಹ್ಯ ವೇಶ್ಯೆಯಾಗಿ ಹೇಳಿದ್ದರಲ್ಲಿ ಆಶ್ಚರ್ಯವೇನಿಲ್ಲ—ಪ್ರಕಟನೆ 17:1-5.
ಸತ್ಯ ಧರ್ಮ
7. (ಎ) ಭಾಷಾ ಗಲಿಬಿಲಿಯಿಂದಾಗಿ ಸತ್ಯ ಧರ್ಮವು ಪ್ರಭಾವಿತವಾಗಲಿಲ್ಲವೇಕೆ? (ಬಿ) ಯಾರು “ನಂಬುವವರೆಲ್ಲರಿಗೂ ಮೂಲತಂದೆ”ಯಾಗಿ ಪರಿಣಮಿಸಿದನು ಮತ್ತು ಏಕೆ?
7 ಯೆಹೋವನು ಬಾಬೆಲಿನಲ್ಲಿ ಮಾಡಿದ ಮಾನವ ಕುಲದ ಅಭಿವ್ಯಂಜಕ ಸಾಧನದ ಗಲಿಬಿಲಿಯಿಂದಾಗಿ ಸತ್ಯ ಧರ್ಮವು ಮಾತ್ರ ಪ್ರಭಾವಿತವಾಗದೆ ಉಳಿಯಿತೆಂಬದು ವ್ಯಕ್ತ. ಸತ್ಯ ಧರ್ಮವು ಜಲಪ್ರಲಯಕ್ಕೆ ಮುಂಚೆ ನಂಬಿಗಸ್ತ ಪುರುಷ ಮತ್ತು ಸ್ತ್ರೀಯರಾದ ಹೇಬೆಲ, ಹಾನೋಕ, ನೋಹ, ನೋಹನ ಪತ್ನಿ ಮತ್ತು ನೋಹನ ಗಂಡು ಮಕ್ಕಳು ಮತ್ತು ಸೊಸೆಯರಿಂದ ಆಚರಿಸಲ್ಪಟ್ಟಿತ್ತು. ಪ್ರಲಯದ ನಂತರ ಸತ್ಯಾರಾಧನೆಯು ನೋಹನ ಮಗನಾದ ಶೇಮನ ಸಂತತಿಯಲ್ಲಿ ಉಳಿಸಲ್ಪಟ್ಟಿತು. ಶೇಮನ ಸಂತತಿಯವನಾದ ಅಬ್ರಹಾಮನು ಸತ್ಯ ಧರ್ಮವನ್ನು ಆಚರಿಸಿದ್ದನು ಮತ್ತು “ನಂಬುವವರೆಲ್ಲರಿಗೂ ಮೂಲತಂದೆ” ಎಂಬ ಹೆಸರನ್ನು ಪಡೆದನು. (ರೋಮಾಪುರ 4:11) ಅವನ ನಂಬಿಕೆಯು ಕ್ರಿಯೆಗಳಿಂದ ಬೆಂಬಲಿಸಲ್ಪಟ್ಟಿತ್ತು. (ಯಾಕೋಬ 2:21-23) ಅವನ ಧರ್ಮವು ಅವನಿಗೆ ಜೀವನ ರೀತಿಯಾಗಿತ್ತು.
8. (ಎ) ಸಾ. ಶ. ಪೂ. 16ನೆಯ ಶತಮಾನದಲ್ಲಿ ಸತ್ಯ ಧರ್ಮವು ಸುಳ್ಳು ಧರ್ಮದೊಂದಿಗೆ ಹೇಗೆ ಹೋರಾಟ ನಡಿಸಿತು, ಫಲಿತಾಂಶವೇನಾಯಿತು? (ಬಿ) ತನ್ನ ಶುದ್ಧಾರಾಧನೆಯ ಸಂಬಂಧದಲ್ಲಿ ಯಾವ ಹೊಸ ಏರ್ಪಾಡನ್ನು ಯೆಹೋವನು ಜಾರಿಗೆ ತಂದನು?
8 ಸತ್ಯಾರಾಧನೆಯು ಅಬ್ರಹಾಮನ ಸಂತತಿಯವರಾದ—ಇಸಾಕ, ಯಾಕೋಬ (ಯಾ, ಇಸ್ರಾಯೇಲ), ಮತ್ತು ಯಾಕೋಬನ ಹನ್ನೆರಡು ಪುತ್ರರಲ್ಲಿ ಮತ್ತು ಅವರಿಂದ ಹೊರಬಂದ ಇಸ್ರಾಯೇಲಿನ ಹನ್ನೆರಡು ಕುಲಗಳಲ್ಲಿ ಆಚರಿಸಲ್ಪಡುತ್ತಾ ಮುಂದುವರಿಯಿತು. ಸಾ. ಶ. ಪೂ. 16ನೆಯ ಶತಮಾನದ ಅಂತ್ಯವು, ಇಸಾಕನ ಮೂಲಕವಾಗಿ ಬಂದ ಅಬ್ರಹಾಮನ ಸಂತಾನವು ಎಲ್ಲಿ ದಾಸ್ಯಕ್ಕೆ ಗುರಿಮಾಡಲ್ಪಟ್ಟಿತ್ತೊ ಆ ಐಗುಪ್ತದ—ದ್ವೇಷಪೂರ್ಣ ವಿಧರ್ಮಿ ಪರಿಸರದಲ್ಲಿ ಶುದ್ಧ ಧರ್ಮವನ್ನು ಕಾಪಾಡಲು ಹೋರಾಟಪಡುವುದನ್ನು ಕಂಡಿತು. ಯೆಹೋವನು ಲೇವಿಯ ವಂಶಸ್ಥನಾದ ತನ್ನ ನಂಬಿಗಸ್ತ ಸೇವಕ ಮೋಶೆಯನ್ನುಪಯೋಗಿಸಿ, ಸುಳ್ಳು ಧರ್ಮದಿಂದ ನೆನೆದು ಹೋಗಿದ್ದ ಐಗುಪ್ತದ ನೊಗದಿಂದ ತನ್ನ ಜನರನ್ನು ಬಿಡಿಸಿದನು. ಮೋಶೆಯ ಮೂಲಕವಾಗಿ ಯೆಹೋವನು ಇಸ್ರಾಯೇಲ್ಯರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು ಅವರನ್ನು ತನ್ನ ಸಕ್ವೀಯ ಜನರನ್ನಾಗಿ ಮಾಡಿಕೊಂಡನು. ಆ ಸಮಯದಲ್ಲಿ, ತನ್ನ ಭಕ್ತಿಗಾಗಿ ಲಿಖಿತ ನೇಮ ವಿಧಿಗಳನ್ನು ಕೊಟ್ಟು, ತಾತ್ಕಾಲಿಕ ಯಾಜಕತ್ವ ಮತ್ತು ಐಹಿಕ ಪವಿತ್ರ ಸ್ಥಾನದಲ್ಲಿ ಕೂಡಿದ್ದ ಬಲಿಯರ್ಪಿಸುವ ಒಂದು ಏರ್ಪಾಡಿನ ಮೇರೆಯೊಳಗೆ ಅವನ್ನಿಟ್ಟನು, ಆ ಪವಿತ್ರ ಸ್ಥಾನವು ಮೊದಲು ವಾಹಕ ಗುಡಾರದ ರೂಪದಲ್ಲಿದ್ದು, ಅನಂತರ ಯೆರೂಸಲೇಮಿನಲ್ಲಿ ದೇವಾಲಯವಾಯಿತು.
