ಕ್ರೈಸ್ತ ಕುಟುಂಬವು ಆತ್ಮಿಕ ವಿಷಯಗಳನ್ನು ಪ್ರಥಮವಾಗಿಡುತ್ತದೆ
“ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ; ಅಣತ್ಣಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ.”—1 ಪೇತ್ರ 3:8.
1. ನಮಗೆಲ್ಲರಿಗೆ ಯಾವ ಆಯ್ಕೆಯು ಇದೆ, ಮತ್ತು ನಮ್ಮ ಆಯ್ಕೆಯು ನಮ್ಮ ಭವಿಷ್ಯತ್ತನ್ನು ಹೇಗೆ ಪ್ರಭಾವಿಸಬಲ್ಲದು?
ಮೇಲಿನ ವಚನವು ಮಾನವ ಕುಲದ ಅತ್ಯಂತ ಹಳೆಯ ಸಂಘಟನೆಯಾದ—ಕುಟುಂಬಕ್ಕೆ ಎಷ್ಟು ಚೆನ್ನಾಗಿ ಅನ್ವಯಿಸುತ್ತದೆ! ಮತ್ತು ಈ ಸಂಬಂಧದಲ್ಲಿ ಹೆತ್ತವರು ನಾಯಕತ್ವವನ್ನು ಪ್ರದರ್ಶಿಸುವುದು ಅದೆಷ್ಟು ಮಹತ್ವದ್ದಾಗಿದೆ! ಅವರ ಸಕಾರಾತ್ಮಕ ಗುಣಗಳು ಮತ್ತು ಅವರ ನಕಾರಾತ್ಮಕ ಗುಣಗಳು ಸಾಮಾನ್ಯವಾಗಿ ಅವರ ಮಕ್ಕಳಲ್ಲಿ ತೋರಿಬರುವುವು. ಆದರೂ ಆಯ್ಕೆಮಾಡುವ ಸಂದರ್ಭವು ಕುಟುಂಬದ ಪ್ರತಿಯೊಬ್ಬ ಸದಸ್ಯನೊಂದಿಗಿದೆ. ಕ್ರೈಸ್ತರಾಗಿರುವ ನಾವು ಆತ್ಮಿಕ ಯಾ ಮಾಂಸಿಕ ವ್ಯಕ್ತಿಗಳಾಗಿರಲು ಆರಿಸಿಕೊಳ್ಳಬಲ್ಲೆವು. ದೇವರನ್ನು ಪ್ರಸನ್ನಗೊಳಿಸಲು ಅಥವಾ ಅವನನ್ನು ಅಪ್ರಸನ್ನಗೊಳಿಸಲು ನಾವು ಆರಿಸಿಕೊಳ್ಳ ಸಾಧ್ಯವಿದೆ. ಆ ಆಯ್ಕೆಯು, ನಿತ್ಯಜೀವ ಮತ್ತು ಶಾಂತಿಯ ಆಶೀರ್ವಾದವಾಗಿ—ಇಲ್ಲವೆ ಶಾಶ್ವತವಾದ ಮರಣದ ಶಾಪವಾಗಿ ಫಲಿಸಬಲ್ಲದು.—ಆದಿಕಾಂಡ 4:1, 2; ರೋಮಾಪುರ 8:5-8; ಗಲಾತ್ಯ 5:19-23.
2. (ಎ) ಕುಟುಂಬಕ್ಕೆ ಪೇತ್ರನು ತನ್ನ ಚಿಂತನೆಯನ್ನು ಹೇಗೆ ತೋರಿಸಿದನು? (ಬಿ) ಆತ್ಮಿಕತೆ ಎಂದರೇನು? (ಪಾದಟಿಪ್ಪಣಿ ನೋಡಿರಿ.)
2 ಅಪೊಸ್ತಲನ 1 ಪೇತ್ರ ಅಧ್ಯಾಯ 3, ವಚನ 8 ರ ಮಾತುಗಳು, ಪತ್ನಿಯರಿಗೆ ಮತ್ತು ಪತಿಗಳಿಗೆ ಆತನು ಕೊಟ್ಟಿದ್ದ ಕೆಲವು ಉತ್ತಮ ಹಿತೋಪದೇಶದ ಅನಂತರ ಕೂಡಲೆ ಹಿಂಬಾಲಿಸಿದವು. ಕ್ರಿಸ್ತೀಯ ಕುಟುಂಬಗಳ ಹಿತಚಿಂತನೆಯಲ್ಲಿ ಅಪೊಸ್ತಲ ಪೇತ್ರನು ನಿಜವಾಗಿ ಆಸಕ್ತನಿದ್ದನು. ಒಂದು ಐಕ್ಯತೆಯುಳ್ಳ, ಒಲವಿನ ಮನೆವಾರ್ತೆಗೆ ದೃಢವಾದ ಆತ್ಮಿಕತೆಯು ಕೀಲಿಕೈಯಾಗಿದೆ ಎಂದು ಅವನಿಗೆ ಗೊತ್ತಿತ್ತು.a ಹೀಗೆ, ಗಂಡಂದಿರಿಗೆ ಕೊಡಲ್ಪಟ್ಟ ಅವನ ಬುದ್ಧಿವಾದವು ಅಲಕ್ಷಿಸಲ್ಪಟ್ಟಲ್ಲಿ, ಫಲಿತಾಂಶವು, ಗಂಡನ ಮತ್ತು ಯೆಹೋವನ ನಡುವೆ ಒಂದು ಆತ್ಮಿಕ ತಡೆಗಟ್ಟೇ ಎಂಬದನ್ನು 7 ನೆಯ ವಚನದಲ್ಲಿ ಅವನು ಸೂಚಿಸಿದನು. ಗಂಡನು ಪತ್ನಿಯ ಅಗತ್ಯತೆಗಳನ್ನು ದುರ್ಲಕ್ಷಿಸಿದರೆ ಅಥವಾ ನಿಷ್ಕರುಣೆಯಿಂದ ಅದುಮಿಬಿಟ್ಟರೆ ಅವನ ಪ್ರಾರ್ಥನೆಗಳಿಗೆ ಅಡಿಯ್ಡಾಗ ಸಾಧ್ಯವಿದೆ.
ಕ್ರಿಸ್ತನು—ಆತ್ಮಿಕತೆಯ ಒಂದು ಪರಿಪೂರ್ಣ ಮಾದರಿ
3. ಗಂಡಂದಿರಿಗಾಗಿ ಕ್ರಿಸ್ತನ ಮಾದರಿಯನ್ನು ಪೌಲನು ಎತ್ತಿಹೇಳಿದ್ದು ಹೇಗೆ?
3 ಒಂದು ಕುಟುಂಬದ ಆತ್ಮಿಕತೆಯು ಒಳ್ಳೇ ಮಾದರಿಯ ಮೇಲೆ ಅವಲಂಬಿಸಿರುತ್ತದೆ. ಗಂಡನು ಆಚರಣೆಯ ಕ್ರೈಸ್ತನಾಗಿರುವಾಗ ಆತ್ಮಿಕ ಗುಣಗಳನ್ನು ತೋರಿಸುವುದರಲ್ಲಿ ಅವನು ಮುಂದಾಳಾಗುತ್ತಾನೆ. ನಂಬುವ ಗಂಡನು ಇಲ್ಲದಿದ್ದರೆ, ಮಕ್ಕಳ ತಾಯಿಯು ಸಾಮಾನ್ಯವಾಗಿ ಆ ಜವಾಬ್ದಾರಿಯನ್ನು ನಿರ್ವಹಿಸಲು ಪ್ರಯತ್ನಿಸುತ್ತಾಳೆ. ಎರಡೂ ವಿದ್ಯಮಾನಗಳಲ್ಲಿ, ಅನುಸರಿಸಲು ಒಂದು ಪರಿಪೂರ್ಣ ಮಾದರಿಯನ್ನು ಯೇಸು ಕ್ರಿಸ್ತನು ಒದಗಿಸುತ್ತಾನೆ. ಆತನ ನಡವಳಿಕೆ, ಆತನ ಮಾತುಗಳು, ಮತ್ತು ಆತನ ಯೋಚನೆ ಯಾವಾಗಲೂ ಭಕ್ತಿವರ್ಧಕವೂ ಚೈತನ್ಯಕರವೂ ಆಗಿದ್ದವು. ಪದೇ ಪದೇ ಅಪೊಸ್ತಲ ಪೌಲನು ವಾಚಕನನ್ನು ಕ್ರಿಸ್ತನ ಪ್ರೀತಿಯುಳ್ಳ ನಮೂನೆಗೆ ಮಾರ್ಗದರ್ಶಿಸುತ್ತಾನೆ. ದೃಷ್ಟಾಂತಕ್ಕೆ, ಅವನನ್ನುವುದು: “ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಕ್ರಿಸ್ತನೋ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ. . . . ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು.”—ಎಫೆಸ 5:23, 25, 29; ಮತ್ತಾಯ 11:28-30; ಕೊಲೊಸ್ಸೆ 3:19.
