“ಮದುವೆಯು ಎಲ್ಲರಲ್ಲಿಯೂ ಮಾನ್ಯವಾದದ್ದೆಂದು ಎಣಿಸಲ್ಪಡಲಿ”
“ಮದುವೆಯು ಎಲ್ಲರಲ್ಲಿಯೂ ಮಾನ್ಯವಾದದ್ದೆಂದು ಎಣಿಸಲ್ಪಡಲಿ. ವಿವಾಹ ಶಯ್ಯೆಯು ನಿಷ್ಕಲಂಕವಾಗಿರಲಿ.”—ಇಬ್ರಿಯರಿಗೆ 13:4, NW.
1. ಸಾಫಲ್ಯಯುಕ್ತ ಮದುವೆಯ ಕುರಿತು ಅನೇಕ ಜನರು ಏನನ್ನು ಕಲಿತಿದ್ದಾರೆ?
ಸುಲಭ ವಿವಾಹ ವಿಚ್ಛೇದನೆಯ ಈ ಯುಗದಲ್ಲೂ, ಲಕ್ಷಾಂತರ ಜನರು ಬಾಳುತ್ತಿರುವ ಮದುವೆಗಳನ್ನು ಆನಂದಿಸುತ್ತಾರೆ. ವ್ಯಕ್ತಿತ್ವ ಮತ್ತು ಹಿನ್ನೆಲೆಯಲ್ಲಿ ಭಿನ್ನತೆಗಳ ಮಧ್ಯೆಯೂ ಅವರು ಸಾಫಲ್ಯವನ್ನು ಗಳಿಸುವ ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಅಂಥ ಮದುವೆಗಳು ಯೆಹೋವನ ಸಾಕ್ಷಿಗಳಲ್ಲಿ ಕಂಡುಬರುತ್ತವೆ. ಹೆಚ್ಚಿನ ವಿದ್ಯಮಾನಗಳಲ್ಲಿ ಈ ದಂಪತಿಗಳು ಅವರಿಗಾಗಿದ್ದ ಏಳು ಬೀಳುಗಳನ್ನು, ಒಬ್ಬರ ವಿರುದ್ಧವಾಗಿ ಒಬ್ಬರಿಗೆ ದೂರಿಡುವ ಕಾರಣಗಳು ಕೂಡ ಇದ್ದವೆಂಬದನ್ನೂ ಒಪ್ಪುವರು. ಆದರೂ ಅವರು ದಾಂಪತ್ಯದ ಚಿಕ್ಕಪುಟ್ಟ ಕಷ್ಟಗಳನ್ನು ತಾಳಿಕೊಳ್ಳಲು ಮತ್ತು ತಮ್ಮ ವೈವಾಹಿಕ ನೌಕೆಯನ್ನು ಯೋಗ್ಯ ಪಥದಲ್ಲಿಡಲು ಕಲಿತರು. ಅವರು ಮುಂದುವರಿಯುವಂತೆ ಶಕ್ಯಮಾಡಿದ ಕೆಲವು ವಿಷಯಗಳು ಯಾವುವು?
2. (ಎ) ಒಂದು ಮದುವೆಯನ್ನು ಬಲಪಡಿಸುವ ಕೆಲವು ಸಕಾರಾತ್ಮಕ ವಿಷಯಗಳು ಯಾವುವು? (ಬಿ) ಮದುವೆಯನ್ನು ಬುಡಮೇಲು ಮಾಡಬಲ್ಲ ಕೆಲವು ವಿಷಯಗಳು ಯಾವುವು? (ಪುಟ 14 ರ ಚೌಕಟ್ಟು ನೋಡಿ.)
2 ಯಾರ ಕ್ರಿಸ್ತೀಯ ಮದುವೆಗಳು ಸಂತೋಷವುಳ್ಳದ್ದೂ ಬಾಳಿಕೆಯುಳ್ಳದ್ದೂ ಆಗಿದ್ದವೋ ಅಂಥ ಕೆಲವರಿಂದ ಕೊಡಲ್ಪಟ್ಟ ಹೇಳಿಕೆಗಳು ತೀರಾ ಪ್ರಕಟಪಡಿಸುವಂಥದ್ದಾಗಿವೆ. ಹದಿನಾರು ವರ್ಷಗಳಿಂದ ವಿವಾಹಿತನಾಗಿರುವ ಗಂಡನೊಬ್ಬನು ಹೇಳಿದ್ದು: “ಒಂದು ಸಮಸ್ಯೆಯೆದ್ದ ಯಾವುದೇ ಸಮಯದಲ್ಲಿ, ನಾವು ಒಬ್ಬರು ಇನ್ನೊಬ್ಬರ ದೃಷ್ಟಿಕೋನಕ್ಕೆ ಕಿವಿಗೊಡಲು ನಿಜವಾಗಿ ಪ್ರಯತ್ನವನ್ನು ಮಾಡಿದ್ದೇವೆ.” ಇದು ಹೆಚ್ಚಿನ ಮದುವೆಗಳಲ್ಲಿ ಘನೀಭವಿಸುವ ವಿಷಯಗಳಲ್ಲೊಂದನ್ನು ಎತ್ತಿಹೇಳುತ್ತದೆ—ಮುಚ್ಚುಮರೆಯಿಲ್ಲದ, ನಿಷ್ಕಪಟ ಮಾತುಕತೆ. ಮೂವತ್ತೊಂದು ವರ್ಷಗಳಿಂದ ಮದುವೆಯಾಗಿರುವ ಒಬ್ಬಾಕೆ ಪತ್ನಿ ಹೇಳಿದ್ದು: “ಕೈಗಳನ್ನು ಹಿಡಿಯುವುದು ಮತ್ತು ನಮ್ಮ ನಡುವಣ ಪ್ರಣಯವನ್ನು ಮುಂದರಿಸಲು ವಿನೋದಗಳನ್ನು ಮಾಡುತ್ತಿರುವುದು ಯಾವಾಗಲೂ ಒಂದು ಪ್ರಥಮತೆಯಾಗಿದೆ.” ಮತ್ತು ಅದು ಸಂಸರ್ಗದ ಇನ್ನೊಂದು ಹೆಚ್ಚಿನ ವೈಶಿಷ್ಟ್ಯವಾಗಿದೆ. ವಿವಾಹವಾಗಿ 40 ವರ್ಷಗಳು ಸಂದ ಇನ್ನೊಂದು ದಂಪತಿಗಳು, ಹಾಸ್ಯ ದರ್ಶನ ಶಕ್ತಿಯನ್ನು ಉಳಿಸಿಕೊಳ್ಳುವ, ತಮ್ಮೆಡೆಗೆ ತಾವೇ ಹಾಗೂ ಒಬ್ಬರೆಡೆಗೊಬ್ಬರು ನಗಲು ಶಕ್ತರಾಗಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಒಬ್ಬರು ಇನ್ನೊಬ್ಬರಲ್ಲಿರುವ ಉತ್ತಮತೆಯನ್ನು ಮತ್ತು ನಿಕೃಷ್ಟತೆಯನ್ನು ಕಾಣಲು ಶಕ್ತರಾಗಿರುವುದು ಆದರೂ, ನಿಷ್ಠೆಯುಳ್ಳ ಪ್ರೇಮವನ್ನು ತೋರಿಸುವುದು ಸಹಾಯಕಾರಿ ಎಂದೂ ಅವರಂದರು. ತಪ್ಪುಗಳನ್ನು ಒಪ್ಪಿಕೊಳ್ಳುವ ಮತ್ತು ಅನಂತರ ಕ್ಷಮೆ ಯಾಚಿಸುವ ಸಿದ್ಧಮನಸ್ಸನ್ನು ಗಂಡನು ತಿಳಿಸಿದನು. ಎಲ್ಲಿ ಬಿಟ್ಟುಕೊಡುವ ಭಾವವಿದೆಯೇ ಅಲ್ಲಿ, ವಿವಾಹವು ಮುರಿದುಹೋಗುವ ಬದಲಾಗಿ, ಹೊಂದಿಸಿಕೊಳ್ಳಲು ಸುಲಭವಾಗಿ ಮಣಿಯುವುದು.—ಫಿಲಿಪ್ಪಿ 2:1-4; 4:5, ಕಿಂಗ್ಡಂ ಇಂಟರ್ಲಿನಿಯರ್.
