ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 5/15 ಪು. 21-23
  • ನೀವು ಸಹನೆಯನ್ನು ಅಭ್ಯಸಿಸಬಲ್ಲಿರೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಸಹನೆಯನ್ನು ಅಭ್ಯಸಿಸಬಲ್ಲಿರೊ?
  • ಕಾವಲಿನಬುರುಜು—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ತಾಳ್ಮೆಯಿಲ್ಲದ ನಮ್ಮ ಆಧುನಿಕ ಲೋಕ
  • ಯೆಹೋವನು ನಿಮ್ಮ ಸಹನೆಯನ್ನು ಬಲಪಡಿಸಬಲ್ಲನು
  • ತನ್ನ ಮತ್ತು ಇತರರ ಕುರಿತಾದ ಯೋಗ್ಯವಾದ ನೋಟ
  • ಸಹನೆಯು ಸಮೃದ್ಧವಾದ ಪ್ರತಿಫಲಗಳನ್ನು ಕೊಡುತ್ತದೆ
  • ತಾಳ್ಮೆ ತೋರಿಸ್ತಾನೇ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಯೆಹೋವ ಮತ್ತು ಯೇಸುವಿನಂತೆ ತಾಳ್ಮೆಯಿಂದಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಯೆಹೋವನ ತಾಳ್ಮೆಯನ್ನು ಅನುಕರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ತಾಳ್ಮೆ—ಒಂದು ಉದ್ದೇಶದಿಂದ ಸಹಿಸಿಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಇನ್ನಷ್ಟು
ಕಾವಲಿನಬುರುಜು—1994
w94 5/15 ಪು. 21-23

ನೀವು ಸಹನೆಯನ್ನು ಅಭ್ಯಸಿಸಬಲ್ಲಿರೊ?

ಯೆಹೋವನು ಅಬ್ರಾಮನಿಗೆ ಅಂದದ್ದು: “ನೀನು ಸ್ವದೇಶವನ್ನೂ . . . ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು.” (ಆದಿಕಾಂಡ 12:1, 2) ಅಬ್ರಾಮನು ಆಗ 75 ವರ್ಷ ಪ್ರಾಯದವನಾಗಿದ್ದನು. ಆತನು ವಿಧೇಯನಾದನು ಮತ್ತು ಯೆಹೋವನ ಮೇಲೆ ಕಾಯುತ್ತಾ ಆತನು ತನ್ನ ಉಳಿದ ಜೀವಿತದಲ್ಲೆಲ್ಲಾ ವಿವೇಚನೆಯಿಂದ ಸಹನೆಯನ್ನು ಅಭ್ಯಸಿಸಿದನು.

ಕಟ್ಟಕಡೆಗೆ, ದೇವರು ತಾಳ್ಮೆಯುಳ್ಳ ಅಬ್ರಹಾಮ (ಅಬ್ರಾಮ) ನಿಗೆ ಈ ವಾಗ್ದಾನವನ್ನು ಮಾಡಿದನು: “ನಿಜವಾಗಿ ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು, ನಿನ್ನನ್ನು ಹೆಚ್ಚಿಸೇ ಹೆಚ್ಚಿಸುವೆನು.” ಅಪೊಸ್ತಲ ಪೌಲನು ಕೂಡಿಸಿದ್ದು: “ಮತ್ತು ಹೀಗೆ ಅಬ್ರಹಾಮನು ಸಹನೆಯನ್ನು ತೋರಿಸಿದ ಬಳಿಕ, ಈ ವಾಗ್ದಾನವನ್ನು ಆತನು ಗಳಿಸಿದನು.”—ಇಬ್ರಿಯ 6:13-15, NW.

ಸಹನೆ ಎಂದರೇನು? “ಯಾವುದಕ್ಕಾದರೂ ಶಾಂತವಾಗಿ ಕಾಯುವ” ಸಾಮರ್ಥ್ಯ, ಅಥವಾ “ಉದ್ರೇಕ ಯಾ ಒತ್ತಡದ ಕೆಳಗೆ ಸಹನೆ” ಯನ್ನು ಪ್ರದರ್ಶಿಸುವುದು ಎಂಬುದಾಗಿ ಶಬ್ದಕೋಶಗಳು ಅದನ್ನು ನಿರೂಪಿಸುತ್ತವೆ. ಹೀಗೆ ಯಾರಿಗಾದರೂ ಅಥವಾ ಯಾವುದಕ್ಕಾದರೂ ನೀವು ಕಾಯಬೇಕಾದಾಗ, ಅಥವಾ ನೀವು ಉದ್ರೇಕಗೊಳಿಸಲ್ಪಟ್ಟಾಗ ಅಥವಾ ಒತ್ತಡದ ಕೆಳಗಿರುವಾಗ, ನಿಮ್ಮ ಸಹನೆಯು ಪರೀಕೆಗ್ಷೆ ಒಡ್ಡಲ್ಪಡುತ್ತದೆ. ಅಂತಹ ಸನ್ನಿವೇಶಗಳಲ್ಲಿ ತಾಳ್ಮೆಯುಳ್ಳ ವ್ಯಕ್ತಿಯು ಶಾಂತನಾಗಿ ಉಳಿಯುತ್ತಾನೆ; ತಾಳ್ಮೆಯಿಲ್ಲದವನು ದುಡುಕಿನವನಾಗಿ ಮತ್ತು ಸಿಡುಕಿನವನಾಗಿ ಪರಿಣಮಿಸುತ್ತಾನೆ.

