ನಿಮಗಾಗಿ ಒಂದು ಶುಶ್ರೂಷೆಯೆ?
ಯೆಹೋವನು ಜೀವಿತದ ನಮ್ಮ ಆನಂದಕ್ಕಾಗಿ ಈ ಭೂಮಿಯನ್ನು ಪರಿಪೂರ್ಣವಾಗಿ ಸರಬರಾಯಿ ಮಾಡಿದ್ದರಲ್ಲಿ ತನ್ನ ಔದಾರ್ಯವನ್ನು ತೋರಿಸಿದ್ದಾನೆ. ಆದಾಮ ಮತ್ತು ಹವ್ವರ ದಂಗೆಯ ನಂತರವೂ ಆತನು ಈ ಒದಗಿಸುವಿಕೆಗಳನ್ನು ಔದಾರ್ಯದಿಂದ ಉಳಿಯುವಂತೆ ಬಿಟ್ಟಿರುತ್ತಾನೆ. ಹೆಚ್ಚೇಕೆ, ಆತನು ನಂಬುವ ಮಾನವರನ್ನು ಪಾಪದ ಕೆಡುಕಿನಿಂದ ರಕ್ಷಿಸುವುದಕ್ಕಾಗಿ ತನ್ನ ಮಗನನ್ನು ಕಳುಹಿಸಿದರಲ್ಲಿ ತನ್ನ ಅತಿಶಯ ಪ್ರೀತಿಯನ್ನು ಅಭಿವ್ಯಂಜಿಸಿದ್ದಾನೆ.—ಮತ್ತಾಯ 5:45; ಯೋಹಾನ 3:16.
ಅಂಥ ಪ್ರೀತಿಗೆ ನಾವು ಹೇಗೆ ಪ್ರತಿಕ್ರಿಯೆ ತೋರಿಸುವೆವು? ನಾವು ನಮ್ಮ ದೇವರಾದ ಯೆಹೋವನನ್ನು ನಮ್ಮ ಪೂರ್ಣ ಹೃದಯ, ಆತ್ಮ, ಮನಸ್ಸು ಮತ್ತು ಶಕಿಯ್ತಿಂದ ಪ್ರೀತಿಸಬೇಕೆಂದು ಯೇಸು ಹೇಳಿದ್ದಾನೆ. ನಾವು ನಮ್ಮ ಆರಾಧನೆಯನ್ನು ಮತ್ತು ನಿಷ್ಠೆಯನ್ನು ಆತನಿಗೆ ಸಲ್ಲಿಸಬೇಕು ಮತ್ತು ಆತನ ಚಿತ್ತದೊಂದಿಗೆ ಹೊಂದಿಕೆಯಲ್ಲಿ ನಮ್ಮ ಜೀವಿತಗಳನ್ನು ಜೀವಿಸಬೇಕು ಎಂಬದನ್ನು ಇದು ಸೂಚಿಸುತ್ತದೆ.—ಮಾರ್ಕ 12:30; 1 ಪೇತ್ರ 4:2.
ಆದರೆ ದೇವರ ಚಿತ್ತವನ್ನು ಮಾಡುವುದರಲ್ಲಿ ಏನು ಒಳಗೂಡಿರುತ್ತದೆ? ಆತನಿಗೆ ಸಲ್ಲಿಸತಕ್ಕ ಒಂದು ಸೇವೆಯು—ನಾವು ಪಾಲಿಗರಾಗಬೇಕಾದ ಒಂದು ಶುಶ್ರೂಷೆಯು ಅಲ್ಲಿದೆಯೆ?
ಶುಶ್ರೂಷಕರ ಅಗತ್ಯವು
ದೇವರನ್ನು ಆರಾಧಿಸುವ ಮತ್ತು ಸೇವಿಸುವ ಬಗ್ಗೆ ಚರ್ಚುಗಳು ಜನರನ್ನು ಗಲಿಬಿಲಿಗೊಳಿಸಿವೆ. ಆದರೂ, “ಕರ್ತನು ಒಬ್ಬನೇ, ಭರವಸವು ಒಂದೇ, ಸ್ನಾನದೀಕ್ಷೆ ಒಂದೇ; ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ” ಇರುವ ಒಂದೇ ಸತ್ಯ ಧರ್ಮವಿದೆಯೆಂದು ಬೈಬಲು ಹೇಳುತ್ತದೆ. ಯೇಸುವಂದದ್ದು: “ಸತ್ಯಭಾವದಿಂದ ದೇವಾರಾಧನೆ ಮಾಡುವವರು ಆತ್ಮದಿಂದ ಮತ್ತು ಸತ್ಯದಿಂದ ತಂದೆಯನ್ನು ಆರಾಧಿಸುತ್ತಾರೆ.” ಆದದರ್ದಿಂದ ಅವರಿಗೆ ಸೂಚಿಸಲ್ಪಟ್ಟದ್ದು: “ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; . . . ನಿಮ್ಮಲ್ಲಿ ಭೇದಗಳಿರಬಾರದು.”—ಎಫೆಸ 4:3-6; ಯೋಹಾನ 4:23; 1 ಕೊರಿಂಥ 1:10.