9. (ಎ) ನಿಯಮದೊಡಂಬಡಿಕೆಯ ಮುಂಚೆ ಸತ್ಯ ಧರ್ಮವು ಹೇಗೆ ಆಚರಿಸಲ್ಪಟ್ಟಿತ್ತು? (ಬಿ) ನಿಯಮದೊಡಂಬಡಿಕೆಯ ಭೌತಿಕ ವೈಶಿಷ್ಟ್ಯಗಳು ಖಾಯಂ ಅಲ್ಲವೆಂದು ಯೇಸು ಹೇಗೆ ತೋರಿಸಿದನು?
9 ಆದರೂ, ಈ ಐಹಿಕ ವೈಶಿಷ್ಟ್ಯಗಳು ಸತ್ಯ ಧರ್ಮದ ಖಾಯಂ ಘಟಕಗಳಾಗಿರಲಿಕ್ಕಿರಲಿಲ್ಲ ಎಂಬದನ್ನು ಗಮನಕ್ಕೆ ತರಬೇಕು. ನಿಯಮಶಾಸ್ತ್ರವು “ಮುಂದೆ ಬರಬೇಕಾಗಿದ್ದ ಕಾರ್ಯಗಳ ಛಾಯೆ”ಯಾಗಿತ್ತು. (ಕೊಲೊಸ್ಸೆಯ 2:17; ಇಬ್ರಿಯ 9:8-10; 10:1) ಮೋಶೆಯ ನಿಯಮಗಳಿಗೆ ಮುಂಚೆ, ಪಿತೃಗಳ ಸಮಯದಲ್ಲಿ, ಕುಟುಂಬ ತಲೆಗಳು ಕುಟುಂಬಗಳನ್ನು ಪ್ರತಿನಿಧಿಸಿ ತಾವು ರಚಿಸಿದ ಯಜ್ಞವೇದಿಗಳ ಮೇಲೆ ಬಲಿಗಳನ್ನು ಅರ್ಪಿಸಿದ್ದರು. (ಆದಿಕಾಂಡ 12:8; 26:25; 35:2, 3; ಯೋಬ 1:5) ಆದರೆ ಒಂದು ಸಂಸ್ಕಾರ ಮತ್ತು ವಿಧಿಗಳನ್ನು ಒಳಗೊಂಡಿದ್ದ ವ್ಯವಸ್ಥಾಪಿತ ಯಾಜಕತ್ವವಾಗಲಿ ಅರ್ಪಣೆಗಳ ಏರ್ಪಾಡಾಗಲಿ ಅಲ್ಲಿರಲಿಲ್ಲ. ಅದಲ್ಲದೆ, ಯೆರೂಸಲೇಮಿನಲ್ಲಿ ಕೇಂದ್ರಿತವಾಗಿದ್ದ ಲಿಖಿತ ನೇಮವಿಧಿಗಳುಳ್ಳ ಆರಾಧನೆಯ ತಾತ್ಕಾಲಿಕ ರೂಪವನ್ನು ಯೇಸು ತಾನೇ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡಿದಾಗ ತಿಳಿಸಿದ್ದಾನೆ: “ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸ ಬೇಕಾದರೆ ಈ ಬೆಟ್ಟಕ್ಕೂ [ಗೆರಿಜೀಮ್, ಹಿಂದೆ ಸಮಾರ್ಯರ ಆಲಯವಿದ್ದ ಸ್ಥಳ] ಯೆರೂಸಲೇಮಿಗೂ ಹೋಗುವದಿಲ್ಲ. . . . ಸತ್ಯಭಾವದಿಂದ ದೇವಾರಾಧನೆ ಮಾಡುವವರು ಆತ್ಮದಿಂದಲೂ ಸತ್ಯದಿಂದಲೂ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ.” (ಯೋಹಾನ 4:21-23) ನಿಜ ಧರ್ಮವನ್ನು ಆಚರಿಸಬೇಕು, ಭೌತಿಕ ವಸ್ತುಗಳ ಮೂಲಕವಾಗಿ ಅಲ್ಲ, ಆತ್ಮದಿಂದ ಮತ್ತು ಸತ್ಯದಿಂದಲೇ ಎಂದು ಯೇಸು ತೋರಿಸಿದನು.
ಬಬಿಲೋನ್ಯ ಬಂಧಿವಾಸ
10. (ಎ)ಯೆಹೋವನು ತನ್ನ ಜನರನ್ನು ಬಬಿಲೋನಿನ ಬಂಧಿವಾಸಕ್ಕೆ ಒಯ್ಯಲ್ಪಡುವಂತೆ ಬಿಟ್ಟದ್ದೇಕೆ? (ಬಿ) ಸಾ. ಶ. ಪೂ. 537ರಲ್ಲಿ ಒಂದು ನಂಬಿಗಸ್ತ ಉಳಿಕೆಯವರ ಗುಂಪನ್ನು ಯಾವ ಎರಡು ವಿಧದಲ್ಲಿ ಯೆಹೋವನು ವಿಮೋಚಿಸಿದನು, ಮತ್ತು ಯೆಹೂದಕ್ಕೆ ಅವರು ಹಿಂತಿರುಗಿದ್ದ ಪ್ರಾಮುಖ್ಯ ಉದ್ದೇಶವೇನಾಗಿತ್ತು?
