ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 3/15 ಪು. 29
  • ನ್ಯಾಶ್‌ ಪಪೈರಸ್‌ನ ಮೂಲ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನ್ಯಾಶ್‌ ಪಪೈರಸ್‌ನ ಮೂಲ್ಯ
  • ಕಾವಲಿನಬುರುಜು—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನ್ಯಾಶ್‌ ಪಪೈರಸ್‌ನ ಒಳವಿಷಯಗಳು
  • ನಿಮಗೆ ಗೊತ್ತಿತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ದೈವಿಕ ಕಾಪಾಡುವಿಕೆಯ ರುಜುವಾತು
    ಕಾವಲಿನಬುರುಜು—1990
  • “ಸಮುದ್ರ ಗೀತೆ” ಕಾಲದ ಅಂತರವನ್ನು ಭರ್ತಿಮಾಡುವ ಹಸ್ತಪ್ರತಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಈಜಿಪ್ಟಿನ ಕಸದ ಕುಪ್ಪೆಯಿಂದ ನಿಕ್ಷೇಪ
    ಕಾವಲಿನಬುರುಜು—1992
ಇನ್ನಷ್ಟು
ಕಾವಲಿನಬುರುಜು—1993
w93 3/15 ಪು. 29

ನ್ಯಾಶ್‌ ಪಪೈರಸ್‌ನ ಮೂಲ್ಯ

ಒಂದು ಹಳೇ ಹೀಬ್ರು ಬೈಬಲ್‌ ಹಸ್ತಪ್ರತಿಯ ಕಾಲ ನಿರ್ದೇಶವನ್ನು ನಿಷ್ಕೃಷ್ಟವಾಗಿ ನೀವು ಹೇಗೆ ಮಾಡುತ್ತೀರಿ? ಯೆಶಾಯನ ಮೃತ ಸಮುದ್ರ ಸುರುಳಿಯನ್ನು ಅವರು ಮೊದಲಾಗಿ 1948 ರಲ್ಲಿ ಕಂಡಾಗ, ಡಾ. ಜೋನ್‌ ಚ್‌. ಟ್ರೆವರ್‌ನ್ನು ಅದೇ ಸಮಸ್ಯೆಯು ಎದುರಿಸಿತ್ತು. ಹೀಬ್ರು ಅಕ್ಷರಗಳ ರೂಪವು ಅವರ ಕುತೂಹಲವನ್ನು ಕೆರಳಿಸಿತು. ಆ ಅಕ್ಷರಗಳು ಅದರ ಆಯುಸ್ಸನ್ನು ಕಂಡುಹಿಡಿಯುವ ಮುಖ್ಯ ಕೀಲಿಕೈ ಎಂದವರಿಗೆ ತಿಳಿದಿತ್ತು, ಆದರೆ ಯಾವುದರೊಂದಿಗೆ ಅವರದನ್ನು ಹೋಲಿಸ ಸಾಧ್ಯವಿದೆ? ಸರಿಯಾಗಿ, ಅವರು ತೀರ್ಮಾನಿಸಿದ್ದು: ನ್ಯಾಶ್‌ ಪಪೈರಸ್‌ನ ಹಸ್ತಾಕ್ಷರದೊಂದಿಗೆ ಮಾತ್ರವೇ. ಯಾಕೆ? ಈ ಹಸ್ತಪ್ರತಿಯು ಏನಾಗಿದೆ, ಮತ್ತು ಅದೆಲ್ಲಿಂದ ಬಂತು?

