ಚಿಕ್ಕ ಕುರಿಗಳನ್ನು ಅವರು ಕನಿಕರದಿಂದ ಪಾಲಿಸುತ್ತಾರೆ
ಮಾನವನಿಗೆ ಹತ್ತಿರವಾಗಿ ಜೀವಿಸುವ ಎಲ್ಲ ಪ್ರಾಣಿಗಳಲ್ಲಿ, ಸಾಕು ಕುರಿಯಂತೆ ಯಾವುದೂ ಇಲ್ಲ. ಹೆಚ್ಚಿನ ಪ್ರಾಣಿಗಳಿಗೆ ಆಹಾರವನ್ನು ಹುಡುಕುವ ಮತ್ತು ಅವುಗಳನ್ನು ಬೇಟೆಯಾಗಿ ಹಿಡಿಯುವ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಬಲ ಮತ್ತು ಸಹಜ ಪ್ರವೃತ್ತಿಗಳು ಇವೆ, ಆದರೆ ಕುರಿಯು ಭಿನ್ನವಾದುದ್ದಾಗಿದೆ. ಅದು ತನ್ನನ್ನೇ ಸಂರಕ್ಷಿಸಿಕೊಳ್ಳಲು ಯಾವುದೇ ಸಾಮರ್ಥ್ಯವಿಲ್ಲದ್ದುದಾಗಿ, ಕೊಂದು ತಿನ್ನುವವುಗಳಿಗೆ ಭೇದ್ಯವಾದುದ್ದಾಗಿದೆ. ಕುರುಬನಿಲ್ಲದೆ ಒಂದು ಕುರಿಯು ಹೆದರಿಕೆಯುಳ್ಳದ್ದು ಮತ್ತು ಅಸಹಾಯಕರವಾದದ್ದು ಆಗಿದೆ. ಮಂದೆಯಿಂದ ಪ್ರತ್ಯೇಕಿಸುವಲ್ಲಿ, ಅದು ಸುಲಭವಾಗಿ ಕಳೆದು ಹೋಗುತ್ತದೆ. ಆದುದರಿಂದ ಪಳಗಿಸಬಹುದಾದ ಕುರಿಗಳು ಅವುಗಳ ಕುರುಬನಿಗಾಗಿ ಒಂದು ಒಲವಿನ ಭಾವನೆ ಹೊಂದಿರಲು ತಡೆಯಲಾಗದ ಕಾರಣಗಳನ್ನು ಹೊಂದಿವೆ. ಅವನಿಲ್ಲದೆ ಅವುಗಳಿಗೆ ಬದುಕಿ ಉಳಿಯುವ ಕಡಮೆ ಸಂದರ್ಭಗಳು ಇರುವವು. ಈ ವೈಲಕ್ಷಣ್ಯಗಳಿಂದಾಗಿ, ಸರಳ, ಅಪಪ್ರಯೋಗಿಸಲ್ಪಟ್ಟ, ಯಾ ರಕ್ಷಿಸಿಕೊಳ್ಳಲಶಕ್ಯವಾದ ಜನರನ್ನು ಚಿತ್ರಿಸಲು ಬೈಬಲು ಕುರಿಗಳನ್ನು ಸಾಂಕೇತಿಕವಾಗಿ ಉಪಯೋಗಿಸಿದೆ.
ಕುರುಬನ ಪ್ರತಿಫಲಗಳು ಉತ್ತಮವಾಗಿ ಸಂಪಾದಿಸಲ್ಪಟ್ಟವುಗಳಾಗಿವೆ ಎಂಬುದು ಖಚಿತ. ಆವನ ಜೀವನವು ಸುಲಭವಾದದ್ದಲ್ಲ. ಅವನು ಬಿಸಿಲಿಗೆ ಮತ್ತು ಚಳಿಗೆ ಒಡ್ಡಲ್ಪಡುತ್ತಾನೆ, ಮತ್ತು ನಿದ್ರಾರಹಿತ ರಾತ್ರಿಗಳನ್ನು ಅವನು ಅನುಭವಿಸುತ್ತಾನೆ. ಅನೇಕ ಬಾರಿ ಅವನ ಸ್ವಂತ ಪ್ರಾಣಾಪಾಯದಲ್ಲೂ, ಅವನು ಮಂದೆಯನ್ನು ಕೊಂದು ತಿನ್ನುವವುಗಳಿಂದ ಸಂರಕ್ಷಿಸಬೇಕು. ಅವನು ಮಂದೆಯನ್ನು ಒಟ್ಟಿಗಿಡಬೇಕಾಗಿರುವುದರಿಂದ, ಅವನ ಹೆಚ್ಚಿನ ಸಮಯವು ದಾರಿತಪ್ಪಿದ ಯಾ ಕಳೆದುಹೋದ ಕುರಿಯನ್ನು ಹುಡುಕುವಲ್ಲಿ ಕಳೆಯುತ್ತದೆ. ಅವನು ರೋಗಗ್ರಸ್ತ ಮತ್ತು ಗಾಯಗೊಂಡವುಗಳನ್ನು ಉಪಚರಿಸಬೇಕು. ಬಲಹೀನ ಯಾ ಬಳಲಿದ ಕುರಿಮರಿಗಳನ್ನು ಹೊತ್ತುಕೊಂಡೊಯ್ಯಬೇಕು. ಆಹಾರ ಮತ್ತು ನೀರಿನ ಒಂದು ತಕ್ಕ ಪೂರೈಕೆಯು ದೊರಕಿಸಿಕೊಳ್ಳುವ ಕುರಿತು ಸತತ ಚಿಂತೆಯು ಇರುತ್ತದೆ. ಮಂದೆಯ ಸುರಕ್ಷಿತತೆಯನ್ನು ಖಚಿತಪಡಿಸಿಕೊಳ್ಳುವಂತೆ ರಾತ್ರಿ ಹೊರಗೆ ಹೊಲದಲ್ಲಿ ಮಲಗಿಕೊಳ್ಳುವುದು ಕುರುಬನಿಗೇನು ಅಸಾಮಾನ್ಯವಾದುದಲ್ಲ. ಹೀಗಿರುವುದರಿಂದ, ಧೈರ್ಯವಂತ, ಉದ್ಯೋಗಶೀಲ, ಮತ್ತು ಸಾಧನ ಸಂಪದ್ಭರಿತನಾಗಿರುವ ಪುರುಷನ ಸೇವೆಗಳನ್ನು ಅವಶ್ಯಪಡಿಸುವ ಒಂದು ಕಡುಕಷ್ಟದ ಜೀವನವು ಕುರಿಪಾಲನೆಯದ್ದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಅವನ ಆರೈಕೆಗೆ ಒಪ್ಪಿಸಲ್ಪಟ್ಟ ಮಂದೆಗಾಗಿ ನಿಜ ಚಿಂತೆಯನ್ನು ತೋರಿಸುವ ಸಾಮರ್ಥ್ಯವು ಅವನಿಗಿರಬೇಕು.
