ವೃದ್ಧರಿಗೆ ಕ್ರೈಸ್ತರು ಸಹಾಯ ಮಾಡಸಾಧ್ಯವಿರುವ ವಿಧ
“ಆದದರಿಂದ ನಾವು ಧೈರ್ಯಗೆಡುವದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಆಂತರ್ಯವು ದಿನೇದಿನೇ ಹೊಸದಾಗುತ್ತಾ ಬರುತ್ತದೆ. . . . ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು.” ಅಪೊಸ್ತಲ ಪೌಲನು ಕೊರಿಂಥದವರಿಗೆ ಬರೆದ ತನ್ನ ಎರಡನೆಯ ಪತ್ರದಲ್ಲಿ ಈ ರೀತಿ ಹೇಳಿದನು.—2 ಕೊರಿಂಥ 4:16-18.
ಪ್ರಾಚೀನ ಸಮಯಗಳಲ್ಲಿ, ನಂಬಿಗಸ್ತ ಸ್ತ್ರೀಯರು ಮತ್ತು ಪುರುಷರು ಅಗೋಚರವಾದ ವಿಚಾರಗಳ ಮೇಲೆ ತಮ್ಮ ದೃಷ್ಟಿಯನ್ನಿಟ್ಟಿದ್ದರು, ಅವರ ದೇವರಾದ ಯೆಹೋವನು ತಕ್ಕ ಸಮಯದಲ್ಲಿ ಮಾಡಲಿರುವೆನೆಂದು ವಾಗ್ದಾನಿಸಿದ ಎಲ್ಲಾ ವಿಚಾರಗಳೂ ಇದರಲ್ಲಿ ಒಳಗೊಂಡಿದ್ದವು. ಇಬ್ರಿಯ ಪುಸ್ತಕದಲ್ಲಿ, ಯಾರು ಮರಣ ಸಮಯದ ತನಕ ತಮ್ಮ ನಂಬಿಕೆಯನ್ನು ಕಾಪಾಡಿಕೊಂಡರೊ ಅಂತಹವರ ಕುರಿತು ಪೌಲನು ವಿಶೇಷವಾಗಿ ಮಾತಾಡುತ್ತಾನೆ—ಮತ್ತು ಅವರಲ್ಲಿ ಕೆಲವರು ಬಹಳ ವೃದ್ಧರಾಗುವ ತನಕ ಬದುಕಿದರು. ಆತನು ಅವರನ್ನು ನಮಗೆ ಒಂದು ಮಾದರಿಯಾಗಿ ಸೂಚಿಸುತ್ತಾ ಹೇಳಿದ್ದು: “ವಾಗ್ದಾನಗಳ ನೆರವೇರಿಕೆಯನ್ನು ಹೊಂದದಿರುವದಾದರೂ ಇವರೆಲ್ಲರೂ ನಂಬಿಕೆಯುಳ್ಳವರಾಗಿ ಮೃತರಾದರು, ಆದರೆ ಅವರು ಅವುಗಳನ್ನು ದೂರದಿಂದ ನೋಡಿದರು ಮತ್ತು ಅವುಗಳನ್ನು ಸ್ವಾಗತಿಸಿದರು.”—ಇಬ್ರಿಯ 11:13, NW.
ಇಂದು ಈ ವಾಗ್ದಾನಗಳ ನೆರವೇರಿಕೆಗೆ ನಾವು ಅತ್ಯಂತ ಸಮೀಪದಲ್ಲಿದ್ದೇವೆ. ಆದರೆ ಈ ದುಷ್ಟ ವ್ಯವಸ್ಥೆಯ ಅಂತ್ಯವನ್ನು ನೋಡಲು ತಾವು ವೈಯಕ್ತಿಕವಾಗಿ ಜೀವಿಸುತ್ತೇವೆಂಬ ನಿಶ್ಚಿತ ಅನಿಸಿಕೆಯಿಲ್ಲದ ಅಸ್ವಸ್ಥರು ಮತ್ತು ವೃದ್ಧರು ನಮ್ಮ ಮಧ್ಯೆ ಇದ್ದಾರೆ. ಪ್ರಾಯಶಃ ಇವರಲ್ಲಿ ಕೆಲವರು ತಮ್ಮ ಪ್ರಸ್ತುತ ಜೀವಾವಧಿಯಲ್ಲಿ ಎಲ್ಲಾ ವಾಗ್ದಾನಗಳು ನೆರವೇರುವುದನ್ನು ಕಾಣದೆ ಕೂಡ ನಂಬಿಕೆಯಲ್ಲಿ ಸಾಯಬಹುದು. ಅಂಥವರಿಗೆ 2 ಕೊರಿಂಥ 4:16-18 ರ ಪೌಲನ ಮಾತುಗಳು ಹೆಚ್ಚಿನ ಪ್ರೋತ್ಸಾಹವನ್ನೊದಗಿಸಬಲ್ಲವು.
ಯೆಹೋವನು ಅಸ್ವಸ್ಥರು ಮತ್ತು ವೃದ್ಧರನ್ನು ಒಳಗೊಂಡು ತನ್ನೆಲ್ಲಾ ನಿಷ್ಠರನ್ನು ಸ್ಮರಿಸುತ್ತಾನೆ. (ಇಬ್ರಿಯ 6:10) ಬೈಬಲಿನಲ್ಲಿ ಅನೇಕ ಕಡೆಗಳಲ್ಲಿ ನಂಬಿಗಸ್ತ ವೃದ್ಧರು ಗೌರವಾರ್ಹರಾಗಿ ನಮೂದಿಸಲ್ಪಟ್ಟಿದ್ದಾರೆ, ಮತ್ತು ಮೋಶೆಯ ನಿಯಮಶಾಸ್ತ್ರದಲ್ಲಿ, ವೃದ್ಧರಿಗೆ ತೋರಿಸಲ್ಪಡಬೇಕಾದ ಗೌರವದ ಕುರಿತು ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. (ಯಾಜಕಕಾಂಡ 19:32; ಕೀರ್ತನೆ 92:12-15; ಜ್ಞಾನೋಕ್ತಿ 16:31) ಆದಿ ಕ್ರೈಸ್ತರಲ್ಲಿ, ವೃದ್ಧರು ಗೌರವದಿಂದ ಉಪಚರಿಸಲ್ಪಡುತ್ತಿದ್ದರು. (1 ತಿಮೊಥೆಯ 5:1-3; 1 ಪೇತ್ರ 5:5) ಮುಪ್ಪಿನ ಅತೆಯ್ತ ಕಡೆಗೆ ಯುವ ಸ್ತ್ರೀಯೊಬ್ಬಳಿಂದ ತೋರಿಸಲ್ಪಟ್ಟ ಪ್ರೀತಿಯ ಆರೈಕೆ ಮತ್ತು ಮನಸ್ಪರ್ಶಿಸುವ ಸ್ವತ್ಯಾಗದ ಕುರಿತು ಬೈಬಲಿನ ಒಂದು ಪುಸ್ತಕವು ಸುಂದರವಾದ ವರ್ಣನೆಯನ್ನು ಒಳಗೊಂಡಿದೆ. ಸೂಕ್ತವಾಗಿಯೇ ರೂತಳು ಎಂಬ ಆ ಯುವ ಸ್ತ್ರೀಯ ಹೆಸರನ್ನು ಆ ಪುಸ್ತಕವು ಪಡೆದಿದೆ.