ತಾಳ್ಮೆಯಿಲ್ಲದ ನಮ್ಮ ಆಧುನಿಕ ಲೋಕ

ವಿಶೇಷವಾಗಿ ಅನೇಕ ನಗರ ಕ್ಷೇತ್ರಗಳಲ್ಲಿ, ಪ್ರಮುಖತೆಯು ಸಹನೆಯ ಮೇಲಲ್ಲ ಆದರೆ ವೇಗದ ಮೇಲೆ ಹಾಕಲ್ಪಡುತ್ತದೆ. ಕಿಕ್ಕಿರಿದ ನಗರಗಳಲ್ಲಿ ಜೀವಿಸುತ್ತಿರುವ ಲಕ್ಷಾಂತರ ಜನರಿಗೆ, ಬೆಳಗಿನ ಎಚ್ಚರದ ಗಂಟೆ ಮೊಳಗಿದಾಗ ಪ್ರತಿ ದಿನ ಆರಂಭವಾಗುತ್ತದೆ. ಅದು ತೀವ್ರಗತಿಯ ಕಾರ್ಯವನ್ನಾರಂಭಿಸುತ್ತದೆ—ಎಲ್ಲಿಗಾದರೂ ಹೋಗಲು, ಯಾರನ್ನಾದರೂ ನೋಡಲು, ಏನನ್ನಾದರೂ ಸಾಧಿಸಲು. ಅನೇಕರು ಉದ್ವೇಗಿಗಳಾಗಿರುವುದು ಮತ್ತು ಅಸಹನೆಯಿಂದಿರುವುದು ಅದ್ಭುತವಾಗಿದೆಯೊ?

ಇತರರ ಕುಂದುಕೊರತೆಗಳನ್ನು ಎದುರಿಸುವಾಗ ನೀವು ಕಳವಳಗೊಳ್ಳುತ್ತೀರೊ? “ಕಾಲನಿಷ್ಠೆಯ ನ್ಯೂನತೆಯನ್ನು ನಾನು ಇಷ್ಟಪಡುವುದಿಲ್ಲ,” ಎಂದು ಆಲ್ಬರ್ಟ್‌ ಹೇಳುತ್ತಾನೆ. ವಿಶೇಷವಾಗಿ ಮಿತಿಗೆರೆಯೊಂದನ್ನು ಎದುರಿಸಲಿಕ್ಕಿರುವುದಾದರೆ, ತೀರ ತಡವಾಗಿರುವ ಯಾರಿಗಾದರೂ ಕಾಯುವುದು ಪ್ರಯಾಸಕರವಾದದ್ದಾಗಿದೆಯೆಂದು ಅಧಿಕಾಂಶ ಮಂದಿ ಒಪ್ಪುವರು. ಡ್ಯೂಕ್‌ ಆಫ್‌ ನ್ಯೂಕಾಸ್‌ಲ್‌, ಎಂಬ 18 ನೆಯ ಶತಮಾನದ ಬ್ರಿಟಿಷ್‌ ರಾಜ್ಯನೀತಿಜ್ಞನ ಕುರಿತು, ‘ಬೆಳಗ್ಗೆ ಅವನು ಅರ್ಧ ತಾಸನ್ನು ಕಳೆದುಕೊಳ್ಳುತ್ತಾನೆ, ದಿನದ ಉಳಿದ ಸಮಯವೆಲ್ಲಾ ಅದನ್ನು ಬೆನ್ನಟ್ಟಿ ಹಿಡಿಯಲಿಕ್ಕಾಗಿ ಅದರ ಹಿಂದೆ ಅವನು ಓಡುತ್ತಿರುತ್ತಾನೆ’ ಎಂದು ಹೇಳಲ್ಪಟ್ಟಿತು. ದಿನದಿಂದ ದಿನಕ್ಕೆ ಅಂತಹ ಒಬ್ಬ ವ್ಯಕ್ತಿಯ ಮೇಲೆ ನೀವು ಅವಲಂಬಿಸಬೇಕಾದಲ್ಲಿ, ನೀವು ಸಹನೆಯುಳ್ಳವರಾಗಿ ಉಳಿಯುವಿರೊ?

