ಸುಳ್ಳು ಹೇಳುವುದು ಅಷ್ಟು ಸುಲಭವೇಕೆ?
ತಮಗೆ ಸುಳ್ಳು ಹೇಳಲ್ಪಡುವುದು ಯಾರಿಗೂ ಇಷ್ಟವಿಲ್ಲ. ಆದರೂ, ಲೋಕದಲ್ಲೆಲ್ಲೂ ಇರುವ ಜನರು ಹಲವಾರು ಕಾರಣಗಳಿಗಾಗಿ ಒಬ್ಬರಿಗೊಬ್ಬರು ಸುಳ್ಳು ಹೇಳುತ್ತಾರೆ. ಜೇಮ್ಸ್ ಪ್ಯಾಟರ್ಸನ್ ಮತ್ತು ಪೀಟರ್ ಕಿಮ್ ಇವರ, ದ ಡೇ ಅಮೆರಿಕ ಟೋಲ್ಡ್ ದ ಟ್ರೂತ್ ಎಂಬ ಪುಸ್ತಕದಲ್ಲಿ ಬಂದ ಒಂದು ಸಮೀಕ್ಷೆಯು, 91 ಪ್ರತಿಶತ ಅಮೆರಿಕಾನರು ಕ್ರಮವಾಗಿ ಸುಳ್ಳು ಹೇಳುತ್ತಾರೆ ಎಂದು ಪ್ರಕಟಿಸಿತ್ತು. ಆ ಕರ್ತೃಗಳು ಹೇಳಿದ್ದು: “ನಮ್ಮಲ್ಲಿ ಹೆಚ್ಚಿನವರಿಗೆ ಸುಳ್ಳು ಹೇಳದ ಹೊರತು ಒಂದು ವಾರವನ್ನಾದರೂ ಕಳೆಯುವುದು ಕಷ್ಟವಾಗಿ ಕಾಣುತ್ತದೆ. ಐವರಲ್ಲಿ ಒಬ್ಬರು ಒಂದು ದಿನವನ್ನು ಕೂಡ ಕಳೆಯಲಾರರು—ಮತ್ತು ನಾವು ಹೇಳುವುದು ಬುದ್ಧಿಪೂರ್ವಕವಾದ, ಮನಸ್ಸಿನಲ್ಲಿ ಮೊದಲಾಗಿಯೇ ಯೋಚಿಸಿದ ಸುಳ್ಳುಗಳ ಕುರಿತಾಗಿ.”
ಆಧುನಿಕ-ದಿನದ ಜೀವನದ ಬಹು ಮಟ್ಟಿಗೆ ಎಲ್ಲಾ ವಿಭಾಗಗಳಲ್ಲಿ ಸುಳ್ಳು ಹೇಳುವುದು ಒಂದು ಸಾಮಾನ್ಯ ಪದ್ಧತಿಯಾಗಿದೆ. ರಾಜಕೀಯ ಮುಖಂಡರು ತಮ್ಮ ಜನರಿಗೆ ಮತ್ತು ತಾವು ಒಬ್ಬರಿಗೊಬ್ಬರು ಸುಳ್ಳು ಹೇಳುತ್ತಾರೆ. ತಾವು ಕಾರ್ಯತಃ ಆಳವಾಗಿ ಒಳಗೂಡಿದ್ದ ಅಪನಿಂದಕ ಸಂಚುಗಳಲ್ಲಿ ತಮಗೆ ಯಾವುದೇ ಸಂಬಂಧವಿಲ್ಲವೆಂದು ಅಲ್ಲಗಳೆಯುತ್ತಾ, ಅವರು ಪದೇ ಪದೇ ಟೆಲಿವಿಷನ್ ಮೇಲೆ ಗೋಚರಿಸಿದ್ದಾರೆ. ಸಿಸ್ಲ ಬಾಕ್, ತನ್ನ ಪುಸ್ತಕವಾದ ಲೈಯಿಂಗ್—ಮಾರಲ್ ಚಾಯ್ಸ್ ಇನ್ ಪಬ್ಲಿಕ್ ಆ್ಯಂಡ್ ಪ್ರೈವೆಟ್ ಲೈಫ್ ನಲ್ಲಿ ಅವಲೋಕಿಸಿದ್ದು: “ಮೋಸವು, ಕಾನೂನು ಮತ್ತು ಪತ್ರಿಕೋದ್ಯೋಗದಲ್ಲಿ, ಸರಕಾರದಲ್ಲಿ ಮತ್ತು ಸಮಾಜ ವಿಜ್ಞಾನಗಳಲ್ಲಿ, ಸುಳ್ಳು ಹೇಳುವವರಿಂದ ಮತ್ತು ನಿಯಮಗಳನ್ನು ಮಾಡಲು ಸಹ ನೋಡುವವರಿಂದಲೂ ಕ್ಷಮ್ಯವಾಗಿ ಎಣಿಸಲ್ಪಡುವಾಗ, ಸ್ವೀಕರಣೀಯವಾಗಿ ಭಾವಿಸಲ್ಪಡುತ್ತದೆ.”
