ಲೋಕದ ಸುತ್ತಲೂ ಯೆಹೋವನ ಸಾಕ್ಷಿಗಳು—ಫಿಲಿಪ್ಪೀನ್ ರಿಪಬ್ಲಿಕ್
ಫಿಲಿಪ್ಪೀನ್ಸ್ನ ಒಕ್ಕೂಟವನ್ನು ರೂಪಿಸುವ 7,083 ಏರುಪೇರಿನ ಉಷ್ಣವಲಯದ ದ್ವೀಪಗಳು, ಆಂಶಿಕವಾಗಿ ಮುಳುಗಿರುವ ಒಂದು ಪರ್ವತ ಶ್ರೇಣಿಯ ಮೇಲ್ಭಾಗವಾಗಿವೆ.a ಮತ್ತು ಫಿಲಿಪ್ಪೀನ್ಸ್ನ 6,20,00,000 ನಿವಾಸಿಗಳು ಬಹುಮಟ್ಟಿಗೆ ಯಾವುದೇ ವಿಷಯದ ಮೇಲೂ ಮಾತಾಡಲು ಇಷ್ಟಪಡುತ್ತಾರೆ. ಈ ಸೌಜನ್ಯ ಆತ್ಮವು ರಾಜ್ಯ ಸಾಕ್ಷಿಗಾಗಿ ಫಲವತ್ತಾದ ಕ್ಷೇತ್ರವನ್ನು ಫಲಿಸುತ್ತದೆ.
ಶಾಲೆಯಲ್ಲಿ ಸಾಕ್ಷಿ ನೀಡುವುದು
ಮಾಸ್ಬಾಟಿ ಎಂಬ ದ್ವೀಪದಲ್ಲಿ, ಒಬ್ಬ ಯುವ ಪ್ರೌಢ ಶಾಲೆಯ ವಿದ್ಯಾರ್ಥಿನಿಯು ಆಕೆಯ ಶಿಕ್ಷಕಿ ಮತ್ತು ಕ್ಲಾಸಿಗೆ, ಸರಿ ತಪ್ಪು ಕಿಜ್ವ್ನ ಸಂದರ್ಭದಲ್ಲಿ ಸಾಕ್ಷಿಕೊಡಲು ಶಕ್ತಳಾದಳು. ಅವಳು ವರದಿಸುವುದು:
“ಹೇಳಿಕೆಯು, ‘ದೇವರು ನನ್ನನ್ನು ಪ್ರೀತಿಸಿದರೆ, ಆತನು ನನಗೆ ಸಮಸ್ಯೆಗಳನ್ನು ಕೊಡುವುದಿಲ್ಲ ಯಾ ಕಷ್ಟಾನುಭವಿಸುವಂತೆ ನನ್ನನ್ನು ಬಿಡುವುದಿಲ್ಲ,’ ಎಂಬುದಾಗಿತ್ತು. ನಮ್ಮ ಪರೀಕ್ಷಾ ಹಾಳೆಗಳನ್ನು ನನ್ನ ಶಿಕ್ಷಕಿಯು ಪರಿಶೀಲಿಸಿದಾಗ, ನನ್ನನ್ನು ಹೊರೆತುಪಡಿಸಿ ಎಲ್ಲರೂ ಸರಿಯೆಂದು ಉತ್ತರಿಸಿದ್ದನ್ನು ಆಕೆಯು ಕಂಡುಕೊಂಡಳು. ತಪ್ಪೆಂದು ನಾನು ಯಾಕೆ ಉತ್ತರಿಸಿದೆ ಎಂಬುದನ್ನು ಕ್ಲಾಸಿಗೆ ವಿವರಿಸುವಂತೆ ನನ್ನ ಶಿಕ್ಷಕಿಯು ನನ್ನನ್ನು ಅನುಮತಿಸಿದಳು. ಆತನು ಕಷ್ಟಾನುಭವಗಳನ್ನು ಅನುಮತಿಸಿ, ನಾವು ಪರೀಕ್ಷಿಸಲ್ಪಡುವಂತೆ ಅವಕಾಶ ಕೊಡುವುದಾದರೂ, ನಮಗೆ ಸಮಸ್ಯೆಗಳನ್ನು ಕೊಡುವಾತನು ದೇವರಾಗಿಲ್ಲ ಎಂದು ನಾನು ಹೇಳಿದೆ. ನಾನು ಶಾಲೆಗೆ ಯಾವಾಗಲೂ ತೆಗೆದುಕೊಂಡು ಹೋಗುವ ನನ್ನ ಬೈಬಲನ್ನು ಉಪಯೋಗಿಸುತ್ತಾ, 1 ಯೋಹಾನ 4:8 ರಲ್ಲಿ ಇರುವ ‘ದೇವರು ಪ್ರೀತಿಸ್ವರೂಪಿ’ ಎಂಬ ಮಾತುಗಳ ಕುರಿತು ನಾನು ಕ್ಲಾಸಿನೊಂದಿಗೆ ವಿವೇಚಿಸಿದೆ. ನನ್ನ ವಿವರಣೆಯ ಅನಂತರ, ನನ್ನ ಶಿಕ್ಷಕಿಗೆ ಮನವರಿಕೆಯಾಗಿ, ಮೇಜನ್ನು ತಟ್ಟಿ, ಅವಳು ಅಂದದ್ದು: ‘ಮಾರಿಲೂ ಹೇಳಿದ್ದು ಸರಿ.’ ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ಪಡೆದವಳು ನಾನೊಬ್ಬಳೆ ಆಗಿದ್ದೆ ಮತ್ತು ಅತಿ ಹೆಚ್ಚು ಅಂಕವನ್ನು ಪಡೆದೆ.”
