ನಮ್ಮ ಮಹಾ ಸೃಷ್ಟಿಕರ್ತನು ಮತ್ತು ಆತನ ಕಾರ್ಯಗಳು
ಎಷ್ಟೊಂದು ಮಹಾ! ಈಗಸ್ವು ಅಥವಾ ನೈಆ್ಯಗರದ ಗುಡುಗಾಡುತ್ತಿರುವ ಜಲಪಾತಗಳು, ಅರಿಸೋನ ಯಾ ಹವಾಯಿಯ ಮಹತ್ತಾದ ಕಮ್ಮರಿಹಳ್ಳಗಳು, ನಾರ್ವೆ ಅಥವಾ ನ್ಯೂ ಸೀಲ್ಯಾಂಡಿನ ಫ್ಯುಯೋರ್ಡ್ ಕೊಲ್ಲಿಗಳು—ಈ ನೈಸರ್ಗಿಕ ಅದ್ಭುತಗಳು ಎಂಥ ಶ್ಲಾಘನೆಯ ಒರಲುಗಳಿಗೆ ಕರೆಕೊಡುತ್ತವೆ! ಆದರೆ ಅವುಗಳು ನಿಜವಾಗಿಯೂ ಪ್ರಕೃತಿಮಾತೆ ಎಂದೆಣಿಸುವಾಕೆಯ ಕೇವಲ ಆಕಸ್ಮಿಕ ಉತ್ಪಾದನೆಗಳೋ? ಅಲ್ಲ, ಅವು ಅದಕ್ಕಿಂತಲೂ ಎಷ್ಟೋ ಹೆಚ್ಚು! ಅವು ಒಬ್ಬ ಮಹಾ ನಿರ್ಮಾಣಿಕನ, ಪ್ರೀತಿಯುಳ್ಳ ಸ್ವರ್ಗೀಯ ತಂದೆಯ ಭಯಚಕಿತಗೊಳಿಸುವ ಕೃತ್ಯಗಳಾಗಿವೆ, ಅವನ ಕುರಿತು ಜ್ಞಾನಿ ರಾಜ ಸೊಲೊಮೋನನು ಬರೆದದ್ದು: “ಒಂದೊಂದು ವಸ್ತುವನ್ನು ಸಮಯಕ್ಕೆ ಸರಿಯಾಗಿ ಅಂದವಾಗಿ ನಿರ್ಮಿಸಿದ್ದಾನೆ. ಇದಲ್ಲದೆ ಮನುಷ್ಯನ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ; ಆದರೂ ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.” (ಪ್ರಸಂಗಿ 3:11) ನಮ್ಮ ಸೃಷ್ಟಿಕರ್ತನು ವಿಶ್ವವನ್ನು ಯಾವುದರಿಂದ ತುಂಬಿಸಿದ್ದಾನೋ ಆ ಎಲ್ಲಾ ಮಹಿಮಾಯುಕ್ತ ಕಾರ್ಯಗಳನ್ನು ಶೋಧಿಸಲು ಮಾನವರಿಗೆ ಅನಂತಕಾಲವೇ ತಗಲುವುದು ಎಂಬದು ಸತ್ಯ.