4. ಆತ್ಮಿಕತೆಯ ಯಾವ ಮಾದರಿಯನ್ನು ಯೇಸು ಇಟ್ಟನು?
4 ಯೇಸು ಆತ್ಮಿಕತೆಯ ಮತ್ತು ಪ್ರೀತಿ, ದಯೆ, ಮತ್ತು ಕರುಣೆಯಿಂದ ಪ್ರದರ್ಶಿಸಲ್ಪಟ್ಟ ತಲೆತನದ ಮಹತ್ತಾದ ಮಾದರಿಯಾಗಿದ್ದನು. ಆತನು ಸ್ವ-ತ್ಯಾಗಿಯಾಗಿದ್ದನು, ಭೋಗಾಸಕ್ತನಲ್ಲ. ಅವನು ಯಾವಾಗಲೂ ತನ್ನ ತಂದೆಯನ್ನು ಘನಪಡಿಸಿದನು ಮತ್ತು ಆತನ ತಲೆತನವನ್ನು ಗೌರವಿಸಿದನು. ತನ್ನ ತಂದೆಯ ಮಾರ್ಗದರ್ಶನವನ್ನು ಅವನು ತೆಗೆದುಕೊಂಡನು, ಆದುದರಿಂದ ಅವನು ಹೇಳಶಕ್ತನಾದದ್ದು: “ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ತಂದೆ ಹೇಳಿದ್ದನ್ನು ಕೇಳಿ ನ್ಯಾಯತೀರಿಸುತ್ತೇನೆ. ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುವದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.” “ಆತನೆಂದೂ ತನ್ನಷ್ಟಕ್ಕೆ ತಾನೇ ಏನೂ ಮಾಡದೆ ತಂದೆಯು ತನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾಡಿದನೆಂದೂ ನನ್ನ ವಿಷಯವಾಗಿ ನಿಮಗೆ ತಿಳಿಯುವದು.”—ಯೋಹಾನ 5:30; 8:28; 1 ಕೊರಿಂಥ 11:3.
5. ತನ್ನ ಹಿಂಬಾಲಕರಿಗಾಗಿ ಒದಗಿಸಿದರ್ದಲ್ಲಿ, ಯೇಸು ಗಂಡಂದಿರಿಗೆ ಯಾವ ಮಾದರಿಯನ್ನಿಟ್ಟನು?
5 ಗಂಡಂದಿರಿಗೆ ಇದು ಯಾವ ಅರ್ಥದಲ್ಲಿದೆ? ಅದರ ಅರ್ಥವು ಏನಂದರೆ ಅವರು, ಎಲ್ಲಾ ವಿಷಯಗಳಲ್ಲಿ ತನ್ನ ತಂದೆಗೆ ಯಾವಾಗಲೂ ತನ್ನನ್ನು ಅಧೀನ ಪಡಿಸಿದ ಕ್ರಿಸ್ತನನ್ನು ಅನುಸರಿಸುವುದು. ದೃಷ್ಟಾಂತಕ್ಕೆ, ಭೂಮಿಯ ಎಲ್ಲಾ ಜೀವ-ಜಾತಿಗಳಿಗೆ ಯೆಹೋವನು ಆಹಾರವನ್ನು ಒದಗಿಸಿದಂತೆಯೇ, ಯೇಸು ತನ್ನ ಹಿಂಬಾಲಕರಿಗೆ ಆಹಾರವನ್ನು ಒದಗಿಸಿದನು. ಅವರ ಮೂಲ ಭೌತಿಕ ಅಗತ್ಯತೆಗಳನ್ನು ಅವನು ಅಸಡ್ಡೆಮಾಡಿರಲಿಲ್ಲ. ಐದು ಸಾವಿರ ಪುರುಷರಿಗೆ ಮತ್ತು 4,000 ಮಂದಿಗೆ ಉಣಿಸಿದ ಅವನ ಮಹತ್ಕಾರ್ಯಗಳು ಆತನ ಪರಾಮರಿಕೆಯ ಮತ್ತು ಹೊಣೆಗಾರಿಕೆಯ ಭಾವದ ರುಜುವಾತಾಗಿದ್ದವು. (ಮಾರ್ಕ 6:35-44; 8:1-9) ಅಂತೆಯೇ ಇಂದು, ಜವಾಬ್ದಾರಿಕೆ ಹೊತ್ತ ಕುಟುಂಬ ತಲೆಗಳು ತಮ್ಮ ಮನೆವಾರ್ತೆಗಳ ದೈಹಿಕ ಆವಶ್ಯಕತೆಗಳಿಗೆ ಲಕ್ಷ್ಯಕೊಡುತ್ತಾರೆ. ಆದರೆ ಅವರ ಜವಾಬ್ದಾರಿಕೆಯು ಅಲ್ಲಿಗೆ ಕೊನೆಗೊಳ್ಳುತ್ತದೋ?—1 ತಿಮೊಥೆಯ 5:8.
6. (ಎ) ಕುಟುಂಬದ ಯಾವ ಪ್ರಾಮುಖ್ಯ ಆವಶ್ಯಕತೆಗಳನ್ನು ಪರಾಮರಿಕೆ ಮಾಡಲೇಬೇಕು? (ಬಿ) ಗಂಡಂದಿರು ಮತ್ತು ತಂದೆಗಳು ಹೇಗೆ ತಿಳಿವಳಿಕೆಯನ್ನು ತೋರಿಸಬಲ್ಲರು?
6 ಯೇಸು ನಿರ್ದೇಶಿಸಿದಂತೆ, ಕುಟುಂಬಗಳಿಗೆ ಹೆಚ್ಚು ಮಹತ್ವವುಳ್ಳ ಬೇರೆ ಅಗತ್ಯತೆಗಳೂ ಇವೆ. ಆತ್ಮಿಕತೆಯ ಮತ್ತು ಭಾವುಕತೆಯ ಆವಶ್ಯಕತೆಗಳು ಅವರಿಗಿವೆ. (ಧರ್ಮೋಪದೇಶಕಾಂಡ 8:3; ಮತ್ತಾಯ 4:4) ನಾವು ಕುಟುಂಬದಲ್ಲಿ ಮತ್ತು ಸಭೆಯಲ್ಲಿ ಎರಡರಲ್ಲಿಯೂ, ಇತರರೊಂದಿಗೆ ಪರಸ್ಪರ ಸೇರಿ ಕ್ರಿಯೆ ನಡಿಸುತ್ತೇವೆ. ಭಕ್ತಿವರ್ಧಕರಾಗಿರುವುದಕ್ಕೆ ನಮ್ಮನ್ನು ಪ್ರಚೋದಿಸಲು ಒಳ್ಳೆಯ ಮಾರ್ಗದರ್ಶನ ನಮಗೆ ಬೇಕು. ಈ ಸಂಬಂಧದಲ್ಲಿ ಗಂಡಂದಿರಿಗೆ ಮತ್ತು ತಂದೆಗಳಿಗೆ ಒಂದು ಪ್ರಧಾನ ಪಾತ್ರವನ್ನು ವಹಿಸಲಿಕ್ಕಿದೆ—ಅವರು ಹಿರಿಯರು ಯಾ ಸಹಾಯ ಸೇವಕರಾಗಿದ್ದರೆ ಅದಕ್ಕಿಂತಲೂ ಹೆಚ್ಚು ವಹಿಸಲಿಕ್ಕಿದೆ. ತಮ್ಮ ಮಕ್ಕಳಿಗೆ ಸಹಾಯ ಮಾಡುವಾಗ ಏಕ-ಹೆತ್ತವರಿಗೆ ಅದೇ ತೆರದ ಗುಣಗಳು ಆವಶ್ಯವಾಗಿವೆ. ಕುಟುಂಬ ಸದಸ್ಯರಿಂದ ಏನು ಹೇಳಲ್ಪಡುತ್ತದೆ ಎಂಬದನ್ನು ಮಾತ್ರವೇ ಅಲ್ಲ ಏನು ಹೇಳದೆ ಬಿಡಲ್ಪಟ್ಟಿದೆಯೋ . ಅದನ್ನೂ ಹೆತ್ತವರು ತಿಳುಕೊಳ್ಳಬೇಕು. ಅದಕ್ಕೆ ವಿವೇಚನೆ, ಸಮಯ ಮತ್ತು ತಾಳ್ಮೆಯು ಆವಶ್ಯಕ. ಗಂಡಂದಿರು ತಮ್ಮ ಹೆಂಡತಿಯರಿಗೆ ಪರಿಗಣನೆ ತೋರಿಸುವವರೂ ವಿವೇಕದಿಂದ ಒಗತನ ಮಾಡುವವರೂ ಅಗಿರಬೇಕೆಂದು ಪೇತ್ರನು ಹೇಳಶಕ್ತನಾದದ್ದು ಏಕೆಂಬದಕ್ಕೆ ಇದು ಒಂದು ಕಾರಣವಾಗಿದೆ.—1 ತಿಮೊಥೆಯ 3:4, 5, 12; 1 ಪೇತ್ರ 3:7.