ಸತ್ಯ ಧರ್ಮ ಯಾವುದು ಎಂಬ ಗಲಿಬಿಲಿಯು ಏದೆನಿನಲ್ಲಿ ಆರಂಭಿಸಿದ್ದು, ಸೈತಾನನು ದೇವರ ಪರಮಾಧಿಕಾರದ ಹಕ್ಕು ಪಾತ್ರತೆಯನ್ನು, ದೇವರ ಆಡಳಿತಾ ವಿಧಾನದ ಯುಕ್ತತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಮೂಲಕ ಪಂಥಾಹ್ವಾನಕ್ಕೆ ಕರೆದಾಗಲೆ. (ಆದಿಕಾಂಡ 3:1-6, 13) ದೇವರಿಗೆ ಈ ವಿರೋಧವನ್ನು, “ನೀತಿಗೆ ಸೇವಕರಾಗಿ ಕಾಣಿಸುವದಕ್ಕೆ ವೇಷಹಾಕಿಕೊಳ್ಳುವ” ಧಾರ್ಮಿಕ ಸುವಾರ್ತಿಕರಿಂದ ಹರಡಿಸಲ್ಪಟ್ಟ ಸುಳ್ಳಿನಿಂದ ಸೈತಾನನು ಈಗಲೂ ಪೋಷಿಸುತ್ತಾನೆ. ಆದ್ದರಿಂದ ಬೈಬಲು ಹೇಳುವದು: “ಪ್ರಿಯರೇ, ಅನೇಕ ಮಂದಿ ಸುಳ್ಳು ಪ್ರವಾದಿಗಳು ಲೋಕದೊಳಗೆ ಬಂದಿರುವದರಿಂದ . . . ಎಲ್ಲಾ ಪ್ರೇರಿತ ನುಡಿಗಳನ್ನು ನಂಬಬೇಡಿರಿ.”—2 ಕೊರಿಂಥ 11:14, 15; 1 ಯೋಹಾನ 4:1.
ಸಂತೋಷಕರವಾಗಿಯೆ, ದೇವರು ಈ ಆಡಳಿತದ ಪ್ರಶ್ನೆಯನ್ನು ಇತ್ಯರ್ಥಗೊಳಿಸಲು ಹೆಜ್ಜೆಗಳನ್ನು ತಕ್ಕೊಂಡಿದ್ದಾನೆ. ಮಾನವ ಕುಲದ ವಿಮೋಚನೆಗೋಸ್ಕರ ತನ್ನ ಮಗನನ್ನು ಕಳುಹಿಸಿದ ಆತನು ಈಗ ಯೇಸುವನ್ನು ದೇವರ ಸ್ವರ್ಗೀಯ ರಾಜ್ಯದ ರಾಜನಾಗಿ ಮಾಡಿ, ಸೈತಾನನನ್ನು ಮತ್ತು ಅವನ ಪ್ರವಾದಿಗಳನ್ನು ಅಥವಾ ಶುಶ್ರೂಷಕರನ್ನು ನಾಶಗೊಳಿಸುವ ಅಧಿಕಾರವನ್ನು ಕೊಟ್ಟಿದ್ದಾನೆ. ಇದು ವಿಧೇಯ ಮಾನವರ ನಿತ್ಯ ಆಶೀರ್ವಾದಕ್ಕಾಗಿ ದೇವರ ಚಿತ್ತವು ಭೂಮಿಯಲ್ಲಿ ನೆರವೇರುವ ಖಾತ್ರಿಯನ್ನು ಕೊಡುತ್ತದೆ.—ದಾನಿಯೇಲ 7:13, 14; ಇಬ್ರಿಯ 2:9.