ನ್ಯಾಶ್‌ ಪಪೈರಸ್‌, ಸುಮಾರು ಮೂರು ಇಂಚು ಅಗಲ, ಐದು ಇಂಚು ಉದ್ದದ ಅಳತೆಯುಳ್ಳ 24 ಸಾಲುಗಳ ಹೀಬ್ರು ಮೂಲಪಾಠದ ಕೇವಲ ನಾಲ್ಕು ಅವಶೇಷಗಳನ್ನೊಳಗೊಂಡಿದೆ. ಸೊಸೈಟಿ ಆಫ್‌ ಬಿಬ್ಲಿಕಲ್‌ ಆರ್ಕಿಯಾಲೊಜಿಯ ಸೆಕ್ರಿಟರಿಯಾದ ಡಬ್ಲ್ಯೂ. ಎಲ್‌. ನ್ಯಾಶ್‌ರವರ ಹೆಸರನ್ನು ಅದಕ್ಕೆ ಕೊಡಲಾಗಿದೆ, ಅವರು ಅದನ್ನು 1902 ರಲ್ಲಿ ಒಬ್ಬ ಈಜಿಪ್ಟಿನ ವ್ಯಾಪಾರಿಯಿಂದ ಪಡೆದಿದ್ದರು. ಮಾರಣೆಯ ವರ್ಷದಲ್ಲಿ, ಆ ಸೊಸೈಟಿಯ ಪ್ರೊಸೀಡಿಂಗ್ಸ್‌ ನಲ್ಲಿ ಎಸ್‌. ಎ. ಕುಕ್‌ರವರಿಂದ ಅದು ಪ್ರಕಟಿಸಲ್ಪಟ್ಟಿತು, ಮತ್ತು ಇಂಗ್ಲೆಂಡಿನ ಕ್ಯಾಂಬ್ರಿಜ್‌ ಯೂನಿವರ್ಸಿಟಿ ಲೈಬ್ರೆರಿಗೆ ಒಪ್ಪಿಸಲ್ಪಟ್ಟಿತು, ಅಲ್ಲಿಯೇ ಅದು ಉಳಿದದೆ. ಈ ಪಪೈರಸ್‌ ಅವಶೇಷದ ಮೂಲ್ಯವು ಅದರ ಆಯುಸ್ಸಿನೊಂದಿಗೆ ಜೋಡಿಸಲ್ಪಟ್ಟಿದೆ. ಪಂಡಿತರು ಅದರ ಕಾಲ ನಿರ್ದೇಶವನ್ನು ಸಾ.ಶ.ಪೂ. ಎರಡನೆಯ ಅಥವಾ ಒಂದನೆಯ ಶತಮಾನಕ್ಕೆ ಮಾಡಿದ್ದಾರೆ, ಹೀಗೆ ಅದು ಕಂಡುಹಿಡಿಯಲ್ಪಟ್ಟವುಗಳಲ್ಲಿ ಅತ್ಯಂತ ಪುರಾತನ ಹೀಬ್ರು ಹಸ್ತಪ್ರತಿ ಹಾಳೆಯಾಗಿತ್ತು.

ಡಾ. ಟ್ರೆವರ್‌ ನ್ಯಾಶ್‌ ಪಪೈರಸ್‌ನ ಒಂದು ಕಲರ್‌ ಸ್ಲೈಡನ್ನು ತನ್ನ ಮುಂದಿದ್ದ ಸುರುಳಿಯೊಂದಿಗೆ ಹೋಲಿಸಿದಾಗ, ವ್ಯಕ್ತಿಪರ ಅಕ್ಷರಗಳ ರೂಪ ಮತ್ತು ಆಕಾರಗಳ ವಿವರಗಳಿಗೆ ಬಹಳ ಜಾಗ್ರತೆಯ ಗಮನಕೊಟ್ಟರು. ನಿಸ್ಸಂದೇಹವಾಗಿ, ಅವು ತೀರಾ ಸಮಾನರೂಪದ್ದಾಗಿದ್ದವು. ಹಾಗಿದ್ದರೂ, ಈ ದೊಡ್ಡ, ಹೊಸತಾಗಿ ಕಂಡುಹಿಡಿಯಲ್ಪಟ್ಟ ಹಸ್ತಪ್ರತಿಯು, ನ್ಯಾಶ್‌ ಪಪೈರಸ್‌ನಷ್ಟು ಪುರಾತನದ್ದಾಗಿರುವ ಸಂಭವನೀಯತೆಯು ನಂಬಲಾಗದ್ದಾಗಿ ಅವರಿಗೆ ತೋರಿಬಂತು. ಆದರೂ, ತಕ್ಕ ಸಮಯದಲ್ಲಿ, ಅವರ ವಿವೇಚನಾ ಶ್ರೇಣಿಯು ಸರಿಯೆಂಬದಾಗಿ ರುಜುವಾಯಿತು. ಯೆಶಾಯನ ಮೃತ ಸಮುದ್ರ ಸುರುಳಿಯು ಸಾ.ಶ.ಪೂ. ಎರಡನೆಯ ಶತಮಾನದ್ದಾಗಿತ್ತು!