ಅಮೆರಿಕದಲ್ಲಿ ರಾಜಕೀಯ ಸುಳ್ಳುಹೇಳುವಿಕೆಗೆ ನಿರ್ದೇಶಿಸುತ್ತಾ, ಮೇ⁄ಜೂನ್ 1989 ರ ಕಾಮನ್ ಕಾಸ್ ಮ್ಯಾಗಜಿನ್ ಅವಲೋಕಿಸಿದ್ದು: “ಸರಕಾರದ ಮೋಸ ಮತ್ತು ಸಾರ್ವಜನಿಕ ಅಪನಂಬಿಕೆಯ ಪರಿಭಾಷೆಯಲ್ಲಿ, ವಾಟರ್ಗೇಟ್ ಮತ್ತು ವಿಯೆಟ್ನಾಮ್ ಖಂಡಿತವಾಗಿಯೂ ಇರಾನ್-ಕಾಂಟ್ರವನ್ನು ಪ್ರತಿದ್ವಂದಿಸಿವೆ. ಹೀಗೆ ರೇಗನ್ರ ಕಾಲಾವಧಿಯನ್ನು ಅಂಥ ಒಂದು ಸಂಧಿಕಾಲವಾಗಿ ಮಾಡಿದ್ದು ಯಾವುದು? ಸುಳ್ಳು ಹೇಳಿದವರು ಅನೇಕರು, ಆದರೆ ಪರಿತಾಪಪಟ್ಟವರು ಕೊಂಚ ಜನ.” ಆದುದರಿಂದ ಸಾಮಾನ್ಯ ಜನರು ತಮ್ಮ ರಾಜಕೀಯ ಮುಖಂಡರನ್ನು ನಂಬದೆ ಇರುವದಕ್ಕೆ ಸಕಾರಣವದೆ.
ಅಂತರ್ರಾಷ್ಟ್ರೀಯ ಸಂಬಂಧಗಳಲ್ಲಿ ಅಂಥ ಮುಖಂಡರಿಗೆ ಒಬ್ಬರನ್ನೊಬ್ಬರು ನಂಬಲು ಕಷ್ಟವಾಗಿ ಕಾಣುತ್ತದೆ. ಗ್ರೀಕ್ ತತ್ವಜ್ಞಾನಿ ಪ್ಲೇಟೋ ಅವಲೋಕಿಸಿದ್ದು: “ರಾಜ್ಯದ ಆಡಳಿತಗಾರರು . . . ದೇಶದ ಹಿತಕ್ಕಾಗಿ ಸುಳ್ಳಾಡಲು ಅನುಮತಿಸಲ್ಪಡಬೇಕು.” ಅಂತರ್ರಾಷ್ಟ್ರೀಯ ಸಂಬಂಧಗಳಲ್ಲಿ ವಿಷಯವು, ಬೈಬಲ್ ಪ್ರವಾದನೆ ದಾನಿಯೇಲ 11:27 ರಲ್ಲಿ ಹೇಳಿದಂತೆಯೇ ಇದೆ: ಅವರು “ಸಹಪಂಕ್ತಿಯಲ್ಲಿ ಸುಳ್ಳುಸುಳ್ಳು ಮಾತಾಡಿಕೊಳ್ಳುವರು.”
ವ್ಯಾಪಾರಿ ಲೋಕದಲ್ಲಿ, ಉತ್ಪಾದನೆಗಳು ಮತ್ತು ಸೇವೆಗಳ ಕುರಿತು ಸುಳ್ಳು ಹೇಳುವುದು ಸಾಮಾನ್ಯ ಪದ್ಧತಿಯಾಗಿದೆ. ಖರೀದಿಗಾರರು ಕರಾರುಗಳ ಒಪ್ಪಿಗೆಗಳನ್ನು ಬಹಳ ಎಚ್ಚರಿಕೆಯಿಂದ, ಅಸ್ಪಷ್ಟ ವಿಷಯಗಳನ್ನು ಖಾತ್ರಿಮಾಡಿಕೊಂಡೇ ಪ್ರವೇಶಿಸಬೇಕಾಗುತ್ತದೆ. ಸುಳ್ಳು ಜಾಹೀರಾತಿನಿಂದ, ಉಪಯುಕ್ತವೂ ಹಾನಿರಹಿತವೂ ಆಗಿ ಪ್ರತಿನಿಧಿಸಲ್ಪಡುವ ಹಾನಿಕಾರಕ ಮಾರಾಟದ ಸಾಮಾನುಗಳಿಂದ, ಮತ್ತು ವಂಚನೆಯಿಂದ ಜನರನ್ನು ಕಾಪಾಡಲು ಕೆಲವು ದೇಶಗಳ ಸರಕಾರಗಳಲ್ಲಿ ನಿಯಂತ್ರಕ ಕಾರ್ಯಭಾರಗಳಿವೆ. ಈ ಪ್ರಯತ್ನಗಳ ನಡುವೆಯೂ, ಜನರು ಸುಳ್ಳು ವ್ಯಾಪಾರಿಗಳಿಂದ ಆರ್ಥಿಕವಾಗಿ ಕಷ್ಟವನ್ನು ಅನುಭವಿಸುವುದನ್ನು ಮುಂದರಿಸುತ್ತಾರೆ.