ವಾಹನವೊಂದನ್ನು ನಡೆಸುವಾಗ, ನೀವು ಬೇಗನೆ ರೇಗಿಸಲ್ಪಡುವವರು, ಕಾಯಲು ಮನಸ್ಸಿಲ್ಲದವರು, ಅಥವಾ ತೀರ ವೇಗವಾಗಿ ಪ್ರಯಾಣಿಸಲು ಪ್ರೇರೇಪಿಸಲ್ಪಡುವವರು ಆಗಿದ್ದೀರೊ? ಅಂತಹ ಪರಿಸ್ಥಿತಿಗಳಲ್ಲಿ, ಅಸಹನೆಯು ಅನೇಕ ವೇಳೆ ವಿಪತ್ತಿನಲ್ಲಿ ಪರ್ಯವಸಾನವಾಗುತ್ತದೆ. ಹಿಂದೆ ಯಾವುದು ಪಶ್ಚಿಮ ಜರ್ಮನಿಯಾಗಿತ್ತೊ ಅಲ್ಲಿ, 1989 ರಲ್ಲಿ, 4,00,000 ಕ್ಕಿಂತಲೂ ಹೆಚ್ಚಿನ ಹೆದ್ದಾರಿಯ ಅಪಘಾತಗಳು ಗಾಯ ಅಥವಾ ಮರಣದಲ್ಲಿ ಪರಿಣಮಿಸಿದವು. ಇವುಗಳಲ್ಲಿ, 3 ರಲ್ಲಿ 1 ಅಪಘಾತವು, ಮುಂದಿನ ವಾಹನಕ್ಕೆ ತೀರ ಸಮೀಪದಲ್ಲಿ ಅಥವಾ ತೀರ ವೇಗವಾಗಿ ವಾಹನವನ್ನು ನಡೆಸುವ ಕಾರಣದಿಂದ ಉಂಟಾಗಿತ್ತು. ಆದುದರಿಂದ, ಕಡಿಮೆಪಕ್ಷ ಕೊಂಚಮಟ್ಟಿಗೆ, ಅಸಹನೆಯುಳ್ಳವರಾಗಿರುವುದು 1,37,000 ಕ್ಕಿಂತ ಹೆಚ್ಚಿನ ವ್ಯಕ್ತಿಗಳ ಮರಣ ಅಥವಾ ಬಾಧೆಗೆ ಕಾರಣವಾಗಿತ್ತು. ಅಸಹನೆಗೆ ಎಂತಹ ಒಂದು ಬೆಲೆಯನ್ನು ತೆರಬೇಕಾಯಿತು!

“ಯಾರಾದರೊಬ್ಬರು ಯಾವಾಗಲೂ ಮಧ್ಯ ಬಾಯಿಹಾಕುವಾಗ, ಅಥವಾ ಹೆಚ್ಚಾಗಿ ಬಡಾಯಿ ಕೊಚ್ಚುವಾಗ ಸಹನೆಯಿಂದಿರುವುದು ನನಗೆ ಕಷ್ಟವಾಗುತ್ತದೆ,” ಎಂದು ಆ್ಯನ್‌ ಆಪಾದಿಸುತ್ತಾಳೆ. “ಹಿರಿಯರ ಕಡೆಗೆ ಗೌರವವಿಲ್ಲದ ಎಳೆಯರ” ಮೂಲಕ ತನ್ನ ಸಹನೆಯು ಆಹ್ವಾನಕ್ಕೊಳಗಾಗುತ್ತದೆ ಎಂದು ಕಾರ್ಲ್‌ ಹರ್ಮಾನ್‌ ಒಪ್ಪಿಕೊಳ್ಳುತ್ತಾರೆ.

ಇವು ಮತ್ತು ಇನ್ನಿತರ ಸನ್ನಿವೇಶಗಳು ನಿಮ್ಮನ್ನು ಅಸಹನೆಗೊಳ್ಳುವಂತೆ ಮಾಡಬಹುದು. ಹಾಗಾದರೆ, ಹೆಚ್ಚಿನ ಸಹನೆಯನ್ನು ನೀವು ಹೇಗೆ ಬೆಳೆಸಿಕೊಳ್ಳಬಲ್ಲಿರಿ?

ಯೆಹೋವನು ನಿಮ್ಮ ಸಹನೆಯನ್ನು ಬಲಪಡಿಸಬಲ್ಲನು

ಸಹನೆಯು ದೃಢಮನಸ್ಸಿಲ್ಲದಿರುವಿಕೆ ಮತ್ತು ನ್ಯೂನತೆಯನ್ನು ಸೂಚಿಸುತ್ತದೆಂದು ಅನೇಕ ಜನರು ಅಭಿಪ್ರಯಿಸುತ್ತಾರೆ. ಆದರೂ, ಯೆಹೋವನಿಗೆ, ಅದು ಬಲವನ್ನು ಸೂಚಿಸುತ್ತದೆ. ಆತನು ಸ್ವತಃ “ಸಹನೆಯುಳ್ಳವನಾಗಿದ್ದಾನೆ [NW] . . . ಯಾವನಾದರೂ ನಾಶವಾಗುವುದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುತ್ತಾನೆ.” (2 ಪೇತ್ರ 3:9) ಆದುದರಿಂದ, ನಿಮ್ಮ ಸ್ವಂತ ಸೈರಣೆಯನ್ನು ಬಲಪಡಿಸಿಕೊಳ್ಳಲಿಕ್ಕಾಗಿ, ಯೆಹೋವನಿಗೆ ನಿಕಟವಾಗಿ ಅಂಟಿಕೊಳ್ಳಿರಿ ಮತ್ತು ಸಂಪೂರ್ಣ ಹೃದಯದಿಂದ ಆತನ ಮೇಲೆ ಆತುಕೊಳ್ಳಿರಿ. ಸಹನೆಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದರಲ್ಲಿ, ದೇವರೊಂದಿಗೆ ನಿಮ್ಮ ಸಂಬಂಧವನ್ನು ಬೆಳೆಸಿಕೊಳ್ಳುವುದು ಏಕೈಕವಾದ ಪ್ರಾಮುಖ್ಯ ಹೆಜ್ಜೆಯಾಗಿದೆ.

