“ದೇವಾ, ನನ್ನನ್ನು ಪರೀಕ್ಷಿಸಿ ತಿಳಿದುಕೋ”
“ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ. . . . ಸನಾತನಮಾರ್ಗದಲ್ಲಿ ನನ್ನನ್ನು ನಡಿಸು.”—ಕೀರ್ತನೆ 139:23, 24.
1. ಯೆಹೋವನು ತನ್ನ ಸೇವಕರೊಂದಿಗೆ ಹೇಗೆ ವ್ಯವಹರಿಸುತ್ತಾನೆ?
ತಿಳಿವಳಿಕೆಯುಳ್ಳ ಯಾರಾದರೊಬ್ಬನಿಂದ, ನಮ್ಮ ಪರಿಸ್ಥಿತಿಗಳನ್ನು ಲಕ್ಷ್ಯಕ್ಕೆ ತರುವ ಒಬ್ಬನಿಂದ, ನಾವು ತಪ್ಪುವಾಗ ನಮಗೆ ಸಹಾಯ ಮಾಡುವ ವ್ಯಕ್ತಿಯಿಂದ, ನಾವು ಮಾಡಶಕ್ತರಾಗಿರುವುದಕ್ಕಿಂತ ಹೆಚ್ಚಿನದನ್ನು ನಮ್ಮಿಂದ ನಿರ್ಬಂಧ ಪಡಿಸದ ಒಬ್ಬನಿಂದ ವ್ಯವಹರಿಸಲ್ಪಡಲು ನಾವೆಲ್ಲರೂ ಇಷ್ಟಪಡುತ್ತೇವೆ. ಯೆಹೋವ ದೇವರು ತನ್ನ ಸೇವಕರೊಂದಿಗೆ ಆ ರೀತಿಯಲ್ಲೇ ವ್ಯವಹರಿಸುತ್ತಾನೆ. ಕೀರ್ತನೆ 103:14 ಹೇಳುವುದು: “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” ಮತ್ತು ತನ್ನ ತಂದೆಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುವಾತನಾದ ಯೇಸು ಕ್ರಿಸ್ತನು, ಹೃತ್ಪೂರ್ವಕವಾದ ಆಮಂತ್ರಣವನ್ನು ನೀಡುವುದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು [ಅಥವಾ, “ನನ್ನೊಂದಿಗೆ ನನ್ನ ನೊಗದಡಿಗೆ ಬಂದು,” ಪಾದಟಿಪ್ಪಣಿ] ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.”—ಮತ್ತಾಯ 11:28-30.
2. ಯೆಹೋವನ ನೋಟವನ್ನು ಮಾನವರ ನೋಟದೊಂದಿಗೆ (ಎ) ಕ್ರಿಸ್ತನ ವಿಷಯದಲ್ಲಿ, ಮತ್ತು (ಬಿ) ಕ್ರಿಸ್ತನ ಹಿಂಬಾಲಕರ ಸಂಬಂಧದಲ್ಲಿ ಹೋಲಿಸಿರಿ.
2 ತನ್ನ ಸೇವಕರ ಕುರಿತ ಯೆಹೋವನ ವೀಕ್ಷಣೆಯು ಹೆಚ್ಚಾಗಿ ಮಾನವರಿಗಿಂತ ಅತಿ ಭಿನ್ನವಾಗಿದೆ. ಆತನು ವಿಷಯಗಳನ್ನು ಒಂದು ಭಿನ್ನವಾದ ದೃಷ್ಟಿಕೋನದಿಂದ ನೋಡುತ್ತಾನೆ ಮತ್ತು ಇತರರಿಗೆ ಅದರ ಕುರಿತು ಏನೂ ತಿಳಿಯದ ವಿಷಯಗಳನ್ನು ಲಕ್ಷ್ಯಕ್ಕೆ ತರುತ್ತಾನೆ. ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ಅವನು “ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು” ಆಗಿದ್ದನು. ಆತನನ್ನು ಮೆಸ್ಸೀಯನೆಂದು ನಂಬದವರು “ಅವನನ್ನು ಲಕ್ಷ್ಯಕ್ಕೇ ತರಲಿಲ್ಲ.” (ಯೆಶಾಯ 53:3; ಲೂಕ 23:18-21) ಆದರೂ, ದೇವರ ದೃಷ್ಟಿಯಲ್ಲಿ ಆತನು, ಯಾರಿಗೆ ತಂದೆಯು “ನಿನ್ನನ್ನು ಮೆಚ್ಚಿದ್ದೇನೆ” ಎಂದು ಹೇಳಿದನೋ ಆ “ಪ್ರಿಯನಾಗಿರುವ [ದೇವರ] ಮಗ” ನಾಗಿದ್ದನು. (ಲೂಕ 3:22; 1 ಪೇತ್ರ 2:4) ಯೇಸು ಕ್ರಿಸ್ತನ ಹಿಂಬಾಲಕರಲ್ಲಿ ಲೌಕಿಕ ರೀತಿಯಲ್ಲಿ ಬಡವರಾಗಿರುವ ಮತ್ತು ಬಹಳ ಸಂಕಟವನ್ನು ತಾಳಿಕೊಳ್ಳುತ್ತಿರುವ ಕಾರಣ ತುಚ್ಛವಾಗಿ ನೋಡಲ್ಪಟ್ಟಿರುವ ಜನರಿದ್ದಾರೆ. ಆದರೂ, ಯೆಹೋವನ ಮತ್ತು ಆತನ ಮಗನ ದೃಷ್ಟಿಯಲ್ಲಿ, ಅಂಥವರು ಐಶ್ವರ್ಯವಂತರಾಗಿರಬಹುದು. (ರೋಮಾಪುರ 8:35-39; ಪ್ರಕಟನೆ 2:9) ದೃಷ್ಟಿಕೋನದಲ್ಲಿ ಈ ಭಿನ್ನತೆಯೇಕೆ?
3. (ಎ) ಜನರ ಕುರಿತು ಯೆಹೋವನ ದೃಷ್ಟಿಕೋನವು ಮಾನವರದ್ದಕ್ಕಿಂತ ಅನೇಕಾವರ್ತಿ ಅತಿ ಭಿನ್ನವಾಗಿರುತ್ತದೆಯೇಕೆ? (ಬಿ) ಅಂತರ್ಯದಲ್ಲಿ ನಾವು ಎಂತಹ ವ್ಯಕ್ತಿಗಳಾಗಿದ್ದೇವೆ ಎಂದು ಪರೀಕ್ಷಿಸುವುದು ನಮಗೆ ಅತ್ಯಂತ ಪ್ರಾಮುಖ್ಯವಾಗಿದೆಯೇಕೆ?
3 ಯೆರೆಮೀಯ 11:20 ಉತ್ತರಿಸುವುದು: “ಯೆಹೋವನು “ಹೃದಯವನ್ನೂ ಅಂತರಿಂದ್ರಿಯ [ಮೂತ್ರಜನಕಾಂಗ, NW] ವನ್ನೂ ಪರೀಕ್ಷಿ” ಸುತ್ತಾನೆ. ನಾವು ಆಂತರ್ಯದಲ್ಲಿ ಏನಾಗಿದ್ದೇವೆಂದು ಆತನು ನೋಡುತ್ತಾನೆ, ನಮ್ಮ ವ್ಯಕ್ತಿತ್ವದ ಆ ಸಂಗತಿಗಳು ಇತರರ ದೃಷ್ಟಿಗೆ ಮರೆಯಾಗಿದ್ದರೂ ಸಹ. ಆತನ ಪರೀಕ್ಷಣೆಯಲ್ಲಿ, ಆತನೊಂದಿಗೆ ನಮ್ಮ ಸುಸಂಬಂಧಕ್ಕೆ ಅತ್ಯಾವಶ್ಯಕವಾಗಿರುವ, ನಮಗೆ ಶಾಶ್ವತವಾಗಿ ಪ್ರಯೋಜನಕಾರಿಯಾಗಿರುವ ಗುಣಗಳಿಗೆ ಮತ್ತು ಸ್ಥಿತಿಗತಿಗಳಿಗೆ ಆತನು ಪ್ರಧಾನ ಒತ್ತನ್ನು ಕೊಡುತ್ತಾನೆ. ಅದನ್ನು ನಾವು ತಿಳಿದಿರುವುದು ಆಶ್ವಾಸನೀಯವು; ಅದು ಸಮಾಧಾನಕರವೂ ಆಗಿದೆ. ನಾವು ಅಂತರ್ಯದಲ್ಲಿ ಏನಾಗಿದೇವ್ದೊ ಅದಕ್ಕೆ ಯೆಹೋವನು ಗಮನ ಕೊಡುತ್ತಾನಾದ್ದರಿಂದ, ಹೊಸ ಲೋಕದಲ್ಲಿ ಆತನು ಬಯಸುವಂತಹ ವ್ಯಕ್ತಿಗಳು ನಾವಾಗಿ ಪರಿಣಮಿಸಬೇಕಾದರೆ ಅಂತರ್ಯದಲ್ಲಿ ನಾವು ಏನಾಗಿದ್ದೇವೆಂಬದನ್ನು ನಾವು ಪರೀಕ್ಷಿಸಿಕೊಳ್ಳುವುದು ಪ್ರಾಮುಖ್ಯವಾಗಿದೆ. ಅಂಥ ಪರೀಕ್ಷೆಯನ್ನು ಮಾಡುವಂತೆ ಆತನ ವಾಕ್ಯವು ನಮಗೆ ಸಹಾಯ ಮಾಡುತ್ತದೆ.—ಇಬ್ರಿಯ 4:12, 13.
