ಸಂಸರ್ಗ ಕೇವಲ ಮಾತುಕತೆಗಿಂತ ಹೆಚ್ಚಿನದ್ದು
ಸಂದರ್ಶಕರ ಒಂದು ಗುಂಪು ರಮ್ಯವಾದ ಒಂದು ಭೂಪ್ರದೇಶವನ್ನು ವೀಕ್ಷಿಸುವುದನ್ನು ಕಲ್ಪಿಸಿಕೊಳ್ಳಿರಿ. ಇಡೀ ಗುಂಪು ಅದೇ ದೃಶ್ಯವನ್ನು ನೋಡುತ್ತದಾದರೂ, ಪ್ರತಿ ವ್ಯಕ್ತಿಯು ಅದನ್ನು ವಿಭಿನ್ನವಾಗಿ ಅವಲೋಕಿಸುತ್ತಾನೆ. ಏಕೆ? ಏಕೆಂದರೆ ಪ್ರತಿ ವ್ಯಕ್ತಿಗೆ ಒಂದು ಬೇರೆಯಾದ ಅನುಕೂಲ ಬಿಂದು ಇದೆ. ಯಾವ ಇಬ್ಬರು ವ್ಯಕ್ತಿಗಳಾದರೂ ನಿಖರವಾಗಿ ಒಂದೇ ಸ್ಥಳದಲ್ಲಿ ನಿಂತಿರುವುದಿಲ್ಲ. ಅದಲ್ಲದೆ, ಪ್ರತಿಯೊಬ್ಬನು ದೃಶ್ಯದ ಒಂದೇ ಅಂಶವನ್ನು ಕೇಂದ್ರೀಕರಿಸಿ ನೋಡುವುದಿಲ್ಲ. ಪ್ರತಿ ವ್ಯಕ್ತಿಗೆ ಒಂದು ಬೇರೆಯಾದ ವಿಭಾಗವು ವಿಶಿಷ್ಟವಾಗಿ ಕುತೂಹಲವನ್ನೆಬ್ಬಿಸುವುದಾಗಿ ಕಂಡುಬರುತ್ತದೆ.
ವಿವಾಹದೊಳಗೂ ಇದೇ ಸತ್ಯವಾಗಿದೆ. ಅವರು ಅತಿ ಸುಸಂಗತವಾಗಿ ಇರುವಾಗಲು ಸಹ, ಯಾವುದೇ ಇಬ್ಬರು ಸಂಗಾತಿಗಳು ನಿಖರವಾಗಿ ಒಂದೇ ಹೊರನೋಟದಲ್ಲಿ ಪಾಲಿಗರಾಗುವುದಿಲ್ಲ. ಪತಿ ಮತ್ತು ಪತ್ನಿಯು ಭಾವನಾತ್ಮಕ ರಚನೆಯಲ್ಲಿ, ಬಾಲ್ಯದ ಅನುಭವಗಳಲ್ಲಿ ಮತ್ತು ಕೌಟುಂಬಿಕ ಪ್ರಭಾವದಂಥ ವಿಷಯಗಳಲ್ಲಿ ಭಿನ್ನರಾಗಿರುತ್ತಾರೆ. ಫಲಿತಾಂಶವಾಗಿ ಬರುವ ವಿಭಿನ್ನ ನಿರೂಪಣೆಗಳು ಒಂದು ಕಟು ಜಗಳದ ಮೂಲವಾಗಿ ಪರಿಣಮಿಸಬಲ್ಲವು. ಅಪೊಸ್ತಲ ಪೌಲನು ಸರಳವಾಗಿ ಹೇಳಿದ್ದು: “ಮದುವೆಮಾಡಿಕೊಳ್ಳುವವರಿಗೆ ನೋವು ಮತ್ತು ದುಃಖವು ಇರುವದು.”—1 ಕೊರಿಂಥ 7:28, ದ ನ್ಯೂ ಇಂಗ್ಲಿಷ್ ಬೈಬಲ್.
ಈ ಭಿನ್ನತೆಗಳನ್ನು ಒಂದೇ-ಶರೀರ ಸಂಬಂಧದೊಳಗೆ ಒಂದುಗೂಡಿಸುವ ಪ್ರಯತ್ನವು ಸಂಸರ್ಗದಲ್ಲಿ ಒಳಗೂಡಿದೆ. ಮಾತಾಡಲು ಸಮಯ ಮಾಡುವುದನ್ನು ಇದು ಆವಶ್ಯಪಡಿಸುತ್ತದೆ. (ಪುಟ 7ರ ಚೌಕಟ್ಟು ನೋಡಿರಿ.) ಆದರೆ ಎಷ್ಟೋ ಹೆಚ್ಚು ಒಳಗೂಡಿದೆ.
ಒಳನೋಟವನ್ನು ತೋರಿಸುವುದು
ಒಂದು ಬೈಬಲ್ ಜ್ಞಾನೋಕ್ತಿಯು ಹೇಳುವುದು: “ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ (ಒಳನೋಟ, NW) ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.” (ಜ್ಞಾನೋಕ್ತಿ 16:23) ಇಲ್ಲಿ ‘ಒಳನೋಟ ತೋರಿಸುವಂತೆ ಮಾಡುವ’ ಎಂದು ತರ್ಜುಮೆಯಾದ ಹೀಬ್ರು ಪದಕ್ಕೆ—ಯುಕ್ತಾಯುಕ್ತ ಪರಿಜ್ಞಾನವಿರುವುದು, ವಿಷಯಗಳನ್ನು ಮನಸ್ಸಿನಲ್ಲಿ ಜಾಗ್ರತೆಯಿಂದ ತೂಗಿನೋಡುವುದು ಎಂಬ ಮೂಲಾರ್ಥವಿದೆ. ಆದುದರಿಂದ ಪರಿಣಾಮಕಾರಿ ಸಂಸರ್ಗದ ಕೇಂದ್ರ ಬಿಂದುವು ಹೃದಯವಾಗಿದೆ, ಬಾಯಿ ಅಲ್ಲ. ಒಬ್ಬ ಉತ್ತಮ ಸಂಸರ್ಗಗಾರನು ಮಾತಾಡುವವನಾಗಿರುವುದಕ್ಕಿಂತ ಹೆಚ್ಚಿನವನಾಗಿರಲೇಬೇಕು; ಅವನು ಅನುಭೂತಿಯುಳ್ಳ ಆಲಿಸುವವನಾಗಿರಬೇಕು. (ಯಾಕೋಬ 1:19) ತನ್ನ ಸಂಗಾತಿಯ ಬಾಹ್ಯ ವರ್ತನೆಯ ಒಳಗಡೆ ನೆಲೆಸಿರುವ ಅನಿಸಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಅವನು ವಿವೇಚಿಸಿಕೊಳ್ಳಬೇಕು.—ಜ್ಞಾನೋಕ್ತಿ 20:5.