ತಪ್ಪಿಸಬೇಕಾದ ಅಪಾಯಗಳು
7, 8. (ಎ) ಒಂದು ಕುಟುಂಬವು ಆತ್ಮಿಕ ಹಡಗನಷ್ಟವನ್ನು ವರ್ಜಿಸಬೇಕಾದರೆ ಏನು ಅಗತ್ಯವಿದೆ? (ಬಿ) ಕ್ರೈಸ್ತ ಮಾರ್ಗದಲ್ಲಿ ಒಂದು ಉತ್ತಮ ಪ್ರಾರಂಭವಲ್ಲದೆ ಬೇರೇನು ಅಗತ್ಯವಿದೆ? (ಮತ್ತಾಯ 24:13)
7 ಕುಟುಂಬದ ಆತ್ಮಿಕತೆಗೆ ಗಮನವು ಅಷ್ಟು ಪ್ರಾಮುಖ್ಯವೇಕೆ? ದೃಷ್ಟಾಂತಿಸಲಿಕ್ಕಾಗಿ ನಾವು ಕೇಳಬಹುದು, ಒಂದು ಹಡಗದ ನಾವಿಕನು ಗಾಧಗಳು ಅಡಕವಾಗಿರುವ ಅಪಾಯಕರ ನೀರುಗಳ ಮೂಲಕ ಹಡಗು ನಡಿಸುವಾಗ ತನ್ನ ಕಡಲುನಕಾಸೆಗಳಿಗೆ ನಿಕಟ ಗಮನವನ್ನು ಕೊಡುವುದೇಕೆ ಪ್ರಾಮುಖ್ಯವು? ಆಗಸ್ಟ್ 1992 ರಲ್ಲಿ ಕಡಲ ನಾವೆ ಕೀನ್ವ್ ಎಲಿಜಬೆತ್ 2 (QE2), ಎಲ್ಲಿ ಸಮುದ್ರಯಾನ ತಪ್ಪುಗಳು ಸರ್ವಸಾಮಾನ್ಯವೆಂದು ಹೇಳಲಾಗುತ್ತದೋ ಆ ಮೋಸಕರ ಮರಳದಿಣ್ಣೆಗಳ ಮತ್ತು ಬಂಡೆಗಳ ಜಲಪ್ರದೇಶದ ಮೂಲಕ ನಡಿಸಲ್ಪಟ್ಟಿತು. ಒಬ್ಬ ಸ್ಥಳೀಕ ನಿವಾಸಿಯು ಹೇಳಿದ್ದು: “ಆ ಕ್ಷೇತ್ರದಲ್ಲಿ ದುರಂತಗಳನ್ನು ಉಂಟುಮಾಡಿದ ತಪ್ಪುಗಳನ್ನು ಗೈದ ಕಾರಣ ಅನೇಕ ನಾವಿಕರು ತಮ್ಮ ಕೆಲಸಗಳನ್ನು ಕಳಕೊಂಡಿದ್ದಾರೆ.” ಜಲದಡಿಯ ಬಂಡೆಯ ಉಬ್ಬಿಗೆ QE2 ತಾಕಿತು. ಅದೊಂದು ದುಬಾರಿ ವೆಚ್ಚದ ಪ್ರಮಾದವಾಗಿ ಪರಿಣಮಿಸಿತು. ಹಡಗದ ಒಡಲಿನ ಮುಕ್ಕಾಲು ಭಾಗವು ನಷ್ಟಗೊಂಡಿತು, ಮತ್ತು ದುರಸ್ತಿಗಾಗಿ ಹಲವಾರು ವಾರಗಳ ತನಕ ಹಡಗವನ್ನು ಕೆಲಸದಿಂದ ಹೊರಗಿಡಬೇಕಾಯಿತು.
8 ತದ್ರೀತಿಯಲ್ಲಿ, ಕುಟುಂಬದ “ನಾವಿಕ” ನು ಕಡಲುನಕಾಸೆಯಾದ ದೇವರ ವಾಕ್ಯವನ್ನು ಜಾಗ್ರತೆಯಿಂದ ಪರಿಶೀಲಿಸದೆ ಇದ್ದಲ್ಲಿ, ಅವನ ಕುಟುಂಬವು ಸುಲಭವಾಗಿಯೇ ಆತ್ಮಿಕ ಹಾನಿಯನ್ನು ಅನುಭವಿಸಬಲ್ಲದು. ಒಬ್ಬ ಹಿರಿಯನಿಗೆ ಅಥವಾ ಶುಶ್ರೂಷಾ ಸೇವಕನಿಗೆ, ಅದು ಸಭೆಯೊಳಗಿನ ಸುಯೋಗಗಳ ನಷ್ಟದಲ್ಲಿ ಮತ್ತು ಕುಟುಂಬದ ಇತರ ಸದಸ್ಯರಿಗೆ ಪ್ರಾಯಶಃ ಗಂಭೀರ ಹಾನಿಯಲ್ಲಿ ಫಲಿಸಬಹುದು. ಆದುದರಿಂದ, ಹಿಂದಣ ಒಳ್ಳೇ ಅಧ್ಯಯನದ ಹವ್ಯಾಸಗಳಲ್ಲಿ ಮತ್ತು ಹುರುಪಿನಲ್ಲಿ ಮಾತ್ರವೇ ಭರವಸೆಯಿಡುತ್ತಾ, ಆತ್ಮಿಕ ಸಂತುಷ್ಟಿಯಿಂದ ಸೋಲಿಸಲ್ಪಡದಿರಲು ಪ್ರತಿಯೊಬ್ಬ ಕ್ರೈಸ್ತನು ಜಾಗ್ರತೆ ವಹಿಸಬೇಕು. ನಮ್ಮ ಕ್ರೈಸ್ತ ಮಾರ್ಗದಲ್ಲಿ, ಒಳ್ಳೆಯ ಪ್ರಾರಂಭವನ್ನು ಮಾಡುವುದು ಮಾತ್ರವೇ ಸಾಲದು; ಪ್ರಯಾಣವು ಯಶಸ್ವಿಯಾಗಿ ಕೊನೆಮುಟ್ಟಲೇಬೇಕು.—1 ಕೊರಿಂಥ 9:24-27; 1 ತಿಮೊಥೆಯ 1:19.
9. (ಎ) ವೈಯಕ್ತಿಕ ಅಭ್ಯಾಸವು ಎಷ್ಟು ಪ್ರಾಮುಖ್ಯವಾಗಿದೆ? (ಬಿ) ಯಾವ ಸಂಬಂಧಿತ ಪ್ರಶ್ನೆಗಳನ್ನು ನಾವು ನಮಗೆ ಕೇಳಿಕೊಳ್ಳಬಹುದು?