ಎಂತಹ ಒಬ್ಬ ಮಹಾ ಸೃಷ್ಟಿಕರ್ತನು ನಮಗಿದ್ದಾನೆ! ಮತ್ತು ಈ ಸರ್ವಶಕ್ತನಾದ ದೇವರು “ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತಾಡಿದ್ದಾನೆ. ಈತನನ್ನು ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು, ಈತನ ಮೂಲಕವೇ ಜಗತ್ತನ್ನು ಉಂಟುಮಾಡಿದನು.” (ಇಬ್ರಿಯ 1:2) ಈ ಮಗನಾದ ಯೇಸು ಕ್ರಿಸ್ತನು, ತನ್ನ ತಂದೆಯ ಅಂದವಾದ ಸೃಷ್ಟಿಗಳನ್ನು ಗಣನೆಗೆ ತಂದಿದ್ದನು. ತನ್ನ ತಂದೆಯ ಉದ್ದೇಶಗಳನ್ನು ಉದಾಹರಿಸುವುದಕ್ಕಾಗಿ ಮತ್ತು ತನಗೆ ಕಿವಿಗೊಡುವವರಿಗೆ ಉತ್ತೇಜನದ ಮಾತುಗಳನ್ನಾಡುವುದಕ್ಕಾಗಿ ಅವನು ಆಗಿಂದಾಗ್ಯೆ ಅವಕ್ಕೆ ನಿರ್ದೇಶಿಸಿದ್ದನು. (ಮತ್ತಾಯ 6:28-30; ಯೋಹಾನ 4:35, 36) ಸೃಷ್ಟಿಯ ವಿಸ್ಮಯಗಳು “ದೇವರ ಮಾತಿನಿಂದ ನಿರ್ಮಿತವಾದವೆಂದು” ಅನೇಕರು “ನಂಬಿಕೆಯಿಂದಲೇ” ತಿಳಿದುಕೊಂಡಿದ್ದಾರೆ. (ಇಬ್ರಿಯ 11:3) ನಮ್ಮ ದೈನಂದಿನದ ಜೀವಿತವು ಅಂಥ ನಂಬಿಕೆಯನ್ನು ಪ್ರತಿಬಿಂಬಿಸಬೇಕು.—ಯಾಕೋಬ 2:14, 26.
ನಮ್ಮ ದೇವರ ಸೃಷ್ಟಿಕ್ರಿಯೆಗಳು ಖಂಡಿತವಾಗಿಯೂ ಮಹತ್ತಾದವುಗಳು. ಅವು ಆಶ್ಚರ್ಯಕರವಾಗಿ ಆತನ ವಿವೇಕ, ಆತನ ಶಕ್ತಿ, ಆತನ ನೀತಿ, ಮತ್ತು ಆತನ ಪ್ರೀತಿಯನ್ನು ಪ್ರತಿಬಿಂಬಿಸುತ್ತವೆ. ದೃಷ್ಟಾಂತಕ್ಕಾಗಿ, ಆತನು ನಮ್ಮ ಭೂಮಿಯನ್ನು ಓಲುವಂತೆ ಮಾಡಿ ಸೂರ್ಯನ ಸುತ್ತ ಅದು ಆವರ್ತಿಸುವಂತೆ ಇಟ್ಟದ್ದರಿಂದ, ಆತನ ಭವಿಷ್ಯತ್ತಿನ ಸೃಷ್ಟಿಯಾದ ಮನುಷ್ಯನು ಋತುಗಳ ಉಲ್ಲಾಸಕರ ಉದಮ್ಗದಲ್ಲಿ ಆನಂದಿಸ ಶಕ್ತನಿದ್ದನು. ದೇವರು ಹೇಳಿದ್ದು: “ಭೂಮಿಯು ಇರುವ ತನಕ ಬಿತ್ತನೆಯೂ ಕೊಯಿಲೂ, ಚಳಿಯೂ ಸೆಕೆಯೂ, ಬೇಸಿಗೆಕಾಲವೂ ಹಿಮಕಾಲವೂ, ಹಗಲೂ ಇರುಳೂ, ಇವುಗಳ ಕ್ರಮ ತಪ್ಪುವದೇ ಇಲ್ಲ.” (ಆದಿಕಾಂಡ 8:22) ಅದಲ್ಲದೆ, ದೇವರು ನಮ್ಮ ಭೂಮಿಯನ್ನು ಬೆಲೆಯುಳ್ಳ ಖನಿಜ ವಸ್ತುಗಳ ಸಂಗ್ರಹದಿಂದ ತುಂಬಿಸಿದ್ದಾನೆ. ವಿಶೇಷವಾಗಿ, ತದನಂತರ ಭೂಮಂಡಲದ ಎಲ್ಲಾ ಜೀವಿಗಳಿಗೆ ಅತ್ಯಾವಶ್ಯಕವಾದ ಪೂರಕವಾಗಿ ಮತ್ತು ಆಧಾರವಾಗಿ ಪರಿಣಮಿಸಲಿದ್ದ ನೀರನ್ನು, ವಿಪುಲವಾಗಿ ಒದಗಿಸಿಕೊಟ್ಟನು.