ಹೇಗೆ? ಒಂದು ಜಗಳವನ್ನು ಸುತ್ತುವರಿಯುವ ಪರಿಸ್ಥಿತಿಗಳನ್ನು ಅವಲೋಕಿಸುವ ಮೂಲಕ ಕೆಲವು ಸಾರಿ ಇದನ್ನು ನಿರ್ವಹಿಸಬಹುದು. ನಿಮ್ಮ ಸಂಗಾತಿಯು ಭಾರವಾದ ಭಾವನಾತ್ಮಕ ಅಥವಾ ಶಾರೀರಿಕ ತುಡಿತದ ಕೆಳಗಿದ್ದಾನೋ? ಒಂದು ಕಾಯಿಲೆಯು ನಿಮ್ಮ ಸಂಗಾತಿಯ ಪ್ರವೃತ್ತಿಗೆ ಕಾರಣವಾಗಿದೆಯೇ? “ಉಚಿತ ಸಮಯಕ್ಕೆ ಉಚಿತ ಮಾತನ್ನು ಕಂಡುಕೊಳ್ಳುವದೆಷ್ಟು ಸಂತೋಷ!” ಎನ್ನುತ್ತದೆ ಬೈಬಲ್. (ಜ್ಞಾನೋಕ್ತಿ 15:23, ಟುಡೇಸ್ ಇಂಗ್ಲಿಷ್ ವರ್ಷನ್) ಹೀಗೆ ಪರಿಸ್ಥಿತಿಗಳನ್ನು ಪರಿಗಣಿಸುವುದು ನಿಮಗೆ ಅದಕ್ಕನುಗುಣವಾಗಿ ಪ್ರತಿಕ್ರಿಯಿಸಲು ಸಹಾಯ ಮಾಡುವುದು.—ಜ್ಞಾನೋಕ್ತಿ 25:11.
ಹಲವು ಸಂದರ್ಭಗಳಲ್ಲಾದರೋ ಒಂದು ಜಗಳದ ಕಾರಣವು, ಪ್ರಚಲಿತ ಪರಿಸ್ಥಿತಿಗಳ ಹೊರಗಣ ವಿಷಯಗಳಲ್ಲಿ ಬೇರೂರಿರುತ್ತದೆ.
ಗತಕಾಲವನ್ನು ತಿಳುಕೊಳ್ಳುವುದು
ಬಾಲ್ಯದಲ್ಲಾದ ಅನುಭವಗಳು ಪ್ರಾಪ್ತ ವಯಸ್ಸಿನಲ್ಲಿ ನಮ್ಮ ಯೋಚನೆಗಳನ್ನು ರೂಪಿಸುವುದಕ್ಕೆ ಹೆಚ್ಚನ್ನು ಮಾಡುತ್ತವೆ. ವಿವಾಹ ಸಂಗಾತಿಗಳು ಬೇರೆ ಬೇರೆ ಕುಟುಂಬಗಳಿಂದ ಬರುತ್ತಾರಾದ್ದರಿಂದ, ಪರಸ್ಪರ ವಿರುದ್ಧ ನೋಟಗಳು ಅನಿವಾರ್ಯವು.
ಬೈಬಲ್ನಲ್ಲಿ ದಾಖಲೆಯಾದ ಒಂದು ಘಟನೆಯು ಇದನ್ನು ಉದಾಹರಿಸುತ್ತದೆ. ಒಡಂಬಡಿಕೆಯ ಮಂಜೂಷವು ಯೆರೂಸಲೇಮಿಗೆ ಹಿಂತಿರುಗಿಸಲ್ಪಟ್ಟಾಗ, ದಾವೀದನು ತನ್ನ ಉತ್ಸಾಹವನ್ನು ಬಹಿರಂಗವಾಗಿ ವ್ಯಕ್ತಪಡಿಸಿದನು. ಆದರೆ ಅವನ ಪತ್ನಿಯಾದ ಮೀಕಲಳ ಕುರಿತೇನು? ಬೈಬಲ್ ತಿಳಿಸುವುದು: “ಸೌಲನ ಮಗಳಾದ ಮೀಕಲಳು ಕಿಟಿಕಿಯಿಂದ ಹಣಿಕಿ ನೋಡಿ ದಾವೀದನು ಯೆಹೋವನ ಮುಂದೆ ಜಿಗಿಯುತ್ತಾ ಕುಣಿಯುತ್ತಾ ಇರುವದನ್ನು ಕಂಡು ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು.”—2 ಸಮುವೇಲ 6:14-16.
ಮೀಕಲಳು ತನ್ನ ಅನೀತಿವಂತ ತಂದೆಯಾದ ಸೌಲನ ಅಪನಂಬಿಗಸ್ತ ಪ್ರವೃತ್ತಿಯನ್ನು ಪ್ರದರ್ಶಿಸಿದಳು. ಬೈಬಲ್ ವ್ಯಾಖ್ಯಾನಗಾರರಾದ ಸಿ.ಎಫ್. ಕೀಲ್ ಮತ್ತು ಎಫ್. ಡೆಲಿಟ್ಸ್ ಸೂಚಿಸುವುದೇನಂದರೆ 16 ನೆಯ ವಚನದಲ್ಲಿ ಮೀಕಲಳನ್ನು ದಾವೀದನ ಪತ್ನಿಯ ಬದಲಾಗಿ “ಸೌಲನ ಮಗಳು” ಎಂದು ನಿರ್ದೇಶಿಸಿದ್ದು ಈ ಕಾರಣಕ್ಕಾಗಿ. ಹೇಗಿದ್ದರೂ, ದಾವೀದ ಮತ್ತು ಮೀಕಲರು ಈ ಸಂತಸದ ಘಟನೆಯ ಬಗ್ಗೆ ಒಂದೇ ನೋಟವುಳ್ಳವರಾಗಿರಲಿಲ್ಲವೆಂಬದನ್ನು ಅವರ ನಡುವೆ ಉಂಟಾದ ವಾಗ್ವಾದವು ಸೃಷ್ಟಗೊಳಿಸುತ್ತದೆ.—2 ಸಮುವೇಲ 6:20-23.
