ಲ್ಯಾಟಿನ್-ಅಮೆರಿಕನ್ ಚರ್ಚ್ ಸಂಕಟದಲ್ಲಿ ಲಕ್ಷಾಂತರ ಜನರು ಏಕೆ ಬಿಟ್ಟು ಹೋಗುತ್ತಿದ್ದಾರೆ?
ಮೆಕ್ಸಿಕೊ ದೇಶದ ಉತ್ತರ ಗಡಿಯಿಂದ ಹಿಡಿದು ಚಿಲಿಯ ದಕ್ಷಿಣ ತುದಿಯ ವರೆಗೆ, ಮುಖ್ಯ ಚೌಕದಲ್ಲಿ ಒಂದು ರೋಮನ್ ಕ್ಯಾತೊಲಿಕ್ ಚರ್ಚ್ ಇಲ್ಲದ ಒಂದೇ ಒಂದು ನಗರವಾಗಲಿ ಹಳ್ಳಿಯಾಗಲಿ ಇಲ್ಲ. ಆದರೆ, “ಲ್ಯಾಟಿನ್ ಅಮೆರಿಕದಲ್ಲಿ ಒಂದು ಗುರುತರವಾದ ಬದಲಾವಣೆ ನಡೆಯುತ್ತಿದೆ” ಎಂದು ಕ್ಯಾತೊಲಿಕ್ ಚಟುವಟಿಕೆಗಳನ್ನು ವರ್ಧಿಸುವ ಒಂದು ಸಂಘದ ಪ್ರೋಗ್ಯಾಮ್ ಡೈರೆಕ್ಟರರಾದ ಜೋಸೆಫ್ ಇ. ಡೇವಿಸ್ ಒಪ್ಪಿಕೊಳ್ಳುತ್ತಾರೆ. ರೋಮನ್ ಕ್ಯಾತೊಲಿಕ್ ಚರ್ಚಿನ ಪ್ರಭಾವಕ್ಕೆ ಮೂರು ಶತಕಗಳಿಂದಲೂ ಹೆಚ್ಚು ಕಾಲ ಒಳಗಾಗಿದ್ದ ಈ ಲ್ಯಾಟಿನ್ ಅಮೆರಿಕ ಪ್ರದೇಶವು ಈಗ ಒಂದು ಮಹತ್ತರವಾದ ರೂಪಾಂತರದ ಅಂಚಿನಲ್ಲಿದೆ ಎಂದೂ ಅವರು ಒಪ್ಪಿಕೊಂಡರು.
ಕ್ಯಾತೊಲಿಕ್ ಚರ್ಚಿನ ಅಧಿಕಾರ ಶಕ್ತಿ ಕ್ಷಿಪ್ರವಾಗಿ ಬಲಹೀನಗೊಳ್ಳುತ್ತಿದೆ ಎಂಬುದು ರಹಸ್ಯವಲ್ಲ. ಲ್ಯಾಟಿನ್ ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ 15 ಪ್ರತಿಶತ ಜನರು ಮಾತ್ರ ಸಕ್ರಿಯರಾದ ಕ್ಯಾತೊಲಿಕರೆಂದು ಇತ್ತೀಚೆಗೆ ಅಂದಾಜು ಮಾಡಲಾಯಿತು. ಈ ವರದಿಯನ್ನು 1991 ಬ್ರಿಟ್ಯಾನಿಕ ಬುಕ್ ಆಫ್ ದ ಯಿಯರ್ ಮಾಡಿತು: “ರೋಮನ್ ಕ್ಯಾತೊಲಿಕ್ ಬಿಷಪರುಗಳು ಮತ್ತು ಪೋಪರು ಸಹ, ಐತಿಹಾಸಿಕವಾಗಿ ಕ್ಯಾತೊಲಿಕ್ ಲ್ಯಾಟಿನ್ ಅಮೆರಿಕವು ಹಳೆಯ ನಂಬಿಕೆಯಿಂದ ಅಪಾಯಕರವಾಗಿ ತಿರುಗುತ್ತಿದೆ ಎಂಬ ಭಯವನ್ನು ವ್ಯಕ್ತಪಡಿಸಿದರು.” ಇದೇಕೆ ಸಂಭವಿಸುತ್ತಿದೆ? ಕ್ಯಾತೊಲಿಕ್ ಸಭೆಯನ್ನು ಅಷ್ಟೊಂದು ಜನರು ಬಿಟ್ಟುಹೋಗುವುದೇಕೆ? ಹೀಗೆ ಬಿಟ್ಟುಹೋಗುವವರಿಗೆ ಏನು ಸಂಭವಿಸಿದೆ?