10 ಏದೆನಿನ ದಂಗೆಯಂದಿನಿಂದ ಸತ್ಯ ಧರ್ಮ ಮತ್ತು ಸುಳ್ಳುಧರ್ಮದ ನಡುವೆ ಸದಾ ವೈರತ್ವವು ಅಸ್ತಿತ್ವದಲ್ಲಿದೆ. ಕೆಲವೊಮ್ಮೆ ಸತ್ಯಾರಾಧಕರು, ನಿಮ್ರೋದನ ಕಾಲದಿಂದ ಬಬಿಲೋನಿನಿಂದ ಚಿತ್ರಿಸಲ್ಪಟ್ಟ ಸುಳ್ಳುಧರ್ಮದಿಂದ ಸಾಂಕೇತಿಕ ರೀತಿಯಲ್ಲಿ ಬಂಧಿವಾಸಕ್ಕೆ ಒಳಗಾಗಿದ್ದರು. ಸಾ. ಶ. ಪೂ. 617ರಲ್ಲಿ ಮತ್ತು ಸಾ. ಶ. ಪೂ. 607ರಲ್ಲಿ ಯೆಹೋವನು ತನ್ನ ಜನರನ್ನು ಬಾಬೆಲಿನ ಬಂಧಿವಾಸಕ್ಕೆ ಒಯ್ಯಲ್ಪಡಲು ಬಿಡುವ ಮುಂಚೆ, ಅವರು ಆ ಮೊದಲೆ ಬಬಿಲೋನ್ಯ ಸುಳ್ಳು ಧರ್ಮಕ್ಕೆ ಬಲಿಯಾಗಿ ಬಿದ್ದದ್ದರು. (ಯೆರೆಮೀಯ 2:13-23; 15:2; 20:6; ಯೆಹೆಜ್ಕೇಲ 12:10, 11) ಸಾ. ಶ. ಪೂ. 537ರಲ್ಲಿ ಉಳಿಕೆಯವರ ಒಂದು ನಂಬಿಗಸ್ತ ಗುಂಪು ಯೆಹೂದಕ್ಕೆ ಹಿಂತಿರುಗಿ ಬಂತು. (ಯೆಶಾಯ 10:21) “ಬಾಬೆಲಿನಿಂದ ಹೊರಡಿರಿ!” ಎಂಬ ಪ್ರವಾದನಾ ಕರೆಗೆ ಅವರು ಕಿವಿಗೊಟ್ಟರು. (ಯೆಶಾಯ 48:20) ಇದು ಕೇವಲ ಒಂದು ಭೌತಿಕ ಬಿಡುಗಡೆಯಾಗಿರಲಿಲ್ಲ. ಅಶುದ್ಧವಾದ, ವಿಗ್ರಹಾರಾಧಕ ಸುಳ್ಳು ಧರ್ಮದ ಪರಿಸರದಿಂದ ಒಂದು ಆತ್ಮಿಕ ಬಿಡುಗಡೆಯೂ ಅದಾಗಿತ್ತು. ಆದುದರಿಂದ, ಈ ನಂಬಿಗಸ್ತ ಉಳಿಕೆಯವರಿಗೆ ಈ ಅಪ್ಪಣೆಯು ಕೊಡಲ್ಪಟ್ಟಿತು: “ತೊಲಗಿರಿ, ತೊಲಗಿರಿ, ಬಾಬೆಲಿಂದ ಹೊರಡಿರಿ. ಅಶುದ್ಧವಾದ ಯಾವದನ್ನೂ ಮುಟ್ಟದಿರ್ರಿ. ಅದರ ಮಧ್ಯದೊಳಗಿಂದ ತೆರಳಿರಿ, ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ!” (ಯೆಶಾಯ 52:11) ಯೆಹೂದಕ್ಕೆ ಹಿಂತಿರುಗಿದ ಅವರ ಮುಖ್ಯ ಉದ್ದೇಶವು ಶುದ್ಧಾರಾಧನೆಯನ್ನು, ಸತ್ಯ ಧರ್ಮವನ್ನು ಪುನಃಸ್ಥಾಪಿಸುವುದೇ ಆಗಿತ್ತು.
11. ಯೆಹೂದದಲ್ಲಿ ಶುದ್ಧಾರಾಧನೆಯ ಪುನಃಸ್ಥಾಪನೆಯಲ್ಲದೆ, ಸಾ. ಶ. ಪೂ. ಆರನೆಯ ಶತಮಾನದಲ್ಲಿ ಬೇರೆ ಯಾವ ಹೊಸ ಧಾರ್ಮಿಕ ವಿಕಸನೆಗಳು ಸಂಭವಿಸಿದವು?
11 ರಸಕರವಾಗಿಯೇ, ಅದೇ ಸಾ. ಶ. ಪೂ. 6ನೆಯ ಶತಮಾನವು, ಮಹಾ ಬಾಬೆಲಿನೊಳಗೆ ಸುಳ್ಳು ಧರ್ಮದ ಹೊಸ ಹೊಸ ಶಾಖೆಗಳು ಮೂಡುವುದನ್ನು ಕಂಡಿತು. ಅದು ಬೌದ್ಧ ಮತ, ಕನ್ಫ್ಯೂಷಿಯನ್ ಮತ, ಝೊರಾಷ್ಟ್ರಿಯನ್ ಮತ, ಜೈನ ಮತ ಇವುಗಳನ್ನು ಮಾತ್ರವಲ್ಲ, ಕ್ರೈಸ್ತ ಪ್ರಪಂಚದ ಚರ್ಚುಗಳನ್ನು ಅನಂತರ ಮಹತ್ತಾಗಿ ಪ್ರಭಾವಿಸಲ್ಪಡಲಿದ್ದ ವಿಚಾರವಾದಿ ಗ್ರೀಕ್ ತತ್ವಜ್ಞಾನದ ಜನನವನ್ನೂ ಕಂಡಿತು. ಹೀಗೆ ಶುದ್ಧಾರಾಧನೆಯು ಯೆಹೂದದಲ್ಲಿ ಪುನಃಸ್ಥಾಪನೆಯಾಗುತ್ತಿದ್ದಷ್ಟಕ್ಕೆ, ದೇವರ ಪ್ರಧಾನ ಶತ್ರುವು ಸುಳ್ಳುಧರ್ಮದಲ್ಲಿ ವಿಸ್ತಾರವಾದ ಅನ್ಯ ಆಯ್ಕೆಗಳನ್ನು ಒದಗಿಸಿ ಕೊಡುತ್ತಲಿದ್ದನು.