ಈ ಉದಾಹರಣೆಯು, ಬಾಲ್ಯದ ಪಾಲನೆಯಿಂದ ಬಂದ ಸೂಕ್ಷ್ಮ ಪ್ರಭಾವಗಳು ಒಬ್ಬ ಗಂಡನನ್ನು ಮತ್ತು ಹೆಂಡತಿಯನ್ನು, ವಿಷಯಗಳನ್ನು ತೀರಾ ಭಿನ್ನವಾಗಿ ನೋಡುವಂತೆ ಮಾಡಬಲ್ಲವೆಂದು ತೋರಿಸುತ್ತದೆ. ಇದು ಇಬ್ಬರೂ ಯೆಹೋವನನ್ನು ಐಕ್ಯತೆಯಿಂದ ಸೇವಿಸುತ್ತಿರುವಾಗ ಸಹ ಸತ್ಯವಾಗಿದೆ. ಉದಾಹರಣೆಗೆ, ಮಗುವಾಗಿದ್ದಾಗ ತಕ್ಕದಾದ ಭಾವನಾತ್ಮಕ ಬೆಂಬಲ ಕೊಡಲ್ಪಡದೆ ಇದ್ದ ಪತ್ನಿಯು, ಮೆಚ್ಚಿಕೆ ಮತ್ತು ಆಶ್ವಾಸನೆಗಾಗಿ ಅಸಾಮಾನ್ಯ ಅಗತ್ಯತೆಯನ್ನು ಪ್ರದರ್ಶಿಸಬಹುದು. ಇದು ಅವಳ ಗಂಡನನ್ನು ಕಂಗೆಡಿಸಬಹುದು. “ನಾನವಳನ್ನು ಪ್ರೀತಿಸುತ್ತೇನೆಂದು ನೂರು ಬಾರಿ ಹೇಳಬಲ್ಲೆ,” ಎಂದವನು ಘೋಷಿಸಬಹುದು, “ಅದು ಮತ್ತೂ ಸಾಕಾಗದು!”
ಈ ಸಂದರ್ಭದಲ್ಲಿ ಸಂಸರ್ಗವು, “ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡು” ವುದರಲ್ಲಿ ಒಳಗೂಡುತ್ತದೆ. (ಫಿಲಿಪ್ಪಿ 2:4) ಸಂಸರ್ಗಕ್ಕಾಗಿ, ಪತಿಯು ತನ್ನ ಪತ್ನಿಯನ್ನು ಸ್ವಂತ ನಿರೂಪಣೆಯ ಬದಲಾಗಿ ಆಕೆಯ ಗತಕಾಲದ ಅನುಭವಗಳ ದೃಷ್ಟಿಯಿಂದ ನೋಡಲೇಬೇಕು. ಮತ್ತು ನಿಶ್ಚಯವಾಗಿಯೂ ತನ್ನ ಪತಿಗಾಗಿ ಇದನ್ನೇ ಮಾಡಲು ಪತ್ನಿಯು ಪ್ರೇರಿಸಲ್ಪಡಬೇಕು.—1 ಕೊರಿಂಥ 10:24.
ಗತಕಾಲವು ದೂಷಣೀಯವಾಗಿದ್ದಾಗ
ಒಬ್ಬ ಸಂಗಾತಿಯು ಮಗುವಾಗಿದ್ದಾಗ—ಇಂದು ಬೆಳೆಯುತ್ತಿರುವ ಶೋಚನೀಯ ಸಮಸ್ಯೆಯಾದ—ಬಲಾತ್ಕಾರ ಸಂಭೋಗಕ್ಕೆ ಅಥವಾ ಲೈಂಗಿಕ ದುರುಪಯೋಗಕ್ಕೆ ಗುರಿಯಾಗಿದ್ದಲ್ಲಿ ವೈಯಕ್ತಿಕ ಆಸಕ್ತಿಯು ವಿಶೇಷವಾಗಿ ನಿರ್ಣಾಯಕವಾಗಿದೆ. ದೃಷ್ಟಾಂತಕ್ಕಾಗಿ, ಲೈಂಗಿಕ ಆಪತ್ತೆಯ ಸಮಯದಲ್ಲಿ ಪತ್ನಿಯು ಗತಕಾಲದಿಂದ ಪ್ರಚಲಿತವನ್ನು, ತಪ್ಪುಗೈದವನಿಂದ ತನ್ನ ಸಂಗಾತಿಯನ್ನು, ಅಥವಾ ಲೈಂಗಿಕ ಸಂಭೋಗದಿಂದ ಲೈಂಗಿಕ ಅಪಪ್ರಯೋಗವನ್ನು ಬೇರ್ಪಡಿಸಲಾರದವಳಾಗಿ ಕಂಡುಕೊಳ್ಳಬಹುದು. ಇದು, ವಿಶೇಷವಾಗಿ ಈ ನಾಜೂಕು ವಿಷಯವನ್ನು ತನ್ನ ಪತ್ನಿಯ ದೃಷ್ಟಿಯಿಂದ ಗಂಡನು ಪರಿಗಣಿಸದಿದ್ದರೆ, ಆಶಾಭಂಗಕ್ಕೆ ನಡಿಸಬಲ್ಲದು.—1 ಪೇತ್ರ 3:8.
ಗತಕಾಲದ ಅನುಭವವನ್ನು ಇಲಮ್ಲಾಡಲು ಇಲ್ಲವೇ ಅದರ ಪರಿಣಾಮಗಳನ್ನು ಪೂರ್ಣವಾಗಿ ನಿವಾರಿಸಲು ನಿಮಗೆ ಸಾಧ್ಯವಿಲ್ಲದ್ದಿದರೂ, ವ್ಯಥೆಗೀಡಾದ ಸಂಗಾತಿಯನ್ನು ಸಂತೈಸಲು ನೀವು ಹೆಚ್ಚನ್ನು ಮಾಡಬಲ್ಲಿರಿ. (ಜ್ಞಾನೋಕ್ತಿ 20:5) ಹೇಗೆ? “ಸಂಗಡ ಜೀವಿಸುವ ನಿಮ್ಮ ಪತ್ನಿಯರನ್ನು ಗಂಡಂದಿರಾದ ನೀವು ತಿಳಿದುಕೊಳ್ಳಲು ಪ್ರಯತ್ನಿಸಬೇಕು,” ಎಂದು ಬರೆದನು ಪೇತ್ರನು. (1 ಪೇತ್ರ 3:7, ಫಿಲಿಪ್ಸ್) ನಿಮ್ಮ ಸಂಗಾತಿಯ ಗತಕಾಲವನ್ನು ತಿಳಿದುಕೊಳ್ಳುವುದು ಸಂಸರ್ಗದ ಒಂದು ಪ್ರಧಾನ ಭಾಗವಾಗಿದೆ. ಅನುಭೂತಿಯುಕ್ತ ಕನಿಕರದ ಹೊರತು ನಿಮ್ಮ ಮಾತುಗಳು ನಿಷ್ಪ್ರಯೋಜಕವು.