9 ಆತ್ಮಿಕ ಗಾಧಗಳನ್ನು, ಬಂಡೆಗಳನ್ನು, ಮತ್ತು ಮರಳ ದಿಣ್ಣೆಗಳನ್ನು ವರ್ಜಿಸುವುದಕ್ಕೋಸ್ಕರ, ದೇವರ ವಾಕ್ಯದ ಕ್ರಮದ ಅಭ್ಯಾಸದ ಮೂಲಕ ನಮ್ಮ “ಕಡಲುನಕಾಸೆ” ಗಳೊಂದಿಗೆ ನಾವು ಕಾಲೋಚಿತವಾಗಿರುವ ಅಗತ್ಯವಿದೆ. ನಮ್ಮನ್ನು ಸತ್ಯಕ್ಕೆ ತಂದ ಕೇವಲ ಮೂಲಭೂತ ಅಧ್ಯಯನದ ಮೇಲೆ ನಾವು ಆತುಕೊಳ್ಳಲಾರೆವು. ನಮ್ಮ ಆತ್ಮಿಕ ಬಲವು ಕ್ರಮದ ಮತ್ತು ಸಮತೆಯ ಅಭ್ಯಾಸ ಮತ್ತು ಸೇವೆಯ ಕಾರ್ಯಕ್ರಮದ ಮೇಲೆ ಅವಲಂಬಿಸಿದೆ. ದೃಷ್ಟಾಂತಕ್ಕೆ, ಇದೇ ಕಾವಲಿನಬುರುಜು ಸಂಚಿಕೆಯೊಂದಿಗೆ ನಾವು ಸಭೆಯ ಕಾವಲಿನಬುರುಜು ಅಭ್ಯಾಸಕ್ಕೆ ಹಾಜರಾಗುವಾಗ, ನಮ್ಮನ್ನು ಸ್ವತಃ ಕೇಳಿಕೊಳ್ಳಬಲ್ಲೆವು, ‘ನಾನು, ಅಥವಾ ಕುಟುಂಬವಾಗಿ ನಾವು, ನಿಜವಾಗಿ ಈ ಲೇಖನವನ್ನು ಅಭ್ಯಾಸ ಮಾಡಿದ್ದೇವೋ, ಶಾಸ್ತ್ರವಚನಗಳನ್ನು ತೆರೆದು ನೋಡಿ, ಅದರ ಅನ್ವಯಗಳನ್ನು ಮನನ ಮಾಡಿದ್ದೇವೋ? ಅಥವಾ, ಉತ್ತರಗಳಿಗೆ ಬರೇ ಅಡಿಗೆರೆಯನ್ನು ನಾವು ಹಾಕಿದ್ದೇವೋ? ಪ್ರಾಯಶಃ ನಾವು, ಕೂಟಕ್ಕೆ ಹಾಜರಾಗುವ ಮೊದಲು ಲೇಖನವನ್ನು ಓದಲು ಕೂಡ ಅಲಕ್ಷಿಸಿದ್ದೇವೋ?’ ಈ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರಗಳು ನಮ್ಮ ಅಧ್ಯಯನ ಹವ್ಯಾಸಗಳ ಕುರಿತು ಗಂಭೀರವಾಗಿ ಯೋಚಿಸಲು ನಮ್ಮನ್ನು ಪ್ರಚೋದಿಸಿ, ಪ್ರಗತಿ ಮಾಡುವ ಅಪೇಕ್ಷೆಯನ್ನು—ಅದು ಅವಶ್ಯಕವಾಗಿರುವುದಾದರೆ—ಮಿನುಗಿಸಬಹುದು.—ಇಬ್ರಿಯ 5:12-14.
10. ಆತ್ಮ-ಪರೀಕ್ಷಣೆಯು ಏಕೆ ಮಹತ್ವವುಳ್ಳದ್ದಾಗಿದೆ?
10 ಅಂಥ ಸ್ವ-ಪರಿಶೀಲನೆ ಯಾಕೆ ಪ್ರಾಮುಖ್ಯವಾಗಿದೆ? ಯಾಕಂದರೆ ನಾವು ಸೈತಾನನಾತ್ಮದಿಂದ ಪ್ರಭಾವಿಸಲ್ಪಟ್ಟ ಲೋಕದಲ್ಲಿ, ದೇವರಲ್ಲಿ ಮತ್ತು ಆತನ ವಾಗ್ದಾನಗಳಲ್ಲಿ ನಮ್ಮ ನಂಬಿಕೆಯನ್ನು ಅನೇಕ ಕುಶಾಗ್ರ ವಿಧಗಳಲ್ಲಿ ಉರುಳಿಸಲು ಪ್ರಯತ್ನಿಸುವ ಒಂದು ಲೋಕದಲ್ಲಿ ಜೀವಿಸುತ್ತೇವೆ. ಆತ್ಮಿಕ ಅಗತ್ಯತೆಗಳ ಚಿಂತನೆಗಾಗಿ ಯಾವ ಸಮಯವೂ ನಮಗಿರದಷ್ಟು ನಮ್ಮನ್ನು ಕಾರ್ಯಮಗ್ನರಾಗಿಡಲು ಬಯಸುವ ಲೋಕವು ಅದಾಗಿದೆ. ಆದುದರಿಂದ ನಾವು ನಮ್ಮನ್ನು ಕೇಳಿಕೊಳ್ಳಬಹುದು, ‘ನನ್ನ ಕುಟುಂಬವು ಆತ್ಮಿಕತೆಯಲ್ಲಿ ದೃಢವಾಗಿದೆಯೇ? ಹೆತ್ತವನಾಗಿರುವ ನಾನು, ನಾನಿರಬೇಕಾದಷ್ಟು ದೃಢವಾಗಿ ಇದ್ದೇನೋ? ಕುಟುಂಬವಾಗಿ ನಾವು ನೀತಿಯಲ್ಲಿ ಮತ್ತು ನಿಷ್ಠೆಯಲ್ಲಿ ಆಧಾರಿತವಾದ ನಿರ್ಣಯಗಳನ್ನು ಮಾಡುವಂತೆ ನೆರವಾಗುವ, ನಮ್ಮ ಮನಸ್ಸನ್ನು ಪ್ರೇರೇಪಿಸುವಂಥ ಆ ಆತ್ಮಿಕ ಶಕ್ತಿಯನ್ನು ಬೆಳೆಸುತ್ತಿದ್ದೇವೋ?’—ಎಫೆಸ 4:23, 24.
11. ಕ್ರೈಸ್ತ ಕೂಟಗಳು ಆತ್ಮಿಕವಾಗಿ ಲಾಭದಾಯಕವಾಗಿವೆಯೇಕೆ? ಒಂದು ದೃಷ್ಟಾಂತ ಕೊಡಿರಿ.
11 ನಾವು ಹಾಜರಾಗುವ ಪ್ರತಿಯೊಂದು ಕೂಟದಿಂದ ನಮ್ಮ ಆತ್ಮಿಕತೆಯು ಬಲಪಡಿಸಲ್ಪಡಬೇಕು. ರಾಜ್ಯ ಸಭಾಗೃಹದಲ್ಲಿ ಅಥವಾ ಸಭಾ ಪುಸ್ತಕ ಅಭ್ಯಾಸದಲ್ಲಿ ಆ ಅಮೂಲ್ಯ ತಾಸುಗಳು, ಸೈತಾನನ ದ್ವೇಷಭರಿತ ಲೋಕದಲ್ಲಿ ಪಾರಾಗಲು ಪ್ರಯತ್ನಿಸುತ್ತಾ ನಾವು ಕಳೆಯಬೇಕಾದ ದೀರ್ಘ ತಾಸುಗಳ ಅನಂತರ, ನಮ್ಮನ್ನು ಚೈತನ್ಯಗೊಳಿಸಲು ನೆರವಾಗುತ್ತವೆ. ಉದಾಹರಣೆಗೆ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕವನ್ನು ಅಭ್ಯಾಸಿಸುವುದು ಅದೆಷ್ಟು ಚೈತ್ಯನ್ಯದಾಯಕವಾಗಿತ್ತು! ಯೇಸು, ಆತನ ಜೀವನ, ಮತ್ತು ಆತನ ಶುಶ್ರೂಷೆಯ ಉತ್ತಮ ತಿಳಿವಳಿಕೆಯನ್ನು ಗಳಿಸಲು ಇದು ನಮಗೆ ಸಹಾಯ ಮಾಡಿರುತ್ತದೆ. ಉದಾಹರಿಸಲ್ಪಟ್ಟ ವಚನಗಳನ್ನು ನಾವು ಜಾಗ್ರತೆಯಿಂದ ಓದಿದೆವು, ವ್ಯಕ್ತಿಪರ ಸಂಶೋಧನೆಯನ್ನು ಮಾಡಿದೆವು, ಮತ್ತು ಹೀಗೆ ಯೇಸು ಇಟ್ಟ ಮಾದರಿಯಿಂದ ಹೆಚ್ಚನ್ನು ಕಲಿತೆವು.—ಇಬ್ರಿಯ 12:1-3; 1 ಪೇತ್ರ 2:21.