ದೇವರ ಸಂಕಲ್ಪಗಳು ಎಷ್ಟೋ ಅಮೂಲ್ಯವು!
4. (ಎ) ದೇವರ ಸಂಕಲ್ಪಗಳು ಅವನಿಗೆ ಅಮೂಲ್ಯವಾಗಿದ್ದವೆಂದು ಘೋಷಿಸಲು ಕೀರ್ತನೆಗಾರನನ್ನು ಪ್ರಚೋದಿಸಿದ್ದು ಯಾವುದು? (ಬಿ) ಅವು ನಮಗೆ ಅಮೂಲ್ಯವಾಗಿರಬೇಕು ಏಕೆ?
4 ಆತನ ಸೇವಕರ ಕುರಿತು ದೇವರ ಜ್ಞಾನದ ಆಳ ಮತ್ತು ಅಗಲವನ್ನು ಹಾಗೂ ಅವರಿಗೆ ಬೇಕಾದ ಯಾವುದೇ ಸಹಾಯವನ್ನು ಒದಗಿಸಲು ದೇವರಿಗಿರುವ ಅಸಾಮಾನ್ಯ ಶಕ್ತಿಯ ಮೇಲೆ ಧ್ಯಾನ ಮಾಡಿಕೊಂಡ ಅನಂತರ, ಕೀರ್ತನೆಗಾರ ದಾವೀದನು ಬರೆದದ್ದು: “ದೇವರೇ, ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ [ಅಮೂಲ್ಯವಾಗಿವೆ NW].” (ಕೀರ್ತನೆ 139:17ಎ) ಆತನ ಲಿಖಿತ ವಾಕ್ಯದಲ್ಲಿ ಪ್ರಕಟಿಸಲ್ಪಟ್ಟಿರುವ ಆ ಸಂಕಲ್ಪಗಳು, ಮಾನವರ ವಿಚಾರಗಳಿಗಿಂತ, ಅವೆಷ್ಟೇ ತೀವ್ರಬುದ್ಧಿಯದ್ದಾಗಿ ತೋರಲಿ, ಎಷ್ಟೋ ಮಿಗಿಲಾದದ್ದಾಗಿವೆ. (ಯೆಶಾಯ 55:8, 9) ಜೀವಿತದಲ್ಲಿ ನಿಜವಾಗಿಯೂ ಮಹತ್ವದ ವಿಷಯಗಳೆಡೆಗೆ ಮನಸ್ಸನ್ನು ಕೇಂದ್ರೀಕರಿಸುವಂತೆ ಮತ್ತು ಆತನ ಸೇವೆಯಲ್ಲಿ ಉತ್ಸಾಹದಿಂದಿರುವಂತೆ ದೇವರ ಸಂಕಲ್ಪಗಳು ನಮಗೆ ಸಹಾಯ ಮಾಡುತ್ತವೆ. (ಫಿಲಿಪ್ಪಿ 1:9-11) ದೇವರು ವಿಷಯಗಳನ್ನು ನೋಡುವ ರೀತಿಯಲ್ಲಿ ನಾವು ಹೇಗೆ ನೋಡಬೇಕೆಂದು ಅವು ನಮಗೆ ತೋರಿಸುತ್ತವೆ. ನಮ್ಮೊಂದಿಗೆ ನಾವು ಪ್ರಾಮಾಣಿಕತೆಯಿಂದಿರುವಂತೆ, ಹೃದಯದಲ್ಲಿ ನಾವು ನಿಜವಾಗಿ ಏನಾಗಿದ್ದೇವೆಂದು ಯಥಾರ್ಥತೆಯಿಂದ ನಮಗೆ ನಾವು ಒಪ್ಪಿಕೊಳ್ಳುವಂತೆ ಅವು ನೆರವಾಗುತ್ತವೆ. ಅದನ್ನು ಮಾಡಲು ನೀವು ಸಿದ್ಧಮನಸ್ಕರಾಗಿದ್ದೀರೋ?
5. (ಎ) ಏನನ್ನು “ಬಹು ಜಾಗರೂಕತೆಯಿಂದ” ಕಾಪಾಡುವಂತೆ ದೇವರ ವಾಕ್ಯವು ನಮ್ಮನ್ನು ಪ್ರಚೋದಿಸುತ್ತದೆ? (ಬಿ) ಕಾಯಿನನ ಕುರಿತಾದ ಬೈಬಲ್ ದಾಖಲೆಯು ನಮಗೆ ಹೇಗೆ ಪ್ರಯೋಜನವಾಗಬಲ್ಲದು? (ಸಿ) ನಾವು ಮೋಶೆಯ ಧರ್ಮಶಾಸ್ತ್ರದ ಕೆಳಗೆ ಇರದಿದ್ದರೂ, ಯೆಹೋವನು ಏನನ್ನು ಮೆಚ್ಚುತ್ತಾನೆಂದು ತಿಳಿಯಲು ಅದು ನಮಗೆ ಹೇಗೆ ಸಹಾಯಮಾಡುತ್ತದೆ?
5 ಮಾನವರು ಹೊರಗಣ ತೋರಿಕೆಗಳಿಗೆ ಅತಿಯಾದ ಒತ್ತನ್ನು ಹಾಕುವ ಪ್ರವೃತ್ತಿಯುಳ್ಳವರಾಗಿದ್ದಾರೆ, ಆದರೆ ಶಾಸ್ತ್ರಗ್ರಂಥವು ನಮಗೆ ಉಪದೇಶಿಸುವುದು: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ.” (ಜ್ಞಾನೋಕ್ತಿ 4:23) ನೀತಿಬೋಧೆಗಳಿಂದ ಮತ್ತು ಮಾದರಿಗಳಿಂದ ಎರಡರಿಂದಲೂ ಅದನ್ನು ಮಾಡುವಂತೆ ಬೈಬಲ್ ನಮಗೆ ಸಹಾಯ ಮಾಡುತ್ತದೆ. ಸಹೋದರನಾದ ಹೇಬೆಲನೆಡೆಗೆ ಅವನ ಹೃದಯದಲ್ಲಿ ಸಿಟ್ಟು, ಅನಂತರ ದ್ವೇಷವು ಕುದಿಯುತ್ತಿದ್ದರೂ, ಕಾಯಿನನು ದೇವರಿಗೆ ಯಂತ್ರಪ್ರಾಯವಾಗಿ ಯಜ್ಞಗಳನ್ನು ಅರ್ಪಿಸಿದನೆಂದು ಅದು ಹೇಳುತ್ತದೆ. ಮತ್ತು ಅವನಂತೆ ಇರಬಾರದು ಎಂದು ಅದು ನಮ್ಮನ್ನು ಪ್ರೇರೇಪಿಸುತ್ತದೆ. (ಆದಿಕಾಂಡ 4:3-5; 1 ಯೋಹಾನ 3:11, 12) ವಿಧೇಯತೆಯ ಬಗ್ಗೆ ಮೋಶೆಯ ಧರ್ಮಶಾಸ್ತ್ರದ ಆವಶ್ಯಕತೆಯನ್ನು ಅದು ದಾಖಲಿಸುತ್ತದೆ. ಆದರೆ ಧರ್ಮಶಾಸ್ತ್ರದ ಪ್ರಾಮುಖ್ಯ ಆವಶ್ಯಕತೆಯು, ಯಾರು ಯೆಹೋವನನ್ನು ಆರಾಧಿಸುತ್ತಾರೋ ಅವರು ಆತನನ್ನು ತಮ್ಮ ಪೂರ್ಣ ಹೃದಯ, ಮನಸ್ಸು, ಆತ್ಮ, ಮತ್ತು ಶಕಿಯ್ತಿಂದ ಪ್ರೀತಿಸಬೇಕೆಂದೂ ಅದು ಒತ್ತಿಹೇಳುತ್ತದೆ; ಮತ್ತು ಪ್ರಾಮುಖ್ಯತೆಯಲ್ಲಿ ಎರಡನೆಯ ಆಜ್ಞೆಯು, ಅವರು ತಮ್ಮ ನೆರೆಯವರನ್ನು ತಮ್ಮಂತೆಯೇ ಪ್ರೀತಿಸುವುದೇ ಎಂದು ಅದು ಹೇಳುತ್ತದೆ.—ಧರ್ಮೋಪದೇಶಕಾಂಡ 5:32, 33; ಮಾರ್ಕ 12:28-31.