ಕೆಲವರಿಗಾದರೋ ಸುಳ್ಳಾಡುವುದು ಎಷ್ಟು ಸುಲಭವೆಂದರೆ ಅದು ಹವ್ಯಾಸವಾಗಿ ಬಿಡುತ್ತದೆ. ಇತರರು ಸಾಮಾನ್ಯವಾಗಿ ಸತ್ಯಪರರಾದರೂ, ಬಿಕ್ಕಟ್ಟಿನ ಸ್ಥಿತಿಯಲ್ಲಿ ಹಾಕಲ್ಪಟ್ಟಾಗ ಅವರು ಸುಳ್ಳಾಡುವರು. ಯಾವುದೇ ಪರಿಸ್ಥಿತಿಗಳ ಕೆಳಗೆ ಸುಳ್ಳಾಡಲು ನಿರಾಕರಿಸುವವರು ಕೊಂಚ ಜನ.
ಸುಳ್ಳಿನ ಅರ್ಥ ವಿವರವು, “1. ಸುಳ್ಳಾದ ಹೇಳಿಕೆ ಅಥವಾ ಕ್ರಿಯೆ, ವಿಶೇಷವಾಗಿ ಮೋಸಗೊಳಿಸುವ ಹೇತುವಿನಿಂದ ಮಾಡಲ್ಪಟ್ಟದ್ದು . . . 2. ಸುಳ್ಳಭಿಪ್ರಾಯವನ್ನು ಕೊಡುವ ಅಥವಾ ಅದಕ್ಕಾಗಿ ಯೋಜಿಸಲ್ಪಟ್ಟ ಯಾವುದೋ ಒಂದು ವಿಷಯ” ಎಂದಾಗಿದೆ. ಹೇತುವೇನಂದರೆ ಸುಳ್ಳುಗಾರನು ಅಸತ್ಯವೆಂದು ತಿಳಿದಿರುವ ಒಂದು ವಿಷಯವನ್ನು ಇತರರು ನಂಬುವಂತೆ ಮಾಡುವದೇ. ಸುಳ್ಳುಗಳ ಅಥವಾ ಅರೆಸತ್ಯಗಳ ಮೂಲಕ, ಸತ್ಯವನ್ನು ತಿಳಿಯಲು ಹಕ್ಕಿರುವವರನ್ನು ಅವನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ.
ಸುಳ್ಳಾಡುವುದಕ್ಕೆ ಕಾರಣಗಳು
ಜನರು ಅನೇಕ ಕಾರಣಗಳಿಂದಾಗಿ ಸುಳ್ಳು ಹೇಳುತ್ತಾರೆ. ಈ ಸ್ಪರ್ಧಾತ್ಮಕ ಲೋಕದಲ್ಲಿ ಸಾಫಲ್ಯವನ್ನು ಗಳಿಸುವುದಕ್ಕಾಗಿ ತಮ್ಮ ಸಾಮರ್ಥ್ಯಗಳ ಕುರಿತು ತಾವು ಸುಳ್ಳಾಡಲು ನಿರ್ಬಂಧಿಸಲ್ಪಟ್ಟಿದ್ದಾರೆಂದು ಕೆಲವರು ನೆನಸುತ್ತಾರೆ. ಇತರರು ತಪ್ಪುಗಳನ್ನು ಅಥವಾ ದೋಷಗಳನ್ನು ಸುಳ್ಳುಗಳಿಂದ ಮರೆಮಾಡಲು ಪ್ರಯತ್ನಿಸುತ್ತಾರೆ. ಇನ್ನೂ ಇತರರು ತಾವು ಮಾಡದಿರುವ ಕೆಲಸವನ್ನು ಮಾಡಿದ್ದೇವೆಂಬ ಅಭಿಪ್ರಾಯವನ್ನು ಕೊಡುವುದಕ್ಕೆ ವರದಿಗಳನ್ನು ಹುಸಿಮಾಡುತ್ತಾರೆ. ಅಲ್ಲದೆ ಇತರರ ಸತ್ಕೀರ್ತಿಯನ್ನು ಹಾಳುಮಾಡಲು, ಸಂಕೋಚವನ್ನು ವರ್ಜಿಸಲು, ಹಿಂದಣ ಸುಳ್ಳುಗಳನ್ನು ಸಮರ್ಥಿಸಲು ಅಥವಾ ಜನರ ಹಣವನ್ನು ಅವರಿಂದ ವಂಚಿಸಲಿಕ್ಕಾಗಿ, ಸುಳ್ಳಾಡುವವರೂ ಇದ್ದಾರೆ.
