ವಯೋವೃದ್ಧರ ಪರಾಮರಿಕೆ ಮಾಡುವುದು ಪಂಥಾಹ್ವಾನಗಳು ಮತ್ತು ಪ್ರತಿಫಲಗಳು
ಕ್ರೈಸ್ತ ಶುಶ್ರೂಷಕನಾದ ಶಿನೆಟ್ಸು, ತನ್ನ ನೇಮಕವನ್ನು ಅತಿಯಾಗಿ ಆನಂದಿಸುತ್ತಿದ್ದನು. ಅವನ ಕುಟುಂಬದ ಮೂವರಲ್ಲಿ ಅವನ ಪತ್ನಿಯ ತಾಯಿಯೂ ಕೂಡಿದಳ್ದು. ಅವರು ಜನರಿಗೆ ಬೈಬಲನ್ನು ಕಲಿಸುತ್ತಾ, ಯೆಹೋವನ ಸಾಕ್ಷಿಗಳ ಒಂದು ಚಿಕ್ಕ ಸಭೆಯೊಂದಿಗೆ ಸಂತೋಷದಿಂದ ಕೆಲಸಮಾಡುತ್ತಿದ್ದಾಗ, ಒಂದು ದಿನ ಅವನು ತನ್ನ ಪತ್ನಿಯೊಂದಿಗೆ ಬೇರೆ ಸಭೆಗಳನ್ನು ಸಂದರ್ಶಿಸುವುದನ್ನು ಪರಿಗಣಿಸುವಂತೆ ಕೇಳಲಾಯಿತು. ಪ್ರತಿ ವಾರ ವಸತಿಗಳನ್ನು ಬದಲಾಯಿಸುವುದನ್ನು ಅದು ಆವಶ್ಯಪಡಿಸುವುದು. ಆ ಪ್ರತೀಕ್ಷೆಯು ಅವನನ್ನು ಆನಂದಗೊಳಿಸಿತು, ಆದರೆ ತಾಯಿಯನ್ನು ಪರಾಮರಿಕೆ ಮಾಡುವವರಾರು?
ಅನೇಕ ಕುಟುಂಬಗಳು ಕಟ್ಟಕಡೆಗೆ ತದ್ರೀತಿ—ವೃದ್ಧರಾಗುತ್ತಿರುವ ಹೆತ್ತವರನ್ನು ಉತ್ತಮವಾಗಿ ಪರಾಮರಿಕೆ ಮಾಡುವ ವಿಧಾನದ ಬಗ್ಗೆ—ಪಂಥಾಹ್ವಾನವನ್ನು ಎದುರಿಸುತ್ತಾರೆ. ಸಾಮಾನ್ಯವಾಗಿ ಹೆತ್ತವರು ಸಾಕಷ್ಟು ಕ್ಷೇಮದಲ್ಲಿದ್ದು ಕೆಲಸಮಾಡುತ್ತಿರುವಾಗ ಆ ಕುರಿತು ಕೊಂಚವೇ ಗಮನಕೊಡಲಾಗುತ್ತದೆ. ಆದರೂ, ಸೂಜಿಗೆ ನೂಲು ಹಾಕಲು ಪ್ರಯತ್ನಿಸುವಾಗ ನಡುಗುವ ಕೈಗಳು ಅಥವಾ ಕೈತಪ್ಪಿ ಇಟ್ಟ ಕೆಲವೊಂದು ವಸ್ತುವನ್ನು ತಾವು ಕೊನೆಗೆ ಕಂಡದ್ದು ಯಾವಾಗ ಎಂದು ಜ್ಞಾಪಿಸಿಕೊಳ್ಳಲು ಕಷ್ಟಪಡುವಾಗ ಅವರ ಸ್ಮರಣ ಶಕ್ತಿಯ ದೌರ್ಬಲ್ಯದಂಥ ಚಿಕ್ಕ ವಿಷಯಗಳು, ಅವರು ಮುದುಕರಾಗುತ್ತಿದ್ದಾರೆಂದು ಪ್ರಕಟಪಡಿಸುತ್ತದೆ. ಕೆಲವೊಮ್ಮೆಯಾದರೋ ಥಟ್ಟನೆ ಸಂಭವಿಸುವ ಅಪಘಾತ ಅಥವಾ ಅಸೌಖ್ಯವು ಅವರ ಅಗತ್ಯತೆಗಳ ಅರುಹನ್ನು ಒಬ್ಬನಿಗೆ ಕೊಡುತ್ತದೆ. ಏನಾದರೂ ಮಾಡಲ್ಪಡಲೇ ಬೇಕು.
ಕೆಲವು ದೇಶಗಳಲ್ಲಿ ಸಾಕಷ್ಟು ಒಳ್ಳೇ ಆರೋಗ್ಯವನ್ನು ಆನಂದಿಸುತ್ತಿರುವ ಹೆತ್ತವರು ತಮ್ಮ ಮುಪ್ಪಿನ ವರ್ಷಗಳನ್ನು ಮಕ್ಕಳೊಂದಿಗೆ ಕಳೆಯುವ ಬದಲಾಗಿ ತಮ್ಮ ಸಂಗಾತಿಗಳೊಂದಿಗೆ ಒಂಟಿಗರಾಗಿ ಜೀವಿಸಲು ಇಷ್ಟಪಡುತ್ತಾರೆ. ಪೌರಸ್ತ್ಯ ಮತ್ತು ಆಫ್ರಿಕನ್ ದೇಶಗಳಂಥ ಇತರ ದೇಶಗಳಲ್ಲಿ, ವೃದ್ಧರು ತಮ್ಮ ಮಕ್ಕಳೊಂದಿಗೆ, ವಿಶೇಷವಾಗಿ ಹಿರಿಯ ಮಗನೊಂದಿಗೆ, ಜೀವಿಸುವುದು ಸಾಮಾನ್ಯ ಪದ್ಧತಿಯಾಗಿದೆ. ಹೆತ್ತವರಲ್ಲಿ ಒಬ್ಬರು ಹಾಸಿಗೆ ಹಿಡಿದಿರುವಾಗ ಇದು ವಿಶೇಷವಾಗಿ ಸತ್ಯವು. ಉದಾಹರಣೆಗಾಗಿ, ಜಪಾನಿನಲ್ಲಿ 65 ವರ್ಷ ಮತ್ತು ಅದಕ್ಕಿಂತ ಮೇಲಿನ ಪ್ರಾಯದವರು ಸ್ವಲ್ಪ ಮಟ್ಟಿಗೆ ಹಾಸಿಗೆ ಹಿಡಿದವರಾಗಿದ್ದಾರೆ, ಮತ್ತು ಸುಮಾರು 2,40,000 ಮಂದಿ ಮನೆಯಲ್ಲಿ ಅವರ ಕುಟುಂಬಗಳಿಂದ ಪರಾಮರಿಕೆ ಮಾಡಲ್ಪಡುತ್ತಾರೆ.