12. ಸಾ. ಶ. ಒಂದನೆಯ ಶತಮಾನದಲ್ಲಿ ಬಬಿಲೋನ್ಯ ಬಂಧಿವಾಸದಿಂದ ಯಾವ ಬಿಡುಗಡೆಯು ಸಂಭವಿಸಿತು, ಮತ್ತು ಪೌಲನು ಯಾವ ಎಚ್ಚರಿಕೆಯನ್ನು ಕೊಟ್ಟನು?
12 ಯೇಸು ಇಸ್ರಾಯೇಲಲ್ಲಿ ಗೋಚರಿಸಿದ ಸಮಯದೊಳಗೆ, ಅಧಿಕ ಸಂಖ್ಯಾತ ಯೆಹೂದ್ಯರು, ಅನೇಕ ಬಬಿಲೋನ್ಯ ಧಾರ್ಮಿಕ ಕಲ್ಪನೆಗಳನ್ನು ಸ್ವೀಕರಿಸಿದ್ದ ಒಂದು ಧರ್ಮರೂಪವಾದ ಯೆಹೂದಿ ಧರ್ಮದ ಹಲವಾರು ಪಂಥಗಳನ್ನು ಪಾಲಿಸತೊಡಗಿದ್ದರು. ಅದು ತನ್ನನ್ನು ಮಹಾ ಬಾಬೆಲಿಗೆ ಜೋಡಿಸಿಕೊಂಡಿತ್ತು. ಕ್ರಿಸ್ತನು ಅದನ್ನು ಖಂಡಿಸಿದ್ದನು ಮತ್ತು ತನ್ನ ಶಿಷ್ಯರನ್ನು ಬಬಿಲೋನ್ಯ ಬಂಧನದಿಂದ ಬಿಡಿಸಿದ್ದನು. (ಮತ್ತಾಯ ಅಧ್ಯಾಯ 23; ಲೂಕ 4:18) ಆತನು ಸಾರಿದ್ದ ಕ್ಷೇತ್ರಗಳಲ್ಲಿ ಸುಳ್ಳು ಧರ್ಮ ಮತ್ತು ಗ್ರೀಕ್ ತತ್ವಜ್ಞಾನವು ಹಬ್ಬಿದ್ದರಿಂದ, ಅಪೊಸ್ತಲ ಪೌಲನು ಯೆಶಾಯನ ಪ್ರವಾದನೆಯನ್ನು ಉಲ್ಲೇಖಿಸಿ, ಮಹಾ ಬಾಬೆಲಿನ ಅಶುದ್ಧ ಪ್ರಭಾವಗಳಿಂದ ತಮ್ಮನ್ನು ಮುಕ್ತರಾಗಿರಿಸುವ ಅಗತ್ಯವಿದ್ದ ಕ್ರೈಸ್ತರಿಗೆ ಅದನ್ನು ಅನ್ವಯಿಸಿದನು. ಆತನು ಬರೆದದ್ದು: “ದೇವರ ಮಂದಿರಕ್ಕೂ [ಬಬಿಲೋನ್ಯ] ವಿಗ್ರಹಗಳಿಗೂ ಒಪ್ಪಿಗೆ ಏನು? ನಾವು ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ; ಇದರ ಸಂಬಂಧವಾಗಿ ದೇವರು—ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ. ಆದದರಿಂದ ಅನ್ಯಜನರ ಮಧ್ಯದಿಂದ ಹೊರಟುಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು [ಯೆಹೋವನು, NW ] ಹೇಳುತ್ತಾನೆ, ಆಗ ನಾನು ನಿಮ್ಮನ್ನು ಸೇರಿಸಿಕೊಳ್ಳುವೆನು.”—2 ಕೊರಿಂಥ 6:16, 17.
ಈ ಅಂತ್ಯಕಾಲದಲ್ಲಿ ಸುಳ್ಳು ಧರ್ಮದಿಂದ ಪ್ರತ್ಯೇಕಿಸಿಕೊಳ್ಳುವುದು
13. ಏಷ್ಯಾ ಮೈನರ್ನ ಏಳು ಸಭೆಗಳಿಗೆ ಕ್ರಿಸ್ತನು ಕಳುಹಿಸಿದ ಸಂದೇಶದಿಂದ ಏನು ಸೂಚಿತವಾಯಿತು, ಮತ್ತು ಫಲಿತಾಂಶವಾಗಿ ಯಾವುದು ಹೊರಬಂತು?