ನ್ಯಾಶ್‌ ಪಪೈರಸ್‌ನ ಒಳವಿಷಯಗಳು

ನ್ಯಾಶ್‌ ಪಪೈರಸ್‌ನ ಮೂಲಪಾಠದ ವಿಶೇಷ್ಲಣೆಯು ಮುಂದೆ ಪ್ರಕಟಿಸಿದ್ದೇನಂದರೆ ಅದರ ಎಲ್ಲಾ 24 ಸಾಲುಗಳು ಅಪೂರ್ಣವಾಗಿವೆ, ಎರಡೂ ಕೊನೆಯಲ್ಲಿ ಒಂದು ಶಬ್ದ ಅಥವಾ ಅಕ್ಷರಗಳು ಕಳೆದುಹೋಗಿವೆ. ಅದರಲ್ಲಿ ವಿಮೋಚನಕಾಂಡ 20 ನೆಯ ಅಧ್ಯಾಯದ ದಶಾಜ್ಞೆಗಳ ಅಂಶಗಳು ಅಡಕವಾಗಿವೆ, ಧರ್ಮೋಪದೇಶಕಾಂಡ 5 ನೆಯ ಮತ್ತು 6 ನೆಯ ಅಧ್ಯಾಯದ ಕೆಲವು ವಚನಗಳೂ ಅದರಲ್ಲಿವೆ. ಹೀಗೆ ಇದೊಂದು ಕ್ರಮದ ಬೈಬಲ್‌ ಹಸ್ತಪ್ರತಿಯಲ್ಲ, ಬದಲಾಗಿ ಒಂದು ವಿಶೇಷ ಉದ್ದೇಶದಿಂದ ಕೂಡಿದ ಮಿಶ್ರಿತ ಮೂಲಪಾಠವಾಗಿದೆ. ಅದು ದೇವರ ಕಡೆಗಿನ ತನ್ನ ಕರ್ತವ್ಯವನ್ನು ಒಬ್ಬ ಯೆಹೂದ್ಯನಿಗೆ ನೆನಪಿಸಲಿಕ್ಕಾಗಿದ್ದ ಒಂದು ಬೋಧನಾ ಸಂಕಲನದ ಭಾಗವಾಗಿತ್ತೆಂಬದು ವ್ಯಕ್ತ. ಶೆಮಾ ಎಂದು ಕರೆಯಲ್ಪಟ್ಟ, ಧರ್ಮೋಪದೇಶಕಾಂಡ 6:4 ರೊಂದಿಗೆ ಪ್ರಾರಂಭಿಸುವ ಒಂದು ಶಾಸ್ತ್ರವಚನದ ಭಾಗವು ಪದೇ ಪದೇ ಪುನುರುಚ್ಚರಿಸಲ್ಪಟ್ಟಿದೆ. ಆ ವಚನವು ಓದುವುದು: “ಇಸ್ರಾಯೇಲ್ಯರೇ, ಕೇಳಿರಿ; ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು.”

ಚತುರಕ್ಷರಿಯಾದ YHWH, “ಯೆಹೋವ,” ಈ ವಚನದಲ್ಲಿ ಎರಡು ಸಾರಿ, ಪಪೈರಸ್‌ನ ಕೊನೆಯ ಸಾಲಿನಲ್ಲಿ ಗೋಚರಿಸಿದೆ, ಮತ್ತು ಅದು ಬೇರೆ ಐದು ಸ್ಥಳಗಳಲ್ಲೂ ಸಂಭವಿಸುತ್ತದೆ. ಒಮ್ಮೆ ಅದು ತನ್ನ ಮೊದಲಕ್ಷರವನ್ನು ಕಳಕೊಂಡೂ ಗೋಚರಿಸಿದೆ.