ದೃಢನಿಷ್ಠೆಯುಳ್ಳ ಸಹಾಯಕಳು
ವಯಸ್ಸಾದ ನೊವೊಮಿಗೆ ಜೀವಿತವು ಕಹಿಯಾಗಿತ್ತು. ಬರವೊಂದು ಅವಳನ್ನು, ಅವಳ ಸಣ್ಣ ಕುಟುಂಬದೊಂದಿಗೆ, ಆಪ್ತರನ್ನು ಮತ್ತು ಪಿತ್ರಾರ್ಜಿತ ಬಾಧ್ಯತೆಯನ್ನು ಯೆಹೂದದಲ್ಲಿಯೇ ಹಿಂದೆ ಬಿಡಲು ಮತ್ತು ಯೊರ್ದನ್ ನದಿಯ ಪೂರ್ವಕ್ಕಿರುವ ಮೋವಾಬ್ ದೇಶದಲ್ಲಿ ವಾಸಿಸುವಂತೆ ಒತ್ತಾಯಿಸಿತ್ತು. ಇಲ್ಲಿ ಅವರ ಇಬ್ಬರು ಹುಡುಗರೊಂದಿಗೆ, ಅವಳನ್ನು ಒಂಟಿಯಾಗಿ ಬಿಟ್ಟು ನೊವೊಮಿಯ ಗಂಡನು ಸತ್ತನು. ಇವರು ಕೂಡ ಕಾಲಾವಧಿಯಲ್ಲಿ ಬೆಳೆದು ದೊಡ್ಡವರಾದರು ಮತ್ತು ಮದುವೆ ಮಾಡಿಕೊಂಡರು, ಆದರೆ ಅನಂತರ ಅವರು ಕೂಡ ಮೃತಿಹೊಂದಿದರು. ಅವಳನ್ನು ಆರೈಕೆ ಮಾಡುವ ವಾರಸುದಾರರಿಲ್ಲದೆ ನೊವೊಮಿಯು ಬಿಡಲ್ಪಟ್ಟಳು.
ಹೊಸ ಕುಟುಂಬವೊಂದನ್ನು ಆರಂಭಿಸಲು ಅವಳು ತೀರ ಹೆಚ್ಚು ವಯಸ್ಸಾದವಳಾಗಿದ್ದಳು, ಮತ್ತು ಜೀವಿತವು ತೀರಾ ಅಲ್ಪವನ್ನು ನೀಡುವಂತೆ ಕಂಡಿತು. ನಿಸ್ವಾರ್ಥವಾಗಿ, ತನ್ನಿಬ್ಬರು ಗಂಡು ಮಕ್ಕಳ ರೂತ್ ಮತ್ತು ಒರ್ಫಾ ಎಂಬ ವಿಧವೆಯರನ್ನು ಅವರು ತಮಗೋಸ್ಕರ ಗಂಡಂದಿರನ್ನು ಕಂಡುಕೊಳ್ಳಶಕ್ತರಾಗುವಂತೆ ಅವರ ತೌರಮನೆಗೆ ಹಿಂತಿರುಗಿ ಕಳುಹಿಸಲು ಅವಳು ಅಪೇಕ್ಷಿಸಿದಳು. ಇಂದು ಕೂಡ, ಕೆಲವು ವೃದ್ಧರು ವಿಶೇಷವಾಗಿ ತಮ್ಮ ಪ್ರಿಯರಾದವರನ್ನು ಮರಣದಲ್ಲಿ ಕಳೆದುಕೊಂಡಾಗ ಖಿನ್ನತೆಯನ್ನು ಅನುಭವಿಸುತ್ತಾರೆ. ನೊವೊಮಿಯಂತೆಯೇ, ಅವರಿಗೆ ತಮ್ಮ ಆರೈಕೆ ಮಾಡಲು ಪ್ರಾಯಶಃ ಬೇರೊಬ್ಬರ ಅಗತ್ಯವಿರಬಹುದು, ಆದರೆ ಅವರು ಹೊರೆಯಾಗಿರಲು ಅಪೇಕ್ಷಿಸುವುದಿಲ್ಲ.
ರೂತಳಾದರೋ ಅವಳ ಅತೆಯ್ತನ್ನು ತೊರೆಯಲಿಲ್ಲ. ಈ ವೃದ್ಧ ಸ್ತ್ರೀಯನ್ನು ಅವಳು ಪ್ರೀತಿಸಿದಳು, ಮತ್ತು ನೊವೊಮಿಯಿಂದ ಆರಾಧಿಸಲ್ಪಡುತ್ತಿದ್ದ ದೇವರಾದ ಯೆಹೋವನನ್ನು ಅವಳು ಪ್ರೀತಿಸಿದಳು. (ರೂತಳು 1:16) ಹೀಗೆ ಅವರು ಒಟ್ಟಿಗೆ ಯೆಹೂದಕ್ಕೆ ಹಿಂದಿರುಗಿ ಪ್ರಯಾಣಬೆಳೆಸಿದರು, ಆ ದೇಶದಲ್ಲಿ ಕೊಯ್ಲಿನ ಒಟ್ಟುಗೂಡಿಸುವಿಕೆಯ ಅನಂತರ ಹೊಲಗಳಲ್ಲಿ ಏನಾದರೂ ಬಿಟ್ಟದ್ದಲ್ಲಿ ಬಡ ಜನರು ಅದನ್ನು ಕೂಡಿಹಾಕುವ ಅಥವಾ ಸಂಗ್ರಹಿಸ ಸಾಧ್ಯವಿದ್ದ ಪ್ರೀತಿಪೂರ್ಣ ಏರ್ಪಾಡು ಯೆಹೋವನ ನಿಯಮದ ಕೆಳಗಿತ್ತು. ಕಿರಿಯವಳಾದ ರೂತಳು, “ದಯವಿಟ್ಟು ನನ್ನನ್ನು ಹೋಗಗೊಡಿಸು” (NW) ಎಂದು ಹೇಳುವ ಮೂಲಕ ಈ ಕೆಲಸವನ್ನು ಮಾಡಲು ಸ್ವಇಚ್ಛೆಯಿಂದ ಒಪ್ಪಿಸಿಕೊಂಡಳು. ಇಬ್ಬರ ಒಳಿತಿಗಾಗಿ ಅವಳು ಅವಿಶ್ರಾಂತವಾಗಿ ಕೆಲಸ ಮಾಡಿದಳು.—ರೂತಳು 2:2, 17, 18.