ಪ್ರತಿಯೊಂದು ಸಾವಿರಾರು ವರ್ಷ ಉದ್ದವಿದ್ದ ಆ ಆರು ‘ಸೃಷ್ಟಿದಿನಗಳ’ ಕ್ರಮಾನುಗತಿಯಲ್ಲಿ, “ದೇವರಾತ್ಮವು” ಮಾನವನ ನಿವಾಸಕ್ಕಾಗಿ ಭೂಮಿಯನ್ನು ತಯಾರಿಸಲು ತೊಡಗಿತು. ಯಾವುದರಿಂದಾಗಿ ನಾವು ಕಾಣಶಕ್ತರೋ ಆ ಬೆಳಕು, ನಾವು ಉಸಿರಾಡುವ ಗಾಳಿ, ನಾವು ವಾಸಿಸುವಂಥ ಒಣ ನೆಲ, ಸಸ್ಯಗಳು, ಹಗಲು ಮತ್ತು ರಾತ್ರಿಯ ಕ್ರಮಾನುಗತಿ, ಮೀನು, ಪಕ್ಷಿಗಳು ಮತ್ತು ಪಶುಗಳು—ಎಲ್ಲವೂ ಮಾನವನ ಸೇವೆಗಾಗಿ ಮತ್ತು ಆನಂದಕ್ಕಾಗಿ ನಮ್ಮ ಮಹಾ ನಿರ್ಮಾಣಿಕನಿಂದ ಅನುಕ್ರಮವಾಗಿ ನಿರ್ಮಿಸಲ್ಪಟ್ಟವು. (ಆದಿಕಾಂಡ 1:2-25) ನಿಶ್ಚಯವಾಗಿಯೂ, ಹೀಗೆಂದು ಉದ್ಗರಿಸುವುದರಲ್ಲಿ ನಾವು ಕೀರ್ತನೆಗಾರನೊಂದಿಗೆ ಜತೆಗೂಡಬಲ್ಲೆವು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ.”—ಕೀರ್ತನೆ 104:24.
ದೇವರ ನಾಯಕಕೃತಿ ಸೃಷ್ಟಿ
ಆರನೆಯ ಸೃಷ್ಟಿ “ದಿನ” ಕೊನೆಗೊಳ್ಳಲು ಸಮೀಪವಾದಾಗ, ದೇವರು ಮನುಷ್ಯನನ್ನು ಮತ್ತು ಅನಂತರ ಅವನ ಸಹಕಾರಿಣಿ, ಸ್ತ್ರೀಯನ್ನು ನಿರ್ಮಿಸಿದನು. ಭೂಮಿಯ ಸೃಷ್ಟಿಗೆ ಎಂತಹ ಕೌಶಲ್ಯಯುಕ್ತ ಪರಮಾವಧಿಯಿದು, ಅದಕ್ಕೆ ಮುಂಚಿನ ಎಲ್ಲಾ ಭೌತಿಕ ಸೃಷ್ಟಿಗಿಂತಲೂ ಎಷ್ಟೋ ಹೆಚ್ಚು ಆಶ್ಚರ್ಯಕರವಾದದ್ದು! ಕೀರ್ತನೆ 115:16 ನಮಗೆ ತಿಳಿಸುವುದು: “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ.” ಇದಕ್ಕನುಸಾರವಾಗಿ, ಯೆಹೋವನು ಮನುಷ್ಯಾತ್ಮಗಳಾದ ನಮ್ಮನ್ನು, ಭೂಮಿಯ ಮೇಲಣ ಆತನ ಪ್ರಾರಂಭದ ಸೃಷ್ಟಿಕ್ರಿಯೆಯಲ್ಲಿ ಅನಂದಿಸುವಂತೆ ಮತ್ತು ಬಳಸುವಂತೆ ರಚಿಸಿದ್ದಾನೆ. ನಮ್ಮ ಸುತ್ತಲಿನ ವರ್ಣರಂಜಿತ ಲೋಕವನ್ನು ವೀಕ್ಷಿಸಬಲ್ಲ—ಉತ್ಕ್ರಷ್ಟ ಕ್ಯಾಮೆರಕ್ಕಿಂತಲೂ ಹೆಚ್ಚು ಜಟಿಲವಾದ—ನಮ್ಮ ನೇತ್ರಗಳಿಗಾಗಿ ನಾವೆಷ್ಟು ಕೃತಜ್ಞರಾಗಿರಬೇಕು! ಸಂಭಾಷಣೆಯನ್ನು, ಸಂಗೀತವನ್ನು, ಪಕ್ಷಿಗಳ ಇಂಪಾದ ಗಾಯನವನ್ನು ಅನಂದಿಸಲು ಸಹಾಯಕವಾದ—ಯಾವುದೇ ಮಾನವ ನಿರ್ಮಿತ ದ್ವನಿಫಲಕಕ್ಕಿಂತಲೂ ಹೆಚ್ಚು ಉತ್ತಮವಾದ—ನಮ್ಮ ಕಿವಿಗಳು ನಮಗಿವೆ. ಸರ್ವತೋಮುಖವಾದ ನಾಲಗೆಯೂ ಸೇರಿರುವ, ಒಳಗೆ-ಕಟ್ಟಲ್ಪಟ್ಟ ಮಾತಾಡುವ ಯಂತ್ರ ರಚನೆ ನಮಗಿದೆ. ನಾಲಗೆಯ ರಸನೇಂದ್ರಿಯವು, ನಮ್ಮ ಘ್ರಾಣೇಂದ್ರಿಯದೊಂದಿಗೆ ಜತೆಗೂಡಿ, ಅಗಣಿತ ವೈವಿದ್ಯತೆಯ ತಿಂಡಿತಿನಸುಗಳನ್ನು ಸವಿಯುವುದರಲ್ಲಿ ಆನಂದವನ್ನು ಸಹ ಒದಗಿಸುತ್ತದೆ. ಒಂದು ಪ್ರೀತಿಯುಳ್ಳ ಹಸ್ತದ ಸ್ಪರ್ಶವನ್ನು ನಾವೆಷ್ಟು ಗಣ್ಯಮಾಡುತ್ತೇವೆ! ನಿಶ್ಚಯವಾಗಿಯೂ, ಕೀರ್ತನೆಗಾರನಂತೆ ನಾವೂ ನಮ್ಮ ಸೃಷ್ಟಿಕರ್ತನಿಗೆ ಉಪಕಾರ ಹೇಳಬಲ್ಲೆವು, ಅವನಂದದ್ದು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.”—ಕೀರ್ತನೆ 139:14.
ನಮ್ಮ ನಿರ್ಮಾಣಿಕನ ಕೃಪೆ
ಕೀರ್ತನೆಗಾರನು ಬರೆದದ್ದು: “ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. . . . ಮಹತ್ಕಾರ್ಯಗಳನ್ನು ನಡಿಸುವದಕ್ಕೆ ಆತನೊಬ್ಬನೇ ಶಕ್ತನು; ಆತನ ಕೃಪೆಯು ಶಾಶ್ವತವಾದದ್ದು.” (ಕೀರ್ತನೆ 136:1-4) ಆ ಕೃಪೆಯು, ನಾವೀಗಲೇ ವರ್ಣಿಸಿದ ಎಲ್ಲಾ ಸೃಷ್ಟಿಕ್ರಿಯೆಗಿಂತ ಎಷ್ಟೋ ಮಹತ್ತಾದ ಮಹತ್ಕಾರ್ಯಗಳನ್ನು ಮಾಡಲು ಆತನನ್ನೀಗ ಪ್ರೇರೇಪಿಸುತ್ತಿದೆ. ಹೌದು, ಭೌತಿಕ ವಿಷಯಗಳನ್ನು ನಿರ್ಮಿಸುವುದರಿಂದ ವಿಶ್ರಮಿಸುತ್ತಿರುವಾಗಲೂ, ಆತನು ಒಂದು ಆತ್ಮಿಕ ಮಟ್ಟದಲ್ಲಿ ನಿರ್ಮಿಸುತ್ತಾ ಇದ್ದಾನೆ. ಇದನ್ನು ಅವನು ಮಾಡುತ್ತಿರುವುದು ಆತನೆಡೆಗೆ ನೇರವಾಗಿ ಎಸೆಯಲ್ಪಟ್ಟ ಒಂದು ದುಷ್ಟ ಪಂಥಾಹ್ವಾನಕ್ಕೆ ಉತ್ತರವಾಗಿಯೇ. ಅದು ಹೇಗೆ?