ಒಂದು ಸುಳ್ಳಿಗಾಗಿ ಸಾಮಾನ್ಯವಾದ ಸಮರ್ಥನೆಯು ಏನಂದರೆ ಅದು ಇನ್ನೊಬ್ಬ ವ್ಯಕ್ತಿಯನ್ನು ಕಾಪಾಡುತ್ತದೆ. ಕೆಲವರು ಇದನ್ನು ‘ಬಿಳಿ ಸುಳ್ಳು’ ಆಗಿ ಪರಿಗಣಿಸುತ್ತಾರೆ, ಯಾಕಂದರೆ ಅದು ಯಾರಿಗೂ ಹಾನಿ ತರುವುದಿಲ್ಲ ಎಂದವರು ನೆನಸುತ್ತಾರೆ. ಆದರೆ ಬಿಳಿ ಸುಳ್ಳುಗಳೆಂದು ಕರೆಯಲ್ಪಡುವ ಇವು ನಿಜವಾಗಿಯೂ ಯಾವ ಕೆಟ್ಟ ಪರಿಣಾಮಗಳನ್ನೂ ತಾರದೆ ಇರುವುವೋ?
ಪರಿಣಾಮಗಳನ್ನು ಪರಿಗಣಿಸಿರಿ
ಕ್ಷಮಾರ್ಹವಾದ ಸುಳ್ಳುಗಳು ಹೆಚ್ಚು ಗಂಭೀರ ವಿಷಯಗಳನ್ನು ಒಳಗೂಡಬಹುದಾದ ಸುಳ್ಳು ಹೇಳುವ ಹವ್ಯಾಸಕ್ಕೆ ನಡಿಸಬಹುದು. ಸಿಸ್ಲ ಬಾಕ್ ಹೇಳಿಕೆಯಿತ್ತದ್ದು: “ ‘ಬಿಳಿ’ ಸುಳ್ಳುಗಳು ಎಂದು ಸಮರ್ಥಿಸಲ್ಪಡುವ ಎಲ್ಲಾ ಸುಳ್ಳುಗಳನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡ ಸಾಧ್ಯವಿಲ್ಲ. ಮೊದಲನೆಯದಾಗಿ, ಸುಳ್ಳುಗಳ ನಿರಪಾಯಕರತೆಯು ಕುಪ್ರಸಿದ್ಧವಾಗಿ ವಾದಾಸ್ಪದವಾಗಿದೆ. ಸುಳ್ಳುಗಾರನು ಯಾವುದನ್ನು ನಿರಪಾಯಕರವೆಂದು ಅಥವಾ ಪ್ರಯೋಜನಕರವೆಂದು ಕೂಡ ಗ್ರಹಿಸುತ್ತಾನೋ ಅದು, ವಂಚಿಸಲ್ಪಟ್ಟವನ ದೃಷ್ಟಿಯಲ್ಲಿ ಹಾಗೆ ತೋರಿಬರದಿರಬಹುದು.”
ಸುಳ್ಳುಗಳು ಅವೆಷ್ಟು ನಿರ್ದೋಷವೆಂದು ತೋರಿಬಂದರೂ, ಮಾನವ ಸುಸಂಬಂಧಗಳಿಗೆ ನಾಶಕಾರಕವಾಗಿವೆ. ಸುಳ್ಳನ ವಿಶ್ವಾಸಯೋಗ್ಯತೆಯು ನುಚ್ಚುನೂರಾಗುತ್ತದೆ, ಭರವಸ ಪಾತ್ರತೆಯ ಕಾಯಂ ಭಗ್ನತೆಯು ಉಂಟಾಗಲೂಬಹುದು. ಪ್ರಖ್ಯಾತ ಲಘುಲೇಖನಗಾರ ರಾಲ್ಪ್ ವಾಲ್ಡೊ ಎಮರ್ಸನ್ ಬರೆದದ್ದು: “ಸತ್ಯದ ಪ್ರತಿಯೊಂದು ಉಲ್ಲಂಘನೆಯು ಸುಳ್ಳನಲ್ಲಿ ಒಂದು ರೀತಿಯ ಆತ್ಮಘಾತ ಮಾತ್ರವೇ ಅಲ್ಲ, ಮಾನವ ಸಮಾಜದ ಸ್ವಸ್ಥತೆಯ ಮೇಲೆ ಒಂದು ಇರಿತವೂ ಆಗಿದೆ.”