ರೂತಳ ನಂಬಿಗಸ್ತಿಕೆ ಮತ್ತು ಯೆಹೋವನಿಗಾಗಿ ಪ್ರೀತಿಯು ನೊವೊಮಿಗೆ ಒಂದು ಬಲವಾದ ಉತ್ತೇಜನವಾಗಿದ್ದುದರಿಂದ ಅವಳು ಸಕಾರಾತ್ಮಕ ಮತ್ತು ರಚನಾತ್ಮಕ ರೀತಿಯಲ್ಲಿ ಯೋಚಿಸತೊಡಗಿದಳು. ದೇಶದ ನಿಯಮ ಮತ್ತು ಪದ್ಧತಿಯ ಕುರಿತಾದ ಅವಳ ಜ್ಞಾನವು ಈಗ ಉಪಯುಕ್ತವಾಗಿತ್ತು. ಅವಳು ತನ್ನ ಅನುರಕ್ತ ಸಹಾಯಕಳಿಗೆ ಆ ಯುವ ಸ್ತ್ರೀಯು ಒಂದು ಮೈದುನಧರ್ಮದ ಮದುವೆಯ ಮೂಲಕ ಕುಟುಂಬ ಬಾಧ್ಯತೆಯನ್ನು ಪುನಃ ಗಳಿಸಶಕ್ತಳಾಗುವಂತೆ ಮತ್ತು ಸಂತತಿಯನ್ನು ಮುಂದುವರಿಸಲು ಒಬ್ಬ ಮಗನನ್ನು ಪಡೆಯುವಂತೆ ವಿವೇಕವುಳ್ಳ ಸಲಹೆಯನ್ನು ಕೊಟ್ಟಳು. (ರೂತಳು, ಅಧ್ಯಾಯ 3) ಯಾರು ಅಸ್ವಸ್ಥರು ಅಥವಾ ವೃದ್ಧರ ಆರೈಕೆ ಮಾಡಲು ತಮ್ಮನ್ನು ಅರ್ಪಿಸಿಕೊಳ್ಳುತ್ತಾರೊ ಅವರಿಗೆ ರೂತಳು ಒಂದು ಸುಂದರ ಉದಾಹರಣೆಯಾಗಿದ್ದಾಳೆ. (ರೂತಳು 2:10-12) ತದ್ರೀತಿ ಇಂದು ಸಭೆಯೊಳಗೆ ಅಸ್ವಸ್ಥರು ಮತ್ತು ವೃದ್ಧರಿಗೆ ಸಹಾಯ ಮಾಡಲು ಹೆಚ್ಚಿನದನ್ನು ಮಾಡಸಾಧ್ಯವಿದೆ. ಹೇಗೆ?
ಏರ್ಪಡಿಸುವಿಕೆ ಉಪಯುಕ್ತವಾಗಿದೆ
ಆದಿ ಕ್ರೈಸ್ತ ಸಭೆಯಲ್ಲಿ, ಭೌತಿಕ ಬೆಂಬಲದ ಅಗತ್ಯವಿರುವ ವಿಧವೆಯರ ಪಟ್ಟಿಯು ಇಡಲ್ಪಟ್ಟಿತ್ತು. (1 ತಿಮೊಥೆಯ 5:9, 10) ಹಾಗೆಯೇ ಇಂದು ಕೆಲವೊಂದು ಪರಿಸ್ಥಿತಿಗಳಲ್ಲಿ ವಿಶೇಷ ಗಮನದ ಅಗತ್ಯವಿರುವ ಅಸ್ವಸ್ಥರ ಮತ್ತು ವೃದ್ಧರ ಒಂದು ಪಟ್ಟಿಯನ್ನು ಹಿರಿಯರು ಮಾಡಬಹುದು. ಕೆಲವೊಂದು ಸಭೆಗಳಲ್ಲಿ ಒಬ್ಬ ಹಿರಿಯನು ಇದರ ಪರಾಮರಿಕೆಯನ್ನು ತನ್ನ ವಿಶೇಷ ಜವಾಬ್ದಾರಿಕೆಯಾಗಿ ಮಾಡುವಂತೆ ಕೇಳಿಕೊಳ್ಳಲ್ಪಟ್ಟಿರುತ್ತಾನೆ. ನೊವೊಮಿಯಂತೆ, ಅನೇಕ ವೃದ್ಧರು ಸಹಾಯವನ್ನು ಹುಡುಕುವ ಅಪೇಕ್ಷೆಯಿಲ್ಲದವರಾಗಿರುವುದರಿಂದ, ಅಂತಹ ಒಬ್ಬ ಸಹೋದರನು ಆ ಪರಿಸ್ಥಿತಿಯನ್ನು ವಿಶೇಷ್ಲಿಸುವುದರಲ್ಲಿ ಚಾತುರ್ಯವುಳ್ಳವನಾಗಿರಬೇಕು ಮತ್ತು—ಒಂದು ಕೌಶಲ್ಯ ಮತ್ತು ವಿವೇಕವುಳ್ಳ ರೀತಿಯಲ್ಲಿ—ಅಗತ್ಯವಿರುವ ವಿಷಯಗಳು ಮಾಡಲ್ಪಡುವಂತೆ ಖಾತರಿಮಾಡಿಕೊಳ್ಳಬೇಕು. ಉದಾಹರಣೆಗೆ, ರಾಜ್ಯ ಸಭಾಗೃಹವು ಅಸ್ವಸ್ಥ ಮತ್ತು ವೃದ್ಧರಿಗಾಗಿ ವಿಪುಲ ಒದಗಿಸುವಿಕೆಗಳನ್ನು ಹೊಂದಿರುವಂತೆ ಅವನು ಅವಲೋಕಿಸ ಸಾಧ್ಯವಿದೆ. ಪ್ರಾಯೋಗಿಕವಾಗಿರುವಲ್ಲಿ, ಗಾಲಿಕುರ್ಚಿಗಳಿಗಾಗಿ ಇಳಿಜಾರು ಮಟ್ಟವನ್ನು, ತಕ್ಕದಾದ ವಿಶ್ರಾಂತಿ ಗೃಹದ ಸೌಕರ್ಯಗಳು, ಆಲಿಸಲು ತೊಡಕಾಗುವವರಿಗೆ ಕರ್ಣವಾಣಿಗಳು, ಮತ್ತು ವಿಶೇಷ ಕುರ್ಚಿಗಳಿಗಾಗಿ ಒಂದು ಸ್ಥಳ, ಇಂತಹ ವಿಚಾರಗಳನ್ನು ಅವನು ಪರಿಗಣಿಸಬಲ್ಲನು. ಈ ಸಹೋದರನು, ರಾಜ್ಯ ಸಭಾಗೃಹಕ್ಕೆ ಬರಲು ಅಸಮರ್ಥರಾದವರೆಲ್ಲಾ, ಕೂಟಗಳ ಟೇಪ್ರೆಕಾರ್ಡಿಂಗನ್ನು ಎರವು ಪಡೆಯಲು ಅಥವಾ ಟೆಲಿಫೋನ್ ಹುಕಪ್ ಮೂಲಕ ಆಲಿಸಲು ಶಕ್ತರಾಗುವಂತೆ ಸಹ ಖಾತ್ರಿಮಾಡಸಾಧ್ಯವಿದೆ.