ಸೈತಾನನು ಈ ಸತ್ಯತೆಗಳನ್ನು ಅಡಗಿಸಿಟ್ಟಿದ್ದಾನೆ. (2 ಕೊರಿಂಥ 4:4) ಆದ್ದರಿಂದ ಸೈತಾನನ ಮಿಥ್ಯೆಗಳನ್ನು ಬಯಲುಪಡಿಸಿ ಸತ್ಯಕ್ಕಾಗಿ ಸಾಕ್ಷಿ ಕೊಡುವ ದೇವರ ಶುಶ್ರೂಷಕರಾಗಿ ಸೇವೆ ಮಾಡುವ ಅಗತ್ಯವು ನಮಗಿದೆ. ಈ ಸೇವೆಯನ್ನು ನಾವು ಮಾಡುವಂತೆ ಯೆಹೋವನು ಬಲಾತ್ಕರಿಸುವುದಿಲ್ಲ. ಯೇಸುವಿನಂತೆ, ನಾವು ದೇವರ ಕಡೆಗೆ ಮತ್ತು ಆತನು ನಮಗಾಗಿ ಮಾಡಿರುವ ವಿಷಯಗಳೆಡೆಗೆ ಗಣ್ಯತೆಯಿಂದ ನಮ್ಮನ್ನು ಮನಃಪೂರ್ವಕವಾಗಿ ನೀಡಿಕೊಳ್ಳುವಂತೆ ಆತನು ಬಯಸುತ್ತಾನೆ.—ಕೀರ್ತನೆ 110:3; ಇಬ್ರಿಯ 12:1-3.
ಕ್ರೈಸ್ತ ಶುಶ್ರೂಷೆ
ಯೇಸು “ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು.” (ಲೂಕ 8:1) ತನ್ನಂತೆ ಶುಶ್ರೂಷಕರಾಗಿರುವ ತರಬೇತನ್ನೂ ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಸಾರಲು ಕಳುಹಿಸಿಕೊಟ್ಟನು. (ಮತ್ತಾಯ 10:1-14, 27) ತದನಂತರ, ಭೂಮಿಯ ಕಟ್ಟಕಡೆಯ ತನಕ ಶುಶ್ರೂಷೆಯನ್ನು ಮುಂದುವರಿಸುವ ಆಜ್ಞೆಯನ್ನು ಅವರಿಗೆ ಕೊಟ್ಟನು.—ಮತ್ತಾಯ 28:19, 20; ಅಪೊಸ್ತಲರ ಕೃತ್ಯಗಳು 1:8.
ಈ ಆಜ್ಞೆಯು ಸತ್ಯ ಕ್ರೈಸ್ತರ ಮೇಲೆ ಅವಲಂಬಿಸಿಯದೆ ಮತ್ತು ದೇವರ ಆತ್ಮವು ಅವರನ್ನು ಸಾರುವಂತೆ ಪ್ರೇರೇಪಿಸುತ್ತದೆ. ಸಾ.ಶ. 33ರ ಪಂಚಾಶತ್ತಮದಲ್ಲಿ ಸಂಭವಿಸಿದ ಪ್ರಕಾರ, ಸುವಾರ್ತೆಯನ್ನು ಸ್ವೀಕರಿಸುವ ಎಲ್ಲರೂ ತಮ್ಮ ನಂಬಿಕೆಯ ಬಹಿರಂಗ ಘೋಷಣೆಯನ್ನು ಮಾಡುವ ಜವಾಬ್ದಾರಿಕೆಯನ್ನು ತಕ್ಕೊಳ್ಳುತ್ತಾರೆ.—ಅಪೊಸ್ತಲರ ಕೃತ್ಯಗಳು 2:1-4, 16-21; ರೋಮಾಪುರ 10:9, 13-15.
ಹೆಚ್ಚಿನ ಜನರಾದರೊ ತಮ್ಮನ್ನು ಶುಶ್ರೂಷಕರಾಗಿ ಪರಿಗಣಿಸುವುದಿಲ್ಲ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದ ಪೀಟರ್ ಹೇಳುವುದು: “ಧರ್ಮದ ಕುರಿತಾಗಿ ಮಾತನಾಡುವುದು ಹೆಚ್ಚಾಗಿ ತಮ್ಮ ಘನತೆಗೆ ಕುಂದೆಂದು ಜರ್ಮನಿಯಲ್ಲಿ ಜನರು ನೆನಸುತ್ತಾರೆ. ‘ಅದು ವೈದಿಕರ ಕೆಲಸ’ ಎಂದವರು ಹೇಳುತ್ತಾರೆ.” ದಶಮಾನಗಳಿಂದ ಮಿಶನೆರಿಯಾಗಿರುವ ಟೋನಿಗೆ, ಇಂಗ್ಲೆಂಡಿನ ಜನರು ಹೇಳಿದ್ದು: “ನೀವನ್ನುವುದು ಒಳ್ಳೆಯದು ಮತ್ತು ಯೆಹೋವನ ಸಾಕ್ಷಿಗಳು ಒಳ್ಳೆಯ ಜನರು. ಆದರೆ ಮನೆಯಿಂದ ಮನೆಗೆ ಸಾರಲು ಹೋಗುವುದು—ನನಗದನ್ನು ಮಾಡಲು ಸಾಧ್ಯವೆ ಇಲ್ಲ.” ಬೆನ್ ಎಂಬವನಿಗೆ ಅವನು ಸ್ವಲ್ಪ ಸಮಯ ಬೈಬಲಧ್ಯಯನ ನಡಿಸಿದ್ದ ಒಬ್ಬ ನೈಜೀರಿಯನ್ ಮನುಷ್ಯನು ಅಂದದ್ದು: “ಬಹಿರಂಗವಾಗಿ ಮನೆಯಿಂದ ಮನೆಗೆ ಸಾರುವುದು ನನಗಾಗದು, ಆದರೆ ಅದನ್ನು ಮಾಡಲು ಮನಸ್ಸುಳ್ಳವರು ಮಾಡುವಂತೆ ಸಹಾಯಕ್ಕಾಗಿ ನಿಮ್ಮ ಸಭೆಗೆ ನಾನು ಹಣಕೊಡಬಲ್ಲೆ.” ಹೌದು, ಕ್ರೈಸ್ತ ಶುಶ್ರೂಷೆಗೆ ಬೇಕಾದ ನಂಬಿಕೆ ಮತ್ತು ನಿಶಿತ್ಚಾಭಿಪ್ರಾಯದ ಕೊರತೆ ಹೆಚ್ಚಿನವರಲ್ಲಿದೆ.
ಅದರೂ, ಬಹಿರಂಗ ಸಾರುವಿಕೆಯು ಪ್ರಾಯ ಅಥವಾ ಲಿಂಗವೆನ್ನದೆ, ಕ್ರೈಸ್ತ ಸಭೆಯಲ್ಲಿ ಎಲ್ಲರ ಜವಾಬ್ದಾರಿಕೆಯಾಗಿದೆ. ಅದು ‘ನಾಯಕತ್ವ ವಹಿಸುವ’ ಹಿರಿಯರಿಗೆ ಮತ್ತು ಶುಶ್ರೂಷೆ ಸೇವಕರಿಗಾಗಿ ಮಾತ್ರವಲ್ಲ, ಸಾಮಾನ್ಯ ಕ್ರೈಸ್ತರಿಗೂ ಇರುವ ಸೇವೆಯಾಗಿದೆ. ಎಲ್ಲರಿಗೂ ಬೋಧಿಸಲ್ಪಟ್ಟದ್ದು: “ದೇವರ ನಾಮಕ್ಕೆ ಬಹಿರಂಗ ಘೋಷಣೆಯೆಂಬ ಸ್ತುತಿಯಜ್ಞವೆ ನಾವು ಅರ್ಪಿಸುವ ಯಜ್ಞವಾಗಿದೆ. . . . ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ.”—ಇಬ್ರಿಯ 13:15-17.
ತನ್ನ ಪರ್ವತ ಪ್ರಸಂಗದಲ್ಲಿ ಒಂದು ಮಿಶ್ರ ಜನಸಮೂಹಕ್ಕೆ ಉದ್ದೇಶಿಸುತ್ತಾ ಯೇಸು ಅಂದದ್ದು: “ನನ್ನನ್ನು ಸ್ವಾಮೀ, ಸ್ವಾಮೀ, ಎಂದು ಕರೆಯುವವರೆಲ್ಲರು ಪರಲೋಕ ರಾಜ್ಯವನ್ನು ಸೇರುವವರೆಂದು ನೆನಸಬೇಡಿರಿ. ಪರಲೋಕದಲ್ಲಿರುವ ನಮ್ಮ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕ ರಾಜ್ಯಕ್ಕೆ ಸೇರುವನು.” ಇನ್ನೊಂದು ಸಂದರ್ಭದಲ್ಲಿ, ಕೆಲವು ಸಮಾರ್ಯದವರಿಗೆ ಸಾರುವುದನ್ನು ನಿಲ್ಲಿಸಿ ಊಟಮಾಡುವುದಕ್ಕೆ ಶಿಷ್ಯರು ಅವನನ್ನು ಬೇಡಿಕೊಂಡರು. ಆದರೆ ಅವನು ಅವರಿಗಂದದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೆ ನನ್ನ ಆಹಾರವು.”—ಮತ್ತಾಯ 7:21; ಯೋಹಾನ 4:27-38.
ಅದು ನಿಮ್ಮ ಜೀವನೋದ್ಯೋಗವಾಗಿರಬೇಕೊ?
