ತಾಳ್ಮೆ—ಕ್ರೈಸ್ತರಿಗೆ ಅತ್ಯಾವಶ್ಯಕ
“ನಿಮಗಿರುವ ನಂಬಿಕೆಗೆ . . . ತಾಳ್ಮೆಯನ್ನೂ . . . ಕೂಡಿಸಿರಿ.”—2 ಪೇತ್ರ 1:5, 6.
1, 2. ನಾವೆಲ್ಲರೂ ಯಾಕೆ ಕಡೇವರೆಗೂ ತಾಳಿಕೊಳ್ಳಬೇಕು?
ತನ್ನ 90 ರುಗಳ ಪ್ರಾಯದಲ್ಲಿದ್ದ ಒಬ್ಬ ಜೊತೆ ಕ್ರೈಸ್ತನನ್ನು ಸಂಚಾರಿ ಮೇಲ್ವಿಚಾರಕನು ಮತ್ತು ಅವನ ಹೆಂಡತಿಯು ಭೇಟಿಮಾಡುತ್ತಿದ್ದರು. ಅವನು ಅನೇಕ ದಶಕಗಳನ್ನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಕಳೆದಿದ್ದನು. ಅವರು ಮಾತಾಡಿದಂತೆ, ವರ್ಷಗಳಿಂದ ಅವನು ಆನಂದಿಸಿದ ಕೆಲವು ಸುಯೋಗಗಳ ಕುರಿತು ವೃದ್ಧ ಸಹೋದರನು ಜ್ಞಾಪಿಸಿಕೊಂಡನು. ಅವನ ಮುಖದಿಂದ ಕಣ್ಣೀರು ಕೆಳಗೆ ಸುರಿಯಲು ಆರಂಭಿಸಿದಂತೆ, “ಆದರೆ ಈಗ ನಾನು ಏನನ್ನೂ ಹೆಚ್ಚಾಗಿ ಮಾಡಲು ಶಕ್ತನಾಗಿರುವುದಿಲ್ಲ,” ಎಂದು ಅವನು ಪ್ರಲಾಪಿಸಿದನು. ಸಂಚಾರಿ ಮೇಲ್ವಿಚಾರಕನು ತನ್ನ ಬೈಬಲನ್ನು ತೆರೆದು ಮತ್ತಾಯ 24:13 ನ್ನು ಓದಿದನು. ಯೇಸು ಹೀಗೆ ಹೇಳಿದ್ದಾಗಿ ಅಲ್ಲಿ ನಮೂದಿಸಲಾಗಿದೆ, “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” ಆಮೇಲೆ ಮೇಲ್ವಿಚಾರಕನು ಪ್ರಿಯ ಸಹೋದರನ ಕಡೆಗೆ ನೋಡಿ, “ನಾವು ಎಷ್ಟು ಹೆಚ್ಚನ್ನು ಯಾ ಕಡಿಮೆಯನ್ನೇ ಮಾಡಲಿ, ನಮ್ಮೆಲ್ಲರಿಗೂ ಇರುವ ಕೊನೆಯ ನೇಮಕವು, ಕೊನೆಯ ವರೆಗೂ ತಾಳುವುದಾಗಿದೆ,” ಎಂಬುದಾಗಿ ಹೇಳಿದನು.
2 ಹೌದು, ಕ್ರೈಸ್ತರೋಪಾದಿ ನಾವೆಲ್ಲರೂ ಈ ವಿಷಯ ವ್ಯವಸ್ಥೆಯ ಅಂತ್ಯದ ವರೆಗೆ ಯಾ ನಮ್ಮ ಜೀವಿತಗಳ ಅಂತ್ಯದ ವರೆಗೆ ತಾಳಿಕೊಳ್ಳಬೇಕು. ರಕ್ಷಣೆಗಾಗಿ ಯೆಹೋವನ ಅನುಗ್ರಹವನ್ನು ಪಡೆಯುವ ಬೇರೆ ಯಾವುದೇ ಮಾರ್ಗ ಇರುವುದಿಲ್ಲ. ಜೀವಕ್ಕಾಗಿ ಇರುವ ಒಂದು ಓಟದಲ್ಲಿ ನಾವು ಇದ್ದೇವೆ ಮತ್ತು ಅಂತ್ಯದ ತನಕ ನಾವು “ಸ್ಥಿರಚಿತ್ತದಿಂದ (ತಾಳ್ಮೆಯಿಂದ, NW) ಓಡಬೇಕು.” (ಇಬ್ರಿಯ 12:2 [1, NW]) “ನಿಮಗಿರುವ ನಂಬಿಕೆಗೆ . . . ತಾಳ್ಮೆಯನ್ನೂ . . . ಕೂಡಿಸಿರಿ,” ಎಂಬುದಾಗಿ ಜೊತೆ ಕ್ರೈಸ್ತರನ್ನು ಅವನು ಪ್ರೋತ್ಸಾಹಿಸಿದಾಗ, ಅಪೊಸ್ತಲ ಪೇತ್ರನು ಈ ಗುಣದ ಪ್ರಾಮುಖ್ಯತೆಯನ್ನು ಒತ್ತಿಹೇಳಿದನು. (2 ಪೇತ್ರ 1:5, 6) ಆದರೆ ನಿಖರವಾಗಿ ತಾಳ್ಮೆಯು ಏನಾಗಿದೆ?
ತಾಳ್ಮೆ—ಅದರ ಅರ್ಥವೇನು
3, 4. ತಾಳಿಕೊಳ್ಳುವುದರ ಅರ್ಥವೇನು?
3 ತಾಳಿಕೊಳ್ಳುವುದು ಎಂಬುದರ ಅರ್ಥವೇನು? “ತಾಳಿಕೊಳ್ಳು” (ಹೈಪೊಮೆನೊ) ಎಂಬ ಪದಕ್ಕಾಗಿರುವ ಗ್ರೀಕ್ ಕ್ರಿಯಾಪದವು ಅಕ್ಷರಶಃ “ಕೆಳಗೆ ಉಳಿದುಕೊಳ್ಳು ಯಾ ಇರು” ಎಂಬುದಾಗಿ ಅರ್ಥ ಕೊಡುತ್ತದೆ. ಅದು 17 ಬಾರಿ ಬೈಬಲಿನಲ್ಲಿ ಕಂಡುಬರುತ್ತದೆ. ನಿಘಂಟುಕಾರರಾದ ಡಬ್ಲ್ಯೂ. ಎಫ್. ಆರ್ನ್ಟ್ ಮತ್ತು ಎಫ್. ಡಬ್ಲ್ಯೂ. ಗಿಂಗ್ರಿಚ್ರಿಗನುಸಾರ ಅನುಸಾರ, “ಓಡಿ ಹೋಗುವ ಬದಲು ಉಳಿದುಕೊಳ್ಳುವುದು . . . , ಸ್ಥಿರವಾಗಿರುವುದು, ಅಂಟಿಕೊಂಡಿರುವುದನ್ನು ಅದು ಅರ್ಥೈಸುತ್ತದೆ. “ತಾಳ್ಮೆ” (ಹೈಪೊಮೊನೆ) ಗಾಗಿ ಇರುವ ಗ್ರೀಕ್ ನಾಮಪದವು 30 ಕ್ಕಿಂತಲೂ ಹೆಚ್ಚು ಬಾರಿ ಕಂಡುಬರುತ್ತದೆ. ಅದರ ಕುರಿತು, ವಿಲಿಯಂ ಬಾರ್ಕ್ಲೇಯಿಂದ ಬರೆಯಲ್ಪಟ್ಟ ಎ ನ್ಯೂ ಟೆಸ್ಟಮೆಂಟ್ ವರ್ಡ್ಬುಕ್ ಹೇಳುವುದು: “ತಾಳ್ಮೆಯು, ಸುಮ್ಮನೆ ಅನಿವಾರ್ಯವೆಂಬ ಮನೋಭಾವದಿಂದಲ್ಲ, ಆದರೆ ಉಜ್ವಲ ನಿರೀಕ್ಷೆಯಿಂದ ವಿಷಯಗಳನ್ನು ಸಹಿಸಬಲ್ಲ ಆತ್ಮವಾಗಿದೆ . . . ಗಾಳಿಯನ್ನು ಎದುರಿಸುತ್ತಾ ತನ್ನ ಕಾಲಿನ ಮೇಲೆ ಒಬ್ಬ ಮನುಷ್ಯನು ಇರುವಂತೆ ಮಾಡುವ ಗುಣವು ಇದಾಗಿದೆ. ಅತಿ ಕಠಿನವಾದ ಕಷ್ಟವನ್ನು ಮಹಿಮೆಯನ್ನಾಗಿ ಪರಿವರ್ತಿಸಬಲ್ಲ ಸದ್ಗುಣ ಇದಾಗಿದೆ ಯಾಕಂದರೆ ನೋವನ್ನು ಮೀರಿ ಅದು ಗುರಿಯನ್ನು ನೋಡುತ್ತದೆ.”