ಕೂಟಗಳಿಗೆ ಮತ್ತು ಅಧಿವೇಶನಗಳಿಗಾಗಿ ವಾಹನ ಸೌಕರ್ಯದ ಏರ್ಪಾಡಿನ ಅಗತ್ಯವು ಕೂಡ ಇಲ್ಲಿರಬಹುದು. ಒಬ್ಬ ವಯಸ್ಸಾದ ಸಹೋದರಿಗೆ, ಅವಳನ್ನು ಕೂಟಗಳಿಗೆ ಕ್ರಮವಾಗಿ ಕರೆದೊಯ್ಯುತ್ತಿದ್ದವರೊಬ್ಬರು ಇಲ್ಲದಿದ್ದ ಕಾರಣ ಸಮಸ್ಯೆಯಿತ್ತು. ಅಂತಿಮವಾಗಿ ಅವಳನ್ನು ಸಾಗಿಸುವ ಯಾರಾದರೊಬ್ಬರನ್ನು ಕಂಡುಕೊಳ್ಳುವ ಮೊದಲು ಅವಳು ಅನೇಕ ವ್ಯಕ್ತಿಗಳಿಗೆ ಟೆಲಿಫೋನ್ ಮಾಡಬೇಕಾಗಿತ್ತು ಮತ್ತು ಪರಿಣಾಮವಾಗಿ ತಾನೊಂದು ಹೊರೆಯಾಗಿದ್ದೇನೆಂಬ ಭಾವನೆಗೆ ಅವಳು ಬಂದಳು. ಅಂತಹ ಎಲ್ಲಾ ವಿಷಯಗಳನ್ನು ಪರಿಶೀಲಿಸಶಕ್ತನಾದ ಒಬ್ಬ ಹಿರಿಯನೊಂದಿಗೆ ಮಾಡಲ್ಪಡುವ ಒಂದು ಏರ್ಪಾಡು ಅವಳ ಪೇಚಾಟವನ್ನು ಉಪಶಮನಗೊಳಿಸುತ್ತಿತ್ತು.
ಬೇರೆ ಬೇರೆ ಕುಟುಂಬಗಳು ವೃದ್ಧರನ್ನು ಸಂದರ್ಶಿಸಲಿಕ್ಕಾಗಿ ಅವರಿಗೆ ಸರದಿಯನ್ನು ತಕ್ಕೊಳ್ಳಸಾಧ್ಯವಿದೆಯೊ ಎಂದು ಕೂಡ ಈ ಹಿರಿಯನು ಕೇಳಬಲ್ಲನು. ಈ ರೀತಿಯಲ್ಲಿ ವೃದ್ಧರ ಆರೈಕೆಯೂ ಕ್ರೈಸ್ತರ ಜೀವಿತದ ಒಂದು ಭಾಗವಾಗಿದೆ ಎಂದು ಮಕ್ಕಳು ಕಲಿಯುವರು. ಮಕ್ಕಳು ಈ ಜವಾಬ್ದಾರಿಗೆ ಹೆಗಲುಕೊಡಲು ಕಲಿಯುವುದು ಸಮರ್ಪಕವಾಗಿದೆ. (1 ತಿಮೊಥೆಯ 5:4) ಒಬ್ಬ ಸರ್ಕಿಟ್ ಮೇಲ್ವಿಚಾರಕರು ಹೇಳಿದ್ದು: “ನನ್ನ ಅನುಭವದಲ್ಲಿ, ಸ್ವಂತ ನೇತೃತ್ವದಲ್ಲಿ ವೃದ್ಧರನ್ನು ಅಥವಾ ಅಸ್ವಸ್ಥರನ್ನು ಭೇಟಿ ಮಾಡುವ ಮಕ್ಕಳು ಅಥವಾ ಎಳೆಯರು ತೀರಾ ಕಡಿಮೆ ಇದ್ದಾರೆ.” ಪ್ರಾಯಶಃ ಅದರ ಕುರಿತು ಅವರು ಚಿಂತಿಸುವುದಿಲ್ಲ ಅಥವಾ ಅದರ ಕುರಿತು ಏನು ಮಾಡಬೇಕು ಅಥವಾ ಹೇಳಬೇಕೆಂಬ ನಿಶ್ಚಯವಿಲ್ಲದೆ ಇರಬಹುದು; ಇದನ್ನು ಹೆತ್ತವರು ಅವರಿಗೆ ಕಲಿಸ ಸಾಧ್ಯವಿದೆ.
ಆದರೂ, ಗೆಳೆಯನೊಬ್ಬನು ಬರುತ್ತಿದ್ದಾನೆಂದು ಸಮಯಕ್ಕೆ ಮುಂದಾಗಿಯೇ ತಿಳಿಯುವುದಾದಲ್ಲಿ ಹೆಚ್ಚಿನ ವೃದ್ಧರು ಗಣ್ಯ ಮಾಡುವರೆಂಬದನ್ನು ನೆನಪಿನಲ್ಲಿಡಿ. ಇದು ಒಬ್ಬ ಸಂದರ್ಶಕನನ್ನು ನಿರೀಕ್ಷಿಸುವ ಕೂಡಿಸಲ್ಪಟ್ಟ ಸಂತೋಷವನ್ನು ಅವರಿಗೆ ಕೊಡುತ್ತದೆ. ಭೇಟಿಗಾರರು ಕಾಫಿ ಅಥವಾ ಕೇಕ್ಗಳಂತಹ ಉಪಹಾರಗಳನ್ನು ತರುವದಾದರೆ, ಮತ್ತು ಅನಂತರ ಶೀಘ್ರವಾಗಿ ಶುಚಿಗೊಳಿಸುವುದಾದರೆ, ವೃದ್ಧರ ಮೇಲಿನ ಹೆಚ್ಚಿನ ಹೊರೆಯು ನಿವಾರಿಸಲ್ಪಡುವುದು. ಇನ್ನೂ ಪೂರ್ಣ ಹುರುಪಿನಿಂದಿರುವ ಒಬ್ಬ ವೃದ್ಧ ದಂಪತಿಗಳು, ಪ್ರತಿ ವಾರ ಒಂದು ನಿಯಮಿತ ದಿನದಲ್ಲಿ ಅವರು ಒಂದು ಚಿಕ್ಕ ಪಿಕ್ನಿಕ್ ಬುಟ್ಟಿಯನ್ನು ಪ್ಯಾಕ್ ಮಾಡಿ, ಮತ್ತು ಸಭೆಯಲ್ಲಿರುವ ವೃದ್ಧರಿಗೆ ಒಂದು ಕ್ರಮವಾದ ಭೇಟಿ ನೀಡಲು ಹೊರಡುತ್ತಾರೆ. ಅವರ ಸಂದರ್ಶನೆಗಳು ಬಹಳವಾಗಿ ಗಣ್ಯಮಾಡಲ್ಪಡುತ್ತವೆ.