13 ಅಪೊಸ್ತಲ ಯೋಹಾನನಿಗೆ ಕೊಡಲ್ಪಟ್ಟ ಪ್ರಕಟನೆಯ ಮೂಲಕವಾಗಿ ಏಷ್ಯಾ ಮೈನರಿನ ಏಳು ಸಭೆಗಳಿಗೆ ಕ್ರಿಸ್ತನು ಕಳುಹಿಸಿದ ಸಂದೇಶಗಳು, ಸಾ. ಶ. ಒಂದನೆಯ ಶತಕದ ಅಂತ್ಯದೊಳಗೆ ಬಬಿಲೋನ್ಯ ಧಾರ್ಮಿಕ ಪದ್ಧತಿಗಳು ಮತ್ತು ಮನೋಭಾವನೆಗಳು ಕ್ರೈಸ್ತ ಸಭೆಯೊಳಗೆ ನುಸುಳುತ್ತಿದ್ದವೆಂಬದನ್ನು ಸ್ಪಷ್ಟವಾಗಿಗಿ ಸೂಚಿಸಿತ್ತು. (ಪ್ರಕಟನೆ, ಅಧ್ಯಾಯ 2 ಮತ್ತು 3) ಧರ್ಮಭ್ರಷ್ಟತೆಯು ವಿಶೇಷವಾಗಿ ಸಾ. ಶ. ಎರಡನೆಯ ಶತಮಾನದಿಂದ ಐದನೆಯ ಶತಮಾನದ ತನಕ ಪ್ರವರ್ಧಮಾನಕ್ಕೆ ಬಂದು, ಶುದ್ಧ ಕ್ರೈಸ್ತ ಧರ್ಮದ ಒಂದು ಭ್ರಷ್ಟ ಅನುಕರಣೆಯು ಹೊರಬರಲು ಕಾರಣಮಾಡಿತು. ಆತ್ಮದ ಅಮರತ್ವ, ಜ್ವಲಿಸುವ ನರಕ, ಮತ್ತು ತ್ರಯೈಕ್ಯ ಮುಂತಾದ ಬಬಿಲೋನ್ಯ ಬೋಧನೆಗಳು ಧರ್ಮಭ್ರಷ್ಟ ಕ್ರೈಸ್ತತ್ವದ ಬೋಧನೆಗಳೊಳಗೆ ಸಂಘಟಿತವಾದವು. ಕ್ಯಾಥ್ಲಿಕ್, ಸಾಂಪ್ರದಾಯಿಕ, ಮತ್ತು ಅನಂತರ ಪ್ರಾಟೆಸ್ಟಂಟ್ ಚರ್ಚುಗಳೆಲ್ಲವು ಈ ಸುಳ್ಳು ಮತತತ್ವಗಳನ್ನು ಸ್ವೀಕಾರ ಮಾಡಿದವು ಮತ್ತು ಹೀಗೆ, ಪಿಶಾಚನ ಸುಳ್ಳುಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಒಂದು ಭಾಗವಾದವು.
14, 15. (ಎ)ಗೋಧಿ ಮತ್ತು ಹಣಜಿಯ ಯೇಸುವಿನ ಸಾಮ್ಯವು ಏನನ್ನು ತೋರಿಸಿತು? (ಬಿ) 19ನೆಯ ಶತಮಾನದ ಅಂತ್ಯದ ಸುಮಾರಿಗೆ ಏನು ಸಂಭವಿಸಿತು, ಮತ್ತು 1914ರೊಳಗೆ ನಿಜ ಕ್ರೈಸ್ತರು ಬೋಧನೆಯ ಸಂಬಂಧವಾಗಿ ಯಾವ ಪ್ರಗತಿಯನ್ನು ಮಾಡಿದರು?
14 ಸತ್ಯ ಧರ್ಮವು ಎಂದೂ ಸಂಪೂರ್ಣವಾಗಿ ನಾಶವಾಗಿ ಹೋಗಿರಲಿಲ್ಲ. ಶತಮಾನಗಳಲ್ಲೆಲ್ಲಾ ಸತ್ಯ-ಪ್ರೇಮಿಗಳು ಯಾವಾಗಲೂ ಇದ್ದರು, ಅವರಲ್ಲಿ ಕೆಲವರು ಯೆಹೋವನಿಗೆ ಮತ್ತು ಆತನ ವಾಕ್ಯವಾದ ಬೈಬಲಿಗೆ ನಂಬಿಗಸ್ತಿಕೆ ತೋರಿಸಿದ್ದಕ್ಕಾಗಿ ತಮ್ಮ ಜೀವವನ್ನೂ ಕಳಕೊಂಡರು. ಆದರೆ ಯೇಸು ಕೊಟ್ಟ ಗೋಧಿ ಮತ್ತು ಹಣಜಿಯ ಸಾಮ್ಯವು ತೋರಿಸುವ ಪ್ರಕಾರ, ಸಾಂಕೇತಿಕ ಗೋಧಿಯು ಅಥವಾ ರಾಜ್ಯದ ಅಭಿಷಿಕ್ತ ಪುತ್ರರು “ಯುಗದ [ವಿಷಯಗಳ ವ್ಯವಸ್ಥೆಯ, NW ] ಸಮಾಪ್ತಿಯಲ್ಲಿ” ಮಾತ್ರವೆ ಹಣಜಿಯಿಂದ ಅಥವಾ ಕೆಡುಕನ ಪುತ್ರರೊಳಗಿಂದ ಪ್ರತ್ಯೇಕಿಸಲ್ಪಡಲಿದ್ದರು. (ಮತ್ತಾಯ 13:24-30, 36-43) ಯುಗದ ಸಮಾಪ್ತಿಯು—ಈ ಪ್ರತ್ಯೇಕಿಸುವ ಕೆಲಸವು ಸಂಭವಿಸುವ ಸಮಯವು—ಹತ್ತಿರವಾದಾಗ, ಪ್ರಾಮಾಣಿಕ ಬೈಬಲ್ ವಿದ್ಯಾರ್ಥಿಗಳು 19ನೆಯ ಶತಮಾನದ ಕೊನೆಯಲ್ಲಿ ಸುಳ್ಳು ಧರ್ಮದ ಬಂಧನವನ್ನು ಕಳಚಿ ಹೊರಬರಲಾರಂಭಿಸಿದರು.