4 ಹಾಗಾದರೆ, ತಾಳ್ಮೆಯು, ಸ್ಥಿರವಾಗಿರಲು ಮತ್ತು ತಡೆಗಳ ಯಾ ತೊಂದರೆಗಳ ಎದುರಿನಲ್ಲಿ ನಿರೀಕ್ಷೆಯನ್ನು ನಷ್ಟಪಡಿಸಿಕೊಳ್ಳದಂತೆ ನಮ್ಮನ್ನು ಶಕ್ತಗೊಳಿಸುತ್ತದೆ. (ರೋಮಾಪುರ 5:3-5) ಸದ್ಯದ ನೋವನ್ನು ಮೀರಿ ಅದು ಗುರಿಯ ಕಡೆಗೆ—ಸ್ವರ್ಗದಲ್ಲಾಗಲಿ ಯಾ ಭೂಮಿಯ ಮೇಲಾಗಲಿ ನಿತ್ಯಜೀವದ ಬಹುಮಾನ ಯಾ ಕೊಡುಗೆಯ ಕಡೆಗೆ ನೋಡುತ್ತದೆ.—ಯಾಕೋಬ 1:12.
ತಾಳ್ಮೆ—ಯಾಕೆ?
5. (ಎ) ಎಲ್ಲಾ ಕ್ರೈಸ್ತರಿಗೆ “ತಾಳ್ಮೆಯ ಅಗತ್ಯ” ಯಾಕೆ ಇದೆ? (ಬಿ) ಯಾವ ಎರಡು ವರ್ಗಗಳಲ್ಲಿ ನಮ್ಮ ಕಷ್ಟಗಳನ್ನು ವಿಭಜಿಸಬಹುದು?
5 ಕ್ರೈಸ್ತರೋಪಾದಿ ನಮ್ಮೆಲ್ಲರಿಗೂ “ತಾಳ್ಮೆ ಬೇಕು.” (ಇಬ್ರಿಯ 10:36) ಯಾಕೆ? ಮೂಲಭೂತವಾಗಿ ಯಾಕಂದರೆ ನಾವು “ನಾನಾವಿಧವಾದ ಕಷ್ಟಗಳಲ್ಲಿ ಬೀಳುತ್ತೇವೆ.” ಇಲ್ಲಿ ಯಾಕೋಬ 1:2ರ ಗ್ರೀಕ್ ವಚನವು, ಒಬ್ಬ ಕಳ್ಳನಿಂದ ಎದುರಾದ ವ್ಯಕ್ತಿಯಂತೆ ಅನಿರೀಕ್ಷಿತವಾದ ಯಾ ಸ್ವಾಗತಾರ್ಹವಲ್ಲದ ಪ್ರತಿಭಟನೆಯನ್ನು, ಸೂಚಿಸುತ್ತದೆ. (ಹೋಲಿಸಿರಿ ಲೂಕ 10:30.) ಪಿತ್ರಾರ್ಜಿತವಾಗಿ ಪಡೆದ ಪಾಪದ ಕಾರಣ ಮನುಷ್ಯರಿಗೆ ಸಾಮಾನ್ಯವಾಗಿರುವ ಮತ್ತು ನಮ್ಮ ದೈವಿಕ ಭಕ್ತಿಯಿಂದಾಗಿ ವಿಕಸಿಸುವ—ಹೀಗೆ ಎರಡು ವರ್ಗಗಳಲ್ಲಿ ವಿಭಾಜಿಸಬಹುದಾದ ಕಷ್ಟಗಳನ್ನು ನಾವು ಎದುರಿಸುತ್ತೇವೆ. (1 ಕೊರಿಂಥ 10:13; 2 ತಿಮೊಥೆಯ 3:12) ಈ ಕಷ್ಟಗಳಲ್ಲಿ ಕೆಲವು ಯಾವುವು?
6. ವೇದನಾಮಯವಾದ ಒಂದು ಕಾಯಿಲೆಯನ್ನು ಎದುರಿಸಿದಾಗ ಸಾಕ್ಷಿಯೊಬ್ಬನು ಹೇಗೆ ತಾಳಿಕೊಂಡನು?
6 ಗಂಭೀರ ಕಾಯಿಲೆ. ತಿಮೊಥೆಯನಂತೆ, ಕೆಲವು ಕ್ರೈಸ್ತರು “ಆಗಾಗ್ಗೆ ಉಂಟಾಗುವ ಅಸ್ವಸ್ಥತೆ” ಯನ್ನು ತಾಳಿಕೊಳ್ಳಬೇಕು. (1 ತಿಮೊಥೆಯ 5:23) ವಿಶೇಷವಾಗಿ ಒಂದು ದೀರ್ಘಕಾಲದ ಪ್ರಾಯಶಃ ಬಹಳ ನೋವಿನ ಕಾಯಿಲೆಯನ್ನು ಎದುರಿಸುವಾಗ, ದೇವರ ಸಹಾಯದಿಂದ ನಾವು ತಾಳಿಕೊಂಡು, ಸ್ಥಿರವಾಗಿದ್ದು, ಮತ್ತು ನಮ್ಮ ಕ್ರೈಸ್ತ ನಿರೀಕ್ಷೆಯ ನೋಟವನ್ನು ಕಳೆದುಕೊಳ್ಳದೇ ಇರುವ ಅಗತ್ಯವಿದೆ. ಆತನ 50 ರುಗಳ ಆದಿಭಾಗದಲ್ಲಿ ತೀವ್ರವಾಗಿ ಬೆಳೆಯುತ್ತಿರುವ ಮಾರಕ ದುರ್ಮಾಂಸದ ವಿರುದ್ಧ ದೀರ್ಘವಾದ ಒಂದು ಕಠಿನ ಯುದ್ಧವನ್ನು ನಡೆಸಿದ ಒಬ್ಬ ಸಾಕ್ಷಿಯ ಉದಾಹರಣೆಯನ್ನು ಪರಿಗಣಿಸಿರಿ. ಎರಡು ಶಸ್ತ್ರಚಿಕಿತ್ಸೆಗಳಲ್ಲಿ ರಕ್ತ ಪೂರಣಗಳನ್ನು ಸ್ವೀಕರಿಸದೇ ಇರುವ ತನ್ನ ನಿರ್ಧಾರದಲ್ಲಿ ಅವನು ಸ್ಥಿರವಾಗಿದ್ದನು. (ಅ. ಕೃತ್ಯಗಳು 15:28, 29) ಆದರೆ ಗಡ್ಡೆಯು ಅವನ ಹೊಟ್ಟೆಯಲ್ಲಿ ಪುನಃ ಕಾಣಿಸಿಕೊಂಡಿತು ಮತ್ತು ಅವನ ಬೆನ್ನೆಲುಬಿನ ಹತ್ತಿರ ಬೆಳೆಯುವುದನ್ನು ಮುಂದುವರಿಸಿತು. ಅದೇ ರೀತಿಯಲ್ಲಿ, ಯಾವ ಪ್ರಮಾಣದ ಔಷಧವೂ ಒತ್ತಿಡಸಾಧ್ಯಏರದ, ಊಹಿಸಲಾರದಂಥ ಶಾರೀರಿಕ ನೋವನ್ನು ಅವನು ಅನುಭವಿಸಿದನು. ಆದರೂ, ಅವನು ಸದ್ಯದ ನೋವಿಗಿಂತ ಹೆಚ್ಚಾಗಿ ಹೊಸ ಲೋಕದಲ್ಲಿ ಜೀವದ ಬಹುಮಾನಕ್ಕೆ ಎದುರುನೋಡಿದನು. ವೈದ್ಯರೊಂದಿಗೆ, ದಾದಿಯರೊಂದಿಗೆ, ಮತ್ತು ಸಂದರ್ಶಕರೊಂದಿಗೆ ಅವನ ಪ್ರಕಾಶಮಾನವಾದ ನಿರೀಕ್ಷೆಯನ್ನು ಹಂಚಿಕೊಳ್ಳಲು ಅವನು ಮುಂದುವರಿಸಿದನು. ಅವನು ಕೊನೆಯ ವರೆಗೂ ತಾಳಿಕೊಂಡನು—ಅವನ ಜೀವನದ ಕೊನೆಯವರೆಗೂ. ನಿಮ್ಮ ಆರೋಗ್ಯ ಸಮಸ್ಯೆಯು ಆ ಪ್ರಿಯ ಸಹೋದರನಿಂದ ಅನುಭವಿಸಲ್ಪಟ್ಟಂತೆ ಜೀವವನ್ನು ಬೆದರಿಸುವ ಯಾ ಅಷ್ಟು ವೇದನಾಮಯದ್ದಾಗಿರದೆ ಇರಬಹುದು, ಆದರೂ ಅದು ತಾಳ್ಮೆಯ ಒಂದು ದೊಡ್ಡ ಪರೀಕ್ಷೆಯನ್ನು ಮುಂದಿಡಬಹುದು.