ಶೆಮಾ ವಿಶಿಷ್ಟವಾಗಿ, “ದೇವರ ಏಕೈಕ ವ್ಯಕ್ತಿತ್ವವನ್ನು” ಒತ್ತಿಹೇಳಲಿಕ್ಕಾಗಿ ಇತ್ತು. ಯೆಹೂದ್ಯ ಟಾಲ್ಮೂಡ್‌ (ಬರ್‌ಕಟ್‌ 19ಎ)ಗೆ ಅನುಸಾರವಾಗಿ, ಸಮಾಪ್ತಿಯ ಶಬ್ದವಾದ ’ಇ.ಚಾಡಹ್‌’ (“ಒಬ್ಬನೇ”) ಎಂಬದು, “ಪ್ರತಿಯೊಂದು ಉಚ್ಚಾರಾಂಶವನ್ನು ಮುಂದಿಡುವ ಮೂಲಕ ಅದು ಘೋಷಿಸಲ್ಪಡುವಾಗಲೆಲ್ಲಾ ವಿಶೇಷವಾಗಿ ಒತ್ತಿಹೇಳಲಿಕ್ಕಾಗಿ ಇತ್ತು.” (ಡಬ್ಲ್ಯೂ. ಒ. ಇ. ಓಸ್ಟರ್ಲಿ ಮತ್ತು ಜಿ. ಎಚ್‌. ಬಾಕ್ಸ್‌) ದೇವರಿಗೆ ನಿರ್ದೇಶಿಸುವಾಗ, ಈ ಲಂಬಿಸಲ್ಪಟ್ಟ ’ಇ.ಚಾಡಹ್‌’ ಆತನ ಅಸದೃಶತೆಯನ್ನು ಸಹ ಘೋಷಿಸಿತ್ತು.

ಇಂದು ನ್ಯಾಶ್‌ ಪಪೈರಸ್‌ಗೆ ಅನೇಕ ಸಮಾನಸ್ಥ ಪ್ರತಿಗಳಿವೆ, ವಿಶೇಷವಾಗಿ ಕುಮ್ರಾನ್‌ಗೆ ಸಮೀಪದ ಮೃತ ಸಮುದ್ರ ಕಿನಾರೆಗಳಲ್ಲಿರುವ ಗವಿಗಳಲ್ಲಿ ದೊರೆತವುಗಳಲ್ಲಿ. ಇವುಗಳಲ್ಲಿ ಹೆಚ್ಚಿನ ಹಸ್ತಪ್ರತಿಗಳು ಸಾ.ಶ.ಪೂ. ಒಂದನೆಯ ಮತ್ತು ಎರಡನೆಯ ಶತಮಾನಗಳ ಕಾಲದ್ದಾಗಿವೆಂಬದನ್ನು ಸವಿಸ್ತಾರ ವಿಶೇಷ್ಲಣೆಯು ದೃಢೀಕರಿಸಿದೆ.a ಅದೀಗ ಅತ್ಯಂತ ಪುರಾತನ-ಜ್ಞಾತ ಹೀಬ್ರು ಹಸ್ತಪ್ರತಿಯಾಗಿರದಿದ್ದರೂ, ನ್ಯಾಶ್‌ ಪಪೈರಸ್‌ ಇನ್ನೂ ಮಹಾಸಕ್ತಿಭರಿತವಾಗಿದೆ. ಅದು ಈಜಿಪ್ಟಿನಲ್ಲಿ ಕಂಡುಹಿಡಿಯಲ್ಪಟ್ಟ ಅಷ್ಟು ಪುರಾತನ ಕಾಲದ ಒಂದೇ ಹೀಬ್ರು ಹಸ್ತಪ್ರತಿಯಾಗಿ ಉಳಿಯುತ್ತದೆ. (w92 12/15)

[ಅಧ್ಯಯನ ಪ್ರಶ್ನೆಗಳು]

a  ಎಪ್ರಿಲ್‌ 15, 1991 ರ ವಾಚ್‌ಟವರ್‌, ಪುಟ 10-13 ನೋಡಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