ರಾಜ್ಯ ಘೋಷಕರ ವರದಿ
ನೈಜೀರಿಯದ ಶಾಲಾಮಕ್ಕಳು ನಂಬಿಗಸ್ತಿಕೆಗಾಗಿ ಆಶೀರ್ವದಿಸಲ್ಪಟ್ಟರು
ಅಪೊಸ್ತಲ ಪೌಲನು ಬರೆದದ್ದು: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” (ರೋಮಾಪುರ 12:18) ನೈಜಿರೀಯದ ಯೆಹೋವನ ಸಾಕ್ಷಿಗಳ ಶಾಲಾಮಕ್ಕಳು, ಹಿಂಸಿಸಲ್ಪಟ್ಟಾಗಲೂ ಕೂಡ ಈ ಬುದ್ಧಿವಾದವನ್ನು ಅನ್ವಯಿಸುತ್ತಾರೆ. ಫಲಿತಾಂಶವಾಗಿ, ಯೆಹೋವನು ಅವರನ್ನು ಆಶೀರ್ವದಿಸುತ್ತಾನೆ.
▫ ಒಬ್ಬ ಅಧ್ಯಾಪಕನು ಯೆಹೋವನ ಸಾಕ್ಷಿಗಳನ್ನು ಕಟುವಾಗಿ ದ್ವೇಷಿಸುತ್ತಿದ್ದನು. ಬೆಳಗ್ಗೆಯ ಒಂದು ಸಮ್ಮೇಳನದಲ್ಲಿ ಅವನು ಎಲ್ಲಾ ಸಾಕ್ಷಿಗಳನ್ನು ಮುಂದಕ್ಕೆ ಕರೆದು, ರಾಷ್ಟ್ರ ಗೀತೆಯನ್ನು ಹಾಡುವಂತೆ ಆಜ್ಞಾಪಿಸಿದನು. ದೇವರಿಗೆ ತಾವು ಸಂಪೂರ್ಣ ಭಕ್ತಿಯನ್ನು ತೋರಿಸಲು ಬಯಸುತ್ತೇವೆಂದು ಹೇಳುತ್ತಾ, ಅವರು ನಿರಾಕರಿಸಿದರು. ಅಧ್ಯಾಪಕನು ಅವರನ್ನೆಲ್ಲಾ ಹೊರಗೆ ಕೊಂಡೊಯ್ದು ಹುಲ್ಲನ್ನು ಕತ್ತರಿಸುವಂತೆ ಅವರಿಗೆ ಹೇಳಿದನು. ತನ್ಮಧ್ಯೆ, ಇತರ ಮಕ್ಕಳೆಲ್ಲರೂ ಅವರ ತರಗತಿಗಳಲ್ಲಿ ಮುಂದರಿದರು.
ಒಬ್ಬ ಪ್ರಾಯಸ್ಥ ಸಾಕ್ಷಿಯು ಸ್ಕೂಲ್ ಆ್ಯಂಡ್ ಜೆಹೊವಾಸ್ ವಿಟ್ನೆಸಸ್ ಬ್ರೊಷೂರನ್ನು ಶಿಕ್ಷಕನ ಬಳಿ ಕೊಂಡೊಯ್ದು ಯೆಹೋವನ ಸಾಕ್ಷಿಗಳ ತಾಟಸ್ಥ್ಯತೆಯನ್ನು ವಿವರಿಸಿದನು. ಆದಾಗ್ಯೂ, ಅಧ್ಯಾಪಕನು ವಿಷಯವನ್ನು ಚರ್ಚಿಸಲು ಯಾ ಬ್ರೊಷೂರನ್ನು ತಕ್ಕೊಳ್ಳಲು ನಿರಾಕರಿಸಿದನು. ವಾಸ್ತವದಲ್ಲಿ, ಮಕ್ಕಳ ಶಿಕ್ಷೆಯನ್ನು ಅವನು ಕೂಡಲೇ ತೀವ್ರಗೊಳಿಸಿದನು.
ಎಳೆಯ ಸಾಕ್ಷಿಗಳು ಈ ಶಿಕ್ಷೆಯನ್ನು ತಾಳಿಕೊಳ್ಳುವದನ್ನು ಮುಂದರಿಸಿದರು ಮತ್ತು ಅಧ್ಯಾಪಕನು ಇಲ್ಲದಿರುವಾಗಲೂ ಹುಲ್ಲನ್ನು ಕತ್ತರಿಸುವದನ್ನು ಮುಂದರಿಸಿದರು. ಒಂದು ದಿವಸ ಅಧ್ಯಾಪಕನು ಅಡಗಿ ಕುಳಿತನು ಮತ್ತು ಅವರು ರಾಜ್ಯ ಸಂಗೀತಗಳನ್ನು ಹಾಡುತ್ತಾ ಕೆಲಸಮಾಡುವದನ್ನು ಮುಂದರಿಸುವದನ್ನು ಅವರಿಗೆ ತಿಳಿಯದಂಥ ರೀತಿಯಲ್ಲಿ ವೀಕ್ಷಿಸಿದನು. ಅವನು ಎಷ್ಟೊಂದು ಪ್ರಭಾವಿತನಾದನೆಂದರೆ, ಅವರ ಮನೋಭಾವದ ಕಡೆಗೆ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ, ಕೂಡಲೇ ಅವರನ್ನು ತರಗತಿಗಳಿಗೆ ಕಳುಹಿಸಿದನು. ಫಲಿತಾಂಶವೇನು? ಈಗ ಅಧ್ಯಾಪಕನು ಯೆಹೋವನ ಸಾಕ್ಷಿಗಳೊಂದಿಗೆ ಒಂದು ಬೈಬಲ್ ಅಭ್ಯಾಸವನ್ನು ಪಡೆಯುತ್ತಿದ್ದಾನೆ!
ಯೆಹೋವನಿಗೆ ಮತ್ತು ಅವನ ತತ್ವಗಳಿಗೆ ಅವರ ನಂಬಿಗಸ್ತಿಕೆಯ ಕಾರಣ ಈ ಶಾಲಾಮಕ್ಕಳು ಖಂಡಿತವಾಗಿಯೂ ಆಶೀರ್ವದಿಸಲ್ಪಟ್ಟರು.—ಜ್ಞಾನೋಕ್ತಿ 10:22.
▫ ರೂತ್ ಮತ್ತು ಅವಳ ಮಿತ್ರರು “ಈ ಲೋಕದ ಭಾಗವಾಗಿಲ್ಲ” ಎಂಬ ಯೆಹೋವನ ಆವಶ್ಯಕತೆಗೆ ಅವರ ನಂಬಿಗಸ್ತಿಕೆಯಿಂದಾಗಿ ಆಶೀರ್ವದಿಸಲ್ಪಟ್ಟರು. (ಯೋಹಾನ 17:16) ರೂತ್ ಈಗ 18, ಅವಳು ಪಯನೀಯರಿಂಗ್ ಆರಂಭಿಸಿದಾಗ 12 ವರ್ಷದವಳಾಗಿದ್ದಳು. ರಾಷ್ಟ್ರ ಗೀತೆಯನ್ನು ಹಾಡಲು ನಿರಾಕರಿಸಿದ್ದರಿಂದಾಗಿ ಶಾಲೆಯ ಸಿಬ್ಬಂದಿಯ ಸದಸ್ಯರುಗಳಿಂದ ಅವಳು ಮತ್ತು ಇತರ ಸಾಕ್ಷಿಗಳು ವಿರೋಧವನ್ನು ಪಡೆದರು. ಒಬ್ಬ ಅಧ್ಯಾಪಕನು ಹುಡುಗಿಯರ ಹೆತ್ತವರನ್ನು ಕಾಣಲು ಕೇಳಿಕೊಂಡನು. ಅವರು ಸ್ಕೂಲ್ ಬ್ರೊಷೂರ್ ಬಳಸಿ, ವಿವರಣೆಯೊಂದನ್ನು ನೀಡಿದ ನಂತರ, ಅಧ್ಯಾಪಕನಿಗೆ ತೃಪ್ತಿಯಾಯಿತು ಮತ್ತು ವಿದ್ಯಾರ್ಥಿಗಳಿಗೆ ತದನಂತರ ಉಪದ್ರವವನ್ನು ಕೊಡಲಿಲ್ಲ.