ಬದಲಾಗುತ್ತಿರುವ ವಾತಾವರಣ
3, 4. ಮದುವೆಯಲ್ಲಿ ದಾಂಪತ್ಯ ನಿಷ್ಠೆಯ ಕುರಿತಾದ ಮನೋಭಾವನೆಯಲ್ಲಿ ಯಾವ ಬದಲಾವಣೆಗಳು ಉಂಟಾಗಿವೆ? ನೀವು ಉದಾಹರಣೆಗಳನ್ನು ಕೊಡಬಲ್ಲಿರೋ?
3 ಕಳೆದ ಕೆಲವು ದಶಕಗಳಲ್ಲಿ, ಲೋಕದ ಎಲ್ಲಾ ಕಡೆ, ಮದುವೆಯಲ್ಲಿನ ದಾಂಪತ್ಯ ನಿಷ್ಠೆಯ ಸಂಬಂಧದಲ್ಲಿ ಗ್ರಹಣ ಶಕ್ತಿಗಳು ಬದಲಾಗಿವೆ. ಕೆಲವು ವಿವಾಹಿತ ಜನರು ನಂಬುವುದೇನಂದರೆ, ವ್ಯಭಿಚಾರಕ್ಕೆ ಒಂದು ಆಧುನಿಕ ನಯನುಡಿಯಾದ ಪ್ರಣಯ ಪ್ರಸಂಗದಲ್ಲಿ, ವಿಶೇಷವಾಗಿ ಇನ್ನೊಬ್ಬ ಜೊತೆಗಾರನಿಗೆ ಅದು ಗೊತ್ತಿದ್ದರೆ ಮತ್ತು ಸಮ್ಮತಿಯಿದ್ದರೆ, ಏನೂ ತಪ್ಪಿಲ್ಲ.
4 ಈ ಸನ್ನಿವೇಶದ ಕುರಿತು ಒಬ್ಬ ಕ್ರೈಸ್ತ ಮೇಲ್ವಿಚಾರಕನು ಹೇಳಿಕೆಯನ್ನಿತ್ತನು: “ನೈತಿಕ ನಿಯಮಾವಳಿಯಿಂದ ಜೀವಿಸಲು ಯಾವುದೇ ಗಂಭೀರ ಪ್ರಯತ್ನವನ್ನು ಲೋಕವು ಕಾರ್ಯತಃ ತ್ಯಜಿಸಿರುತ್ತದೆ. ಶುದ್ಧ ನಡತೆಯು ಹಳೇ-ಶೈಲಿಯದ್ದಾಗಿ ವೀಕ್ಷಿಸಲ್ಪಡುತ್ತದೆ.” ಪ್ರಮುಖ ರಾಜಕೀಯ, ಕ್ರೀಡೆ ಮತ್ತು ಮನೋರಂಜನಾ ವ್ಯಕ್ತಿಗಳು ಬೈಬಲಿನ ನೈತಿಕ ನಡವಳಿಕೆಯ ಮಟ್ಟವನ್ನು ಬಹಿರಂಗವಾಗಿ ಉಲ್ಲಂಘಿಸುತ್ತಾರೆ, ಮತ್ತು ಅಂಥ ಜನರು ಪ್ರಸಿದ್ಧ ಪುರುಷರಾಗಿ ಉಪಚರಿಸಲ್ಪಡುತ್ತಾರೆ. ಯಾವುದೇ ರೀತಿಯ ನೈತಿಕ ಕೆಟ್ಟತನ ಅಥವಾ ವಕ್ರಬುದ್ಧಿಗೆ ಕಾರ್ಯತಃ ಯಾವ ಕಳಂಕವೂ ಜೋಡಿಸಲ್ಪಟ್ಟಿಲ್ಲ. ಉಚ್ಛ-ದರ್ಜೆಯ ಜನರೆಂದೆಣಿಸಿಕೊಳ್ಳುವರಲ್ಲಿ ಪಾವಿತ್ರ್ಯ ಮತ್ತು ಸಮಗ್ರತೆಯು ಮೂಲ್ಯವೆನಿಸಲ್ಪಡುವುದು ಅತಿ ವಿರಳ. ಮತ್ತು, ‘ಒಂದಕ್ಕೆ ಅನ್ವಯಿಸುವ ಪ್ರಮಾಣ ಮತ್ತೊಂದಕ್ಕೂ ಅನ್ವಯಿಸುತ್ತದೆ’ ಎಂಬ ಸೂತ್ರದ ಮೇಲೆ, ಜನಸಮೂಹವು ಆ ಮಾದರಿಯನ್ನು ಹಿಂಬಾಲಿಸುತ್ತದೆ, ಮತ್ತು ದೇವರು ಯಾವುದನ್ನು ಖಂಡಿಸುತ್ತಾನೋ ಅದನ್ನು ಮನ್ನಿಸುತ್ತದೆ. ಅದು ಪೌಲನು ವ್ಯಕ್ತಪಡಿಸಿದ ಹಾಗೆಯೇ ಇದೆ: “ಅವರು ತಮ್ಮ ದುಸ್ಥಿತಿಗಾಗಿ ಕೊಂಚವೂ ಚಿಂತಿಸದೆ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿರುತ್ತಾರೆ.”—ಎಫೆಸ 4:19; ಜ್ಞಾನೋಕ್ತಿ 17:15; ರೋಮಾಪುರ 1:24-28; 1 ಕೊರಿಂಥ 5:11.
5. (ಎ) ವ್ಯಭಿಚಾರದ ಕುರಿತು ದೇವರ ದೃಷ್ಟಿಕೋನವೇನು? (ಬಿ) “ಹಾದರ” ಎಂಬ ಶಬ್ದದ ಬೈಬಲಿನ ಉಪಯೋಗದಿಂದ ಏನೆಲ್ಲಾ ಆವರಿಸಲ್ಪಟ್ಟಿದೆ?
5 ದೇವರ ಮಟ್ಟಗಳು ಬದಲಾಗಿರುವುದಿಲ್ಲ. ವಿವಾಹದ ಹೊರತು ಸಹಜೀವನ ನಡಿಸುವುದು ಹಾದರದಲ್ಲಿ ಜೀವಿಸುವುದೆಂದು ಆತನ ನಿಲುವಾಗಿದೆ. ಮದುವೆಯಲ್ಲಿ ದಾಂಪತ್ಯ ದ್ರೋಹವು ಮತ್ತೂ ವ್ಯಭಿಚಾರವಾಗಿದೆ.a ಅಪೊಸ್ತಲ ಪೌಲನು ಸ್ಪಷ್ಟವಾಗಿಗಿ ಹೇಳಿದ್ದು: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು . . . ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ. ನಿಮ್ಮಲ್ಲಿ ಕೆಲವರು ಅಂಥವರಾಗಿದಿರ್ದಿ; ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯ ಹೊಂದಿದಿರಿ.”—1 ಕೊರಿಂಥ 6:9-11.
6. ಪೌಲನ 1 ಕೊರಿಂಥ 6:9-11 ರ ಮಾತುಗಳಿಂದ ನಾವು ಯಾವ ಉತ್ತೇಜನವನ್ನು ಕಂಡುಕೊಳ್ಳಬಲ್ಲೆವು?