ನೈತಿಕ ಮತ್ತು ಶಾಸ್ತ್ರೀಯ ಹಂಗುಗಳು
ಹೆಚ್ಚಿನ ಜನರು “ಮಮತೆ”ಯಲ್ಲಿ ಕೊರತೆಯುಳ್ಳವರಾಗಿ “ಸ್ವಾರ್ಥ ಚಿಂತಕರಾಗಿ” ಪರಿಣಮಿಸಿರುವ ಒಂದು ಸಂತತಿಯಲ್ಲಿ ನಾವು ಜೀವಿಸುತ್ತೇವಾದರೂ, ಸ್ಪಷ್ಟವಾಗಿಗಿ ನಮಗೆ ವಯೋವೃದ್ಧರ ಕಡೆಗೆ ನೈತಿಕ ಮತ್ತು ಶಾಸ್ತ್ರೀಯ ಹಂಗುಗಳು ಇವೆ. (2 ತಿಮೊಥೆಯ 3:1-5) ಲಕ್ವಾಹೊಡೆದ ತನ್ನ ಮುದೀ ತಾಯಿಯನ್ನು ಪರಾಮರಿಕೆ ಮಾಡುತ್ತಿರುವ ಟೊಮಿಕೊ, ತನ್ನ ತಾಯಿಯ ಕುರಿತು ಮಾತಾಡಿದಾಗ, ಅವಳಿಗನಿಸಿದ ನೈತಿಕ ಹಂಗನ್ನು ವ್ಯಕ್ತಪಡಿಸಿದಳು: “ಅವಳು ನನ್ನನ್ನು 20 ವರ್ಷ ಪರಾಮರಿಕೆ ಮಾಡಿದ್ದಳು. ನಾನೀಗ ಅವಳಿಗೆ ಅದನ್ನೇ ಮಾಡಲು ಬಯಸುತ್ತೇನೆ.” ಜ್ಞಾನಿ ರಾಜ ಸೊಲೊಮೋನನು ಪ್ರಬೋಧಿಸಿದ್ದು: “ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ.”—ಜ್ಞಾನೋಕ್ತಿ 23:22.
ನಂಬದ ಹೆತ್ತವನ ಧಾರ್ಮಿಕ ಪೂರ್ವಾಗ್ರಹವಾಗಲಿ ಅಥವಾ ಬದ್ಧವೈರವಾಗಲಿ ಆ ಶಾಸ್ತ್ರೀಯ ಮಾರ್ಗದರ್ಶಕವನ್ನು ರದ್ದುಮಾಡುವುದಿಲ್ಲ. ಕ್ರೈಸ್ತ ಅಪೊಸ್ತಲ ಪೌಲನು ಬರೆಯಲು ಪ್ರೇರಿಸಲ್ಪಟ್ಟದ್ದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8) ಸಾಯುವ ಮುಂಚೆ ಅವನ ಕೊನೆಯ ಕ್ರಿಯೆಗಳೊಂದರಲ್ಲಿ ಯೇಸು, ತನ್ನ ತಾಯಿಯ ಪರಾಮರಿಕೆಗಾಗಿ ಏರ್ಪಾಡು ಮಾಡಿದಾಗ, ನಮಗಾಗಿ ಮಾದರಿಯನ್ನು ಬಿಟ್ಟುಹೋದನು.—ಯೋಹಾನ 19:26, 27.
ಎದುರಾಗಿರುವ ಕಷ್ಟಗಳೊಂದಿಗೆ ವ್ಯವಹರಿಸುವುದು
ಅನೇಕ ವರ್ಷಗಳ ತನಕ ಪ್ರತ್ಯೇಕವಾಗಿ ವಾಸಿಸಿದ ಮೇಲೆ ಕುಟುಂಬಗಳು ಪುನಃ ಒಟ್ಟಿಗೆ ಬರುವಾಗ ಎಲ್ಲರಿಂದ ಅನೇಕ ಸರಿಹೊಂದಿಸುವಿಕೆಗಳನ್ನು ಮಾಡುವ ಅಗತ್ಯವಿರುತ್ತದೆ. ಈ ಬದಲಾವಣೆಗಳು ಬಹಳಷ್ಟು ಪ್ರೀತಿ, ತಾಳ್ಮೆ, ಮತ್ತು ಪರಸ್ಪರ ತಿಳಿವಳಿಕೆಯನ್ನು ಕೇಳಿಕೊಳ್ಳುತ್ತವೆ. ಹಿರಿಯ ಮಗ, ಇಲ್ಲವೇ ಇನ್ನೊಬ್ಬ ಮಗ ಅಥವಾ ಮಗಳು ತನ್ನ ಕುಟುಂಬವನ್ನು ಹೆತ್ತವರ ಮನೆಗೆ ವಸತಿ ಬದಲಾಯಿಸಿದರೆ, ಹೊಸ ಪರಿಸ್ಥಿತಿಗಳ ಇಡೀ ಶ್ರೇಣಿಯೇ ತಲೆದೋರುವುವು. ಒಂದು ಹೊಸ ಕೆಲಸ, ಮಕ್ಕಳಿಗೆ ಹೊಸ ಶಾಲೆಗಳು, ರೂಢಿಮಾಡಿಕೊಳ್ಳಲು ಒಂದು ಹೊಸ ನೆರೆಕರೆಯು ಅಲ್ಲಿರಬಹುದು. ಇವೆಲ್ಲವುಗಳಿಂದಾಗಿ ಪತ್ನಿಯ ಕೆಲಸಗಳು ಹೆಚ್ಚುವುವು.
