ವಾಗ್ದಾನ್ ದೇಶದಿಂದ ದೃಶ್ಯಗಳು
ಗೇನೆಜರೇತ್ ‘ಆಶ್ಚರ್ಯಕರ ಮತ್ತು ಮನೋಹರ’
“ಗೇನೆಜರೇತ್ ಕೆರೆಯ ಅಂಚಿನಲ್ಲಿ ಉದ್ದಕ್ಕೂ, ಅದರ ಗುಣಮಟ್ಟಗಳಲ್ಲಿ ಮತ್ತು ಸೌಂದರ್ಯದಲ್ಲಿ ಆಶ್ಚರ್ಯಕರವಾದ ಅದೇ ಹೆಸರಿನ ಒಂದು ಊರು ಚಾಚಿಕೊಂಡಿದೆ. ಫಲವತ್ತಾದ ಮಣ್ಣಿನ ಸೌಜನ್ಯದಿಂದಾಗಿ ಸಮೃದ್ಧಿಯಾಗಿ ಬೆಳೆಯದೆ ಇರುವ ಯಾವ ಸಸ್ಯವೂ ಇಲ್ಲ, ಮತ್ತು ಅದರ ನಿವಾಸಿಗಳು ಎಲ್ಲವನ್ನೂ ಅಲ್ಲಿ ಬೆಳಸುತ್ತಾರೆ; ವಾಯುವು ಎಷ್ಟು ಸಮಶೀತೋಷ್ಣವಾಗಿದೆಯೆಂದರೆ ಅತ್ಯಂತ ಭಿನ್ನ ಜಾತಿಯವುಗಳಿಗೂ ಅದು ಹಿತಕರವು. . . . ಅತ್ಯಂತ ಆಶ್ಚರ್ಯಕರವಾದ ವೈವಿಧ್ಯತೆಯ ಹಣ್ಣುಹಂಪಲುಗಳನ್ನು ಅದು ಉತ್ಪಾದಿಸುತ್ತದೆ ಮಾತ್ರವಲ್ಲ; ಅದರ ಸಂಗ್ರಹವು ಯಾವಾಗಲೂ ಉಪಲಬವ್ದಿದೆ. . . . ಬಹು ಫಲಫಲಿಸುವ ಶಕ್ತಿಯುಳ್ಳ ಒಂದು ಒರತೆಯಿಂದ ಅದಕ್ಕೆ ನೀರಿನ ಸರಬರಾಯಿ ದೊರೆಯುತ್ತದೆ.”
ಸರ್ವ ಸಾಮಾನ್ಯವಾಗಿ ಯಾವುದನ್ನು ಗಲಿಲಾಯ ಸಮುದ್ರವೆಂದು ಕರೆಯಲಾಗುತ್ತದೋ ಅದರ ವಾಯುವ್ಯ ಕಿನಾರೆಯ ತ್ರಿಕೋನಾಕಾರದ ಆ ಪ್ರದೇಶವನ್ನು ಹೀಗೆಂದು ಇತಿಹಾಸಕಾರ ಜೊಸೀಫಸನು ವರ್ಣಿಸಿದ್ದಾನೆ. ಆ ಪ್ರದೇಶವು ಎಷ್ಟು ಫಲವತ್ತಾಗಿತ್ತೆಂಬ ವಿಚಾರವನ್ನು ಮೇಲಿನ ಚಿತ್ರವು ನಿಮಗೆ ಸೂಚಿಸಬಲ್ಲದು, ಅದು ಗಲಿಲಾಯದಲ್ಲಿ ಅತ್ಯಂತ ಫಲಭರಿತ ಪ್ರದೇಶವು.a ಪುರಾತನ ಕಾಲದಲ್ಲಿ ಅದೆಷ್ಟು ಗಮನಾರ್ಹವಾಗಿತ್ತೆಂದರೆ ಸುವಾರ್ತೆಯ ಲೇಖಕ ಲೂಕನು ಪಕ್ಕದ ಸಿಹಿನೀರಿನ ಸಮುದ್ರವನ್ನು “ಗೇನೆಜರೇತ್ ಕೆರೆ” ಎಂಬದಾಗಿ ಕರೆದಿರುವನು.—ಲೂಕ 5:1.