ಅಲ್ಲದೆ, ಭೂಮಿ ಮತ್ತು ಮಾನವಕುಲಕ್ಕಾಗಿರುವ ಯೆಹೋವನ ಉದ್ದೇಶಗಳನ್ನು ಅರಿಯುವುದು ಅತ್ಯಾವಶ್ಯಕವಾದದ್ದಾಗಿದೆ. ಅಬ್ರಹಾಮನು “ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು [ದೇವರ ರಾಜ್ಯ] ಅಂದರೆ ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು ಎದುರು ನೋಡುತ್ತಿದ್ದನು.” (ಇಬ್ರಿಯ 11:10) ತದ್ರೀತಿಯಲ್ಲಿ, ದೈವಿಕ ವಾಗ್ದಾನಗಳ ಸ್ಪಷ್ಟವಾಗಿದ ಒಂದು ವೀಕ್ಷಣವನ್ನಿಡುವುದು ಮತ್ತು ಯೆಹೋವನಿಗಾಗಿ ಕಾದುಕೊಂಡಿರಲು ತೃಪ್ತರಾಗಿರುವುದು ಪ್ರಯೋಜನಕರವಾದದ್ದಾಗಿರುವುದು. ಸಹನೆಯು, ಹಿಂಜರಿಕೆಯನ್ನು ನಿರ್ದೇಶಿಸುವುದಕ್ಕೆ ಬದಲಾಗಿ, ವಾಸ್ತವವಾಗಿ ಸತ್ಯ ಆರಾಧನೆಗೋಸ್ಕರ ಜನರನ್ನು ಗೆಲ್ಲುತ್ತದೆ ಎಂದು ಆಗ ನೀವು ಗ್ರಹಿಸುವಿರಿ. ಆದುದರಿಂದ, “ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಅದೆ ಎಂದು ಎಣಿಸಿಕೊಳ್ಳಿರಿ.”—2 ಪೇತ್ರ 3:15.

ನಿಮ್ಮ ಸ್ವಂತ ವೈಯಕ್ತಿಕ ಪರಿಸ್ಥಿತಿಗಳು ಬಹುಮಟ್ಟಿಗೆ ಸಹಿಸಲಸಾಧ್ಯವಾದ ರೀತಿಯಲ್ಲಿ ನಿಮ್ಮ ಸಹನೆಯನ್ನು ಪರೀಕ್ಷಿಸುವುದಾದರೆ ಆಗೇನು? ಅವಿಶ್ವಾಸಿಗಳು ಸಿಟ್ಟುಬರಿಸುವ ಪ್ರಯಾಸದ ಕೆಳಗೆ ನಿಮ್ಮನ್ನಿರಿಸುತ್ತಾರೊ? ಕೊನೆಯಿಲ್ಲದಂತೆ ಭಾಸವಾಗುವ ದೀರ್ಘಕಾಲದ ತನಕ ನೀವು ಅಸ್ವಸ್ಥರಾಗಿದ್ದೀರೊ? ಅಂತಹ ಒಂದು ಪರಿಸ್ಥಿತಿಯಲ್ಲಿ, ಶಿಷ್ಯ ಯಾಕೋಬನು ಬರೆದ ವಿಷಯವನ್ನು ಹೃದಯಕ್ಕೆ ತೆಗೆದುಕೊಳ್ಳಿರಿ. ಸಹನೆಯನ್ನು ಅಭ್ಯಸಿಸುವುದರಲ್ಲಿ ಪ್ರವಾದಿಗಳು ಒದಗಿಸಿದ ಮಾದರಿಯನ್ನು ನಿರ್ದೇಶಿಸಿದ ಬಳಿಕ, ಬಲವಾದ ಒತ್ತಡದ ಕೆಳಗೆ ಶಾಂತವಾಗಿ ಉಳಿಯುವುದರ ರಹಸ್ಯವನ್ನು ಆತನು ಪ್ರಕಟಪಡಿಸಿದನು. ಯಾಕೋಬನು ಹೇಳಿದ್ದು: “ನಿಮ್ಮಲ್ಲಿ ಬಾಧೆಪಡುವವನು ಇದ್ದಾನೋ? ಅವನು ದೇವರನ್ನು ಪ್ರಾರ್ಥಿಸಲಿ.”—ಯಾಕೋಬ 5:10, 13.