ಒಂದು ವಿವರಣೆಗಾಗಿ ತಲಾಷು
ತಮ್ಮ ಸಮಸ್ಯೆಗಳಿಗೆ “ಪಂಥಗಳ” ಬೆಳವಣಿಗೆಯೇ ಕಾರಣವೆಂದು ಕ್ಯಾತೊಲಿಕ್ ನೇತಾರರು ಅಪವಾದ ಹಾಕುತ್ತಾರೆ. ಬೊಲಿವಿಯದಲ್ಲಿ ಕೆಲಸಮಾಡುತ್ತಿರುವ ಒಬ್ಬ ಯೂರೋಪಿಯನ್ ಪಾದ್ರಿ ಹೇಳಿದ್ದು: “ಚರ್ಚು, ಹಣಜಿಗಳಂಥ ಪಂಥಗಳಿಂದ ದುರ್ಬಲಗೊಳ್ಳುತ್ತಿರುವ ಒಂದು ಮರದಂತಿದೆ.”
ಆರ್ಜೆಂಟೀನದಲ್ಲಿ ಪ್ರತಿ ವರ್ಷ 140 ಹೊಸ ಧರ್ಮಗಳು ವರದಿಯಾಗುತ್ತಿವೆ. ಇದು, ಮಧ್ಯ 1970 ರುಗಳಿಂದ ಕ್ಯಾತೊಲಿಕ್ ಚರ್ಚ್ ಸದಸ್ಯತನವು 90 ಪ್ರತಿಶತದಿಂದ 60 ಯಾ 70 ಪ್ರತಿಶತಕ್ಕೆ ಕಡಮೆಯಾಗಿರುವುಕ್ಕೆ ಸಹಾಯ ಮಾಡಿರಬಹುದು. ಮೆಕ್ಸಿಕೊ ದೇಶದ ಟೀವಾನದಲ್ಲಿ, 20 ಲಕ್ಷ ನಿವಾಸಿಗಳಲ್ಲಿ 10 ಪ್ರತಿಶತ, ಅಲ್ಲಿರುವ 327 ಕ್ಯಾತೊಲಿಕೇತರ ಧರ್ಮಗಳಿಗೆ ಹೋಗಿದ್ದಾರೆ. ಟೈಮ್ ಪತ್ರಿಕೆ ವರದಿ ಮಾಡಿದ್ದು: “ವಿಸ್ಮಯಕರವಾಗಿ, ಚರ್ಚುಗಳಲ್ಲಿ ಭಾನುವಾರ ಬಹುಮಟ್ಟಿಗೆ ನಿಶ್ಚಯವಾಗಿ ಕ್ಯಾತೊಲಿಕರಿಗಿಂತ ಹೆಚ್ಚು ಮಂದಿ ಬ್ರಜಿಲ್ಯನ್ ಪ್ರಾಟೆಸ್ಟಂಟರಿದ್ದಾರೆ.” ಒಂದು ವಾರ್ತಾಪತ್ರಿಕೆ ವರದಿ ಮಾಡಿದಂತೆ, “ಲ್ಯಾಟಿನ್ ಅಮೆರಿಕನ್ ಕಾರ್ಡಿನಲರು ಇಂದು ಚರ್ಚಿಗೆ ಪ್ರಧಾನ ಪ್ರಾಮುಖ್ಯವಾದ ಎರಡು ವಿಷಯಗಳನ್ನು ಚರ್ಚಿಸಲು ಪೋಪರನ್ನು ಭೇಟಿ” ಯಾದಾಗ, ಅವುಗಳಲ್ಲಿ ಒಂದು “ಪಂಥಗಳ ಸಮಸ್ಯೆ” ಯಾಗಿದ್ದದ್ದು ಆಶ್ಚರ್ಯವಲ್ಲ.
ಮೆಕ್ಸಿಕೊ ದೇಶದ ಬಿಷಪರೊಂದಿಗೆ ಮಾಡಿದ ಕೂಟದಲ್ಲಿ, ಅನೇಕ ಹೊಸ ಧರ್ಮಗಳ ಸಾಫಲ್ಯವು “ತಮ್ಮ ಸೌವಾರ್ತಿಕ ಗುರಿಯನ್ನು ಹಿಡಿಯದ ಚರ್ಚ್ ಪುತ್ರರುಗಳ ಉಗುರುಬೆಚ್ಚಗೆನ ಮತ್ತು ಉದಾಸೀನ ಸ್ಥಿತಿಯ ಕಾರಣವೇ” ಎಂದು ಪೋಪರು ಹೇಳಿದರು. ಹಾಗಾದರೆ ಲ್ಯಾಟಿನ್ ಅಮೆರಿಕನರಲ್ಲಿ ಎಷ್ಟೋ ಮಂದಿ ಬೈಬಲನ್ನು ಗೌರವಿಸುವಾಗ, “ಚರ್ಚ್ ಪುತ್ರರುಗಳು” ಜನರ ಆತ್ಮಿಕ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ಉದಾಸೀನರಾಗಿರುವುದೇಕೆ? ಬೊಲಿವಿಯದ ಲ ಪಾಜ್ನ ಅಲೀಮ್ಟ ಓರ ಪತ್ರಿಕೆಯ ಒಂದು ಸಂಪಾದಕೀಯವು ವಿವರಿಸುವುದು: “ಚರ್ಚು ಈ ಲೋಕವನ್ನು ಎಷ್ಟರ ಮಟ್ಟಿಗೆ ಪ್ರವೇಶಿಸಿದೆಯೆಂದರೆ ಪ್ರತಿ ದಿನ ಅದು ತನ್ನ ಸ್ವಂತ ಕ್ಷೇತ್ರವನ್ನು ಇನ್ನಷ್ಟು ಹೆಚ್ಚು ತ್ಯಜಿಸುವಂತೆ ಕಾಣುತ್ತದೆ. ಈಗ ವಾಸ್ತವವಾಗಿ ಸಂಭವಿಸುತ್ತಿರುವಂತೆ, ಪಾದ್ರಿಗಳು ಪುರೋಹಿತರಿಗಿಂತ ಹೆಚ್ಚಾಗಿ ಸಮಾಜ ಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು, ಪತ್ರಿಕೋದ್ಯೋಗಿಗಳು, ಯಾ ರಾಜಕಾರಣಿಗಳಾಗಿದ್ದಾರೆ ಎಂದು ಕಂಡುಹಿಡಿಯುವುದು ನಮಗೆ ಆಶ್ಚರ್ಯವನ್ನುಂಟುಮಾಡಬಾರದು.”