ಅವನು ಈ ಹೇಳಿಕೆಯನ್ನು ಉಪಯೋಗಿಸಿದ್ದು ಯೇಸು ಈ ಕ್ಷೇತ್ರಕ್ಕೆ ಬಂದಾಗ ಮತ್ತು ಅನಂತರ ಅಪೊಸ್ತಲರಾದ ನಾಲ್ಕು ಮಂದಿಯನ್ನು ಆತನು ಕಂಡುಕೊಂಡ ಸಂದರ್ಭದಲ್ಲಿ. ಆ ಫಲವತ್ತಾದ ಮಣ್ಣಿನಲ್ಲಿ ದ್ರಾಕ್ಷೆ, ಅಕ್ರೋಡು, ಆಲಿವ್ ಅಥವಾ ಅಂಜೂರವೇ ಮುಂತಾದ ಹಣ್ಣುಹಂಪಲುಗಳನ್ನು ಬೆಳೆಸಿ ಅವರು ತಮ್ಮ ಜೀವನೋಪಾಯ ನಡಿಸುವ ರೈತರಾಗಿದ್ದರೋ? ಇಲ್ಲ. ಅಂಥ ಬೆಳೆಗಳು ಗೇನೆಜರೇತ್ ಬಯಲು ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಿದ್ದವು, ಆದರೆ ಈ ಪುರುಷರು ಬೆಸ್ತರಾಗಿದ್ದರು ಮತ್ತು ಅವರು ಹಾಗಿದ್ದದ್ದು ಏಕೆಂಬದನ್ನು ಗ್ರಹಿಸುವುದು ಸುಲಭ.
ಬಯಲು ಪ್ರದೇಶದಲ್ಲಿದ್ದ ತೊರೆಗಳು ಮೀನುಗಳಿಗೆ ಉತ್ತಮ ಭೋಜನವಾಗಬಲ್ಲ ಸಸ್ಯಾದಿಗಳನ್ನು ಸಮುದ್ರಕ್ಕೆ ಒಯ್ಯುವ ಸಂದರ್ಭಗಳು ಅಲ್ಲಿದ್ದಿರಬೇಕು. ಹೀಗೆ ನೀರಿನಲ್ಲಿ ಹಲವಾರು ತರದ ಮೀನುಗಳು ತುಂಬಿದವ್ದಾದ್ದರಿಂದ ಸಾಧಾರಣ ಮಟ್ಟಿನ ಮತ್ಸ್ಯ ಉದ್ಯಮವು ಅಲ್ಲಿದ್ದಿರಬೇಕು. ಪೇತ್ರ ಮತ್ತು ಅಂದ್ರೆಯರು, ಬೆಸ್ತನಾದ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರಂತೆ, ಅಲ್ಲಿ ಬೆಸ್ತರ ಕಸುಬನ್ನು ಮಾಡುತ್ತಲಿದ್ದರು.—ಮತ್ತಾಯ 4:18-22; ಲೂಕ 5:2-11.
ಒಂದು ದೋಣಿಯಿಂದ ಬಲೆಗಳನ್ನೆಸೆದು ಹಾಕುವ ಮೂಲಕ ಅಲ್ಲಿ ಮೀನುಗಾರಿಕೆಯನ್ನು ನಡಿಸಲಾಗುತ್ತಿತ್ತು. ಯೇಸು ಗೋಚರಿಸಿದಾಗ ಪೇತ್ರ ಮತ್ತು ಅಂದ್ರೆಯರು ಅದನ್ನೇ ನಡಿಸುತ್ತಿದ್ದರು. ಒಂದು ಉದ್ದವಾದ ಸೇನ್-ಬಲೆಯನ್ನು ಅಥವಾ ಮೀನು ಸೆಳೆ-ಬಲೆಯನ್ನು ಅರ್ಧವೃತ್ತಾಕಾರದಲ್ಲಿ ಹರಡಲಾಗುತ್ತಿತ್ತು. ತೇಲು ಬೆಂಡುಗಳು ಮೇಲ್ಗಡೆ ಅಂಚನ್ನು ಎತ್ತಿಹಿಡಿಯುವಾಗ ಕೆಳಗಡೆ ಅಂಚಿನಲ್ಲಿರುವ ಭಾರಗಳು ಬಲೆಯನ್ನು ಸಮುದ್ರ ತಳದ ಕಡೆಗೆ ಸೆಳೆದು ಹಿಡಿಯುತ್ತಿದ್ದವು. ಇಂಥ ಒಂದು ಬಲೆಯಲ್ಲಿ ತುಂಬಾ ಮೀನುಗಳನ್ನು ಹಿಡಿಯ ಸಾಧ್ಯವಿತ್ತು. ಅನಂತರ ಅದನ್ನು ದೋಣಿಯೊಳಗೆ ಎಳೆಯಲಾಗುತ್ತಿತ್ತು ಅಥವಾ ಆಳವಿಲ್ಲದ ಜಲಪ್ರದೇಶಕ್ಕೆ ಸೆಳೆದು ದಡದ ಮೇಲೆ ಬರಿದು ಮಾಡಲಾಗುತ್ತಿತ್ತು. ಭಕ್ಷಯೋಗ್ಯ ಮೀನುಗಳನ್ನು ಅಯೋಗ್ಯ ಮೀನುಗಳಿಂದ ಪ್ರತ್ಯೇಕಿಲಾಗುತ್ತಿತ್ತು. ಆ ವಿವರಣೆಯ ನಿಷ್ಕೃಷ್ಟತೆಯನ್ನು ಲೂಕ 5:4-7 ರಲ್ಲಿ ಮತ್ತು ಯೋಹಾನ 21:6-11 ರಲ್ಲಿ ಗಮನಿಸಿರಿ. ಸೆಳೆ-ಬಲೆಯ ತನ್ನ ಸಾಮ್ಯದಲ್ಲಿ ಯೇಸು ಈ ರೀತಿಯ ಮೀನುಗಾರಿಕೆಯ ವಿಧಾನವನ್ನು ತಿಳಿಸಿದ್ದನ್ನು ನೀವು ನೆನಪಿಸಬಲ್ಲಿರೋ? (ಮತ್ತಾಯ 13:47, 48) ಅದಲ್ಲದೆ, ಬಂಡೆಗಳಿಗೆ ಸಿಕ್ಕಿ ಅಥವಾ ಮೀನುಗಳಿಂದ ಹರಿಯಲ್ಪಟ್ಟ ಬಲೆಗಳನ್ನು ಹೊಲಿಯುವುದರಲ್ಲಿ ಬೆಸ್ತರು ಆಗಾಗ್ಯೆ ಸಮಯವನ್ನು ಕಳೆಯುತ್ತಿದ್ದ ವಿಷಯವನ್ನು ಮತ್ತಾಯ 4:21 ಎತ್ತಿಹೇಳುತ್ತದೆ.
ಈ ಗೆನೇಜರೇತ್ ತೀರವನ್ನು ನೀವು ಸಂಚರಿಸಿದ್ದಲ್ಲಿ, ಯೇಸುವಿನ ಶುಶ್ರೂಷೆಯಲ್ಲಿ ಘಟನಾವಳಿಗಳು ನಡೆದಿದ್ದ ಜಾಗಗಳು ಎಂದು ಹೇಳಲ್ಪಡುವ ಹಲವು ಸ್ಥಳಗಳನ್ನು ಪ್ರಾಯಶಃ ನೀವು ಕಾಣಬಹುದು. ಒಂದು ಹಸುರು ಗುಡ್ಡವು, ಸಂಪ್ರದಾಯಕ್ಕನುಸಾರ, ಯೇಸು ತನ್ನ ಪರ್ವತ ಪ್ರಸಂಗವನ್ನು ಕೊಟ್ಟ ಸ್ಥಳವಾಗಿದೆ. ಈ ಸ್ಥಳವು ಸುವಾರ್ತೆಯ ವೃತ್ತಾಂತಕ್ಕೆ ಪ್ರತಿವಿರುದ್ಧವಾಗಿರುವುದಿಲ್ಲ ಯಾಕಂದರೆ ಯೇಸು ಆ ಪ್ರಸಂಗವನ್ನು ಕೊಡುತ್ತಿದ್ದಾಗ ಗೇನೆಜರೇತ್ ಬಯಲಿನ ಸಮೀಪದಲ್ಲೇ ಇದ್ದನು.—ಮತ್ತಾಯ 5:1–7:29; ಲೂಕ 6:17–7:1.
ಸಾಚಾವೆಂದು ವಾದಿಸಲ್ಪಡುವ ಇನ್ನೊಂದು ಸ್ಥಳವಾದರೋ ಬೈಬಲ್ ಸತ್ಯತೆಗಳಿಗೆ ಹೊಂದಿಕೆಯಾಗಿ ತೋರುವುದಿಲ್ಲ. ಯೇಸು ಏಳು ರೊಟ್ಟಿ ಮತ್ತು ಕೆಲವೇ ಮೀನುಗಳಿಂದ 4,000 ಜನರಿಗೆ ಉಣಿಸಿದನ್ದೆಂದು ಹೇಳಲಾಗುವ ಈ ಸ್ಥಳದಲ್ಲಿ ಒಂದು ಚರ್ಚು ಕಟ್ಟಲ್ಪಟ್ಟಿರುವುದನ್ನು ನೀವು ಕಾಣುವಿರಿ. (ಮತ್ತಾಯ 15:32-38; ಮಾರ್ಕ 8:1-9) ಗೇನೆಜರೇತ್ ಬಯಲಿನಲ್ಲಿ ಇದನ್ನು ಹಾಕುವ ಬದಲಿಗೆ, ಮಾರ್ಕನ ದಾಖಲೆಯು ಅದನ್ನು “ದೆಕಪೊಲಿಯ ಪ್ರಾಂತ್ಯ”ವೆಂದು ಕರೆಯುತ್ತದೆ, ಇದು ಸಮುದ್ರದಾಚೆ ಹನ್ನೊಂದು ಕಿಲೊ ಮೀಟರುಗಳ ಅಂತರದಲ್ಲಿದ್ದ ಸ್ಥಳವಾಗಿತ್ತು.—ಮಾರ್ಕ 7:31.