ದೇವರ ಮಂದೆಯನ್ನು ಪಾಲಿಸುವುದು
ಬೈಬಲು ದೇವರ ಜನರನ್ನು ಸಾಕು ಕುರಿಗಳಂತೆ ಮತ್ತು ಅವರ ಹೊಣೆ ಹೊತ್ತವರನ್ನು ಕುರುಬರಂತೆ ಚಿತ್ರಿಸುತ್ತದೆ. ಯೆಹೋವನು ತಾನೇ ‘ನಮ್ಮ ಆತ್ಮಗಳ ಕುರುಬನೂ ಮತ್ತು ಮೇಲ್ವಿಚಾರಕನೂ’ ಆಗಿರುತ್ತಾನೆ. (1 ಪೇತ್ರ 2:25) ಯೇಸು ಕ್ರಿಸ್ತನು, “ಒಳ್ಳೇ ಕುರುಬನು,” ಅಪೊಸ್ತಲ ಪೇತ್ರನಿಗೆ: ‘ನನ್ನ ಕುರಿಮರಿಗಳನ್ನು ಮೇಯಿಸು, ನನ್ನ ಕುರಿಗಳನ್ನು ಕಾಯಿ, ನನ್ನ ಕುರಿಗಳನ್ನು ಮೇಯಿಸು,’ ಎಂದು ಹೇಳಿದಾಗ ಕುರಿಗಳಿಗೆ ಕನಿಕರದ ಆರೈಕೆಯು ದೊರಕಬೇಕೆಂಬ ಅವನ ಇಷ್ಟವನ್ನು ಅವನು ವ್ಯಕ್ತಪಡಿಸಿದನು. (ಯೋಹಾನ 10:11; 21:15-17) ಕ್ರೈಸ್ತ ಮೇಲ್ವಿಚಾರಕರು ‘ದೇವರ ಸಭೆಯ ಪಾಲನೆಯನ್ನು’ ಮಾಡಲು ಶಾಸ್ತ್ರೋಕ್ತವಾಗಿ ನಿಯೋಜಿಸಲ್ಪಟ್ಟಿರುತ್ತಾರೆ. (ಅ. ಕೃತ್ಯಗಳು 20:28) ಮತ್ತು ಆತ್ಮಿಕ ಕುರುಬರಂತೆ ಅವರ ಕೆಲಸವು ಉತ್ತಮ ವಾಸ್ತವ ಕುರುಬನ—ಧೈರ್ಯವಂತಿಕೆ, ಉದ್ಯೋಗಶೀಲತೆ, ಸಾಧನ ಸಂಪತ್ತು, ಮತ್ತು ಮುಖ್ಯವಾಗಿ, ಮಂದೆಯ ಒಳಿತಿಗಾಗಿರುವ ಹೃದಯಪೂರ್ವಕ ಚಿಂತೆಯ—ಗುಣಗಳನ್ನು ಕೇಳಿಕೊಳ್ಳುತ್ತದೆ.
ದೇವರ ಪ್ರವಾದಿ ಯೆಹೆಜ್ಕೇಲನ ದಿನಗಳಲ್ಲಿ, ಇಸ್ರಾಯೇಲಿನಲ್ಲಿ ಯೆಹೋವನ ಜನರ ಅಗತ್ಯತೆಗಳನ್ನು ಲಕ್ಷ್ಯಿಸಲು ನೇಮಿಸಲ್ಪಟ್ಟ ಕುರುಬರ ಬಹುಭಾಗವು ಅವರ ಕರ್ತವ್ಯಗಳನ್ನು ನೆರವೇರಿಸಲು ತಪ್ಪಿತು. ಹೆಚ್ಚಿನಾಂಶವು ಸತ್ಯ ಆರಾಧನೆಯನ್ನು ತೊರೆಯುವುದರೊಂದಿಗೆ, ದೇವರ ಮಂದೆಯು ಭೀಕರವಾಗಿ ಕಷ್ಟವನ್ನನುಭವಿಸಿತು. (ಯೆಹೆಜ್ಕೇಲ 34:1-10) ಇಂದು, ಕ್ರೈಸ್ತಪ್ರಪಂಚದ ವೈದಿಕರು, ಕ್ರೈಸ್ತ ಸಭೆ ಎಂದು ಕರೆಯಲ್ಪಡುವುದರ ಕುರುಬರಂತೆ ತಮ್ಮನ್ನು ತಾವೇ ಚಿತ್ರಿಸಿಕೊಳ್ಳುತ್ತಾರೆ, ಆದರೆ ಅದರ ಆತ್ಮಿಕವಾಗಿ ರೋಗಾವಸ್ಥೆಯ ಸ್ಥಿತಿಯು, ಯೇಸು ಭೂಮಿಯ ಮೇಲಿದ್ದಾಗ ಜನರನ್ನು ತಾತ್ಸಾರ ಮಾಡಿದವರು ಮತ್ತು ಅಪಪ್ರಯೋಗಿಸಿದವರು ಆದ ದುಷ್ಟ ಮೋಸಗಾರರಂತೆ ವೈದಿಕರಿರುವುದನ್ನು ರುಜುಪಡಿಸುತ್ತದೆ. ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರು “ಕುರಿಗಳ ಚಿಂತೆ” ಇಲ್ಲದ “ಕೂಲಿಯಾಳು” ಇದ್ದಂತಿದ್ದಾರೆ. (ಯೋಹಾನ 10:12, 13) ಅವರು ಯಾವುದೇ ವಿಧದಲ್ಲಿ ದೇವರ ಮಂದೆಯನ್ನು ಪಾಲಿಸಲು ಇಷ್ಟವುಳ್ಳವರು, ಸಮರ್ಥರು, ಯಾ ಅರ್ಹರು ಆಗಿರುವುದಿಲ್ಲ.
ನಿಜಕ್ಕೂ ಲಕ್ಷ್ಯಿಸುವ ಕುರುಬರು
ಯೆಹೋವನ ಮಂದೆಯನ್ನು ಪಾಲಿಸುವವರೆಲ್ಲರಿಗೆ ಯೇಸುವು ಪರಿಪೂರ್ಣ ಮಾದರಿಯನ್ನು ಇಟ್ಟನು. ಎಲ್ಲ ವಿಧಗಳಲ್ಲಿ ಆತನು ತನ್ನ ಶಿಷ್ಯರಿಗೆ ಪ್ರೀತಿಯುಳ್ಳವನು, ದಯಾಪರನು, ಕನಿಕರವುಳ್ಳಾತನು, ಮತ್ತು ಸಹಾಯಪೂರ್ಣನು ಆಗಿದ್ದನು. ಅಗತ್ಯತೆ ಇರುವವರಿಗಾಗಿ ಹುಡುಕಲು ಆತನು ಮೊದಲ ಹೆಜ್ಜೆಯನ್ನು ತೆಗೆದುಕೊಂಡನು. ಯೇಸುವು ಕಾರ್ಯಮಗ್ನನಾಗಿದ್ದರೂ ಮತ್ತು ಅನೇಕಬಾರಿ ಆಯಾಸಗೊಂಡಿದ್ದರೂ, ಆತನು ಯಾವಾಗಲೂ ಅವರ ಸಮಸ್ಯೆಗಳನ್ನು ಆಲಿಸಲು ಮತ್ತು ಅವರಿಗೆ ಪ್ರೋತ್ಸಾಹನೆಯನ್ನು ಕೊಡಲು ಸಮಯ ತೆಗೆದುಕೊಂಡನು. ಅವರ ಪರವಾಗಿ ತನ್ನ ಆತ್ಮವನ್ನು ಒಪ್ಪಿಸಿಕೊಡಲು ಆತನ ಇಷ್ಟಪೂರ್ವತೆಯು, ಪ್ರೀತಿಯ ಅಂತಿಮ ವ್ಯಕ್ತಪಡಿಸುವಿಕೆಯಾಗಿತ್ತು.—ಯೋಹಾನ 15:13.
ಇಂದು, ಎಲ್ಲ ನೇಮಿತ ಸಭೆಯ ಹಿರಿಯರು, ಮತ್ತು ಶುಶ್ರೂಷಾ ಸೇವಕರು ಕೂಡ, ಮಂದೆಯ ಕಡೆಗೆ ಈ ಜವಾಬ್ದಾರಿಯಲ್ಲಿ ಭಾಗಿಗಳಾಗುತ್ತಾರೆ. ಆದುದರಿಂದ, ಮತ್ತೊಂದು ದೇಶದಲ್ಲಿ ಅವರು ಪಡಕೊಳ್ಳಸಾಧ್ಯವಿರುವ ಪ್ರಾಪಂಚಿಕ ಪ್ರಯೋಜನಗಳು ಕೂಡ ಇವರಲ್ಲಿ ಹೆಚ್ಚಿನವರನ್ನು ಮತ್ತೊಂದು ದೇಶಕ್ಕೆ ಸ್ಥಳ ಬದಲಾಯಿಸುವುದಕ್ಕೆ ಮತ್ತು ಹೀಗೆ ಸಭೆಗಳು ಯಥೋಚಿತ ಸಹಾಯ ಮತ್ತು ಮೇಲ್ವಿಚಾರಣೆಯು ಇಲ್ಲದಿರುವಂತೆ ಬಿಡುವುದಕ್ಕೆ ಪ್ರೇರೇಪಿಸುವುದಿಲ್ಲ. ವ್ಯವಹರಿಸಲು ಕಷ್ಟಕರವಾದ “ಕಠಿನಕಾಲಗಳಲ್ಲಿ” ಜೀವಿಸುವುದರಿಂದ, ಮಂದೆಗೆ ಪ್ರೋತ್ಸಾಹನೆ ಮತ್ತು ಮಾರ್ಗದರ್ಶನದ ಅಗತ್ಯವಿದೆ. (2 ತಿಮೊಥೆಯ 3:1-5) “ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ” ಎಂಬಂತಿರುವ ಸೈತಾನನಿಗೆ ಕೆಲವರು ಬಲಿ ಬೀಳುವ ಒಂದು ಸದಾ ಅಸ್ತಿತ್ವದಲ್ಲಿರುವ ಅಪಾಯವು ಇದೆ. (1 ಪೇತ್ರ 5:8) ಈಗ ಹಿಂದೆಂದಿಗಿಂತಲೂ ಹೆಚ್ಚು, ಕ್ರೈಸ್ತ ಕುರುಬರು ‘ಅಕ್ರಮವಾಗಿ ನಡೆಯುವವರಿಗೆ ಬುದ್ಧಿ ಹೇಳುವುದು, ಮನಗುಂದಿದವರನ್ನು ಧೈರ್ಯಪಡಿಸುವುದು, ಬಲಹೀನರಿಗೆ ಆಧಾರವಾಗಿರುವುದು’ ಅತ್ಯಾವಶ್ಯಕವಾಗಿದೆ. (1 ಥೆಸಲೊನೀಕ 5:14) ದೃಢತೆಯಿಲ್ಲದವರು ಮಂದೆಯಿಂದ ಬಿದ್ದು ಹೋಗದಂತೆ ತಡೆಯುವಲ್ಲಿ ಅವರು ಸತತವಾಗಿ ಎಚ್ಚರದಿಂದಿರುವ ಅಗತ್ಯವಿದೆ.—1 ತಿಮೊಥೆಯ 4:1.
ಒಂದು ಕುರಿಗೆ ಯಾವಾಗ ಸಹಾಯದ ಅಗತ್ಯವಿದೆ ಎಂದು ಕುರುಬನು ಹೇಗೆ ನಿರ್ಧರಿಸಬಹುದು? ಹೆಚ್ಚು ಎದ್ದು ಕಾಣುವ ಚಿಹ್ನೆಗಳಲ್ಲಿ, ಕ್ರೈಸ್ತ ಕೂಟಗಳಿಗೆ ಹಾಜರಾಗಲು ತಪ್ಪುವುದು, ಕ್ಷೇತ್ರ ಸೇವೆಯಲ್ಲಿ ಅಕ್ರಮವಾಗಿ ಭಾಗವಹಿಸುವುದು, ಮತ್ತು ಇತರರೊಂದಿಗೆ ಹತ್ತಿರದ ಸಂಬಂಧವನ್ನು ತಪ್ಪಿಸಿಕೊಳ್ಳುವ ಪ್ರವೃತ್ತಿ ಇವೇ ಕೆಲವಾಗಿವೆ. ಕುರಿಗಳ ಮನೋಭಾವ ಮತ್ತು ಅವರ ಮಾತುಕತೆಗಳ ಪ್ರವೃತ್ತಿಯನ್ನು ಜಾಗ್ರತೆಯಿಂದ ಗಮನಿಸುವುದರ ಮೂಲಕವೂ ಬಲಹೀನತೆಗಳನ್ನು ಪತ್ತೆಬಚ್ಚಬಹುದು. ಪ್ರಾಯಶಃ ತೀವ್ರ ಅಸಮಾಧಾನದ ಭಾವನೆಗಳನ್ನು ತೋರಿಸುವುದರಿಂದ, ಅವರು ಇತರರ ಬಗ್ಗೆ ಠೀಕಿಸುವವರಾಗಿರಬಹುದು. ಅವರ ಸಂಭಾಷಣೆಯು ಆತ್ಮಿಕ ಗುರಿಗಳ ಮೇಲಿರುವುದಕ್ಕಿಂತ ಹೆಚ್ಚಾಗಿ ಪ್ರಾಪಂಚಿಕತೆಯ ಬೆನ್ನಟ್ಟುವಿಕೆಗಳ ಮೇಲೆ ಮಿತಿ ಮೀರಿ ಆತುಕೊಳ್ಳಬಲ್ಲದು. ಉತ್ಸುಕತೆ, ಆಶಾವಾದ, ಮತ್ತು ಸಂತೋಷದ ಸಾಮಾನ್ಯ ಕೊರತೆಯು ಅವರ ನಂಬಿಕೆ ಬಲಹೀನವಾಗಿದೆ ಎಂದು ಅರ್ಥೈಸಬಲ್ಲದು. ಒಂದು ನಿರುತ್ಸಾಹದ ಚಹರೆಯು ಅವರು ವಿರೋಧಿಸುವ ಸಂಬಂಧಿಕರಿಂದ ಯಾ ಲೌಕಿಕ ಸ್ನೇಹಿತರಿಂದ ಒತ್ತಡಕ್ಕೊಳಪಡುತ್ತಿದ್ದಾರೆ ಎಂಬುದರ ಚಿಹ್ನೆಯಾಗಿರಬಹುದು. ಈ ಚಿಹ್ನೆಗಳನ್ನು ಗಮನಿಸುವುದರ ಮೂಲಕ, ಯಾವ ವಿಧದ ಸಹಾಯದ ಅಗತ್ಯವಿದೆ ಎಂದು ನಿರ್ಧರಿಸುವುದರ ಕಡೆಗೆ ಕುರುಬನು ಕೆಲಸ ಮಾಡಬಲ್ಲನು.