ಯೇಸು ರೋಗಪೀಡಿತರನ್ನು ಎದುರಾದಾಗ, ವೈಯಕ್ತಿಕವಾಗಿ ಅವನೆಂದೂ ಅವರ ಬೇನೆಗಳನ್ನು ಅನುಭವಿಸದೆ ಇದ್ದರೂ ಕೂಡ, “ಕನಿಕರ” ಪಟ್ಟನು. (ಮತ್ತಾಯ 14:14) ತದ್ರೀತಿಯಲ್ಲಿ, ನಿಮ್ಮ ಪತ್ನಿಗಾದ ಅದೇ ಉಪೇಕ್ಷೆ ಅಥವಾ ಅಪಪ್ರಯೋಗವನ್ನು ವೈಯಕ್ತಿಕವಾಗಿ ನೀವು ಅನುಭವಿಸಿರಲಿಕ್ಕಿಲ್ಲ, ಆದರೂ ಅವಳ ಬೇಗುದಿಯನ್ನು ನಿಕೃಷ್ಟಮಾಡುವ ಬದಲಿಗೆ, ಅವಳ ಗತಕಾಲವನ್ನು ಅಂಗೀಕರಿಸಿರಿ, ಮತ್ತು ಅವಳಿಗೆ ನಿಮ್ಮ ಬೆಂಬಲವನ್ನು ಕೊಡಿರಿ. (ಜ್ಞಾನೋಕ್ತಿ 18:13) ಪೌಲನು ಬರೆದದ್ದು: “ದೃಢವಾದ ನಂಬಿಕೆಯುಳ್ಳ ನಾವು ನಮ್ಮ ಸುಖವನ್ನು ನೋಡಿಕೊಳ್ಳದೆ ದೃಢವಿಲ್ಲದವರ ಅನುಮಾನಗಳನ್ನು [ಬಲಹೀನತೆಗಳನ್ನು, NW] ಸಹಿಸಿಕೊಳ್ಳಬೇಕು.”—ರೋಮಾಪುರ 15:1.
ಕ್ರೋಧದ ಬಲೆಗೆ ಬೀಳುವುದು
ಒಂದು ಮದುವೆಯು ಒಂದು ಅಮೂಲ್ಯ ಪಾತ್ರೆಯಂತಿದೆ. ವ್ಯಭಿಚಾರದಿಂದ ಅದು ಭಂಗಗೊಂಡಾಗ, ಅಗಣ್ಯ ಹಾನಿಯು ಉಂಟಾಗುತ್ತದೆ. (ಜ್ಞಾನೋಕ್ತಿ 6:32) ನಿರ್ದೋಷಿ ಸಂಗಾತಿಯು ಕ್ಷಮಿಸಲು ನಿರ್ಣಯಿಸಿದ್ದಾದರೆ, ರಾಜಿಮಾಡಿಕೊಳ್ಳುವ ಮೂಲಕ ಒಡೆದ ತುಂಡುಗಳನ್ನು ಒತ್ತಾಗಿ ಅಂಟಿಸಬಹುದು ನಿಜ. ಆದರೆ ಬಿರುಕುಗಳು ಉಳಿಯುತ್ತವೆ, ಮತ್ತು ಒಂದು ವಾಗ್ವಾದದ ಸಮಯದಲ್ಲಿ ಆ ಬಿರುಕುಗಳೆಡೆಗೆ ನೋಡುವ ಮತ್ತು ಗತಕಾಲವನ್ನು ಒಂದು ಶಸ್ತ್ರವಾಗಿ ಉಪಯೋಗಿಸುವ ಪ್ರವೃತ್ತಿಯಿರಲೂಬಹುದು.
ಒಬ್ಬ ಸಂಗಾತಿಯ ಅಪನಂಬಿಗಸ್ತಿಕೆಗೆ ಕ್ರೋಧವು ಸಹಜವಾದ ಪ್ರತಿವರ್ತನೆಯಾಗಿದೆ. ಕ್ಷಮಾಪಣೆಯ ಕ್ರಿಯೆಯ ಮೂಲಕ ನೀವು ಗಳಿಸಿದ ಒಳ್ಳಿತನ್ನು ಬಹುಕಾಲ ಎಳೆಯುವ ತೀವ್ರ ಅಸಮಾಧಾನವು ಕಿತ್ತುಹಾಕುವಂತೆ ಬಿಡುವ ವಿರುದ್ಧ ಎಚ್ಚರವಾಗಿರ್ರಿ. ಅದು ಒಳಗೆ ಮೌನವಾಗಿ ಕುದಿಯುತ್ತಿರಲಿ ಅಥವಾ ನಿಷ್ಕರುಣೆಯಿಂದ ಅಂಕೆತಪ್ಪಿಹೋಗಲಿ, ಮುಂದರಿಯುತ್ತಾ ಹೋಗುವ ಕ್ರೋಧವು ಇಬ್ಬರು ಸಂಗಾತಿಗಳಿಗೂ ಹಾನಿತರುತ್ತದೆ. ಏಕೆ? ಒಬ್ಬ ಡಾಕ್ಟರ್ ಸೂಚಿಸುವುದು: “ನಿಮ್ಮ ಜೊತೆಗಾರನಿಂದ ನಿಮಗೆ ವೇದನೆಯಾಗುವುದಾದರೆ, ಅದು ಅವನನ್ನು ನೀವಿನ್ನೂ ಇಷ್ಟಪಡುವ ಕಾರಣದಿಂದಲೇ ಆಗಿದೆ. ಆದುದರಿಂದ ಒಳಸರಿಯುವದರಿಂದ ಅಥವಾ ಪ್ರತೀಕಾರಕ್ಕಾಗಿ ಎಟಕಿಸುವುದರಿಂದ, ನೀವು ನಿಮ್ಮ ಸಂಗಾತಿಯನ್ನು ನೋಯಿಸುತ್ತೀರಿ ಮಾತ್ರವೇ ಅಲ್ಲ ನಿಮ್ಮನ್ನು ನಾಶಗೊಳಿಸುತ್ತೀರಿ. ಇಡಿಯದ್ದಾಗಿರುವಂತೆ ನೀವು ಬಯಸಿದ್ದ ಸಂಬಂಧವನ್ನು ಇನ್ನಷ್ಟು ಕಳಚಿಹಾಕುತ್ತೀರಿ.”