ಈ ಅದ್ಭುತವನ್ನು ನಡಿಸಿದ ಅನಂತರ ಯೇಸು ದೋಣಿ ಹಿಡಿದು ಮಗದಾ ಅಥವಾ ದಲ್ಮನೂತ ಸೀಮೆಗೆ ಪ್ರಯಾಣ ಮಾಡುತ್ತಾನೆ ಎಂದು ಮತ್ತಾಯ ಮತ್ತು ಮಾರ್ಕರು ಹೇಳುತ್ತಾರೆ. (ಮತ್ತಾಯ 15:39; ಮಾರ್ಕ 8:10) ಪಂಡಿತರು ಈ ಪ್ರದೇಶವನ್ನು ತೈಬೀರಿಯದಾಚೆ, ಗೆನೇಜರೇತ್ ಬಯಲಿನ ತುಸು ದಕ್ಷಿಣದೆಡೆಗಿರುವ ಮಗಲ್ದ (ಮಿಗ್ದಾಲ್) ಗೆ ಜೋಡಿಸುತ್ತಾರೆ. ಮೆಕ್ಮಿಲನ್ ಬೈಬಲ್ ಎಟ್ಲಾಸ್ಗೆ ಅನುಸಾರವಾಗಿ, ಮಗಲ್ದ, “ಮೀನು ಸಂಸ್ಕರಿಸುವ ಉದ್ಯಮಕ್ಕೆ ಹೆಸರುವಾಸಿಯಾಗಿತ್ತು.” ಕೆರೆಯ ಈ ಭಾಗದಲ್ಲಿ ನಡಿಸಲ್ಪಡುವ ವಿಫುಲವಾದ ಮೀನುಗಾರಿಕೆಯು ಅಂಥ ಒಂದು ಉದ್ಯಮವನ್ನು ವ್ಯಾವಹಾರ್ಯವೂ ಲಾಭದಾಯಕವೂ ಆಗಿ ಮಾಡಸಾಧ್ಯವಿತ್ತು.
ರಸಕರವಾಗಿ, 1985⁄86ರಲ್ಲಿ ಸಂಭವಿಸಿದ ಒಂದು ಅನಾವೃಷ್ಟಿಯು ಗಲಿಲಾಯ ಸಮುದ್ರದ ನೀರಿನ ಮಟ್ಟವನ್ನು ತಗ್ಗಿಸಿದ್ದರಿಂದ ಕೆರೆತಳದ ಚಾಚುಗಳನ್ನು ಹೊರಗೆಡವಿದವು. ಗೇನೆಜರೇತ್ ಬಯಲ ಸಮೀಪದಲ್ಲಿ ಇಬ್ಬರು ಪುರುಷರು ಒಂದು ಪುರಾತನ ದೋಣಿಯ ಅವಶೇಷವನ್ನು ಕಂಡುಕೊಂಡರು. ಯೇಸು ಗೇನೆಜರೇತ್ ಕೆರೆ ಮತ್ತು ಬಯಲನ್ನು ಸಂದರ್ಶಿಸಿದ ಸಮಯದ ಸುಮಾರಿನ ತಾರೀಕನ್ನು ಸೂಚಿಸುವ ಈ ಮೀನು ಹಿಡಿಯುವ ಮರದ ದೋಣಿಯನ್ನು ಅಗೆತ ಶಾಸ್ತ್ರಜ್ಞರು ಮರಳಿಪಡೆಯಲು ಶಕ್ತರಾದರು. (w92 1/1)
[ಅಧ್ಯಯನ ಪ್ರಶ್ನೆಗಳು]
a 1992 ಕ್ಯಾಲೆಂಡರ್ ಆಫ್ ಜೆಹೋವಸ್ ವಿಟ್ನೆಸಸ್ನಲ್ಲಿ ಇದರ ದೊಡ್ಡ ವರ್ಣರಂಜಿತ ಚಿತ್ರವನ್ನು ನೋಡಿರಿ.
[ಪುಟ 24 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 24 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 25 ರಲ್ಲಿರುವ ಚಿತ್ರ ಕೃಪೆ]
Garo Nalbandian
[ಪುಟ 25 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.