12. ಕ್ಷೇತ್ರ ಶುಶ್ರೂಷೆಯು ನಮ್ಮ ಆತ್ಮಿಕತೆಯನ್ನು ಹೇಗೆ ಪರೀಕ್ಷಿಸುತ್ತದೆ?
12 ನಮ್ಮ ಆತ್ಮಿಕತೆಯ ಒಂದು ಉತ್ತಮ ಪರೀಕ್ಷೆಯು ಕ್ರೈಸ್ತ ಶುಶ್ರೂಷೆಯಾಗಿದೆ. ನಮ್ಮ ವಿಧಿವತ್ತಾದ ಮತ್ತು ಅವಿಧಿಯಾದ ಸಾಕ್ಷಿಕಾರ್ಯದಲ್ಲಿ ಬಿಡದೆ ಮುಂದುವರಿಯುವುದಕ್ಕಾಗಿ, ಕೆಲವೊಮ್ಮೆ ಸಾರ್ವಜನಿಕರ ಅನಾದರ ಯಾ ವಿರೋಧದ ಎದುರಲ್ಲೂ, ಯೋಗ್ಯ ಪ್ರೇರಣೆ, ದೇವರೆಡೆಗೆ ಪ್ರೀತಿ ಮತ್ತು ನೆರೆಯವನೆಡೆಗೆ ಪ್ರೀತಿಯು ನಮಗೆ ಅಗತ್ಯವಾಗಿದೆ. ತಿರಸ್ಕರಿಸಲ್ಪಡುವುದರಲ್ಲಿ ಯಾರೂ ಆನಂದಿಸುವುದಿಲ್ಲ ನಿಶ್ಚಯ, ಮತ್ತು ಅದು ನಮ್ಮ ಶುಶ್ರೂಷೆಯಲ್ಲಿ ಸಂಭವಿಸಬಲ್ಲದು. ಆದರೆ, ಸುವಾರ್ತೆಯು ತಿರಸ್ಕರಿಸಲ್ಪಡುತ್ತಿದೆ, ವ್ಯಕ್ತಿಗಳಾದ ನಾವಲ್ಲ, ಎಂಬದನ್ನು ನಾವು ನೆನಪಿನಲ್ಲಡಬೇಕು. ಯೇಸುವಂದದ್ದು: “ಲೋಕವು ನಿಮ್ಮನ್ನು ದ್ವೇಷಮಾಡುವದಾದರೆ ಅದು ಮೊದಲು ನನ್ನನ್ನು ದ್ವೇಷಮಾಡಿತೆಂದು ತಿಳುಕೊಳ್ಳಿರಿ. ನೀವು ಲೋಕದ ಕಡೆಯವರಾಗಿರುತ್ತಿದ್ದರೆ ಲೋಕವು ನಿಮ್ಮ ಮೇಲೆ ತನ್ನವರೆಂದು ಮಮತೆ ಇಡುತ್ತಿತ್ತು; ಆದರೆ ನೀವು ಲೋಕದ ಕಡೆಯವರಲ್ಲದೆ ಇರುವದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ. . . . ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದವರಾದದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿಮಿತ್ತ ನಿಮಗೆ ಮಾಡುವರು.”—ಯೋಹಾನ 15:18-21.
ನುಡಿಗಿಂತ ನಡೆಯೇ ಮೇಲು
13. ಒಂದು ಕುಟುಂಬದ ಆತ್ಮಿಕತೆಯನ್ನು ಒಬ್ಬ ವ್ಯಕ್ತಿಯು ಹೇಗೆ ಕೆಡಿಸಸಾಧ್ಯವಿದೆ?
13 ಒಂದು ಕುಟುಂಬದಲ್ಲಿ ಒಬ್ಬನನ್ನು ಬಿಟ್ಟು ಎಲ್ಲರೂ ನೀಟುತನ ಮತ್ತು ಚೊಕ್ಕತನವನ್ನು ಗೌರವಿಸಿದರೆ ಏನು ಸಂಭವಿಸುತ್ತದೆ? ಮಳೆಯ ದಿನದಲ್ಲಿ, ಮರೆಯುವ ಸ್ವಭಾವದವನನ್ನು ಬಿಟ್ಟು ಬೇರೆ ಎಲ್ಲರೂ ಮನೆಯೊಳಗೆ ಕೆಸರನ್ನು ತರದಂತೆ ಜಾಗ್ರತೆ ವಹಿಸುತ್ತಾರೆ. ಎಲ್ಲೆಲ್ಲೂ ತೋರಿಬರುವ ಕೆಸರಿನ ಹೆಜ್ಜೆಗುರುತುಗಳು, ಬೇರೆಯವರಿಗೆ ಹೆಚ್ಚು ಕೆಲಸವನ್ನು ಮಾಡುತ್ತಾ, ಆ ವ್ಯಕ್ತಿಯ ದುರ್ಲಕ್ಷ್ಯಕ್ಕೆ ಪುರಾವೆಯನ್ನು ಕೊಡುತ್ತವೆ. ಅದೇ ವಿಷಯವು ಆತ್ಮಿಕತೆಗೆ ಅನ್ವಯಿಸುತ್ತದೆ. ಕೇವಲ ಒಬ್ಬ ಸ್ವಾರ್ಥಪರ ಅಥವಾ ದುರ್ಲಕ್ಷ್ಯದ ವ್ಯಕ್ತಿಯು ಕುಟುಂಬದ ಸತ್ಕೀರ್ತಿಯನ್ನು ಕೆಡಿಸಬಲ್ಲನು. ಕೇವಲ ಹೆತ್ತವರು ಮಾತ್ರವೇ ಅಲ್ಲ, ಮನೆವಾರ್ತೆಯ ಎಲ್ಲರೂ, ಕ್ರಿಸ್ತನ ಮಾನಸಿಕ ಪ್ರವೃತ್ತಿಯನ್ನು ಪ್ರತಿಬಿಂಬಿಸಲು ಪ್ರಯಾಸಪಡಬೇಕು. ನಿತ್ಯಜೀವದ ನೋಟದೊಂದಿಗೆ ಎಲ್ಲರೂ ಒಡಗೂಡಿ ಕಾರ್ಯನಡಿಸುವಾಗ ಅದೆಷ್ಟು ಚೇತನದಾಯಕವಾಗಿರುತ್ತದೆ! ಆ ಕುಟುಂಬದ ಮನೋ-ಅಳವಡಿಸುವಿಕೆಯು ಆತ್ಮಿಕತೆಯದ್ದಾಗಿರುವುದು (ಆದರೆ ಸ್ವನೀತಿಯಲ್ಲ) ಆ ಕುಟುಂಬದ ಸಳುವಳಿಯಲ್ಲಿರುವ ವಿಶೇಷ ಗುಣವಾಗಿ ಪರಿಣಮಿಸುವುದು. ಅಂಥ ಒಂದು ಮನೆವಾರ್ತೆಯಲ್ಲಿ ಆತ್ಮಿಕ ದುರ್ಲಕ್ಷ್ಯದ ಗುರುತುಗಳಿರುವುದು ವಿರಳ.—ಪ್ರಸಂಗಿ 7:16; 1 ಪೇತ್ರ 4:1, 2.