ಹೌದು, ನಿಮ್ಮ ಕೋಪವನ್ನು ನಿಲ್ಲಿಸದ ಹೊರತು ನಿಮ್ಮ ಮದುವೆಯಲ್ಲಿನ ಭಿನ್ನತೆಗಳನ್ನು ರಾಜಿಗೊಳಿಸಲಾರಿರಿ. ಆದುದರಿಂದ, ಭಾವುಕತೆಗಳು ಉದ್ರೇಕಗೊಂಡಿರದ ಸಮಯದಲ್ಲಿ, ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿರಿ. ನಿಮಗೆ ಏಕೆ ನೋವಾಗುತ್ತದೆ, ಪುನರಾಶ್ವಾಸನೆಯ ಅನಿಸಿಕೆಗಾಗಿ ನಿಮಗೇನು ಬೇಕು, ಮತ್ತು ಸಂಬಂಧವನ್ನು ಉಳಿಸಿಕೊಳ್ಳಲು ನೀವೇನು ಮಾಡುವಿರಿ ಎಂಬದನ್ನು ವಿವರಿಸಿರಿ. ಒಂದು ವಾಗ್ವಾದದಲ್ಲಿ ಹೆಚ್ಚು ಬಿಗಿಯಾದ ನಿಲುವನ್ನು ಗಳಿಸಲು ಗತಕಾಲವನ್ನು ಕೇವಲ ಒಂದು ಶಸ್ತ್ರವಾಗಿ ಎಂದೂ ಉಪಯೋಗಿಸಬೇಡಿರಿ.
ದುಶ್ಚಟವು ಸಂಸರ್ಗವನ್ನು ಗಾಯಗೊಳಿಸುತ್ತದೆ
ಒಬ್ಬ ಸಂಗಾತಿಯು ಮದ್ಯಸಾರದ ಅಥವಾ ಮಾದಕದ್ರವ್ಯದ ಅಪಪ್ರಯೋಗ ಮಾಡುವಾಗ ಒಂದು ವಿವಾಹವು ತೀವ್ರ ಸಂಕಟವನ್ನು ಅನುಭವಿಸುತ್ತದೆ. ದುಶ್ಚಟವಿಲ್ಲದ ಸಂಗಾತಿಯು, ಬೈಬಲಿನಲ್ಲಿ ವರದಿ ಮಾಡಲ್ಪಟ್ಟ ಪ್ರಕಾರ, ಅಬೀಗೈಲಳಂತಹ ಒಂದು ಸನ್ನಿವೇಶದಲ್ಲಿ ಇರಬಹುದು. ಅವಳ ಗಂಡನಾದ ನಾಬಾಲನು, “ಬಹಳವಾಗಿ ಕುಡಿದು” ಇದ್ದಿರಲಾಗಿ, ಅಬೀಗೈಲಳಾದರೋ ಅವನ ಅವಿವೇಕ ವರ್ತನೆಯ ಫಲಿತಾಂಶಗಳನ್ನು ವಿಪರ್ಯಸ್ತಗೊಳಿಸಲು ಸತತವಾಗಿ ಪ್ರಯತ್ನಿಸುತ್ತಿದ್ದಳು. (1 ಸಮುವೇಲ 25:18-31, 36) ಯಾವುದರಲ್ಲಿ ಒಬ್ಬ ಸಂಗಾತಿಯು ದುಶ್ಚಟದಿಂದ ಛಿದ್ರಗೊಂಡಿದ್ದು, ಇನ್ನೊಬ್ಬನು ವ್ಯಸನಿಯ ವರ್ತನೆಯನ್ನು ಬದಲಾಯಿಸುವ ಪ್ರಯತ್ನದಲ್ಲಿ ಒಳಗೂಡಿರುತ್ತಾರೋ ಆ ವಿವಾಹಗಳು ಹೆಚ್ಚಾಗಿ ನಾಬಾಲ ಮತ್ತು ಅಬೀಗೈಲರ ಮನೆವಾರ್ತೆಗಳನ್ನು ಹೋಲುತ್ತವೆ.a
ಒಬ್ಬ ವ್ಯಸನಿಯು ಗುಣಹೊಂದಲಾರಂಭಿಸುವಾಗ, ಮಹಾ ಉಪಶಮನ ಉಂಟಾಗುವುದು ಗ್ರಾಹ್ಯ. ಆದರೆ ಇದು ಕೇವಲ ಪ್ರಾರಂಭವಾಗಿದೆ. ಒಂದು ತೀವ್ರ ಬಿರುಗಾಳಿಯು ಒಂದು ಚಿಕ್ಕ ಊರನ್ನು ಸದೆಬಡಿಯುವುದನ್ನು ಊಹಿಸಿಕೊಳ್ಳಿರಿ. ಮನೆಗಳು ಕುಸಿದುಬೀಳುತ್ತಿವೆ, ಮರಗಳು ಬೇರುಸಮೇತ ಕೀಳಲ್ಪಡುತ್ತವೆ, ಟೆಲಿಫೊನ್ ತಂತಿಗಳು ನೆಲಕ್ಕೆ ಬೀಳುತ್ತವೆ. ಬಿರುಗಾಳಿ ನಿಂತಾಗ ಮಹಾ ಸಂತೋಷ ಉಂಟಾಗುತ್ತದೆ. ಆದರೆ ಈಗ ವಿಸ್ತಾರವಾದ ದುರಸ್ತಿ ಕೆಲಸದ ಅಗತ್ಯವಿದೆ. ಸಂಗಾತಿಯು ಗುಣಹೊಂದಲಾರಂಭಿಸುವಾಗಲೂ ಹೀಗೆಯೇ ಇದೆ. ಕುಸಿದುಬಿದ್ದಿರುವ ಸಂಬಂಧಗಳನ್ನು ಪುನಃ ಕಟ್ಟಬೇಕು. ನಂಬಿಕೆ ಮತ್ತು ಸಮಗ್ರತೆಯು ಪುನಃ ಸ್ಥಾಪಿಸಲ್ಪಡಬೇಕು. ಸಂಸರ್ಗದ ತಂತಿಗಳನ್ನು ಪುನರ್ರಚಿಸಬೇಕಾಗಿದೆ. ಗುಣಹೊಂದುತ್ತಿರುವ ವ್ಯಸನಿಗೆ ಈ ಕ್ರಮೇಣ ಪುನಃ ಕಟ್ಟುವಿಕೆಯು, ಕ್ರೈಸ್ತರು ಬೆಳೆಸಿಕೊಳ್ಳುವಂತೆ ಬೈಬಲ್ ಆವಶ್ಯಪಡಿಸುವ “ಹೊಸ ವ್ಯಕ್ತಿತ್ವದ” ಒಂದು ಭಾಗವಾಗಿದೆ. ಈ ಹೊಸ ವ್ಯಕ್ತಿತ್ವವು “ನಿಮ್ಮ ಮನಸ್ಸನ್ನು ಪ್ರೇರೇಪಿಸುವ ಶಕ್ತಿಯನ್ನು” ಒಳಗೂಡಿರಲೇಬೇಕು.—ಎಫೆಸ 4:22-24, NW; ಕೊಲೊಸ್ಸೆ 3:9, 10.