ಜನರು ಸಾಮಾನ್ಯವಾಗಿ ಐಹಿಕ ಆಹಾರವನ್ನು ಮತ್ತು ಐಶ್ವರ್ಯವನ್ನು ಬೆನ್ನಟಲ್ಟು ಇಷ್ಟಪಡುತ್ತಾರೆ. ಆದರೆ ಪರ್ವತ ಪ್ರಸಂಗದ ಆರಂಭದಲ್ಲಿ ಯೇಸು ತನ್ನನ್ನು ಆಲೈಸುವವರಿಗೆ, ಅಂಥ ವಿಷಯಗಳಿಗಾಗಿ ತವಕಪಟ್ಟು ಬೆನ್ನಟ್ಟುವ ವಿರುದ್ಧವಾಗಿ ಸಲಹೆಯಿತ್ತನು. “ಆದರೆ,” ಅವನಂದದ್ದು: “ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ . . . ಹೀಗಿರುವದರಿಂದ ನೀವು ಮೊದಲು ದೇವರ ರಾಜ್ಯಕ್ಕಾಗಿಯೂ [ದೇವರ] ನೀತಿಗಾಗಿಯೂ ತವಕಪಡಿರಿ.”—ಮತ್ತಾಯ 6:20, 33.
ದೇವರ ರಾಜ್ಯವನ್ನು ಪ್ರಥಮವಾಗಿ ಹುಡಕುವುದೆಂದರೆ ನಮ್ಮ ಶುಶ್ರೂಷೆಯನ್ನು ಬೇರೆ ಅಭಿರುಚಿಗಳು ಮರೆಮಾಡದಂತೆ ಬಿಡದಿರುವದೆ ಆಗಿದೆ. ಆದರೂ, ಬೇರೆ ಎಲ್ಲವುಗಳನ್ನು ಬಿಟ್ಟುಬಿಡಬೇಕೆಂದು ಇದರ ಅರ್ಥವಲ್ಲ. ಉದಾಹರಣೆಗೆ, ಸಹಜವಾದ ಕುಟುಂಬ ಹಂಗುಗಳನ್ನು ಅಸಡ್ಡೆ ಮಾಡದಂತೆ ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ. ಇಂಥ ಹಂಗುಗಳು ಸಹಜವಾಗಿ ಎಲ್ಲಾ ಮನುಷ್ಯರಿಗೂ ಇವೆ. ಅವನ್ನು ದುರ್ಲಕ್ಷಿಸುವದು ಕ್ರೈಸ್ತ ನಂಬಿಕೆಗೆ ವಿರುದ್ಧವಾದ ರೀತಿಯಲ್ಲಿ ಕ್ರಿಯೆಗೈಯುವುದಾಗಿದೆ. (1 ತಿಮೊಥಿ 5:8) ಆದಾಗ್ಯೂ, ಇತರ ಜವಾಬ್ದಾರಿಕೆಗಳನ್ನು ನಿರ್ವಹಿಸುವಲ್ಲಿ ಸಮತೆಯಲ್ಲಿದ್ದು, ಶುಶ್ರೂಷೆಯಲ್ಲಿ ನಾವು ನ್ಯಾಯೋಚಿತವಾಗಿ ನಮ್ಮಿಂದಾದ ಎಲ್ಲವನ್ನು ಮಾಡಬೇಕಾಗಿದೆ.
ಯೇಸುವಂದದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು . . . ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು. ಆಗ ಅಂತ್ಯವು ಬರುವುದು.” (ಮತ್ತಾಯ 24:14) ಈ ಪ್ರವಾದನೆಯ ಪೂರ್ವಾಪರ ಸಂದರ್ಭವು ಅದರ ನೆರವೇರಿಕೆಯನ್ನು ನಮ್ಮ ದಿನಗಳಿಗೆ ಹಾಕುತ್ತದೆ. 1914ರಿಂದ ಸುವಾರ್ತೆಯು ಏನಂದರೆ, ರಾಜ್ಯವು ಯೆಹೋವನ ಪರಮಾಧಿಕಾರದ ಪರವಾಗಿ ಮತ್ತು ಸೈತಾನನ ಮತ್ತು ಅವನ ಲೋಕದ ವಿರುದ್ಧವಾಗಿ ಕ್ರಿಯೆಗೈಯಲು ಅಧಿಕಾರ ಪಡೆದಿರುವುದೆ ಆಗಿದೆ. (ಪ್ರಕಟನೆ 11:15-18) ಇದರ ಅನ್ವಯದ ಕುರಿತು ನಾವು ಗಂಭೀರವಾಗಿ ಯೋಚಿಸತಕ್ಕದ್ದು. ಅಂತ್ಯವು ಬರಲಿದೆ ಮತ್ತು ಅದಕ್ಕೆ ಮುಂಚೆ ನಾವು ಸಾರುವ ಕೆಲಸವನ್ನು ಮಾಡಿ ಮುಗಿಸಬೇಕು. ಜೀವಗಳು ಗಂಡಾಂತರದಲ್ಲಿವೆ; ಅವುಗಳಲ್ಲಿ ಹೆಚ್ಚಿನವುಗಳನ್ನು ರಕ್ಷಿಸಲು ನಾವು ನೆರವಾಗಬಲ್ಲೆವು.