6 ಆ ವಚನದಲ್ಲಿನ ಒಂದು ಉತ್ತೇಜಕ ವಿಷಯವು, “ನಿಮ್ಮಲ್ಲಿ ಕೆಲವರು ಅಂಥವರಾಗಿದಿರ್ದಿ. ಆದರೂ . . . ತೊಳೆದುಕೊಂಡಿರಿ,” ಎಂಬ ಪೌಲನ ವ್ಯಕ್ತಪಡಿಸುವಿಕೆಯಾಗಿದೆ. ಹೌದು, ಗತಕಾಲದಲ್ಲಿ ಲೋಕದ ನೀತಿಗೆಟ್ಟ “ಅಪರಿಮಿತವಾದ ಪಟಿಂಗತನದಲ್ಲಿ” ನಡೆದ ಅನೇಕರು ತಮ್ಮ ಚಿತ್ತಸ್ವಾಸ್ಥ್ಯಕ್ಕೆ ಬಂದರು, ಕ್ರಿಸ್ತನನ್ನು ಮತ್ತು ಆತನ ಯಜ್ಞವನ್ನು ಸ್ವೀಕರಿಸಿದರು, ಮತ್ತು ತೊಳೆದು ಶುದ್ಧರಾಗಿ ಮಾಡಲ್ಪಟ್ಟರು. ನೈತಿಕ ಜೀವನಗಳನ್ನು ನಡಿಸುವ ಮೂಲಕ ಅವರು ದೇವರನ್ನು ಮೆಚ್ಚಿಸಲು ಆರಿಸಿಕೊಂಡರು ಮತ್ತು ಫಲಿತಾಂಶವಾಗಿ ಹೆಚ್ಚು ಸಂತೋಷವುಳ್ಳವರಾದರು.—1 ಪೇತ್ರ 4:3, 4.
7. “ಅನೈತಿಕತೆ” ಯ ತಿಳಿವಳಿಕೆಯಲ್ಲಿ ಯಾವ ತಿಕ್ಕಾಟವು ಅಸ್ತಿತ್ವದಲ್ಲಿದೆ, ಮತ್ತು ಬೈಬಲಿನ ದೃಷ್ಟಿಕೋನವೇನು?
7 ಇನ್ನೊಂದು ಕಡೆ, ಆಧುನಿಕ ಲೋಕದ ಅನೈತಿಕತೆಯ ಅರ್ಥವು ಎಷ್ಟು ನಿರ್ಬಲವಾಗಿ ಮಾಡಲ್ಪಟ್ಟಿದೆಯೆಂದರೆ ಅದು ದೇವರ ದೃಷ್ಟಿಕೋನಕ್ಕೆ ಪರಸ್ಪರ ಹೊಂದಿಕೆಯಾಗಿ ಇರುವುದಿಲ್ಲ. ಒಂದು ಶಬ್ದಕೋಶವು “ಅನೈತಿಕ” ವನ್ನು “ರೂಢಿಯಾದ ನೈತಿಕತೆಗೆ ವಿರುದ್ಧವಾದ” ದ್ದಾಗಿ ಅರ್ಥ ವಿವರಿಸುತ್ತದೆ. ಇಂದಿನ “ರೂಢಿಯಾದ ನೈತಿಕತೆಯು,” ಬೈಬಲ್ ಯಾವುದನ್ನು ಅನೈತಿಕತೆಯೆಂದು ಖಂಡಿಸುತ್ತದೋ ಆ ದಾಂಪತ್ಯ-ಪೂರ್ವ ಮತ್ತು ವಿವಾಹ-ಬಾಹ್ಯ ಲೈಂಗಿಕ ಸಂಬಂಧವನ್ನು ಹಾಗೂ ಸಲಿಂಗಿ ಕಾಮವನ್ನು ಮನ್ನಿಸುತ್ತದೆ. ಹೌದು, ಬೈಬಲ್ ದೃಷ್ಟಿಕೋನದಲ್ಲಿ ಅನೈತಿಕತೆಯು, ದೇವರ ನೈತಿಕ ನಿಯಮಾವಳಿಯ ಘೋರ ಉಲ್ಲಂಘನೆಯಾಗಿದೆ.—ವಿಮೋಚನಕಾಂಡ 20:14, 17; 1 ಕೊರಿಂಥ 6:18.
ಕ್ರೈಸ್ತ ಸಭೆಯು ಬಾಧಿಸಲ್ಪಟ್ಟಿದೆ
8. ಕ್ರೈಸ್ತ ಸಭೆಯಲ್ಲಿರುವವರನ್ನು ಅನೈತಿಕತೆಯು ಹೇಗೆ ಬಾಧಿಸಬಲ್ಲದು?
8 ಅನೈತಿಕತೆಯು ಇಂದು ಎಷ್ಟು ವ್ಯಾಪಕವಾಗಿದೆಯೆಂದರೆ ಕ್ರೈಸ್ತ ಸಭೆಯಲ್ಲಿರುವವರ ಮೇಲೆ ಸಹ ಅದು ಒತ್ತಡವನ್ನು ಹಾಕಬಲ್ಲದು. ಬಹು-ವ್ಯಾಪಕವಾದ, ನೀತಿಗೆಟ್ಟ ಟೀವೀ ಕಾರ್ಯಕ್ರಮಗಳು, ವೀಡಿಯೋಗಳು, ಅಶ್ಲೀಲ ವಾಚನ ಸಾಮಗ್ರಿಗಳ ಮೂಲಕವಾಗಿ ಅದು ಅವರನ್ನು ಪ್ರಭಾವಿಸಬಲ್ಲದು. ಕ್ರೈಸ್ತರಲ್ಲಿ ಕೇವಲ ಒಂದು ಚಿಕ್ಕ ಭಾಗವು ಬಾಧಿತರಾದಾಗ್ಯೂ, ಕ್ರೈಸ್ತನಿಗೆ ಅನುಚಿತವಾದ ಪಶ್ಚಾತ್ತಾಪರಹಿತ ನಡತೆಗಾಗಿ ಯೆಹೋವನ ಸಾಕ್ಷಿಗಳ ದರ್ಜೆಯಿಂದ ಹೆಚ್ಚಿನ ಬಹಿಷ್ಕಾರಗಳು, ಲೈಂಗಿಕ ಅನೈತಿಕತೆಯ ಒಂದು ತೆರಕ್ಕೆ ಸಂಬಂಧಿಸಿವೆ ಎಂಬದನ್ನು ಅಂಗೀಕರಿಸಲೇಬೇಕು. ವಾಸ್ತವಿಕ ಸಂಗತಿಯೇನಂದರೆ, ಕಟ್ಟಕಡೆಗೆ ಆ ಬಹಿಷ್ಕೃತರಲ್ಲಿ ಒಂದು ದೊಡ್ಡ ಭಾಗವು ತಮ್ಮ ತಪ್ಪುಗಳನ್ನು ಅರಿತುಕೊಳ್ಳುತ್ತಾರೆ, ಶುದ್ಧವಾದ ಜೀವನ ಮಾರ್ಗವನ್ನು ಪುನಃ ಆರಂಭಿಸುತ್ತಾರೆ, ಮತ್ತು ಸಮಯಾನಂತರ ಕ್ರೈಸ್ತ ಸಭೆಯೊಳಗೆ ಪುನಃ ಸೇರಿಸಲ್ಪಡುತ್ತಾರೆ.—ಹೋಲಿಸಿರಿ ಲೂಕ 15:11-32.
9. ಎಚ್ಚರವಿಲ್ಲದವರನ್ನು ಸೈತಾನನು ಹೇಗೆ ಕೌಶಲದಿಂದ ನಿರ್ವಹಿಸುತ್ತಾನೆ?
9 ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ತಿರುಗುತ್ತಾ, ಎಚ್ಚರವಾಗಿರದವರನ್ನು ನುಂಗಲು ಸಿದ್ಧನಾಗಿದ್ದಾನೆಂಬದಕ್ಕೆ ಯಾವ ಸಂಶಯವೂ ಇಲ್ಲ. ಅವನ ತಂತ್ರಗಳು ಅಥವಾ “ತಂತ್ರೋಪಾಯಗಳು,” ಎಚ್ಚರರಹಿತ ಕ್ರೈಸ್ತರನ್ನು ಪ್ರತಿ ವರ್ಷ ಬಲೆಯೊಳಗೆ ಸಿಕ್ಕಿಸುತ್ತವೆ. ಅವನ ಲೋಕದ ಸದಾ-ಸಮಕ್ಷ ಆತ್ಮವು, ಸ್ವಾರ್ಥ, ಸುಖವಿಲಾಸ ಮತ್ತು ವಿಷಯಲಂಪಟವಾಗಿದೆ. ಅದು ಶರೀರಾಭಿಲಾಷೆಗಳನ್ನು ತೃಪ್ತಿಗೊಳಿಸುತ್ತದೆ. ಅದು ಆತ್ಮಸಂಯಮವನ್ನು ತಿರಸ್ಕರಿಸುತ್ತದೆ.—ಎಫೆಸ 2:1, 2; 6:11, 12, ಪಾದಟಿಪ್ಪಣಿ. NW; 1 ಪೇತ್ರ 5:8.