ಮೊದಲನೆಯ ಪುರುಷ ಮತ್ತು ಸ್ತ್ರೀ ಒಂದು ಮಹಿಮೆಯುಳ್ಳ ಪರದೈಸವಾದ ಏದೆನಿನಲ್ಲಿ ಇಡಲ್ಪಟ್ಟಿದ್ದರು. ಆದರೂ, ಒಬ್ಬ ಪತಿತ ದೇವದೂತನಾದ ಸೈತಾನನು ತನ್ನನ್ನು ದೇವರಾಗಿ ಸ್ಥಾಪಿಸಿಕೊಂಡು, ಆ ಮಾನವ ಜೊತೆಯನ್ನು ಯೆಹೋವನ ವಿರುದ್ಧವಾಗಿ ದಂಗೆಯೊಳಗೆ ನಡಿಸಿದನು. ನ್ಯಾಯವಾಗಿ ದೇವರು ಅವರಿಗೆ ಮರಣ ಶಿಕ್ಷೆಯನ್ನು ವಿಧಿಸಿದನು, ಫಲಿತಾಂಶವಾಗಿ ಅವರ ಮಕ್ಕಳು, ಇಡೀ ಮಾನವ ಜಾತಿಯು, ಒಂದು ಪಾಪಪೂರ್ಣ, ಮೃತಪ್ರಾಯ ಸ್ಥಿತಿಯೊಳಗೆ ತರಲ್ಪಟ್ಟಿತು. (ಕೀರ್ತನೆ 51:5) ಪರೀಕ್ಷೆಯ ಕೆಳಗೆ ಯಾವ ಮನುಷ್ಯನೂ ದೇವರಿಗೆ ಸಮಗ್ರತೆಯನ್ನು ತೋರಿಸಶಕ್ತನಲ್ಲವೆಂದು ಸೈತಾನನು ವಾದಿಸುತ್ತಾ ದೇವರನ್ನು ಪಂಥಾಹ್ವಾನಕ್ಕೆ ಕರೆದನೆಂದು ಯೋಬನ ಕುರಿತಾದ ಬೈಬಲ್ ದಾಖಲೆಯು ಸೂಚಿಸುತ್ತದೆ. ಆದರೆ ಯೋಬನು, ಬೈಬಲ್ ಕಾಲದಲ್ಲಿ ಮತ್ತು ನಮ್ಮ ದಿನಗಳ ತನಕವೂ ಬೇರೆ ಅನೇಕ ನಂಬಿಗಸ್ತ ದೇವರ ಸೇವಕರು ಮಾಡಿದಂತೆ, ಸೈತಾನನನ್ನು ಒಬ್ಬ ಘೋರ ಸುಳ್ಳುಗಾರನಾಗಿ ರುಜುಪಡಿಸಿದನು. (ಯೋಬ 1:7-12; 2:2-5, 9, 10; 27:5) ಯೇಸುವು, ಒಬ್ಬ ಪರಿಪೂರ್ಣ ಮನುಷ್ಯನೋಪಾದಿ, ಎಣೆಯಿಲ್ಲದ ಸಮಗ್ರತೆ ಪಾಲನೆಯನ್ನು ಮಾದರಿಯಾಗಿ ತೋರಿಸಿದನು.—1 ಪೇತ್ರ 2:21-23.