ಧರ್ಮ ಪ್ರವಚಕರಿಗಿಂತ ಹೆಚ್ಚು ರಾಜಕಾರಣಿಗಳೊ?
ಎಪ್ಪತ್ತರುಗಳಲ್ಲಿ ಮತ್ತು 80 ರುಗಳಲ್ಲಿ ರಾಜಕಾರಣದಲ್ಲಿ ಚರ್ಚಿನ ತಲೆಹಾಕುವಿಕೆಯು ನಿಸ್ಸಂಶಯವಾಗಿ ಅನೇಕ ಲ್ಯಾಟಿನ್ ಅಮೆರಿಕನರು ಈಗ ಕ್ಯಾತೊಲಿಕ್ ಧರ್ಮದ ಕಡೆಗೆ ತೋರಿಸುವ ಜುಗುಪ್ಸೆಗೆ ಸಹಾಯ ಮಾಡಿದೆ. ಇಸವಿ 1985 ರಲ್ಲಿ ಮಾಡಿದ ಒಂದು ಅಧ್ಯಯನವು, ಅನೇಕ ಲ್ಯಾಟಿನ್ ಅಮೆರಿಕನ್ ಮಿಷನ್ಗಳಿರುವ ಅಮೆರಿಕದ ಕ್ಯಾತೊಲಿಕ್ ಫಾರಿನ್ ಮಿಷನ್ ಸೊಸೈಟಿಯಾದ ಮೇರಿನಾಲ್ ಸಂಬಂಧದಲ್ಲಿ ಈ ಕೆಳಗಿನ ಅವಲೋಕನವನ್ನು ಮಾಡಿತು: “ಮೇರಿನಾಲ್ ಹಿಂಸಾತ್ಮಕ ಕ್ರಾಂತಿ ಸಂಬಂಧವಾದ ಮಾರ್ಕ್ಸಿಸ್ಟ್-ಲೆನಿನಿಸ್ಟ್ ಸಂದೇಶವನ್ನು, ಅದು ಕ್ಯಾತೊಲಿಕ್ ಚರ್ಚಿನ ಬಾಹುವಾಗಿ ಕಾರ್ಯ ನಡೆಸುವಂತೆ ಅನುಮತಿಸಲ್ಪಟ್ಟಿರುವ ಆ ನಿಷ್ಕೃಷ್ಟ ಕಾರಣದಿಂದಲೇ ಯಶಸ್ವಿಯಾಗಿ ಸಾರ್ವಜನಿಕ ಸ್ವೀಕಾರಾರ್ಹತೆಗೆ ತಂದದೆ. ಅದರ ಸಂದೇಶವು ಸಾಮಾನ್ಯ ಚರ್ಚಿಗನನ್ನು ಮಾತ್ರವಲ್ಲ, ಪ್ರಮುಖ ಅಮೆರಿಕನ್ ರಾಜನೀತಿ ತಯಾರಕರನ್ನೂ ತಲುಪಿದೆ.”
