‘ಯೆಹೋವನಲ್ಲಿ ಭರವಸೆ ಇಡುವ’ ಯುವ ಜನರು
ಸೌಂದರ್ಯದ ಸಂಬಂಧದಲ್ಲಿ ಯುವಜನರಿಗೆ ಒಂದು ಏಕ ಸ್ವಾಮ್ಯವಿರುವುದೂ ಇಲ್ಲ, ವಿವೇಕದ ಮಾರುಕಟ್ಟೆಯನ್ನು ವೃದ್ಧರು ಸ್ವಾಧೀನಪಡಿಸಿಕೊಂಡಿರುವುದೂ ಇಲ್ಲ. (ಹೋಲಿಸಿ, ಜ್ಞಾನೋಕ್ತಿ 11:22; ಪ್ರಸಂಗಿ 10:1.) ಅದಕ್ಕೆ ಬದಲಾಗಿ, ಯಾರು ಯೆಹೋವನಲ್ಲಿ ಭರವಸೆಯಿಡುತ್ತಾರೊ ಮತ್ತು ಆತನ ಕುರಿತು “ನೀನೇ ನನ್ನ ದೇವರು,” ಎಂದು ಮನಃಪೂರ್ವಕವಾಗಿ ಹೇಳುತ್ತಾರೊ ಅವರು ನಿಜವಾದ ವಿವೇಕ ಮತ್ತು ನಿತ್ಯವಾದ ಸೌಂದರ್ಯವನ್ನು ಪಡೆದಿರುವವರಾಗಿದ್ದಾರೆ.—ಕೀರ್ತನೆ 31:14; ಜ್ಞಾನೋಕ್ತಿ 9:10; 16:31.
ಎಳೆಯರು ಮತ್ತು ವೃದ್ಧರು ಸೇರಿದ್ದು, ಸುಂದರವಾದ ಜನರನ್ನು ಒಳಗೊಂಡಿರುವ ಅಭಿವೃದ್ಧಿಹೊಂದುತ್ತಿರುವ ಒಂದು ಜನಸಮುದಾಯವು, ದೇವರನ್ನು ಸೇವಿಸುವ ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ಕುರಿತು ಸಾರುವ ಮೂಲಕ ತಮ್ಮ ವಿವೇಕವನ್ನು ಪ್ರದರ್ಶಿಸುತ್ತದೆ. ಎಂಟು ವರ್ಷ ಪ್ರಾಯದ ಜಬ್ರೀನಳ ಉದಾಹರಣೆಯನ್ನು ಪರಿಗಣಿಸಿ.
ಜಬ್ರೀನ ಜರ್ಮನಿಯಲ್ಲಿ ವಾಸಿಸುತ್ತಾಳೆ ಮತ್ತು ಎರಡನೇ ದರ್ಜೆಯಲ್ಲಿದ್ದಾಳೆ. ಅವಳ ಶಾಲೆಯನ್ನು ಹಾಜರಾದ ಯೆಹೋವನ ಸಾಕ್ಷಿಗಳಲ್ಲಿ ಅವಳು ಮೊದಲಿಗಳಾಗಿದ್ದಾಳೆ. ವಿಷಾದಕರವಾಗಿ, ವಿದ್ಯಾರ್ಥಿಗಳಿಗೆ ತಮ್ಮ ಅಚ್ಚುಮೆಚ್ಚಿನ ಪುಸ್ತಕವನ್ನು ತರಗತಿಗೆ ತರುವಂತೆ ಉಪಾಧ್ಯಾಯರು ಕೇಳಿಕೊಂಡ ದಿನದ ತನಕ, ಅವಳು ತನ್ನ ಶಾಲಾ ಸಂಗಾತಿಗಳ ಕುಚೋದ್ಯಗಳಿಗೆ ಗುರಿಹಲಗೆಯಾಗದ್ದಳು. ಮೈ ಬುಕ್ ಆಫ್ ಬೈಬಲ್ ಸ್ಟೊರೀಸ್ ಪುಸ್ತಕವನ್ನು ಕೊಂಡೊಯ್ಯಲು ಜಬ್ರೀನ ನಿರ್ಧರಿಸಿದಳು. ಹಿಂದಿನ ರಾತ್ರಿ ಅವಳು ಭಯಪಟ್ಟಳಾದರೂ, ತರಗತಿಗಾಗಿ ಅವಳು ಉತ್ತಮವಾಗಿ ತಯಾರಾದಳು. ಅವಳ ತರಗತಿಯಲ್ಲಿ 26 ವಿದ್ಯಾರ್ಥಿಗಳು ಇದ್ದುದರಿಂದ, ತನಗೆ ಹೆಚ್ಚು ಸಮಯ ಸಿಗಲಾರದೆಂದು ಅವಳು ತಿಳಿದಿದ್ದಳು. ಆದರೆ ತನ್ನ ನೀಡುವಿಕೆಗೆ ಯಾರೊಬ್ಬರೂ ಅಡಿಮ್ಡಾಡುವಂತೆ ಬಿಡಬಾರದೆಂದು ಅವಳು ತೀರ್ಮಾನಿಸಿಕೊಂಡಳು ಮತ್ತು ಯೆಹೋವನು ಸಹಾಯಮಾಡುವನೆಂದು ಅವಳು ಖಾತ್ರಿಯಿಂದಿದ್ದಳು. ನಿಶ್ಚಿತ ದಿನದಂದು, ಯಾರು ಒಂದು ಪುಸ್ತಕವನ್ನು ಜೊತೆಯಲ್ಲಿ ತಂದಿದ್ದೀರಿ ಮತ್ತು ಅದನ್ನು ಪ್ರಥಮವಾಗಿ ತೋರಿಸಲು ಬಯಸುತ್ತೀರಿ ಎಂದು ಉಪಾಧ್ಯಾಯರು ಕೇಳಿದರು. ಆಶ್ಚರ್ಯಕರವಾಗಿಯೆ, ಜಬ್ರೀನ ಮಾತ್ರ ಒಂದು ಪುಸ್ತಕವನ್ನು ತಂದಿದ್ದಳು. ಅವಳು ತರಗತಿಯ ಎದುರು ನಿಂತುಕೊಂಡಳು ಮತ್ತು ಪುಸ್ತಕವನ್ನು ಓದುತ್ತಾ ಮತ್ತು ಅದರಿಂದ ಚಿತ್ರಗಳನ್ನು ತೋರಿಸುತ್ತಾ, ಪ್ರತಿಯೊಂದು ವಿಚಾರವೂ ಬೈಬಲ್ ಆಧಾರಿತವಾದುದೆಂದು ವಿವರಿಸುತ್ತಾ ಮಾತಾಡಲು ಆರಂಭಿಸಿದಳು. ಮುಕ್ತಾಯಗೊಳಿಸುತ್ತಾ ಅವಳು ಕೇಳಿದ್ದು: “ಈ ಪುಸ್ತಕವನ್ನು ಪಡೆದುಕೊಳ್ಳುವುದರಲ್ಲಿ ಯಾರು ಆಸಕ್ತರಿದ್ದೀರಿ?” ಅವಳು ಒಂದು ಪ್ರತಿಯನ್ನು ಉಪಾಧ್ಯಾಯರಿಗೆ ನೀಡಿದಳು, ಮತ್ತು ಅನಂತರದ ಕೆಲವು ದಿನಗಳಲ್ಲಿ, ಇನ್ನೂ ಹತ್ತು ಅಧಿಕ ಪುಸ್ತಕಗಳನ್ನು ತನ್ನ ಶಾಲಾ ಸಂಗಾತಿಗಳಲ್ಲಿ ಕೆಲವರಿಗೆ ನೀಡಿದಳು. “ಇದರಂತಹ ಯಾವುದನ್ನೂ ನಾನೆಂದೂ ಕಂಡಿಲ್ಲ,” ಎಂಬುದು ಅವಳ ನೀಡುವಿಕೆಗೆ ಉಪಾಧ್ಯಾಯರ ಹೇಳಿಕೆಯಾಗಿತ್ತು. ಅವಳ ಕೆಲಸಕ್ಕಾಗಿ ಅವಳಿಗೆ ಅತ್ಯುತ್ತಮ ಅಂಕವನ್ನೇ ಉಪಾಧ್ಯಾಯರು ಕೊಟ್ಟರು.