ರಾಜ್ಯ ಸಂದೇಶವು ಎಲ್ಲೆಡೆಯೂ ಇದೆ
ಫಿಲಿಪ್ಪೀನ್ಸ್ನ ಇನ್ನೊಂದು ಭಾಗದಲ್ಲಿ ಮನೆ ಮನೆಯ ಶುಶ್ರೂಷೆಯಲ್ಲಿ ತೊಡಗಿರುವಾಗ, ಒಬ್ಬಾಕೆ ಕ್ರಮದ ಪಯನೀಯರ್ (ಸುವಾರ್ತೆಯ ಪೂರ್ಣ ಸಮಯದ ಘೋಷಕಿ), ಮೂವರು ಚಿಕ್ಕ ಮಕ್ಕಳ ತಾಯಿಯನ್ನು ಭೇಟಿಯಾದಳು. ಆ ಸ್ತ್ರೀಯು ರಾಜ್ಯ ಸಂದೇಶದಲ್ಲಿ ಆಳವಾದ ಆಸಕ್ತಿಯನ್ನು ತೋರಿಸಿದಳು, ಮತ್ತು ಆಕೆಯೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವುದನ್ನು ಇದು ಸರಳಗೊಳಿಸಿತು. ಅವಳು ಬೈಬಲ್ ಪಾಠಗಳನ್ನು ವಿಶೇಷವಾಗಿ ಯೆಹೋವನ ಸಾಕ್ಷಿಗಳಿಂದ ಪಡೆಯುತ್ತಿದ್ದಾಳೆ ಎಂಬ ವಿಷಯದಿಂದ ಆಕೆಯ ಗಂಡನು ಸಂತೋಷಪಡದಿದ್ದರೂ, ಅಧ್ಯಯನವು ಮುಂದುವರಿಯಿತು.
ಸಾಕ್ಷಿಗಳೊಂದಿಗೆ ತನ್ನ ಹೆಂಡತಿಯ ಸಹವಾಸವನ್ನು ಇದು ಕೊನೆಗೊಳಿಸುವುದೆಂದು ಯೋಚಿಸುತ್ತಾ, ಮನುಷ್ಯನು ತನ್ನ ಕುಟುಂಬವನ್ನು ಇನ್ನೊಂದು ಪಟ್ಟಣಕ್ಕೆ ಸ್ಥಳಾಂತರಿಸಿದನು. ಹಾಗಿದ್ದರೂ, ಈ ಸ್ತ್ರೀಯನ್ನು ಕಂಡುಹಿಡಿದು, ಅವಳ ಬೈಬಲ್ ಅಧ್ಯಯನವನ್ನು ಮತ್ತೆ ಆರಂಭಿಸುವಲ್ಲಿ ಹೆಚ್ಚು ಕಾಲ ಹಿಡಿಯಲಿಲ್ಲ. ನಿಸ್ಸಂದೇಹವಾಗಿ, ಅವಳ ಗಂಡನು ಬಹಳ ತಳಮಳಗೊಂಡನು. ತನ್ನ ಕೋಪವನ್ನು ತನ್ನೊಂದಿಗೆ ಕೆಲಸಕ್ಕೆ ಕೊಂಡೊಯ್ದು, ಯಾರ ವಾಹನವನ್ನು ಅವನು ದುರಸ್ತು ಮಾಡುತ್ತಿದ್ದನೊ ಆ ಗ್ರಾಹಕನ ಮೇಲೆ ತನ್ನ ಕೋಪವನ್ನು ತೋರಿಸಿದನು. ಈ ಗ್ರಾಹಕನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದನು ಎಂದು ಆ ಮನುಷ್ಯನಿಗೆ ಗೊತ್ತಿರಲಿಲ್ಲ.