ಅನೇಕ ಸಭೆಗಳು, ವೃದ್ಧರ ಒಳಿತಿಗಾಗಿ ಸಭಾ ಪುಸ್ತಕ ಅಭ್ಯಾಸವನ್ನು ಹಗಲು ಹೊತ್ತಿನಲ್ಲಿ ನಡೆಸುತ್ತವೆ. ಒಂದು ಸ್ಥಳದಲ್ಲಿ, ಕೆಲವು ಕುಟುಂಬಗಳು ಮತ್ತು ಒಂಟಿ ಪ್ರಚಾರಕರು ಇಂತಹ ಒಂದು ಗುಂಪನ್ನು ಬೆಂಬಲಿಸಶಕ್ತರೊ ಮತ್ತು ಅವರಿಗೆ ಅಪೇಕ್ಷೆ ಇದೆಯೊ ಎಂದು ಕೇಳಲ್ಪಟ್ಟರು, ಫಲಿತಾಂಶವಾಗಿ ಎಲ್ಲಿ ವೃದ್ಧರು ಮತ್ತು ಕಿರಿಯರು ಒಬ್ಬರನ್ನೊಬ್ಬರು ಆರೈಕೆ ಮಾಡಬಹುದಾದ ಒಂದು ಪುಸ್ತಕಾಭ್ಯಾಸದ ಗುಂಪು ಏರ್ಪಟ್ಟಿತು.
ಈ ಕ್ಷೇತ್ರದಲ್ಲಿ ಪ್ರಾರಂಭದ ಹೆಜ್ಜೆಯನ್ನು ಹಿರಿಯರೊಬ್ಬರೇ ತೆಗೆದುಕೊಳ್ಳುವಂತೆ ಬಿಡಬಾರದಾಗಿದೆ. ಅಸ್ವಸ್ಥರಾಗಿರುವವರ ಮತ್ತು ವೃದ್ಧರ ಅಗತ್ಯಗಳ ಕುರಿತು ನಾವೆಲ್ಲರೂ ಅರಿವುಳ್ಳವರಾಗಿ ಇರಬೇಕು. ರಾಜ್ಯ ಸಭಾಗೃಹಗಳಲ್ಲಿ ನಾವು ಅವರನ್ನು ಸ್ವಾಗತಿಸಲು ಮತ್ತು ಅವರೊಂದಿಗೆ ಮಾತಾಡಲು ಸಮಯ ತೆಗೆದುಕೊಳ್ಳ ಸಾಧ್ಯವಿದೆ. ವಿಧ್ಯುಕ್ತವಲ್ಲದ ಸಹವಾಸಕ್ಕಾಗಿ ಒಂದು ಆಮಂತ್ರಣವು ಪ್ರಾಯಶಃ ಸ್ವಾಗತಾರ್ಹವಾಗಿರಬಹುದು. ಅಥವಾ ಒಂದು ಪಿಕ್ನಿಕ್ ಅಥವಾ ರಜೆಯಲ್ಲಿಯೂ ನಮ್ಮೊಂದಿಗೆ ಜತೆಗೂಡುವಂತೆ ಅವರನ್ನು ಆಮಂತ್ರಿಸ ಸಾಧ್ಯವಿದೆ. ಒಬ್ಬ ಸಾಕ್ಷಿಯು ವ್ಯವಹಾರ ನಿಮಿತ್ತವಾಗಿ ಶಹರದಿಂದ ಹೊರಗೆ ಹೋಗುವಾಗ ಆಗಾಗ್ಗೆ ವೃದ್ಧ ಪ್ರಚಾರಕರನ್ನು ಅವನೊಂದಿಗೆ ಅವನ ಕಾರಿನಲ್ಲಿ ಕರೆದೊಯ್ದನು. ತಾವೂ ಒಳಗೂಡಿದ್ದೇವೆಂಬ ಅನಿಸಿಕೆಯನ್ನು ಮುಂದುವರಿಸುವಂತೆ ವೃದ್ಧರಿಗೆ ಸಹಾಯ ಮಾಡುವುದು ಪ್ರಾಮುಖ್ಯವಾಗಿದೆ. ನೊವೊಮಿಗೆ ಪ್ರವೃತ್ತಿಯಿದ್ದಂತೆ, ಹಿಂಜರಿಯಲು ಅವರನ್ನು ಅನುಮತಿಸದಿರ್ರಿ, ಇದು ವೃದ್ಧಾಪ್ಯ ಅಥವಾ ಮುಪ್ಪಿನ ಕಾರ್ಯವಿಧಾನವನ್ನು ತರ್ವೆಪಡಿಸುವುದು.
ಬಲಹೀನ ಅಥವಾ ಅಸ್ವಸ್ಥರಾದ ಎಳೆಯರಿಗೆ ಸಹ ಗಮನದ ಅಗತ್ಯವಿದೆ. ಗುಣವಾಗದಷ್ಟು ರೋಗದ ಮೂವರು ಹುಡುಗರಿದ್ದ ಮತ್ತು ಅಂದಿನಿಂದ ಇಬ್ಬರು ಸತ್ತಿದ್ದ ಒಬ್ಬ ಸಾಕ್ಷಿ ಅಂದದ್ದು: “ಯಾರಾದರೊಬ್ಬನ ಅನಾರೋಗ್ಯವು ವಿಸ್ತೃತ ಕಾಲಾವಧಿಯ ತನಕ ಮುಂದುವರಿಯುತ್ತಾ ಇದ್ದಾಗ ಸಭೆಯೊಂದಕ್ಕೆ ಸತತವಾಗಿ ಆರೈಕೆ ತೋರಿಸಲು ಕಷ್ಟವಾಗಸಾಧ್ಯವಿದೆ. ತಮ್ಮ ಹಾಸಿಗೆ ಹಿಡಿದಿರುವ ಸ್ನೇಹಿತನೊಂದಿಗೆ ದೈನಿಕ ವಚನವನ್ನು ಚರ್ಚಿಸಲು ಮತ್ತು ಪ್ರತಿದಿನ ಬೈಬಲಿನಿಂದ ಅಧ್ಯಾಯವೊಂದನ್ನು ಓದಲು ನಂಬಲರ್ಹ ಯುವ ಪ್ರಚಾರಕರನ್ನು ಯಾಕೆ ನೇಮಿಸಬಾರದು? ಎಳೆಯರು, ಪಯನೀಯರರನ್ನು ಒಳಗೊಂಡು ಸರದಿಯನ್ನು ತೆಗೆದುಕೊಳ್ಳಬಲ್ಲರು.”