ನಿಮ್ಮ ಸಹನೆಯನ್ನು ಬಲಪಡಿಸಲು ಮತ್ತು ಶೋಧನೆಯ ಕೆಳಗೆ ನೀವು ನಿಮ್ಮ ಆತ್ಮವನ್ನು ನಿಯಂತ್ರಿಸಿಕೊಳ್ಳುವಂತೆ ಸಹಾಯಮಾಡಲು ಪ್ರಾರ್ಥನೆಯಲ್ಲಿ ಶ್ರದ್ಧಾಪೂರ್ವಕವಾಗಿ ದೇವರನ್ನು ಕೇಳಿಕೊಳ್ಳಿರಿ. ಪುನಃ ಪುನಃ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ, ಮತ್ತು ಆತನು ನಿಮ್ಮ ಶಾಂತತೆಗೆ ನಿರ್ದಿಷ್ಟವಾದ ಒಂದು ಬೆದರಿಕೆಯನ್ನೊಡ್ಡುವ ಪರಿಸ್ಥಿತಿಗಳು ಅಥವಾ ಇತರರ ಹವ್ಯಾಸಗಳನ್ನು ಗುರುತಿಸುವಂತೆ ನಿಮಗೆ ಸಹಾಯ ಮಾಡುವನು. ಸಂಭಾವ್ಯವಾಗಿ ಕಷ್ಟಕರವಾದ ಸನ್ನಿವೇಶಗಳ ಕುರಿತು ಮುಂಚಿತವಾಗಿ ಪ್ರಾರ್ಥಿಸುವುದು ಶಾಂತರಾಗಿರಲು ನಿಮಗೆ ಸಹಾಯ ಮಾಡಬಲ್ಲದು.

ತನ್ನ ಮತ್ತು ಇತರರ ಕುರಿತಾದ ಯೋಗ್ಯವಾದ ನೋಟ

ಒಂದು ಪ್ರಸನ್ನಕರವಾದ ಮನಸ್ಸಿನ ಸ್ಥಿತಿಯನ್ನು ಕಾಪಾಡಿಕೊಳ್ಳಲಿಕ್ಕಾಗಿ, ನೀವು ನಿಮ್ಮನ್ನು ಮತ್ತು ಇತರರನ್ನು ಯುಕ್ತವಾದ ರೀತಿಯಲ್ಲಿ ದೃಷ್ಟಿಸಬೇಕು. ಬೈಬಲಿನ ಅಭ್ಯಾಸದ ಮೂಲಕ ಇದು ಸಾಧ್ಯವಿದೆ, ಏಕೆಂದರೆ ಪ್ರತಿಯೊಬ್ಬರಿಗೂ ಬಾಧ್ಯತೆಯಾಗಿ ಪಡೆದ ಅಪರಿಪೂರ್ಣತೆಗಳಿವೆ ಮತ್ತು ಆದುದರಿಂದ ನ್ಯೂನತೆಗಳಿವೆಯೆಂದು ಅದು ತೋರಿಸುತ್ತದೆ. ಅಲ್ಲದೆ, ನೀವು ಪ್ರೀತಿಯಲ್ಲಿ ಬೆಳೆಯುವಂತೆ ಬೈಬಲಿನ ಜ್ಞಾನವು ನಿಮಗೆ ಸಹಾಯ ಮಾಡುವುದು. ಇತರರ ಕಡೆಗೆ ಸಹನೆಯನ್ನು ವ್ಯಕ್ತಪಡಿಸಲಿಕ್ಕಾಗಿ ಈ ಗುಣವು ಅವಶ್ಯವಾದದ್ದಾಗಿದೆ.—ಯೋಹಾನ 13:34, 35; ರೋಮಾಪುರ 5:12; ಫಿಲಿಪ್ಪಿ 1:9.

ನೀವು ಕೆರಳಿಸಲ್ಪಟ್ಟಾಗ, ಪ್ರೀತಿ ಮತ್ತು ಕ್ಷಮಿಸುವ ಆತುರತೆಯು ನಿಮ್ಮನ್ನು ಶಾಂತಗೊಳಿಸಬಲ್ಲದು. ನಿಮ್ಮನ್ನು ರೇಗಿಸುವ ಹವ್ಯಾಸಗಳು ಯಾರಿಗಾದರು ಇರುವುದಾದರೆ, ನೀವು ಅನಂಗೀಕೃತವಾಗಿ ಕಂಡುಕೊಳ್ಳುವುದು ವ್ಯಕ್ತಿಯನ್ನಲ್ಲ, ಹವ್ಯಾಸಗಳನ್ನು ಎಂಬ ವಿಷಯವನ್ನು ಪ್ರೀತಿಯು ನಿಮ್ಮ ಜ್ಞಾಪಕಕ್ಕೆ ತರುವುದು. ಎಷ್ಟೊಂದು ಬಾರಿ ನಿಮ್ಮ ಸ್ವಂತ ಬಲಹೀನತೆಗಳು ದೇವರ ಸಹನೆಯನ್ನು ಪರೀಕ್ಷಿಸಿರಬೇಕು ಮತ್ತು ಇತರರನ್ನು ಉದ್ರೇಕಿಸಿರಬೇಕೆಂಬುದನ್ನು ಪರಿಗಣಿಸಿ.