ಜೊತೆ ವಿಶ್ವಾಸಿಗೆ ಸಹಾಯ ಮಾಡಲು ಭೇಟಿ ನೀಡುವಾಗ, ಕ್ರೈಸ್ತ ಕುರುಬರು ಅವರ ಮುಖ್ಯ ಉದ್ದೇಶವನ್ನು ಮನಸ್ಸಿನಲ್ಲಿಡುವ ಅಗತ್ಯವಿದೆ. ಅದು ಕೇವಲ ಕ್ಷುಲ್ಲಕವಾದವುಗಳ ಕುರಿತ ಸಂಭಾಷಣೆಯೊಂದಿಗಿನ ಸಾಮಾಜಿಕ ಸಂದರ್ಶನವಾಗಿರುವುದಿಲ್ಲ. ಅಪೊಸ್ತಲ ಪೌಲನು ಅವನ ಸಹೋದರರನ್ನು ಸಂದರ್ಶಿಸುವ ಗುರಿಯು ‘ಅವರಿಗೆ ಕೆಲವು ಪಾರಮಾರ್ಥಿಕ ವರವನ್ನು ನೀಡಿ ದೃಢರಾಗುವುದಕ್ಕಾಗಿ ಮತ್ತು ಒಬ್ಬರಿಗೊಬ್ಬರು ಪ್ರೋತ್ಸಾಹನೆಯನ್ನು ನೀಡುವುದಕ್ಕಾಗಿ’ ಇತ್ತು. (ರೋಮಾಪುರ 1:11, 12) ಇದನ್ನು ಪೂರೈಸಲು, ಪೂರ್ವ ತಯಾರಿಯು ಅಗತ್ಯ.
ಮೊದಲಾಗಿ, ವ್ಯಕ್ತಿಯನ್ನು ವಿಶ್ಲೇಷಿಸಿರಿ, ಮತ್ತು ಅವನ ಆತ್ಮಿಕ ಸ್ಥಿತಿಯು ಏನಾಗಿರುತ್ತದೆಂದು ನಿರ್ಧರಿಸಲು ಪ್ರಯತ್ನಿಸಿರಿ. ಅದನ್ನು ಸ್ಥಾಪಿಸಿಯಾದ ಅನಂತರ, ಯಾವ ವಿಧದ ಮಾರ್ಗದರ್ಶನ, ಪ್ರೋತ್ಸಾಹನೆ, ಯಾ ಸಲಹೆಯು ಹೆಚ್ಚು ಪ್ರಯೋಜನಕಾರಿ ಎಂಬುದಕ್ಕೆ ಸ್ವಲ್ಪ ಗಮನವನ್ನು ಕೊಡಿರಿ. ದೇವರ ವಾಕ್ಯವಾದ ಬೈಬಲು, ಮಾಹಿತಿಯ ಪ್ರಮುಖ ಉಗಮವಾಗಿರಬೇಕು ಯಾಕಂದರೆ ಅದು “ಕಾರ್ಯಸಾಧಕವಾದದ್ದು” ಆಗಿದೆ. (ಇಬ್ರಿಯ 4:12) ವಿಶೇಷ ಸಮಸ್ಯೆಗಳಿಗೆ ಎದುರಾದ ಕುರಿಯ ನಿರ್ದಿಷ್ಟ ಅಗತ್ಯಗಳೊಂದಿಗೆ ವ್ಯವಹರಿಸುವ ಲೇಖನಗಳಿಗಾಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೋಡಬಹುದು. ಯೆಹೋವನ ಸಾಕ್ಷಿಗಳ ವರ್ಷ ಪುಸ್ತಕ ದಲ್ಲಿ ಹುರಿದುಂಬಿಸುವ ಮತ್ತು ನವಚೈತನ್ಯವನ್ನುಂಟು ಮಾಡುವ ಅನುಭವಗಳನ್ನು ಕಂಡುಕೊಳ್ಳಬಹುದು. ‘ವ್ಯಕ್ತಿಯ ಭಕ್ತಿವೃದ್ಧಿಯನ್ನುಂಟು ಮಾಡುವುದಕ್ಕೆ ಅನುಕೂಲವಾಗುವ’ ಆತ್ಮಿಕವಾದವುಗಳನ್ನು ಕೊಡುವುದೇ ಗುರಿಯಾಗಿರುತ್ತದೆ.—ರೋಮಾಪುರ 15:2.
ಭಕ್ತಿವೃದ್ಧಿಯನ್ನುಂಟು ಮಾಡುವ ಪಾಲನೆ
ಸಂರಕ್ಷಣೆಗಾಗಿ ಮತ್ತು ಪರಾಮರಿಕೆಗಾಗಿ ಅವುಗಳು ಅವನ ಮೇಲೆ ಆತುಕೊಳ್ಳುತ್ತವೆಂದು ಅಕ್ಷರಶಃ ಕುರಿಗಳ ಮಂದೆಯ ಕುರುಬನು ತಿಳಿದಿರುತ್ತಾನೆ. ದಾರಿ ತಪ್ಪುವುದು, ಅಸ್ವಸ್ಥತೆ, ಬಳಲಿಕೆ, ಮತ್ತು ಕೊಂದು ತಿನ್ನುವವುಗಳ ಮೂಲಕ ಹೆಚ್ಚು ಸಾಮಾನ್ಯ ಆಪತ್ತುಗಳು ಬರುತ್ತವೆ. ಅದೇ ವಿಧದಲ್ಲಿ ಆತ್ಮಿಕ ಕುರುಬನು ಮಂದೆಯ ಒಳಿತಿಗೆ ಬೆದರಿಕೆಯನ್ನೊಡ್ಡುವ ಸದೃಶ ಆಪತ್ತುಗಳ ಗುರುತನ್ನು ಹಿಡಿದು, ಅವುಗಳೊಂದಿಗೆ ವ್ಯವಹರಿಸಬೇಕು. ಮುಂದಿನವು ಕೆಲವು ರೂಢಿಯ ಸಮಸ್ಯೆಗಳು ಮತ್ತು ಆತ್ಮಿಕವಾಗಿ ಭಕ್ತಿವೃದ್ಧಿ ಮಾಡುವ ಮಾಹಿತಿಯನ್ನು ಕೊಡಲು ಏನನ್ನು ಹೇಳಬಹುದಾಗಿದೆ ಎಂಬ ಕೆಲವು ಸಲಹೆಗಳಾಗಿವೆ.