ಯಾವುದರಲ್ಲಿ ವಿಸ್ಮಯಕರವಾಗಿ, 10,000 ದಿಂದ 30,000 ಮಂದಿ ಆರ್ಜೆಂಟೀನದವರನ್ನು ಅಪಹರಿಸಿ 70 ರುಗಳಲ್ಲಿ ನ್ಯಾಯವಿಚಾರಣೆಯಿಲ್ಲದೆ ಕೊಲಲ್ಲಾಯಿತೋ ಆ ನೀಚ ಯುದ್ಧವೆಂದು ಕರೆಯಲ್ಪಟ್ಟ ಯುದ್ಧವನ್ನು ಸಹ ಪರಿಗಣಿಸಿರಿ: ನ್ಯಾಷನಲ್ ಕ್ಯಾತೊಲಿಕ್ ರಿಪೋರ್ಟರ್ ನ ಒಂದು ಸಂಪಾದಕೀಯವು, “ಆರ್ಜೆಂಟೀನದಲ್ಲಿ ಚರ್ಚನ್ನು ರಕ್ತವು ಕಳಂಕಿಸುತ್ತದೆ” ಎಂಬ ಶೀರ್ಷಿಕೆಯ ಕೆಳಗೆ ಹೀಗೆಂದಿತು: “ಈ ಆರ್ಜೆಂಟೀನ ಅನುಭವವು ನಾಜಿ ಜರ್ಮನಿಯಲ್ಲಿ ಕ್ಯಾತೊಲಿಕ್ ಚರ್ಚ್ ಮಾಡಿದ ಕೆಲಸವನ್ನು ಎಷ್ಟು ಒತ್ತಾಗಿ ಹೋಲುತ್ತದೆಂದರೆ ಚರ್ಚಿಗೆ ಸತ್ಯಕ್ಕೆ ಸಾಕ್ಷಿಯಾಗಿರುವ ಸುವಾರ್ತಾ ಆವಶ್ಯಕತೆಗಿಂತ ಅಧಿಕಾರವೇ ಹೆಚ್ಚು ಪ್ರಾಮುಖ್ಯವೋ ಎಂಬ ಪ್ರಶ್ನೆಯನ್ನು ಇದು ಪುನಃ ಎಬ್ಬಿಸುತ್ತದೆ.”
ಲೋಕದ ಸರಕಾರಗಳಲ್ಲಿ ಚರ್ಚಿಗಿರುವ ಅಧಿಕಾರಾಪೇಕ್ಷೆಯು ಅದು ದೇವರ ಮಿತ್ರನಲ್ಲವೆಂದು ಸ್ಪಷ್ಟವಾಗಿಗಿ ಗುರುತಿಸುತ್ತದೆ. ಬೈಬಲು ಹೇಳುವುದು: “ಲೋಕವನ್ನು ನಿಮ್ಮ ಮಿತ್ರನಾಗಿ ಮಾಡುವುದು ದೇವರನ್ನು ನಿಮ್ಮ ವೈರಿಯಾಗಿ ಮಾಡುತ್ತದೆಂದು ನೀವು ಗ್ರಹಿಸುವುದಿಲ್ಲವೊ? ಲೋಕವನ್ನು ತನ್ನ ಮಿತ್ರನಾಗಿ ಆಯ್ದುಕೊಳ್ಳುವ ಯಾವನೂ ತನ್ನನ್ನು ದೇವರ ಶತ್ರುವಾಗಿ ಮಾಡಿಕೊಳ್ಳುತ್ತಾನೆ.” (ಯಾಕೋಬ 4:4, ಕ್ಯಾತೊಲಿಕ್ ಜೆರೂಸಲೇಮ್ ಬೈಬಲ್) ಹೀಗಿರುವುದರಿಂದ, ಅನೇಕರು ಆತ್ಮಿಕ ಮಾರ್ಗದರ್ಶನಕ್ಕಾಗಿ ಕ್ಯಾತೊಲಿಕ್ ಚರ್ಚಿನೆಡೆಗೆ ನೋಡದಿರುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಕ್ಯಾತೊಲಿಕ್ ಸಭೆಯನ್ನು ಬಿಟ್ಟುಹೋದ ಜನರಿಗೆ ಏನು ಸಂಭವಿಸಿದೆ?
ಕುರುಬನಿಲ್ಲದ ಕುರಿಗಳು
ಒಂದನೆಯ ಶತಮಾನದ ಯೆಹೂದಿ ಮತದ ಆತ್ಮಿಕ ಮುಖಂಡರು ಪರಾಮರಿಸಲು ತಪ್ಪಿದ ಜನರಂತೆಯೇ ಇವರಿದ್ದಾರೆ. ಯೇಸು “ಅವರಿಗಾಗಿ ಮರುಗಿದನು, ಏಕೆಂದರೆ ಅವರು ಕುರುಬನಿಲ್ಲದ ಕುರಿಗಳಂತೆ ಪೀಡಿಸಲ್ಪಟ್ಟು ಖಿನ್ನರಾಗಿದ್ದರು,” ಎಂದು ಬೈಬಲು ಹೇಳುತ್ತದೆ. (ಮತ್ತಾಯ 9:36, ಜೆಬಿ) ಅನೇಕರು ಕ್ಯಾತೊಲಿಕ್ ಚರ್ಚನ್ನು ಬಿಟ್ಟು ಸೌವಾರ್ತಿಕ ಧರ್ಮಗಳೆಂದು ಕರೆಯಲ್ಪಡುವ ಧರ್ಮಗಳಿಗೆ ಹೋಗಿದ್ದಾರೆ. ಆದರೆ ಇವು ಈ ದಾರಿ ತಪ್ಪಿದ ಕುರಿಗಳನ್ನು ಹೆಚ್ಚು ಉತ್ತಮವಾಗಿ ಪರಾಮರಿಸಿವೆಯೊ? ತನ್ನ ನಿಜ ಹಿಂಬಾಲಕರು “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ” ಎಂದು ಯೇಸು ಹೇಳಿದಂತೆ, ಪ್ರಾಟೆಸ್ಟಂಟರು ಇಂಥ ಪ್ರವೃತ್ತಿಯವರಾಗಿದ್ದಾರೊ?—ಯೋಹಾನ 17:14.