ಒಂದು ಬೈಬಲಧ್ಯಯನವು ಲೆನಾರ್ಡ್ ಮತ್ತು ಎಲೈನ್ನನ್ನು ಮಾದಕ ದ್ರವ್ಯಗಳ ಅಪಪ್ರಯೋಗವನ್ನು ನಿಲ್ಲಿಸುವಂತೆ ಸಾಧ್ಯಮಾಡಿತು, ಆದರೆ ಮನಸ್ಸನ್ನು ಪ್ರೇರಿಸುವ ಶಕ್ತಿಯು ಅದರ ಪೂರ್ಣ ಪಾತ್ರಕ್ಕೆ ಬಂದಿರಲಿಲ್ಲ.b ತಡವಿಲ್ಲದೆ ಬೇರೆ ವ್ಯಸನಗಳು ತೋರಿಬಂದವು. “ಇಪ್ಪತ್ತು ವರ್ಷಗಳ ವರೆಗೆ ನಾವು ಬೈಬಲ್ ತತ್ವಗಳನ್ನು ಅನ್ವಯಿಸಲು ಮತ್ತು ಒಂದು ತೃಪ್ತಿಕರವಾದ ವಿವಾಹವನ್ನು ನಡಿಸಲು ಪ್ರಯತ್ನಿಸಿದೆವು, ಆದರೆ ಅದು ಯಾವಾಗಲೂ ನಮ್ಮ ಹಿಡಿತವನ್ನು ತಪ್ಪಿಸಿಕೊಳ್ಳುತ್ತಿತ್ತು,” ಎನ್ನುತ್ತಾಳೆ ಎಲೈನ್. “ನಮ್ಮ ದುಶ್ಚಟಗಳು ಆಳವಾಗಿ ಬೇರೂರಿದ್ದವು. ಅಧ್ಯಯನ ಮತ್ತು ಪ್ರಾರ್ಥನೆಯ ಮೂಲಕ ಅವನ್ನು ತೊಲಗಿಸಿಬಿಡಲು ನಾವು ಶಕ್ತರಾಗಲಿಲ್ಲ.”
ತಮ್ಮ ದುಶ್ಚಟಗಳ ಕಾರಣಗಳನ್ನು ತಿಳಿಯಲು ಲೆನಾರ್ಡ್ ಮತ್ತು ಎಲೈನ್ ಹಿತೋಪದೇಶವನ್ನು ಹುಡುಕಿದರು. ಮಕ್ಕಳ ಅಪಪ್ರಯೋಗ, ಮದ್ಯವ್ಯಸನ, ಮತ್ತು ಸ್ತ್ರೀಯರಿಗಾಗಿ ಗೌರವದ ಕುರಿತಾದ, “ನಂಬಿಗಸ್ತನೂ ವಿವೇಕಿಯೂ ಆದ ಆಳಿ” ನಿಂದ ಸಮಯೋಚಿತ ಮಾಹಿತಿಯು ವಿಶಿಷ್ಟ ಸಹಾಯವನ್ನಿತಿತ್ತು.c (ಮತ್ತಾಯ 24:45-47) “ಹಾನಿಯನ್ನು ದುರಸ್ತಿಮಾಡಲು ಮತ್ತು ನಮ್ಮ ಸಂಬಂಧವನ್ನು ಪುನಃಸ್ಥಾಪಿಸಿಕೊಳ್ಳಲು ನಾವು ಸಹಾಯ ಮಾಡಲ್ಪಟ್ಟೆವು,” ಅನ್ನುತ್ತಾಳೆ ಎಲೈನ್.
ಸಮಸ್ಯೆಗಳನ್ನು ಬಗೆಹರಿಸುವುದು
ರೆಬೆಕ್ಕಳು ತನ್ನ ಮಗನಾದ ಏಸಾವನ ಪತ್ನಿಯರ ವಿಷಯದಲ್ಲಿ ತಡೆಯಲಾಗದ ವ್ಯಥೆಯನ್ನು ಅನುಭವಿಸಿದಳು. ತನ್ನ ಇನ್ನೊಬ್ಬ ಮಗ ಯಾಕೋಬನು ಏಸಾವನ ಮಾದರಿಯನ್ನು ಹಿಂಬಾಲಿಸ್ಯಾನೆಂಬ ಭಯದಿಂದ ರೆಬೆಕ್ಕಳು ತನ್ನ ಗಂಡ ಇಸಾಕನಿಗೆ ಹೀಗಂದ ಮೂಲಕ ತನ್ನ ನೈರಾಶ್ಯವನ್ನು ಹೊರಗೆಡವಿದಳು: “ಹಿತ್ತೀಯರಾದ ಈ ಸ್ತ್ರೀಯರ ದೆಸೆಯಿಂದ ನನಗೆ ಬೇಸರವಾಯಿತು. ಯಾಕೋಬನೂ ಈ ದೇಶದವರಲ್ಲಿ ಹೆಣ್ಣನ್ನು ಆದುಕೊಂಡು ಇಂಥ ಹಿತ್ತಿಯ ಸ್ತ್ರೀಯನ್ನು ಮದುವೆಮಾಡಿಕೊಂಡರೆ ನಾನು ಇನ್ನೂ ಬದುಕುವದರಿಂದ ಪ್ರಯೋಜನವೇನು?”—ಆದಿಕಾಂಡ 27:46.