(1) ಸುಲಭವಾಗಿ ಮೋಸಹೋಗುವ ಕುರಿಯಂತೆ, ಕೆಲವು ಕ್ರೈಸ್ತರು ನಿಷ್ಕಪಟದ್ದಾಗಿ ಮತ್ತು ಸುಖಾನುಭವದ್ದಾಗಿ ತೋರುವ ಆಕರ್ಷಣೆಗಳ ಮೂಲಕ ಅವರು ಸೆಳೆಯಲ್ಪಟ್ಟದ್ದರ ಕಾರಣ, ದೇವರ ಮಂದೆಯಿಂದ ದಾರಿತಪ್ಪಿರುತ್ತಾರೆ. ಪ್ರಾಪಂಚಿಕತೆ, ವಿನೋದಾವಳಿ, ಯಾ ಮನೋರಂಜನೆಗಳೊಂದಿಗೆ ಸಂಬಂಧಿತ ಗುರಿಗಳನ್ನು ಬೆನ್ನಟ್ಟುವುದರ ಕಾರಣದಿಂದಾಗಿ ಅವರು ಅಪಕರ್ಷಿಸಿಲ್ಪಡಬಹುದು, ತೇಲಿ ಹೋಗಲೂಬಹುದು. (ಇಬ್ರಿಯ 2:1) ಅಂಥ ವ್ಯಕ್ತಿಗಳಿಗೆ ಸಮಯಗಳ ಜರೂರಿಯ, ಯೆಹೋವನ ಸಂಸ್ಥೆಗೆ ನಿಕಟವಾಗಿಟ್ಟುಕೊಳ್ಳುವ ಅಗತ್ಯದ, ಮತ್ತು ಜೀವಿತದಲ್ಲಿ ರಾಜ್ಯದ ಅಭಿರುಚಿಗಳನ್ನು ಮೊದಲಾಗಿ ಇಡುವ ಪ್ರಾಮುಖ್ಯತೆಯ ನೆನಪು ಹುಟ್ಟಿಸಬಹುದು. (ಮತ್ತಾಯ 6:25-33; ಲೂಕ 21:34-36; 1 ತಿಮೊಥೆಯ 6:8-10) ಮೇ 15, 1984ರ ದ ವಾಚ್ಟವರ್ನ, 8-11 ಪುಟಗಳಲ್ಲಿ, “ಕೀಪ್ ಯೂವರ್ ಬ್ಯಾಲನ್ಸ್—ಹೌ?” ಎಂಬ ಲೇಖನದಲ್ಲಿ ಸಹಾಯಕರ ಸಲಹೆಯು ದೊರಕುತ್ತದೆ.
(2) ಅಸ್ವಸ್ಥತೆಗೊಳಗಾದ ಕುರಿಗೆ ಚಿಕಿತ್ಸೆಯನ್ನು ಒಬ್ಬ ಕುರುಬನು ಒದಗಿಸುವ ಅಗತ್ಯವಿದೆ. ಅದೇ ರೀತಿಯಲ್ಲಿ, ಯಾರು ಅವರ ಜೀವಿತದಲ್ಲಿನ ನಕಾರಾತ್ಮಕ ಅಂಶಗಳ ಕಾರಣ ಆತ್ಮಿಕವಾಗಿ ಅಸ್ವಸ್ಥರಾಗಿದ್ದಾರೋ ಅವರಿಗೆ ಆತ್ಮಿಕ ಕುರುಬರು ಸಹಾಯ ಮಾಡಬೇಕು. (ಯಾಕೋಬ 5:14, 15) ಅವರು ನಿರುದ್ಯೋಗಿಗಳಾಗಿರಬಹುದು, ಗಂಭೀರ ಆರೋಗ್ಯ ಸಮಸ್ಯೆಗಳಿರಬಹುದು, ಯಾ ಅವರ ಕುಟುಂಬ ಜೀವಿತದಲ್ಲಿ ತೊಂದರೆಗಳನ್ನು ಅನುಭವಿಸುತ್ತಿರಬಹುದು. ಅಂಥ ವ್ಯಕ್ತಿಗಳಿಗೆ ದೇವ ಜನರೊಂದಿಗಿನ ಸಹವಾಸದ ಯಾ ಆತ್ಮಿಕ ಆಹಾರದ ಹಸಿವಿಲ್ಲದಿರಬಹುದು. ಯೆಹೋವನು ಅವರನ್ನು ಲಕ್ಷ್ಯಿಸುತ್ತಾನೆ ಮತ್ತು ಕಷ್ಟಮಯ ಸಮಯಗಳಲ್ಲಿ ಅವರಿಗೆ ಸಾಮರ್ಥ್ಯ ಕೊಡುವನೆಂದು ಅವರಿಗೆ ಖಚಿತಪಡಿಸುವ ಅಗತ್ಯವಿದೆ. (ಕೀರ್ತನೆ 55:22; ಮತ್ತಾಯ 18:12-14; 2 ಕೊರಿಂಥ 4:16-18; 1 ಪೇತ್ರ 1:6, 7; 5:6,7) ಜೂನ್ 1, 1980ರ ದ ವಾಚ್ಟವರ್ನ, 12-15 ಪುಟಗಳಲ್ಲಿ, “ಲುಕ್ ಸ್ಟ್ರೇಟ್ ಅಹೆಡ್ ಆ್ಯಜ್ ಎ ಕ್ರಿಶ್ಚನ್” ಎಂಬ ಲೇಖನವನ್ನು ಕೂಡ ಪರಾಮರ್ಶಿಸುವುದು ಸಹಾಯಕರವಾಗಬಲ್ಲದು.
(3) ಕುರುಬನು ಬಳಲಿಹೋಗುವ ಕುರಿಗಾಗಿ ಎಚ್ಚರಿಕೆಯಿಂದ ನೋಡಿಕೊಂಡಿರಬೇಕು. ಕೆಲವರು ಅನೇಕ ವರುಷಗಳ ಕಾಲಾವಧಿಯಿಂದ ಯೆಹೋವನ ಸೇವೆಯಲ್ಲಿ ನಂಬಿಗಸ್ತಿಕೆಯಿಂದ ತಾಳಿಕೊಂಡಿದ್ದಾರೆ. ಅವರು ಅನೇಕ ಪರೀಕ್ಷೆಗಳ ಮತ್ತು ಶೋಧನೆಗಳ ಮೂಲಕ ಹೋರಾಡಿದ್ದಾರೆ. ಈಗ ಅವರು ಒಳ್ಳೇದನ್ನು ಮಾಡುವುದರಲ್ಲಿ ಬಳಲುವ ಸಂಕೇತಗಳನ್ನು ತೋರಿಸುತ್ತಾರೆ ಮತ್ತು ತೀವ್ರವಾಗಿ ಸಾರುವ ಕಾರ್ಯಕ್ಕಾಗಿ ಇರುವ ಅಗತ್ಯದ ಕುರಿತು ಸಂಶಯಗಳನ್ನು ಕೂಡ ವ್ಯಕ್ತಪಡಿಸಬಹುದು. ಅವರ ಹುರುಪನ್ನು ಪುನಶ್ಚೈತನ್ಯಗೊಳಿಸುವ, ಯೇಸು ಕ್ರಿಸ್ತನ ಅನುಕರಣೆಯಲ್ಲಿ ದೇವರನ್ನು ಪೂರ್ಣ ಹೃದಯದಿಂದ ಸೇವಿಸುವುದರ ಮೂಲಕ ಬರುವ ಸಂತೋಷಗಳಿಗಾಗಿ ಮತ್ತು ಆಶೀರ್ವಾದಗಳಿಗಾಗಿ ಅವರ ಗಣ್ಯತೆಯನ್ನು ನವೀಕರಿಸುವ ಅಗತ್ಯವಿದೆ. (ಗಲಾತ್ಯ 6:9, 10; ಇಬ್ರಿಯ 12:1-3) ಯೆಹೋವನು ಅವರ ನಿಷ್ಠೆಯ ಸೇವೆಯನ್ನು ಗಣ್ಯ ಮಾಡುತ್ತಾನೆ ಮತ್ತು ಆತನ ಸ್ತುತಿಗಾಗಿ ಮುಂದಿನ ಚಟುವಟಿಕೆಗಳಿಗಾಗಿ ಆತನು ಅವರನ್ನು ಬಲಗೊಳಿಸಬಹುದೆಂದು ಅವರು ಕಾಣುವಂತೆ ಪ್ರಾಯಶಃ ಅವರಿಗೆ ಸಹಾಯ ಮಾಡಬಹುದು. (ಯೆಶಾಯ 40:29, 30; ಇಬ್ರಿಯ 6:10-12) ಜುಲೈ 15, 1988ರ ದ ವಾಚ್ಟವರ್ನ, 9-14 ಪುಟಗಳಲ್ಲಿ, “ಡೂ ನಾಟ್ ಗಿವ್ ಅಪ್ ಇನ್ ಡೂಯಿಂಗ್ ಹ್ವಾಟ್ ಇಸ್ ಫೈನ್” ಎಂಬ ಲೇಖನದಿಂದ ವಿಚಾರಗಳನ್ನು ಹಂಚಿಕೊಳ್ಳುವುದು ಪ್ರಯೋಜನಕಾರಿಯಾಗಬಲ್ಲದು.