ಅನೇಕ ಕ್ಯಾತೊಲಿಕೇತರ ಧರ್ಮಗಳು ತಾವು ಧಾರ್ಮಿಕ ಸಂಪ್ರದಾಯದ ಹಿಂಬಾಲಕರಾಗಿರುವ ಬದಲು ಬೈಬಲಿಗೆ ವಿಧೇಯರು ಎಂಬ ಸ್ವರೂಪವನ್ನು ಪ್ರಕ್ಷೇಪಣೆ ಮಾಡಪ್ರಯತ್ನಿಸುತ್ತವೆ. ಅನೇಕ ವೇಳೆ ಇದು ಕೇವಲ ಒಂದು ಲೇಪ. ಪ್ರಾಟೆಸ್ಟಂಟ್ ಸಂಘಗಳ ಮೂಲ ತತ್ವಗಳು ಕ್ಯಾತೊಲಿಕ್ ಚರ್ಚಿನದ್ದಕ್ಕೆ ಎಷ್ಟೊಂದು ಸದೃಶವೆಂದರೆ ಅನೇಕ ಪ್ರೇಕ್ಷಕರು, “ಎಸ್ಲ ಮೀಸ್ಮ ಚೊಲೀಟ ಕಾನ್ ಆಟ್ರ ಪೋಲ್ಯಾರ” (ಇವಳು ಭಿನ್ನ ಲಂಗವನ್ನುಟ್ಟ ಅದೇ ಚಿಕ್ಕ ಇಂಡಿಯನ್ ಹೆಂಗಸು), ಎಂಬ ಆ್ಯಂಡೀಸ್ ಪರ್ವತ ಪ್ರದೇಶದ ನಾಣ್ಣುಡಿಯನ್ನು ಸುಲಭವಾಗಿ ಉಪಯೋಗಿಸಬಲ್ಲರು.
ಉದಾಹರಣೆಗೆ, ಸುಮಾರಾಗಿ ಎಲ್ಲ ಪ್ರಾಟೆಸ್ಟಂಟ್ ಗುಂಪುಗಳು ದೇವರು ಒಬ್ಬ ತ್ರಯೈಕ್ಯನೆಂದು ಕಲಿಸುತ್ತಾರಾದರೂ, ಇದು ಒಂದು ಬೈಬಲ್ ಬೋಧನೆಯಲ್ಲ. ದಿ ಎನ್ಸೈಕ್ಲೋಪೀಡಿಯ ಆಫ್ ರಿಲಿಜನ್ ಒಪ್ಪಿಕೊಳ್ಳುವುದು: “ಅರ್ಥ ಪ್ರತಿಪಾದಕರು ಮತ್ತು ದೇವತಾಶಾಸ್ತ್ರಜ್ಞರು ಇಂದು ಹೀಬ್ರು ಬೈಬಲು ಒಂದು ತ್ರಯೈಕ್ಯ ತತ್ವವನ್ನು ಒಳಗೊಂಡಿರುವುದಿಲ್ಲ ಎಂಬ ಬಗ್ಗೆ ಏಕಾಭಿಪ್ರಾಯವುಳ್ಳವರಾಗಿದ್ದಾರೆ . . . ಹೊಸ ಒಡಂಬಡಿಕೆಯಲ್ಲಿ ಸಹ ಸ್ಪಷ್ಟವಾಗಿದ ತ್ರಯೈಕ್ಯ ತತ್ವವಿರುವುದಿಲ್ಲ.”a
ಪ್ರಾಟೆಸ್ಟಂಟರು ಕ್ಯಾತೊಲಿಕರಷ್ಟೇ ಸ್ಪಷ್ಟವಾಗಿಗಿ ಈ ಜಗತ್ತಿಗೆ ಮತ್ತು ಅದರ ರಾಜಕಾರಣಕ್ಕೆ ಸಂಬಂಧವುಳ್ಳವರಾಗಿದ್ದಾರೆ. ಎನ್ಸೈಕ್ಲೋಪೀಡಿಯ ಆಫ್ ಲ್ಯಾಟಿನ್ ಅಮೆರಿಕ ಹೇಳುವುದು: “ಪ್ರಾಟೆಸ್ಟಂಟ್ ಧರ್ಮವೂ ಲ್ಯಾಟಿನ್ ಅಮೆರಿಕದಲ್ಲಿ . . . ಸಮಷ್ಟಿ ವಾದದ ಚುನಾವಣಾ ರಾಜಕಾರಣಕ್ಕೆ ತನ್ನನ್ನು ಹೊಂದಿಸಿಕೊಂಡಿದೆ. ಸ್ವದೇಶಿ ಪಾಲಕರು ಅನೇಕ ವೇಳೆ ರಾಜಕೀಯ ಪೋಷಕರ ಗಿರಾಕಿಗಳಾಗಿ ಪರಿಣಮಿಸಿ ತಮ್ಮ ಚರ್ಚುಗಳಿಗೆ ಸರಕಾರವು ಒದಗಿಸುವ ಸಹಾಯಗಳಿಗೆ ಪ್ರತಿಯಾಗಿ ಮತಗಳನ್ನು ಒದಗಿಸುತ್ತಾರೆ.” ಲ್ಯಾಟಿನ್ ಅಮೆರಿಕನ್ ರಿಸರ್ಚ್ ರಿವ್ಯೂ ಹೇಳುವುದು: “ಈ ದೇಶಕ್ಕೆ ಪ್ರಪ್ರಥಮವಾಗಿ ಬಂದಂದಿನಿಂದ ಪ್ರಾಟೆಸ್ಟಂಟ್ ದಲ್ಲಿ ಧರ್ಮಕ್ಕೆ ರಾಜಕೀಯದೊಂದಿಗೆ ಲಗ್ನವಾಗಿಯದೆ.” ಅದು ಕೂಡಿಸಿ ಹೇಳುವುದು: “ಅದು ಧರ್ಮದ ಒಂದು ರೂಪವನ್ನು ಎಷ್ಟೋ ಅಷ್ಟೇ ರಾಜಕೀಯ ಹಾಗೂ ಸಾಮಾಜಿಕ ವರ್ತನೆಗಳನ್ನು ರವಾನಿಸುವ ವಾಹಕವೂ ಆಗಿದೆ.”
ರಾಜಕಾರಣದಲ್ಲಿ ಪ್ರಾಟೆಸ್ಟಂಟರ ಭಾಗವಹಿಸುವಿಕೆಯು ಅನೇಕ ವೇಳೆ ಯುದ್ಧದಲ್ಲಿ ಪ್ರಾಟೆಸ್ಟಂಟರ ಭಾಗವಹಿಸುವಿಕೆಗೆ ನಡಸಿದೆ. ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಪ್ರಭಾವಿಯಾದ ಪ್ರಾಟೆಸ್ಟಂಟ್ ಪಾದ್ರಿಗಳಲ್ಲಿ ಒಬ್ಬರೆಂದು ಎಣಿಸಲ್ಪಟ್ಟಿರುವ ಮಾಜಿ ಹ್ಯಾರಿ ಎಮರ್ಸನ್ ಫಾಸಿಕ್ಡ್ ಒಪ್ಪಿಕೊಂಡದ್ದು: “ನಮ್ಮ ಪಾಶ್ಚಿಮಾತ್ಯ ಇತಿಹಾಸವೆಂದರೆ ಒಂದರ ಹಿಂದೆ ಇನ್ನೊಂದು ಯುದ್ಧವೇ ಸರಿ. ನಾವು ಯುದ್ಧಕ್ಕಾಗಿ ಪುರುಷರನ್ನು ಪೋಷಿಸಿದ್ದೇವೆ, ಪುರುಷರಿಗೆ ಯುದ್ಧಕ್ಕಾಗಿ ತರಬೇತು ಕೊಟ್ಟಿದೇವ್ದೆ; ಯುದ್ಧಕ್ಕೆ ದಿವ್ಯ ಪದವಿ ಕೊಟ್ಟಿದೇವ್ದೆ; ಯೋಧರನ್ನು ನಮ್ಮ ರಣವೀರರಾಗಿ ಮಾಡಿದ್ದೇವೆ ಮತ್ತು ನಮ್ಮ ಚರ್ಚುಗಳಲ್ಲಿಯೂ ನಾವು ರಣಧ್ವಜವನ್ನು ಇಟ್ಟಿದ್ದೇವೆ. . . . ನಮ್ಮ ಬಾಯಿಯ ಒಂದು ಅಂಚಿನಿಂದ ಶಾಂತಿಯ ಪ್ರಭುವನ್ನು ನಾವು ಸ್ತುತಿಸಿ, ಇನ್ನೊಂದರಿಂದ ಯುದ್ಧವನ್ನು ಘನತೆಗೇರಿಸಿದ್ದೇವೆ.”
ನೀವೇನು ಮಾಡಬೇಕು?