ರೆಬೆಕ್ಕಳು ತನ್ನ ಅನಿಸಿಕೆಗಳ ಕುರಿತು ದೃಢವಾಗಿ ಮಾತಾಡಿದಳಾದರೂ, ವೈಯಕ್ತಿಕವಾಗಿ ಇಸಾಕನನ್ನು ಆಕ್ರಮಿಸಲಿಲ್ಲವೆಂದು ಗಮನಿಸಿರಿ. “ಅದೆಲ್ಲಾ ನಿನ್ನ ತಪ್ಪು” ಅಥವಾ, “ಈ ಸನ್ನಿವೇಶದ ಹೆಚ್ಚು ಹತೋಟಿಯು ನಿನಗಿರಬೇಕು!” ಎಂದಾಕೆ ಹೇಳಲಿಲ್ಲ. ಬದಲಾಗಿ ಸಮಸ್ಯೆಯು ತನ್ನ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ವಿವರಿಸಲಿಕ್ಕಾಗಿ ರೆಬೆಕ್ಕಳು “ನಾನು” ಎಂಬ ಸರ್ವನಾಮವನ್ನು ಬಳಸಿದಳು. ಈ ವಿಧಾನವು ಇಸಾಕನ ಅನುಭೂತಿಯನ್ನು, ಮಾನ ಉಳಿಸಿಕೊಳ್ಳುವ ಅವನ ಅಪೇಕ್ಷೆಯನ್ನಲ್ಲ, ಆಹ್ವಾನಿಸಿತು. ವೈಯಕ್ತಿಕವಾಗಿ ಆಕ್ರಮಿಸಲ್ಪಟ್ಟ ಅನಿಸಿಕೆಯಿಲ್ಲದೇ, ರೆಬೆಕ್ಕಳ ವಿನಂತಿಗೆ ಇಸಾಕನ ಪ್ರತಿಕ್ರಿಯೆಯು ತತ್ಕ್ಷಣದ್ದಾಗಿತ್ತೆಂಬದು ಸ್ಫುಟ.—ಅದಿಕಾಂಡ 28:1, 2.
ಗಂಡಂದಿರು ಮತ್ತು ಹೆಂಡತಿಯರು ರೆಬೆಕ್ಕಳ ಮಾದರಿಯಿಂದ ಕಲಿಯಬಲ್ಲರು. ಒಂದು ತಿಕ್ಕಾಟವು ಏಳುವಾಗ, ಒಬ್ಬರನ್ನೊಬ್ಬರಲ್ಲ, ಬದಲಿಗೆ ಸಮಸ್ಯೆಯನ್ನು ಆಕ್ರಮಣ ಮಾಡಿರಿ. ರೆಬೆಕ್ಕಳಂತೆ, ಅದು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ದೃಷ್ಟಿಕೋನದಿಂದ ನಿಮ್ಮ ನೈರಾಶ್ಯವನ್ನು ವ್ಯಕ್ತಪಡಿಸಿರಿ. “ನಾನು ನಿರಾಶೆಗೊಂಡಿದ್ದೇನೆ ಯಾಕಂದರೆ . . . ” ಅಥವಾ, “ನನ್ನನ್ನು ತಪ್ಪು ತಿಳುಕೊಂಡ ಅನಿಸಿಕೆ ನನಗಾಗಿದೆ ಯಾಕಂದರೆ . . . ” ಎಂಬದು, “ನೀನು ನನ್ನನ್ನು ನಿರಾಶೆಗೊಳಿಸುತ್ತೀ!” ಅಥವಾ, “ನೀನು ನನ್ನನ್ನೆಂದೂ ತಿಳುಕೊಳ್ಳುವುದೇ ಇಲ್ಲ!” ಎಂಬದಕ್ಕಿಂತ ಎಷ್ಟೋ ಹೆಚ್ಚು ಪರಿಣಾಮಕಾರಿಯಾಗಿದೆ.
ಬಾಳಿಕೆಗಿಂತ ಹೆಚ್ಚು
ಮೊದಲನೆಯ ಮಾನವ ದಂಪತಿಗಳಾದ ಆದಾಮ ಮತ್ತು ಹವ್ವರ ಮದುವೆಯು, ಗಂಡು ಮತ್ತು ಹೆಣ್ಣು ಮಕ್ಕಳ ಒಂದು ಕುಟುಂಬವನ್ನು ಉತ್ಪಾದಿಸುತ್ತಾ, ಶತಮಾನಗಳ ತನಕ ಬಾಳಿತ್ತು. (ಆದಿಕಾಂಡ 5:3-5) ಆದರೆ ಅವರ ಮದುವೆಯು ಅನುಕರಣೆಗೆ ಯೋಗ್ಯವಾಗಿತ್ತೆಂದು ಇದರ ಅರ್ಥವಲ್ಲ. ಆರಂಭದಲ್ಲೇ, ಒಂದು ಸ್ವಾತಂತ್ರ್ಯದ ಆತ್ಮವು ಮತ್ತು ದೇವರ ನೀತಿಯ ನಿಯಮಗಳಿಗೆ ದುರ್ಲಕ್ಷ್ಯವು ಅವರ ಒಂದೇ-ಶರೀರ ಬಂಧವನ್ನು ಕೆಡಿಸಿತು.
ತದ್ರೀತಿಯಲ್ಲಿ, ಇಂದು ಒಂದು ಮದುವೆಯು ಬಾಳಬಹುದಾದರೂ, ಸಂಸರ್ಗದ ಪ್ರಮುಖಾಂಶಗಳನ್ನು ಕಳಕೊಳ್ಳಬಹುದು. ಬಲವಾಗಿ ಕಲ್ಪಿಸಿಕೊಂಡಿರುವ ವಿವೇಚನೆಗಳನ್ನು ಮತ್ತು ಅಯುಕ್ತವಾದ ವ್ಯಕ್ತಿತ್ವ ಪ್ರವೃತ್ತಿಗಳನ್ನು ಕಿತ್ತುಹಾಕಬೇಕಾಗಬಹುದು. (ಹೋಲಿಸಿರಿ 2 ಕೊರಿಂಥ 10:4, 5.) ಇದು ಒಂದು ಮುಂದುವರಿಯುವ ಶೈಕ್ಷಣಿಕ ಕಾರ್ಯಗತಿಯಾಗಿದೆ. ಆದರೆ ಪ್ರಯತ್ನವು ಸಾರ್ಥಕವಾಗಿದೆ. ಯೆಹೋವ ದೇವರು ದಾಂಪತ್ಯದ ಏರ್ಪಾಡಿನಲ್ಲಿ ಆಳವಾಗಿ ಆಸಕ್ತನಾಗಿದ್ದಾನೆ, ಯಾಕಂದರೆ ಅವನು ಅದರ ನಿರ್ಮಾಣಿಕನು. (ಮಲಾಕಿಯ 2:14-16; ಇಬ್ರಿಯ 13:4) ಆದುದರಿಂದ, ನಾವು ನಮ್ಮ ಪಾಲನ್ನು ಮಾಡುವುದಾದರೆ, ಆತನು ನಮ್ಮ ಪ್ರಯತ್ನಗಳನ್ನು ಅಂಗೀಕರಿಸುವನು ಮತ್ತು ದಾಂಪತ್ಯದ ಸಂಸರ್ಗದಲ್ಲಿ ಯಾವುದೇ ಕುಸಿತವನ್ನು ವಾಸಿಮಾಡಲು ಅಗತ್ಯವಾದ ವಿವೇಕ ಮತ್ತು ಬಲವನ್ನು ಒದಗಿಸಿಕೊಡುವನು.—ಹೋಲಿಸಿರಿ ಕೀರ್ತನೆ 25:4, 5; 119:34.