6. ಜ್ಞಾನೋಕ್ತಿ 3:1ನ್ನು ಅನ್ವಯಿಸುವಲ್ಲಿ, ಯಾವ ಪ್ರಶ್ನೆಗಳನ್ನು ನಾವು ನಮ್ಮೊಡನೆ ಕೇಳಿಕೊಳ್ಳಬೇಕು?
6 ಜ್ಞಾನೋಕ್ತಿ 3:1 ರಲ್ಲಿ, ದೇವರ ಆಜ್ಞೆಗಳನ್ನು ಕೇವಲ ಪಾಲಿಸುವುದು ಮಾತ್ರವಲ್ಲ, ವಿಧೇಯತೆಯು ನಮ್ಮ ಹೃದಯದಲ್ಲಿ ನಿಜವಾಗಿ ಏನಿದೆಯೆಂಬದರ ಅಭಿವ್ಯಕ್ತಿಯೆಂದು ಖಚಿತ ಮಾಡಿಕೊಳ್ಳುವಂತೆಯೂ ನಾವು ಪ್ರೇರೇಪಿಸಲ್ಪಟ್ಟಿದ್ದೇವೆ. ವ್ಯಕ್ತಿಪರವಾಗಿ ನಾವು ನಮ್ಮನ್ನು ಕೇಳಿಕೊಳ್ಳುವ ಅಗತ್ಯವಿದೆ, ‘ದೇವರ ಆವಶ್ಯಕತೆಗಳಿಗೆ ನನ್ನ ವಿಧೇಯತೆಯ ವಿಷಯದಲ್ಲಿ ಇದು ನಿಜವಾಗಿದೆಯೇ?’ ಕೆಲವು ವಿಷಯಗಳಲ್ಲಿ ನಮ್ಮ ಪ್ರೇರಣೆ ಮತ್ತು ಯೋಚನೆಯು ನ್ಯೂನವಾಗಿದೆಯೆಂದು ನಾವು ತಿಳಿದರೆ—ಮತ್ತು ನಾವು ಕುಂದಿಲ್ಲದವರೆಂದು ನಮ್ಮಲ್ಲಿ ಯಾರೂ ಹೇಳಶಕ್ತರಲ್ಲ—ಆಗ ನಾವು ಕೇಳುವ ಅಗತ್ಯವಿದೆ, ‘ಪರಿಸ್ಥಿತಿಯನ್ನು ಉತ್ತಮಗೊಳಿಸಲು ನಾನೇನು ಮಾಡುತ್ತಿದ್ದೇನೆ?’—ಜ್ಞಾನೋಕ್ತಿ 20:9; 1 ಯೋಹಾನ 1:8.
7. (ಎ) ಮತ್ತಾಯ 15:3-9 ರಲ್ಲಿ ಯೇಸು ಮಾಡಿದ ಫರಿಸಾಯರ ಖಂಡನೆಯು ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ನಮಗೆ ಹೇಗೆ ನೆರವಾಗಬಹುದು? (ಬಿ) ನಮ್ಮ ಹೃದಯ ಮತ್ತು ಮನಸ್ಸನ್ನು ಶಿಸ್ತುಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಕೊಳ್ಳಲು ಯಾವ ಪರಿಸ್ಥಿತಿಗಳು ನಮ್ಮನ್ನು ಆವಶ್ಯಪಡಿಸಬಹುದು?
7 ಸ್ವಾರ್ಥಪರತೆಯಿಂದ ಪ್ರೇರೇಪಿಸಲ್ಪಟ್ಟ ಒಂದು ಪದ್ಧತಿಯನ್ನು ಮೋಸದಿಂದ ಪ್ರವರ್ಧಿಸುತ್ತಿರುವಾಗಲೂ, ದೇವರನ್ನು ಗೌರವಿಸುವ ಸೋಗನ್ನು ಹಾಕಿದ ಯೆಹೂದ್ಯ ಫರಿಸಾಯರನ್ನು ಯೇಸುವು ಕಪಟಿಗಳಾಗಿ ಖಂಡಿಸಿದನು ಮತ್ತು ಅವರ ಆರಾಧನೆಯು ನಿಷ್ಫಲವೆಂದು ತೋರಿಸಿಕೊಟ್ಟನು. (ಮತ್ತಾಯ 15:3-9) ಹೊರಮೆಯಲ್ಲಿ ನೈತಿಕ ಜೀವನವನ್ನು ನಡಿಸುತ್ತಾ ಇದ್ದು, ಅದೇ ಸಮಯದಲ್ಲಿ ಕಾಮುಕ ಸುಖಭೋಗದ ನೋಟದೊಂದಿಗೆ ಅನೈತಿಕ ವಿಚಾರಗಳಲ್ಲಿ ಎಡೆಬಿಡದೆ ತಲ್ಲೀನರಾಗಿರುವುದು, ಹೃದಯವನ್ನು ನೋಡುವಾತನಾದ ದೇವರನ್ನು ಮೆಚ್ಚಿಸಲು ಸಾಲದೆಂದು ಸಹ ಯೇಸು ಎಚ್ಚರಿಸಿದ್ದಾನೆ. ನಮ್ಮ ಮನಸ್ಸು ಮತ್ತು ಹೃದಯವನ್ನು ಶಿಸ್ತುಗೊಳಿಸಲು ಕಠಿನ ಕ್ರಮಗಳನ್ನು ಕೈಕೊಳ್ಳುವ ಅಗತ್ಯ ನಮಗಿರಬಹುದು. (ಜ್ಞಾನೋಕ್ತಿ 23:12; ಮತ್ತಾಯ 5:27-29) ನಮ್ಮ ಐಹಿಕ ಕೆಲಸ, ವಿದ್ಯೆಯ ಸಂಬಂಧದಲ್ಲಿ ನಮ್ಮ ಗುರಿಗಳು, ಅಥವಾ ಮನೋರಂಜನೆಯ ನಮ್ಮ ಆಯ್ಕೆಯಲ್ಲಿ, ಫಲವಾಗಿ ಲೋಕವನ್ನು ನಾವು ಅನುಕರಿಸುವವರಾಗಿ ಪರಿಣಮಿಸಿ, ಅದರ ಮಟ್ಟಗಳಿಗನುಸಾರ ನಮ್ಮನ್ನು ರೂಪಿಸುವಂತೆ ಬಿಟ್ಟುಕೊಟ್ಟರೆ ಸಹ ಅಂಥ ಶಿಸ್ತು ಅಗತ್ಯವಿದೆ. ದೇವರಿಗೆ ಸೇರಿದವರೆಂದು ಹೇಳುತ್ತಿರುವಾಗ, ಆದರೆ ಯಾರು ಲೋಕದ ಸ್ನೇಹಿತರಾಗಿರಲು ಬಯಸುತ್ತಾರೋ ಅವರನ್ನು “ವ್ಯಭಿಚಾರಿಗಳು” ಎಂದು ಶಿಷ್ಯ ಯಾಕೋಬನು ಸಂಬೋಧಿಸುತ್ತಾನೆ ಎಂಬುದನ್ನು ನಾವೆಂದೂ ಮರೆಯದಂತಾಗಲಿ. ಏಕೆ? ಏಕೆಂದರೆ “ಇಡೀ ಲೋಕವು ಕೆಡುಕನ ವಶದಲ್ಲಿ ಬಿದದ್ದೆ.”—ಯಾಕೋಬ 4:4; 1 ಯೋಹಾನ 2:15-17; 5:19.
8. ದೇವರ ಅಮೂಲ್ಯ ಸಂಕಲ್ಪಗಳಿಂದ ಪೂರ್ಣವಾಗಿ ಪ್ರಯೋಜನ ಹೊಂದಲು ನಾವೇನನ್ನು ಮಾಡುವ ಅಗತ್ಯವಿದೆ?