ನಿಮ್ಮ ಕುರಿತು ಒಂದು ಯೋಗ್ಯವಾದ ಅವಲೋಕನವು ಸಹ ನೀವು ಸಹನೆಯಿಂದ ಕಾಯುವಂತೆ ನಿಮಗೆ ಸಹಾಯ ಮಾಡುವುದು. ಉದಾಹರಣೆಗೆ, ಯೆಹೋವನ ಸೇವೆಯಲ್ಲಿ ಸುಯೋಗಗಳಿಗಾಗಿ ಕೇವಲ ನಿರಾಶೆಗೊಳ್ಳಲಿಕ್ಕಾಗಿಯೋ ಎಂಬಂತೆ ನೀವು ಕೈಚಾಚಿದ್ದುಂಟೊ? ಮರಳು ಗಡಿಯಾರದಲ್ಲಿ ಮರಳಿನ ಕೊನೆಯ ಕಣಗಳಂತೆ ನಿಮ್ಮ ಸಹನೆಯು ಕೊನೆಗೊಳ್ಳುತ್ತಿದೆಯೆಂದು ನಿಮಗೆ ತಿಳಿದುಬರುತ್ತದೆಯೆ? ಹಾಗಿರುವಲ್ಲಿ, ಹೆಚ್ಚಿನ ಅಸಹನೆಯು ಅಹಂಕಾರದಲ್ಲಿ ಬೇರೂರಿದೆಯೆಂಬುದನ್ನು ಜ್ಞಾಪಿಸಿಕೊಳ್ಳಿ. “ಹಮ್ಮುಗಾರನಿಗಿಂತ ತಾಳ್ಮೆ [ಸಹನೆ, NW] ಯುಳ್ಳವನು ಉತ್ತಮ,” ಎಂದು ಸೊಲೊಮೋನನು ಹೇಳಿದನು. (ಪ್ರಸಂಗಿ 7:8) ಹೌದು, ಅಹಂಕಾರವು ಸಹನೆಯ ಪೋಷಿಸುವಿಕೆಗೆ ಪ್ರಾಮುಖ್ಯವಾದ ಒಂದು ಅಡಚಣೆಯಾಗಿದೆ. ವಿನೀತ ವ್ಯಕ್ತಿಯು ಶಾಂತನಾಗಿ ಕಾಯುವುದನ್ನು ಸುಲಭವಾದದ್ದಾಗಿ ಕಂಡುಕೊಳ್ಳುತ್ತಾನೆಂಬುದು ಸತ್ಯವಾಗಿಲ್ಲವೊ? ಆದುದರಿಂದ, ದೈನ್ಯವನ್ನು ಬೆಳೆಸಿಕೊಳ್ಳಿರಿ, ಮತ್ತು ಸಾವಕಾಶವನ್ನು ಮನಶ್ಶಾಂತಿಯಿಂದ ಅಂಗೀಕರಿಸಲು ನೀವು ಹೆಚ್ಚು ಶಕ್ತರಾಗುವಿರಿ.—ಜ್ಞಾನೋಕ್ತಿ 15:33.

ಸಹನೆಯು ಸಮೃದ್ಧವಾದ ಪ್ರತಿಫಲಗಳನ್ನು ಕೊಡುತ್ತದೆ

ಅಬ್ರಹಾಮನು ಪ್ರಧಾನವಾಗಿ ತನ್ನ ನಂಬಿಕೆಗೆ ಪ್ರಸಿದ್ಧನಾಗಿದ್ದಾನೆ. (ರೋಮಾಪುರ 4:11) ಆದರೂ, ಸಹನೆಯು ಆತನ ನಂಬಿಕೆಯನ್ನು ಸ್ಥಿರವಾಗಿ ಉಳಿಯುವಂತೆ ಮಾಡಿತು. ಯೆಹೋವನ ಮೇಲೆ ಆತುಕೊಂಡದ್ದಕ್ಕಾಗಿ ಆತನಿಗೆ ಯಾವ ಬಹುಮಾನವು ಕೊಡಲ್ಪಟ್ಟಿತು?