ಸರಿಹೊಂದಿಸಲು ಹೆತ್ತವರಿಗೂ ಅಷ್ಟೇ ಕಷ್ಟವಾಗಿರುವುದು. ಸ್ವಲ್ಪ ಮಟ್ಟಿನ ಏಕಾಂತತೆ, ನೆಮ್ಮದಿ, ಮತ್ತು ಸ್ವಾತಂತ್ರ್ಯಕ್ಕೆ ಅವರು ಒಗ್ಗಿಸಿಕೊಂಡಿರಬಹುದು; ಈಗ ಅವರ ಚುರುಕಿನ ಮೊಮ್ಮಕ್ಕಳ ಮತ್ತು ಅವರ ಸ್ನೇಹಿತರ ಗುಲ್ಲು ಅವರ ಪಾಲಾಗುವುದು. ತಮ್ಮ ಸ್ವಂತ ನಿರ್ಣಯಗಳನ್ನು ಮಾಡುವ ಅಭ್ಯಾಸವು ಅವರಿಗಾಗಿರಬಹುದು ಮತ್ತು ಅವರನ್ನು ಮಾರ್ಗದರ್ಶಿಸುವ ಯಾವುವೇ ಪ್ರಯತ್ನಗಳನ್ನು ಅವರು ಎದುರಿಸಬಹುದು. ಅನೇಕ ಹೆತ್ತವರು, ಅವರ ಗಂಡು ಮಕ್ಕಳ ಕುಟುಂಬಗಳು ತಮ್ಮೊಂದಿಗೆ ವಾಸಿಸಲು ಬರುವ ಸಮಯವನ್ನು ಮುನ್ನೋಡುವವರಾಗಿ, ಸಮೀಪದಲ್ಲೇ ಪ್ರತ್ಯೇಕ ಮನೆಗಳನ್ನು ಕಟ್ಟಿ ಅಥವಾ ತಮ್ಮ ಮನೆಗಳಿಗೆ ಜೋಡಿಸುವ ಮುನ್ನಂಗಳ ದಾರಿಗಳನ್ನು ಸೇರಿಸಿ, ಎಲ್ಲರಿಗೂ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯವನ್ನು ಒದಗಿಸಿದ್ದಾರೆ.
ಎಲ್ಲಿ ಮನೆ ಚಿಕ್ಕದಾಗಿದೆಯೋ ಅಲ್ಲಿ, ಹೊಸತಾಗಿ ಬಂದಿರುವವರಿಗಾಗಿ ಸ್ಥಳಮಾಡಲು ಹೆಚ್ಚಿನ ಸರಿಹೊಂದಿಸುವಿಕೆಗಳು ಆವಶ್ಯಕವಾಗಿರಬಹುದು. ಅವರ 80 ವರ್ಷ ವಯಸ್ಸಿನ ಅಜಿಗ್ಜಾಗಿ ಸ್ಥಳಮಾಡುವಾಗ, ಅವರ ಮಲಗುವ ಕೋಣೆಗಳೊಳಗೆ ಪೀಠೋಪಕರಣ ಮತ್ತು ಇತರ ವಸ್ತುಗಳು ಬರುತ್ತಾ ಇದ್ದದ್ದನ್ನು ಕಂಡ ಅವಳ ನಾಲ್ವರು ಹೆಣ್ಣು ಮಕ್ಕಳು ಎಷ್ಟು ಅಸಮಾಧಾನಗೊಂಡಿದ್ದರೆಂದು ಒಬ್ಬಾಕೆ ತಾಯಿಯು ನಗುತ್ತಾ ಜ್ಞಾಪಿಸಿಕೊಂಡಳು. ಆದರೂ, ಸರಿಹೊಂದಿಸುವಿಕೆಗಾಗಿರುವ ಅಗತ್ಯವನ್ನು ಎಲ್ಲರೂ ಅರಿತುಕೊಂಡಾಗ ಮತ್ತು ಪ್ರೀತಿ “ಸ್ವಪ್ರಯೇಜನವನ್ನು ಚಿಂತಿಸುವದಿಲ್ಲ” ಎಂಬ ಬೈಬಲಿನ ಉಪದೇಶವನ್ನು ನೆನಪಿಸುವಾಗ ಈ ಹೆಚ್ಚಿನ ಸಮಸ್ಯೆಗಳು ಸಾಮಾನ್ಯವಾಗಿ ತಾವಾಗಿಯೇ ಪರಿಹರಿಸಲ್ಪಡುತ್ತವೆ.—1 ಕೊರಿಂಥ 13:5.
ಸ್ವಾತಂತ್ರ್ಯ ನಷ್ಟ
ಒಬ್ಬ ಕ್ರೈಸ್ತ ಸ್ತ್ರೀಗೆ ಅವಳ ನಂಬಿಕೆಯಲ್ಲಿ ಪಾಲುಗಾರನಾಗದ ಗಂಡನಿದ್ದರೆ ಮತ್ತು ಅವನು ಕುಟುಂಬ ಸಮೇತ ತನ್ನ ಹೆತ್ತವರೊಂದಿಗೆ ವಸತಿಮಾಡಲು ನಿರ್ಣಯಿಸಿದರೆ ಒಂದು ಗಂಭೀರ ಸಮಸ್ಯೆಯು ವಿಕಾಸಗೊಳ್ಳಬಹುದು. ಕುಟುಂಬ ಪರಾಮರಿಕೆಯ ನಿರ್ಬಂಧಗಳು ಅವಳ ಕ್ರೈಸ್ತ ಹಂಗುಗಳನ್ನು ಇತರ ಕರ್ತವ್ಯಗಳೊಂದಿಗೆ ಸಮತೂಕಿಸಲು ಅವಳಿಗೆ ಬಹಳಮಟ್ಟಿಗೆ ಅಶಕ್ಯವನ್ನಾಗಿ ಮಾಡುವಂತೆ ತೋರಬಹುದು. ಸೆಟ್ಸುಕೊ ಅಂದದ್ದು: “ಮುಪ್ಪಿನ ದೌರ್ಬಲ್ಯವಿದ್ದ ತನ್ನ ತಾಯಿಯನ್ನು ಮನೆಯಲ್ಲಿ ಒಂಟಿಗಳಾಗಿ ಬಿಡುವುದು ಅಪಾಯಕಾರಿ ಎಂದು ನನ್ನ ಗಂಡನಿಗನಿಸಿತು, ಮತ್ತು ನಾನು ಎಲ್ಲಾ ಸಮಯ ಮನೆಯಲ್ಲಿರುವಂತೆ ಅವನು ಬಯಸಿದನು. ನಾನು ಕೂಟಕ್ಕೆ ಹೋಗ ಪ್ರಯತ್ನಿಸಿದರೆ ಅವನ ಮನಕಲಕುವುದು ಮತ್ತು ಅವನು ಗೊಣಗುವನು. ಮೊದಮೊದಲು ನಾನೂ, ನನ್ನ ಜಪಾನಿ ಹಿನ್ನೆಲೆಯ ಕಾರಣ, ಅವಳನ್ನು ಒಂಟಿಗಳಾಗಿ ಬಿಡುವುದು ತಪ್ಪೆಂದು ಭಾವಿಸಿದ್ದೆನು. ಆದರೆ ಅನಂತರ, ತಕ್ಕ ಸಮಯದಲ್ಲಿ, ಸಮಸ್ಯೆಗಳು ಪರಿಹರಿಸಲ್ಪಡಬಲ್ಲವೆಂದು ಅರಿತುಕೊಂಡೆನು.”