8 ಇವುಗಳಲ್ಲಿ ಮತ್ತು ಬೇರೆ ವಿಷಯಗಳಲ್ಲಿ ದೇವರ ಸಂಕಲ್ಪಗಳಿಂದ ಪೂರ್ಣ ಪ್ರಯೋಜನ ಹೊಂದುವುದಕ್ಕಾಗಿ, ಅವನ್ನು ಓದಲು ಅಥವಾ ಆಲಿಸಲು ನಾವು ಸಮಯವನ್ನು ಬದಿಗಿಡುವ ಅಗತ್ಯವಿದೆ. ಅದಕ್ಕಿಂತಲೂ ಹೆಚ್ಚಾಗಿ, ನಾವು ಅವುಗಳ ಮೇಲೆ ಅಭ್ಯಾಸಮಾಡುವ, ಅವುಗಳ ಕುರಿತು ಮಾತಾಡುವ, ಮತ್ತು ಅವನ್ನು ಧ್ಯಾನಿಸುವ ಅಗತ್ಯವಿದೆ. ಕಾವಲಿನಬುರುಜು ಪತ್ರಿಕೆಯ ಅನೇಕ ವಾಚಕರು ಬೈಬಲಿನ ಚರ್ಚೆಯು ನಡಿಸಲ್ಪಡುವ ಯೆಹೋವನ ಸಾಕ್ಷಿಗಳ ಸಭಾಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಾರೆ. ಅದನ್ನು ಮಾಡಲಿಕ್ಕಾಗಿ ತಮ್ಮ ಇತರ ಕಸಬುಗಳಿಂದ ಅವರು ಸಮಯವನ್ನು ಖರೀದಿಸುತ್ತಾರೆ. (ಎಫೆಸ 5:15-17) ಮತ್ತು ಪ್ರತಿಫಲವಾಗಿ ಅವರಿಗೆ ಏನು ಸಿಗುತ್ತದೋ ಅದು ಐಹಿಕ ಐಶ್ವರ್ಯಕ್ಕಿಂತ ಎಷ್ಟೋ ಹೆಚ್ಚು ಬೆಲೆಯುಳ್ಳದ್ದಾಗಿದೆ. ನಿಮ್ಮ ಅನಿಸಿಕೆ ಹಾಗೆಯೇ ಇದೆಯಲ್ಲವೇ?
9. ಕ್ರೈಸ್ತ ಕೂಟಗಳಿಗೆ ಹಾಜರಾಗುವ ಕೆಲವರು ಇತರರಿಗಿಂತ ಹೆಚ್ಚು ತೀವ್ರವಾಗಿ ಪ್ರಗತಿ ಮಾಡುತ್ತಾರೆ ಏಕೆ?
9 ಆದರೂ, ಈ ಕೂಟಗಳಿಗೆ ಹಾಜರಾಗುವ ಕೆಲವರು ಇತರರಿಗಿಂತ ಹೆಚ್ಚು ತೀವ್ರ ಆತ್ಮಿಕ ಪ್ರಗತಿಯನ್ನು ಮಾಡುತ್ತಾರೆ. ಅವರು ಸತ್ಯವನ್ನು ತಮ್ಮ ಜೀವಿತಗಳಲ್ಲಿ ಹೆಚ್ಚು ಪೂರ್ಣವಾಗಿ ಅನ್ವಯಿಸುತ್ತಾರೆ. ಇದಕ್ಕೆ ಯಾವುದು ಕಾರಣವಾಗಿರುತ್ತದೆ? ಅನೇಕಾವರ್ತಿ, ವೈಯಕ್ತಿಕ ಅಭ್ಯಾಸದಲ್ಲಿ ಅವರ ಶ್ರದ್ಧೆಯು ಒಂದು ದೊಡ್ಡ ಸಂಗತಿಯಾಗಿದೆ. ನಾವು ಕೇವಲ ರೊಟ್ಟಿಯಿಂದ ಮಾತ್ರವೇ ಜೀವಿಸುವುದಿಲ್ಲವೆಂಬದನ್ನು ಅವರು ಗಣ್ಯಮಾಡುತ್ತಾರೆ; ಪ್ರತಿ ದಿನ ಆತ್ಮಿಕ ಆಹಾರವು ಭೌತಿಕ ಆಹಾರವನ್ನು ಕ್ರಮವಾಗಿ ತಿನ್ನುವಷ್ಟೇ ಪ್ರಾಮುಖ್ಯವಾಗಿದೆ. (ಮತ್ತಾಯ 4:4; ಇಬ್ರಿಯ 5:14) ಹೀಗೆ ಅವರು ಬೈಬಲನ್ನು ಅಥವಾ ಅದನ್ನು ವಿವರಿಸುವ ಪ್ರಕಾಶನಗಳನ್ನು ಓದುವುದರಲ್ಲಿ ಪ್ರತಿ ದಿನ ಕಡಿಮೆ ಪಕ್ಷ ಸ್ವಲ್ಪ ಸಮಯವನ್ನಾದರೂ ಕಳೆಯುವಂತೆ ಪ್ರಯತ್ನಿಸುತ್ತಾರೆ. ಪಾಠಗಳನ್ನು ಮುಂಚಿತವಾಗಿ ಅಭ್ಯಾಸಿಸುತ್ತಾ ಮತ್ತು ವಚನಗಳನ್ನು ತೆರೆದುನೋಡುತ್ತಾ, ಅವರು ಸಭಾ ಕೂಟಗಳಿಗಾಗಿ ತಯಾರಿಸುತ್ತಾರೆ. ವಿಷಯವನ್ನು ಓದುವುದಕ್ಕಿಂತ ಹೆಚ್ಚಿನದನ್ನು ಅವರು ಮಾಡುತ್ತಾರೆ; ಅವರು ಅದರ ಮೇಲೆ ಧ್ಯಾನಿಸುತ್ತಾರೆ. ತಾವು ಏನನ್ನು ಕಲಿಯುತ್ತಾರೋ ಅದು ಅವರ ಸ್ವಂತ ಜೀವನದ ಮೇಲೆ ಯಾವ ಪರಿಣಾಮ ಬೀರಬೇಕೆಂಬುದರ ಕುರಿತು ಗಂಭೀರವಾಗಿ ಯೋಚಿಸುವಿಕೆಯು, ಅವರ ಅಧ್ಯಯನದ ಮಾದರಿಯಲ್ಲಿ ಕೂಡಿದೆ. ಅವರ ಆತ್ಮಿಕತೆಯು ಬೆಳೆಯುತ್ತಾ ಬಂದಂತೆ, “ನಿನ್ನ ಧರ್ಮಶಾಸ್ತ್ರವು ನನಗೆಷ್ಟೋ ಪ್ರಿಯವಾಗಿದೆ. . . . ನಿನ್ನ ಕಟ್ಟಳೆಗಳು ಮಹತ್ವವುಳ್ಳವುಗಳೇ” ಎಂದು ಬರೆದ ಕೀರ್ತನೆಗಾರನಂಥ ಭಾವವುಳ್ಳವರಾಗುತ್ತಾರೆ.—ಕೀರ್ತನೆ 1:1-3; 119:97, 129.
10. (ಎ) ದೇವರ ವಾಕ್ಯವನ್ನು ಅಭ್ಯಾಸಿಸುತ್ತಾ ಮುಂದರಿಯುವುದು ಎಷ್ಟು ಕಾಲದ ತನಕ ಲಾಭದಾಯಕವು? (ಬಿ) ಶಾಸ್ತ್ರಗ್ರಂಥದ ವಚನಗಳು ಇದನ್ನು ಹೇಗೆ ತೋರಿಸುತ್ತದೆ?
10 ನಾವು ದೇವರ ವಾಕ್ಯವನ್ನು ಒಂದು ವರ್ಷ, 5 ವರ್ಷಗಳು, ಯಾ 50 ವರ್ಷಗಳೇ ಅಭ್ಯಾಸ ಮಾಡಿರಲಿ—ದೇವರ ಸಂಕಲ್ಪಗಳು ನಮಗೆ ಅಮೂಲ್ಯವಾಗಿದ್ದರೆ—ಅದೆಂದೂ ಕೇವಲ ಪುನರಾವೃತ್ತಿಯಾಗಿ ಪರಿಣಮಿಸುವುದಿಲ್ಲ. ನಮ್ಮಲ್ಲಿ ಯಾರಾದರೂ ಶಾಸ್ತ್ರಗ್ರಂಥದಿಂದ ಎಷ್ಟೇ ಕಲಿತಿರಲಿ, ನಾವು ತಿಳಿದಿರದ ಬಹಳಷ್ಟು ಅದರಲ್ಲಿದೆ. “ಅವುಗಳ ಒಟ್ಟು ಅಸಂಖ್ಯವಾಗಿದೆ” ಅಂದನು ದಾವೀದನು. “ಅವುಗಳನ್ನು ಲೆಕ್ಕಿಸುವದಾದರೆ [ಸಮುದ್ರದ] ಮರಳಿಗಿಂತ ಹೆಚ್ಚಾಗಿವೆ.” ದೇವರ ಸಂಕಲ್ಪಗಳು ನಮ್ಮ ಎಣಿಕೆಯ ಶಕ್ತಿಗೆ ಮೀರಿವೆ. ನಾವು ದಿನವಿಡೀ ದೇವರ ಸಂಕಲ್ಪಗಳನ್ನು ಒಂದೊಂದಾಗಿ ಎಣಿಸುತ್ತಾ, ನಿದ್ರಿಸಿದರೂ, ಬೆಳಗಾತ ಏಳುವಾಗ, ಯೋಚಿಸಲು ಬಹಳಷ್ಟು ಇನ್ನೂ ಇರುವುದು. ಹೀಗೆ, ದಾವೀದನು ಬರೆದದ್ದು: “ನಾನು ಎಚ್ಚರವಾಗಲು ಮುಂಚಿನಂತೆಯೇ ನಿನ್ನ ಬಳಿಯಲ್ಲಿದ್ದೇನೆ.” (ಕೀರ್ತನೆ 139:17, 18) ಯೆಹೋವನ ಮತ್ತು ಆತನ ಮಾರ್ಗಗಳ ಕುರಿತು ಕಲಿಯಲು ಸದಾಕಾಲಕ್ಕೂ ಎಷ್ಟೋ ಹೆಚ್ಚು ನಮಗಿರಲಿದೆ. ನಮಗೆಲ್ಲವೂ ತಿಳಿದಿರುವ ಬಿಂದುವಿಗೆ ನಾವೆಂದೂ ತಲಪಲಾರೆವು.—ರೋಮಾಪುರ 11:33.