ಯೆಹೋವನ ಅಧಿಕಗೊಳ್ಳುತ್ತಿರುವ ಭರವಸೆಯು ಅಬ್ರಹಾಮನಿಗೆ ಕೊಡಲ್ಪಟ್ಟಿತು. ಹೀಗೆ ಅಬ್ರಹಾಮನ ಹೆಸರು ಪ್ರಖ್ಯಾತವಾಯಿತು ಮತ್ತು ಆತನ ಸಂತತಿಯವರು ಒಂದು ಬಲಿಷ್ಠವಾದ ಜನಾಂಗವಾಗಿ ಪರಿಣಮಿಸಿದರು. ಆತನ ಸಂತತಿಯ ಮೂಲಕ ಭೂಮಿಯ ಎಲ್ಲ ಜನಾಂಗಗಳು ತಮ್ಮನ್ನು ಆಶೀರ್ವದಿಸಿಕೊಳ್ಳಬಲ್ಲವು. ಅಬ್ರಹಾಮನು ದೇವರ ವದನಕನೋಪಾದಿ ಮತ್ತು ಸೃಷ್ಟಿಕರ್ತನ ಒಂದು ನಮೂನೆಯೋಪಾದಿ ಸಹ ಸೇವೆ ಮಾಡಿದನು. ಅಬ್ರಹಾಮನ ನಂಬಿಕೆ ಮತ್ತು ತಾಳ್ಮೆಗಾಗಿ ಇನ್ನೂ ಮಹತ್ತಾದ ಪ್ರತಿಫಲವು ಇರಬಹುದಿತ್ತೊ?

ಶೋಧನೆಗಳನ್ನು ಸಹನೆಯಿಂದ ತಾಳಿಕೊಳ್ಳುವ ಕ್ರೈಸ್ತರ ಕಡೆಗೆ “ಯೆಹೋವನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆ.” (ಯಾಕೋಬ 5:10, 11, NW) ಆತನ ಚಿತ್ತವನ್ನು ಮಾಡುತ್ತಿರುವುದರಿಂದ, ಅಂತಹ ವ್ಯಕ್ತಿಗಳು ಶುದ್ಧವಾದ ಒಂದು ಮನಸ್ಸಾಕ್ಷಿಯನ್ನು ಅನುಭವಿಸುತ್ತಾರೆ. ಹಾಗಾದರೆ, ನಿಮ್ಮ ವಿಷಯದಲ್ಲಿ, ನೀವು ಯೆಹೋವನ ಮೇಲೆ ಆತುಕೊಳ್ಳುವುದಾದರೆ ಮತ್ತು ಶೋಧನೆಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದಾದರೆ, ನಿಮ್ಮ ಸೈರಣೆಯು ಯೆಹೋವನ ಅನುಗ್ರಹ ಮತ್ತು ಆಶೀರ್ವಾದದಲ್ಲಿ ಫಲಿಸುವುದು.

ಜೀವಿತದ ಪ್ರತಿಯೊಂದು ವಿಷಯದಲ್ಲಿ ಸಹನೆಯು ದೇವರ ಜನರಿಗೆ ಉತ್ತಮವಾಗಿ ಕಾರ್ಯನಡಿಸುತ್ತದೆ. ಕ್ರಿಸಿಯ್ಟಾನ್‌ ಮತ್ತು ಆಗ್ನೆಸ್‌ ಎಂಬ ಹೆಸರಿನ, ಇಬ್ಬರು ಯೆಹೋವನ ಸಾಕ್ಷಿಗಳು ವಿವಾಹ ನಿಶ್ಚಯ ಮಾಡಿಕೊಳ್ಳಲು ನಿರ್ಧರಿಸಿದಾಗ ಇದನ್ನು ಕಂಡುಹಿಡಿದರು. ಆಗ್ನೆಸ್‌ಳನ್ನು ಅರಿತುಕೊಳ್ಳಲು ಸಮಯವು ಬೇಕಾಗಿದ್ದ ಕ್ರಿಸ್ಟಿಯಾನ್‌ನ ಹೆತ್ತವರಿಗೆ ಗೌರವವನ್ನು ತೋರಿಸುತ್ತಾ, ಅವರು ವಿವಾಹ ನಿಶ್ಚಯವನ್ನು ವಿಳಂಬಿಸಿದರು. ಈ ನಡೆವಳಿಯು ಯಾವ ಪರಿಣಾಮವನ್ನು ಬೀರಿತು?

“ನಮ್ಮ ಸಹನೆಯು ನನ್ನ ಹೆತ್ತವರಿಗೆ ಎಷ್ಟೊಂದು ಭಾವಗರ್ಭಿತವಾಗಿತ್ತೆಂದು ನಾವು ತದನಂತರ ಸ್ಪಷ್ಟವಾಗಿಗಿ ಗ್ರಹಿಸಿದೆವು. ನಮ್ಮ ಸಹನೆಯ ಕಾಯುವಿಕೆಯು ನನ್ನ ಮತ್ತು ನನ್ನ ಹೆಂಡತಿಯ ನಡುವಿನ ಸಂಬಂಧವನ್ನು ಕೊನೆಗಾಣಿಸಲಿಲ್ಲ. ಆದರೆ ನನ್ನ ಹೆತ್ತವರೊಂದಿಗಿನ ನಮ್ಮ ಸಂಬಂಧದಲ್ಲಿ ಇದು ರಚನೆಯ ಪ್ರಥಮ ಅಂಶವಾಯಿತು,” ಎಂದು ಕ್ರಿಸಿಯ್ಟಾನ್‌ ವಿವರಿಸುತ್ತಾನೆ. ಹೌದು, ಸಹನೆಯು ಹೇರಳವಾದ ಲಾಂಭಾಂಶಗಳನ್ನು ಕೊಡುತ್ತದೆ.