7. ನಮ್ಮ ಆತ್ಮಿಕ ಸಹೋದರ ಮತ್ತು ಸಹೋದರಿಯರಲ್ಲಿ ಕೆಲವರಿಗೆ ತಾಳ್ಮೆಯು ಯಾವ ರೀತಿಯ ನೋವನ್ನು ಒಳಗೊಂಡಿರುತ್ತದೆ?
7 ಭಾವನಾತ್ಮಕ ನೋವು. ಆಗಿಂದಾಗ್ಗೆ ಯೆಹೋವನ ಜನರಲ್ಲಿ ಕೆಲವರು “ಆತ್ಮಭಂಗ” ದಲ್ಲಿ ಫಲಿಸುವ “ಮನೋವ್ಯಥೆಯನ್ನು” ಎದುರಿಸುತ್ತಾರೆ. (ಜ್ಞಾನೋಕ್ತಿ 15:13 NW) “ನಿಭಾಯಿಸಲು ಕಠಿನವಾಗಿರುವ ಕಡೇ ದಿವಸಗಳಲ್ಲಿ” ತೀಕ್ಷೈವಾದ ಖಿನ್ನತೆ ಅಸಾಮಾನ್ಯವಲ್ಲ. (2 ತಿಮೊಥೆಯ 3:1, NW) ದಶಂಬರ 5, 1992ರ ಸೈಎನ್ಸ್ ನ್ಯೂಸ್ ವರದಿಸಿದ್ದು: “ಇಸವಿ 1915 ರಿಂದ ಈಚೆಗೆ ಪ್ರತಿ ಅನುಕ್ರಮ ಸಂತತಿಯಲ್ಲಿ ತೀಕ್ಷೈವಾದ, ಅನೇಕ ವೇಳೆ ಅಶಕ್ತವಾಗಿ ಮಾಡುವ ಖಿನ್ನತೆಯ ಪ್ರಮಾಣಗಳು ಏರಿವೆ.” ಅಂಥ ಖಿನ್ನತೆಯ ಕಾರಣಗಳು ಭಿನ್ನವಾಗಿದ್ದು, ಶರೀರದ ಅಂಶಗಳಿಂದ ಹಿಡಿದು ನೋವುಭರಿತ ಅಹಿತಕರವಾದ ಅನುಭವಗಳ ವರೆಗೆ ಹರಡಿರುತ್ತವೆ. ಕೆಲವು ಕ್ರೈಸ್ತರಿಗೆ, ತಾಳ್ಮೆಯು, ಭಾವನಾತ್ಮಕ ನೋವಿನ ಎದುರಿನಲ್ಲಿ ಸ್ಥಿರವಾಗಿರಲು ದಿನನಿತ್ಯದ ಹೋರಾಟವನ್ನು ಒಳಗೊಂಡಿರುತ್ತದೆ. ಆದರೂ, ಅವರು ಬಿಟ್ಟು ಕೊಡುವುದಿಲ್ಲ. ಕಣ್ಣೀರುಗಳ ನಡುವೆಯೂ ಅವರು ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುತ್ತಾರೆ.—ಹೋಲಿಸಿರಿ ಕೀರ್ತನೆ 126:5, 6.
8. ಯಾವ ಆರ್ಥಿಕ ಸಂಕಟವನ್ನು ನಾವು ಎದುರಿಸಬಹುದು?
8 ನಾವು ಎದುರಿಸುವಂತಹ ಅನೇಕ ಸಂಕಟಗಳು ಗಂಭೀರವಾದ ಆರ್ಥಿಕ ತೊಂದರೆಯನ್ನು ಒಳಗೊಳ್ಳಬಹುದು. ಅಮೆರಿಕದ ನ್ಯೂ ಜರ್ಸಿ ಯಲ್ಲಿ ಸಹೋದರನೊಬ್ಬನು ಥಟ್ಟನೆ ತನ್ನನ್ನು ಕೆಲಸವಿಲ್ಲದವನಾಗಿ ಕಂಡುಕೊಂಡಾಗ, ಅವನ ಕುಟುಂಬಕ್ಕೆ ಉಣಿಸುವುದರ ಕುರಿತು ಮತ್ತು ಅವನ ಮನೆಯನ್ನು ಕಳೆದುಕೊಳ್ಳದಂತೆ ಇರುವುದರ ಕುರಿತು ಗ್ರಾಹ್ಯವಾಗಿ ಕಳವಳಗೊಂಡಿದ್ದನು. ಹಾಗಿದ್ದರೂ, ರಾಜ್ಯದ ನಿರೀಕ್ಷೆಯ ನೋಟವನ್ನು ಅವನು ಕಳೆದುಕೊಳ್ಳಲಿಲ್ಲ. ಇನ್ನೊಂದು ಕೆಲಸಕ್ಕಾಗಿ ಹುಡುಕುತ್ತಿದ್ದಾಗ, ಆತನು ಸಹಾಯಕ ಪಯನೀಯರನಾಗಿ ಸೇವೆ ಮಾಡಲು ಇದ್ದ ಅವಕಾಶದ ಪ್ರಯೋಜನವನ್ನು ತೆಗೆದುಕೊಂಡನು. ಕಟ್ಟಕಡೆಗೆ, ಅವನೊಂದು ಕೆಲಸವನ್ನು ಕಂಡುಕೊಂಡನು.—ಮತ್ತಾಯ 6:25-34.
9. (ಎ) ಮರಣದಲ್ಲಿ ಒಬ್ಬ ಪ್ರಿಯ ವ್ಯಕ್ತಿಯ ನಷ್ಟವು ಹೇಗೆ ತಾಳ್ಮೆಯನ್ನು ಅಗತ್ಯಗೊಳಿಸುವುದು? (ಬಿ) ದುಃಖದ ಕಣ್ಣೀರುಗಳನ್ನು ಸುರಿಸುವುದು ತಪ್ಪಲ್ಲವೆಂದು ಯಾವು ಶಾಸ್ತ್ರವಚನಗಳು ತೋರಿಸುತ್ತವೆ?
9 ಮರಣದಲ್ಲಿ ಒಬ್ಬ ಪ್ರಿಯ ವ್ಯಕ್ತಿಯ ನಷ್ಟವನ್ನು ನೀವು ಅನುಭವಿಸಿದ್ದರೆ, ನಿಮ್ಮ ಸುತ್ತಲೂ ಇರುವವರು ತಮ್ಮ ಸಾಮಾನ್ಯವಾದ ದಿನಚರಿಗೆ ಹಿಂದಿರುಗಿದ ಅನಂತರವೂ ಬಹಳ ಕಾಲ ಬಾಳುವ ತಾಳ್ಮೆಯ ಅಗತ್ಯ ನಿಮಗಿದೆ. ಪ್ರತಿ ವರ್ಷ ನಿಮ್ಮ ಪ್ರಿಯ ವ್ಯಕ್ತಿಯು ಸತ್ತಂಥ ಬಹುತರ ಅದೇ ಸಮಯವು ವಿಶೇಷವಾಗಿ ನಿಮಗೆ ಕಠಿನವಾಗಿದೆ ಎಂಬುದನ್ನೂ ಕೂಡ ನೀವು ಕಾಣಬಹುದು. ಅಂಥ ಒಂದು ನಷ್ಟವನ್ನು ತಾಳಿಕೊಳ್ಳುವುದರ ಅರ್ಥವು ದುಃಖದ ಕಣ್ಣೀರುಗಳನ್ನು ಸುರಿಸುವುದು ತಪ್ಪು ಎಂದಾಗಿರುವುದಿಲ್ಲ. ನಾವು ಪ್ರೀತಿಸಿದಂಥ ವ್ಯಕ್ತಿಯ ಮರಣಕ್ಕಾಗಿ ದುಃಖಿಸುವುದು ಸ್ವಾಭಾವಿಕವಾಗಿದೆ, ಮತ್ತು ಇದು ಯಾವುದೇ ರೀತಿಯಲ್ಲಿ ಪುನರುತ್ಥಾನದ ನಿರೀಕ್ಷೆಯಲ್ಲಿ ನಂಬಿಕೆಯ ಕೊರತೆಯನ್ನು ಸೂಚಿಸುವುದಿಲ್ಲ. (ಆದಿಕಾಂಡ 23:2; ಹೋಲಿಸಿರಿ ಇಬ್ರಿಯ 11:19.) ಅವನು ಮಾರ್ಥಳಿಗೆ “ನಿನ್ನ ತಮ್ಮನು ಎದ್ದುಬರುವನು” ಎಂಬುದಾಗಿ ಆತ್ಮವಿಶ್ವಾಸದಿಂದ ಹೇಳಿದ್ದರೂ, ಲಾಜರನು ಸತ್ತ ನಂತರ ಯೇಸು “ಕಣ್ಣೀರುಬಿಟ್ಟನು.” ಮತ್ತು ಲಾಜರನು ಖಂಡಿತವಾಗಿಯೂ ಎದ್ದನು!—ಯೋಹಾನ 11:23, 32-35, 41-44.
10. ಯೆಹೋವನ ಜನರಿಗೆ ತಾಳ್ಮೆಯ ಒಂದು ಅಪೂರ್ವವಾದ ಅಗತ್ಯತೆ ಇದೆ ಯಾಕೆ?
10 ಎಲ್ಲಾ ಮಾನವರಿಗೆ ಸಾಮಾನ್ಯವಾಗಿರುವ ಕಷ್ಟಗಳನ್ನು ತಾಳಿಕೊಳ್ಳುವುದರ ಜೊತೆಗೆ, ಯೆಹೋವನ ಜನರಿಗೆ ತಾಳ್ಮೆಯು ಒಂದು ಅಪೂರ್ವವಾದ ಅಗತ್ಯತೆಯಾಗಿದೆ. “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳು ದ್ವೇಷಮಾಡುವರು” ಎಂಬುದಾಗಿ ಯೇಸು ಎಚ್ಚರಿಸಿದನು. (ಮತ್ತಾಯ 24:9) “ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು” ಎಂದು ಕೂಡ ಅವನು ಹೇಳಿದನು. (ಯೋಹಾನ 15:20) ಇಷ್ಟೆಲ್ಲಾ ದ್ವೇಷ ಮತ್ತು ಹಿಂಸೆ ಯಾಕೆ? ಯಾಕಂದರೆ ನಾವು ಯೆಹೋವನ ಸೇವಕರಂತೆ ಈ ಭೂಮಿಯ ಮೇಲೆ ಎಲ್ಲೇ ಜೀವಿಸಲಿ, ಯೆಹೋವನ ಕಡೆಗಿರುವ ನಮ್ಮ ಸಮಗ್ರತೆಯನ್ನು ಮುರಿಯಲು ಸೈತಾನನು ಪ್ರಯತ್ನಿಸುತ್ತಿದ್ದಾನೆ. (1 ಪೇತ್ರ 5:8; ಹೋಲಿಸಿರಿ ಪ್ರಕಟನೆ 12:17.) ಇದನ್ನು ಧ್ಯೇಯವಾಗಿಟ್ಟು, ಸೈತಾನನು ನಮ್ಮ ತಾಳ್ಮೆಯನ್ನು ತೀವ್ರವಾದ ಪರೀಕೆಗ್ಷೆ ಹಾಕುತ್ತಾ, ತೀಕ್ಷೈವಾದ ಹಿಂಸೆಯನ್ನು ಉಂಟುಮಾಡಿದ್ದಾನೆ.
11, 12. (ಎ) ಇಸವಿ 1930 ರುಗಳಲ್ಲಿ ಮತ್ತು 1940ರ ಆದಿ ಭಾಗದಲ್ಲಿ ಯೆಹೋವನ ಸಾಕ್ಷಿಗಳು ಮತ್ತು ಅವರ ಮಕ್ಕಳು ತಾಳ್ಮೆಯ ಯಾವ ಪರೀಕ್ಷೆಯನ್ನು ಎದುರಿಸಿದರು? (ಬಿ) ಯೆಹೋವನ ಸಾಕ್ಷಿಗಳು ರಾಷ್ಟ್ರೀಯ ಲಾಂಛನವನ್ನು ಯಾಕೆ ವಂದಿಸುವುದಿಲ್ಲ?
11 ಉದಾಹರಣೆಗೆ, 1930 ರುಗಳಲ್ಲಿ ಮತ್ತು 1940 ರುಗಳ ಆದಿಭಾಗದಲ್ಲಿ, ಯೆಹೋವನ ಸಾಕ್ಷಿಗಳು ಮತ್ತು ಅವರ ಮಕ್ಕಳು ಅಮೆರಿಕ ಮತ್ತು ಕೆನಡದಲ್ಲಿ ಹಿಂಸೆಗೆ ಗುರಿಯಾದರು ಯಾಕಂದರೆ ಮನಸ್ಸಾಕ್ಷಿಯ ಕಾರಣಗಳಿಗಾಗಿ ಅವರು ರಾಷ್ಟ್ರೀಯ ಲಾಂಛನವನ್ನು ವಂದಿಸಲಿಲ್ಲ. ಅವರು ಜೀವಿಸುವಂತಹ ರಾಷ್ಟ್ರದ ಲಾಂಛನವನ್ನು ಗೌರವಿಸುತ್ತಾರೆ, ಆದರೆ ದೇವರ ನಿಯಮವು ವಿಮೋಚನಕಾಂಡ 20:4, 5 (NW) ರಲ್ಲಿ ನಿರ್ದೇಶಿಸಿದ ಸೂತ್ರವನ್ನು ಅವರು ಪರಿಪಾಲಿಸುತ್ತಾರೆ: “ನೀವಾಗಿಯೇ ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆಮಾಡಲೂ ಬಾರದು, ನಿಮ್ಮ ದೇವರಾದ ಯೆಹೋವನೆಂಬ ನಾನು ಸಂಪೂರ್ಣ ಭಕ್ತಿಯನ್ನು ಪಡೆದುಕೊಳ್ಳುವ ದೇವರಾಗಿದ್ದೇನೆ.” ಯೆಹೋವ ದೇವರಿಗೆ ಮಾತ್ರ ಅವರ ಆರಾಧನೆಯನ್ನು ಸಲ್ಲಿಸಲು ಅವರು ಬಯಸಿದ್ದ ಕಾರಣ ಕೆಲವು ಸಾಕ್ಷಿ ಶಾಲಾಮಕ್ಕಳು ಹೊರಗೆ ಹಾಕಲ್ಪಟ್ಟಾಗ, ಅವರ ಶಿಕ್ಷಣಕ್ಕಾಗಿ ಸಾಕ್ಷಿಗಳು ರಾಜ್ಯ ಶಾಲೆಗಳನ್ನು ಸ್ಥಾಪಿಸಿದರು. ಇದು ಜ್ಞಾನೋದಯ ಹೊಂದಿದ ರಾಷ್ಟ್ರಗಳು ಇಂದು ಮಾಡುವಂತೆ, ಸುಪ್ರೀಂ ಕೋರ್ಟ್ ಅವರ ಧಾರ್ಮಿಕ ನಿಲುವನ್ನು ಅಮೆರಿಕದಲ್ಲಿ ಅಂಗೀಕಾರ ಮಾಡಿತು, ಆಗ ಈ ವಿದ್ಯಾರ್ಥಿಗಳು ಸಾರ್ವಜನಿಕ ಶಾಲೆಗಳಿಗೆ ಹಿಂತೆರಳಿದರು. ಆದಾಗ್ಯೂ, ಈ ಎಳೆಯರ ನಿರ್ಭೀತಿಯ ತಾಳ್ಮೆಯು ಇಂದು ವಿಶೇಷವಾಗಿ ಅಂತಹ ಕುಚೋದ್ಯವನ್ನು ಎದುರಿಸಬಹುದಾದ ಕ್ರೈಸ್ತ ಎಳೆಯರಿಗೆ ಒಂದು ಅಪ್ಪಟ ಮಾದರಿಯೋಪಾದಿ ಇರುತ್ತದೆ ಯಾಕಂದರೆ ಅವರು ಬೈಬಲ್ ಮಟ್ಟಗಳಿಗನುಸಾರ ಜೀವಿಸಲು ಪ್ರಯತ್ನಿಸುತ್ತಾರೆ.—1 ಯೋಹಾನ 5:21.