ಯೆಹೋವನು ಹಗೆಮಾಡುವುದನ್ನು ಹಗೆಮಾಡುವುದು
11. ದೇವರ ಸಂಕಲ್ಪಗಳನ್ನು ತಿಳಿಯುವುದು ಮಾತ್ರವೇ ಅಲ್ಲ ಆತನ ಅನಿಸಿಕೆಗಳಲ್ಲಿ ಪಾಲಿಗರಾಗುವುದೂ ಪ್ರಾಮುಖ್ಯವೇಕೆ?
11 ದೇವರ ವಾಕ್ಯದ ನಮ್ಮ ಅಧ್ಯಯನವು ನಮ್ಮ ಮನಸ್ಸನ್ನು ಕೇವಲ ಸತ್ಯಾಂಶಗಳಿಂದ ತುಂಬಿಸುವ ನೋಟದಿಂದಲ್ಲ. ಅದು ನಮ್ಮ ಹೃದಯವನ್ನು ತೂರಿಹೋಗುವಂತೆ ನಾವು ಬಿಡುವಾಗ, ದೇವರ ಅನಿಸಿಕೆಗಳಲ್ಲಿ ನಾವು ಸಹ ಪಾಲಿಗರಾಗಲು ತೊಡಗುತ್ತೇವೆ. ಅದು ಎಷ್ಟು ಪ್ರಾಮುಖ್ಯವಾಗಿದೆ! ಅಂಥ ಅನಿಸಿಕೆಗಳನ್ನು ನಾವು ಬೆಳೆಸಿಕೊಳ್ಳದಿದ್ದರೆ, ಏನು ಫಲಿಸಬಹುದು? ಬೈಬಲು ಏನನ್ನುತ್ತದೋ ಅದನ್ನು ಪುನರುಚ್ಚರಿಸಲು ನಾವು ಶಕ್ತರಾಗಿರಬಹುದಾದರೂ, ಯಾವುದು ನಿಷಿದ್ಧವೋ ಅದನ್ನು ಅಪೇಕ್ಷಣೀಯವಾಗಿ ನಾವು ನೋಡಬಹುದು, ಅಥವಾ ಏನು ಅಪೇಕ್ಷಿಸಲ್ಪಡುತ್ತದೋ ಅದನ್ನು ನಾವು ಒಂದು ಹೊರೆಯಾಗಿ ಭಾವಿಸಬಹುದು. ಕೆಟ್ಟದ್ದನ್ನು ನಾವು ಹಗೆಮಾಡುವುದಾದರೂ ಕೂಡ, ಮಾನವ ಅಪೂರ್ಣತೆಯಿಂದಾಗಿ ನಮಗೆ ಹೆಣಗಾಟವನ್ನು ನಡಿಸಲಿಕ್ಕಿದ್ದೀತು ಎಂಬುದು ಸತ್ಯ. (ರೋಮಾಪುರ 7:15) ಆದರೆ, ನಾವು ಅಂತರ್ಯದಲ್ಲಿ ಏನಾಗಿದೇವ್ದೋ ಅದನ್ನು, ಯಾವುದು ಯೋಗ್ಯವೋ ಅದರೊಂದಿಗೆ ಹೊಂದಿಕೆಯಲ್ಲಿ ತರುವಂತೆ ಯಥಾರ್ಥ ಪ್ರಯತ್ನ ಮಾಡದಿದ್ದರೆ, “ಹೃದಯಗಳನ್ನು ಶೋಧಿಸು” ವವನಾದ ಯೆಹೋವನನ್ನು ಮೆಚ್ಚಿಸಲು ನಾವು ನಿರೀಕ್ಷಿಸಬಲ್ಲೆವೋ?—ಜ್ಞಾನೋಕ್ತಿ 17:3.
12. ದೈವಿಕ ಪ್ರೀತಿ ಮತ್ತು ದೈವಿಕ ಹಗೆಯು ಎಷ್ಟು ಪ್ರಾಮುಖ್ಯವಾಗಿವೆ?
12 ದೈವಿಕ ಪ್ರೀತಿಯು ಕೂಡ ಯಾವುದು ಯೋಗ್ಯವೋ ಅದನ್ನು ಮಾಡುವುದನ್ನು ಉಲ್ಲಾಸಕರವನ್ನಾಗಿ ಮಾಡುವಂತೆಯೇ, ಕೆಟ್ಟತನದ ವಿರುದ್ಧವಾಗಿ ದೈವಿಕ ಹಗೆಯೂ ಒಂದು ಬಲವಾದ ಭದ್ರತೆಯಾಗಿದೆ. (1 ಯೋಹಾನ 5:3) ಪ್ರೀತಿ ಮತ್ತು ಹಗೆ ಎರಡನ್ನೂ ಬೆಳೆಸುವಂತೆ ಶಾಸ್ತ್ರಗ್ರಂಥವು ನಮ್ಮನ್ನು ಪದೇ ಪದೇ ಪ್ರಚೋದಿಸುತ್ತದೆ. “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ.” (ಕೀರ್ತನೆ 97:10) “ಕೆಟ್ಟತನಕ್ಕೆ ಹೇಸಿಕೊಂಡು ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ.” (ರೋಮಾಪುರ 12:9) ನಾವದನ್ನು ಮಾಡುತ್ತಿದ್ದೇವೋ?
13. (ಎ) ದುಷ್ಟರ ನಾಶನದ ಸಂಬಂಧದಲ್ಲಿ ದಾವೀದನ ಯಾವ ಪ್ರಾರ್ಥನೆಯೊಂದಿಗೆ ನಾವು ಪೂರ್ಣ ಸಹಮತದಲ್ಲಿದ್ದೇವೆ? (ಬಿ) ದಾವೀದನ ಪ್ರಾರ್ಥನೆಯಲ್ಲಿ ತೋರಿಸಿದಂತೆ, ದೇವರು ನಾಶಮಾಡುವಂತೆ ಆತನು ಪ್ರಾರ್ಥನೆಮಾಡಿದ ದುಷ್ಟರು ಯಾರಾಗಿದ್ದರು?