[ಅಧ್ಯಯನ ಪ್ರಶ್ನೆಗಳು]
a ಮದ್ಯರೋಗಿಗಳ ಕುಟುಂಬಗಳಿಗಾಗಿ ಸಹಾಯವು ಮೇ 22, 1992 ರ ಅವೇಕ್! ಪುಟ 3-7 ರಲ್ಲಿ ಚರ್ಚಿಸಲಾಗಿದೆ.
b ಹೆಸರುಗಳು ಬದಲಾಯಿಸಲ್ಪಟ್ಟಿವೆ.
c ಅಕ್ಟೋಬರ 8, 1991, ಮೇ 22, 1992, ಮತ್ತು ಜುಲೈ 8, 1992 ಎವೇಕ್ ಸಂಚಿಕೆಗಳನ್ನು ನೋಡಿರಿ.
[ಪುಟ 6 ರಲ್ಲಿರುವ ಚೌಕ]
“ಕಚಡಕ್ಕೆ ಹೆಚ್ಚು ಸಮಯ ಸಿಕ್ಕಿತು!”
ದಾಂಪತ್ಯದ ಕಷ್ಟಗಳನ್ನು ಅನುಭವಿಸುತ್ತಿದ್ದ ಒಬ್ಬ ಪತಿ ಮತ್ತು ಪತ್ನಿಗೆ, ಪ್ರತಿ ವಾರ ಮನೆಯ ಕಚಡವನ್ನು ಹೊರಗೊಯ್ಯಲು ಅವರೆಷ್ಟು ಸಮಯ ಕಳೆಯುತ್ತಾರೆಂದು ಅಂದಾಜು ಮಾಡಲು ಕೇಳಲಾಯಿತು. ವಾರಕ್ಕೆ ಸುಮಾರು 35 ನಿಮಿಷ, ಅಥವಾ ದಿನಕ್ಕೆ 5 ನಿಮಿಷವೆಂದು ಅವರ ಉತ್ತರವಾಗಿತ್ತು. ಒಟ್ಟುಗೂಡಿ ಮಾತಾಡುವುದರಲ್ಲಿ ಅವರೆಷ್ಟು ಸಮಯವನ್ನು ಕಳೆಯುತ್ತಾರೆಂದು ಅನಂತರ ಅವರನ್ನು ಕೇಳಲಾಯಿತು. ಗಂಡನಿಗೆ ಧಕ್ಕೆಬಡೆದಂತಾಯಿತು. “ಕಚಡಕ್ಕೆ ಹೆಚ್ಚು ಸಮಯ!” ಎಂದವನು ಘೋಷಿಸುತ್ತಾ, ಕೂಡಿಸಿದ್ದು: “ಒಂದು ವಿವಾಹವನ್ನು ಉಳಿಸಿಕೊಳ್ಳಲು ದಿನವೊಂದಕ್ಕೆ ಐದು ನಿಮಿಷವು ಸಾಕಷ್ಟು ಸಮಯವೆಂದು ನಾವು ನೆನಸುವುದಾದರೆ, ನಮ್ಮನ್ನು ಮೋಸಗೊಳಿಸುತ್ತೇವೆಯೇ ಸರಿ. ಮತ್ತು ವಿವಾಹವನ್ನು ಬೆಳೆಸುವುದಕ್ಕೆ ಅದು ಖಂಡಿತವಾಗಿಯೂ ಸಾಕಷ್ಟು ಸಮಯವಲ್ಲ.”
[ಪುಟ 7 ರಲ್ಲಿರುವ ಚೌಕ]
ಮೂಲ ಸೂತ್ರಗಳನ್ನು ಸ್ಥಾಪಿಸಿರಿ
▫ ಒಮ್ಮೆಗೆ ಒಂದು ವಿಷಯ ಚರ್ಚಿಸಿರಿ (1 ಕೊರಿಂಥ 14:33, 40)
▫ ಅನಿಸಿಕೆಗಳನ್ನು ವ್ಯಕ್ತಪಡಿಸಿರಿ; ತಪ್ಪುಗಳನ್ನು ಹೊರಿಸಬೇಡಿರಿ (ಆದಿಕಾಂಡ 27:46)
▫ ಹೊಡೆಯುವಿಕೆ ಇಲ್ಲ (ಎಫೆಸ 5:28, 29)
▫ ಬಯ್ಯುವಿಕೆ ಇಲ್ಲ (ಜ್ಞಾನೋಕ್ತಿ 26:20)
▫ ಜಯಿಸುವುದನ್ನಲ್ಲ, ರಾಜಿಯಾಗುವ ಗುರಿಯಿಡಿರಿ (ಆದಿಕಾಂಡ 13:8, 9)
[ಪುಟ 4 ರಲ್ಲಿರುವ ಚಿತ್ರ]
ಒಂದು ಜಗಳವು ಏಳುವಾಗ, ಒಬ್ಬರನ್ನೊಬ್ಬರ ಬದಲಿಗೆ ಸಮಸ್ಯೆಯನ್ನು ಆಕ್ರಮಿಸಿರಿ
[ಪುಟ 8 ರಲ್ಲಿರುವ ಚಿತ್ರ]
ಅನಿಸಿಕೆಗಳನ್ನು ವ್ಯಕ್ತಪಡಿಸಿರಿ; ತಪ್ಪುಹೊರಿಸಬೇಡಿರಿ