12 ನಾವು ಎದುರಿಸುವ ವಿಭಿನ್ನ ಕಷ್ಟಗಳು—ಮಾನವರಿಗೆ ಸಾಮಾನ್ಯವಾಗಿರುವ ಮತ್ತು ನಮ್ಮ ಕ್ರೈಸ್ತ ನಂಬಿಕೆಯ ಕಾರಣ ಎದುರಿಸುವ ಎರಡೂ—ನಮಗೆ ತಾಳ್ಮೆಯ ಅಗತ್ಯ ಯಾಕೆ ಇದೆ ಎಂದು ಸೂಚಿಸುತ್ತವೆ. ಆದರೆ ನಾವು ಹೇಗೆ ತಾಳಿಕೊಳ್ಳಬಲ್ಲೆವು?
ಕೊನೇ ತನಕ ತಾಳಿಕೊಳ್ಳಿರಿ—ಹೇಗೆ?
13. ಯೆಹೋವನು ತಾಳ್ಮೆಯನ್ನು ಹೇಗೆ ಒದಗಿಸುತ್ತಾನೆ?
13 ಯೆಹೋವನನ್ನು ಆರಾಧಿಸದೆ ಇರುವವರಿಗಿಂತಲೂ ದೇವರ ಜನರಿಗೆ ನಿಶ್ಚಿತವಾದ ಒಂದು ಹೆಚ್ಚಿನ ಪ್ರಯೋಜನವಿದೆ. ಸಹಾಯಕ್ಕಾಗಿ, “ಆದರಣೆ (ತಾಳ್ಮೆ, NW) ಯನ್ನು ಕೊಡುವ ದೇವರಿ”ಗೆ ನಾವು ಮೊರೆಯಿಡಬಲ್ಲೆವು. (ರೋಮಾಪುರ 15:5 [4, NW]) ಯೆಹೋವನಾದರೊ, ತಾಳ್ಮೆಯನ್ನು ಹೇಗೆ ಕೊಡುತ್ತಾನೆ? ಆತನು ಹಾಗೆ ಮಾಡುವಂಥ ಒಂದು ಮಾರ್ಗವು, ಆತನ ವಾಕ್ಯವಾದ ಬೈಬಲಿನಲ್ಲಿ ದಾಖಲೆ ಮಾಡಿರುವ ತಾಳ್ಮೆಯ ಉದಾಹರಣೆಗಳ ಮುಖಾಂತರವೇ ಆಗಿದೆ. (ರೋಮಾಪುರ 15:4) ಇವುಗಳ ಕುರಿತು ನಾವು ಚಿಂತಿಸಿದಂತೆ, ತಾಳಿಕೊಳ್ಳಲು ನಾವು ಉತ್ತೇಜಿಸಲ್ಪಡುತ್ತೇವೆ ಮಾತ್ರವಲ್ಲ ಹೇಗೆ ತಾಳಿಕೊಳ್ಳಬೇಕು ಎಂಬುದರ ಕುರಿತು ಕೂಡ ನಾವು ಹೆಚ್ಚನ್ನು ಕಲಿಯುತ್ತೇವೆ. ಎರಡು ಎದ್ದುಕಾಣುವ ಉದಾಹರಣೆಗಳನ್ನು ಪರಿಗಣಿಸಿರಿ—ಯೋಬನ ಕೆಚ್ಚೆದೆಯ ತಾಳ್ಮೆ ಮತ್ತು ಯೇಸು ಕ್ರಿಸ್ತನ ಕುಂದಿಲ್ಲದ ತಾಳ್ಮೆ.—ಇಬ್ರಿಯ 12:1-3; ಯಾಕೋಬ 5:11.
14, 15. (ಎ) ಯೋಬನು ಯಾವ ಸಂಕಟಗಳನ್ನು ತಾಳಿಕೊಂಡನು? (ಬಿ) ಅವನು ಎದುರಿಸಿದ ಸಂಕಟಗಳನ್ನು ತಾಳಿಕೊಳ್ಳಲು ಯೋಬನು ಹೇಗೆ ಶಕ್ತನಾದನು?
14 ಯಾವ ಸನ್ನಿವೇಶಗಳು ಯೋಬನ ತಾಳ್ಮೆಯನ್ನು ಪರೀಕೆಗ್ಷೆ ಒಡ್ಡಿದವು? ತನ್ನ ಸಂಪತ್ತುಗಳಲ್ಲಿ ಹೆಚ್ಚನ್ನು ಅವನು ಕಳೆದುಕೊಂಡಾಗ, ಅವನು ಆರ್ಥಿಕ ತೊಂದರೆಯನ್ನು ಅನುಭವಿಸಿದನು. (ಯೋಬ 1:14-17: ಹೋಲಿಸಿ ಯೋಬ 1:3.) ಅವನ ಎಲ್ಲಾ ಹತ್ತು ಮಕ್ಕಳು ಬಿರುಗಾಳಿಯಿಂದ ಸತ್ತಾಗ, ನಷ್ಟದ ನೋವಿನ ಅರಿವು ಯೋಬನಿಗಾಯಿತು. (ಯೋಬ 1:18-21) ಗಂಭೀರವಾದ, ಬಹಳ ವೇದನೆಯ ಕಾಯಿಲೆಯನ್ನು ಅವನು ಅನುಭವಿಸಿದನು. (ಯೋಬ 2:7, 8; 7:4, 5) ದೇವರಿಂದ ದೂರವಾಗಲು ಅವನ ಸ್ವಂತ ಹೆಂಡತಿಯೇ ಒತ್ತಡವನ್ನು ಹಾಕಿದಳು. (ಯೋಬ 2:9) ಹತ್ತಿರದ ಸಂಗಾತಿಗಳು ಹಾನಿಕಾರಕ, ನಿರ್ದಯದ ಮತ್ತು ಅಸತ್ಯ ವಿಷಯಗಳನ್ನು ಹೇಳಿದರು. (ಹೋಲಿಸಿ ಯೋಬ 16:1-3 ಮತ್ತು ಯೋಬ 42:7.) ಯೋಬನಾದರೋ, ಈ ಎಲ್ಲಾ ಸಮಯದಲ್ಲಿ ಸ್ಥಿರಚಿತ್ತನಾಗಿದ್ದು, ಸಮಗ್ರತೆಯನ್ನು ಕಾಪಾಡುವವನಾಗಿದ್ದನು. (ಯೋಬ 27:5) ಅವನು ತಾಳಿಕೊಂಡ ವಿಷಯಗಳು ಇಂದು ಯೆಹೋವನ ಜನರು ಎದುರಿಸುವ ಕಷ್ಟಗಳಿಗೆ ಸಮಾನವಾಗಿವೆ.
15 ಆ ಎಲ್ಲಾ ಕಷ್ಟಗಳನ್ನು ಯೋಬನು ಹೇಗೆ ತಾಳಿಕೊಳ್ಳಲು ಶಕ್ತನಾದನು? ಯೋಬನಿಗೆ ನಿರ್ದಿಷ್ಟವಾಗಿ ಆಧಾರವನ್ನಿತ್ತ ವಿಷಯಗಳಲ್ಲಿ ಒಂದು ನಿರೀಕ್ಷೆಯಾಗಿತ್ತು. “ಕಡಿದ ಮರವೂ ತಾನು ಮೊಳೆಯುವದನ್ನು ನಿಲ್ಲಿಸದೆ ಮತ್ತೆ ಚಿಗುರೇನೆಂದು ನಿರೀಕ್ಷಿಸುತ್ತದಲ್ಲವೇ!” ಎಂದು ಅವನು ಹೇಳಿದನು. (ಯೋಬ 14:7) ಯೋಬನಿಗೆ ಯಾವ ನಿರೀಕ್ಷೆಯಿತ್ತು? ಕೆಲವು ವಚನಗಳ ತರುವಾಯ ಗಮನಿಸುವಂತೆ, ಅವನು ಹೇಳಿದ್ದು: “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ? . . . ನೀನು ಕರೆದರೆ ಉತ್ತರಕೊಡುವೆನು. ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ [ಯಾ, ಬಯಕೆ] ಹುಟ್ಟೀತು.” (ಯೋಬ 14:14, 15) ಹೌದು, ಯೋಬನು ತನ್ನ ಸದ್ಯದ ನೋವಿನ ಆಚೆ ನೋಡಿದನು. ಅವನ ಕಷ್ಟಗಳು ಸದಾಕಾಲ ಇರುವುದಿಲ್ಲವೆಂದು ಅವನಿಗೆ ಗೊತ್ತಿತ್ತು. ಹೆಚ್ಚೆಂದರೆ ಅವನು ಮರಣದ ತನಕ ತಾಳಿಕೊಳ್ಳಬೇಕಾಗಿತ್ತು. ಅವನ ನಿರೀಕ್ಷೆಯುಳ್ಳ ಬಯಕೆ ಏನಾಗಿತ್ತೆಂದರೆ, ಸತ್ತವರನ್ನು ಪುನರುತ್ಥಾನಗೊಳಿಸಲು ಪ್ರೀತಿಪರವಾಗಿ ಬಯಸುವ ಯೆಹೋವನು, ಅವನನ್ನು ಪುನಃ ಜೀವಕ್ಕೆ ತರುವನು.—ಅ. ಕೃತ್ಯಗಳು 24:15.