ಸಹನೆಯು ಶಾಂತಿಯನ್ನು ಸಹ ಪ್ರವರ್ತಿಸುತ್ತದೆ. ಪ್ರತಿಯೊಂದು ತಪ್ಪಿಗೆ ನೀವು ಒಂದು ವಿವಾದವನ್ನು ಮಾಡದಿದ್ದರೆ, ಕುಟುಂಬ ಮತ್ತು ಸ್ನೇಹಿತರು ಕೃತಜ್ಞತೆಯಳ್ಳವರಾಗಿರುವರು. ಇತರರು ತಪ್ಪುಗಳನ್ನು ಮಾಡುವಾಗ, ನಿಮ್ಮ ಶಾಂತತೆ ಮತ್ತು ವಿವೇಚನೆಯು ಪೇಚಾಟವನ್ನುಂಟುಮಾಡುವ ದೃಶ್ಯಗಳನ್ನು ತಡೆಯುತ್ತದೆ. ಒಂದು ಚೀನೀ ಜ್ಞಾನೋಕ್ತಿಯು ಹೇಳುವುದು: “ಕೋಪದ ಒಂದು ಕ್ಷಣದಲ್ಲಿ ಸಹನೆಯು, ನಿಮಗೆ ನೂರು ದಿನಗಳ ಕಡು ಸಂಕಟವನ್ನು ತಪ್ಪಿಸುತ್ತದೆ.”

ಕಾರ್ಯತಃ ನಿಮ್ಮ ಇತರ ಸುಗುಣಗಳನ್ನು ನೀವು ಕಾಪಾಡಿಕೊಳ್ಳುವಂತೆ ನಿಮಗೆ ಸಹಾಯಮಾಡುತ್ತ, ಸಹನೆಯು ನಿಮ್ಮ ವ್ಯಕ್ತಿತ್ವವನ್ನು ವರ್ಧಿಸುತ್ತದೆ. ನಿಮ್ಮ ನಂಬಿಕೆಯನ್ನು ಸ್ಥಿರವಾದದ್ದಾಗಿ, ನಿಮ್ಮ ಶಾಂತಿಯನ್ನು ಅನಂತವಾದದ್ದಾಗಿ, ಮತ್ತು ನಿಮ್ಮ ಪ್ರೀತಿಯನ್ನು ಕದಲಿಸಲಸಾಧ್ಯವಾದದ್ದಾಗಿ ಅದು ಮಾಡುತ್ತದೆ. ದಯೆ, ಸೌಜನ್ಯ ಮತ್ತು ಸೌಮ್ಯವನ್ನು ಅಭ್ಯಸಿಸುವಾಗ ಸಹನೆಯಿಂದಿರುವುದು ಹರ್ಷಭರಿತರಾಗಿರುವಂತೆ ನಿಮಗೆ ಸಹಾಯಮಾಡುವುದು. ತಾಳ್ಮೆಯನ್ನು ಅಭ್ಯಸಿಸುವುದು, ದೀರ್ಘಶಾಂತಿ ಮತ್ತು ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳುವುದಕ್ಕೆ ಅಗತ್ಯವಾದ ಬಲವನ್ನು ವೃದ್ಧಿಗೊಳಿಸುತ್ತದೆ.

ಯೆಹೋವನ ವಾಗ್ದಾನಗಳ ನೆರವೇರಿಕೆಗಾಗಿ ಸಹನೆಯಿಂದ ಕಾಯಿರಿ, ಮತ್ತು ಬಳಿಕ ಆಶ್ಚರ್ಯಕರವಾದ ಭವಿಷ್ಯತ್ತಿನ ಕುರಿತು ನಿಮಗೆ ಭರವಸೆಯು ಕೊಡಲ್ಪಡುತ್ತದೆ. ಅಬ್ರಹಾಮನಂತೆ, ನೀವು “ನಂಬಿಕೆ ಮತ್ತು ಸಹನೆಯ ಮೂಲಕ ಆ ವಾಗ್ದಾನಗಳನ್ನು ಹೊಂದುವಂತೆ” ಆಗಲಿ.—ಇಬ್ರಿಯ 6:12, NW.

[ಪುಟ 23 ರಲ್ಲಿರುವ ಚಿತ್ರ]

ಅಬ್ರಹಾಮನಂತೆ ಸಹನೆಯನ್ನು ಪ್ರದರ್ಶಿಸಲು, ಯೆಹೋವನೊಂದಿಗೆ ಒಂದು ಆಪ್ತ ಸಂಬಂಧವು ನಿಮಗೆ ಸಹಾಯಮಾಡುವುದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