ಹಿಸಾಕೊ ಎಂಬವಳಿಗೆ ಇಂತಹದ್ದೇ ಸಮಸ್ಯೆ ಇತ್ತು. “ನನ್ನ ಗಂಡನ ಕುಟುಂಬದೊಂದಿಗೆ ನಾವು ವಸತಿ ಬದಲಾಯಿಸಿದಾಗ,” ಅವಳು ವರದಿಸುವುದು, “ಅವನು ತನ್ನ ಸಂಬಂಧಿಕರೇನೆಣಿಸುವರೋ ಎಂಬ ಭಯದಿಂದ, ನಾನು ನನ್ನ ಧರ್ಮ ಬದಲಾಯಿಸುವಂತೆ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸುವಂತೆ ಬಯಸಿದನು. ವಿಷಯಗಳನ್ನು ಇನ್ನೂ ಕೆಡಿಸಲು, ಆದಿತ್ಯವಾರದಂದು ಸಮೀಪದ ಸಂಬಂಧಿಕರು ಸಂದರ್ಶನಕ್ಕಾಗಿ ಬರುತ್ತಿದ್ದರು ಮತ್ತು ಕೂಟಗಳಿಗೆ ಹೋಗಲು ನನಗೆ ಕಷ್ಟವಾಗುತ್ತಿತ್ತು. ಅದಲ್ಲದೆ, ಮಕ್ಕಳು ಕೂಟಕ್ಕೆ ಹೋಗುವ ಬದಲಿಗೆ ತಮ್ಮ ಸೋದರನಂಟರೊಂದಿಗೆ ಆಡಲು ಬಯಸುತ್ತಿದ್ದರು. ನಮ್ಮ ಆತ್ಮಿಕತೆಯ ಮೇಲೆ ಬಾಧೆಯಾದದ್ದು ನನಗೆ ಕಂಡುಬಂತು. ನಾನು ದೃಢವಾದ ನಿಲುವನ್ನು ತಕ್ಕೊಳ್ಳಬೇಕಾಯಿತು ಮತ್ತು ನನ್ನ ಧರ್ಮವು ಉಡುಪಿನಂತೆ ಬದಲಾಯಿಸುವ ಒಂದು ವಿಷಯವಲ್ಲ, ಬದಲಿಗೆ ನನಗೆ ಮಹತ್ವವುಳ್ಳದೆಂದು ನಾನು ಗಂಡನಿಗೆ ವಿವರಿಸಬೇಕಾಯಿತು. ತಕ್ಕ ಸಮಯದೊಳಗೆ ಕುಟುಂಬವು ಸರಿಹೊಂದಿಸಿಕೊಂಡಿತು.”
ವಾರದಲ್ಲಿ ಒಂದು ಅಥವಾ ಎರಡು ದಿನ ಸಹಾಯಮಾಡಲು ಒಬ್ಬ ಅಂಶ-ಕಾಲಿಕ ಮನೆವಾರ್ತೆಯವಳನ್ನಿಟ್ಟ ಮೂಲಕ ಹೆಚ್ಚು ಬಿಡುವಿನ ಸಮಯ ದೊರಕುವ ಸಮಸ್ಯೆಯನ್ನು ಕೆಲವರು ಪರಿಹರಿಸಿದ್ದಾರೆ. ಕೆಲವರು ತಮ್ಮ ಮಕ್ಕಳ, ಹತ್ತಿರದ ಸಂಬಂಧಿಕರ, ಮತ್ತು ಸಭೆಯಲ್ಲಿರುವ ಸ್ನೇಹಿತರ ಸಹಾಯವನ್ನೂ ಕೇಳುವ ಮೂಲಕ ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಮತ್ತು ಕ್ರೈಸ್ತ ಚಟುವಟಿಕೆಗಾಗಿ ಸ್ವಲ್ಪ ಬಿಡುವನ್ನು ಪಡೆದಿರುತ್ತಾರೆ. ಗಂಡಂದಿರು ಸಹ ರಾತ್ರಿಗಳಲ್ಲಿ ಮತ್ತು ವಾರಾಂತ್ಯಗಳಲ್ಲಿ ಮನೆಯಲ್ಲಿರುವಾಗ ಸಹಾಯಕೊಡಲು ಶಕ್ತರಾಗಿದ್ದಾರೆ.—ಪ್ರಸಂಗಿ 4:9.
ಅವರನ್ನು ಸಕ್ರಿಯರಾಗಿಡುವುದು
ವೃದ್ಧರನ್ನು ಸಕ್ರಿಯರಾಗಿಡುವುದು ಎದುರಿಸಬೇಕಾದ ಇನ್ನೊಂದು ಪಂಥಾಹ್ವಾನವು. ಕೆಲವು ಪ್ರಾಯಸ್ಥರು ಅಡಿಗೆ ಮಾಡುವುದರಲ್ಲಿ ಮತ್ತು ಇತರ ಗೃಹಕೃತ್ಯಗಳಲ್ಲಿ ಪಾಲಿಗರಾಗುವುದರಲ್ಲಿ ಸಂತೋಷಿಸುತ್ತಾರೆ. ಮಕ್ಕಳನ್ನು ನೋಡಿಕೊಳ್ಳಲು ಕೇಳಲ್ಪಟ್ಟಲ್ಲಿ, ತಾವು ಬೇಕಾಗಿದ್ದೇವೆಂಬ ಅನಿಸಿಕೆ ಅವರಿಗಾಗುತ್ತದೆ ಮತ್ತು ಒಂದು ಚಿಕ್ಕ ಕಾಯಿಪಲ್ಯದ ತೋಟವನ್ನು ನೋಡಿಕೊಳ್ಳುವುದು, ಹೂವುಗಳ ಆರೈಕೆ ಮಾಡುವುದು, ಅಥವಾ ಕೆಲವು ಕಸುಬಿನಲ್ಲಿ ಪಾಲಿಗರಾಗುವುದು ಅವರಿಗೆ ಸಂತೃಪ್ತಿಯನ್ನು ತರುತ್ತದೆ.