ಸುಳ್ಳು ಧರ್ಮವನ್ನು ಭೂಸರಕಾರಗಳೊಂದಿಗೆ ಜಾರತ್ವ ನಡೆಸುವ ಸೂಚಕರೂಪದ ವೇಶ್ಯೆಯಂತೆ ವರ್ಣಿಸಿದ ಬಳಿಕ, ಬೈಬಲಿನ ಪ್ರಕಟನೆ ಪುಸ್ತಕವು ಹೇಳುವುದು: “ನನ್ನ ಜನರೇ, ಆಕೆಯ ಪಾತಕಗಳಲ್ಲಿ ಪಾಲಿಗರಾಗದಂತೆ ಮತ್ತು ಆಕೆಗೆ ಬರುವ ವ್ಯಾಧಿಗಳನ್ನು ನೀವೂ ಪಡೆಯದಂತೆ, ಅವಳನ್ನು ಬಿಟ್ಟು ಹೊರಗೆ ಬನ್ನಿರಿ.”—ಪ್ರಕಟನೆ 18:4, ಜೆಬಿ.
ಚರ್ಚಿನಲ್ಲಿ ಬಹಳ ಭ್ರಷ್ಟಾಚಾರವಿದೆಯೆಂದು ಅನೇಕರು ಗ್ರಹಿಸಿದ್ದಾರಾದರೂ, ರೋಮನ್ ಚರ್ಚಿಗೆ ಎಷ್ಟೋ ಪುರಾತನ ಇತಿಹಾಸವಿರುವ ಕಾರಣ ಅವರು ಅದನ್ನು ಬಿಡಲು ಹಿಂಜರಿಯುತ್ತಾರೆ. ಆದರೂ, ಯೆಹೂದ್ಯ ಆರಾಧನಾ ಪದ್ಧತಿ ಬಹು ಹಳೆಯದಾಗಿತ್ತು; ಹೀಗಿದ್ದರೂ ಯೆಹೂದ್ಯರು ತನ್ನ ನಿಜ ಬೋಧನೆಗಳನ್ನು ಭ್ರಷ್ಟ ಮಾಡಿದಾಗ ದೇವರು ಅವರನ್ನು ತಳ್ಳಿಹಾಕಿದನೆಂದು ಜ್ಞಾಪಿಸಿಕೊಳ್ಳಿರಿ. ದೇವರ ನಂಬಿಗಸ್ತ ಸೇವಕರು, ಯೆಹೂದ್ಯ ಧರ್ಮದ ಬದಲಿಗೆ ದೇವರು ಈಗ ಕ್ರೈಸ್ತ ಸಭೆಯನ್ನು ಉಪಯೋಗಿಸುತ್ತಿದ್ದಾನೆಂದು ಗ್ರಹಿಸಿದಾಗ ಅದನ್ನು ಬಿಟ್ಟು ಬಂದರು. ನೀವು ಇಂದು ಸತ್ಯ ಕ್ರೈಸ್ತ ಸಭೆಯನ್ನು ಹೇಗೆ ಗುರುತಿಸಬಲ್ಲಿರಿ?
ಸುಮಾರು ಹತ್ತು ಲಕ್ಷ ಲ್ಯಾಟಿನ್ ಅಮೆರಿಕನರು ಕಳೆದ ಎರಡು ದಶಕಗಳಲ್ಲಿ ಯೆಹೋವನ ಸಾಕ್ಷಿಗಳಾಗಿದ್ದಾರೆ. ಅವರು ಈ ಪರಿವರ್ತನೆಯನ್ನು ಏಕೆ ಮಾಡಿದರು? ಮೆಕ್ಸಿಕೊ ದೇಶದ ವೇರಾಕ್ರೂಜ್ನ ಮಾರ್ಟೀನೆಸ್ ಡೆ ಲ ಟೋರೆಯಲ್ಲಿ ಒಂದು ವಾರ್ತಾಪತ್ರಿಕೆ, ಈ ಪ್ರಶ್ನೆಯನ್ನು ಪರೀಕ್ಷಿಸಿತು. ಅದು ಹೇಳಿದ್ದು: “ಈ ಬೈಬಲ್ ವಿದ್ಯಾರ್ಥಿಗಳಲ್ಲಿ ಅಧಿಕಾಂಶ 100 ಪ್ರತಿಶತ, ವಿವಿಧ ಧರ್ಮಗಳಲ್ಲಿ, ಹೆಚ್ಚಾಗಿ ಕ್ಯಾತೊಲಿಕರಲ್ಲಿ ಈ ಹಿಂದೆ ಸಕ್ರಿಯರಾಗಿದ್ದವರು. ಅವರು ಧರ್ಮವು ರಾಜಕೀಯದ ಕಡೆಗೆ ಹರಿದು ಹೋಗುವುದನ್ನೂ, ಅದು ಮಧ್ಯ ನಂಬಿಕೆ, ಅನೈತಿಕತೆ, ಮತ್ತು ಹಿಂಸಾಚಾರದಂತಹ ಬೈಬಲಿಗೆ ಹೊಂದಿಕೆಯಾಗಿರದ ಆಚಾರಗಳನ್ನು ಅಂಗೀಕರಿಸಿ ಸಮ್ಮತಿಸುವುದನ್ನೂ ಗಮನಿಸಿದವರು. ವರ್ತನೆಯ ಶಾಸ್ತ್ರೀಯ ಮೂಲಸೂತ್ರಗಳಿಗೆ, ವಿಗ್ರಹಾರಾಧನೆ ಯಾ ಮಬ್ಬಾದ ಮೂಲವಿರುವ ಸಂಪ್ರದಾಯಗಳ ಸಹಾಯವಿಲ್ಲದೆ ಹೊಂದಿಕೊಳ್ಳುವುದು ಅವರಿಗೆ ಸಂತೃಪ್ತಿಯ ಆಕರವಾಗಿದೆ. ಇದು ಅವರಿಗೆ, ಎಲ್ಲಿದ್ದರೂ ಅವರನ್ನು ಪ್ರತ್ಯೇಕಿಸುವಂತೆ ತೋರುವ ನಂಬಿಕೆಯ ಪ್ರಶಂಸಾರ್ಹ ಐಕ್ಯವನ್ನು ಕೊಟ್ಟಿದೆ.”