(4) ಗಾಯಗೊಳ್ಳುವ ಕುರಿಯಂತೆ, ಕೆಲವು ಕ್ರೈಸ್ತರು ಯಾವುದು ಹೊಲಸು ನಡತೆ ಎಂಬುದಾಗಿ ಅವರು ಗ್ರಹಿಸುತ್ತಾರೋ ಅದರಿಂದ ನೋವುಗೊಂಡಿರುತ್ತಾರೆ. ಆದರೂ, ನಾವು ಇತರರನ್ನು ಕ್ಷಮಿಸುವವರಾಗಿರುವಲ್ಲಿ, ನಮ್ಮ ಸ್ವರ್ಗೀಯ ತಂದೆಯು ನಮಗೆ ಬೇಕಾದ ಕ್ಷಮೆಯನ್ನು ಕೊಡುವನು. (ಕೊಲೊಸ್ಸೆ 3:12-14; 1 ಪೇತ್ರ 4:8) ಕೆಲವು ಸಹೋದರ ಯಾ ಸಹೋದರಿಯರು ಅನ್ಯಾಯವೆಂದು ಅವರಿಗೆ ಭಾಸವಾದ ಬುದ್ಧಿವಾದ ಯಾ ತಿದ್ದುಪಾಟನ್ನು ಪಡೆದಿರಬಹುದು. ಅದಾಗ್ಯೂ, ನಾವೆಲ್ಲರೂ ಆತ್ಮಿಕ ಸೂಚನೆ ಮತ್ತು ತಿದ್ದುಪಾಟಿನಿಂದ ಪ್ರಯೋಜನ ಹೊಂದಬಲ್ಲೆವು, ಮತ್ತು ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಶಿಕ್ಷಿಸುತ್ತಾನೆ ಎಂದು ತಿಳಿಯುವುದು ಸಂತೈಸುವಿಕೆಯದ್ದಾಗಿದೆ. (ಇಬ್ರಿಯ 12:4-11) ಇತರರು, ಅವರಿಗೆ ತಾವು ಅರ್ಹರಾಗಿರುವರೆಂದು ಭಾವಿಸುವ ಸೇವಾ ಸುಯೋಗಗಳು ಕೊಡಲ್ಪಡಲಿಲ್ಲವಾದ ಕಾರಣ, ಅವರ ಮತ್ತು ಸಭೆಯ ನಡುವೆ ಬಿರುಕನ್ನುಂಟುಮಾಡುವಂತೆ ತೀವ್ರ ಅಸಮಾಧಾನಪಡುವುದಕ್ಕೆ ತಮ್ಮನ್ನು ಬಿಟ್ಟುಕೊಟ್ಟಿರುತ್ತಾರೆ. ಆದರೆ ಯೆಹೋವನ ಸಂಸ್ಥೆಯಿಂದ ನಾವು ನಮ್ಮನ್ನು ದೂರವಿಡುವಲ್ಲಿ, ರಕ್ಷಣೆಗಾಗಿ ಮತ್ತು ನಿಜ ಸಂತೋಷಕ್ಕಾಗಿ ಹೋಗಲು ಇನ್ಯಾವ ಸ್ಥಳವೂ ಇರುವುದಿಲ್ಲ. (ಹೋಲಿಸಿ ಯೋಹಾನ 6:66-69.) ಈ ವಿಷಯದಲ್ಲಿ, ಆಗಸ್ಟ್ 15, 1988ರ ದ ವಾಚ್ಟವರ್ನ, 9-14 ಪುಟಗಳಲ್ಲಿ ದೊರಕುವ, “ಮೆಂಟೇನಿಂಗ್ ಅವರ್ ಕ್ರಿಶ್ಚನ್ ವನ್ನೆಸ್” ಎಂಬ ಲೇಖನದಲ್ಲಿ ಸಹಾಯಕಾರಿ ಮಾಹಿತಿಯು ಕಂಡುಬರುತ್ತದೆ.