ಇತರರಾದರೋ, ದಿನದಲ್ಲಿ ಹೆಚ್ಚು ಸಮಯ ಮಲಗಲು ಬಯಸುತ್ತಾರೆ ಮತ್ತು ಪರಿಚಾರಿಕೆ ಮಾಡಲ್ಪಡುವಂತೆ ಅಪೇಕ್ಷಿಸುತ್ತಾರೆ. ಆದರೆ ಅವರನ್ನು ಆದಷ್ಟು ಸಕ್ರಿಯರಾಗಿಡುವುದು ಅವರ ಸುಕ್ಷೇಮಕ್ಕೆ, ದೀರ್ಘಾಯುವಿಗೆ ಮತ್ತು ಮಾನಸಿಕ ಪ್ರಜ್ಞೆಗೆ ಪ್ರಾಮುಖ್ಯವೆಂದು ತೋರಿರುತ್ತದೆ. ಹಿಡಿಕೊ, ತನ್ನ ತಾಯಿಯು ಗಾಲಿಕುರ್ಚಿಯಲ್ಲಿದ್ದರೂ, ಅವಳನ್ನು ಕೂಟಕ್ಕೆ ಕೊಂಡೊಯ್ಯುವುದೇ ಅವಳ ತಾಯಿಗೆ ಬೇಕಾದ ತಕ್ಕ ಪ್ರಚೋದನೆಯೆಂದು ಕಂಡುಕೊಂಡಳು. ಅವಳು ಎಲ್ಲರಿಂದ ಯಾವಾಗಲೂ ಹೃತ್ಪೂರ್ವಕವಾಗಿ ಸ್ವಾಗತಿಸಲ್ಪಡುತ್ತಿದ್ದಳು ಮತ್ತು ಸಂಭಾಷಣೆಗಳಲ್ಲಿ ಸೇರಿಸಲ್ಪಡುತ್ತಿದ್ದಳು. ಅವಳಿಗೆ ಕೊಡಲ್ಪಟ್ಟ ಗಮನದಿಂದಾಗಿ ಕಟ್ಟಕಡೆಗೆ ಅವಳು ಒಬ್ಬ ವೃದ್ಧೆ ಸ್ತ್ರೀಯೊಂದಿಗೆ ಬೈಬಲ್ ಅಭ್ಯಾಸ ನಡಿಸಲು ಸಮ್ಮತಿಸಿದಳು. ಮಾನಸಿಕ ನರವ್ಯೂಹ ರೋಗ ಪೀಡಿತಳಾದ ಒಬ್ಬ ಹೆತ್ತವಳಿರುವ ಒಂದು ದಂಪತಿಗಳು, ಅವಳನ್ನು ತಮ್ಮೊಂದಿಗೆ ಕೂಟಗಳಿಗೆ ಒಯ್ಯುತ್ತಾರೆ. “ಆಕೆ ಸಾಮಾನ್ಯವಾಗಿ ಏನೂ ಮಾಡಬಯಸುವುದಿಲ್ಲ,” ಅವಲೋಕಿಸಿದರು ಅವರು, “ಆದರೆ ಅವಳು ಕೂಟಗಳಲ್ಲಿ ಸಂತೋಷದಲ್ಲಿ ಇರುತ್ತಾಳೆ. ಹೃತ್ಪೂರ್ವಕ ಸ್ವಾಗತ ಅವಳಿಗೆ ಸಿಗುತ್ತದೆ, ಆದುದರಿಂದ ಅವಳು ಸಿದ್ಧಮನಸ್ಸಿನಿಂದ ಬರುತ್ತಾಳೆ. ಅದು ಅವಳಿಗೆ ಅತಿ ಪ್ರಯೋಜನಕಾರಿಯೆಂದು ನಾವು ಭಾವಿಸುತ್ತೇವೆ.”
ಲೇಖನದ ಆರಂಭದಲ್ಲಿ ತಿಳಿಸಿದ ಶಿನೆಟ್ಸು, ಸಂಚಾರ ಶುಶ್ರೂಷಕನಾಗಿ ತಾನು ಸೇವೆಮಾಡಿದ ಕ್ಷೇತ್ರಕ್ಕೆ ಕೇಂದ್ರ ಸ್ಥಳದಲ್ಲಿ ತನ್ನ ಪತ್ನಿಯ ತಾಯಿಗಾಗಿ ಒಂದು ವಸತಿಯನ್ನು ಕಂಡುಕೊಂಡ ಮೂಲಕ ತನ್ನ ಸಮಸ್ಯೆಯನ್ನು ಪರಿಹರಿಸಿದನು. ಹೀಗೆ ಅವನು ಮತ್ತು ಅವನ ಪತ್ನಿ, ಪ್ರತಿವಾರ ಬೇರೆ ಬೇರೆ ಸಭೆಗಳಿಗೆ ಅವನ ಭೇಟಿಗಳ ಮಧ್ಯೆ ಅವಳೊಂದಿಗೆ ಉಳುಕೊಳ್ಳುವರು. ಅವನ ಪತ್ನಿ ಕ್ಯೊಕೊ ಅಂದದ್ದು: “ಅವಳು ನಮ್ಮ ಕಾರ್ಯದ ಒಂದು ಪ್ರಾಮುಖ್ಯ ಭಾಗ ಮತ್ತು ನಮಗೆ ಬೇಕಾಗಿದ್ದಾಳೆಂದು ನನ್ನ ತಾಯಿ ಭಾವಿಸುತ್ತಾಳೆ. ಏನಾದರೂ ವಿಶೇಷ ತಿಂಡಿಯನ್ನು ಮಾಡುವಂತೆ ನನ್ನ ಗಂಡನು ಅವಳಿಗೆ ಹೇಳುವಾಗ ಅವಳು ಉಲ್ಲಾಸಪಡುತ್ತಾಳೆ.”