13 ದುಷ್ಟರನ್ನು ಭೂಮಿಯಿಂದ ನಾಶಗೊಳಿಸುವ ಮತ್ತು ನೀತಿಯು ವಾಸವಾಗಿರುವ ಹೊಸ ಭೂಮಿಯನ್ನು ಒಳತರುವ ತನ್ನ ಉದ್ದೇಶವನ್ನು ಯೆಹೋವನು ಸ್ಪಷ್ಟವಾಗಿಗಿ ತಿಳಿಸಿದ್ದಾನೆ. (ಕೀರ್ತನೆ 37:10, 11; 2 ಪೇತ್ರ 3:13) ನೀತಿಯನ್ನು ಪ್ರೀತಿಸುವವರು ಆ ಸಮಯವು ಬರುವಂತೆ ಹಾರೈಸುತ್ತಾರೆ. ಕೀರ್ತನೆಗಾರನಾದ ದಾವೀದನೊಂದಿಗೆ ಅವರು ಪೂರ್ಣ ಸಹಮತದಿಂದಿದ್ದಾರೆ, ಅವನು ಪ್ರಾರ್ಥಿಸಿದ್ದು: “ಯೆಹೋವನೇ, ನೀನು ದುಷ್ಟರನ್ನು ಸಂಹರಿಸಿಬಿಟ್ಟರೆ ಎಷ್ಟೋ ಒಳ್ಳೇದು. ಕೊಲೆಪಾತಕರೇ, ನನ್ನಿಂದ ತೊಲಗಿ ಹೋಗಿರಿ. [ದೇವರೇ,] ಅವರು ನಿನ್ನ ಶತ್ರುಗಳು; ಅಯೋಗ್ಯ ಕಾರ್ಯಕ್ಕಾಗಿ ನಿನ್ನ ಹೆಸರೆತ್ತುತ್ತಾರೆ.” (ಕೀರ್ತನೆ 139:19, 20) ಅಂಥ ದುಷ್ಟರನ್ನು ಹತಿಸಲು ದಾವೀದನು ವೈಯಕ್ತಿಕವಾಗಿ ಹಂಬಲಿಸಿರಲಿಲ್ಲ. ಪ್ರತೀಕಾರವು ಯೆಹೋವನ ಹಸ್ತದಿಂದ ಬರುವುದೆಂದು ಅವನು ಪ್ರಾರ್ಥಿಸಿದನು. (ಧರ್ಮೋಪದೇಶಕಾಂಡ 32:35; ಇಬ್ರಿಯ 10:30) ದಾವೀದನನ್ನು ಹೇಗಾದರೂ ವೈಯಕ್ತಿಕವಾಗಿ ಕೇವಲ ಕೋಪಗೊಳಿಸಿದ ಜನರು ಇವರಾಗಿರಲಿಲ್ಲ. ಅವರು ದೇವರ ನಾಮವನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತುತ್ತಾ, ಆತನನ್ನು ತಪ್ಪಾಗಿ ಪ್ರತಿನಿಧಿಸಿದ್ದರು. (ವಿಮೋಚನಕಾಂಡ 20:7) ಅಪ್ರಾಮಾಣಿಕತೆಯಿಂದ, ಅವನನ್ನು ಸೇವಿಸುತ್ತಾರೆಂದು ಹೇಳಿಕೊಂಡರು, ಆದರೆ ತಮ್ಮ ಸ್ವಂತ ಹಂಚಿಕೆಗಳನ್ನು ಪ್ರವರ್ಧಿಸಲು ಆತನ ಹೆಸರನ್ನು ಉಪಯೋಗಿಸುತ್ತಿದ್ದರು. ದೇವರ ಶತ್ರುಗಳಾಗಿರಲು ಆರಿಸಿಕೊಂಡವರೆಡೆಗೆ ದಾವೀದನಿಗೆ ಯಾವ ಪ್ರೀತಿಯೂ ಇರಲಿಲ್ಲ.
14. ಸಹಾಯ ಮಾಡಲ್ಪಡಬಲ್ಲ ದುಷ್ಟರು ಇದ್ದಾರೋ? ಹಾಗಿದ್ದರೆ, ಹೇಗೆ?
14 ಯೆಹೋವನನ್ನು ತಿಳಿಯದಂತಹ ಕೋಟ್ಯಾಂತರ ಜನರು ಇದ್ದಾರೆ. ಅವರಲ್ಲಿ ಅನೇಕರು ತಮ್ಮ ಅಜ್ಞಾನದಲ್ಲಿ ದೇವರ ವಾಕ್ಯವು ಕೆಟ್ಟದ್ದೆಂದು ತೋರಿಸುವ ವಿಷಯಗಳನ್ನು ನಡಿಸುತ್ತಾರೆ. ಅವರು ಈ ನಡತೆಯಲ್ಲಿ ಬಿಡದೆ ಮುಂದುವರಿದರೆ, ಮಹಾ ಸಂಕಟದ ಸಮಯದಲ್ಲಿ ನಾಶವಾಗಿ ಹೋಗುವವರೊಂದಿಗೆ ಅವರಿರುವರು. ಆದರೂ, ಯೆಹೋವನು ದುಷ್ಟರ ನಾಶನದಲ್ಲಿ ಸಂತೋಷಿಸುವುದಿಲ್ಲ, ನಾವೂ ಸಂತೋಷ ಪಡಬಾರದು. (ಯೆಹೆಜ್ಕೇಲ 33:11) ಸಮಯವು ಅನುಮತಿಸುವಷ್ಟರ ತನಕ, ಅವರು ಯೆಹೋವನ ಮಾರ್ಗಗಳನ್ನು ಕಲಿಯುವಂತೆ ಮತ್ತು ಅನ್ವಯಿಸುವಂತೆ ನೆರವಾಗಲು ನಾವು ಪ್ರಯತ್ನಿಸುತ್ತೇವೆ. ಆದರೆ ಕೆಲವು ಜನರು ಯೆಹೋವನೆಡೆಗೆ ತೀವ್ರ ವಿರೋಧವನ್ನು ತೋರಿಸುವುದಾದರೆ ಆಗೇನು?
15. (ಎ) ಕೀರ್ತನೆಗಾರನು ನಿಜ “ಶತ್ರು” ಗಳಾಗಿ ವೀಕ್ಷಿಸಿದವರು ಯಾರಾಗಿದ್ದರು? (ಬಿ) ಯೆಹೋವನ ವಿರುದ್ಧವಾಗಿ ದಂಗೆಯೇಳುವವರನ್ನು ನಾವು “ದ್ವೇಷಿಸು” ತ್ತೇವೆಂದು ನಾವಿಂದು ಹೇಗೆ ತೋರಿಸಬಲ್ಲೆವು?
15 ಅವರ ಕುರಿತಾಗಿ ಕೀರ್ತನೆಗಾರನು ಹೇಳಿದ್ದು: “ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನು ದ್ವೇಶಿಸುತ್ತೇನಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವದಿಲ್ಲವೋ? [ಹೇಸುವುದಿಲ್ಲವೋ, NW] ನಾನು ಅವರನ್ನು ಸಂಪೂರ್ಣವಾಗಿ ಹಗೆಮಾಡುತ್ತೇನೆ; ಅವರು ನನಗೂ ವೈರಿಗಳೇ ಆಗಿದ್ದಾರೆ.” (ಕೀರ್ತನೆ 139:21, 22) ಅವರು ಯೆಹೋವನನ್ನು ತೀವ್ರವಾಗಿ ಹಗೆಮಾಡಿದ್ದ ಕಾರಣ ದಾವೀದನು ಹೇವರಿಕೆಯಿಂದ ಅವರನ್ನು ನೋಡಿದನು. ಯೆಹೋವನ ವಿರುದ್ಧವಾಗಿ ದಂಗೆಯೇಳುವ ಮೂಲಕ ಆತನನ್ನು ಹಗೆಮಾಡುವವರೊಂದಿಗೆ ಧರ್ಮಭ್ರಷ್ಟರು ಒಳಗೂಡಿದ್ದಾರೆ. ಧರ್ಮಭ್ರಷ್ಟತೆಯು ವಾಸ್ತವತೆಯಲ್ಲಿ ಯೆಹೋವನ ವಿರುದ್ಧ ಒಂದು ದಂಗೆಯಾಗಿದೆ. ಕೆಲವು ಧರ್ಮಭ್ರಷ್ಟರು ದೇವರನ್ನು ತಿಳಿದಿರುವ ಮತ್ತು ಸೇವಿಸುವ ಪ್ರತಿಪಾದವನ್ನು ಮಾಡುತ್ತಾರೆ, ಆದರೆ ಆತನ ವಾಕ್ಯದಲ್ಲಿರುವ ಬೋಧನೆಗಳನ್ನು ಯಾ ಆವಶ್ಯಕತೆಗಳನ್ನು ಅವರು ತಿರಸ್ಕರಿಸುತ್ತಾರೆ. ಇತರರು ಬೈಬಲನ್ನು ನಂಬುವುದಾಗಿ ವಾದಿಸುತ್ತಾರೆ, ಆದರೆ ಅವರು ಯೆಹೋವನ ಸಂಸ್ಥೆಯನ್ನು ತಿರಸ್ಕರಿಸಿ, ಅದರ ಕಾರ್ಯವನ್ನು ತಡೆಗಟ್ಟಲು ಕ್ರಿಯಾಶೀಲರಾಗಿ ಪ್ರಯತ್ನಿಸುತ್ತಾರೆ. ಯಾವುದು ಸರಿಯೆಂದು ತಿಳಿದ ಅನಂತರವೂ ಅಂಥ ಕೆಟ್ಟತನವನ್ನು ಅವರು ಬೇಕುಬೇಕೆಂದು ಆರಿಸಿಕೊಂಡಾಗ, ಕೆಟ್ಟತನವು ಅವರೊಳಗೆ ಎಷ್ಟು ಬೇರೂರುತ್ತದೆಯೆಂದರೆ ಅದು ಅವರ ಸ್ವರೂಪದ ಒಂದು ಅಗಲಿಸಲಾರದ ಭಾಗವಾದಾಗ, ಕೆಟ್ಟತನಕ್ಕೆ ತಮ್ಮನ್ನು ಬೇರ್ಪಡಿಸಲಾರದ ರೀತಿಯಲ್ಲಿ ಜೋಡಿಸಿಕೊಂಡ ಅವರನ್ನು ಕ್ರೈಸ್ತರು (ಶಬ್ದದ ಬೈಬಲಿನ ಅರ್ಥಕ್ಕನುಸಾರವಾಗಿ) ಹಗೆಮಾಡಲೇಬೇಕು. ಅಂಥ ಧರ್ಮಭ್ರಷ್ಟರ ವಿರುದ್ಧವಾಗಿ ಯೆಹೋವನ ಅನಿಸಿಕೆಗಳಲ್ಲಿ ನಿಜ ಕ್ರೈಸ್ತರು ಪಾಲಿಗರಾಗಿದ್ದಾರೆ; ಧರ್ಮಭ್ರಷ್ಟ ವಿಚಾರಗಳ ಬಗ್ಗೆ ಅವರು ಕುತೂಹಲವುಳ್ಳವರಲ್ಲ. ಬದಲಿಗೆ, ದೇವರ ಶತ್ರುಗಳಾಗಿ ತಮ್ಮನ್ನು ಮಾಡಿಕೊಂಡವರನ್ನು ಅವರು “ಹೇಸುತ್ತಾರೆ,” ಆದರೆ ಮುಯ್ಯಿತೀರಿಸುವುದನ್ನು ಅವರು ಯೆಹೋವನಿಗೆ ಬಿಟ್ಟುಕೊಡುತ್ತಾರೆ.—ಯೋಬ 13:16; ರೋಮಾಪುರ 12:19; 2 ಯೋಹಾನ 9, 10.