(5) ಕೊಂದು ತಿನ್ನುವವುಗಳಿಂದ ಕುರಿಗಳನ್ನು ಕಾಪಾಡಬೇಕು. ತುಲನಾತ್ಮಕ ವಿಧದಲ್ಲಿ, ನಂಬದ ಸಂಬಂಧಿಕರ ಯಾ ಜೊತೆ ಕೆಲಸದವರ ಮೂಲಕ ಕೆಲವರು ವಿರೋಧಿಸಲ್ಪಡಬಹುದು ಮತ್ತು ಹೆದರಿಸಲ್ಪಡಬಹುದು. ದೇವರಿಗೆ ಅವರ ಸೇವೆಯನ್ನು ಅವರು ಕಡಮೆ ಮಾಡುವಂತೆ ಯಾ ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸುವಂತೆ ಮಾಡುವ ಒತ್ತಡಗಳು ಪ್ರಯೋಗಿಸಲ್ಪಟ್ಟಾಗ ಅವರ ಸಮಗ್ರತೆಯು ಆಕ್ರಮಣಕ್ಕೊಳಗಾಗಬಹುದು. ಆದಾಗ್ಯೂ, ವಿರೋಧವನ್ನು ನಿರೀಕ್ಷಿಸಬೇಕು ಮತ್ತು ನಿಜತ್ವದಲ್ಲಿ ನಾವು ಯೇಸು ಕ್ರಿಸ್ತನ ನಿಜ ಶಿಷ್ಯರೆಂಬುದರ ಪುರಾವೆಗಳಲ್ಲಿ ಅದು ಒಂದಾಗಿದೆಯೆಂದು ಅರಿಯುಂತೆ ಸಹಾಯ ಮಾಡುವಾಗ ಅವರು ಬಲಗೊಳಿಸಲ್ಪಡುವರು. (ಮತ್ತಾಯ 5:11, 12; 10:32-39; 24:9; 2 ತಿಮೊಥೆಯ 3:12) ಅವರು ನಂಬಿಗಸ್ತರಾಗಿರುವಲ್ಲಿ, ಯೆಹೋವನು ಅವರನ್ನೆಂದೂ ತೊರೆಯನು ಮತ್ತು ಅವರ ತಾಳ್ಮೆಗೆ ಬಹುಮಾನವನ್ನೀಯುವನು ಎಂದು ಅವರಿಗೆ ತೋರಿಸಿಕೊಡುವುದು ಪ್ರಯೋಜನಕಾರಿಯಾಗಿರಬಲ್ಲದು. (2 ಕೊರಿಂಥ 4:7-9; ಯಾಕೋಬ 1:2-4, 12; 1 ಪೇತ್ರ 5:8-10) ಎಪ್ರಿಲ್ 15, 1982ರ ದ ವಾಚ್ಟವರ್ನ, 21-7 ಪುಟಗಳಲ್ಲಿನ, “ಎಂಡ್ಯೂರಿಂಗ್ ಜಾಯ್ಫುಲ್ಲಿ ಡಿಸ್ಪೈಟ್ ಪರ್ಸಿಕ್ಯೂಷನ್” ಎಂಬ ಶಿರೋನಾಮದ ಲೇಖನವು ಹೆಚ್ಚಿನ ಪ್ರೋತ್ಸಾಹನೆಯನ್ನು ಒದಗಿಸುತ್ತದೆ.
ಕುರುಬರೇ—ನಿಮ್ಮ ಜವಾಬ್ದಾರಿಗಳನ್ನು ನೆರವೇರಿಸಿರಿ
ದೇವರ ಮಂದೆಯ ಅಗತ್ಯಗಳು ಬಹಳಷ್ಟಿವೆ, ಮತ್ತು ತಕ್ಕ ಕಾವಲು ಪರಾಮರಿಕೆಯು ತಗಾದೆಯ ಕೆಲಸ. ಆದುದರಿಂದ ಕ್ರೈಸ್ತ ಕುರುಬರು ಕನಿಕರವುಳ್ಳವರು, ನಿಜ ಚಿಂತೆಯುಳ್ಳವರು, ಮತ್ತು ಸಹಾಯಕಾರಿಯಾಗಿರುವುದರಲ್ಲಿ ಅಭಿರುಚಿಯುಳ್ಳವರು ಆಗಿರಬೇಕು. ತಾಳ್ಮೆ ಮತ್ತು ವಿವೇಚನೆಯು ಪ್ರಾಮುಖ್ಯ. ಕೆಲವು ವ್ಯಕ್ತಿಗಳಿಗೆ ಸೂಚನೆ ಮತ್ತು ಬುದ್ಧಿವಾದವು ಬೇಕಾಗಿರುವಾಗ, ಇತರರು ಪ್ರೋತ್ಸಾಹನೆಯಿಂದ ಹೆಚ್ಚಿನ ಪ್ರಯೋಜನ ಹೊಂದುತ್ತಾರೆ. ಕೆಲವು ಸಂದರ್ಭಗಳಲ್ಲಿ ಕೆಲವೇ ವೈಯಕ್ತಿಕ ಭೇಟಿಗಳು ಸಾಕಾಗಬಹುದು, ಆದರೆ ಇತರ ಸಂದರ್ಭಗಳಲ್ಲಿ ಕ್ರಮವಾದ ಬೈಬಲಿನ ಅಧ್ಯಯನದ ಅವಶ್ಯಕತೆ ಇರಬಹುದು. ಪ್ರತಿಯೊಂದು ಸ್ಥಿತಿಯಲ್ಲಿ ವ್ಯಕ್ತಿಯು ಉತ್ತಮ ಅಧ್ಯಯನ ಅಭ್ಯಾಸವನ್ನು ಆರಂಭಿಸಲು, ಸಭಾ ಕೂಟಗಳ ಹಾಜರಿಯಲ್ಲಿ ಕ್ರಮವಾಗಲು ಯಾ ಕ್ರಮವಾಗಿ ಮುಂದುವರಿಸಲು, ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ಕ್ರಿಯಾಶೀಲ ಭಾಗವಹಿಸುವಿಕೆಯಲ್ಲಿ ಆನಂದಿಸಲು ಪ್ರೇರೇಪಿಸುವ ಆತ್ಮಿಕವಾಗಿ ಭಕ್ತಿ ವೃದ್ಧಿಯನ್ನುಂಟು ಮಾಡುವ ಮಾರ್ಗದರ್ಶನ ಯಾ ಪ್ರೀತಿಯ ಹಿತೋಪದೇಶವನ್ನು ಕೊಡುವುದು ಆದ್ಯ ಗುರಿಯಾಗಿರುತ್ತದೆ. ಜೊತೆ ವಿಶ್ವಾಸಿಗಳಿಗೆ ಸಹಾಯಿಸುವ ಮತ್ತು ಯೆಹೋವನ ಪವಿತ್ರಾತ್ಮದ ಸರಾಗ ಹರಿಯುವಿಕೆಗೆ ದಾರಿಯನ್ನು ತೆರೆಯುವಂತೆ ಅವರಿಗೆ ಸಹಾಯ ಮಾಡಲು, ಇವುಗಳು ಪ್ರಮುಖ ದಾರಿಗಳಾಗಿವೆ.