ವಾಸ್ತವವಾಗಿ, ಶಾಲೆಯಲ್ಲಿ ಅನೇಕ ಯುವ ಸಾಕ್ಷಿಗಳು ಸುವಾರ್ತೆಯ ಸಂತೋಷದ ಪ್ರಚಾರಕರಾಗಿದ್ದಾರೆ. ಮೆಕ್ಸಿಕೊದಲ್ಲಿರುವ 11 ವರ್ಷ ಪ್ರಾಯದ ಪ್ರಚಾರಕಳಾದ ಏರೀಕಳದ್ದು ಇನ್ನೊಂದು ಉದಾಹರಣೆಯಾಗಿದೆ. ಶೈಶವದಿಂದಲೆ ಯೆಹೋವನನ್ನು ಪ್ರೀತಿಸುವಂತೆ ಅವಳು ಕಲಿಸಲ್ಪಟ್ಟಿದ್ದಳು. ಅವಳ ಶಾಲಾ ಕೆಲಸವು ಎದ್ದುಕಾಣುವಂಥಾದ್ದಾಗಿದೆ. ಏಯ್ಡ್ಸ್ ಮತ್ತು ಹೊಗೆಸೊಪ್ಪು ಮತ್ತು ಮದ್ಯಸಾರ ಪಾನೀಯದ ಚಟದ ಕುರಿತು ವಸ್ತು ವಿಷಯವನ್ನು ತಯಾರಿಸುವುದು ಅವಳಿಗೆ ಕೊಡಲ್ಪಟ್ಟ ನೇಮಕಗಳಲ್ಲಿ ಒಂದಾಗಿತ್ತು. ಎಚ್ಚರ! ಪತ್ರಿಕೆಯನ್ನು ಉಪಯೋಗಿಸಿ, ಅವಳು ಉತ್ತಮವಾಗಿ ತಯಾರಿಸಿದಳು, ಮತ್ತು ಅತ್ಯುತ್ತಮ ಅಂಕಗಳನ್ನು ಗಳಿಸಿದಳು. ಆ ಸಮಾಚಾರವನ್ನು ಅವಳು ಎಲ್ಲಿಂದ ಪಡೆದುಕೊಂಡಳೆಂದು ಅವಳ ಉಪಾಧ್ಯಾಯಿನಿಯು ಕೇಳಿದಳು ಮತ್ತು ಆ ವಿಷಯಗಳ ಕುರಿತು ಸಂಬಂಧಿಸಿದ ಲೇಖನಗಳಿರುವ ಪತ್ರಿಕೆಗಳು ಅವಳಿಗೆ ಕೊಡಲ್ಪಟ್ಟವು. ಅನಂತರ, ಇಡೀ ತರಗತಿಯೊಂದಿಗೆ ಈ ವಿಷಯಗಳನ್ನು ಚರ್ಚಿಸಲಿಕ್ಕಾಗಿ ಉಪಾಧ್ಯಾಯಿನಿಯು ಆ ಪತ್ರಿಕೆಗಳನ್ನು ಉಪಯೋಗಿಸಿದಳು. ಏರೀಕಳ ನಡತೆ, ತನ್ನ ಉಪಾಧ್ಯಾಯರ ಕಡೆಗಿರುವ ಅವಳ ಗೌರವ, ಮತ್ತು ಅವಳ ಆತ್ಯುತ್ತಮ ಅಂಕಗಳ ಕಾರಣದಿಂದ, ಬಹುಮಾನಗಳು, ಡಿಪ್ಲೋಮಗಳು, ಮತ್ತು ಅಂಶಿಕ ವಿದ್ಯಾರ್ಥಿವೇತನಗಳನ್ನು ಪಡೆದುಕೊಳ್ಳಲು ಅವಳು ಅರ್ಹತೆಯನ್ನು ಹೊಂದಿದಳು. ಆದರೂ, ತನ್ನನ್ನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳನ್ನಾಗಿ ಗುರುತಿಸಿಕೊಂಡಿರುವುದು, ಬೈಬಲ್ ಸಾಹಿತ್ಯಗಳನ್ನು ನೀಡಲು ಶಕ್ತಳಾಗಿರುವುದು, ಮತ್ತು ದೇವರ ಹೆಸರನ್ನು ಮಹಿಮೆಗೇರಿಸಿರುವುದು ತಾನೇ ಅವಳ ಮಹಾನ್ ಸಾಧನೆಗಳೆಂದು ಅವಳು ಭಾವಿಸುತ್ತಾಳೆ.