15 ಇಂದು ಯೆಹೋವನ ಸಾಕ್ಷಿಗಳೆಂದು ಕರೆಯಲ್ಪಡುವ ಈ ಕ್ರೈಸ್ತರು 1914ರೊಳಗೆ, ವಿಮೋಚನೆಯಲ್ಲಿ ಬಲವಾದ ನಂಬಿಕೆಯನ್ನು ಬೆಳೆಸಿಕೊಂಡಿದ್ದರು. ಕ್ರಿಸ್ತನ ಸಾನಿಧ್ಯತೆಯು ಅದೃಶ್ಯವಾಗಿರಲೇ ಬೇಕೆಂದು ಅವರಿಗೆ ತಿಳಿದಿತ್ತು. 1914ನೆಯ ವರ್ಷವು “ಅನ್ಯ ಜನಾಂಗಗಳ ಕಾಲದ” ಅಂತ್ಯವನ್ನು ಗುರುತಿಸುವದೆಂದು ಅವರು ತಿಳುಕೊಂಡರು. (ಲೂಕ 21:24, ಕಿಂಗ್ ಜೇಮ್ಸ್ ವರ್ಷನ್) ಮತ್ತು, ಆತ್ಮ ಮತ್ತು ಪುನರುತ್ಥಾನದ ಅರ್ಥವನ್ನು ಅವರು ಸ್ಪಷ್ಟವಾಗಿಗಿ ತಿಳುಕೊಂಡರು. ಚರ್ಚುಗಳ ಬೋಧನೆಗಳಾದ ನರಕಾಗ್ನಿ ಮತ್ತು ತ್ರಯೈಕ್ಯದಲ್ಲಿರುವ ಘೋರ ತಪ್ಪಿನ ಸಂಬಂಧದಲ್ಲಿ ಅವರಿಗೆ ಜ್ಞಾನೋದಯವು ಸಿಕ್ಕಿತು. ಅವರು ದೈವಿಕ ನಾಮದ ಕುರಿತು ಕಲಿತರು ಮತ್ತು ಅದನ್ನು ಬಳಕೆಗೆ ತಂದರು, ಮತ್ತು ವಿಕಾಸವಾದ ಮತ್ತು ಪ್ರೇತವಿದ್ಯೆಯ ತಪ್ಪನ್ನು ಅವರು ಕಾಣಶಕ್ತರಾದರು.
16. ಅಭಿಷಿಕ್ತ ಕ್ರೈಸ್ತರು 1919ರಲ್ಲಿ ಯಾವ ಕರೆಗೆ ಪ್ರತಿಕ್ರಿಯೆ ತೋರಿಸಿದರು?
16 ಹೀಗೆ ಸುಳ್ಳು ಧರ್ಮದ ಬಂಧನವನ್ನು ಕಳಚಿ ಹಾಕುವದರಲ್ಲಿ ಒಂದು ಒಳ್ಳೇ ಆರಂಭವು ಮಾಡಲ್ಪಟ್ಟಿತು. ಮತ್ತು 1919ರಲ್ಲಿ ಮಹಾ ಬಾಬೆಲು ದೇವ ಜನರ ಮೇಲಿನ ವರ್ಚಸ್ಸನ್ನು ಸಂಪೂರ್ಣವಾಗಿ ಕಳಕೊಂಡಿತು. ಸಾ. ಶ. ಪೂ. 537ರಲ್ಲಿ ಹೇಗೆ ಯೆಹೂದಿ ಉಳಿಕೆಯವರು ಬಬಿಲೋನ್ಯ ಬಂಧಿವಾಸದಿಂದ ಬಿಡಿಸಲ್ಪಟ್ಟರೋ ಹಾಗೆ ನಂಬಿಗಸ್ತ ಅಭಿಷಿಕ್ತ ಕ್ರೈಸ್ತ ಉಳಿಕೆಯವರು, “ಅದರ [ಮಹಾ ಬಾಬೆಲಿನ] ಮಧ್ಯದೊಳಗಿಂದ ತೆರಳಿರಿ” ಎಂಬ ಕರೆಗೆ ಕಿವಿಗೊಟ್ಟರು.—ಯೆಶಾಯ 52:11.
17. (ಎ) 1922ರಿಂದ ಮುಂದಕ್ಕೆ ಏನು ವಿಕಾಸಗೊಂಡಿತು, ಮತ್ತು ದೇವ ಜನರ ನಡುವೆ ಯಾವ ಅಗತ್ಯತೆಯು ತಾನೇ ಭಾಸವಾಗತೊಡಗಿತು? (ಬಿ) ಯಾವ ಉತ್ಕಟ ಸ್ಥಾನವನ್ನು ತಕ್ಕೊಳ್ಳಲಾಯಿತು ಮತ್ತು ಇದೇಕೆ ಗ್ರಹಣೀಯವು?
17 ಬಬಿಲೋನ್ಯ ಸುಳ್ಳು ಧರ್ಮವನ್ನು, ವಿಶೇಷವಾಗಿ ಕ್ರೈಸ್ತ ಪ್ರಪಂಚದ ಚರ್ಚುಗಳನ್ನು ಬಯಲುಗೊಳಿಸಿದ ಮನತಟ್ಟುವ ಬೈಬಲ್ ಸತ್ಯಗಳು 1922ರಿಂದ ಮುಂದೆ ಪ್ರಕಾಶಿಸಲ್ಪಟ್ಟವು ಮತ್ತು ಬಹಿರಂಗವಾಗಿ ಹಂಚಲ್ಪಟ್ಟವು. ಎಲ್ಲಾ ರೀತಿಯ ಸುಳ್ಳು ಧರ್ಮದಿಂದ ಪೂರಾ ರೀತಿಯಲ್ಲಿ ಪ್ರತ್ಯೇಕವಾಗಲೇ ಬೇಕು ಎಂಬದನ್ನು ದೇವರ ಶುದ್ಧ ಜನರ ಮನಸ್ಸಿನಲ್ಲಿ ಅಚ್ಚೊತ್ತುವ ಅಗತ್ಯವು ಕಂಡು ಬಂತು. ಹೀಗೆ, ವರ್ಷಗಳ ತನಕ, ಶುದ್ಧಾರಾಧನೆಯ ಕುರಿತು ಮಾತಾಡುವಾಗ “ಧರ್ಮ” ಎಂಬ ಶಬ್ದದ ಬಳಕೆಯನ್ನು ಸಹಾ ವರ್ಜಿಸಲಾಗಿತ್ತು. “ಧರ್ಮವು ಒಂದು ಪಾಶ ಮತ್ತು ತಂತ್ರ” ಎಂಬ ಗುರಿನುಡಿಗಳನ್ನು ದೊಡ್ಡ ದೊಡ್ಡ ನಗರಗಳ ಬೀದಿಗಳಲ್ಲಿ ಪ್ರದರ್ಶಿಸಲಾಯಿತು. ಗವರ್ನ್ಮೆಂಟ್ (1928) ಮತ್ತು “ದ ಟ್ರುಥ್ ಶಲ್ ಮೇಕ್ ಯು ಫ್ರೀ” (1943) ಮುಂತಾದ ಪುಸ್ತಕಗಳು “ಕ್ರೈಸ್ತತ್ವ” ಮತ್ತು “ಧರ್ಮ”ದ ನಡುವಣ ಸ್ಪಷ್ಟವಾಗಿದ ಪ್ರತ್ಯೇಕತೆಯನ್ನು ತೋರಿಸಿಕೊಟ್ಟವು. ಮಹಾ ಬಾಬೆಲಿನ ಎಲ್ಲೆಲ್ಲಿಯೂ ಪಸರಿಸಿರುವ ಧಾರ್ಮಿಕ ವ್ಯವಸ್ಥೆಗಳಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಬೇಕಿದದ್ದರಿಂದ, ಈ ಉತ್ಕಟ ಪ್ರಯತ್ನವು ಗೃಹಣೀಯವು.