ಆ ರೀತಿಯ ಬೆಂಬಲವನ್ನು ಒದಗಿಸುವ ಕುರುಬರು ದೇವರ ಮಂದೆಗಾಗಿ ಅತಿ ಮೌಲ್ಯದ ಸೇವೆಯನ್ನು ನಿರ್ವಹಿಸುತ್ತಾರೆ. (ನವಂಬರ 15, 1985ರ ದ ವಾಚ್ಟವರ್, 23-7 ಪುಟಗಳನ್ನು ನೋಡಿರಿ.) ಆತ್ಮಿಕ ಕುರುಬರು ಏನನ್ನು ಮಾಡುತ್ತಾರೋ ಅದು ಮಂದೆಯ ಮೂಲಕ ಬಹಳವಾಗಿ ಗಣ್ಯಮಾಡಲ್ಪಡುತ್ತದೆ. ಅಂಥ ಸಹಾಯವನ್ನು ಪಡೆದಾದ ಅನಂತರ, ಒಂದು ಕುಟುಂಬವು ತಿಳಿಸಿದ್ದು: ‘ನಾವು 22 ವರುಷಗಳಿಂದ ಸತ್ಯದಲ್ಲಿದ್ದ ಬಳಿಕ, ಪ್ರಾಪಂಚಿಕತೆಯಿಂದಾಗಿ ಲೋಕದೊಳಗೆ ಸೆಳೆಯಲ್ಪಟ್ಟೆವು. ನಾವು ಅನೇಕ ಬಾರಿ ಕೂಟಗಳಿಗೆ ಹಾಜರಾಗಲು ಬಯಸುತ್ತಿದ್ದೆವು, ಆದರೆ ಕೂಟಗಳಿಗೆ ಹಾಜರಾಗುವದರಲ್ಲಿ ಯಶಸ್ವಿಗಳಾಗಲಿಲ್ಲ. ನಾವು ನಿಜಕ್ಕೂ ಸೈತಾನನ ವ್ಯವಸ್ಥೆಯೊಳಗೆ ಸರಿಹೊಂದಲಿಲ್ಲ, ಆದುದರಿಂದ ನಾವು ಪೂರ್ಣವಾಗಿ ಅಸಂಗತರೂ, ಬೇರ್ಪಡಿಸಲ್ಪಟ್ಟವರೂ ಆದೆವು. ಇದು ನಮ್ಮನ್ನು ಆಶಾಭಂಗಗೊಳ್ಳುವಂತೆ ಮತ್ತು ಖಿನ್ನರಾಗುವಂತೆ ಮಾಡಿತು. ನಮಗೆ ಪ್ರೋತ್ಸಾಹನೆಯ ಮಾತುಗಳು ಬೇಕಾಗಿದ್ದವು. ಒಬ್ಬ ಹಿರಿಯನು ನಮಗೆ ಭೇಟಿಯನ್ನಿತ್ತಾಗ, ನಮ್ಮ ಮನೆಯಲ್ಲಿ ಬೈಬಲ್ ಅಧ್ಯಯನದ ಒದಗಿಸುವಿಕೆಯನ್ನು ಉಲ್ಲಾಸದಿಂದ ಸ್ವೀಕರಿಸಿದೆವು. ಈಗ ನಾವೆಲ್ಲರೂ ಯೆಹೋವನ ಭದ್ರ ಸಂಸ್ಥೆಯೊಳಗೆ ಹಿಂದಿರುಗಿದ್ದೇವೆ. ನನಗನಿಸುವ ಸಂತೋಷವನ್ನು ನನಗೆ ವ್ಯಕ್ತಪಡಿಸಲು ಅಸಾಧ್ಯ!’
ನಮ್ಮ ದಾರಿ ತಪ್ಪುವ ಯಾ ನಿರುತ್ಸಾಹಗೊಂಡ ಸಹೋದರರು ಮತ್ತು ಸಹೋದರಿಯರು ಆತ್ಮಿಕವಾಗಿ ಪುನಶ್ಚೈತನ್ಯಗೊಳಿಸಲ್ಪಟ್ಟಾಗ ಮತ್ತು ಪುನಃ ಕ್ರಿಯಾಶೀಲರಾಗುವಂತೆ ಮಾಡಲ್ಪಟ್ಟಾಗ ಹೆಚ್ಚಿನ ಆನಂದಕ್ಕೆ ಕಾರಣ ಇದೆ. (ಲೂಕ 15:4-7) ಅವರು “ಹಟ್ಟಿಯಲ್ಲಿನ ಕುರಿಗಳಂತೆ” ಒಂದಾಗುವಾಗ ಆತನ ಜನರ ಕಡೆಗಿನ ಯೆಹೋವನ ಉದ್ದೇಶವು ನೆರವೇರುತ್ತದೆ. (ಮೀಕ 2:12) ಈ ಭದ್ರ ಆಶ್ರಯದಲ್ಲಿ, ಉತ್ತಮ ಕುರುಬ ಯೇಸು ಕ್ರಿಸ್ತನ ಸಹಾಯದೊಂದಿಗೆ ಅವರು ‘ತಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುತ್ತಾರೆ.’ (ಮತ್ತಾಯ 11:28-30) ಲೋಕವ್ಯಾಪಕ ಐಕ್ಯ ಮಂದೆಯು ಆತ್ಮಿಕ ಆಹಾರದ ಹೇರಳತೆಯೊಂದಿಗೆ ಮಾರ್ಗದರ್ಶನ, ಆದರಣೆ, ಮತ್ತು ಸಂರಕ್ಷಣೆಯನ್ನು ಪಡೆಯುತ್ತದೆ.
ಇಂದು, ಈ ಪಾಲನೆಯ ಚಟುವಟಿಕೆಯಿಂದ, ಯೆಹೋವನು ಆತನ ಪ್ರಾಚೀನ ವಾಗ್ದಾನದೊಂದಿಗೆ ಸರಿಹೊಂದುವ ಒಂದು ಪ್ರೀತಿಯ ಕೆಲಸವನ್ನು ಪೂರೈಸುತ್ತಿದ್ದಾನೆ: “ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು. . . . ಚೆಲ್ಲಾಪಿಲಿಯ್ಲಾದ ಎಲ್ಲಾ ಸ್ಥಳಗಳಿಂದ ಅವುಗಳನ್ನು ಬಿಡಿಸಿ . . . ಅವುಗಳಿಗೆ ಒಳ್ಳೇಯ ಮೇವನ್ನು ಮೇಯಿಸುವೆನು; . . . ತಪ್ಪಿಸಿಕೊಂಡದನ್ನು ಹುಡುಕುವೆನು, . . . ದುರ್ಬಲವಾದದ್ದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು.” (ಯೆಹೆಜ್ಕೇಲ 34:11-16) ಯೆಹೋವನು ನಮ್ಮ ಕುರುಬನೆಂಬುದನ್ನು ತಿಳಿಯುವುದರಲ್ಲಿ ಎಂಥ ಆದರಣೆಯು ಇದೆ!—ಕೀರ್ತನೆ 23:1-4.
ದೇವರ ಮಂದೆಯನ್ನು ಪಾಲಿಸಲು ದೈವಿಕ ಒದಗಿಸುವಿಕೆಗಳ ಕಾರಣ, ಯೆಹೋವನ ಸೇವಕರೋಪಾದಿ ನಾವು ದಾವೀದನ ಭಾವನೆಗಳಲ್ಲಿ ಭಾಗಿಗಳಾಗಬಹುದು, ಆತನಂದದ್ದು: “ನಾನು ನಿರ್ಭಯವಾಗಿರುವದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು; ಯಾಕಂದರೆ ಯೆಹೋವನೇ, ನಾನು ಯಾವ ಅಪಾಯವೂ ಇಲ್ಲದೆ ಸುರಕ್ಷಿತನಾಗಿರುವಂತೆ ನೀನು ಕಾಪಾಡುತ್ತೀ.” (ಕೀರ್ತನೆ 4:8) ಹೌದು, ಯೆಹೋವನ ಜನರು ಆತನ ಪ್ರೀತಿಯ ಪರಾಂಬರಿಕೆಯಲ್ಲಿ ಭದ್ರತೆಯ ಭಾವನೆಯನ್ನು ಹೊಂದಿರುತ್ತಾರೆ ಮತ್ತು ಕ್ರೈಸ್ತ ಹಿರಿಯರು ಚಿಕ್ಕ ಕುರಿಗಳನ್ನು ಕನಿಕರದಿಂದ ಪಾಲಿಸುವುದಕ್ಕಾಗಿ ಅವರು ಅಭಾರಿಗಳಾಗಿದ್ದಾರೆ.
[ಪುಟ 20,21 ರಲ್ಲಿರುವ ಚಿತ್ರ ಕೃಪೆ]
Potter’s Complete Bible Encyclopedia