ಅವನ ಹೆಂಡತಿ ಆಕೆಯ ಬೈಬಲ್ ಅಧ್ಯಯನದೊಂದಿಗೆ ಮುಂದುವರಿದರೆ ಅದು ಇಡೀ ಕುಟುಂಬಕ್ಕೆ ಬಹಳ ಪ್ರಯೋಜನಕಾರಿಯಾಗಿರುವುದೆಂದು ಸಾಕ್ಷಿಯು ವಿವರಿಸಿದನು. ಬೈಬಲ್ ತತ್ವಗಳನ್ನು ಮನೆಯಲ್ಲಿಯೇ ಅನ್ವಯಿಸಲು ಅವಳು ತೊಡಗಬಹುದು. ದೇವರ ರಾಜ್ಯದ ಕುರಿತು ಕಲಿಯುವುದರ ಮೂಲಕ ಗಂಡನು ತಾನೇ ಪ್ರಯೋಜನ ಪಡೆಯಬಹುದೆಂದು ಕೂಡ ಸೂಚಿಸಲಾಗಿತ್ತು.
ಈ ಚರ್ಚೆಯಿಂದ ಏನು ಫಲಿಸಿತು? ಆ ಮನುಷ್ಯನ ಹೆಂಡತಿಗೆ ಬೈಬಲನ್ನು ಅಭ್ಯಾಸಿಸಲು ಹೆಚ್ಚು ಸ್ವಾತಂತ್ರ್ಯವಿತ್ತು, ಮತ್ತು ಅವನು ತನ್ನ ಕುಟುಂಬವನ್ನು ತಮ್ಮ ಮೊದಲಿನ ಮನೆಗೆ ಸ್ಥಳಾಂತರಿಸಲು ನಿರ್ಣಯಿಸಿದನು. ಅಲ್ಲಿ ಅದೀಕ್ಷಾಸ್ನಾತ ರಾಜ್ಯ ಪ್ರಚಾರಕಳಾಗುವ ಮಟ್ಟಿಗೆ ಸ್ತ್ರೀಯು ಆತ್ಮಿಕ ಪ್ರಗತಿಯನ್ನು ಮಾಡಿದಳು. ಆಕೆಯ ಗಂಡನು ಕೂಡ ಒಂದು ಬೈಬಲ್ ಅಧ್ಯಯನವನ್ನು ಸ್ವೀಕರಿಸಿದನು, ಮತ್ತು ಇಡೀ ಕುಟುಂಬವು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಆರಂಭಿಸಿತು.
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ಮಾಹಿತಿಗಾಗಿ, 1994ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್ ನೋಡಿರಿ.
[ಪುಟ 8 ರಲ್ಲಿರುವ ಚೌಕ]
ದೇಶದ ಪಾರ್ಶ್ವ ದೃಶ್ಯ
ಇಸವಿ 1993ರ ಸೇವಾ ವರ್ಷ
ಸಾಕ್ಷಿನೀಡುತ್ತಿರುವವರ ಉಚ್ಚಾಂಕ: 1,16,576
ಪ್ರಮಾಣ, 1 ಸಾಕ್ಷಿಗೆ: 549
ಜ್ಞಾಪಕ ಹಾಜರಿ: 3,57,388
ಸರಾಸರಿ ಪಯನೀಯರ್ ಪ್ರಚಾರಕರು: 22,705
ಸರಾಸರಿ ಬೈಬಲ್ ಅಧ್ಯಯನಗಳು: 94,370
ದೀಕ್ಷಾಸ್ನಾನ ಪಡೆದವರು: 7,559
ಸಭೆಗಳು: 3,332
ಶಾಖಾ ಆಫೀಸ್: ಮನಿಲಾ
[ಪುಟ 9 ರಲ್ಲಿರುವ ಚಿತ್ರ]
ಮಾರುಕಟ್ಟೆಯ ಸಾಕ್ಷಿಕಾರ್ಯವು ಉತ್ತಮ ಫಲಿತಾಂಶಗಳನ್ನು ತರುತ್ತದೆ
[ಪುಟ 9 ರಲ್ಲಿರುವ ಚಿತ್ರ]
ಮನಿಲಾದಲ್ಲಿ ವಾಚ್ಟವರ್ ಸೊಸೈಟಿಯ ಶಾಖಾ ಆಫೀಸು