ದೇವರು ನಮ್ಮನ್ನು ಪರೀಕ್ಷಿಸಿ ತಿಳಿಯುವಾಗ
16. (ಎ) ಯೆಹೋವನು ಅವನನ್ನು ಪರೀಕ್ಷಿಸಿ ತಿಳಿಯುವಂತೆ ದಾವೀದನು ಬಯಸಿದ್ದೇಕೆ? (ಬಿ) ನಮ್ಮ ಸ್ವಂತ ಹೃದಯದ ಬಗ್ಗೆ ನಾವೇನನ್ನು ಕಾಣುವಂತೆ ಸಹಾಯಕ್ಕಾಗಿ ದೇವರನ್ನು ಕೇಳಬೇಕು?
16 ಯಾವ ರೀತಿಯಲ್ಲಾದರೂ ದುಷ್ಟನಂತೆ ಇರಲು ದಾವೀದನು ಬಯಸಿರಲಿಲ್ಲ. ಅನೇಕ ಜನರು ತಾವು ಅಂತರ್ಯದಲ್ಲಿ ಏನಾಗಿದ್ದಾರೋ ಅದನ್ನು ಬಚ್ಚಿಡಲು ಪ್ರಯತ್ನಿಸುತ್ತಾರೆ, ಆದರೆ ದಾವೀದನು ನಮ್ರತೆಯಿಂದ ಪ್ರಾರ್ಥಿಸಿದ್ದು: “ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ [ವೇದನಾಮಯ, NW] ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು.” (ಕೀರ್ತನೆ 139:23, 24) ತನ್ನ ಹೃದಯಕ್ಕೆ ಸೂಚಿಸುವಾಗ, ದಾವೀದನು ದೈಹಿಕ ಅಂಗದ ಅರ್ಥದಲ್ಲಿ ಹೇಳಲಿಲ್ಲ. ಆ ಹೇಳಿಕೆಯ ಸಾಂಕೇತಿಕ ಅರ್ಥದೊಂದಿಗೆ ಹೊಂದಿಕೆಯಲ್ಲಿ, ತಾನು ಅಂತರ್ಯದಲ್ಲಿ ಏನಾಗಿದಾನ್ದೋ ಅದಕ್ಕೆ, ಆಂತರಿಕ ವ್ಯಕ್ತಿಗೆ ದಾವೀದನು ಸೂಚಿಸಿದನು. ದೇವರು ನಮ್ಮ ಹೃದಯವನ್ನು ಕೂಡ ಶೋಧಿಸಿ, ನಮಲ್ಲಿ ಏನಾದರೂ ಅಯೋಗ್ಯ ಅಪೇಕ್ಷೆಗಳು, ಒಲವುಗಳು, ಭಾವಾವೇಶಗಳು, ಉದ್ದೇಶಗಳು, ವಿಚಾರಗಳು, ಯಾ ಹೇತುಗಳು ಇವೆಯೋ ಎಂದು ಪರಿಶೀಲಿಸುವಂತೆ ನಾವು ಬಯಸಬೇಕು. (ಕೀರ್ತನೆ 26:2) ಯೆಹೋವನು ನಮ್ಮನ್ನು ಆಮಂತ್ರಿಸುತ್ತಾನೆ: “ಕಂದಾ, ನನ್ನ ಕಡೆಗೆ ಮನಸ್ಸುಕೊಡು, ನಿನ್ನ ಕಣ್ಣುಗಳು ನನ್ನ ಮಾರ್ಗಗಳಲ್ಲಿ ಆನಂದಿಸಲಿ.”—ಜ್ಞಾನೋಕ್ತಿ 23:26.
17. (ಎ) ಅಸಮಾಧಾನದ ಯೋಚನೆಗಳನ್ನು ಬಚ್ಚಿಡುವ ಬದಲಾಗಿ, ನಾವೇನು ಮಾಡಬೇಕು? (ಬಿ) ನಮ್ಮ ಹೃದಯದಲ್ಲಿ ಕೆಟ್ಟ ಪ್ರವೃತ್ತಿಗಳನ್ನು ಕಾಣುವುದು ನಮ್ಮನ್ನು ಆಶ್ಚರ್ಯಪಡಿಸಬೇಕೋ, ಮತ್ತು ಅವುಗಳ ಕುರಿತು ನಾವೇನು ಮಾಡಬೇಕು?
17 ಕೆಟ್ಟ ಅಪೇಕ್ಷೆಗಳು ಅಥವಾ ದುರುದ್ದೇಶಗಳ ಕಾರಣ ಯಾ ನಮ್ಮಲ್ಲಿರುವ ಯಾವುದೇ ದುರ್ನಡತೆಯ ಕಾರಣ ಯಾವುದೇ ವೇದನಾಮಯ, ಅಸಮಾಧಾನದ ವಿಚಾರಗಳು ನಮ್ಮೊಳಗೆ ಅಡಗಿದ್ದರೆ, ವಿಷಯವನ್ನು ಸರಿಪಡಿಸಲು ಯೆಹೋವನು ನಮಗೆ ಸಹಾಯಮಾಡುವಂತೆ ನಾವು ನಿಶ್ಚಯವಾಗಿಯೂ ಬಯಸುತ್ತೇವೆ. “ಕೇಡಿನ ಮಾರ್ಗದಲ್ಲಿರುತ್ತೇನೋ” ಎಂಬ ಶಬ್ದದ ಬದಲಿಗೆ ಮೋಫೆಟ್ಸ್ ಭಾಷಾಂತರವು “ತಪ್ಪು ದಾರಿಯಲ್ಲಿರುತ್ತೇನೋ” ಎಂಬದನ್ನು ಬಳಸಿದೆ; ದ ನ್ಯೂ ಇಂಗ್ಲಿಷ್ ಬೈಬಲ್ ಹೇಳುವುದು: “ನಿನ್ನನ್ನು [ಅಂದರೆ, ದೇವರನ್ನು] ದುಃಖಪಡಿಸುವ ಮಾರ್ಗದಲ್ಲಿರುತ್ತೇನೋ.” ನಾವು ಸ್ವತಃ ನಮ್ಮ ಅಸಮಾಧಾನದ ವಿಚಾರಗಳನ್ನು ಸ್ಪಷ್ಟವಾಗಿಗಿ ತಿಳುಕೊಳ್ಳದೆ ಇರಬಹುದು ಮತ್ತು ಹೀಗೆ, ನಮ್ಮ ಸಮಸ್ಯೆಗಳನ್ನು ದೇವರಿಗೆ ವ್ಯಕ್ತಪಡಿಸುವುದು ಹೇಗೆಂದು ತಿಳಿಯುವುದಿಲ್ಲ, ಆದರೆ ದೇವರು ನಮ್ಮ ಸನ್ನಿವೇಶವನ್ನು ತಿಳಿಯುತ್ತಾನೆ. (ರೋಮಾಪುರ 8:26, 27) ನಮ್ಮ ಹೃದಯದಲ್ಲಿ ಕೆಟ್ಟ ಪ್ರವೃತ್ತಿಗಳಿರುವುದಾದರೆ ಅದು ನಮ್ಮನ್ನು ಆಶ್ಚರ್ಯಗೊಳಿಸಬಾರದು; ಆದರೂ, ಅವುಗಳಿಗೆ ನಾವು ನೆವನ ನೀಡಬಾರದು. (ಆದಿಕಾಂಡ 8:21) ಅವನ್ನು ಬೇರು ಸಮೇತ ಕಿತ್ತುಹಾಕಲು ನಾವು ದೇವರ ಸಹಾಯವನ್ನು ಕೋರಬೇಕು. ನಾವು ನಿಜವಾಗಿಯೂ ಯೆಹೋವನನ್ನು ಮತ್ತು ಆತನ ಮಾರ್ಗಗಳನ್ನು ಪ್ರೀತಿಸುವುದಾದರೆ, “ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನು ಬಲ್ಲವನಾಗಿದ್ದಾನೆ” ಎಂಬ ಭರವಸೆಯಿಂದ ಅಂಥ ಸಹಾಯಕ್ಕಾಗಿ ಆತನನ್ನು ಗೋಚರಿಸಬಲ್ಲೆವು.—1 ಯೋಹಾನ 3:19-21.