ಪೂರ್ಣತರದ ಸೇವೆಗಾಗಿ ಎಟಕಿಸಿಕೊಳ್ಳಿರಿ
ಇತರ ಜನರಿಗೆ ಸುವಾರ್ತೆಯನ್ನು ಹಂಚುವುದಕ್ಕಾಗಿ ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಪ್ರತಿ ತಿಂಗಳಿಗೆ ಹತ್ತು ಅಥವಾ ಹೆಚ್ಚು ತಾಸುಗಳನ್ನು ಮೀಸಲಾಗಿಡುತ್ತಾರೆ. ಸಾವಿರಾರು ಜನರು ದಿನಕ್ಕೆ ಎರಡು ಅಥವಾ ಹೆಚ್ಚು ತಾಸುಗಳನ್ನು ಸಹಾಯಕ [ಆಕ್ಸಿಲಿಯರಿ] ಪಯನೀಯರರಾಗಿ ಸಾರುವುದರಲ್ಲಿ ಕಳೆಯುತ್ತಾರೆ ಮತ್ತು ಇತರರು ಕ್ರಮದ ಮತ್ತು ವಿಶೇಷ ಪಯನೀಯರರಾಗಿ ಸದಾ ಸೇವೆ ಮಾಡುತ್ತಿರುತ್ತಾರೆ. ಈ ಕಾರ್ಯದ ಜರೂರಿಯನ್ನು ಅವರ ಗಣ್ಯಮಾಡುತ್ತಾರೆ ಮತ್ತು ಈ ಅಸಂತೋಷಿತ ಲೋಕದ ಅಂತ್ಯವು ಬರುವ ಮುಂಚೆ ಅದನ್ನು ಸಾಧ್ಯವಾದಷ್ಟು ಪೂರ್ಣ ರೀತಿಯಲ್ಲಿ ಮಾಡಿ ಮುಗಿಸಲು ಬಯಸುತ್ತಾರೆ.
ನೀವು ಈವಾಗಲೆ ಯೆಹೋವನ ಕ್ರಿಯಾಶೀಲ ಸಾಕ್ಷಿಗಳಾಗಿರುವಿರೊ? ಹಾಗಿದ್ದರೆ, ಸೇವೆಯಲ್ಲಿ ಪೂರ್ಣವಾಗಿ ಭಾಗವಹಿಸಲು ಎಟಕಿಸಿಕೊಳ್ಳಿರಿ. ಶುಶ್ರೂಷೆಯಲ್ಲಿ ಹೆಚ್ಚನ್ನು ಪೂರೈಸಲು ಪ್ರಯತ್ನಿಸುತ್ತಾ, ಸಾರುವ ಮತ್ತು ಕಲಿಸುವ ನಿಮ್ಮ ಪ್ರವೀಣತೆಯಲ್ಲಿ ಪ್ರಗತಿಮಾಡಿರಿ. ನೀವೊಬ್ಬ ಪಯನೀಯರರಾಗುವ ಸ್ಥಾನದಲ್ಲಿರುವುದಾದರೆ, ಹಾಗೆ ಮಾಡಿರಿ. ನಿಮ್ಮ ಪರಿಸ್ಥಿತಿಗಳು ಯಥಾರ್ಥವಾಗಿ ಅನುಮತಿಸದೆ ಇರುವುದಾದರೆ, ಈ ಸೇವೆಗೆ ತಲುಪಲು ಸಾಧ್ಯವಿರುವವರಿಗೆ ಪ್ರೋತ್ಸಾಹಿಸಿರಿ.
