“ನಾವು ಮಾತಾಡಶಕ್ತರೆಂದೇ ತೋರುವುದಿಲ್ಲ!”
ವಕೀಲ ಮೈಕಲ್ಗೆ ಬಲವತ್ತಾದ ಸಂಸರ್ಗಚಾರಕನಾಗಿರಬೇಕಿದ್ದ ಅಗತ್ಯವಿತ್ತು. ಅವನ ಕೆಲಸವು ಅದನ್ನು ನಿರ್ಬಂಧಪಡಿಸಿತ್ತು. ಆದರೆ ಮದುವೆಯಾಗಿ 16 ವರ್ಷ ಸಂದರೂ, ಪತ್ನಿಯಾದ ಏಡ್ರಿಯನ್ ಬಳಿಗೆ ಮನೆಗೆ ಹಿಂತಿರುಗಿದಾಗ ಅವನ ಮಾತುಕತೆಯ ಕೌಶಲಗಳು ಮಾಯವಾಗುವಂತೆ ತೋರುವುದನ್ನು ಅಂಗೀಕರಿಸಲು ಮೈಕಲ್ ಒತ್ತಾಯಿಸಲ್ಪಟ್ಟನು. “ಖಂಡಿಸಿ ಮಾತಾಡುವುದು, ತಪ್ಪುಹಿಡಿಯುವುದು ಮತ್ತು ವ್ಯಂಗ್ಯಸೂಚನೆಗಳ ವಿನಿಮಯ ಮಾಡುತ್ತಾ,” ಮೈಕಲ್ ನೆನಪಿಸುವುದು, “ಏಡ್ರಿಯನ್ ಮತ್ತು ನಾನು ಯಾವಾಗಲೂ ಕಲಹಪ್ರಿಯ ಕಚ್ಚಾಟಗಳಲ್ಲಿ ಒಳಗೂಡುತ್ತಿದ್ದೆವು ಮತ್ತು ಅದು ನಮ್ಮನ್ನು ಬಳಲಿಸಿಯೇ ತೀರುವುದೆಂದು ನಾನು ನೆನಸಿದ್ದೆ. ಈ ಸದಾ ಅಸಮಾಧಾನ ಮತ್ತು ಕೆರಳಿಕೆಯ ಸುರಿಮಳೆಯು ಮದುವೆಯೋ ಎಂದು ನಾನು ಸೋಜಿಗಗೊಂಡಿದ್ದೆ. ನಮ್ಮ ಉಳಿದ ಒಡಗೂಡಿದ ಬಾಳುವೆಯ ಪಾಡು ಈ ರೀತಿಯಾಗಿದ್ದರೆ, ಅದರೊಳಗಿಂದ ಪಾರಾಗಿ ಬಿಡಲು—ತಮಾಷೆಯಲ್ಲ—ನಾನು ಬಯಸಿದ್ದೆನು. ಆ ರೀತಿಯ 20, 30, 40 ವರ್ಷಗಳ ಸದಾ ಕೆರಳಿಕೆ ಮತ್ತು ಒತ್ತಡವನ್ನು ನಾನು ಎದುರಿಸುವಂತಿರಲಿಲ್ಲ.”