16. (ಎ) ಯೋಬನ ಉದಾಹರಣೆಯಿಂದ ನಾವು ತಾಳ್ಮೆಯ ಕುರಿತು ಏನನ್ನು ಕಲಿಯುತ್ತೇವೆ? (ಬಿ) ರಾಜ್ಯ ನಿರೀಕ್ಷೆಯು ನಮಗೆ ಎಷ್ಟು ನೈಜವಾಗಿರಬೇಕು, ಮತ್ತು ಯಾಕೆ?
16 ಯೋಬನ ತಾಳ್ಮೆಯಿಂದ ನಾವು ಏನನ್ನು ಕಲಿಯುತ್ತೇವೆ? ಕೊನೇತನಕ ತಾಳಿಕೊಳ್ಳಲು, ನಮ್ಮ ನಿರೀಕ್ಷೆಯ ನೋಟವನ್ನು ನಾವು ಎಂದೂ ಕಳೆದುಕೊಳ್ಳಬಾರದು. ನಾವು ಎದುರಿಸುವ ಯಾವುದೇ ಕಷ್ಟಾನುಭವವು ಸಂಬಂಧಸೂಚಕವಾಗಿ “ಕ್ಷಣಮಾತ್ರವಿರುವ”ದು ಎಂಬ ಅರ್ಥಕೊಡುವ ರಾಜ್ಯ ನಿರೀಕ್ಷೆಯ ವಾಸ್ತವಿಕತೆಯನ್ನು ಕೂಡ ನೆನಪಿನಲ್ಲಿಡಿರಿ. (2 ಕೊರಿಂಥ 4:16-18) ಹತ್ತಿರದ ಭವಿಷ್ಯತ್ತಿನಲ್ಲಿ ಆತನು “[ನಮ್ಮ] ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ,” ಎಂಬ ಸಮಯದ ಕುರಿತು ಯೆಹೋವನ ವಾಗ್ದಾನದ ಮೇಲೆ ನಮ್ಮ ಬೆಲೆಯುಳ್ಳ ನಿರೀಕ್ಷೆಯು ಬಲವಾಗಿ ಆಧಾರಿಸಿದೆ. (ಪ್ರಕಟನೆ 21:3, 4) “ಭಂಗಪಡಿಸುವ” ಆ ನಿರೀಕ್ಷೆಯು ನಮ್ಮ ಯೋಚನೆಯನ್ನು ಕಾಪಾಡಬೇಕು. (ರೋಮಾಪುರ 5:4, 5; 1 ಥೆಸಲೊನೀಕ 5:8) ಅದು ನಮಗೆ ನೈಜವಾಗಿರಬೇಕು—ಎಷ್ಟು ನೈಜವೆಂದರೆ, ನಂಬಿಕೆಯ ಕಣ್ಣುಗಳಿಂದ, ನಾವು ನಮ್ಮನ್ನೇ ಹೊಸ ಲೋಕದಲ್ಲಿ ಚಿತ್ರಿಸಿಕೊಳ್ಳಬೇಕು—ಕಾಯಿಲೆ ಮತ್ತು ಖಿನ್ನತೆಯ ವಿರುದ್ಧ ಇನ್ನು ಮುಂದೆ ಹೋರಾಡದೆ, ಪ್ರತಿ ದಿನ ಒಳ್ಳೆಯ ಆರೋಗ್ಯ ಮತ್ತು ತಿಳಿಯಾದ ಮನದೊಂದಿಗೆ ಏಳುವುದು; ಗಂಭೀರವಾದ ಆರ್ಥಿಕ ಒತ್ತಡಗಳ ಕುರಿತು ಇನ್ನು ಮುಂದೆ ಚಿಂತಿಸದೆ ಭದ್ರತೆಯಲ್ಲಿ ಜೀವಿಸುವುದು, ಪ್ರಿಯರ ಮರಣದಲ್ಲಿ ಇನ್ನು ಮುಂದೆ ದುಃಖಿಸದೆ ಅವರು ಪುನರುತ್ಥಾನ ಹೊಂದುವುದನ್ನು ನೋಡಿ ಪುಳಕಿತರಾಗುವ ಅನುಭವವನ್ನು ಪಡೆಯುವ ಸಮಯವು ಅದಾಗಿರುವುದು. (ಇಬ್ರಿಯ 11:1) ಇಂಥ ನಿರೀಕ್ಷೆ ಇಲ್ಲದಿದ್ದರೆ, ನಾವು ನಮ್ಮ ಸದ್ಯದ ಕಷ್ಟಗಳಿಂದ ಎಷ್ಟರ ಮಟ್ಟಿಗೆ ಪೂರ್ತಿಯಾಗಿ ಮುಳುಗಿಸಲ್ಪಡಸಾಧ್ಯವಿದೆಯೆಂದರೆ, ನಾವು ಬಿಟ್ಟು ಕೊಡುತ್ತೇವೆ. ನಮ್ಮ ನಿರೀಕ್ಷೆಯೊಂದಿಗೆ, ಹೋರಾಡುತ್ತಾ ಇರಲು, ಕೊನೇತನಕ ತಾಳಿಕೊಳ್ಳುತ್ತಾ ಇರಲು ನಮಗೆ ಎಂತಹ ಮಹತ್ತರವಾದ ಒಂದು ಪ್ರೇರಕವಿದೆ!
17. (ಎ) ಯಾವ ಸಂಕಟಗಳನ್ನು ಯೇಸು ತಾಳಿಕೊಂಡನು? (ಬಿ) ಯೇಸು ತಾಳಿಕೊಂಡ ತೀಕ್ಷೈವಾದ ಕಷ್ಟಾನುಭವವನ್ನು ಯಾವ ನಿಜತ್ವದಿಂದ ನೋಡ ಸಾಧ್ಯವಿದೆ? (ಪಾದಟಿಪ್ಪಣಿ ನೋಡಿ.)
17 “ಯೇಸುವಿನ ಮೇಲೆ ದೃಷ್ಟಿಯಿಟ್ಟು” ಅವನನ್ನು ‘ನಿಕಟವಾಗಿ ಪರಿಗಣಿಸಿರಿ,’ ಎಂದು ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ. ಯಾವ ಕಷ್ಟಗಳನ್ನು ಅವನು ತಾಳಿಕೊಂಡನು? ಅವುಗಳಲ್ಲಿ ಕೆಲವು ಇತರರ ಪಾಪ ಮತ್ತು ಅಪರಿಪೂರ್ಣತೆಯಿಂದಾಗಿ ಫಲಿಸಿದವು. ಯೇಸು “ಪಾಪಿಗಳಿಂದ ಎಷ್ಟೋ ವಿರೋಧವನ್ನು” ಮಾತ್ರವಲ್ಲ ಅವರೊಳಗೆ ಯಾರು ಹೆಚ್ಚಿನವರು ಎಂಬ ಸತತವಾದ ಜಗಳಗಳನ್ನು ಸೇರಿಸಿ, ಅವನ ಶಿಷ್ಯರೊಳಗೆ ಎದ್ದ ಸಮಸ್ಯೆಗಳನ್ನೂ ಸಹಿಸಿಕೊಂಡನು. ಅದಕ್ಕಿಂತ ಹೆಚ್ಚಾಗಿ, ನಂಬಿಕೆಯ ಸರಿಸಾಟಿಯಿಲ್ಲದ ಒಂದು ಪರೀಕ್ಷೆಯನ್ನು ಅವನು ಎದುರಿಸಿದನು. ಅವನು “ಶಿಲುಬೆಯ ಮರಣವನ್ನು ಸಹಿಸಿಕೊಂಡ”ನು. (ಇಬ್ರಿಯ 12:1-3; ಲೂಕ 9:46; 22:24) ಶೂಲಕ್ಕೇರಿಸುವ ನೋವಿನಲ್ಲಿ ಒಳಗೊಂಡ ಮಾನಸಿಕ ಮತ್ತು ಶಾರೀರಿಕ ಕಷ್ಟಾನುಭವವನ್ನು ಮತ್ತು ಒಬ್ಬ ದೂಷಕನಂತೆ ದಂಡಿಸಲ್ಪಡುವುದರ ಅಪಮಾನವನ್ನು ಊಹಿಸುವುದೂ ಕೂಡ ಕಷ್ಟಕರವಾಗಿದೆ.a
18. ಅಪೊಸ್ತಲ ಪೌಲನಿಗನುಸಾರ, ಯಾವ ಎರಡು ವಿಷಯಗಳು ಯೇಸುವನ್ನು ಬಲವನ್ನಿತ್ತು ಪೋಷಿಸಿದವು?