ನೀವು ಒಂದು ವೇಳೆ ಯೆಹೋವನ ಒಬ್ಬ ಸಮರ್ಪಿತ ಸಾಕ್ಷಿಯಾಗಿರದೆ ಇರುವುದಾದರೆ, ಶುಶ್ರೂಷೆಯು ನಿಮಗಾಗಿ ಅಲ್ಲವೆಂದು ಹೇಳಬೇಡಿರಿ. ಮೆಕ್ಯಾನಿಕಲ್ ಇಂಜಿನಿಯರನಾದ ಪೀಟರ್ ಎಂಬ ಇನ್ನೊಬ್ಬನು, ತನ್ನ ಪತ್ನಿ ಇತರರಿಗೆ ಸುವಾರ್ತೆ ಸಾರುವುದನ್ನು ಬಲವಾಗಿ ಆಕ್ಷೇಪಿಸಿದನು. “ನನ್ನ ಪತ್ನಿ ಮನೆಯಿಂದ ಮನೆಗೆ ಹೋಗಿ ಸಾರುವಂತೆ ನಾನು ಬಿಡುವುದು ಹೇಗೆ?” ಎನ್ನುತ್ತಿದ್ದನವನು. ದೇವರ ವಾಕ್ಯದ ಸತ್ಯದ ಕಡೆಗೆ ಆಕೆಯ ದೃಢ ವಿಶ್ವಾಸವನ್ನು ವರ್ಷಗಳ ತನಕ ಅವಲೋಕಿಸಿದ ಬಳಿಕ, ಅವನೂ ಬೈಬಲಭ್ಯಾಸ ಮಾಡಲು ನಿರ್ಣಯಿಸಿದನು. ಈಗ ಅವನು ತನ್ನ ಪತ್ನಿಯಂತೆ ಒಬ್ಬ ಸಮರ್ಪಿತ, ಸ್ನಾನಿತನಾದ ಸುವಾರ್ತಾ ಶುಶ್ರೂಷಕನಾಗಿದ್ದಾನೆ.
ಆದುದರಿಂದ ಯೆಹೋವನನ್ನು ಸೇವಿಸುವ ನಿಮ್ಮ ಸುಯೋಗದಿಂದ ನಿಮ್ಮನ್ನು ಅಡತ್ಡಡೆಯಬೇಡಿರಿ. ಬೈಬಲನ್ನು ಅಭ್ಯಾಸಿಸುವಂತೆ ಮತ್ತು ನಿಜ ಕ್ರೈಸ್ತರೊಂದಿಗೆ ಅವರ ಕೂಟಗಳಲ್ಲಿ ಕೂಡಿಬರುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಇದು ನಿಮ್ಮನ್ನು ದೇವರ ನೀತಿಯೊಂದಿಗೆ ನಿಮ್ಮ ಜೀವಿತವನ್ನು ರೂಪಿಸುವಂತೆ ಮತ್ತು ಆತನ ಉದ್ದೇಶಗಳಲ್ಲಿ ದೃಢನಂಬಿಕೆಯನ್ನು ಕಟ್ಟುವಂತೆ ಸಹಾಯ ಮಾಡುವುದು. ಇದರಲ್ಲಿ ನೀವು ಪ್ರಗತಿ ಮಾಡಿದರೆ, ನೀವು ಸಹಾ ದೇವರ ಒಬ್ಬ ಶುಶ್ರೂಷಕರಾಗುವ ಯೋಗ್ಯತೆ ಪಡೆಯುವಿರಿ. ಆಗ ನೀವು ಯೇಸುವಿನ ಈ ಆಜ್ಞೆಯನ್ನು ನಿರ್ವಹಿಸುವುದರಲ್ಲಿ ಪಾಲಿಗರಾಗುವ ಸುಯೋಗವನ್ನು ಪಡೆದವರಾಗುವಿರಿ: “ಆದ್ದರಿಂದ ನೀವು ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ. ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”—ಮತ್ತಾಯ 28:19, 20.