ಒಬ್ಬ ಸುಳ್ಳನಿಗೆ ಇನ್ನೊಬ್ಬ ವ್ಯಕ್ತಿಯ ಕುರಿತು ಹುಸಿ ಹೇಳಿಕೆಯನ್ನು ನೀಡುವುದು ಸುಲಭವಾಗಿದೆ. ಅವನು ರುಜುವಾತನ್ನು ನೀಡುವುದಿಲ್ಲವಾದರೂ, ಅವನ ಸುಳ್ಳು ಸಂದೇಹವನ್ನು ಉಂಟುಮಾಡುತ್ತದೆ, ಮತ್ತು ಅವನ ವಾದವನ್ನು ಪರಿಶೋಧಿಸದೆಯೇ ಅನೇಕರು ಅವನನ್ನು ನಂಬುತ್ತಾರೆ. ಹೀಗೆ ನಿರ್ದೋಷಿಯಾದ ವ್ಯಕ್ತಿಯ ಸತ್ಕೀರ್ತಿಯು ಹಾಳಾಗುತ್ತದೆ, ಮತ್ತು ಅವನು ತನ್ನ ನಿರಪರಾಧವನ್ನು ರುಜುಪಡಿಸುವ ಹೊರೆಯನ್ನು ಹೊರುತ್ತಾನೆ. ಆದುದರಿಂದ, ಜನರು ನಿರಪರಾಧಿ ವ್ಯಕ್ತಿಯ ಬದಲಾಗಿ ಸುಳ್ಳನನ್ನು ನಂಬುವುದರಿಂದ ಆಶಾಭಂಗವುಂಟಾಗುತ್ತದೆ, ಮತ್ತು ಅದು ಸುಳ್ಳನೊಂದಿಗಿನ ನಿರಪರಾಧಿ ವ್ಯಕ್ತಿಯ ಸಂಬಂಧವನ್ನು ನಾಶಗೊಳಿಸುತ್ತದೆ.
ಸುಳ್ಳನೊಬ್ಬನು ಸುಳ್ಳುಹೇಳುವ ಹವ್ಯಾಸವನ್ನು ಸುಲಭವಾಗಿ ಬೆಳೆಸಿಕೊಳ್ಳಬಲ್ಲನು. ಒಂದು ಸುಳ್ಳು ಸಾಮಾನ್ಯವಾಗಿ ಇನ್ನೊಂದಕ್ಕೆ ನಡಿಸುತ್ತದೆ. ಆರಂಭದ ಅಮೆರಿಕನ್ ರಾಜನೀತಿಜ್ಞನಾದ ಥಾಮಸ್ ಜ್ಯಾಫರ್ಸನ್, ಅವಲೋಕಿಸಿದ್ದು: “ಅಷ್ಟು ತುಚ್ಛವೂ, ನೀಚವೂ, ತಿರಸ್ಕರಣೀಯವೂ, ಆದ ದುಶ್ಚಟವು ಬೇರೊಂದಿಲ್ಲ. ಮತ್ತು ಯಾರು ಒಮ್ಮೆ ತನ್ನನ್ನು ಸುಳ್ಳು ಹೇಳಲು ಬಿಟ್ಟುಕೊಡುತ್ತಾನೋ ಅವನು, ಎರಡನೆಯ ಮತ್ತು ಮೂರನೆಯ ಸಾರಿ ಹಾಗೆ ಮಾಡುವುದನ್ನು ಹೆಚ್ಚು ಸುಲಭವಾಗಿ ಕಾಣುತ್ತಾನೆ, ಕಟ್ಟಕಡೆಗೆ ಅದು ಹವ್ಯಾಸವಾಗಿ ಬಿಡುತ್ತದೆ.” ನೈತಿಕ ಕುಸಿತಕ್ಕೆ ದಾರಿಯು ಅದೇ.
ಸುಳ್ಳುಹೇಳುವುದು ಸುಲಭವಾಗಿರಲು ಕಾರಣ
ಮೊದಲನೆಯ ಸ್ತ್ರೀಗೆ ಒಬ್ಬ ದಂಗೆಖೋರ ದೇವದೂತನು, ಅವಳು ನಿರ್ಮಾಣಿಕನಿಗೆ ಅವಿಧೇಯಳಾದರೆ ಅವಳು ಸಾಯುವುದಿಲ್ಲವೆಂದು ಹೇಳಿ ಸುಳ್ಳನ್ನು ನುಡಿದಾಗ, ಸುಳ್ಳಾಡುವಿಕೆಯು ಪ್ರಾರಂಭಿಸಿತು. ಅದು ಇಡೀ ಮಾನವ ಜಾತಿಗೆ ಅಗಣ್ಯ ಹಾನಿಯಲ್ಲಿ ಪರಿಣಮಿಸಿ, ಅಸಂಪೂರ್ಣತೆ, ಅಸೌಖ್ಯ ಮತ್ತು ಮರಣವನ್ನು ಎಲ್ಲರಿಗೆ ಬರಮಾಡಿತು.—ಆದಿಕಾಂಡ 3:1-4; ರೋಮಾಪುರ 5:12.