18. (ಎ) ಸನಾತನ ಮಾರ್ಗದಲ್ಲಿ ಯೆಹೋವನು ನಮ್ಮನ್ನು ಹೇಗೆ ನಡಿಸುತ್ತಾನೆ? (ಬಿ) ಯೆಹೋವನ ಮಾರ್ಗದರ್ಶನವನ್ನು ನಾವು ಹಿಂಬಾಲಿಸುತ್ತಾ ಮುಂದರಿದರೆ, ಯಾವ ಹೃತ್ಪೂರ್ವಕ ಪ್ರಶಂಸೆಯನ್ನು ಪಡೆಯಲು ನಾವು ನಿರೀಕ್ಷಿಸಬಲ್ಲೆವು?
18 ಯೆಹೋವನು ಸನಾತನ ಮಾರ್ಗದಲ್ಲಿ ತನ್ನನ್ನು ನಡಿಸುವಂತೆ ಕೀರ್ತನೆಗಾರನ ಪ್ರಾರ್ಥನೆಗೆ ಹೊಂದಿಕೆಯಲ್ಲಿ, ಯೆಹೋವನು ತನ್ನ ದೀನರಾದ, ವಿಧೇಯ ಸೇವಕರನ್ನು ನಿಶ್ಚಯವಾಗಿ ನಡಿಸುತ್ತಾನೆ. ಕೆಟ್ಟತನಕ್ಕಾಗಿ ತಕ್ಕಕಾಲಕ್ಕೆ ಮೊದಲೇ ನಾಶಹೊಂದದ ಅರ್ಥದಲ್ಲಿ ದೀರ್ಘಾಯುಷ್ಯವಾಗಿರಬಲ್ಲ ಮಾರ್ಗದಲ್ಲಿ ಮಾತ್ರವೇ ಅಲ್ಲ, ನಿತ್ಯ ಜೀವದ ಮಾರ್ಗದಲ್ಲೂ ಅವನು ಅವರನ್ನು ನಡಿಸುತ್ತಾನೆ. ನಮಗೆ ಯೇಸುವಿನ ಯಜ್ಞದ ಪಾಪ-ಪರಿಹಾರಕ ಬೆಲೆಯ ಅಗತ್ಯವನ್ನು ಅವನು ಮನದಟ್ಟುಪಡಿಸುತ್ತಾನೆ. ನಾವಾತನ ಚಿತ್ತವನ್ನು ಮಾಡಲು ಶಕ್ತರಾಗುವಂತೆ ಆತನು ತನ್ನ ವಾಕ್ಯ ಮತ್ತು ಸಂಸ್ಥೆಯ ಮೂಲಕ ನಮಗೆ ಅತ್ಯಾವಶ್ಯಕ ಉಪದೇಶವನ್ನು ಒದಗಿಸುತ್ತಾನೆ. ಹೊರಮೆಯಲ್ಲಿ ಯಾವ ರೀತಿಯ ವ್ಯಕ್ತಿಗಳಾಗಿರುತ್ತೇವೆಂದು ವಾದಿಸುತ್ತೇವೋ ಹಾಗೆ ಅಂತರ್ಯದಲ್ಲೂ ಆಗುವಂತೆ ಆತನ ಸಹಾಯಕ್ಕಾಗಿ ಪ್ರತಿಕ್ರಿಯೆ ತೋರಿಸುವ ಮಹತ್ವವನ್ನು ಆತನು ನಮಗೆ ಒತ್ತಿಹೇಳುತ್ತಾನೆ. (ಕೀರ್ತನೆ 86:11) ಮತ್ತು ನೀತಿಯ ಹೊಸ ಲೋಕದಲ್ಲಿ ನಿತ್ಯ ಜೀವದೊಂದಿಗೆ ಪರಿಪೂರ್ಣ ಆರೋಗ್ಯದ ಒಂದು ಪ್ರತೀಕ್ಷೆಯೊಂದಿಗೆ ಒಬ್ಬನೇ ಸತ್ಯ ದೇವರಾದ ಆತನನ್ನು ಸೇವಿಸುವುದರಲ್ಲಿ ಉಪಯೋಗಿಸಲು, ಆತನು ನಮ್ಮನ್ನು ಉತ್ತೇಜಿಸುತ್ತಾನೆ. ಆತನ ಮಾರ್ಗದರ್ಶನಕ್ಕೆ ನಿಷ್ಠೆಯಿಂದ ನಾವು ಪ್ರತಿಕ್ರಿಯೆ ತೋರಿಸುವುದನ್ನು ಮುಂದುವರಿಸುವುದಾದರೆ, ಆತನು ಕಾರ್ಯತಃ, ತನ್ನ ಮಗನಿಗೆ ಹೇಳಿದಂತೆ, ನಮಗೂ ಹೀಗನ್ನುವನು: “ನಿನ್ನನ್ನು ನಾನು ಮೆಚ್ಚಿದ್ದೇನೆ.”—ಲೂಕ 3:22; ಯೋಹಾನ 6:27; ಯಾಕೋಬ 1:12.
ನಿಮ್ಮ ಹೇಳಿಕೆಯೇನು?
▫ ತನ್ನ ಸೇವಕರ ಬಗ್ಗೆ ಯೆಹೋವನ ವೀಕ್ಷಣೆಯು ಅನೇಕಾವರ್ತಿ ಮಾನವರಿಗಿಂತ ಭಿನ್ನವಾಗಿದೆಯೇಕೆ?
▫ ದೇವರು ನಮ್ಮ ಹೃದಯವನ್ನು ಪರೀಕ್ಷಿಸುವಾಗ ಏನನ್ನು ಕಾಣುತ್ತಾನೋ ಅದನ್ನು ತಿಳಿಯಲು ಯಾವುದು ನಮಗೆ ಸಹಾಯಮಾಡಬಲ್ಲದು?
▫ ಸತ್ಯಾಂಶಗಳನ್ನು ಕಲಿಯಲು ಮತ್ತು ನಮ್ಮ ಹೃದಯವನ್ನು ಕಾಪಾಡಲು ಯಾವ ರೀತಿಯ ಅಧ್ಯಯನವು ನಮಗೆ ಸಹಾಯಮಾಡುತ್ತದೆ?
▫ ದೇವರು ಏನನ್ನುತ್ತಾನೋ ಅದನ್ನು ತಿಳಿಯುವದು ಮಾತ್ರವಲ್ಲ ಆತನ ಅನಿಸಿಕೆಗಳಲ್ಲೂ ಪಾಲಿಗರಾಗುವುದು ಯಾಕೆ ಪ್ರಾಮುಖ್ಯವು?
▫ “ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ” ಎಂದು ನಾವು ವ್ಯಕ್ತಿಪರವಾಗಿ ಯಾಕೆ ಪ್ರಾರ್ಥಿಸಬೇಕು?
[ಪುಟ 16 ರಲ್ಲಿರುವ ಚಿತ್ರ]
ಅಭ್ಯಾಸ ಮಾಡುವಾಗ, ದೇವರ ಸಂಕಲ್ಪಗಳನ್ನು ಮತ್ತು ಅನಿಸಿಕೆಗಳನ್ನು ನಿಮ್ಮದಾಗಿ ಮಾಡಲು ಪ್ರಯತ್ನಮಾಡಿರಿ
[ಪುಟ 18 ರಲ್ಲಿರುವ ಚಿತ್ರ]
ಯೆಹೋವನ ಸಂಕಲ್ಪಗಳು “[ಸಮುದ್ರದ] ಮರಳಿಗಿಂತ ಹೆಚ್ಚಾಗಿವೆ”
[ಕೃಪೆ]
Pictorial Archive (Near Eastern History) Est.