18 ಕೊನೇತನಕ ತಾಳಿಕೊಳ್ಳಲು ಯೇಸುವನ್ನು ಯಾವುದು ಶಕ್ತನನ್ನಾಗಿ ಮಾಡಿತು? ಯೇಸುವನ್ನು ಎತ್ತಿಹಿಡಿದ ಎರಡು ವಿಷಯಗಳನ್ನು ಅಪೊಸ್ತಲ ಪೌಲನು ತಿಳಿಸುತ್ತಾನೆ: ‘ಪ್ರಾರ್ಥನೆ ವಿಜ್ಞಾಪನೆಗಳು’ ಮತ್ತು “ತನ್ನ ಮುಂದೆ ಇಟ್ಟಿದ್ದ ಸಂತೋಷ,” ಸಹ. ದೇವರ ಪರಿಪೂರ್ಣ ಮಗನಾದ ಯೇಸು, ಸಹಾಯಕ್ಕಾಗಿ ಕೇಳಲು ನಾಚಿಕೆಪಟ್ಟುಕೊಳ್ಳಲಿಲ್ಲ. “ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ” ಅವನು ಪ್ರಾರ್ಥಿಸಿದನು. (ಇಬ್ರಿಯ 5:7; 12:2) ವಿಶೇಷವಾಗಿ ಅವನ ಶ್ರೇಷ್ಠವಾದ ಸಂಕಟವು ಸಮೀಪಿಸುತ್ತಿರುವಾಗ, ಬಲಕ್ಕಾಗಿ ಸತತವಾಗಿ ಮತ್ತು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವುದು ಅಗತ್ಯವೆಂದು ಅವನು ಕಂಡನು. (ಲೂಕ 22:39-44) ಯೇಸುವಿನ ವಿಜ್ಞಾಪನೆಯ ಪ್ರತಿಕ್ರಿಯೆಯಲ್ಲಿ, ಯೆಹೋವನು ಕಷ್ಟವನ್ನು ತೆಗೆದುಬಿಡಲಿಲ್ಲ, ಆದರೆ ಅದನ್ನು ತಾಳಿಕೊಳ್ಳಲು ಯೇಸುವನ್ನು ಬಲಗೊಳಿಸಿದನು. ಯೇಸು ಕೂಡ ತಾಳಿಕೊಂಡನು ಯಾಕಂದರೆ ಅವನು ಮರಣಕಂಬದ ಆಚೆ ಅವನ ಪ್ರತಿಫಲವನ್ನು ನೋಡಿದನು—ಯೆಹೋವನ ನಾಮದ ಪವಿತ್ರೀಕರಣಕ್ಕೆ ನೆರವಾಗುವುದರಲ್ಲಿ ಮತ್ತು ಮಾನವ ಕುಟುಂಬವನ್ನು ಮರಣದಿಂದ ವಿಮೋಚಿಸುವುದರಲ್ಲಿ ಅವನಿಗಿರುವ ಸಂತೋಷವನ್ನು ಅವನು ನೋಡಿದನು.—ಮತ್ತಾಯ 6:9; 20:28.
19, 20. ತಾಳ್ಮೆಯು ಏನನ್ನು ಒಳಗೊಂಡಿದೆ ಎಂಬುದರ ಕುರಿತು ಒಂದು ವಾಸ್ತವವಾದ ನೋಟವನ್ನು ಇಟ್ಟುಕೊಳ್ಳುವಂತೆ ಯೇಸುವಿನ ಉದಾಹರಣೆಯು ನಮಗೆ ಹೇಗೆ ಸಹಾಯ ಮಾಡುತ್ತದೆ?
19 ಯೇಸುವಿನ ಉದಾಹರಣೆಯಿಂದ, ತಾಳ್ಮೆಯು ಏನನ್ನು ಒಳಗೊಂಡಿದೆ ಎಂಬುದರ ಕುರಿತು ವಾಸ್ತವವಾದ ನೋಟವನ್ನು ಹೊಂದಲು ನಮಗೆ ಸಹಾಯ ಮಾಡುವ ಹಲವಾರು ವಿಷಯಗಳನ್ನು ನಾವು ಕಲಿಯುತ್ತೇವೆ. ತಾಳ್ಮೆಯ ಮಾರ್ಗವು ಸುಲಭವಾದ ಮಾರ್ಗವಲ್ಲ. ನಿರ್ದಿಷ್ಟವಾದ ಒಂದು ಸಂಕಟವನ್ನು ತಾಳಿಕೊಳ್ಳುವುದು ಕಷ್ಟಕರವೆಂದು ನಾವು ಕಂಡುಕೊಳ್ಳುತ್ತಾ ಇರುವುದಾದರೆ, ಯೇಸುವಿನ ವಿಷಯದಲ್ಲೂ ಇದು ಸತ್ಯವಾಗಿತ್ತು ಎಂದು ತಿಳಿದುಕೊಳ್ಳುವುದರಲ್ಲಿ ಸಾಂತ್ವನವಿದೆ. ಕೊನೇತನಕ ತಾಳಿಕೊಳ್ಳಲು, ನಾವು ಸತತವಾಗಿ ಬಲಕ್ಕಾಗಿ ಪ್ರಾರ್ಥಿಸಬೇಕು. ಸಂಕಟದಲ್ಲಿರುವಾಗ ಕೆಲವೊಮ್ಮೆ, ಪ್ರಾರ್ಥಿಸಲು ನಾವು ಅಯೋಗ್ಯರೆಂದು ಅನಿಸಬಹುದು. ಆದರೆ ‘ಅವನು ನಮಗೋಸ್ಕರ ಚಿಂತಿಸುತ್ತಾನೆ’ ಆದುದರಿಂದ ಆತನಲ್ಲಿ ನಮ್ಮ ಹೃದಯಗಳನ್ನು ಹೊರಹರಿಸಲು ಯೆಹೋವನು ನಮ್ಮನ್ನು ಆಮಂತ್ರಿಸುತ್ತಾನೆ. (1 ಪೇತ್ರ 5:7) ಆತನ ವಾಕ್ಯದಲ್ಲಿ ಯೆಹೋವನು ಏನನ್ನು ವಾಗ್ದಾನಿಸಿದ್ದಾನೊ ಆ ಕಾರಣದಿಂದಾಗಿ, ನಂಬಿಕೆಯಲ್ಲಿ ಆತನನ್ನು ಕರೆಯುವವರಿಗೆ “ಸಾಮಾನ್ಯಕ್ಕಿಂತಲೂ ಹೆಚ್ಚಾದ ಶಕ್ತಿಯನ್ನು” ಕೊಡಲು ತನ್ನನ್ನು ತಾನೇ ನಿರ್ಬಂಧಿಸಿಕೊಂಡಿದ್ದಾನೆ.—2 ಕೊರಿಂಥ 4:7-9, NW.