ಸತ್ಯ ಮತ್ತು ಸುಳ್ಳು ಧರ್ಮ
18. 1951ರಲ್ಲಿ “ಧರ್ಮ”ದ ಕುರಿತು ಯಾವ ಹೊಸ ತಿಳುವಳಿಕೆಯು ನೀಡಲ್ಪಟ್ಟಿತು ಮತ್ತು ಇದು 1975ರ ವರ್ಷಪುಸ್ತಕದಲ್ಲಿ ಹೇಗೆ ವಿವರಿಸಲ್ಪಟ್ಟಿದೆ?
18 ಆ ಮೇಲೆ 1951ರಲ್ಲಿ, ಸತ್ಯ ಧರ್ಮ ಮತ್ತು ಸುಳ್ಳು ಧರ್ಮದ ನಡುವಣ ಶುಭ್ರ-ಸ್ಪಷ್ಟತೆಯ ತಿಳುವಳಿಕೆಯನ್ನು ತನ್ನ ಜನರಿಗೆ ಕೊಡುವ ಸುಸಮಯವು ಯೆಹೋವನಿಗೆ ಬಂತು. 1975ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕವು ವರದಿಸಿದ್ದು: “1951ರಲ್ಲಿ, ಸತ್ಯಾರಾಧನೆಯ ಪಕ್ಷವಾದಿಗಳು ‘ಧರ್ಮ’ ಎಂಬ ಶಬ್ದದ ಕುರಿತು ಒಂದು ಮಹತ್ವದ ವಿಷಯವನ್ನು ಕಲಿತರು. 1938ರಲ್ಲಿ, ‘ಧರ್ಮವು ಒಂದು ಪಾಶ ಮತ್ತು ತಂತ್ರ’ ಎಂಬ ವಿಚಾರಪ್ರೇರಕ ಸಂಕೇತವನ್ನು ಕೆಲವೊಮ್ಮೆ ಒಯ್ದದ್ದನ್ನು ಕೆಲವರು ಚೆನ್ನಾಗಿ ನೆನಪಿಸಿಶಕ್ತರಿದ್ದರು. ಆಗ ಅವರ ದೃಷ್ಟಿಕೋನದಲ್ಲಿ ಎಲ್ಲಾ ‘ಧರ್ಮ’ವು ಅಕ್ರೈಸ್ತವೂ, ಪಿಶಾಚನಿಂದ ಬಂದದ್ದೂ ಎಂದು ಪರಿಗಣಿಸಲ್ಪಟ್ಟಿತ್ತು. ಆದರೆ ಮಾರ್ಚ್, 15, 1951ರಲ್ಲಿ, ದಿ ವಾಚ್ಟವರ್ ಪತ್ರಿಕೆಯು ಧರ್ಮ ಸಂಬಂಧದಲ್ಲಿ ‘ಸತ್ಯ’ ಮತ್ತು ‘ಸುಳ್ಳು’ ಎಂಬ ವಿಶೇಷಣಗಳನ್ನು ಉಪಯೋಗಿಸುವುದನ್ನು ಸಮ್ಮತಿಸಿತು. ಅದಲ್ಲದೆ, ವಾಟ್ ಹ್ಯಾಸ್ ರಿಲಿಜನ್ ಡನ್ ಫಾರ್ ಮ್ಯಾನ್ಕೈಂಡ್ ಎಂಬ ಲೀನಕಾರಿ ಪುಸ್ತಕವು (1951ರಲ್ಲಿ ಪ್ರಕಾಶಿತವಾಗಿ, ಇಂಗ್ಲೆಂಡಿನ ಲಂಡನ್, ವೆಂಬ್ಲೀ ಸ್ಟೇಡಿಯಂನಲ್ಲಿ ಜರುಗಿದ ‘ಶುಭ್ರ ಆರಾಧನೆ’ ಸಮ್ಮೇಳನದಲ್ಲಿ ಹೊರಡಿಸಲ್ಪಟ್ಟಿತು) ಹೀಗೆಂದು ಹೇಳಿತ್ತು: “ಅದು ಉಪಯೋಗಿಸಲ್ಪಡುವ ರೀತಿಗನುಸಾರ, “ಧರ್ಮ”ದ ಸರಳವಾದ ಅರ್ಥವು, ಅದು ಸತ್ಯಭಕ್ತಿ ಯಾ ಸುಳ್ಳು ಭಕ್ತಿಯಾಗಿರಲಿ, ಒಂದು ಆರಾಧನಾ ವ್ಯವಸ್ಥೆ, ಭಕ್ತಿಯ ಒಂದು ರೂಪ ಎಂದಾಗಿದೆ. ಇದರ ಹಿಬ ಶಬ್ದವಾದ ’ಅ-ಬೊಹ್-ಡ’ಹ್ ಕ್ಕೆ, ಅದನ್ನು ಯಾರಿಗೇ ಸಲ್ಲಿಸಲಿ, “ಸೇವೆ” ಎಂಬ ಅಕ್ಷರಶಃ ಅರ್ಥವಿದೆ.’ ತದನಂತರ ‘ಸುಳ್ಳು ಧರ್ಮ’ ಮತ್ತು ‘ಸತ್ಯ ಧರ್ಮ’ ಎಂಬ ಹೇಳಿಕೆಗಳು ಯೆಹೋವನ ಸಾಕ್ಷಿಗಳಲ್ಲಿ ಸಾಮಾನ್ಯವಾಗಿ ಪರಿಣಮಿಸಿದವು.”—ಪುಟ 225.