10. ಯಾರು ಶೋಧನೆಗಳಿಗೆ ಗುರಿಯಾಗುತ್ತಾರೆ, ಮತ್ತು ಏಕೆ?
10 ಅನೈತಿಕತೆಯ ಶೋಧನೆಗಳಿಗೆ ಸಭೆಯಲ್ಲಿರುವ ಯಾರೆಲ್ಲಾ ಒಡ್ಡಲ್ಪಡ ಸಾಧ್ಯವಿದೆ? ಕ್ರೈಸ್ತರಲ್ಲಿ ಹೆಚ್ಚಿನವರು, ಅವರು ಸ್ಥಳೀಕ ಸಭೆಯ ಹಿರಿಯರು, ಸಂಚಾರ ಮೇಲ್ವಿಚಾರಕರು, ಬೆತೆಲ್ ನಿವಾಸಿಗಳು, ಪ್ರತಿ ತಿಂಗಳು ಅನೇಕ ತಾಸುಗಳನ್ನು ಸಾರುತ್ತಿರುವ ಪಯನೀಯರರು, ಕುಟುಂಬವನ್ನು ಪೋಷಿಸುತ್ತಿರುವ ಕಾರ್ಯಮಗ್ನ ಹೆತ್ತವರು, ಅಥವಾ ಸಮವಯಸ್ಕರ ಒತ್ತಡಗಳನ್ನು ಎದುರಿಸುತ್ತಿರುವ ಯುವ ಜನರು ಅವರಾಗಿರಬಹುದು. ಮಾಂಸಿಕ ಶೋಧನೆಯು ಎಲ್ಲರಿಗೆ ಸಾಮಾನ್ಯವಾಗಿದೆ. ಲೈಂಗಿಕ ಆಕರ್ಷಣೆಗಳು ಅತ್ಯಲ್ಪವಾಗಿ ನಿರೀಕ್ಷಿಸಲ್ಪಡುವಾಗಲೇ ಉದ್ರೇಕಗೊಳ್ಳಬಲ್ಲವು. ಹೀಗೆ ಪೌಲನು ಬರೆಯ ಶಕ್ತನಾದದ್ದು: “ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ. ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ.” ಅದು ವಿಷಾದಕರವು, ಆದರೂ ಜವಾಬ್ದಾರಿಕೆಯ ಸ್ಧಾನದಲ್ಲಿರುವ ಕೆಲವು ಕ್ರೈಸ್ತರು ಈ ಅನೈತಿಕತೆಯ ಪಾಶದೊಳಗೆ ಬಲಿಬಿದ್ದಿದ್ದಾರೆ.—1 ಕೊರಿಂಥ 10:12, 13.
ಎಳೆಯಲ್ಪಟ್ಟು, ಮರುಳು ಮಾಡಲ್ಪಟ್ಟದ್ದು
11-13. ಅನೈತಿಕತೆಗೆ ನಡಿಸಿದ ಕೆಲವು ಸನ್ನಿವೇಶಗಳು ಯಾವುವು?
11 ವ್ಯಭಿಚಾರ ಮತ್ತು ಹಾದರದ ಮೂರ್ಖ ಮಾರ್ಗಕ್ಕೆ ಕೆಲವರನ್ನು ನಡಿಸಿದ ಶೋಧನೆಗಳು ಮತ್ತು ಸನ್ನಿವೇಶಗಳು ಯಾವುವು? ಅವು ಅನೇಕವಿವೆ ಮತ್ತು ಸಂಕೀರ್ಣವಾಗಿವೆ ಮತ್ತು ಒಂದು ದೇಶ ಅಥವಾ ಸಂಸ್ಕೃತಿಯಿಂದ ಇನ್ನೊಂದಕ್ಕೆ ವಿಭಿನ್ನವಾಗಿರಬಹುದು. ಆದರೂ, ಅನೇಕ ದೇಶಗಳಲ್ಲಿ ಎದ್ದುತೋರುವ ನಿರ್ದಿಷ್ಟ ಮೂಲಭೂತ ಸನ್ನಿವೇಶಗಳಿವೆ. ದೃಷ್ಟಾಂತಕ್ಕೆ, ಮದ್ಯಸಾರ ಪಾನೀಯಗಳು ಸುಲಭವಾಗಿ ದೊರೆಯುವ ಗೋಷ್ಠಿಗಳನ್ನು ಕೆಲವರು ಏರ್ಪಡಿಸಿದರ್ದೆಂದು ವರದಿಸಲಾಗಿದೆ. ಇತರರು ಲೌಕಿಕ ಭಾವಪ್ರೇರಕ ಸಂಗೀತ ಮತ್ತು ಉದ್ರೇಕಕಾರಿ ನೃತ್ಯಗಳಿಂದ ಆಕರ್ಷಿಸಲ್ಪಟ್ಟಿದ್ದರು. ಆಫ್ರಿಕದ ಕೆಲವು ಕ್ಷೇತ್ರಗಳಲ್ಲಿ, ಐಶ್ವರ್ಯವಂತ ಪುರುಷರು—ಅವಿಶ್ವಾಸಿಗಳು—ಉಪಪತ್ನಿಗಳನ್ನು ಇಡುತ್ತಾರೆ; ಅದರಲ್ಲಿ ಅನೈತಿಕತೆಯು ಒಳಗೂಡಿದ್ದರೂ, ಅಂಥ ಪರಿಸ್ಥಿತಿಯಲ್ಲಿ ಕೆಲವು ಸ್ತ್ರೀಯರು ಆರ್ಥಿಕ ಭದ್ರತೆಯನ್ನು ಹುಡುಕುವ ಶೋಧನೆಗೆ ಒಳಗಾದರು. ಬೇರೆ ಕ್ಷೇತ್ರಗಳಲ್ಲಿ ಕ್ರೈಸ್ತ ಗಂಡಂದಿರು ಗನಿಗಳಲ್ಲಿ ಅಥವಾ ಬೇರೆಡೆಗಳಲ್ಲಿ ಒಂದು ಜೀವನೋಪಾಯವನ್ನು ಸಂಪಾದಿಸುವುದಕ್ಕಾಗಿ ತಮ್ಮ ಕುಟುಂಬಗಳನ್ನು ಬಿಟ್ಟು ಹೋಗಿದ್ದಾರೆ. ಆಗ ಅವರ ನಿಷ್ಠೆ ಅಥವಾ ನಂಬಿಗಸ್ತಿಕೆಯು, ಹಿಂದೆ ಸ್ವಂತ ಊರಲ್ಲಿ ಅನುಭವಿಸದ ರೀತಿಗಳಲ್ಲಿ ಅಥವಾ ಒಂದು ಬಿಂದುವಿನ ತನಕ ಶೋಧನೆಗೆ ಒಳಗಾದವು.