ಹೌದು, ನೀವು ಪಾಲಿಗರಾಗಬಹುದಾದ ಒಂದು ಶುಶ್ರೂಷೆಯು ಅಲ್ಲಿದೆ ಮತ್ತು ನೀವದನ್ನು ಮಾಡುವುದು ಎಂದಿಗಿಂತಲೂ ಹೆಚ್ಚು ಜರೂರಿಯದ್ದಾಗಿದೆ. (w91 12/15)
[ಪುಟ 27 ರಲ್ಲಿರುವ ಚೌಕ]
ಒಂದು ಕುಟುಂಬವನ್ನು ಪರಾಮರಿಕೆ ಮಾಡಲಿರುವ ಒಬ್ಬ ದಾದಿ ಅನ್ನುವುದು: ಪ್ರತಿದಿನ ನಾನು ಕೆಲಸ ಮಾಡುವ ಆಸ್ಪತ್ರೆಗೆ ಹೋಗಲು ನನಗೆ ಒಂದು ತಾಸು ಹಿಡಿಯುತ್ತದೆ, ಆದ್ದರಿಂದ ಸಹಾಯಕ (ಆಕ್ಸಿಲಿಯರಿ) ಪಯನೀಯರ ಸೇವೆ ನನಗಾಗದು ಎಂದು ನೆನಸಿದ್ದೆ. ಆದರೆ, ಕ್ಷೇತ್ರ ಸೇವೆಯಲ್ಲಿ ಪಾಲಿಗಳಾಗುವಂತೆ ನನ್ನ ಚಟುವಟಿಕೆಗಳನ್ನು ಜಾಗರೂಕತೆಯಿಂದ ಪರೀಕ್ಷಿಸಿ, ಕೆಲಸಕ್ಕೆ ಮುಂಚೆ ಬೆಳಿಗ್ಗೆ ಬೇಗ, ಕೆಲಸದ ನಡುವೆ ಇರುವ ಬಿಡುವಿನಲ್ಲಿ ಮತ್ತು ರಜಾದಿನಗಳಲ್ಲಿ ಕ್ಷೇತ್ರ ಸೇವೆಮಾಡುವಂತೆ ಏರ್ಪಡಿಸಿದೆ. ಹೀಗೆ ಒಂದು ತಿಂಗಳಂತ್ಯದಲ್ಲಿ ನಾನು 117 ತಾಸುಗಳನ್ನು ಸಾರುವಿಕೆಯಲ್ಲಿ ಕಳೆದದ್ದನ್ನು ಕಂಡಾಗ ನನಗಾದ ಸಂತಸವನ್ನು ನೀವು ಊಹಿಸಬಲ್ಲಿರಿ! 263 ಪತ್ರಿಕೆಗಳನ್ನು ಮತ್ತು 22 ಪತ್ರಿಕಾ ಚಂದಾಗಳನ್ನು ನಾನು ನೀಡಿದೆ ಮತ್ತು 3 ಬೈಬಲಧ್ಯಯನಗಳನ್ನು ಪ್ರಾರಂಭಿಸ ಶಕ್ತಳಾದೆನು.”
[ಪುಟ 29 ರಲ್ಲಿರುವ ಚೌಕ]
ಮೈಕಲ್‌ಗೆ ಏಳು ಎಳೆಯ ಮಕ್ಕಳಿವೆ ಮತ್ತು ನೈಜೀರಿಯದ ಕಾಲೇಜಲ್ಲಿ ಒಂದು ಹೊಣೆಗಾರಿಕೆಯ ಕೆಲಸವಿದೆ. ಕ್ರೈಸ್ತ ಸಭೆಯಲ್ಲಿ ಅವನು ಒಬ್ಬ ಹಿರಿಯನೂ ಆಗಿದ್ದಾನೆ. ಸಾವಿರಾರು ಸಾಕ್ಷಿಗಳ ನೋಟದಲ್ಲಿ ಅವನು ಪಾಲಿಗನು:
“ನಾನು ನನ್ನ ಶುಶ್ರೂಷೆಯನ್ನು ನನ್ನ ಜೀವಿತದ ಕಾರ್ಯವಾಗಿ ನೋಡುತ್ತೇನೆ. ‘ನಾನು ನೆಟ್ಟೆನು, ಅಪೊಲ್ಲೋಸನು ನೀರು ಹೊಯ್ದನು ಮತ್ತು ಬೆಳೆಸುತ್ತಾ ಬಂದವನು ದೇವರು,’ ಎಂದು ಪೌಲನಂದದ್ದನ್ನು ನಾನು ಯಾವಾಗಲೂ ನೆನಪಿಗೆ ತರುತ್ತೇನೆ. ನನ್ನ ಪತ್ನಿ ಮತ್ತು ನಾನು, ಮನೆ ಮನೆಯ ಸುವಾರ್ತಾ ಸೇವೆಯ ಸಂಕ್ಷಿಪ್ತ ಚರ್ಚೆಗಳ ಸಮಯದಲ್ಲಿ ‘ನೆಡು’ತ್ತೇವೆ, ಮತ್ತು ಯೇಸು ನಮಗೆ ಮಾಡುವಂತೆ ಹೇಳಿರುವ ಪ್ರಕಾರ, ಆಸಕ್ತ ಜನರಿಗೆ ಬೈಬಲ್‌ನಿಂದ ಕಲಿಸಲು ಹಿಂದಿರುಗುವ ಮೂಲಕ ‘ನೀರು’ ಹೊಯ್ಯುತ್ತೇವೆ. ವಾರದ ಮನೆ ಬೈಬಲಭ್ಯಾಸಗಳು ಹೀಗೆ ತುಂಬಾ ಜನರಿಗೆ—ಕೆಲವು ಸಂದರ್ಭಗಳಲ್ಲಿ ಇಡೀ ಕುಟುಂಬಗಳಿಗೆ—ಸತ್ಯದ ಜ್ಞಾನಕ್ಕೆ ಬರುವಂತೆ—ಸಹಾಯ ಮಾಡಿವೆ.”