ಮುಪ್ಪಿನ ದೌರ್ಬಲ್ಯದೊಂದಿಗೆ ವ್ಯವಹರಿಸುವುದು
ಹೆತ್ತವರ ವಯಸ್ಸು ಸಂದಷ್ಟಕ್ಕೆ, ವಿವಿಧ ಮಟ್ಟದ ಮುಪ್ಪಿನ ದೌರ್ಬಲ್ಯವು ವಿಕಾಸಗೊಳ್ಳಬಹುದು, ಹೀಗೆ ಅವರಿಗೆ ಅಧಿಕಾಧಿಕ ಗಮನದ ಆವಶ್ಯಕತೆ ಇದೆ. ದಿನಗಳು, ವೇಳೆಗಳು, ಋತುಗಳು ಮತ್ತು ಕೊಟ್ಟಮಾತುಗಳು ಅವರಿಗೆ ಮರೆತು ಹೋಗುತ್ತವೆ. ತಮ್ಮ ಕೂದಲನ್ನು ಕತ್ತರಿಸಲು ಮತ್ತು ಬಟ್ಟೆ ಒಗೆಯಲು ಅವರು ತಪ್ಪಬಹುದು. ಉಡುಪು ತೊಡುವುದು ಮತ್ತು ಸ್ನಾನಮಾಡುವುದು ಹೇಗೆಂದು ಸಹ ಅವರು ಮರೆಯಬಹುದು. ಹೆಚ್ಚಿನವರು ನೆಲೆ ತಿಳಿಯದವರಂತೆ ಭ್ರಾಂತಿಗೊಳ್ಳುವಾಗ, ಇತರರಿಗಾದರೋ ರಾತ್ರಿ ನಿದ್ರೆಬರುವುದು ಕಷ್ಟವಾಗುತ್ತದೆ. ಹೇಳಿದ್ದನ್ನೇ ಪುನಃ ಹೇಳುವ ಪ್ರವೃತ್ತಿ ಇರುತ್ತದೆ ಮತ್ತು ಅದು ಅವರ ಗಮನಕ್ಕೆ ತರಲ್ಪಟ್ಟಾಗ ರೇಗುತ್ತಾರೆ. ಮನಸ್ಸು ಅವರನ್ನು ಮೋಸಗೊಳಿಸುತ್ತದೆ ಮತ್ತು ಗಲಿಬಿಲಿಗೊಳಿಸುತ್ತದೆ. ಅವರಿಂದ ಏನಾದರೂ ಕದಿಯಲ್ಪಟ್ಟಿದೆ ಅಥವಾ ಕಳ್ಳರು ಮನೆಯೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆಂದು ಅವರು ಪಟ್ಟುಹಿಡಿಯಬಹುದು. ನಾಲ್ಕು ಹುಡುಗಿಯರಿದ್ದ ಒಂದು ಕುಟುಂಬಕ್ಕೆ, ಲೈಂಗಿಕ ದುರಾಚಾರದ ನಿರಾಧಾರ ದೋಷಾರೋಪಗಳನ್ನು ಎಡೆಬಿಡದೆ ತಾಳಿಕೊಳ್ಳಬೇಕಾಗಿತ್ತು. “ಅದು ಸಮ್ಮತಿಸಕೂಡದ್ದಾಗಿತ್ತು,” ಎಂದರವರು, “ಆದರೆ ನಾವು ಆರೋಪಗಳನ್ನು ಕೇವಲ ಸಹಿಸಿಕೊಳ್ಳಲು ಕಲಿತೆವು ಮತ್ತು ವಿಷಯವನ್ನು ಬದಲಾಯಿಸಲು ಪ್ರಯತ್ನಿಸಿದೆವು. ಅಜಿಯ್ಜೊಂದಿಗೆ ವಾದಮಾಡುವುದು ನಿಷ್ಫಲ.”—ಜ್ಞಾನೋಕ್ತಿ 17:27.
ಭಾವನಾತ್ಮಕ ಅಗತ್ಯತೆಗಳು ತುಂಬಲ್ಪಡಬೇಕು
ವೃದ್ಧರಿಗೆ ವಯಸ್ಸು ಸಂಕಷ್ಟಗಳನ್ನು ತರುತ್ತದೆ. ತೀವ್ರ ಅಸೌಖ್ಯ, ಚಲನೆ ಶಕ್ತಿಯ ನಷ್ಟ, ಮತ್ತು ಮಾನಸಿಕ ಕ್ಷೋಭೆಗಳನ್ನು ತಾಳಿಕೊಳ್ಳಲಿಕ್ಕದೆ. ಅವರ ಜೀವನಕ್ಕೆ ಯಾವ ಮಾರ್ಗದರ್ಶನ ಯಾ ಉದ್ದೇಶವು ಇಲ್ಲ ಎಂದು ಹೆಚ್ಚಿನವರು ಭಾವಿಸುತ್ತಾರೆ. ತಾವು ಹೊರೆಯಾಗಿದ್ದೇವೆಂದು ಅವರು ಭಾವಿಸಬಹುದು ಮತ್ತು ಸಾಯುವ ಅಪೇಕ್ಷೆಯನ್ನು ವ್ಯಕ್ತಪಡಿಸಬಹುದು. ತಾವು ಪ್ರೀತಿಸಲ್ಪಡುತ್ತೇವೆ, ಗೌರವಿಸಲ್ಪಡುತ್ತೇವೆ, ಮತ್ತು ಒಳಗೂಡಿಸಲ್ಪಡುತ್ತೇವೆಂದು ತಿಳಿಯುವ ಅಗತ್ಯ ಅವರಿಗಿದೆ. (ಯಾಜಕಕಾಂಡ 19:32) ಹಿಸಾಕೊ ಅಂದದ್ದು: “ಅಮ್ಮ ಹಾಜರಿರುವಾಗ ನಾವು ಯಾವಾಗಲೂ ಅವಳನ್ನು ನಮ್ಮ ಸಂಭಾಷಣೆಯಲ್ಲಿ ಕೂಡಿಸಲು, ಸಾಧ್ಯವಾದಲ್ಲಿ ಅವಳನ್ನು ನಮ್ಮ ಸಂಭಾಷಣೆಯ ವಿಷಯವನ್ನಾಗಿ ಮಾಡಲು ನಾವು ಪ್ರಯತ್ನಿಸುತ್ತೇವೆ.” ಇನ್ನೊಂದು ಕುಟುಂಬವು ಅವರ ಅಜ್ಜನನ್ನು ಬೈಬಲ್ ವಚನದ ದೈನಂದಿನ ಚರ್ಚೆಯನ್ನು ನಡಿಸುವಂತೆ ಕೇಳುವ ಮೂಲಕ ಅವನ ಆತ್ಮ-ಪ್ರತಿಷ್ಠೆಯನ್ನು ವರ್ಧಿಸಲು ಪ್ರಯತ್ನಿಸಿದೆ.