ಮರಣವು ಅನಿವಾರ್ಯವೆಂದು ಭಾಸವಾಗುವಾಗ
ಯೆಹೋವನ ಸೇವಕರು ಅಸ್ವಸ್ಥತೆಯಿಂದಾಗಲಿ ಅಥವಾ ಹಿಂಸೆಯಿಂದಾಗಲಿ ಯಾವಾಗಲೂ ಮರಣವನ್ನು ಧೈರ್ಯವಾಗಿ ಎದುರಿಸಿದ್ದಾರೆ. ಬಾಧಿಸಲ್ಪಟ್ಟವರು ಪ್ರಾಯಶಃ ಮರಣವು ಸಮೀಪವಿದೆ ಎಂದು ಭಾವಿಸಲಾರಂಭಿಸುವಾಗ ವಿವಿಧ ಭಾವೋದ್ರೇಕಗಳನ್ನು ಅನುಭವಿಸುವುದು ಅವರಿಗೆ ಸ್ವಾಭಾವಿಕವಾಗಿದೆ. ಅವರ ಮರಣಾನಂತರ, ಕ್ರಮಪಡಿಸುವಿಕೆ, ದುಃಖ, ಮತ್ತು ಅಂಗೀಕಾರದ ಕಾಲಾವಧಿಯನ್ನು ಅವರ ಸಂಬಂಧಿಕರು ಸಹ ದಾಟುತ್ತಾರೆ. ಈ ಕಾರಣದಿಂದ ಯಾಕೋಬ, ದಾವೀದ, ಮತ್ತು ಪೌಲರಂತೆ ಮರಣದ ಕುರಿತು ಮುಚ್ಚುಮುರೆ ಇಲ್ಲದೆ ಮಾತಾಡುವುದು ಕೆಲವೊಮ್ಮೆ ಅಸ್ವಸ್ಥನಾಗಿರುವ ವ್ಯಕ್ತಿಗೆ ಹಿತಕರವು.—ಆದಿಕಾಂಡ, ಅಧ್ಯಾಯಗಳು 48 ಮತ್ತು 49; 1 ಅರಸು 2:1-10; 2 ತಿಮೊಥೆಯ 4:6-8.
ವೈದ್ಯನಾದ ಒಬ್ಬ ಸಾಕ್ಷಿಯು ಬರೆಯುವುದು: “ಈ ವಿಷಯದಲ್ಲಿ ನಾವು ತೀರ ತೆರೆದ ಮನಸ್ಸಿನವರಾಗಿರಬೇಕು. ಅವನು ಅಥವಾ ಅವಳು ಮಾರಕವಾಗಿ ಅಸ್ವಸ್ಥರೆಂಬ ಸಂಗತಿಯನ್ನು ವೈದ್ಯನು ಅಥವಾ ಕುಟುಂಬವು ಮರೆಮಾಡುವುದರಿಂದ ರೋಗಿಯೊಬ್ಬನಿಗೆ ಯಾವುದೇ ಪ್ರಯೋಜನವಾಗಿರುವದನ್ನು ನಾನೆಂದೂ ನನ್ನ ವೃತ್ತಿಯಲ್ಲಿ ಕಂಡುಕೊಂಡಿಲ್ಲ.” ಆದರೂ, ರೋಗಿಯು ತಾನೇ ಏನನ್ನು ತಿಳಿಯಲು ಅಪೇಕ್ಷಿಸುತ್ತಾನೆ, ಮತ್ತು ಅವನು ಯಾವಾಗ ಇದನ್ನು ತಿಳಿಯಲು ಅಪೇಕ್ಷಿಸುತ್ತಾನೆ ಎಂದು ನಾವು ಗ್ರಹಿಸುವ ಅಗತ್ಯವಿದೆ. ಕೆಲವು ರೋಗಿಗಳು ತಾವು ಮರಣದ ಸಾಮೀಪ್ಯದ ಅರಿವುಳ್ಳವರಾಗಿದ್ದಾರೆಂದು ಸ್ಪಷ್ಟವಾಗಿಗಿ ಸೂಚಿಸುತ್ತಾರೆ, ಮತ್ತು ಇದರ ಕುರಿತ ಅವರ ಭಾವನೆಗಳನ್ನು ಮತ್ತು ಅನಿಸಿಕೆಗಳನ್ನು ಚರ್ಚಿಸುವ ಅಗತ್ಯ ಅವರಿಗಿದೆ. ಇತರರು ಆಗ್ರಹ ಮಾಡುವವರಾಗಿ ತೋರುತ್ತಾರೆ ಮತ್ತು ಅವರೊಂದಿಗೆ ನಿರೀಕ್ಷೆಯಿಡುವುದು ಅವರ ಸ್ನೇಹಿತರಿಗೆ ಒಳ್ಳೆಯದು.—ಹೋಲಿಸಿರಿ ರೋಮಾಪುರ 12:12-15.
ಮರಣವನ್ನು ಸಮೀಪಿಸಿರುವ ಯಾರಾದರೂ ಎಷ್ಟು ಬಳಲಿರಬಹುದು ಅಥವಾ ಗಲಿಬಿಲಿಗೊಂಡಿರಬಹುದೆಂದರೆ ಪ್ರಾಯಶಃ ಅವನಿಗೆ ಪ್ರಾರ್ಥಿಸಲು ಕಷ್ಟವಾಗುತ್ತದೆ. ರೋಮಾಪುರ 8:26, 27 ರಿಂದ “ಮಾತಿಲ್ಲದಂಥ ನರಳಾಟ” ವನ್ನು ದೇವರು ಗ್ರಹಿಸುತ್ತಾನೆ ಎಂದು ತಿಳಿಯುವ ಮೂಲಕ ಬಹುಶಃ ಅಂತಹ ಒಬ್ಬ ರೋಗಿಯು ಸಂತೈಸಲ್ಪಡುವನು. ಅಂತಹ ಒತ್ತಡದ ಕೆಳಗೆ ಪ್ರಾರ್ಥನೆಗಾಗಿ ಶಬ್ದಗಳನ್ನು ಕಂಡುಕೊಳ್ಳುವುದರಲ್ಲಿ ವ್ಯಕ್ತಿಯೊಬ್ಬನು ಕ್ಲಿಷ್ಟತೆಯನ್ನು ಹೊಂದಿರಬಹುದೆಂದು ಯೆಹೋವನು ತಿಳಿದಿದ್ದಾನೆ.