20 ಕೆಲವೊಮ್ಮೆ ನಾವು ಕಣ್ಣೀರುಗಳೊಂದಿಗೆ ತಾಳಿಕೊಳ್ಳಬೇಕು. ಯೇಸುವಿಗೆ ಮರಣಕಂಬದ ನೋವು ತಾನೇ ಹರ್ಷಿಸಲಿಕ್ಕಾಗಿ ಒಂದು ಕಾರಣವಾಗಿರಲಿಲ್ಲ. ಬದಲಾಗಿ, ಅವನ ಮುಂದೆ ಇಡಲ್ಪಟ್ಟ ಪ್ರತಿಫಲದಲ್ಲಿ ಸಂತೋಷವಿತ್ತು. ನಮ್ಮ ವಿಷಯದಲ್ಲಿ, ಕಷ್ಟದಲ್ಲಿರುವಾಗ ನಾವು ಯಾವಾಗಲೂ ಹರ್ಷಚಿತ್ತರಾಗಿ ಮತ್ತು ಉತ್ಸಾಹಭರಿತರಾಗಿ ಇರುವೆವು ಎಂದು ನಿರೀಕ್ಷಿಸುವುದು ವಾಸ್ತವವಾದ ಸಂಗತಿಯಲ್ಲ. (ಹೋಲಿಸಿ ಇಬ್ರಿಯ 12:11.) ಅತಿ ಕಷ್ಟಕರವಾದ ಸನ್ನಿವೇಶಗಳನ್ನು ನಾವು ಎದುರಿಸಿದರೂ ಕೂಡ, ಪ್ರತಿಫಲಕ್ಕೆ ಎದುರುನೋಡುವ ಮೂಲಕವಾದರೊ, ಅದು “ಕೇವಲ ಆನಂದಕರವಾದದ್ದೆಂದು ತಿಳಿದು” ಕೊಳ್ಳಲು ನಾವು ಶಕ್ತರಾಗಬಹುದು. (ಯಾಕೋಬ 1:2-4; ಅ. ಕೃತ್ಯಗಳು 5:41) ಪ್ರಾಮುಖ್ಯವಾದ ವಿಷಯವೇನಂದರೆ ನಾವು ಸ್ಥಿರಚಿತ್ತರಾಗಿರುವುದು—ಬೇಕಾದರೆ ಕಣ್ಣೀರುಗಳೊಂದಿಗೂ ಸಹ. ಅಂತೂ, ‘ಅತಿ ಕಡಿಮೆ ಪ್ರಮಾಣದ ಕಣ್ಣೀರುಗಳನ್ನು ಸುರಿಸುವವನು ರಕ್ಷಿಸಲ್ಪಡುವನು’ ಎಂಬುದಾಗಿ ಯೇಸು ಹೇಳಲಿಲ್ಲ, “ಆದರೆ ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.”—ಮತ್ತಾಯ 24:13.
21. (ಎ) ಎರಡನೆಯ ಪೇತ್ರ 1:5, 6 ರಲ್ಲಿ, ನಮ್ಮ ತಾಳ್ಮೆಗೆ ಏನನ್ನು ಕೂಡಿಸುವಂತೆ ನಾವು ಪ್ರೋತ್ಸಾಹಿಸಲ್ಪಟ್ಟಿದ್ದೇವೆ? (ಬಿ) ಯಾವ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಪರಿಗಣಿಸಲ್ಪಡುವುವು?
21 ಹೀಗೆ ರಕ್ಷಣೆಗಾಗಿ ತಾಳ್ಮೆಯು ಪ್ರಾಮುಖ್ಯವಾಗಿದೆ. ಆದಾಗ್ಯೂ, 2 ಪೇತ್ರ 1:5, 6 ರಲ್ಲಿ, ನಮ್ಮ ತಾಳ್ಮೆಗೆ ದೈವಿಕ ಭಕ್ತಿ (NW) ಯನ್ನು ಕೂಡಿಸುವಂತೆ ನಾವು ಪ್ರೋತ್ಸಾಹಿಸಲ್ಪಟ್ಟಿದ್ದೇವೆ. ದೈವಿಕ ಭಕ್ತಿ ಎಂದರೇನು? ಅದು ತಾಳ್ಮೆಗೆ ಹೇಗೆ ಸಂಬಂಧಿಸಿದೆ, ಮತ್ತು ನೀವು ಅದನ್ನು ಹೇಗೆ ಸಂಪಾದಿಸಬಲ್ಲಿರಿ? ಈ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಪರಿಗಣಿಸಲ್ಪಡುವುವು.
[ಅಧ್ಯಯನ ಪ್ರಶ್ನೆಗಳು]
a ಮರಣಕಂಬದ ಮೇಲೆ ಕೇವಲ ಕೊಂಚವೇ ತಾಸುಗಳ ತರುವಾಯ ಅವನ ಪರಿಪೂರ್ಣ ಜೀವವು ಮರಣ ಹೊಂದಿತು ಎಂಬ ನಿಜತ್ವದಿಂದಲೇ ಯೇಸು ತೀಕ್ಷೈವಾದ ಕಷ್ಟವನ್ನು ತಾಳಿಕೊಂಡನೆಂದು ನೋಡಬಹುದು. ಆದರೆ ಅವನ ಪಕ್ಕದಲ್ಲಿ ಮರಣಕ್ಕೆ ಏರಿಸಲ್ಪಟ್ಟ ದುಷ್ಟರಿಗೆ ಮರಣವನ್ನು ತರ್ವೆಗೊಳಿಸಲು ಅವರ ಕಾಲುಗಳನ್ನು ಮುರಿಯಬೇಕಾಯಿತು. (ಯೋಹಾನ 19:31-33) ಅವನ ಸ್ವಂತ ಮರಣ ಕಂಬವನ್ನು ಕೂಡ ಹೊತ್ತುಕೊಳ್ಳಲು ಅವನಿಗೆ ಬಹುಶಃ ಆಗದ ಮಟ್ಟಿಗೆ, ಮರಣಕ್ಕೇರಿಸುವ ಹಿಂದಿನ ರಾತ್ರಿಯಿಡೀ ನಿದ್ರೆಯಿಲ್ಲದೆ ಕಷ್ಟದ ಸಮಯದಲ್ಲಿ ಯೇಸುವಿನ ಮೇಲೆ ಹೊರಿಸಿದ್ದ ಮಾನಸಿಕ ಮತ್ತು ಶಾರೀರಿಕ ಬಾಧೆಯನ್ನು ಅವರು ಅನುಭವಿಸಿರಲಿಲ್ಲ.—ಮಾರ್ಕ 15:15, 21.
ನೀವು ಹೇಗೆ ಉತ್ತರಿಸುವಿರಿ?
◻ ತಾಳಿಕೊಳ್ಳುವುದರ ಅರ್ಥವೇನಾಗಿದೆ?
◻ ಯೆಹೋವನ ಜನರಿಗೆ ತಾಳ್ಮೆಯ ಒಂದು ಅಪೂರ್ವವಾದ ಅಗತ್ಯವು ಯಾಕೆ ಇದೆ?
◻ ಯೋಬನು ತಾಳಿಕೊಳ್ಳುವಂತೆ ಯಾವುದು ಶಕ್ತಗೊಳಿಸಿತು?
◻ ತಾಳ್ಮೆಯ ವಾಸ್ತವವಾದ ನೋಟವನ್ನು ಹೊಂದಿರಲು ಯೇಸುವಿನ ಉದಾಹರಣೆಯು ನಮಗೆ ಹೇಗೆ ಸಹಾಯ ಮಾಡುತ್ತದೆ?
[ಪುಟ 10 ರಲ್ಲಿರುವ ಚಿತ್ರ]
ಕೇವಲ ಯೆಹೋವನಿಗೆ ಮಾತ್ರವೇ ಅವರ ಆರಾಧನೆಯನ್ನು ನಿರ್ದೇಶಿಸಿದ ಕಾರಣ ಶಾಲೆಯಿಂದ ಹೊರಗೆ ಹಾಕಲ್ಪಟ್ಟ ಕ್ರೈಸ್ತ ಮಕ್ಕಳಿಗೆ ಕಲಿಸಲು, ರಾಜ್ಯ ಶಾಲೆಗಳು ಸ್ಥಾಪಿಸಲ್ಪಟ್ಟವು
[ಪುಟ 12 ರಲ್ಲಿರುವ ಚಿತ್ರ]
ತನ್ನ ತಂದೆಯನ್ನು ಗೌರವಿಸಲು ದೃಢಮನಸ್ಕನಾಗಿದ್ದು, ಬಲಕ್ಕಾಗಿ ಮತ್ತು ತಾಳಿಕೊಳ್ಳಲು ಯೇಸುವು ಪ್ರಾರ್ಥಿಸಿದನು