ನ್ಯೂ ಜೀಲೆಂಡ್ನಲ್ಲಿ ವಾಸಿಸುವ ಹತ್ತು ವರ್ಷ ಪ್ರಾಯದ ಒಬ್ಬ ಹುಡುಗನಾದ ಶಾನನ್ನ ಉದಾಹರಣೆ ಇದೆ. ಒಂದೇ ಒಂದು ಒಳ್ಳೆಯ ಕಣ್ಣು ಅವನಿಗಿದೆ; ಅವನು ಮಗುವಾಗಿದ್ದಾಗಲೆ ಇನ್ನೊಂದು ಕಣ್ಣನ್ನು ಕ್ಯಾನ್ಸರ್ನಿಂದ ಕಳೆದುಕೊಂಡನು. ಶಾನನ್ ಏಳು ವರ್ಷದವನಿದ್ದಾಗ, ಅವನ ತಾಯಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಳು. ಹಾಗಿದ್ದರೂ, ತನ್ನ ಬೈಬಲ್ ಪಾಠಗಳನ್ನು ಪ್ರಾರಂಭಿಸಿದ ಸ್ವಲ್ಪ ಸಮಯದಲ್ಲಿಯೆ ಅವಳು ವಿವಾಹದ ಸಹಾಯವಿಲ್ಲದೆ ಒಬ್ಬ ವ್ಯಕ್ತಿಯೊಂದಿಗೆ ಜೀವಿಸಲಾರಂಭಿಸಿದಳು ಮತ್ತು ತನ್ನ ಅಭ್ಯಾಸಗಳನ್ನು ನಿಲ್ಲಿಸಲು ನಿರ್ಧರಿಸಿದಳು. ತನ್ನ ಬೈಬಲ್ ಅಭ್ಯಾಸವು ಮುಂದುವರಿಸುವಂತೆ ಶಾನನ್ ಬೇಡಿಕೊಂಡನು. ಅವನ ಅಪೇಕ್ಷೆಗೆ ಅನುಮತಿ ದೊರೆಯಿತು. ಸಾಕ್ಷಿಗಳು ಭೇಟಿ ಮಾಡುತ್ತಾ ಇದ್ದರು, ಮತ್ತು ಕೊನೆಗೆ ಮನೆವಾರ್ತೆಯ ಮೂವರು ಸದಸ್ಯರೂ ಬೈಬಲನ್ನು ಅಭ್ಯಾಸಿಸಿದರು ಮತ್ತು ಆತ್ಮಿಕ ಪ್ರಗತಿಯನ್ನು ಮಾಡಿದರು. ನ್ಯಾಯಬದ್ಧವಾಗಿ ವಿವಾಹವಾದ ಅನಂತರ, ಶಾನನ್ನ ತಾಯಿ ಮತ್ತು ಮಲತಂದೆ ದೀಕ್ಷಾಸ್ನಾನವನ್ನು ಪಡೆದುಕೊಂಡರು.
ಒಂದು ದಿನ ಶಾನನ್ ಮತ್ತು ಸರ್ಕಿಟ್ ಮೇಲ್ವಿಚಾರಕರ ಹೆಂಡತಿ ಒಟ್ಟಿಗೆ ಕ್ಷೇತ್ರ ಸೇವೆಯಲ್ಲಿ ಕೆಲಸಮಾಡುತ್ತಿದ್ದರು. “ನಿನ್ನ ಕಣ್ಣಿಗೆ ಏನಾಯಿತು?” ಎಂದು ಒಬ್ಬ ಮನೆಯವನು ಶಾನನ್ನನ್ನೇ ಕೇಳಿದನು. “ಅದರಲ್ಲಿ ಕ್ಯಾನ್ಸರ್ ನನಗಿತ್ತು, ಮತ್ತು ಅದನ್ನು ತೆಗೆಯಬೇಕಾಯ್ತು, ಪ್ರಮೋದವನದಲ್ಲಿ ಅತಿ ಬೇಗನೆ ಯೆಹೋವನು ನನಗೆ ಹೊಸದೊಂದು ಕಣ್ಣನ್ನು ನೀಡಲಿರುವನು, ಮತ್ತು ಅದರ ಕುರಿತಾಗಿಯೆ ನಿಮಗೆ ತಿಳಿಸಲು ನಾವು ಇಲ್ಲಿಗೆ ಬಂದಿದ್ದೇವೆ,” ಎಂದು ಅವನು ಉತ್ತರಿಸಿದನು.