12 ವಿಕಸಿತ ದೇಶಗಳಲ್ಲಿ ಕೆಲವರು ವಿರುದ್ಧ ಲಿಂಗದ ಸದಸ್ಯರೊಂದಿಗೆ ಮತ್ತು ಹೆಚ್ಚಾಗಿ ಮೂರನೆಯ ವ್ಯಕ್ತಿಯು ಹಾಜರಿಲ್ಲದಿರುವಾಗ—ಡ್ರೈವಿಂಗ್ ಶಿಕ್ಷಕನೊಂದಿಗೆ ಕಾರ್ನಲ್ಲಿ ಕ್ರಮವಾಗಿ ಏಕಾಂತದಲ್ಲಿರುವಂತಹ ಸಂದರ್ಭಗಳಲ್ಲಿb—ಸೈತಾನನ ಪಾಶಕ್ಕೆ ಬಿದ್ದಿರುತ್ತಾರೆ. ಕುರಿಪಾಲನೆಯ ಭೇಟಿಗಳನ್ನು ಮಾಡುವ ಹಿರಿಯರು ಸಹ, ಸಹೋದರಿಯೊಬ್ಬಳಿಗೆ ಬುದ್ಧಿವಾದವನ್ನು ನೀಡುವಾಗ ಅವಳೊಂದಿಗೆ ಏಕಾಂತವಾಗಿರದಂತೆ ಜಾಗ್ರತೆ ವಹಿಸುವ ಅಗತ್ಯವಿದೆ. ಸಂಭಾಷಣೆಗಳು ಭಾವೋದ್ರೇಕದಿಂದ ತುಂಬಿದ್ದಾಗಿ ಪರಿಣಮಿಸಬಲ್ಲವು ಮತ್ತು ಎರಡೂ ಪಕ್ಷಗಳಿಗೆ ಪೇಚಾಟದ ಪರಿಸ್ಥಿತಿಯನ್ನು ಉಂಟುಮಾಡಬಹುದು.—ಹೋಲಿಸಿರಿ ಮಾರ್ಕ 6:7; ಅ. ಕೃತ್ಯಗಳು 15:40.
13 ಮೇಲೆ ತಿಳಿಸಿದ ಪರಿಸ್ಥಿತಿಗಳು ಕೆಲವು ಕ್ರೈಸ್ತರನ್ನು ತಮ್ಮ ಎಚ್ಚರಿಕೆಯನ್ನು ಕೆಳಗಿಳಿಸುವಂತೆ ಮತ್ತು ಅನೈತಿಕ ಕೃತ್ಯಗಳನ್ನು ನಡಿಸುವಂತೆ ಮಾಡಿದೆ. ಒಂದನೆಯ ಶತಮಾನದಲ್ಲಿ ನಡೆದಂತೆಯೇ, ಅವರು ತಮ್ಮನ್ನು ‘ತಮ್ಮಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವರಾಗು’ ವಂತೆ ಬಿಟ್ಟುಕೊಟ್ಟರು, ಅದು ಅವರನ್ನು ಪಾಪಕ್ಕೆ ನಡಿಸಿತು.—ಯಾಕೋಬ 1:14, 15; 1 ಕೊರಿಂಥ 5:1; ಗಲಾತ್ಯ 5:19-21.
14. ವ್ಯಭಿಚಾರದಲ್ಲಿ ಸ್ವಾರ್ಥವು ಒಂದು ಮೂಲಭೂತ ವಿಷಯವಾಗಿದೆಯೇಕೆ?
14 ಬಹಿಷ್ಕಾರಗಳ ಒಂದು ಜಾಗ್ರತೆಯ ಪರಿಗಣನೆಯು ತೋರಿಸುತ್ತದೇನಂದರೆ ಅನೈತಿಕ ಕೃತ್ಯಗಳಿಗೆ ಸಾಮಾನ್ಯವಾಗಿ ನಿರ್ದಿಷ್ಟ ಮೂಲಭೂತ ಕಾರಣಗಳಿವೆ. ಅಂಥ ವಿದ್ಯಮಾನಗಳಲ್ಲಿ ಒಂದು ರೀತಿಯ ಸ್ವಾರ್ಥಪರತೆ ಇದೆ. ನಾವದನ್ನು ಹೇಳುವುದೇಕೆ? ಯಾಕಂದರೆ ವ್ಯಭಿಚಾರದ ಸನ್ನಿವೇಶಗಳಲ್ಲಿ, ಕೆಲವು ನಿರ್ದೋಷ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ನೋವಾಗಲಿಕ್ಕಿರುತ್ತದೆ. ಅದು ನ್ಯಾಯಬದ್ಧ ಪತಿ ಅಥವಾ ಪತ್ನಿಯಾಗಿರಬಹುದು. ಮಕ್ಕಳು ಇದ್ದರೆ, ಅದು ಖಂಡಿತವಾಗಿಯೂ ಮಕ್ಕಳನ್ನು ನೋಯಿಸುತ್ತದೆ, ಯಾಕಂದರೆ ವ್ಯಭಿಚಾರವು ವಿವಾಹ ವಿಚ್ಛೇದದಲ್ಲಿ ಕೊನೆಗೊಂಡರೆ, ಒಕ್ಕಟ್ಟಿನ ಕುಟುಂಬದ ಭದ್ರತೆಯನ್ನು ಅಪೇಕ್ಷಿಸುವ ಮಕ್ಕಳು, ಅತಿ ದೊಡ್ಡ ಬೆಲೆಯನ್ನು ತೆರಬಹುದು. ವ್ಯಭಿಚಾರಿಯು ಮುಖ್ಯವಾಗಿ ಅವನ ಅಥವಾ ಅವಳ ಸ್ವಂತ ಸುಖವನ್ನು ಅಥವಾ ಲಾಭವನ್ನು ಯೋಚಿಸುವವನಾಗಿದ್ದಾನೆ. ಅದು ಸ್ವಾರ್ಥಪರತೆಯು.—ಫಿಲಿಪ್ಪಿ 2:1-4.
15. ವ್ಯಭಿಚಾರಕ್ಕೆ ನಡಿಸಿದ ಕೆಲವು ಕಾರಣಗಳು ಯಾವುದಾಗಿರಬಹುದು?
15 ಸಾಮಾನ್ಯವಾಗಿ ವ್ಯಭಿಚಾರವು ಬಲಹೀನತೆಯ ಒಂದು ದಿಢೀರ್ ಕೃತ್ಯವಲ್ಲ. ಮದುವೆಯಲ್ಲಿ ತಾನೇ, ಒಂದು ನಿಧಾನವಾಗಿ ಮುಂದುವರಿಯುವ, ಅತ್ಯಲ್ಪ ಅವನತಿಯು ಕೂಡಾ ತೋರಿಬಂದಿರಬಹುದು. ಪ್ರಾಯಶಃ ಮಾತುಕತೆಯು ನಿತ್ಯಗಟ್ಟಳೆಯ ಅಥವಾ ನೀರಸವಾದದ್ದಾಗಿ ಪರಿಣಮಿಸಿರಬಹುದು. ಪರಸ್ಪರ ಉತ್ತೇಜನವು ಅಲ್ಲಿ ಕೊಂಚವೇ ಇದ್ದಿರಬಹುದು. ಪ್ರತಿಯೊಬ್ಬನು ಇನ್ನೊಬ್ಬರನ್ನು ಗಣ್ಯಮಾಡಲು ತಪ್ಪಿರಬಹುದು. ಪತಿ-ಪತ್ನಿಯರು ಕೆಲವು ಸಮಯದಿಂದ ಒಬ್ಬರನ್ನೊಬ್ಬರು ಲೈಂಗಿಕವಾಗಿ ತೃಪ್ತಿಪಡಿಸುತ್ತಿರದೆ ಇರಬಹುದು. ಖಂಡಿತವಾಗಿಯೂ ವ್ಯಭಿಚಾರವು ಸಂಭವಿಸುವಾಗ, ದೇವರೊಂದಿಗೆ ಒಂದು ಕುಂದುತ್ತಿರುವ ಸಂಬಂಧವು ಕೂಡಾ ಇರುತ್ತದೆ. ಯೆಹೋವನು ನಮ್ಮೆಲ್ಲಾ ಆಲೋಚನೆಗಳ ಮತ್ತು ಕ್ರಿಯೆಗಳ ಅರುಹುಳ್ಳ ಜೀವಂತ ದೇವರಾಗಿ ಇನ್ನು ಮುಂದೆ ಸ್ಪಷ್ಟವಾಗಿಗಿ ಗ್ರಹಿಸಲ್ಪಡುವುದಿಲ್ಲ. ವ್ಯಭಿಚಾರಿಯ ಮನಸ್ಸಿನಲ್ಲಿ “ದೇವರು” ಬರಿಯ ಒಂದು ಶಬ್ದವಾಗಿ, ದಿನಚರ್ಯೆಯ ಒಂದು ಭಾಗವಲ್ಲದ ಭಾವನಾರೂಪದ ವ್ಯಕ್ತಿಯಾಗಿ ಸಹ ಪರಿಣಮಿಸಬಹುದು. ಆಗ ದೇವರ ವಿರುದ್ಧವಾಗಿ ಪಾಪ ಮಾಡುವುದು ಹೆಚ್ಚು ಸುಲಭವಾಗುತ್ತದೆ.—ಕೀರ್ತನೆ 51:3, 4; 1 ಕೊರಿಂಥ 7:3-5; ಇಬ್ರಿಯ 4:13; 11:27.