ಅವಿಧೇಯ ಆದಾಮ ಮತ್ತು ಹವ್ವರ ಕಾಲದಿಂದ, ಈ ಸುಳ್ಳಿನ ಮೂಲಪುರುಷನ ಮೋಸದ ಪ್ರಭಾವವು ಮಾನವಕುಲದ ಲೋಕದಲ್ಲಿ ಸುಳ್ಳಾಡುವುದನ್ನು ಪ್ರಚೋದಿಸುವ ಒಂದು ವಾತಾವರಣವನ್ನು ನಿರ್ಮಿಸಿದೆ. (ಯೋಹಾನ 8:44) ಯಾವುದರಲ್ಲಿ ಸತ್ಯವು ಕೇವಲ ಸಂಬಂಧಕವಾಗಿರುತ್ತದೋ ಆ ಅವನತಿಗೊಂಡಿರುವ ಲೋಕವು ಅದಾಗಿದೆ. ಸಪ್ಟಂಬರ 1986 ರ ದ ಸ್ಯಾಟರ್ಡೇ ಈವ್ನಿಂಗ್ ಪೋಸ್ಟ್ ಅವಲೋಕಿಸಿದ್ದೇನಂದರೆ ಸುಳ್ಳಾಡುವ ಸಮಸ್ಯೆಯು, “ವ್ಯಾಪಾರ, ಸರಕಾರ, ಶಿಕ್ಷಣ, ಮನೋರಂಜನೆ, ಮತ್ತು ಜೊತೆ ನಾಗರಿಕರ ಮತ್ತು ನೆರೆಯವರ ನಡುವಣ ಸಾಮಾನ್ಯ ದಿನ-ದಿನದ ಸಂಬಂಧಗಳನ್ನೂ ಬಾಧಿಸುತ್ತದೆ. . . . ಸಂಪೂರ್ಣ ಸತ್ಯಗಳು ಇಲ್ಲವೇ ಇಲ್ಲ ಎಂದನ್ನುವ ಏಕೈಕ ದೊಡ್ಡ ಸುಳ್ಳನ್ನು, ಸಂಬಂಧಕವಾದದ ವಾದಸರಣಿಯನ್ನು ನಾವು ಸ್ವೀಕರಿಸಿದ್ದೇವೆ.”
ತಾವು ಯಾರನ್ನು ಮೋಸಗೊಳಿಸುತ್ತಾರೋ ಅವರಿಗಾಗಿ ಯಾವುದೇ ಅನುತಾಪವಿರದ, ಹವ್ಯಾಸದ ಸುಳ್ಳುಗಾರರ ದೃಷ್ಟಿಕೋನವು ಇಂತಹದ್ದಾಗಿದೆ. ಅವರು ಸುಲಭವಾಗಿಯೇ ಸುಳ್ಳಾಡುತ್ತಾರೆ. ಅದು ಅವರ ಜೀವನ ಮಾರ್ಗವಾಗಿದೆ. ಆದರೆ ಯಾರಿಗೆ ಸುಳ್ಳು ಹೇಳುವ ಹವ್ಯಾಸವಿಲ್ಲವೋ ಅವರು ಹಿಂದು ಮುಂದು ನೋಡದೆ ಭಯದಿಂದ—ಹೊರಗೆಡಹಲ್ಪಡುವ ಭಯದಿಂದ, ದಂಡನೆಯೇ ಮುಂತಾದವುಗಳ ಭಯದಿಂದ ಸುಳ್ಳು ಹೇಳಬಹುದು. ಅದು ಅಸಂಪೂರ್ಣ ಶರೀರದ ಬಲಹೀನತೆಯಾಗಿದೆ. ಈ ಪ್ರವೃತ್ತಿಯನ್ನು ಸತ್ಯ ನುಡಿಯುವ ಒಂದು ನಿರ್ಧಾರದಿಂದ ಹೇಗೆ ಸ್ಥಾನಪಲ್ಲಟ ಮಾಡಸಾಧ್ಯವಿದೆ?
ಸತ್ಯಪರರಾಗಿರುವುದೇಕೆ?
ಸತ್ಯವು ನಮ್ಮ ಮಹಾ ನಿರ್ಮಾಣಿಕನು ಎಲ್ಲರಿಗಾಗಿ ಇಟ್ಟಿರುವ ಒಂದು ಮಾನದಂಡವಾಗಿದೆ. “ದೇವರಿಗೆ ಸುಳ್ಳಾಡಲು ಸಾಧ್ಯವಿಲ್ಲ” ಎಂದು ಆತನ ವಾಕ್ಯವಾದ ಬೈಬಲ್ ಇಬ್ರಿಯ 6:18, NW ರಲ್ಲಿ ತಿಳಿಸಿದೆ. ಇದೇ ಮಾನದಂಡವು, ಭೂಮಿಯ ಮೇಲೆ ದೇವರ ವೈಯಕ್ತಿಕ ಪ್ರತಿನಿಧಿಯಾಗಿದ್ದ ಆತನ ಪುತ್ರನಾದ ಯೇಸು ಕ್ರಿಸ್ತನಿಂದ ಎತ್ತಿಹಿಡಿಯಲ್ಪಟ್ಟಿತ್ತು. ಅವನನ್ನು ಕೊಲ್ಲಲು ಹುಡುಕುತ್ತಿದ್ದ ಯೆಹೂದ್ಯ ಧಾರ್ಮಿಕ ಮುಖಂಡರಿಗೆ ಯೇಸು ಅಂದದ್ದು: “ನೀವು ಹಾಗೆ ಮಾಡದೆ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾದ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ. . . . ಆತನನ್ನು ಅರಿಯೆನೆಂದು ಹೇಳಿದರೆ ನಿಮ್ಮ ಹಾಗೆ ಸುಳ್ಳುಗಾರನಾಗುವೆನು.” (ಯೋಹಾನ 8:40, 55) “ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ” ಎಂಬದರಲ್ಲಿ ಆತನು ನಮಗಾಗಿ ಒಂದು ಮಾದರಿಯನ್ನು ಇಟ್ಟಿರುತ್ತಾನೆ.—1 ಪೇತ್ರ 2:21, 22.