ವೃದ್ಧರೆಡೆಗೆ ಯೋಗ್ಯ ನೋಟವನ್ನು ಕಾಪಾಡಲು ಒಬ್ಬನು ಎಡೆಬಿಡದೆ ಪ್ರಯತ್ನಿಸಬೇಕು. ಅವರ ಕುರಿತು ಜರೆದು ಮಾತಾಡುವಾಗ ಅಥವಾ ಅಗೌರವದಿಂದ ಉಪಚರಿಸುವಾಗ ಹಾಸಿಗೆ ಹಿಡಿದ ರೋಗಿಗಳು ರೇಗುತ್ತಾರೆ. “ತಾಯಿ ಅರುಹುಳ್ಳವಳಾಗಿದ್ದಳು,” ವಿವರಿಸಿದಳು ತನ್ನ ಅಂಗವಿಕಲ ಅತೆಯ್ತೊಂದಿಗೆ ವಾಸಿಸುತ್ತಿದ್ದ ಕಿಮಿಕೊ, “ಮತ್ತು ಅವಳ ಉಪಚಾರವನ್ನು ನಾನು ಮನಸ್ಸಿಟ್ಟು ಮಾಡದೆ ಇರುವ ಸಮಯ ಅಥವಾ ಆಶ್ರಯದಾತಳಂಥ ನನ್ನ ನಡತೆಯು ಅವಳಿಗೆ ತಿಳಿಯುತ್ತಿತ್ತು.” ಹಿಡಿಕೊಗೆ ತನ್ನ ಮನೋಭಾವನೆಗಳ ಮೇಲೆ ಕಾರ್ಯನಡಿಸುವ ಅಗತ್ಯವೂ ಇತ್ತು. “ಮೊದಮೊದಲು ನನ್ನ ಅತೆಯ್ತ ಆರೈಕೆಮಾಡಬೇಕಾದಾಗ ನಾನು ಆಶಾಭಂಗಗೊಂಡೆನು. ನಾನು ಪಯನೀಯರ [ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಸೌವಾರ್ತಿಕ] ಳಾಗಿದ್ದೆನು ಮತ್ತು ಶುಶ್ರೂಷೆಯನ್ನು ಮಾಡಲಾಗದಕ್ಕೆ ವಿಷಾದಪಟ್ಟೆನು. ಆಗ ನನ್ನ ಯೋಚನೆಯನ್ನು ಅಳವಡಿಸುವ ಅಗತ್ಯವನ್ನು ನಾನು ಕಂಡುಕೊಂಡೆನು. ಮನೆ-ಮನೆಯ ಶುಶ್ರೂಷೆಯು ಪ್ರಾಮುಖ್ಯವಾಗಿದ್ದರೂ, ಇದು ಕೂಡಾ ದೇವರ ಆಜ್ಞೆಯನ್ನು ಪಾಲಿಸುವ ಒಂದು ಪ್ರಧಾನ ಭಾಗವು. (1 ತಿಮೊಥೆಯ 5:8) ನನಗೆ ಸಂತೋಷ ಸಿಗಬೇಕಾದರೆ ಹೆಚ್ಚು ಪ್ರೀತಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳುವ ಅಗತ್ಯ ನನಗಿದೆಯೆಂದು ಅರಿತೆನು. ವಿಷಯಗಳನ್ನು ಬರೇ ಕರ್ತವ್ಯ ಜ್ಞಾನದಿಂದ ಯಾಂತ್ರಿಕವಾಗಿ ಮಾಡಿದಾಗ ನನ್ನ ಮನಸ್ಸಾಕ್ಷಿ ನನ್ನನ್ನು ಕಾಡಿಸುವುದು. ನನಗೊಂದು ಅಪಘಾತವಾದಾಗ ಮತ್ತು ನೋವಿನಲ್ಲಿದ್ದಾಗ, ನಾನು ನನ್ನ ಅತೆಯ್ತ ಕುರಿತು ಮತ್ತು ಅವಳ ನೋವಿನ ಕುರಿತು ಯೋಚಿಸಿದೆನು. ತದನಂತರ ಹೆಚ್ಚು ಹೃತ್ಪೂರ್ವಕತೆ ಮತ್ತು ಸಹಾನುಭೂತಿ ತೋರಿಸಲು ನನಗೆ ಸುಲಭವಾಯಿತು.”
ಆರೈಕೆಮಾಡುವವರಿಗೂ ಪರಾಮರಿಕೆ ಅಗತ್ಯ
ವಯೋವೃದ್ಧರನ್ನು ಪರಾಮರಿಕೆಮಾಡುವ ಹೊರೆಯು ವಿಶೇಷವಾಗಿ ಯಾರ ಮೇಲೆ ಬೀಳುತ್ತದೋ ಅವರಿಗೆ ಗಣ್ಯತೆ ವ್ಯಕ್ತಪಡಿಸುವ ಅಗತ್ಯವನ್ನು ದುರ್ಲಕ್ಷಿಸಬಾರದು. (ಹೋಲಿಸಿರಿ ಜ್ಞಾನೋಕ್ತಿ 31:28.) ಗಣ್ಯತೆಯ ಮಾತುಗಳು ಹೇಳಲ್ಪಡಲಿ, ಹೇಳಲ್ಪಡದಿರಲಿ, ಹೆಚ್ಚಿನ ಸ್ತ್ರೀಯರು ತಮ್ಮ ಹಂಗುಗಳನ್ನು ನಿರ್ವಹಿಸುತ್ತಾ ಮುಂದರಿಯುತ್ತಾರೆ. ಆದರೂ, ಅವರ ಕೆಲಸದಲ್ಲಿ ಏನೆಲ್ಲಾ ಒಳಗೂಡಿವೆಂಬದನ್ನು ನಾವು ಪರಿಗಣಿಸುವಾಗ, ಅಂಥ ಮಾತುಗಳು ಖಂಡಿತವಾಗಿಯೂ ಯುಕ್ತವಾದವುಗಳು. ಶುಚಿಮಾಡುವ, ತೊಳೆಯುವ ಮತ್ತು ಅಡಿಗೆ ಮಾಡುವದರಲ್ಲಿ ಇನ್ನಷ್ಟು ಹೆಚ್ಚು ಕೆಲಸವು ಅವರಿಗಿರುವುದು ಸಂಭವನೀಯ. ಆಸ್ಪತ್ರೆಗೆ ಅಥವಾ ಡಾಕ್ಟರರ ಬಳಿಗೆ ಹೋಗುವುದನ್ನು ಹಾಗೂ ವೃದ್ಧ ರೋಗಿಯನ್ನು ಉಣಿಸುವ ಮತ್ತು ತೊಳೆಯುವುದನ್ನು ಸಹ ಪರಿಗಣಿಸಿರಿ. ತನ್ನ ಅತೆಯ್ತನ್ನು ಬಹಳ ಸಮಯದಿಂದ ಪರಾಮರಿಸಿದ ಒಬ್ಬಾಕೆ ಸ್ತ್ರೀ ಅಂದದ್ದು: “ಅದನ್ನು ಮಾತಿನಲ್ಲಿ ಹೇಳುವುದು ನನ್ನ ಗಂಡನಿಗೆ ಬಹು ಕಷ್ಟವೆಂದು ನನಗೆ ಗೊತ್ತು, ಆದರೆ ನಾನು ಮಾಡುವುದನ್ನು ಗಣ್ಯಮಾಡುತ್ತಾನೆಂದು ಬೇರೆ ರೀತಿಯಲ್ಲಿ ಅವನು ತೋರಿಸುತ್ತಾನೆ.” ಉಪಕಾರದ ಸರಳ ಮಾತುಗಳು ಅವೆಲ್ಲವನ್ನು ಅರ್ಹವಾಗಿ ತೋರುವಂತೆ ಮಾಡಬಲ್ಲವು.—ಜ್ಞಾನೋಕ್ತಿ 25:11.