ಪ್ರತಿಭಟನೆಗೆ ಕೀಲಿಕೈ
16. ಅಪನಂಬಿಗಸ್ತನಾಗುವ ಶೋಧನೆಯನ್ನು ಕ್ರೈಸ್ತನು ಹೇಗೆ ಪ್ರತಿಭಟಿಸಬಹುದು?
16 ಯಾವನೇ ಕ್ರೈಸ್ತನು ಅವನು ಅಥವಾ ಅವಳು ಅಪನಂಬಿಗಸ್ತಿಕೆಯ ಪಥದಲ್ಲಿ ಶೋಧಿಸಲ್ಪಡುವುದನ್ನು ಕಂಡುಕೊಂಡಲ್ಲಿ, ಯಾವ ವಿಷಯಗಳನ್ನು ಪರಿಗಣನೆಗೆ ತಂದುಕೊಳ್ಳಬೇಕು? ಮೊತ್ತಮೊದಲಾಗಿ, ಬೈಬಲ್ ಸೂತ್ರಗಳ ಮೇಲೆ ದೃಢವಾಗಿ ಆಧರಿತವಾದ ಕ್ರೈಸ್ತ ಪ್ರೀತಿಯ ಅರ್ಥಕ್ಕೆ ಲಕ್ಷ್ಯಕೊಡಬೇಕಾಗಿದೆ. ದೈಹಿಕ ಅಥವಾ ಪ್ರಣಯ ಪ್ರೀತಿಯು ನಮ್ಮ ಭಾವನೆಗಳನ್ನು ಅಂಕೆಗೆ ತಕ್ಕೊಂಡು, ಇತರರಿಗೆ ಕಷ್ಟಾನುಭವವನ್ನು ತರುವ ಸ್ವಾರ್ಥತೆಯೊಳಗೆ ತರ್ವೆಯಾಗಿ ಬಿದ್ದುಬಿಡುವಂತೆ ಎಂದಿಗೂ ಬಿಟ್ಟುಕೊಡಬಾರದು. ಬದಲಿಗೆ, ಸನ್ನಿವೇಶವನ್ನು ಯೆಹೋವನ ದೃಷ್ಟಿಕೋನದಿಂದ ಪರಿಗಣಿಸಬೇಕು. ಸಭೆಯ ಪರಿಸರಕ್ಕೆ ಹೆಚ್ಚಿನ ಸಂಬಂಧದಲ್ಲಿ ಮತ್ತು ಆ ದುರ್ನಡತೆಯು ಅದರ ಮೇಲೆ ಮತ್ತು ಯೆಹೋವನ ನಾಮದ ಮೇಲೆ ತರುವ ಅಗೌರವದ ಮೇಲೆ ಅದು ವೀಕ್ಷಿಸಲ್ಪಡಬೇಕು. (ಕೀರ್ತನೆ 101:3) ವಿಷಯದ ಮೇಲೆ ಕ್ರಿಸ್ತನ ಮನಸ್ಸನ್ನು ಪಡೆಯುವ ಮೂಲಕ ಮತ್ತು ಅದಕ್ಕನುಸಾರ ಕ್ರಿಯೆಗೈಯುವ ಮೂಲಕ ಆಪತ್ತನ್ನು ದೂರವಿಡಬಹುದು. ನೆನಪಿಡಿರಿ, ಕ್ರಿಸ್ತನಂತಹ ನಿಸ್ವಾರ್ಥ ಪ್ರೀತಿಯು ಎಂದೂ ಸೋತುಹೋಗದು.—ಜ್ಞಾನೋಕ್ತಿ 6:32, 33; ಮತ್ತಾಯ 22:37-40; 1 ಕೊರಿಂಥ 13:5, 8.
17. ನಂಬಿಗಸ್ತಿಕೆಯ ಯಾವ ಬಲವರ್ಧಕ ಮಾದರಿಗಳು ನಮಗಿವೆ?
17 ಪ್ರತಿಭಟನೆಯ ಒಂದು ಕೀಲಿಕೈಯು, ಒಬ್ಬನ ನಂಬಿಕೆ ಮತ್ತು ಅವನ ಮುಂದಿರುವ ನಿರೀಕ್ಷೆಯ ದೃಶ್ಯವನ್ನು ಬಲಪಡಿಸುವುದೇ ಆಗಿದೆ. ಪೂರ್ವಕಾಲದ ನಂಬಿಗಸ್ತ ಪುರುಷ ಮತ್ತು ಸ್ತ್ರೀಯರು, ಮತ್ತು ಸ್ವತಃ ಯೇಸು ತಾನೇ ಬಿಟ್ಟುಹೋದ ಸಮಗ್ರತೆಯ ಮಹಾ ಮಾದರಿಯನ್ನು ಹೃದಯದಲ್ಲಿ ಅತ್ಯಂತ ಮೇಲಿನಲ್ಲಿ ಇಡುವುದೆಂದು ಇದರ ಅರ್ಥವಾಗಿದೆ. ಪೌಲನು ಬರೆದದ್ದು: “ಆದಕಾರಣ ಇಷ್ಟು ಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲೂ ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿರುವ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ. ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಆತನನ್ನು ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.” (ಇಬ್ರಿಯ 12:1-3) ವಿವಾಹದ ನೌಕೆಯನ್ನು ಚೂರುಪಾರುಗೊಳಿಸುವ ಬದಲಿಗೆ ವಿವೇಕಿಯಾದ ವ್ಯಕ್ತಿಯು ಅದನ್ನು ಪುನಃ ಪಡೆಯಲಿಕ್ಕಾಗಿ ಯಾವುದೇ ಕುಂದಕವನ್ನು ದುರುಸ್ತಿಮಾಡುವ ವಿಧಾನಗಳನ್ನು ಯೋಚಿಸಿ, ಹೀಗೆ ವಿಶ್ವಾಸಘಾತುಕತೆ ಮತ್ತು ಇಬ್ಬಗೆಯ ವಹಿವಾಟಿನ ಅಪಾಯವನ್ನು ವರ್ಜಿಸುವನು.—ಯೋಬ 24:15.
18. (ಎ) ವ್ಯಭಿಚಾರವನ್ನು ವರ್ಣಿಸುವಲ್ಲಿ ವಿಶ್ವಾಸಘಾತುಕತೆ ಎಂಬ ಶಬ್ದವು ತೀರಾ ಗಡುಸಲ್ಲವೇಕೆ? (ಬಿ) ಹರಕೆಗಳನ್ನು ಸಲ್ಲಿಸುವ ವಿಷಯವನ್ನು ದೇವರು ಹೇಗೆ ವೀಕ್ಷಿಸುತ್ತಾನೆ?