ಆದಾಗ್ಯೂ, ಒಂದು ದಿನ ಭಾರತದ ಒಬ್ಬ ಅಧ್ಯಾಪಿಕೆಯು, ರಾಷ್ಟ್ರ ಗೀತೆಯನ್ನು ಹಾಡಲು ಹುಡುಗಿಯರಲ್ಲೊಬ್ಬಳು ನಿರಾಕರಿಸಿದ್ದರಿಂದ ತರಗತಿಯ ಎದುರಲ್ಲಿ ಅವಳನ್ನು ಅವಮಾನಿಸಿ, ಅವಳನ್ನು ದಂಡಿಸಿದಳು. ಹುಡುಗಿಯು ಧೈರ್ಯದಿಂದ ಅವಳ ನಂಬಿಕೆಯನ್ನು ಸಮರ್ಥಿಸಿಕೊಂಡಳು ಮತ್ತು ಅಧ್ಯಾಪಿಕೆಯು ಅವಳನ್ನು ಶಾಲಾ ಪ್ರಿನ್ಸಿಪಲಳನ್ನು ಕಾಣಲು ಕೊಂಡೊಯ್ದಳು. ಅವರು ಅಲ್ಲಿಗೆ ಹೋದಾಗ, ಎಳೆಯ ಸಾಕ್ಷಿಯು ಅಲ್ಲಿ ವೈಸ್ ಪ್ರಿನ್ಸಿಪಲ್ ಕೂಡ ಹಾಜರಿರುವದನ್ನು ಕಂಡಳು. ಅವಳು ಆಶ್ಚರ್ಯಗೊಳ್ಳುತ್ತಿದ್ದಂತೆ, ಪ್ರಿನ್ಸಿಪಲ್ ಮತ್ತು ವೈಸ್ ಪ್ರಿನ್ಸಿಪಲ್ ಇಬ್ಬರೂ ನಗಲು ಆರಂಭಿಸಿದರು. ಅಧ್ಯಾಪಿಕೆಯ ಕಡೆಗೆ ತಿರುಗಿ ಪ್ರಿನ್ಸಿಪಲ್ ಅಂದದ್ದು: “ಮ್ಯಾಡಂ, ಈ ಹುಡುಗಿಯರ ಕುರಿತು ನೀನಾಗಿಯೇ ಹೆಚ್ಚು ಚಿಂತೆಗೊಳ್ಳಬೇಡ. ನೀನು ಅವರನ್ನು ಕೊಂದರೂ ಕೂಡ, ಸಾಯಲಿಕ್ಕೆ ಅವರು ಸಿದ್ಧರಾಗಿರುತ್ತಾರೆಯೇ ಹೊರತು ಗೀತೆಯನ್ನು ಹಾಡುವದಿಲ್ಲ. ಅವರ ಕುರಿತು ನೀನು ಕೇಳಿರಲಿಲ್ಲವೋ?” ಅವಳು ಮತ್ತು ಅವಳ ಸಹಾಯಕಿಯು ತದನಂತರ ಯೆಹೋವನ ಸಾಕ್ಷಿಗಳ ನಂಬಿಕೆ ಮತ್ತು ಧೈರ್ಯದ ಕುರಿತು ಮಾತಾಡಿದರು. ಹುಡುಗಿಗೆ ಮಾತಾಡುತ್ತಾ, ಪ್ರಿನ್ಸಿಪಲ್, ಅನುಭವಿಸಿದಂತಹ ಪೇಚಾಟಕ್ಕಾಗಿ ವಿಷಾದ ವ್ಯಕ್ತಪಡಿಸಿದಳು. ಅನಂತರ ಅವಳು ಕೂಡಿಸಿದ್ದು: “ನಿನ್ನ ನಂಬಿಕೆಯ ಕೃತ್ಯಗಳನ್ನು ಮುಂದರಿಸು. ನಾನು ನಿನ್ನ ಧರ್ಮವನ್ನು ಮತ್ತು ಹೊರಗೂ ಇಲ್ಲಿ ಶಾಲೆಯ ಒಳಗೂ ನಿನ್ನ ಧೈರ್ಯದ ನಿಲುವನ್ನು ಮೆಚ್ಚುತ್ತೇನೆ” ಅನಂತರ, ವಿರೋಧಿಸುತ್ತಿದ್ದ ಅಧ್ಯಾಪಿಕೆಯು ಸಾಕ್ಷಿಯೊಡನೆ, ಸಾಕ್ಷಿಗಳಿಂದ ತಕ್ಕೊಳಲ್ಪಟ್ಟ ತಾಟಸ್ಥ್ಯತೆಯ ನಿಲುವನ್ನು ತಾನು ಈಗ ಅರ್ಥಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾ ಕ್ಷಮೆ ಯಾಚಿಸಿದಳು.
ವಿಗ್ರಹವೊಂದಕ್ಕೆ ಅಡ್ಡಬೀಳುವದರ ಮೂಲಕ ದೇವರಿಗೆ ಅವರ ಸಮಗ್ರತೆಯನ್ನು ಮುರಿಯದೆ ಇದ್ದ ಮೂವರು ಇಬ್ರಿಯರ ಮತ್ತು ಯೆಹೋವನಿಗೆ ಪ್ರಾರ್ಥಿಸುವದನ್ನು ನಿಲ್ಲಿಸಲು ನಿರಾಕರಿಸಿದ ದಾನಿಯೇಲನ ಮಾದರಿಯನ್ನು ಈ ಮಕ್ಕಳು ಸಹ ಅನುಕರಿಸಿದರು. ಯೆಹೋವನಿಂದ ಈ ಪುರುಷರು ಆಶೀರ್ವದಿಸಲ್ಪಟ್ಟರು ಯಾಕಂದರೆ ಅವರು ದೇವರ ನ್ಯಾಯಯುಕ್ತ ನಿಯಮಗಳಿಗೆ ನಂಬಿಗಸ್ತರಾಗಿದ್ದರು.—ದಾನಿಯೇಲ ಅಧ್ಯಾಯಗಳು 3 ಮತ್ತು 6.