19, 20. (ಎ)ಶುದ್ಧಾರಾಧನೆಗೆ “ಧರ್ಮ” ಶಬ್ದ ಉಪಯೋಗಿಸಿದರಿಂದ ಸತ್ಯಾರಾಧಕರು ಮನಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲವೇಕೆ? (ಬಿ) ಈ ಹೊಸ ತಿಳುವಳಿಕೆಯು ಯೆಹೋವನ ಜನರನ್ನು ಏನು ಮಾಡಲು ಶಕ್ತರಾಗಿ ಮಾಡಿತು?
19 ಒಬ್ಬ ವಾಚಕನ ಪ್ರಶ್ನೆಗೆ ಉತ್ತರದಲ್ಲಿ, ಆಗಸ್ಟ್ 15, 1951ರ ದಿ ವಾಚ್ಟವರ್ ಪತ್ರಿಕೆಯ ಹೇಳಿದ್ದು: “‘ಧರ್ಮ’ ಎಂಬ ಶಬ್ದದ ಉಪಯೋಗದಿಂದಾಗಿ ಯಾರೂ ಮನಕೆಡಿಸಿಕೊಳ್ಳಬಾರದು. ಯಾಕೆಂದರೆ ನಮ್ಮನ್ನು ಕ್ರೈಸ್ತರೆಂದು ಕರೆದು ಕೊಳ್ಳುವದು ಕ್ರೈಸ್ತ ಪ್ರಪಂಚದ ಸುಳ್ಳು ಕ್ರೈಸ್ತರೊಂದಿಗೆ ನಮ್ಮನ್ನು ಹೇಗೆ ಹಾಕುವುದಿಲ್ಲವೊ ಹಾಗೆಯೇ, ಅದರ ಉಪಯೋಗವು ನಮ್ಮನ್ನು ಸಂಪ್ರದಾಯ-ಬದ್ಧ ಸುಳ್ಳು ಧರ್ಮದೊಂದಿಗೆ ಹಾಕುವುದಿಲ್ಲ.”
20 “ಧರ್ಮ” ಎಂಬ ಶಬ್ದದ ಕುರಿತಾದ ಈ ಹೊಸ ತಿಳುವಳಿಕೆಯು ಒಂದು ರಾಜಿ ಸಂಧಾನವಾಗುವ ಬದಲಿಗೆ, ಸತ್ಯ ಮತ್ತು ಸುಳ್ಳು ಆರಾಧನೆಗಳ ನಡುವಣ ಅಂತರವನ್ನು ವಿಸ್ತರಿಸಲು ಯೆಹೋವನ ಜನರಿಗೆ ಶಕ್ಯಮಾಡಿದೆ ಹೇಗೆ ಎಂಬದನ್ನು ಮುಂದಿನ ಲೇಖನವು ತೋರಿಸುವುದು. (w91 12/1)
ನಮ್ಮ ತಿಳುವಳಿಕೆಯ ಪರೀಕೆಗ್ಷಾಗಿ
▫ ಯಾವಾಗ ಮತ್ತು ಹೇಗೆ ಸುಳ್ಳು ಧರ್ಮವು ಭೂಮಿಯಲ್ಲಿ ಪ್ರಾರಂಭಿಸಿತು?
▫ ಜಲಪ್ರಲಯದ ನಂತರ ಸೈತಾನನು ಏನನ್ನು ಸ್ಥಾಪಿಸಲು ಪ್ರಯತ್ನಿಸಿದನು, ಆದರೆ ಅವನ ಹಂಚಿಕೆಯು ನಿಷ್ಫಲಗೊಂಡದ್ದು ಹೇಗೆ?
▫ ಬಬಿಲೋನು ಯಾವುದಕ್ಕೆ ಸಾಂಕೇತಿಕವಾಗಿದೆ?
▫ ಸಾ. ಶ. ಪೂ. 537ರಲ್ಲಿ, ಸಾ. ಶ. ಒಂದನೆಯ ಶತಮಾನದಲ್ಲಿ ಮತ್ತು 1919ರಲ್ಲಿ ಯಾವ ಬಿಡುಗಡೆಗಳು ಸಂಭವಿಸಿದವು?
▫ “ಧರ್ಮ” ಎಂಬ ಶಬ್ದದ ಯಾವ ಹೊಸ ತಿಳುವಳಿಕೆಯನ್ನು 1951ರಲ್ಲಿ ಕೊಡಲಾಯಿತು ಮತ್ತು ಆಗ ಏಕೆ? ಸುಳ್ಲು ಧರ್ಮದಿಂದ ಪ್ರತ್ಯೀಶಿಸಿಕೂಳ್ಳುವುದು
[ಪುಟ 11 ರಲ್ಲಿರುವ ಚೌಕ/ಚಿತ್ರಗಳು]
ಭೂಸುತ್ತಲೂ ನಂಬಲ್ಪಡುವ ಸುಳ್ಳು ಬೋಧನೆಗಳ ಮೂಲವು ಬಬಿಲೋನಿನಲ್ಲಾಯಿತು:
▫ ದೇವರುಗಳ ತ್ರಯೈಕ್ಯಗಳು ಅಥವಾ ತ್ರಿತ್ವಗಳು
▫ ಮಾನವ ಆತ್ಮವು ಮರಣವನ್ನು ಪಾರಾಗುತ್ತದೆ
▫ ಪ್ರೇತ-ವಿದ್ಯೆ—“ಮೃತ”ರೊಂದಿಗೆ ಮಾತನಾಡುವುದು
▫ ಭಕ್ತಿಯಲ್ಲಿ ಮೂರ್ತಿಗಳ ಉಪಯೋಗ
▫ ದೆವ್ವಗಳನ್ನು ಶಾಂತಗೊಳಿಸಲು ವಶೀಕರಣದ ಬಳಕೆ
▫ ಪ್ರಬಲ ವೈದಿಕನಿಂದ ಆಡಳಿತ