14. ಯಾವ ಭೌತಿಕ ಶೋಧನೆಗಳನ್ನು ಸೈತಾನನು ನಮ್ಮ ಹಾದಿಯಲ್ಲಿ ಹಾಕುತ್ತಾನೆ?
14 ದೈನಂದಿನ ನಮ್ಮ ಜೀವ ಪೋಷಣೆಗಾಗಿ ಒದಗಿಸಲೇಬೇಕಾದ ಮೂಲಭೂತ ಅಗತ್ಯತೆಗಳು ನಮಗೆಲ್ಲರಿಗೂ ಇವೆ. (ಮತ್ತಾಯ 6:11, 30-32) ಆದರೆ ಆಗಿಂದಾಗ್ಗೆ ನಮ್ಮ ಆವಶ್ಯಕತೆಗಳು ನಮ್ಮ ಅಪೇಕ್ಷೆಗಳಿಂದ ಮಬ್ಬುಗೊಳಿಸಲ್ಪಡುತ್ತವೆ. ದೃಷ್ಟಾಂತಕ್ಕೆ, ಸೈತಾನನ ವ್ಯವಸ್ಥೆಯ ನಮಗೆ ಪ್ರತಿಯೊಂದು ವಿಧದ ಸಲಕರಣೆ ಮತ್ತು ಸಾಧನವನ್ನು ನೀಡುತ್ತದೆ. ಪ್ರತಿಯೊಂದರಲ್ಲಿ ನವನಾವೀನ್ಯತೆಯನ್ನು ಹೊಂದಲು ನಾವು ಯಾವಾಗಲೂ ತಗಾದೆಮಾಡಿದರೆ, ನಾವೆಂದೂ ತೃಪ್ತರಾಗೆವು, ಯಾಕಂದರೆ ಹೊಚ್ಚಹೊಸತು ಬೇಗನೆ ಹಳೆಯದಾಗುತ್ತದೆ, ಹೊಸ ಕಲಾಕೌಶಲ್ಯದ ಉತ್ಪಾದನೆಯು ಹೊರಬರುತ್ತದೆ. ವ್ಯಾಪಾರೀ ಜಗತ್ತಿನ ತಿರುಗು-ಚಕ್ರವು ಎಂದೂ ನಿಲ್ಲುವುದಿಲ್ಲ. ಸದಾ ಹೆಚ್ಚುತ್ತಿರುವ ಅಪೇಕ್ಷೆಗಳನ್ನು ತೃಪ್ತಿಗೊಳಿಸಲಿಕ್ಕಾಗಿ ಹಣವನ್ನು ಹೆಚ್ಚೆಚ್ಚಾಗಿ ಹುಡುಕುವುದರೊಳಗೆ ಅದು ನಮ್ಮನ್ನು ಸೆಳೆಯುತ್ತದೆ. ಇದು ನಮ್ಮನ್ನು “ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆ” ಗಳಿಗೆ ಅಥವಾ “ಅವಿವೇಕದ ಮತ್ತು ಅಪಾಯಕರ ಹೆಬ್ಬಯಕೆ” ಗಳಿಗೆ ನಡಿಸುತ್ತದೆ. ಅದು ಆತ್ಮಿಕ ಚಟುವಟಿಕೆಗಳಿಗಾಗಿ ಕಡಿಮೆ, ಕಡಿಮೆ ಸಮಯವಿರುವ ಒಂದು ಸಮತೆಯಿಲ್ಲದ ಜೀವಿತದಲ್ಲಿ ಫಲಿಸಬಲ್ಲದು.—1 ತಿಮೊಥೆಯ 6:9, 10; ದ ಜೆರೂಸಲೇಮ್ ಬೈಬಲ್.
15. ಯಾವ ವಿಧದಲ್ಲಿ ಕುಟುಂಬ ತಲೆಯ ಮಾದರಿಯು ಪ್ರಾಮುಖ್ಯವಾಗಿದೆ?
15 ಇಲ್ಲಿ ಪುನಃ ಕ್ರೈಸ್ತ ಮನೆವಾರ್ತೆಯ ತಲೆಯಿಂದ ಇಡಲ್ಪಟ್ಟ ಮಾದರಿಯು ಅತಿ ಪ್ರಾಮುಖ್ಯವಾಗಿದೆ. ಐಹಿಕ ಮತ್ತು ಆತ್ಮಿಕ ಜವಾಬ್ದಾರಿಗಳ ಕಡೆಗೆ ಅವನ ಸಮತೆಯ ಮನೋಭಾವವು, ಇತರ ಕುಟುಂಬ ಸದಸ್ಯರನ್ನು ಪ್ರೇರೇಪಿಸಬೇಕು. ತಂದೆಯು ಅಥವಾ ಗಂಡನು ಅತ್ಯುತ್ತಮವಾದ ಮೌಖಿಕ ಉಪದೇಶವನ್ನು ಕೊಡುತ್ತಾನಾದರೂ ಬಳಿಕ, ತನ್ನ ಸ್ವಂತ ಮಾತುಗಳಿಗನುಸಾರ ಜೀವಿಸಲು ತಪ್ಪುವುದಾದರೆ, ಅದು ಖಂಡಿತವಾಗಿಯೂ ಹಾನಿಕಾರಕವು. ನಾನು ಹೇಳಿದಂತೆ ಮಾಡು ಆದರೆ, ಮಾಡಿದಂತೆ ಮಾಡಬೇಡ ಎಂಬ ಜೀವಿತಾಭ್ಯಾಸವನ್ನು ಮಕ್ಕಳು ಬೇಗನೇ ಕಂಡುಹಿಡಿಯಬಲ್ಲರು. ಅಂತೆಯೇ, ಇತರರನ್ನು ಮನೆ ಮನೆಯ ಸೇವೆಯಲ್ಲಿ ಪ್ರೋತ್ಸಾಹಿಸುವ ಒಬ್ಬ ಹಿರಿಯನು ಅಥವಾ ಶುಶ್ರೂಷಾ ಸೇವಕನು, ತನ್ನ ಕುಟುಂಬದೊಂದಿಗೆ ಮಾತ್ರ ಆ ಚಟುವಟಿಕೆಯಲ್ಲಿ ಭಾಗಿಯಾಗುವದು ವಿರಳವಾದರೆ, ಕುಟುಂಬದಲ್ಲಿ ಮತ್ತು ಸಭೆಯಲ್ಲಿ ಎರಡರಲ್ಲೂ ಬೇಗನೆ ವಿಶ್ವಾಸ ಯೋಗ್ಯತೆಯನ್ನು ಕಳಕೊಳ್ಳುತ್ತಾನೆ.—1 ಕೊರಿಂಥ 15:58; ಹೋಲಿಸಿರಿ ಮತ್ತಾಯ 23:3.
16. ಯಾವ ಪ್ರಶ್ನೆಗಳನ್ನು ನಾವು ನಮಗೆ ಕೇಳಿಕೊಳ್ಳಬಹುದು?