ಹೀಗೆ ಯೇಸು, “ಇಹಲೋಕಾಧಿಪತಿಗೆ [ಸೈತಾನನಿಗೆ] ಸಮ್ಮಂಧಪಟ್ಟದ್ದು ಯಾವದೊಂದೂ ನನ್ನಲ್ಲಿಲ್ಲ,” ಎಂದು ಹೇಳಶಕ್ತನಾದನು. (ಯೋಹಾನ 14:30) ಆದರೂ, ಈ ದಿನಗಳ ತನಕವೂ, “ಲೋಕವೆಲ್ಲವೂ ಕೆಡುಕನ ವಶದಲ್ಲಿ ಬಿದಿದ್ದೆ.” (1 ಯೋಹಾನ 5:19) ಯೆಹೋವನ ಪರಮಾಧಿಕಾರದ ಯುಕ್ತತೆಯನ್ನು ವಾದಕ್ಕೆ ಕರೆದಾದ ಮೇಲೆ, ಮಾನವ ಕುಲದ ಮೇಲೆ ಅವನ ಸ್ವಂತ ಆಳಿಕೆಯು ಸಾಫಲ್ಯ ಹೊಂದಬಲ್ಲದೋ ಎಂದು ತೋರಿಸಲು ಸೈತಾನನಿಗೆ ಸುಮಾರು 6,000 ವರ್ಷಗಳನ್ನು ಕೊಡಲಾಗಿದೆ. ಅವನತಿಹೊಂದುತ್ತಿರುವ ಲೋಕ ಪರಿಸ್ಥಿತಿಗಳು ರುಜುಪಡಿಸುತ್ತಾ ಹೋಗುವಂತೆ, ಅವನು ಶೋಚನೀಯವಾಗಿ ಸೋತುಹೋಗಿದ್ದಾನೆ! ನಮ್ಮ ಪ್ರೀತಿಯುಳ್ಳ ತಂದೆಯಾದ ಯೆಹೋವ ದೇವರು ಶೀಘ್ರದಲ್ಲೇ ಈ ಭ್ರಷ್ಟ ಲೋಕ ವ್ಯವಸ್ಥೆಯನ್ನು ತೆಗೆದುಹಾಕಿ, ಭೂಮಿಯ ಮೇಲೆ ತನ್ನ ನ್ಯಾಯವಾದ ಸಾರ್ವಭೌಮತೆಯನ್ನು ಪ್ರತಿಪಾದಿಸುವನು. ಶಾಂತಿಭರಿತವಾದ, ನೀತಿಯುಳ್ಳ ಆಳಿಕೆಗಾಗಿ ಹಂಬಲಿಸುತ್ತಿರುವ ಮಾನವರಿಗೆ ಎಂತಹ ಸಂತೋಷಕರ ಪರಿಹಾರವನ್ನು ಅದು ತರುವುದು!—ಕೀರ್ತನೆ 37:9-11; 83:17, 18.
ಆದರೂ, ಅಷ್ಟು ಮಾತ್ರವೇ ಅಲ್ಲ! ಯೋಹಾನ 3:16 ರ ಯೇಸುವಿನ ಮಾತುಗಳ ಆಧಾರದಲ್ಲಿ, ದೇವರ ಕೃಪೆಯು ಇನ್ನಷ್ಟು ಹೆಚ್ಚಾಗಿ ಪ್ರದರ್ಶಿಸಲ್ಪಡಲಿರುವುದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” ಮಾನವಕುಲಕ್ಕೆ ಭೂಮಿಯ ಮೇಲೆ ನಿತ್ಯ ಜೀವದ ಪ್ರತೀಕ್ಷೆಯ ಈ ಪುನಃಸ್ಥಾಪನೆಯು ಹೊಸ ವಿಷಯಗಳನ್ನು ನಿರ್ಮಿಸುವುದರಲ್ಲಿ ಒಳಗೂಡಿದೆ. ಅವುಗಳು ಯಾವುವು? ನರಳುತ್ತಿರುವ ಮಾನವಕುಲಕ್ಕೆ ಅವು ಹೇಗೆ ಪ್ರಯೋಜನಕರವಾಗಿವೆ? ನಮ್ಮ ಮುಂದಿನ ಲೇಖನವು ತಿಳಿಸುವುದು.