ಯಾರ ಹೆಸರು ಯೆಹೋವನು ಎಂದಾಗಿದೆಯೇ ಆ ನಮ್ಮ ನಿರ್ಮಾಣಿಕನು, ಜ್ಞಾನೋಕ್ತಿ 6:16-19 ಸ್ಪಷ್ಟವಾಗಿಗಿ ಹೇಳುವಂತೆ, ಸುಳ್ಳಾಡುವುದನ್ನು ಹಗೆಮಾಡುತ್ತಾನೆ: “ಯೆಹೋವನು ಹಗೆಮಾಡುವ ವಸ್ತುಗಳು ಆರು ಇವೆ. ಹೌದು ಏಳು ಆತನಿಗೆ ಅಸಹ್ಯಗಳಾಗಿ ತೋರುತ್ತವೆ. ಯಾವವಂದರೆ, ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ, ನಿರ್ದೋಷರಕ್ತವನ್ನು ಸುರಿಸುವ ಕೈ, ದುರಾಲೋಚನೆಯನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತರ್ವೆಪಡುವ ಕಾಲು, ಅಸತ್ಯವಾಡುವ ಸುಳ್ಳುಸಾಕ್ಷಿ, ಒಡಹುಟ್ಟಿದವರಲ್ಲಿ ಜಗಳವನ್ನು ಬಿತ್ತುವವನು, ಈ ಏಳೇ.”
ಆತನ ಮೆಚ್ಚಿಕೆಯನ್ನು ಗಳಿಸುವುದಕ್ಕಾಗಿ ನಾವಾತನ ಮಟ್ಟಗಳಿಂದ ಜೀವಿಸುವಂತೆ ಈ ಸತ್ಯಪರನಾದ ದೇವರು ನಮ್ಮನ್ನು ಆವಶ್ಯಪಡಿಸುತ್ತಾನೆ. ಆತನ ಪ್ರೇರಿತ ವಾಕ್ಯವು ನಮಗೆ ಆಜ್ಞಾಪಿಸುವುದು: “ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ; ನೀವು ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದು” ಹಾಕಿರಿ. (ಕೊಲೊಸ್ಸೆ 3:9) ಯಾರು ಸುಳ್ಳಾಡುವ ಹವ್ಯಾಸವನ್ನು ತೊರೆದುಬಿಡಲು ನಿರಾಕರಿಸುತ್ತಾರೋ ಅವರು ಆತನಿಗೆ ಸ್ವೀಕರಣೀಯರಲ್ಲ; ಅವರು ಆತನ ಜೀವದ ಕೊಡುಗೆಯನ್ನು ಪಡೆಯರು. ವಾಸ್ತವದಲ್ಲಿ, ದೇವರು “ಸುಳ್ಳು ಹೇಳುವವರನ್ನು ನಾಶಮಾಡು” ವನೆಂದು ಕೀರ್ತನೆ 5:6 ಸರಳವಾಗಿ ತಿಳಿಸುತ್ತದೆ. ಪ್ರಕಟನೆ 21:8 ಮತ್ತೂ ಅನ್ನುವುದೇನಂದರೆ, “ಎಲ್ಲಾ ಸುಳ್ಳುಗಾರ” ರಿಗೆ ಸಿಕ್ಕುವ ಪಾಲು, ನಿತ್ಯ ನಾಶನವಾದ “ಎರಡನೆಯ ಮರಣವು.” ಹೀಗೆ ಸುಳ್ಳಾಡುವ ಕುರಿತು ದೇವರ ನೋಟವನ್ನು ನಮ್ಮ ಸ್ವೀಕರಿಸುವಿಕೆಯು, ಸತ್ಯವನ್ನಾಡಲು ನಮಗೆ ಬಲವಾದ ಕಾರಣವನ್ನು ಕೊಡುತ್ತದೆ.