16 ಆದಕಾರಣ, ನಾವು ನಮ್ಮ ಜೀವಿತಗಳನ್ನು ಲಾಭದಾಯಕವಾಗಿ ಪರೀಕ್ಷಿಸ ಸಾಧ್ಯವಿದೆ. ಐಹಿಕ ಸಾಫಲ್ಯವನ್ನು ಗಳಿಸುವದರಲ್ಲಿ ತಲ್ಲೀನರಾಗಿರುತ್ತಾ, ಆ ಮೂಲಕ ಆತ್ಮಿಕ ಪ್ರಗತಿಯನ್ನು ಮಾಡುವುದನ್ನು ನಾವು ಅಲಕ್ಷಿಸುತ್ತೇವೋ? ಐಹಿಕ ಬೆನ್ನಟ್ಟುವಿಕೆಗಳಲ್ಲಿ ನಾವು ಪ್ರಗತಿ ಮಾಡುತ್ತಾ ಇದ್ದು ಸಭೆಯಲ್ಲಿ ಇಳಿಗತಿಯನ್ನು ಪಡೆಯುತ್ತಿದ್ದೇವೋ? ಪೌಲನ ಬುದ್ಧಿವಾದವನ್ನು ನೆನಪಿಸಿರಿ: “ಸಭಾಧ್ಯಕ್ಷನ ಉದ್ಯೋಗವನ್ನು ಪಡಕೊಳ್ಳಬೇಕೆಂದಿರುವವನು ಒಳ್ಳೇ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ.” (1 ತಿಮೊಥೆಯ 3:1) ಕೆಲಸದಲ್ಲಿ ಬಡತಿಗಿಂತ ಸಭೆಯಲ್ಲಿ ಒಂದು ಜವಾಬ್ದಾರಿಕೆಯ ಭಾವವು ನಮ್ಮ ಆತ್ಮಿಕತೆಯ ಹೆಚ್ಚಿನ ಸೂಚಕವಾಗಿದೆ. ನಾವು ಯೆಹೋವನಿಗಲ್ಲ, ನಮ್ಮ ಯಜಮಾನರಿಗೆ ಸಮರ್ಪಿತರೋ ಎಂಬಂತೆ ಅವರು ನಮ್ಮನ್ನು ಹತೋಟಿಯಲ್ಲಿಡದಂತೆ ಒಂದು ಜಾಗ್ರತೆಯ ಸಮತೂಕವನ್ನು ಇಡಲೇಬೇಕು.—ಮತ್ತಾಯ 6:24.
ಅರ್ಥಭರಿತ ಸಂಸರ್ಗವು ಆತ್ಮಿಕತೆಯನ್ನು ಪ್ರವರ್ಧಿಸುತ್ತದೆ
17. ಒಂದು ಕುಟುಂಬದಲ್ಲಿ ನಿಜ ಪ್ರೀತಿಗೆ ಯಾವುದು ನೆರವಾಗುತ್ತದೆ?
17 ಇಂದು ಲಕ್ಷಾಂತರ ಮನೆಗಳು ಕಾರ್ಯತಃ ವಸತಿ ಗೃಹಗಳಾಗಿ ಪರಿಣಮಿಸಿರುತ್ತವೆ. ಹೇಗೆ? ಕುಟುಂಬ ಸದಸ್ಯರು ಕೇವಲ ಉಣ್ಣಲು ಮತ್ತು ನಿದ್ರಿಸಲು ಮನೆಗೆ ಬರುತ್ತಾರೆ, ತರ್ವೆಯಾಗಿ ಹೊರಟು ಹೋಗುತ್ತಾರೆ. ಅವರು ಮೇಜಿನ ಸುತ್ತಲೂ ಕೂತು ಒಂದು ಊಟದಲ್ಲಿ ಒಟ್ಟುಗೂಡಿ ಆನಂದಿಸುವದು ಅತಿ ವಿರಳ. ಕುಟುಂಬದಲ್ಲಿ ಆಪತ್ತೆಯ ಬೆಚ್ಚಗೆನ ಭಾವವು ಕಾಣೆಯಾಗಿದೆ. ಫಲಿತಾಂಶ? ಸಂಸರ್ಗದಲ್ಲಿ ಕೊರತೆ, ಯಾವ ಅರ್ಥವತ್ತಾದ ಮಾತುಕತೆಯೂ ಇಲ್ಲ. ಮತ್ತು ಅದು ಇತರ ಸದಸ್ಯರಲ್ಲಿ ಆಸಕ್ತಿಯ ಕೊರತೆಯಲ್ಲಿ, ಪ್ರಾಯಶಃ ನಿಜ ಚಿಂತನೆಯ ಕೊರತೆಯಲ್ಲಿ ಫಲಿಸಬಲ್ಲದು. ನಾವು ಒಬ್ಬರನ್ನೊಬ್ಬರು ಪ್ರೀತಿಸುವಾಗ, ಸಂಭಾಷಿಸಲು ಮತ್ತು ಆಲಿಸಲು ಸಮಯ ಮಾಡುತ್ತೇವೆ. ನಾವು ಪರಸ್ಪರ ಪ್ರೋತ್ಸಾಹಿಸುತ್ತೇವೆ, ಸಹಾಯ ಮಾಡುತ್ತೇವೆ. ಆತ್ಮಿಕತೆಯ ಈ ವಿಭಾಗವು ಪತಿ-ಪತ್ನಿಯರ ಮಧ್ಯೆ ಮತ್ತು ಹೆತ್ತವರ ಮತ್ತು ಮಕ್ಕಳ ಮಧ್ಯೆ ಅರ್ಥವತ್ತಾದ ಸಂಸರ್ಗವನ್ನು ಒಳಗೊಂಡಿರುತ್ತದೆ.b ನಾವು ನಮ್ಮ ಸಂತೋಷಗಳಲ್ಲಿ, ಅನುಭವಗಳಲ್ಲಿ, ಮತ್ತು ಸಮಸ್ಯೆಗಳಲ್ಲಿ ಪಾಲಿಗರಾಗುವುದಕ್ಕೋಸ್ಕರ ನಾವು ಒಬ್ಬರನ್ನೊಬ್ಬರನ್ನು ಹೊರಕ್ಕೆ ಸೆಳೆಯುವಾಗ, ಸಮಯ ಮತ್ತು ಜಾಣ್ಮೆಯ ಅಗತ್ಯವುಂಟಾಗುತ್ತದೆ.—1 ಕೊರಿಂಥ 13:4-8; ಯಾಕೋಬ 1:19.
18. (ಎ) ಸಂಸರ್ಗಕ್ಕೆ ಆಗಿಂದಾಗ್ಗೆ ಯಾವುದು ಒಂದು ದೊಡ್ಡ ತಡೆಗಟ್ಟಾಗಿದೆ? (ಬಿ) ಅರ್ಥಭರಿತವಾದ ಸಂಬಂಧಗಳು ಯಾವುದರ ಮೇಲೆ ಕಟ್ಟಲ್ಪಡುತ್ತವೆ?
18 ಒಳ್ಳೇ ಸಂಸರ್ಗಕ್ಕಾಗಿ ಸಮಯ ಮತ್ತು ಪ್ರಯತ್ನವು ಆವಶ್ಯಕ. ಒಬ್ಬರೊಂದಿಗೊಬ್ಬರು ಮಾತಾಡಲು ಮತ್ತು ಆಲಿಸಲು ಸಮಯವನ್ನು ಬದಿಗಿಡುವದೆಂದು ಅದರ ಅರ್ಥವಾಗಿದೆ. ಇದಕ್ಕಿರುವ ಒಂದು ದೊಡ್ಡ ತಡೆಯು ಅನೇಕ ಮನೆಗಳಲ್ಲಿ ಗೌರವದ ಸ್ಥಾನವನ್ನು ಪಡೆದಿರುವ ಆ ಕಾಲ-ಹರಣ ಸಾಧನವಾದ—ಟೀವೀ. ಇದು ಒಂದು ಪಂಥಾಹ್ವಾನವನ್ನು ನೀಡುತ್ತದೆ—ಟೀವೀ ನಿಮ್ಮನ್ನು ಅಂಕೆಯಲಿಡ್ಲುತ್ತದೋ, ಅಥವಾ ನೀವು ಅದನ್ನು ಅಂಕೆಯಲಿಡ್ಲುತ್ತೀರೋ? ಟೀವೀಯನ್ನು ಹತೋಟಿಯಲ್ಲಿಡಲು ದೃಢ ನಿರ್ಧಾರ ಆವಶ್ಯಕ—ಅದನ್ನು ಆರಿಸಿಬಿಡುವ ಸಂಕಲ್ಪಶಕ್ತಿ ಸಮೇತ. ಆದರೆ ಹಾಗೆ ಮಾಡುವುದು ನಮ್ಮನ್ನು ಕುಟುಂಬ ಸದಸ್ಯರೋಪಾದಿ ಮತ್ತು ಆತ್ಮಿಕ ಸಹೋದರ ಮತ್ತು ಸಹೋದರಿಯರೋಪಾದಿ ಒಬ್ಬರೊಂದಿಗೊಬ್ಬರು ಸರ್ವಮೇಳನ ಮಾಡಲು ತಿರುಗುವಂತೆ ದಾರಿಯನ್ನು ತೆರೆಯುವುದು. ಅರ್ಥಭರಿತ ಸಂಬಂಧಗಳಿಗೆ, ಒಬ್ಬರನ್ನೊಬ್ಬರು ತಿಳುಕೊಳ್ಳುವ, ನಮ್ಮ ಅಗತ್ಯತೆಗಳನ್ನು ಮತ್ತು ಸಂತೋಷಗಳನ್ನು ಮತ್ತು ನಮಗಾಗಿ ಮಾಡಲ್ಪಟ್ಟ ಎಲ್ಲಾ ದಯೆಯ ವಿಷಯಗಳನ್ನು ನಾವೆಷ್ಟು ಗಣ್ಯಮಾಡುತ್ತೇವೆಂದು ಒಬ್ಬರಿಗೊಬ್ಬರು ಹೇಳಿಕೊಳ್ಳುವ, ಒಳ್ಳೇ ಸಂಸರ್ಗವನ್ನು ಆವಶ್ಯಪಡಿಸುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಅರ್ಥವತ್ತಾದ ಸಂಭಾಷಣೆಯು ನಾವು ಇತರರಿಗಾಗಿ ಕೃತಜ್ಞರು ಮತ್ತು ಅವರನ್ನು ಮೂಲ್ಯರಾಗಿ ಎಣಿಸುತ್ತೇವೆಂಬದನ್ನು ತೋರಿಸುತ್ತದೆ.—ಜ್ಞಾನೋಕ್ತಿ 31:28, 29.