18 ಯಾವುದು ದ್ರೋಹವಾಗಿದೆಯೇ ಆ ವಿಶ್ವಾಸಘಾತುಕತೆಯು, ಅನೈತಿಕತೆಯ ಸಂಬಂಧದಲ್ಲಿ ತೀರಾ ಗಡುಸಾದ ಒಂದು ಶಬ್ದವೋ? ದ್ರೋಹವು ಒಂದು ವಿಶ್ವಾಸಪಾತ್ರತೆಯನ್ನು ಅಥವಾ ಭರವಸೆಯನ್ನು ಪರಿತ್ಯಜಿಸುವುದಾಗಿದೆ. ನಿಶ್ಚಯವಾಗಿ ಮದುವೆಯ ಶಪಥವು, ಕಷ್ಟದಲ್ಲೂ ಸುಖದಲ್ಲೂ, ಒಳ್ಳೇ ಸಮಯಗಳಲ್ಲೂ ಕೆಟ್ಟ ಸಮಯಗಳಲ್ಲೂ, ಏಕಪ್ರಕಾರವಾಗಿ ಪ್ರೀತಿಸುವ ಮತ್ತು ನೆಚ್ಚುವ ಭರವಸೆಯನ್ನು ಮತ್ತು ಮಾತುಕೊಡುವುದನ್ನು ಒಳಗೂಡಿದೆ. ನಾವು ಜೀವಿಸುವ ಸಮಯಕ್ಕೆ ಹಳತೆಂದು ಅನೇಕರು ಪರಿಗಣಿಸುವ ಒಂದು ವಿಷಯವನ್ನು—ವಿವಾಹದ ಶಪಥದಲ್ಲಿ ವ್ಯಕ್ತಪಡಿಸುವ ಒಬ್ಬನ ಗೌರವದ ಆಣೆಯನ್ನು—ಅದು ಒಳಗೂಡಿದೆ. ಆ ಭರವಸೆಯನ್ನು ಪರಿತ್ಯಜಿಸುವುದು ಒಬ್ಬನ ಸಂಗಾತಿಯ ವಿರುದ್ಧ ಒಂದು ತೆರದ ದ್ರೋಹಗೈಯುವಿಕೆಯಾಗಿದೆ. ಶಪಥಗಳ ಕುರಿತ ದೇವರ ದೃಷ್ಟಿಕೋನವು ಬೈಬಲಿನಲ್ಲಿ ಸ್ಪಷ್ಟವಾಗಿಗಿ ಹೇಳಲ್ಪಟ್ಟಿದೆ: “ನೀನು ದೇವರಿಗೆ ಹರಕೆಯನ್ನು ಕಟ್ಟಿದರೆ [ಶಪಥ ಕೊಟ್ಟರೆ, NW] ಅದನ್ನು ತೀರಿಸಲು ತಡಮಾಡಬೇಡ; ಆತನು ಮೂಢರಿಗೆ ಒಲಿಯನು; ನಿನ್ನ ಹರಕೆಯನ್ನು ಒಪ್ಪಿಸು.”—ಪ್ರಸಂಗಿ 5:4.
19. ಯಾವುದಕ್ಕೆ ವಿಪರ್ಯಸತ್ತೆಯಲ್ಲಿ, ಒಬ್ಬ ಸಾಕ್ಷಿಯು ತಪ್ಪಿಬೀಳುವಾಗ ಸೈತಾನನು ಸಂತೋಷಪಡುತ್ತಾನೆ?
19 ಅದರ ಕುರಿತು ಯಾವ ಸಂಶಯವೂ ಇರದಿರಲಿ. ಒಬ್ಬ ಪಾಪಿಯ ರಕ್ಷಣೆಯ ವಿಷಯವಾಗಿ ಪರಲೋಕದಲ್ಲಿ ಹೇಗೆ ಸಂತೋಷ ಉಂಟಾಗುತ್ತದೋ ಹಾಗೆಯೇ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ಅವನ ಅಥವಾ ಅವಳ ಸಮಗ್ರತೆಯನ್ನು ಕಾಪಾಡಲು ತಪ್ಪುವಾಗ, ಭೂಮಿಯ ಮೇಲೆ ಸೈತಾನನ ದೃಶ್ಯಾದೃಶ್ಯ ಸೇನೆಗಳಲ್ಲಿ ಮಹಾ ಸಂತೋಷವು ಉಂಟಾಗುತ್ತದೆ.—ಲೂಕ 15:7; ಪ್ರಕಟನೆ 12:12.
ಎಲ್ಲರಿಗೂ ಸಾಮಾನ್ಯವಾದ ಶೋಧನೆಗಳು
20. ನಾವು ಶೋಧನೆಯನ್ನು ಹೇಗೆ ಪ್ರತಿಭಟಿಸಬಲ್ಲೆವು? (2 ಪೇತ್ರ 2:9, 10)
20 ಕೆಲವು ವಿದ್ಯಮಾನಗಳಲ್ಲಿ ಅನೈತಿಕತೆಯು ಅನಿವಾರ್ಯವೋ? ಶರೀರ ಮತ್ತು ಸೈತಾನನು, ಕ್ರೈಸ್ತರು ಎದುರಿಸಲಾರದಷ್ಟು ಮತ್ತು ತಮ್ಮ ಸಮಗ್ರತೆಯನ್ನು ಕಾಪಾಡಲಾರದಷ್ಟು ಬಲಾಢ್ಯರೋ? ಪೌಲನು ಈ ಮಾತುಗಳಲ್ಲಿ ಉತ್ತೇಜನವನ್ನು ಕೊಡುತ್ತಾನೆ: “ದೇವರು ನಂಬಿಗಸ್ತನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” ಇಂದಿನ ಲೋಕದಲ್ಲಿ ನಾವು ಶೋಧನೆಯನ್ನು ಪೂರಾ ರೀತಿಯಲ್ಲಿ ವರ್ಜಿಸಲಾಗದೆ ಇರಬಹುದು, ಆದರೆ ಪ್ರಾರ್ಥನೆಯಲ್ಲಿ ದೇವರ ಕಡೆಗೆ ತಿರುಗುವ ಮೂಲಕ, ನಾವು ಖಂಡಿತವಾಗಿಯೂ ಯಾವುದೇ ಶೋಧನೆಯನ್ನು ಸಹಿಸಿಕೊಳ್ಳಬಲ್ಲೆವು ಮತ್ತು ಜಯಿಸಬಲ್ಲೆವು.—1 ಕೊರಿಂಥ 10:13.
21. ನಮ್ಮ ಮುಂದಿನ ಅಭ್ಯಾಸದಲ್ಲಿ ಯಾವ ಪ್ರಶ್ನೆಗಳು ಉತ್ತರಿಸಲ್ಪಡಲಿವೆ?
21 ಶೋಧನೆಗಳನ್ನು ಸಹಿಸಿಕೊಳ್ಳುವಂತೆ ಮತ್ತು ಜಯಶಾಲಿಗಳಾಗಿ ಹೊರಬರುವಂತೆ ಸಹಾಯಕ್ಕಾಗಿ ದೇವರು ನಮಗೇನನ್ನು ನೀಡುತ್ತಾನೆ? ನಮ್ಮ ಮದುವೆಗಳನ್ನು, ನಮ್ಮ ಕುಟುಂಬಗಳನ್ನು, ಹಾಗೂ ಯೆಹೋವನ ನಾಮದ ಮತ್ತು ಸಭೆಯ ಸತ್ಕೀರ್ತಿಯನ್ನು ಕಾಪಾಡಿಕೊಳ್ಳಲಿಕ್ಕಾಗಿ ನಮಗೆ ವೈಯಕ್ತಿಕವಾಗಿ ಏನು ಬೇಕು? ನಮ್ಮ ಮುಂದಿನ ಲೇಖನವು ಆ ಪ್ರಶ್ನೆಗಳನ್ನು ನಿರ್ವಹಿಸುವುದು.