ಸಾಧ್ಯವಿರುವಾಗ ರೋಗಿಯೊಂದಿಗೆ ಪ್ರಾರ್ಥನೆ ಮಾಡುವುದು ಪ್ರಾಮುಖ್ಯವಾಗಿದೆ. ಒಬ್ಬ ಸಹೋದರನು ವಿವರಿಸಿದ್ದು: “ನನ್ನ ತಾಯಿಯು ಸಾಯುತ್ತಿರುವಾಗ ಮತ್ತು ಮಾತಾಡುವ ಶಕ್ತಿಯು ಇನ್ನಿಲವ್ಲಾದಾಗ, ಆಕೆ ತನ್ನ ಕೈಗಳನ್ನು ಜೋಡಿಸುವ ಮೂಲಕ ಆಕೆಯೊಂದಿಗೆ ನಾವು ಪ್ರಾರ್ಥಿಸುವಂತೆ ಅಪೇಕ್ಷಿಸುತ್ತಾಳೆಂದು ಸೂಚಿಸಿದಳು. ನಮ್ಮ ಪ್ರಾರ್ಥನೆಯ ಅನಂತರ, ನಾವು ರಾಜ್ಯ ಸಂಗೀತವೊಂದನ್ನು ಹಾಡಿದೆವು, ಏಕೆಂದರೆ ನನ್ನ ತಾಯಿಯು ಯಾವಾಗಲೂ ಸಂಗೀತದ ಕುರಿತು ಹೆಚ್ಚು ಒಲುಮೆಯುಳ್ಳವರಾಗಿದ್ದರು. ಆರಂಭದಲ್ಲಿ, ನಾವು ಸರ್ವವನ್ನು ಝೇಂಕರಿಸಿದೆವು, ಮತ್ತು ಅನಂತರ ಶಬ್ದಗಳನ್ನು ಪ್ರಶಾಂತವಾಗಿ ಹಾಡಿದೆವು. ಆಕೆಯು ಅದರಲ್ಲಿ ಸ್ಪಷ್ಟವಾಗಿಗಿ ಆನಂದಿಸಿದಳು. ನಿಸ್ಸಂದೇಹವಾಗಿ, ಯೆಹೋವನ ಸಾಕ್ಷಿಗಳೋಪಾದಿ ನಮ್ಮ ಜೀವಿತದೊಂದಿಗೆ ಹೊಂದಿಸಿಕೊಳ್ಳುವ ಈ ಸಂಗೀತಗಳು, ವ್ಯಕ್ತಪಡಿಸಲು ಕಷ್ಟಕರವಾಗಿರುವ ಭಾವನೆಗಳನ್ನು ಒಳಪಡಿಸಲು ಶಕವ್ತಾಗಿವೆ.”
ಒಬ್ಬ ಮರಣಕಾಲೀನ ವ್ಯಕ್ತಿಯೊಂದಿಗೆ ಮಾತಾಡುವುದು ಪ್ರೀತಿ, ಚಾತುರ್ಯ, ಮತ್ತು ಸಂವೇದನೆಯನ್ನು ಅಪೇಕ್ಷಿಸುತ್ತದೆ. ಸಂದರ್ಶಕನೊಬ್ಬನು ಆತ್ಮೋನ್ನತಿಯ ಮತ್ತು ನಂಬಿಕೆಯನ್ನು ಬಲಪಡಿಸುವ ವಿಚಾರಗಳನ್ನು ತಯಾರಿಸಬಹುದು, ಮತ್ತು ಆತನು ಇತರ ಜನರ ಮತ್ತು ಅವರ ಸಮಸ್ಯೆಗಳ ಕುರಿತ ನಕಾರಾತ್ಮಕ ಮಾತುಗಳನ್ನು ತೊರೆಯಲು ಎಚ್ಚರಿಕೆಯಿಂದಿರಬೇಕು. ಅಲ್ಲದೆ, ಸಂದರ್ಶನದ ಕಾಲಾವಧಿಯನ್ನು ಯಾವುದು ವಿವೇಕಸಮ್ಮತ ಮತ್ತು ಸಮಂಜಸವಾಗಿದೆಯೊ ಅದಕ್ಕನುಸಾರ ಹೊಂದಿಸಿಕೊಳ್ಳಬೇಕು. ರೋಗಿಯು ಪ್ರಜ್ಞೆಯಿಲ್ಲದವನಂತೆ ತೋರುವಲ್ಲಿ, ಏನು ಹೇಳಲ್ಪಡುತ್ತದೊ ಅದನ್ನು ಆತನು ಇನ್ನೂ ಕೇಳಶಕ್ತನೆಂಬದನ್ನು ಜ್ಞಾಪಿಸಿಕೊಳ್ಳುವುದು ಒಳ್ಳೆಯದು. ಆದುದರಿಂದ ನೀವು ಏನನ್ನು ಹೇಳುತ್ತೀರೊ ಅದರ ಕುರಿತು ಜಾಗ್ರತೆಯಿಂದಿರ್ರಿ.
ನಾವು ಹಂಚಿಕೊಳ್ಳುವ ಒಂದು ಜವಾಬ್ದಾರಿ
ಅಸ್ವಸ್ಥರಾಗಿರುವವರ ಮತ್ತು ವೃದ್ಧರ ರಕ್ಷಣೆ ಮಾಡುವುದು ಒಂದು ಭಾರವಾದ ಜವಾಬ್ದಾರಿಯಾಗಿದೆ. ಏಕೆಂದರೆ ರೋಗಿಗೆ ಅತ್ಯಂತ ಆಪ್ತರಾದವರಿಂದ ಇದು ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ವಿಶೇಷ ಗಮನವನ್ನು ಕೇಳಿಕೊಳ್ಳುತ್ತದೆ. ಸಭೆಯಲ್ಲಿರುವ ಇತರರಿಂದ ತಿಳಿವಳಿಕೆ ಮತ್ತು ಸಹಾಯದ ಅಗತ್ಯ ಅವರಿಗಿದೆ ಮತ್ತು ಅವರು ಅದಕ್ಕೆ ಅರ್ಹರಾಗಿದ್ದಾರೆ. ಅವರು ಕೆಲವು ಕೂಟಗಳಿಗೆ ತಪ್ಪುವುದಾದರೂ ಅಥವಾ ಸ್ವಲ್ಪ ಕಾಲಾವಧಿಯವರೆಗೆ ಕ್ಷೇತ್ರ ಸೇವೆಯಲ್ಲಿ ಅವರ ಭಾಗವಹಿಸುವಿಕೆಯು ಕಡಿಮೆಯಾಗುವದಾದರೂ, ಅಸ್ವಸ್ಥ ಕುಟುಂಬದ ಸದಸ್ಯರ ಅಥವಾ ಜೊತೆ ಸಾಕ್ಷಿಗಳ ಆರೈಕೆಯನ್ನು ಯಾರು ಮಾಡುತ್ತಾರೊ ಅವರು ಯಾವುದು ಒಳ್ಳೆದೋ ಅದನ್ನು ಮಾಡುವವರಾಗಿದ್ದಾರೆ. (ಹೋಲಿಸಿ 1 ತಿಮೊಥೆಯ 5:8.) ಅವರು ಸಭೆಯ ವಿವೇಚನಾ ಮನೋಭಾವದಿಂದ ಬಲಪಡಿಸಲ್ಪಡುವರು. ಆಗಾಗ, ಕ್ರಮವಾಗಿ ಪರಾಮರಿಕೆ ಮಾಡುವವನು ಒಂದು ಕೂಟಕ್ಕೆ ಹಾಜರಾಗುವಂತೆ ಯಾ ಸಾರುವ ಕೆಲಸದಲ್ಲಿ ಕೆಲವು ಚೈತನ್ಯದಾಯಕ ತಾಸುಗಳನ್ನು ಕಳೆಯುವಂತೆ, ಒಬ್ಬ ಸಹೋದರ ಯಾ ಸಹೋದರಿ ತಾತ್ಕಾಲಿಕವಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು.