19, 20. ಕುಟುಂಬದ ಎಲ್ಲರ ಕುರಿತು ನಾವು ಚಿಂತಿಸುವುದಾದರೆ, ನಾವೇನು ಮಾಡುವೆವು?
19 ಆದುದರಿಂದ, ಕುಟುಂಬ ದೃಶ್ಯದಲ್ಲಿ ನಾವು ಒಬ್ಬರಿಗೊಬ್ಬರು ಚಿಂತನೆಯನ್ನು ತೋರಿಸುವುದಾದರೆ—ಮತ್ತು ಅದರಲ್ಲಿ ನಂಬದ ಕುಟುಂಬ ಸದಸ್ಯರ ಚಿಂತನೆಯೂ ಸೇರಿದೆ—ನಾವು ನಮ್ಮ ಆತ್ಮಿಕತೆಯನ್ನು ಕಟ್ಟುವ ಮತ್ತು ಕಾಪಾಡುವ ಕಡೆಗೆ ಹೆಚ್ಚನ್ನು ಮಾಡುವವರಾಗುವೆವು. ಕುಟುಂಬ ದೃಶ್ಯದಲ್ಲಿ ನಾವು ಪೇತ್ರನ ಬುದ್ಧಿವಾದವನ್ನು ಪಾಲಿಸುವವರಾಗುವೆವು: “ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ; ಅಣತ್ಣಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ. ಕರುಣೆಯೂ ದೀನಭಾವವೂ ಉಳ್ಳವರಾಗಿರಿ. ಅಪಕಾರಕ್ಕೆ ಅಪಕಾರವನ್ನು ನಿಂದೆಗೆ ನಿಂದೆಯನ್ನು ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದನಲ್ಲಾ; ಹೀಗೆ ಮಾಡುವದಾದರೆ ನೀವು ಆಶೀರ್ವಾದಗಳನ್ನು ಬಾಧ್ಯವಾಗಿ ಹೊಂದುವಿರಿ.”—1 ಪೇತ್ರ 3:8, 9.
20 ನಾವು ನಮ್ಮ ಆತ್ಮಿಕತೆಯನ್ನು ಕಾಪಾಡಿಕೊಳ್ಳಲು ಪ್ರಯಾಸಪಡುವುದಾದರೆ ನಾವೀಗಲೆ ಯೆಹೋವನ ಆಶೀರ್ವಾದವನ್ನು ಹೊಂದಬಲ್ಲೆವು, ಮತ್ತು ಇದು ನಮ್ಮನ್ನು, ಭವಿಷ್ಯದಲ್ಲಿ ಭೂಪರದೈಸದ ಮೇಲೆ ನಿತ್ಯಜೀವದ ಕೊಡುಗೆಯನ್ನು ನಾವು ಪಡೆಯುವಾಗ ಆತನ ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಂತೆ ಕಾರ್ಯನಡಿಸಬಲ್ಲದು. ಕುಟುಂಬವಾಗಿ ಒಬ್ಬರಿಗೊಬ್ಬರು ಆತ್ಮಿಕವಾಗಿ ಸಹಾಯಮಾಡಲು ನಾವು ಮಾಡಬಲ್ಲ ಇತರ ವಿಷಯಗಳು ಇವೆ. ಮುಂದಿನ ಲೇಖನವು ಕುಟುಂಬವಾಗಿ ಒಡಗೂಡಿ ಕಾರ್ಯಗಳನ್ನು ಮಾಡುವ ಪ್ರಯೋಜನಗಳನ್ನು ಚರ್ಚಿಸುವುದು.—ಲೂಕ 23:43; ಪ್ರಕಟನೆ 21:1-4.
[ಅಧ್ಯಯನ ಪ್ರಶ್ನೆಗಳು]
a ಆತ್ಮಿಕತೆಯನ್ನು, “ಧಾರ್ಮಿಕ ಮೌಲ್ಯಗಳಿಗೆ ಶೀಘ್ರ ಸಂವೇದನೆ ಅಥವಾ ಅನುರಾಗ ಅಥವಾ ಆತ್ಮಿಕತೆಯುಳ್ಳ ಗುಣ ಅಥವಾ ಸ್ಥಿತಿ” ಯಾಗಿ ಅರ್ಥ ನಿರೂಪಿಸಲಾಗಿದೆ. (ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲಜಿಗೇಟ್ ಡಿಕ್ಷನರಿ) ಆತ್ಮಿಕ ವ್ಯಕ್ತಿಯು ಮಾಂಸಿಕ, ಪಶುಪ್ರಾಯ ವ್ಯಕ್ತಿಯ ವಿರುದ್ಧವಾಗಿದ್ದಾನೆ..—1 ಕೊರಿಂಥ 2:13-16; ಗಲಾತ್ಯ 5:16, 25; ಯಾಕೋಬ 3:14, 15; ಯೂದ 19.
b ಕುಟುಂಬ ಸಂಸರ್ಗದ ಕುರಿತ ಹೆಚ್ಚಿನ ಸಲಹೆಗಳಿಗಾಗಿ, ಸಪ್ಟಂಬರ 1, 1991 ರ ವಾಚ್ಟವರ್ (ಇಂಗ್ಲಿಷ್) ಪುಟಗಳು 20-2 ನೋಡಿರಿ.
ನಿಮಗೆ ನೆನಪಿದೆಯೇ?
▫ ಆತ್ಮಿಕತೆ ಎಂದರೇನು?
▫ ಕುಟುಂಬ ತಲೆಯು ಕ್ರಿಸ್ತನ ಮಾದರಿಯನ್ನು ಹೇಗೆ ಅನುಕರಿಸಬಲ್ಲನು?
▫ ನಮ್ಮ ಆತ್ಮಿಕತೆಗೆ ಬೆದರಿಕೆಗಳನ್ನು ನಾವು ಹೇಗೆ ವರ್ಜಿಸಬಲ್ಲೆವು?
▫ ಕುಟುಂಬದ ಆತ್ಮಿಕತೆಯನ್ನು ಯಾವುದು ಕೆಡಿಸಬಲ್ಲದು?
▫ ಅರ್ಥಭರಿತ ಸಂಸರ್ಗವು ಯಾಕೆ ಪ್ರಾಮುಖ್ಯವಾಗಿದೆ?
[ಪುಟ 12 ರಲ್ಲಿರುವ ಚಿತ್ರ]
ಸಭಾ ಪುಸ್ತಕ ಅಭ್ಯಾಸದಲ್ಲಿ ಉಪಸ್ಥಿತಿಯು ಕುಟುಂಬವನ್ನು ಆತ್ಮಿಕವಾಗಿ ದೃಢಪಡಿಸುತ್ತದೆ