ಪ್ರತಿಫಲಗಳೂ ಇವೆ
ಅನೇಕ ವರ್ಷಗಳಿಂದ ವಯೋವೃದ್ಧ ಹೆತ್ತವರ ಪರಾಮರಿಕೆ ಮಾಡಿದ ಅನೇಕ ಕುಟುಂಬಗಳು ಹೇಳುವುದೇನಂದರೆ ಅದು ಅವರಿಗೆ ಪ್ರಾಮುಖ್ಯ ಕ್ರಿಸ್ತೀಯ ಗುಣಗಳನ್ನು ಬೆಳೆಸುವುದಕ್ಕೆ ಸಹಾಯಮಾಡಿದೆ: ತಾಳ್ಮೆ, ಸ್ವ-ತ್ಯಾಗ, ನಿಸ್ವಾರ್ಥ ಪ್ರೀತಿ, ದಕ್ಷತೆ, ದೀನತೆ, ಮತ್ತು ಕೋಮಲತೆ. ಅನೇಕ ಕುಟುಂಬಗಳು ಭಾವನಾತ್ಮಕವಾಗಿ ಹತ್ತಿರಕ್ಕೆ ಎಳೆಯಲ್ಪಟ್ಟಿವೆ. ಹೆತ್ತವರೊಂದಿಗೆ ಹೆಚ್ಚು ಮಾತುಕತೆಯಾಡುವ ಮತ್ತು ಅವರನ್ನು ಚೆನ್ನಾಗಿ ತಿಳಿಯುವ ಸಂದರ್ಭವು ಒಂದು ಅಧಿಕ ಲಾಭಾಂಶ. ಹಿಸಾಕೊ ತನ್ನ ಅತೆಯ್ತ ಕುರಿತು ಹೇಳಿದ್ದು: “ಅವಳ ಜೀವನ ಆಸಕ್ತಭರಿತವಾಗಿತ್ತು. ಆಕೆ ಅನೇಕ ಕಷ್ಟಗಳನ್ನು ಅನುಭವಿಸಿದ್ದಳು. ನನಗೆ ಆಕೆಯನ್ನು ಚೆನ್ನಾಗಿ ತಿಳಿಯಲು ಸಾಧ್ಯವಾಯಿತು ಮತ್ತು ಆಕೆಯಲ್ಲಿ ಹಿಂದೆ ನಾನು ತಿಳಿಯದಿದ್ದಂಥ ಗುಣಗಳನ್ನು ಗಣ್ಯಮಾಡಲು ನಾನು ಕಲಿತೆನು.”
“ನಾನು ಬೈಬಲನ್ನು ಅಭ್ಯಾಸಿಸುವ ಮುಂಚೆ ಒಂದು ಸಮಯದಲ್ಲಿ ನಾನು ವಿಚ್ಛೇದನೆ ಪಡೆದು ಆ ಸನ್ನಿವೇಶವನ್ನು ಬಿಟ್ಟು ಓಡಿಹೋಗಲು ಬಯಸಿದ್ದೆನು,” ಎಂದು ವಿವರಿಸಿದಳು ಕಿಮಿಕೊ, ತನ್ನ ಗಂಡನ ಹೆತ್ತವರನ್ನು ಮತ್ತು ಹಾಸಿಗೆ ಹಿಡಿದಿದ್ದ ಅವನ ಅಜಿಯ್ಜ ಪರಾಮರಿಕೆ ಮಾಡಿದಾಕೆ. “ನಾವು ‘ಸಂಕಟದಲ್ಲಿ ಬಿದ್ದ . . . ವಿಧವೆಯರನ್ನು ಪರಾಮರಿಸ’ ಬೇಕೆಂಬದನ್ನು ನಾನಾಗ ಓದಿದೆ. (ಯಾಕೋಬ 1:27) ನಾನು ಅದನ್ನು ನನ್ನಿಂದಾದಷ್ಟು ಚೆನ್ನಾಗಿ ಮಾಡಿದಕ್ಕಾಗಿ ಸಂತೋಷಿಸುತ್ತೇನೆ, ಈಗ ಕುಟುಂಬದ ಯಾರೂ ನನ್ನ ನಂಬಿಕೆಗಳ ಕುರಿತು ನ್ಯಾಯಯುಕ್ತವಾಗಿ ಗುಣುಗುಟ್ಟಲಾರರು. ನನ್ನ ಮನಸ್ಸಾಕ್ಷಿ ನಿರ್ಮಲವಾಗಿದೆ.” ಇನ್ನೊಬ್ಬನು ಅಂದದ್ದು: “ಆದಾಮನ ಪಾಪದ ಭೀಕರ ಪರಿಣಾಮಗಳನ್ನು ನಾನು ಕಣ್ಣಾರೆ ನೋಡಿದ್ದೇನೆ ಮತ್ತು ಈಗ ಪ್ರಾಯಶ್ಚಿತದ್ತ ಅಗತ್ಯವನ್ನು ಇನ್ನಷ್ಟು ಹೆಚ್ಚಾಗಿ ಗಣ್ಯಮಾಡುತ್ತೇನೆ.”
ಬೇಗನೇ ನೀವು ನಿಮ್ಮ ಮನೆವಾರ್ತೆಯೊಳಗೆ ನಿಮ್ಮ ಕುಟುಂಬದ ಇನ್ನೊಬ್ಬ ಸದಸ್ಯರನ್ನು ಸ್ವಾಗತಿಸಲಿದ್ದೀರೋ? ಅಥವಾ ನೀವು ಪ್ರಾಯಶಃ ನಿಮ್ಮ ವಯೋವೃದ್ಧ ಹೆತ್ತವರೊಂದಿಗೆ ವಸತಿ ಬದಲಾಯಿಸಲಿದ್ದೀರೋ? ತುಸು ಗಾಬರಿಯು ನಿಮಗಾಗುತ್ತಿದೆಯೇ? ಅದು ಗ್ರಹಣೀಯವು. ಸರಿಹೊಂದಿಸುವಿಕೆಗಳನ್ನು ಮಾಡಲಿಕ್ಕಿರುತ್ತದೆ. ಆದರೆ ಆ ಪಂಥಾಹ್ವಾನವನ್ನು ಯಶಸ್ವಿಯಾಗಿ ಎದುರಿಸುವುದರಲ್ಲಿ ನೀವು ಸಥ್ವಃ ಹೇರಳವಾಗಿ ಪ್ರತಿಫಲಹೊಂದುವುದನ್ನು ಕಂಡುಕೊಳ್ಳುವಿರಿ.
[ಪುಟ 24 ರಲ್ಲಿರುವ ಚಿತ್ರ]
ವಯೋವೃದ್ಧರಿಗೆ ತಾವು ಪ್ರೀತಿಸಲ್ಪಡುತ್ತೇವೆ ಮತ್ತು ಗೌರವಿಸಲ್ಪಡುತ್ತೇವೆಂದು ಅನಿಸಿಕೆಯಾಗುವ ಅಗತ್ಯವಿದೆ