ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 5/15 ಪು. 29
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ಯೋಹಾನನಲ್ಲಿ ನಂಬಿಕೆಯ ಕೊರತೆಯಿತ್ತೇ?
    ಅತ್ಯಂತ ಮಹಾನ್‌ ಪುರುಷ
  • ಅವನು ಮೆಸ್ಸೀಯನ ಮುನ್‌ಸೂಚಕನಾಗಿದ್ದನು
    ಕಾವಲಿನಬುರುಜು—1995
  • ಯೇಸು ಕ್ರಿಸ್ತ ಯಾರು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಯೇಸು ಮೆಸ್ಸೀಯನಾದನು
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ಕಾವಲಿನಬುರುಜು—1992
w92 5/15 ಪು. 29

ವಾಚಕರಿಂದ ಪ್ರಶ್ನೆಗಳು

ಸ್ನಾನಿಕನಾದ ಯೋಹಾನನು ಯೇಸುವಿಗಿಂತ ಮುಂಚೆ ಸಾಯುವನೆಂದು ಯೇಸುವಿಗೆ ಮುಂಚಿತವಾಗಿಯೇ ತಿಳಿದಿತ್ತೆಂದು ಮತ್ತಾಯ 11:11ರಿಂದ ನಾವು ತೀರ್ಮಾನಿಸಬೇಕೋ?

ಹೌದು, ಒಬ್ಬ ಅಭಿಷಿಕ್ತ ಕ್ರೈಸ್ತನಾಗಿ ಪರಿಣಮಿಸುವ ತನಕ ಯೋಹಾನನು ಬದುಕಿ ಉಳಿಯಲಾರನೆಂದು ಯೇಸುವಿಗೆ ಪ್ರತ್ಯಕ್ಷವಾಗಿ ತಿಳಿದಿತ್ತೆಂದು ತೋರುತ್ತದೆ, ಯಾಕಂದರೆ ಯೇಸು ಹೇಳಿದ್ದು: “ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಸ್ನಾನಿಕನಾದ ಯೋಹಾನನಿಗಿಂತ ದೊಡ್ಡವನು ಎದ್ದಿಲ್ಲ. ಆದರೂ ಪರಲೋಕ ರಾಜ್ಯದಲ್ಲಿರುವ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”—ಮತ್ತಾಯ 11:11.

ಗಾಬ್ರಿಯೇಲ್‌ ದೂತನು ಯೋಹಾನನ ಜನನದ ಕುರಿತು ಪ್ರಕಟಿಸಿದಾಗ, ಯೋಹಾನನು “ಎಲೀಯನ ಆತ್ಮ ಮತ್ತು ಶಕಿಯ್ತಿಂದ ಕೂಡಿದವನಾಗಿ . . . ಸಿದ್ಧವಾದ ಜನವನ್ನು ಯೆಹೋವನಿಗೆ ಒದಗಿಸುವನು,” ಎಂದು ಮುಂತಿಳಿಸಿದ್ದನು. ಯೋಹಾನನು ಒಬ್ಬ ಮುಂದೂತನಾಗಿರಲಿದ್ದನು, ಯೆಹೋವನ ಮೆಸ್ಸೀಯನಿಗಾಗಿ ಜನರನ್ನು ಸಿದ್ಧ ಮಾಡಲಿದ್ದನು. ಆದರೆ ಯೋಹಾನನು ತಾನೇ ಬರಲಿರುವ ಮೆಸ್ಸೀಯನ ಒಬ್ಬ ಶಿಷ್ಯನಾಗಿ ಪರಿಣಮಿಸುವನೆಂದು ಸೂಚಿಸುವ ಯಾವ ವಿಷಯವೂ ಆ ದೈವಿಕ ಪ್ರಕಟನೆಯಲ್ಲಿ ಇರಲಿಲ್ಲ, ಯೋಹಾನನ ತಂದೆ ಜಕರೀಯನಿಂದ ಮಾಡಲ್ಪಟ್ಟ ಪ್ರವಾದನಾ ಹೇಳಿಕೆಯಲ್ಲೂ ಆ ರೀತಿಯ ಒಂದು ಸೂಚನೆಯು ಇರಲಿಲ್ಲ.—ಲೂಕ 1:17, 67-79.