ಈ ತರಹದ ಭಾವೋದ್ರೇಕಗಳು ಮೈಕಲ್ ಮತ್ತು ಏಡ್ರಿಯನ್ಗೆ ಮಾತ್ರವೇ ಅಸದೃಶವಲ್ಲ. ಯಾರ ಸಂಬಂಧಗಳು ಹೋರಾಟ ಮತ್ತು ಯುದ್ಧ-ವಿರಾಮದ ನಡುವೆ ಸುತ್ತುತ್ತಿವೆಯೋ ಆ ಆನೇಕ ದಂಪತಿಗಳಲ್ಲಿ ಇವು ವಾಸ್ತವಿಕವಾಗಿವೆ. ಅತ್ಯಂತ ಸರಳವಾದ ಸಂಭಾಷಣೆಗಳು ಮೌಖಿಕ ಹೋರಾಟವಾಗಿ ಉದ್ರೇಕಗೊಳ್ಳುತ್ತವೆ. ಹೇಳದೆ ಇರುವ ಸಂಗತಿಗಳನ್ನು ಅವರು “ಆಲಿಸು” ತ್ತಾರೆ. ಉದ್ದಿಶ್ಯದಿಂದ ನುಡಿಯದ ಮಾತುಗಳನ್ನು ಅವರು ಹೇಳಿಬಿಡುತ್ತಾರೆ. ಅವರು ಆಕ್ರಮಿಸುತ್ತಾರೆ ಮತ್ತು ದೂರುತ್ತಾರೆ, ಮತ್ತು ಬಳಿಕ ತೀವ್ರ ಅಸಮಾಧಾನದ ಮೌನದೊಳಗೆ ಮುದುಡಿಕೊಳ್ಳುತ್ತಾರೆ. ಅವರು ಪ್ರತ್ಯೇಕವಾಸ ನಡಿಸುವುದೂ ಇಲ್ಲ, ನಿಜವಾಗಿ “ಒಂದೇ ಶರೀರ” ವಾಗಿ ಇರುವುದೂ ಇಲ್ಲ. (ಆದಿಕಾಂಡ 2:24) ಸಂಬಂಧವು ಪೂರ್ಣ ಸಗ್ತಿತವಾಗುತ್ತದೆ. ಹಿಂದೆ ಸರಿಯುವುದೆಂದರೆ ಪ್ರತಿಕಕ್ಷಿಗಳಾಗಿ ಒಡೆಯುವುದು; ಮುಂದರಿಯುವುದೆಂದರೆ ಮನಸ್ತಾಪಗಳನ್ನು ಮುಖಾಮುಖಿಯಾಗಿ ಎದುರಿಸುವುದೆಂದರ್ಥ. ಈ ಎರಡೂ ಆಯ್ಕೆಯ ನೋವಿನಿಂದ ತಪ್ಪಿಸಿಕೊಳ್ಳಲು, ಈ ದಂಪತಿಗಳು ಒಬ್ಬರಿಂದೊಬ್ಬರು ಒಂದು ಸುರಕ್ಷಿತವಾದ ಭಾವನಾತ್ಮಕ ಅಂತರವನ್ನು ಇಡುವಂತೆ ತಮ್ಮನ್ನು ಬಿಟ್ಟುಕೊಡುತ್ತಾರೆ.
ಅಂಥ ದಂಪತಿಗಳಿಗೆ ತಮ್ಮ ಮದುವೆಯಲ್ಲಿ ‘ಕೌಶಲಯುಕ್ತ ಮಾರ್ಗದರ್ಶನ ಪಡಕೊಳ್ಳುವ’ ಅಗತ್ಯವಿದೆ. (ಜ್ಞಾನೋಕ್ತಿ 1:5, NW) ಈ ಮಾರ್ಗದರ್ಶನವು ದೇವರ ವಾಕ್ಯವಾದ ಬೈಬಲಿನಲ್ಲಿ ದೊರೆಯುತ್ತದೆ. ಬೈಬಲು, “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ” ಎಂಬದನ್ನು ಪೌಲನು ತಿಮೊಥೆಯನಿಗೆ ಬರೆದ ಎರಡನೆಯ ಪತ್ರವು ದೃಢೀಕರಿಸುತ್ತದೆ. (2 ತಿಮೊಥೆಯ 3:16) ನಾವು ನೋಡಲಿರುವ ಪ್ರಕಾರ, ದಾಂಪತ್ಯ ಸಂಸರ್ಗದಲ್ಲಿ ಒಡೆತವನ್ನು ವಾಸಿಮಾಡುವುದರಲ್ಲಿ ಇದು ನಿರ್ಧರಿಸುವ ವಿಷಯವಾಗಿ ರುಜುವಾಗುತ್ತದೆ.