ಇನ್ನೊಂದು ಲ್ಯಾಟಿನ್-ಅಮೆರಿಕನ್ ವೃತ್ತಪತ್ರಕೆ ಅದನ್ನು ಹೀಗೆ ಹೇಳಿತು: “ಯೆಹೋವನ ಸಾಕ್ಷಿಗಳು ಕಷ್ಟಪಟ್ಟು ಕೆಲಸ ಮಾಡುವ, ಪ್ರಾಮಾಣಿಕ, ದೇವಭಯವುಳ್ಳ ಜನರು. ಅವರು ಸಂಪ್ರದಾಯ ಪಾಲಕರೂ ಸಂಪ್ರದಾಯ ಪ್ರೇಮಿಗಳೂ ಆಗಿದ್ದಾರೆ, ಮತ್ತು ಅವರ ಧರ್ಮವು ಬೈಬಲಿನ ಬೋಧನೆಗಳಲ್ಲಿ ಆಧಾರಗೊಂಡಿದೆ.” ನೀವೆಲ್ಲಿ ಜೀವಿಸುವುದಾದರೂ, ನಾವು ನಿಮ್ಮನ್ನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ಮಾಡುವಂತೆ ಆಮಂತ್ರಿಸುತ್ತೇವೆ. ಅವರ ನಿರೀಕ್ಷೆ ಮತ್ತು ಅವರ ಇಡೀ ಜೀವನಮಾರ್ಗವೇ ಬೈಬಲಿನಲ್ಲಿ ಆಧಾರಗೊಂಡಿದೆಯೆಂದು ನೀವು ತಿಳಿಯುವಿರಿ. ಹೌದು, ದೇವರನ್ನು “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ” ಹೇಗೆ ಆರಾಧಿಸಬೇಕೆಂದು ನೀವು ಕಲಿಯುವಿರಿ.—ಯೋಹಾನ 4:23, 24.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ ಪ್ರಕಾಶಪಡಿಸಿರುವ ನೀವು ತ್ರಯೈಕ್ಯವನ್ನು ನಂಬಬೇಕೋ? ಎಂಬ ಬ್ರೊಷರ್ ನೋಡಿರಿ.
[ಪುಟ 21 ರಲ್ಲಿರುವ ಚಿತ್ರ]
ಕೆಲವು ಲ್ಯಾಟಿನ್-ಅಮೆರಿಕನ್ ದೇಶಗಳಲ್ಲಿ ಯೆಹೋವನ ಸಾಕ್ಷಿಗಳು
1971 1992
ದೇಶ ಪ್ರಚಾರಕರು ಪ್ರಚಾರಕರು
ಆರ್ಜೆಂಟೀನ 20,750 96,780
ಬೊಲಿವಿಯ 1,276 8,868
ಬ್ರಜೀಲ್ 72,269 3,35,039
ಚಿಲಿ 8,231 44,067
ಕೊಲಂಬಿಯ 8,275 55,215
ಕೊಸ್ಟರೀಕ 3,271 14,018
ಡೊಮಿನಿಕನ್ ರಿಪಬ್ಲಿಕ್ 4,106 15,418
ಎಕಡ್ವಾರ್ 3,323 22,763
ಎಲ್ ಸಾಲ್ವಡೋರ್ 2,181 20,374
ಗ್ವಾಡೆಲೋಪ್ 1,705 6,830
2,604 13,479
ಹೊಂಡ್ಯುರಸ್ 1,432 6,583
ಮೆಕ್ಸಿಕೊ 54,384 3,54,023
ಪ್ಯಾನಮ 2,013 7,732
ಪ್ಯಾರಗ್ವೈ 901 4,115
ಪೆರು 5,384 43,429
ಪೋರ್ಟೊ ರಿಕೊ 8,511 25,315
ಯುರಗ್ವೈ 3,370 8,683
ವೆನಿಸ್ವೇಲ 8,170 60,444
ಮೊತ್ತ 2,12,156 11,43,175