ಹೀಗೆ, ಯೇಸುವಿಗೆ ದೀಕ್ಷಾಸ್ನಾನ ಮಾಡಿಸಿದ ನಂತರ, ಯೋಹಾನನು ಸಾರುವುದನ್ನು ಮತ್ತು ಸ್ನಾನ ಮಾಡುವುದನ್ನು ಮುಂದರಿಸುತ್ತಾ, ಜನರನ್ನು ಸಿದ್ಧಮಾಡುವ ತನ್ನ ನೇಮಕಕ್ಕೆ ಅಂಟಿಕೊಂಡಿದ್ದನು. ಪವಿತ್ರಾತ್ಮದಲ್ಲಿ ಆಗುವ ದೀಕ್ಷಾಸ್ನಾನವೊಂದನ್ನು ಯೇಸು ಒದಗಿಸುವನೆಂದು ಯೋಹಾನನಿಗೆ ಅದ್ಭುತಕರವಾಗಿ ತಿಳಿದಿತ್ತು, ಆದರೆ ತಾನು ಪವಿತ್ರಾತ್ಮವನ್ನು ಪಡೆದು ಒಬ್ಬ ಅಭಿಷಿಕ್ತ ಕ್ರೈಸ್ತನಾಗಿ ಪರಿಣಮಿಸುವನೆಂದು ಅವನು ಹೇಳಲಿಲ್ಲ. (ಮತ್ತಾಯ 3:11) ಯೇಸು ವೃದ್ಧಿಯಾಗುತ್ತಾ ಹೋಗುವಾಗ, ತಾನು ಕಡಿಮೆಯಾಗುತ್ತಾ ಬರುವೆನೆಂಬದನ್ನು ಯೋಹಾನನು ಮನಗಂಡಿದ್ದನು.—ಯೋಹಾನ 3:22-30.

ನಾವು ಮತ್ತಾಯ 11:11ರಲ್ಲಿ ಏನನ್ನು ಓದುತ್ತೇವೋ ಅದನ್ನು ಯೇಸು ನುಡಿದಾಗ, ಯೋಹಾನನು ಆವಾಗಲೇ ಸೆರೆಮನೆಯಲ್ಲಿದ್ದನು. ಈ ಸೆರೆಯಲ್ಲಿರುವ ಪ್ರವಾದಿಯು, ಭವಿಷ್ಯದಲ್ಲಿ ಪರಲೋಕದಲ್ಲಿ ರಾಜ-ಯಾಜಕನಾಗಿ ಸೇವೆಮಾಡುವ ಒಬ್ಬ ಚಿಕ್ಕವನಿಗಿಂತ ಕಡಿಮೆಯವನು ಎಂದು ಯೇಸು ಮುಂಚಿತವಾಗಿಯೇ ತಿಳಿಯಪಡಿಸಿದ್ದನು. ಆದರೂ, ಯೋಹಾನನು ಬೇಗನೇ ಸಾಯಲಿದ್ದನು, ಮತ್ತು ಸ್ವರ್ಗೀಯ ಜೀವನಕ್ಕೆ ಆ “ಹೊಸ” ದಾರಿಯು ತೆರೆಯಲ್ಪಡುವ ಮುಂಚೆಯೇ ಐಹಿಕ ದೃಶ್ಯದಿಂದ ದಾಟಿಹೋಗುವನೆಂದೂ ಯೇಸುವಿಗೆ ತಿಳಿದಿತ್ತೆಂದು ತೋರುತ್ತದೆ. (ಇಬ್ರಿಯ 10:19, 20) ಇದು, ಯೇಸುವಿನ ಶಿಷ್ಯರ ಆತ್ಮಾಭಿಷೇಕವು ಪ್ರಾರಂಭವಾದ ಸಾ.ಶ. 33ರ ಪಂಚಾಶತ್ತಮದ ತನಕ ಯೋಹಾನನು ಬದುಕಿರಲಾರನೆಂಬ ಅರ್ಥವನ್ನು ಕೊಡುತ್ತದೆ. ಹೀಗೆ, ಮತ್ತಾಯ 11:11ರ ಯೇಸುವಿನ ಹೇಳಿಕೆಯನ್ನು, ಯೋಹಾನನು ಪರಲೋಕಕ್ಕೆ ಹೋಗುವುದಿಲ್ಲವೆಂದು ಯೇಸುವಿಗೆ ತಿಳಿದಿತ್ತೆಂಬದಕ್ಕೆ ಸೂಚನೆಯಾಗಿಯೂ ತಕ್ಕೊಳ್ಳ ಸಾಧ್ಯವಿದೆ. (w92 2/15)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