ಸಹಜವಾಗಿ, ನೀವೇ ಅಸ್ವಸ್ಥರಾಗಿರುವದಾದರೆ, ನೀವು ಕೂಡ ಏನನ್ನಾದರೂ ಮಾಡಸಾಧ್ಯವಿದೆ. ನಿಮ್ಮ ದೌರ್ಬಲ್ಯದ ಕುರಿತಾದ ಆಶಾಹೀನತೆ ಮತ್ತು ಸಹಾಯಶೂನ್ಯತೆಯು ನಿಮ್ಮನ್ನು ಕಹಿಮಾಡಬಹುದು, ಆದರೆ ಕಹಿಮನೋಭಾವವು ಒಬ್ಬ ವ್ಯಕ್ತಿಯನ್ನು ಬೇರ್ಪಡಿಸುತ್ತದೆ ಮತ್ತು ಇತರರನ್ನು ಹಿಮ್ಮೆಟ್ಟಿಸುತ್ತದೆ. ಅದಕ್ಕೆ ಬದಲಾಗಿ ಗಣ್ಯತೆಯನ್ನು ಪ್ರದರ್ಶಿಸಲು ಮತ್ತು ಸಹಕರಿಸುವವರಾಗಿರಲು ನೀವು ಪ್ರಯತ್ನಿಸಬಹುದು. (1 ಥೆಸಲೊನೀಕ 5:18) ವೇದನೆಯಲ್ಲಿರುವ ಇತರರಿಗಾಗಿ ಪ್ರಾರ್ಥಿಸಿರಿ. (ಕೊಲೊಸ್ಸೆ 4:12) ಬೈಬಲಿನ ಅದ್ಭುತವಾದ ಸತ್ಯಗಳನ್ನು ಮನನ ಮಾಡಿರಿ, ಮತ್ತು ಅವುಗಳನ್ನು ಸಂದರ್ಶಕರೊಂದಿಗೆ ಚರ್ಚಿಸಿರಿ. (ಕೀರ್ತನೆ 71:17, 18) ದೇವರ ಜನರ ನಂಬಿಕೆಯನ್ನು ಬಲಪಡಿಸುವ ಪ್ರಗತಿಯೊಂದಿಗೆ ಸಮಯೋಚಿತವಾಗಿರಲು ತವಕದಿಂದಿರ್ರಿ. (ಕೀರ್ತನೆ 48:12-14) ಈ ಸಂತೋಷಕರವಾದ ಬೆಳವಣಿಗೆಗಳಿಗಾಗಿ ಯೆಹೋವನಿಗೆ ಕೃತಜ್ಞತೆ ಸಲ್ಲಿಸಿರಿ. ಅಂಥ ವಿಚಾರಗಳನ್ನು ಮನನ ಮಾಡುವಿಕೆಯು, ನಡು ಹಗಲಿನ ಸೂರ್ಯನಿಗಿಂತಲೂ ಅಸ್ತಮಿಸುತ್ತಿರುವ ಸೂರ್ಯನು ಇನ್ನೂ ಅತ್ಯಂತ ಪ್ರಶಾಂತವಾದ ಮತ್ತು ಬೆಚ್ಚಗೆನ ಬೆಳಕನ್ನು ಚೆಲ್ಲುವಂತೆ, ನಮ್ಮ ಜೀವಿತದ ಕೊನೆಯ ದಿನಗಳಿಗೆ ಅಥವಾ ವರ್ಷಗಳಿಗೆ ತಮ್ಮದೇ ಆದ ಸೌಂದರ್ಯವನ್ನು ನೀಡಬಲ್ಲವು.
ವಿಶೇಷವಾಗಿ ಪರೀಕ್ಷೆಯ ಸಮಯಗಳಲ್ಲಿ ನಮ್ಮ ಮನಸ್ಸನ್ನು ಶಿರಸ್ತ್ರಾಣದಂತೆ ಕಾಪಾಡುವ ನಿರೀಕ್ಷೆಯನ್ನು ಇಟ್ಟುಕೊಳ್ಳಲು ನಾವೆಲ್ಲರೂ ಹೋರಾಡಬೇಕು. (1 ಥೆಸಲೊನೀಕ 5:8) ಪುನರುತ್ಥಾನದ ನಿರೀಕ್ಷೆ ಮತ್ತು ಅದರ ಬಲವಾದ ಆಧಾರವನ್ನು ಧ್ಯಾನಿಸುವುದು ಒಳ್ಳೆಯದಾಗಿದೆ. ವೃದ್ಧಾಪ್ಯದಿಂದ ಬರುವ ಅಸ್ವಸ್ಥತೆಯಾಗಲಿ ಅಥವಾ ಬಲಹೀನತೆಯಾಗಲಿ ಇನ್ನಿಲ್ಲದಂಥ ದಿನಕ್ಕಾಗಿ ನಾವು ಆತುರದ ನಿರೀಕ್ಷಣೆಯಿಂದ ಮತ್ತು ಭರವಸೆಯಿಂದ ಮುನ್ನೋಡ ಸಾಧ್ಯವಿದೆ. ಆಗ ಪ್ರತಿಯೊಬ್ಬನೂ ಒಳ್ಳೇದನ್ನು ಅನುಭವಿಸುವನು. ಮೃತರು ಕೂಡ ಹಿಂದಿರುಗುವರು. (ಯೋಹಾನ 5:28, 29) ಈ “ಕಾಣದಿರುವಂಥವು” ಗಳನ್ನು ನಮ್ಮ ನಂಬಿಕೆಯ ಕಣ್ಣುಗಳಿಂದ ಮತ್ತು ನಮ್ಮ ಹೃದಯದಿಂದ ನಾವು ನೋಡುತ್ತೇವೆ. ಅವುಗಳ ನೋಟವನ್ನೆಂದಿಗೂ ಕಳಕೊಳ್ಳದಿರ್ರಿ.—ಯೆಶಾಯ 25:8; 33:24; ಪ್ರಕಟನೆ 21:3, 4.