[ಅಧ್ಯಯನ ಪ್ರಶ್ನೆಗಳು]
a “‘ಹಾದರ’ ವು ವಿಸ್ತಾರಾರ್ಥದಲ್ಲಿ, ಮತ್ತು ಮತ್ತಾಯ 5:32 ಮತ್ತು 19:9 ರಲ್ಲಿ ಉಪಯೋಗಿಸಿದ ಪ್ರಕಾರ, ಮದುವೆಯ ಹೊರಗಿನ ನ್ಯಾಯವಿರುದ್ಧ ಮತ್ತು ನಿಷಿದ್ಧ ಲೈಂಗಿಕ ಸಂಬಂಧಗಳ ಒಂದು ವಿಸ್ತಾರವಾದ ಸಾಲಿಗೆ ಸೂಚಿಸುತ್ತದೆಂಬದು ವ್ಯಕ್ತ. [ಆ ವಚನಗಳಲ್ಲಿ ಉಪಯೋಗಿಸಲ್ಪಟ್ಟ ಗ್ರೀಕ್ ಶಬ್ದ] ಪೋರ್ನಿಯ, ಕಡಿಮೆ ಪಕ್ಷ ಒಬ್ಬ ಮನುಷ್ಯನ ಜನನಾಂಗ(ಗಳ) (ಸಹಜವಾದ ಇಲ್ಲವೇ ವಕ್ರವಾದ ರೀತಿಯಲ್ಲಿ) ಘೋರ ಅನೈತಿಕ ಉಪಯೋಗವನ್ನು ಒಳಗೂಡಿದೆ; ಅಲ್ಲದೆ, ಆ ಅನೈತಿಕತೆಗೆ ಇನ್ನೊಂದು ಪಕ್ಷವು ಇರಲೇಬೇಕು—ಎರಡರಲ್ಲಿ ಯಾವುದಾದರೂ ಒಂದು ಮನುಷ್ಯ ಲಿಂಗ, ಅಥವಾ ಪಶು.” (ದ ವಾಚ್ಟವರ್, ಮಾರ್ಚ್ 15, 1983, ಪುಟ 30) ವ್ಯಭಿಚಾರ: “ಒಬ್ಬ ವಿವಾಹಿತ ವ್ಯಕ್ತಿ ಮತ್ತು ನ್ಯಾಯಬದ್ಧ ಗಂಡ ಅಥವಾ ಹೆಂಡತಿಯಲ್ಲದ ಒಬ್ಬ ಸಂಗಾತಿಯ ನಡುವಣ ಸ್ವಇಚ್ಛೆಯ ಲೈಂಗಿಕ ಸಂಭೋಗ.”—ದಿ ಅಮೆರಿಕನ್ ಹೆರಿಟೆಜ್ ಡಿಕ್ಷನರಿ ಆಫ್ ದಿ ಇಂಗ್ಲಿಷ್ ಲ್ಯಾಂಗೆಜ್ವ್.
b ಒಬ್ಬ ಸಹೋದರನು ಒಬ್ಬಾಕೆ ಸಹೋದರಿಗಾಗಿ ವಾಹನ ಸೌಕರ್ಯವನ್ನು ಒದಗಿಸುವ ಯೋಗ್ಯ ಸಂದರ್ಭಗಳು ಇರುವುವುವೆಂಬದು ವ್ಯಕ್ತ, ಮತ್ತು ಅಂಥ ಸನ್ನಿವೇಶಗಳಿಗೆ ತಪ್ಪರ್ಥ ಕಟ್ಟಬಾರದು.
ನಿಮಗೆ ನೆನಪಿದೆಯೇ?
▫ ಒಂದು ಮದುವೆಯನ್ನು ಬಲಗೊಳಿಸಲು ಸಹಾಯಿಸುವ ಕೆಲವು ವಿಷಯಗಳು ಯಾವುವು?
▫ ಲೋಕದ ನೈತಿಕತೆಯ ನೋಟವನ್ನು ನಾವೇಕೆ ವರ್ಜಿಸಬೇಕು?
▫ ಅನೈತಿಕತೆಗೆ ನಡಿಸುವ ಕೆಲವು ಶೋಧನೆಗಳು ಮತ್ತು ಸನ್ನಿವೇಶಗಳು ಯಾವುವು?
▫ ಪಾಪವನ್ನು ಪ್ರತಿಭಟಿಸುವ ಮುಖ್ಯ ಕೀಲಿಕೈ ಯಾವುದು?
▫ ಶೋಧನೆಯ ಸಮಯದಲ್ಲಿ ದೇವರು ನಮಗೆ ಹೇಗೆ ಸಹಾಯ ಮಾಡುತ್ತಾನೆ?
[ಪುಟ 14 ರಲ್ಲಿರುವ ಚೌಕ]
ಬಾಳುವ ಮದುವೆಗಳಲ್ಲಿರುವ ಸಾಮಾನ್ಯ ಸಂಗತಿಗಳು
▫ ಬೈಬಲ್ ತತ್ವಗಳಿಗೆ ಬಲವಾಗಿ ಅಂಟಿಕೊಳ್ಳುವುದು
▫ ಎರಡೂ ಸಂಗಾತಿಗಳಿಗೆ ಯೆಹೋವನೊಂದಿಗೆ ಬಲವಾದ ಸುಸಂಬಂಧ
▫ ಗಂಡನು ತನ್ನ ಹೆಂಡತಿಯನ್ನು, ಅವಳ ಭಾವನೆಗಳನ್ನು ಮತ್ತು ಅವಳ ಅಭಿಪ್ರಾಯಗಳನ್ನು ಗೌರವಿಸುತ್ತಾನೆ
▫ ದಿನದಿನವೂ ಒಳ್ಳೇ ಮಾತುಕತೆ
▫ ಒಬ್ಬರನ್ನೊಬ್ಬರು ಮೆಚ್ಚಿಸಲು ಪ್ರಯತ್ನಿಸಿರಿ
▫ ಹಾಸ್ಯ ದರ್ಶನ ಶಕ್ತಿ; ತನ್ನೆಡೆಗೆ ನಗಲು ಶಕ್ತನಾಗಿರುವುದು
▫ ಸರಾಗವಾಗಿ ತಪ್ಪುಗಳನ್ನು ಒಪ್ಪಿಕೊಳ್ಳಿರಿ; ಮುಕ್ತವಾಗಿ ಕ್ಷಮಿಸಿರಿ
▫ ಪ್ರಣಯವನ್ನು ಸಜೀವವಾಗಿಡಿರಿ
▫ ಮಕ್ಕಳನ್ನು ಬೆಳೆಸುವುದರಲ್ಲಿ ಮತ್ತು ಶಿಸ್ತುಗೊಳಿಸುವುದರಲ್ಲಿ ಒಮ್ಮತದಿಂದಿರ್ರಿ
▫ ಯೆಹೋವನಿಗೆ ಪ್ರಾರ್ಥನೆಯಲ್ಲಿ ಕ್ರಮವಾಗಿ ಐಕ್ಯವಾಗಿರಿ
ಮದುವೆಯನ್ನು ಬುಡಮೇಲುಮಾಡುವ ನಕಾರಾತ್ಮಕ ವಿಷಯಗಳು
▫ ಸ್ವಾರ್ಥಪರತೆ ಮತ್ತು ಹಟಮಾರಿತನ
▫ ವಿಷಯಗಳನ್ನು ಒಟ್ಟುಗೂಡಿ ಮಾಡಲು ತಪ್ಪುವುದು
▫ ನ್ಯೂನ ಮಾತುಕತೆ
▫ ಪತಿ-ಪತ್ನಿಯರ ನಡುವೆ ತಕ್ಕದಾದ ಪರ್ಯಾಲೋಚನೆಯ ಕೊರತೆ
▫ ಹಣಕಾಸಿನ ನ್ಯೂನ ನಿರ್ವಹಣೆ
▫ ಮಕ್ಕಳೊಂದಿಗೆ ಮತ್ತು⁄ಅಥವಾ ಮಲಮಕ್ಕಳೊಂದಿಗೆ ವ್ಯವಹರಿಸುವಲ್ಲಿ ಮಾನದಂಡದ ಭಿನ್ನತೆಗಳು
▫ ಗಂಡನು ರಾತ್ರಿ ವೇಳೆಮೀರಿ ಕೆಲಸಮಾಡುವುದು ಅಥವಾ ಬೇರೆ ಕೆಲಸಗಳಿಗಾಗಿ ಕುಟುಂಬವನ್ನು ಅಸಡ್ಡೆಮಾಡುವುದು
▫ ಕುಟುಂಬದ ಆತ್ಮಿಕ ಅಗತ್ಯತೆಗಳನ್ನು ನೋಡಿಕೊಳ್ಳಲು ತಪ್ಪುವುದು
[ಪುಟ 15 ರಲ್ಲಿರುವ ಚಿತ್ರ]
ಮದುವೆಯನ್ನು ಮಾನ್ಯವಾಗಿಡುವಿಕೆಯು ಬಾಳುವ ಸಂತೋಷವನ್ನು ತರುತ್ತದೆ