ಆದರೆ ಎಲ್ಲಿ ಸತ್ಯವು ಒಂದು ಸಂಕೋಚದ ಸನ್ನಿವೇಶವನ್ನು ಅಥವಾ ಕೆಟ್ಟ ಭಾವನೆಗಳನ್ನು ನಿರ್ಮಿಸಬಹುದೋ ಆ ಪರಿಸ್ಥಿತಿಯಲ್ಲಿ ಏನು ಮಾಡಬೇಕಾಗಿದೆ? ಸುಳ್ಳಾಡುವುದು ಎಂದೂ ಪರಿಹಾರ ಮಾರ್ಗವಲ್ಲ, ಏನನ್ನೂ ಹೇಳದಿರುವದು ಕೆಲವು ಸಾರಿ ಆಗಿರುತ್ತದೆ. ನಿಮ್ಮ ಭರವಸಯೋಗ್ಯತೆಯನ್ನು ಕೇವಲ ಧ್ವಂಸಗೊಳಿಸಬಲ್ಲ ಸುಳ್ಳನ್ನಾಡಿ, ದೈವಿಕ ಅಪ್ರಸನ್ನತೆಗೆ ನಿಮ್ಮನ್ನೇಕೆ ಗುರಿಮಾಡಬೇಕು?
ಭಯದಿಂದ ಮತ್ತು ಮಾನವ ಬಲಹೀನತೆಯಿಂದಾಗಿ ಒಬ್ಬ ವ್ಯಕ್ತಿಯು ಸುಳ್ಳಿನಲ್ಲಿ ಆಶ್ರಯ ತಕ್ಕೊಳ್ಳುವ ಶೋಧನೆಗೀಡಾಗಬಹುದು. ಅದು ತಕ್ಕೊಳ್ಳಲು ಅತ್ಯಂತ ಸುಲಭವಾದ ಮಾರ್ಗಕ್ರಮ ಅಥವಾ ವಿವೇಚನೆಯಿಲ್ಲದ ದಯೆ. ತಾನು ಯೇಸು ಕ್ರಿಸ್ತನನ್ನು ಅರಿತಿದದ್ದನ್ನು ಮೂರು ಸಾರಿ ಅಲ್ಲಗಳೆದಾಗ ಅಂಥ ಒಂದು ಶೋಧನೆಗೆ ಅಪೊಸ್ತಲ ಪೇತ್ರನು ಬಲಿಯಾದನು. ಸುಳ್ಳುಹೇಳಿದಕ್ಕಾಗಿ ತದನಂತರ ಅವನು ಬಹು ವ್ಯಥೆಪಟ್ಟನು. (ಲೂಕ 22:54-62) ಅವನ ನಿಜ ಪಶ್ಚಾತ್ತಾಪವು ಅವನನ್ನು ಕ್ಷಮಿಸುವಂತೆ ದೇವರನ್ನು ಪ್ರೇರಿಸಿತು, ಅನಂತರ ಅವನು ಅನೇಕ ಸೇವಾ ಸುಯೋಗಗಳಿಂದ ಆಶೀರ್ವದಿಸಲ್ಪಟ್ಟದರ್ದಿಂದ ಇದು ತೋರಿಬಂದಿದೆ. ಸುಳ್ಳಾಡುವುದನ್ನು ನಿಲ್ಲಿಸುವ ಒಂದು ನಿರ್ಧಾರಕ ನಿರ್ಣಯದೊಂದಿಗೆ ಪಶ್ಚಾತ್ತಾಪವು, ದೇವರು ಹಗೆಮಾಡುವುದನ್ನು ಗೈದದಕ್ಕಾಗಿ ದೈವಿಕ ಕ್ಷಮಾಪಣೆಯನ್ನು ತರುವ ಮಾರ್ಗವಾಗಿದೆ.
ಆದರೆ ಒಂದು ಸುಳ್ಳು ಹೇಳಿದ ಅನಂತರ ಕ್ಷಮಾಪಣೆಯನ್ನು ಕೇಳುವ ಬದಲಾಗಿ, ಸತ್ಯವನ್ನಾಡುವ ಮೂಲಕ ನಿಮ್ಮ ನಿರ್ಮಾಣಿಕನೊಂದಿಗೆ ಒಂದು ಸುಸಂಬಂಧವನ್ನು ಕಾಪಾಡಿಕೊಳ್ಳಿರಿ ಮತ್ತು ಇತರೊಂದಿಗೆ ನಿಮ್ಮ ಭರವಸಯೋಗ್ಯತೆಯನ್ನು ಉಳಿಸಿಕೊಳ್ಳಿರಿ. ಕೀರ್ತನೆ 15:1, 2 ಏನು ಹೇಳುತ್ತದೆಂಬದನ್ನು ಜ್ಞಾಪಕದಲ್ಲಿಡಿರಿ: “ಯೆಹೋವನೇ, ನಿನ್ನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾವನು? ನಿನ್ನ ಪರಿಶುದ್ಧ ಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು? ಅವನು ಸಜ್ಜನನೂ ನೀತಿವಂತನೂ ಮನಃಪೂರ್ವಕವಾಗಿ ಸತ್ಯವಚನವನ್ನಾಡುವವನೂ ಆಗಿರಬೇಕು.”